Inna lillahi wa inna ilayhi raji'un.
The passing of Hafiz Mohammad Haneef Sahab, former State President of SDPI Rajasthan and former NWC member, is a great loss. His contributions since the party’s inception will be remembered. May Allah grant him Jannatul Firdaus.
#SDPI
ಬಂಗಾರಪೇಟೆಯ ಕಂದಮ್ಮನಿಗೆ ನ್ಯಾಯ ಸಿಗಲೇಬೇಕು — ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು.
ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ 6 ವರ್ಷದ ಕಂದಮ್ಮನ ಮೇಲೆ ನಡೆದಿರುವ ಅಮಾನವೀಯ ಲೈಂಗಿಕ ದೌರ್ಜನ್ಯದ ಘಟನೆ ಇಡೀ ಸಮಾಜವನ್ನು ಬೆಚ್ಚಿಬೀಳಿಸಿದೆ. ಮಕ್ಕಳನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ಹೀನ ಕೃತ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.
ಈ ಅಮಾನವೀಯ ಘಟನೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಹಾಗೂ ವಿಮೆನ್ ಇಂಡಿಯಾ ಮೂವ್ಮೆಂಟ್ (WIM), ಮುಳಬಾಗಲು ಸಮಿತಿ ವತಿಯಿಂದ ಕ್ಯಾಂಡಲ್ ಮಾರ್ಚ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಅಪರಾಧಿಗಳನ್ನು ಯಾವುದೇ ಒತ್ತಡ, ಪ್ರಭಾವ ಅಥವಾ ರಾಜಕೀಯ ಹಸ್ತಕ್ಷೇಪಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಕಾನೂನಿನ ಪ್ರಕಾರ ಗರಿಷ್ಠ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಲಾಯಿತು.
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕೇವಲ ಭರವಸೆಗಳು ಸಾಕಾಗುವುದಿಲ್ಲ. ವೇಗವಾದ ತನಿಖೆ, ಬಲಿಷ್ಠ ಕಾನೂನು ಕ್ರಮ ಮತ್ತು ನ್ಯಾಯಾಲಯದಲ್ಲಿ ಪರಿಣಾಮಕಾರಿ ವಿಚಾರಣೆ ನಡೆಯುವ ಮೂಲಕ ಸಂತ್ರಸ್ತ ಮಗುವಿಗೆ ನ್ಯಾಯ ದೊರಕಿಸಿಕೊಡುವುದು ಸರ್ಕಾರದ ಕರ್ತವ್ಯ.
ಮಕ್ಕಳ ಸುರಕ್ಷತೆಯಲ್ಲಿ ವಿಫಲವಾಗುವ ವ್ಯವಸ್ಥೆಯನ್ನು ಪ್ರಶ್ನಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಇಂತಹ ಘಟನೆಗಳು ಮರುಕಳಿಸದಂತೆ ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಸರ್ಕಾರ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು.
ಕಂದಮ್ಮನ ನೋವಿಗೆ ನ್ಯಾಯ ಬೇಕು.
ಅಪರಾಧಿಗಳಿಗೆ ಶಿಕ್ಷೆ ಬೇಕು.
ಮಕ್ಕಳಿಗೆ ಸುರಕ್ಷಿತ ಸಮಾಜ ಬೇಕು.
ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ.
#Bangarapet #JusticeForChild #ChildSafety #SDPI #WIM #Doddaballapur #StopChildAbuse #Justice #ChildProtection
ಉರ್ದು ಶಿಕ್ಷಕರ ನೇಮಕಾತಿ: ಅಧಿಸೂಚನೆ ಹೊರಬರುವವರೆಗೆ ಹೋರಾಟ ನಿಲ್ಲದು.
ಉರ್ದು ಮಾಧ್ಯಮ ಶಾಲೆಗಳಲ್ಲಿ ವರ್ಷಗಳಿಂದ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂಬ ಮಾಹಿತಿ ಹಾಗೂ ಭರವಸೆಗಳು ಕೇಳಿಬರುತ್ತಿವೆ.
ಆದರೆ ಕೇವಲ ರಾಜಕೀಯ ಹೇಳಿಕೆಗಳು ಮತ್ತು ಭರವಸೆಗಳ ಮೇಲೆ ಭರವಸೆ ಇಟ್ಟು ಹೋರಾಟವನ್ನು ನಿಲ್ಲಿಸುವಂತಿಲ್ಲ.
