ಜಗತ್ತಿನಲ್ಲಿಯೇ ಬಿಜೆಪಿಯಂ���ಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ.
ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ @narendramodi ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ.
ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು.
ಕನ್ನಡಕ್ಕಾಗಿ ಹೋರಾಡುವ ಮಕ್ಕಳ ಮೇಲೆ ರೌಡಿ ಶೀಟರ್ ಪಟ್ಟ ಕಟ್ಟಲು ಹೊರಟಿರುವ ಅನಿಷ್ಟ ಸರ್ಕಾರವಿದು!
@BSBommai ಅವರೇ, ನಿಮ್ಮ ಸರ್ಕಾರಕ್ಕೆ ಸ್ವಲ್ಪವಾದರೂ ನಾಚಿಕೆ ಮಾನ ಮರ್ಯಾದೆ ಅನ್ನೋದು ಉಳಿದಿದ್ದರೆ ಮೊದಲು ಆ ಹುಡುಗರ ಮೇಲಿನ ರೌಡಿಶೀಟರ್ ನಿರ್ಧಾರ ವಾಪಸ್ ಪಡೆಯಿರಿ!
#ನಾಡವಿರೋಧಿಸರ್ಕಾರ#Antikannadagovt
ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕ್ರಾಂತಿಕಾರಿ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವಯುತ ನಮನಗಳು.
ಅವರ ಸಿದ್ದಾಂತಗಳು ಎಲ್ಲರಿಗೂ ಪ್ರೇರಣೀಯ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಅವರ ಧೈರ್ಯ, ದೇಶಪ್ರೇಮ, ದಿಟ್ಟ ಹೋರಾಟದ ಮನೋಭಾವ ಸದಾಕಾಲವೂ ಸ್ಮರಣೀಯ.
ಸರ್ವ ವರ್ಗದವರ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ.ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನಮ್ಮ ಧ್ಯೇಯ. ಬೀದಿ ವ್ಯಾಪಾರಿಗಳ ದಿನದಂದು ಪುರಭವನದಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ.
ಮಾಜಿ ಸಚಿವರು, ಹಿರಿಯ ಶಾಸಕರೂ ಆದ ಶ್ರೀ ಎಚ್.ಕೆ. ಪಾಟೀಲ ಅವರ ತಾಯಿ ಶ್ರೀಮತಿ ಪದ್ಮಾವತಿ ಕೆ. ಪಾಟೀಲ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಬೇಸರವಾಗಿದೆ. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@HKPatil1953
ಜೋಗಪ್ಪ ಸಮುದಾಯ ಹಾಗೂ ತೃತೀಯ ಲಿಂಗಿಗಳ ಉನ್ನತ ಶಿಕ್ಷಣಕ್ಕೆ ವಿಶೇಷ ವಿದ್ಯಾರ್ಥಿ ವೇತನ ನೀಡುತ್ತೇವೆ ಎಂದಿತ್ತು ಬಿಜೆಪಿ.
ತೃತೀಯ ಲಿಂಗಿಗಳಿಗೆ ರೂಪಿಸಿದ ಯೋಜನೆ ಯಾವುದು? ಎಲ್ಲಿ ವಿದ್ಯಾರ್ಥಿ ವೇತನ?
ವಿದ್ಯಾರ್ಥಿಗಳಿಂದಲೇ 100 ರೂಪಾಯಿ ಭಿಕ್ಷೆ ಬೇಡುva ಸರ್ಕಾರಕ್ಕೆ ವಿದ್ಯಾರ್ಥಿ ವೇತನ ನೀಡುವ ಯೋಗ್ಯತೆ ಇದೆಯೇ?
#NimHatraIdyaUttara