ಅಜ್ಜಿಯ ಹೃದಯ ಶ್ರೀಮಂತಿಕೆಗೆ ಶಿರಬಾಗುತ್ತೇನೆ.
ದಾವಣಗೆರೆ ಜಿಲ್ಲೆಯ ಮೆದಿಕೆರೆ ಗ್ರಾಮದ ಸುಶೀಲಮ್ಮ ಅಜ್ಜಿ, ಬಾಡಿಗೆ ಮನೆಯಲ್ಲಿ ವಾಸವಿದ್ದರೂ, ಅಂಗನವಾಡಿ ಮಕ್ಕಳು ಉತ್ತಮ ವಾತಾವರಣದಲ್ಲಿ ಕಲಿಯಬೇಕು ಅಂತಾ ತಮ್ಮಲ್ಲಿದ್ದ ಒಂದು ಗುಂಟೆ ಜಾಗವನ್ನು ದಾನ ಮಾಡಿರುವುದು ಅತ್ಯಂತ ಹೆಮ್ಮೆಯ ಸಂಗತಿ, ಈ ತಾಯಿಯ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅಜ್ಜಿಯ ಆಶಯದಂತೆ ಸರ್ಕಾರ ಕೂಡ ಬೆಂಬಲ ನೀಡಿ, ಈಗ ಹೊಸ ಅಂಗನವಾಡಿ ಕಟ್ಟಡ ನಿರ್ಮಿಸಿದೆ. ಮಕ್ಕಳ ಭವಿಷ್ಯಕ್ಕಾಗಿ ಇವರ ಈ ಮಹಾನ್ ತ್ಯಾಗಕ್ಕೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು!
ಕನ್ನಡ ಸಾಹಿತ್ಯಕ್ಕೆ ಅಪಾರಕೊಡುಗೆ ನೀಡಿದ ಹಿರಿಯ ಕವಿಗಳಾದ ಹೆಚ್.ಎಸ್ ವೆಂಕಟೇಶಮೂರ್ತಿ ಅವರ ನಿಧನದ ಸುದ್ದಿ ನಿಜಕ್ಕೂ ಬೇಸರ ತಂದಿದೆ.ಅನೇಕ ಕಾದಂಬರಿಗಳು,ಕಥೆ ಹಾಗೂ ಭಾವಗೀತೆಗಳ ಮೂಲಕ ಹೆಸರಾಗಿದ್ದ ವೆಂಕಟೇಶ ಮೂರ್ತಿಯವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದವರು ಎಂಬುದೇ ನಮಗೆಲ್ಲಾ ಹೆಮ್ಮೆಯ ಸಂಗತಿ.ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ. ಅವರ ಕುಟುಂಬದವರಿಗೆ, ಆಪ್ತರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಭಾವಪೂರ್ಣ ನಮನಗಳು...
ಓಂ ಶಾಂತಿ.
ಸಿದ್ದರಾಮಯ್ಯರ ಜಾತಿ ಗಣತಿ ವಿರುದ್ಧ ಸೆಟೆದು ನಿಂತಿರುವ ಡಿಕೆಶಿ ಶಿಷ್ಯ ಚನ್ನಗಿರಿ ಶಾಸಕ ಶಿವಗಂಗಾ ಬಸಣ್ಣ ತನ್ನ ಕ್ಷೇತ್ರದಲ್ಲಿ ಪ್ರತ್ಯೇಕ ಜಾತಿ ಗಣತಿ ಮಾಡಿಸುತ್ತಿದ್ದಾರೆ.
ಎಲ್ಲಾ ಜನಪ್ರತಿನಿಧಿಗಳು ಈ ರೀತಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರತ್ಯೇಕ ಜಾತಿ ಗಣತಿ ಮಾಡಿಸಿದರೆ ಜಾತಿ ಗಣತಿಯ ಸತ್ಯಾಸತ್ಯತೆ ತಿಳಿಯುತ್ತದೆ.
ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಆಗಿದೆ ಆದರೂ ಲಿಂಗಾಯತ ಮಂತ್ರಿಗಳು ಯಾವುದೇ ಸಭೆ ಕರೆದು ಚರ್ಚೆ ಮಾಡಿಲ್ಲ , ಲಿಂಗಾಯತ ಮಂತ್ರಿಗಳು ರಾಜೀನಾಮೆ ಕೊಡಲಿ ,ಅವರಿಗೆ ಕೆಪಾಸಿಟಿ ಇಲ್ಲ :- ಶಿವಗಂಗಾ ಬಸಣ್ಣ.
ಇವರು ಮಾತನಾಡುತ್ತೀರುವುದರಲ್ಲಿ ಯಾವುದೇ ತಪ್ಪಿಲ್ಲ, ಸಮುದಾಯದ ಮತಗಳು ಬೇಕು ಸಮುದಾಯ ಬೇಡ ಎಂದರೆ ಹೇಗೆ.?
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಚಾಲನಾ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆ (IDTRs) ಅಥವಾ ಪ್ರಾದೇಶಿಕ ಚಾಲನಾ ತರಬೇತಿ ಕೇಂದ್ರ (RDTCs) ಮತ್ತು ಡ್ರೈವಿಂಗ್ ತರಬೇತಿ ಕೇಂದ್ರಗಳನ್ನು (DTCs) ಸ್ಥಾಪಿಸಲು ಮಂಜೂರಾತಿ ಮತ್ತು ಅನುದಾನ ಬಿಡುಗಡೆ ಹಾಗೂ ದಾವಣಗೆರೆ ಎಸ್ ಎಸ್ ಆಸ್ಪತ್ರೆಯ ಬಳಿಯ NH-48 ಕೆಳಸೇತುವೆ ಅಗಲೀಕರಣ ಮಾಡುವಂತೆ
ಕೇಂದ್ರ ಸಾರಿಗೆ ಸಚಿವರಾದ ಶ್ರೀ ನಿತಿನ್ ಜೈರಾಮ್ ಗಡ್ಕರಿಯವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
The Member of Parliament Dr Prabha Mallikarjun seen speaking with the Union Minister for Heavy Industries and Steel Mr H D Kumara Swamy at Karnataka Bhavan in New Delhi on August-9.
ಕೇಂದ್ರ ಸರ್ಕಾರ ನೂತನವಾಗಿ ಆಯುಷ್ ಕಾಲೇಜುಗಳಿಗೆ ರೂಪಿಸಿರುವ ಎಂಇಎಸ್ - 2024 ರ ನಿಯಮಾವಳಿಗಳ ಕುರಿತು ಚರ್ಚಿಸಲು ಹಾಗೂ ನಿಯಮಾವಳಿಗಳನ್ನು ಪುನರ್ ಪರಿಶೀಲಿಸಲು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಫೆಡರೇಷನ್ ಪದಾಧಿಕಾರಿಗಳು ಇಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಪ್ರತಾಪ್ ರಾವ್ ಜಾದವ್ ರವರ ಜೊತೆ ಸಭೆ ನಡೆಸಿದರು ಈ ಸಂದರ್ಭದಲ್ಲಿ ಸಂಸದರಾದ ಬಿ.ವೈ ರಾಘವೇಂದ್ರ ರವರು ಉಪಸ್ಥಿತರಿದ್ದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಬೇರೆ ದೇಶಗಳಿಗೆ ಹೋಲಿಸಿದರೆ ಆರೋಗ್ಯ ಕ್ಷೇತ್ರದಲ್ಲಿ ನಮ್ಮ ಕೇಂದ್ರ ಸರ್ಕಾರ ತಾಳಿರುವ ಅಸಡ್ಯ ನೀತಿಯ ಬಗ್ಗೆ ಅಂಕಿ ಅಂಶಗಳ ಸಮೇತ ಸರ್ಕಾರಕ್ಕೆ ಎಚ್ಚರಿಸಿದರು.
ತಮ್ಮ ಚೊಚ್ಚಲ ಭಾಷಣದಲ್ಲಿಯೇ ದೇಶದಲ್ಲಿ ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಚ್ಚರಿಸಿದ್ದು ವಿಶೇಷವಾಗಿತ್ತು.