ಸರ್ಕಾರ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿ, ಉರ್ದು ಮಾಧ್ಯಮ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಆರಂಭಿಸುವವರೆಗೆ ನಮ್ಮ ಒತ್ತಡ ಮತ್ತು ಹೋರಾಟ ನಿರಂತರವಾಗಿರಬೇಕು.
ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಖಾಲಿ ಹುದ್ದೆಗಳನ್ನು ವರ್ಷಗಟ್ಟಲೆ ಉಳಿಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕಿನೊಂದಿಗೆ ಚೆಲ್ಲಾಟವಾಡಲು ಅವಕಾಶ ನೀಡಬಾರದು.
ನಮ್ಮ ನಿರಂತರ ಹೋರಾಟ, ಸಂಘಟಿತ ಒತ್ತಡ ಮತ್ತು ಜನರ ಒಗ್ಗಟ್ಟಿನ ಧ್ವನಿಯ ಫಲವಾಗಿ ಸರ್ಕಾರ 800 ಉರ್ದು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ನೀಡಿರುವುದು ಒಂದು ಪ್ರಮುಖ ಹೆಜ್ಜೆಯಾಗಿದೆ. ಆದರೆ ಅನುಮೋದನೆ ಮಾತ್ರ ಸಾಕಾಗುವುದಿಲ್ಲ; ಅಧಿಸೂಚನೆ ಹೊರಬಂದು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು.
“ಭರವಸೆ ಬೇಡ, ಅಧಿಸೂಚನೆ ಬೇಕು”
ಉರ್ದು ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಬರುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ.
ನ್ಯಾಯ ಸಿಗುವವರೆಗೆ ಒಗ್ಗಟ್ಟಿನಿಂದ, ಶಾಂತಿಯುತವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಸರ್ಕಾರದ ಮೇಲೆ ಒತ್ತಡ ಮುಂದುವರಿಸೋಣ.
ಉರ್ದು ಮಾಧ್ಯಮ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹೋರಾಟ ಮುಂದುವರಿಯಲಿ.
#UrduTeacherRecruitment
#UrduTeachers
#UrduMediumSchools
#ಉರ್ದುಶಿಕ್ಷಕರನೇಮಕಾತಿ
#ಭರವಸೆಬೇಡಅಧಿಸೂಚನೆಬೇಕು
#ಹೋರಾಟನಿಲ್ಲದು
@Abubaka22373084@byrathi_suresh@JarkiholiSatish@CMofKarnataka@DEO_Belagavi ಜನರ ಸುರಕ್ಷತೆಯೇ ಮೊದಲ ಆದ್ಯತೆ. ಪಟ್ಟಣ ಪಂಚಾಯಿತಿಯಾಗಿ ಉನ್ನತೀಕರಣಗೊಂಡಿರುವ ಎಂ.ಕೆ. ಹುಬ್ಬಳ್ಳಿಯ ಬಸ್ ನಿಲ್ದಾಣದ ಶೋಚನೀಯ ಸ್ಥಿತಿಯನ್ನು ಅಧಿಕಾರಿಗಳು ತಕ್ಷಣ ಪರಿಶೀಲಿಸಿ, ಮೇಲ್ಛಾವಣಿ ಮತ್ತು ಸೀಲಿಂಗ್ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಯಾವುದೇ ಅನಾಹುತ ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ.
ಗ್ರಾಮ ಪಂಚಾಯಿತಿ ಯಿಂದ ಪಟ್ಟಣ ಪಂಚಾಯತವಾಗಿ ಉನ್ನತೀಕರಣ ಗೊಂಡಿರುವ ಎಮ ಕೆ ಹುಬ್ಬಳ್ಳಿ ಪಟ್ಟಣದ ಬಸ್ ನಿಲ್ದಾಣದ ಸ್ಥಿತಿ ಅತ್ಯಂತ ಶೋಚನೀಯವಾಗಿದೆ.ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದ್ದು,ಸೀಲಿಂಗ್ ಕುಸಿಯುತ್ತಿರುವುದು ಪ್ರಯಾಣಿಕರ ಜೀವಕ್ಕೆ ಅಪಾಯ ತಂದಿದೆ. @byrathi_suresh@JarkiholiSatish@CMofKarnataka@DEO_Belagavi
@afsarkodlipet ಖಲೀಲ್ ಅವರ ಲಾಕಪ್ ಡೆತ್ ಪ್ರಕರಣದಲ್ಲಿ ಸತ್ಯಾಂಶ ಹೊರಬರಲು ನಿಷ್ಪಕ್ಷಪಾತ ತನಿಖೆ ಅತ್ಯಗತ್ಯ. ಮೃತ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಪತ್ನಿಗೆ ಸರ್ಕಾರಿ ಉದ್ಯೋಗ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಬೇಕು.
ಲಾಕಪ್ ಡೆತ್ ಪ್ರಕರಣ: ಮೃತ ಖಲೀಲ್ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಪತ್ನಿಗೆ ಸರ್ಕಾರಿ ಉದ್ಯೋಗ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ
ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿರುವ ಖಲೀಲ್ ಅವರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ, ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯರು ಹಾಗೂ ಸಂತ್ರಸ್ತ ಕುಟುಂಬಸ್ಥರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಬಸವಂತಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಮೃತ ಖಲೀಲ್ ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು, ಕುಟುಂಬದ ಆಧಾರವಾಗಿದ್ದ ಮೃತರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಹಾಗೂ ಘಟನೆಗೆ ಕಾರಣರಾದ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ/ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ನಿಯೋಗ ಆಗ್ರಹಿಸಿತು.
ಲಾಕಪ್ನಲ್ಲಿ ವ್ಯಕ್ತಿಯೊಬ್ಬರ ಸಾವು ಸಂಭವಿಸಿರುವುದು ಅತ್ಯಂತ ಗಂಭೀರ ವಿಚಾರವಾಗಿದ್ದು, ಪ್ರಕರಣದ ಸಂಪೂರ್ಣ ಸತ್ಯವನ್ನು ಹೊರತರಲು ನಿಷ್ಪಕ್ಷಪಾತ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು. ಮೃತ ಕುಟುಂಬಕ್ಕೆ ನ್ಯಾಯ ದೊರೆಯುವವರೆಗೆ ಎಸ್ಡಿಪಿಐ ಸಂತ್ರಸ್ತ ಕುಟುಂಬದ ಪರವಾಗಿ ಧ್ವನಿ ಎತ್ತಲಿದೆ.
ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ.
#Khalil #LockupDeath #JusticeForKhalil #SDPI #Vijayanagara #Hospet #Justice
ಮಾನ್ಯ @PriyankKharge ಯವರೇ,
ಮನುಕುಲ ವಿಮೋಚಕ, ಲೋಕ ಪ್ರವಾದಿ, ಮುಹಮ್ಮದ್ (ಸ ಅ ) ರವರಿಗೆ " I LOVE YOU, MUHAMMED ಎನ್ನುವುದು, ಬ್ಯಾನರ್ ಹಾಕುವುದು, ಯಾವ ಕಾನೂನಡಿ ತಪ್ಪಾಗುತ್ತೆ?
RSS ನವ್ರು ಮಾಡಬಾರದು ಎನ್ನುವುದನ್ನು, ನೀವೇಕೆ ಪ್ರಸಾದದ ರೀತಿ ಸ್ವೀಕರಿಸುತ್ತಿರಿ. RSS ನಂತೆ, ಮುಸ್ಲಿಮರು ಇದನ್ನೂ ಯಾರಿಗೂ ಬಲವಂತವಾಗಿ ಹೇರಿಲ್ಲವಲ್ಲ.
@DgpKarnataka
@nellai_mubarak தூய்மைப் பணியாளர்களின் நியாயமான கோரிக்கைகளை அரசு உடனடியாக நிறைவேற்ற வேண்டும். போராடும் தொழிலாளர்களை கைது செய்து ஒடுக்குவதற்குப் பதிலாக, அவர்களுடன் பேச்சுவார்த்தை நடத்தி நிரந்தரத் தீர்வு காண வேண்டும். ✊
தொழிலாளர்களின் உரிமைகளை மதிப்போம்! நியாயம் வழங்குவோம்!
பணி நிரந்தரம், ஊதிய உயர்வு உள்ளிட்ட கோரிக்கைகளுக்காகத் தொடர்ச்சியாகப் போராடி வரும் தூய்மைப் பணியாளர்களைக் குண்டுக்கட்டாகக் கைது செய்யும் நடவடிக்கை வன்மையாகக் கண்டிக்கத்தக்கது.
தூய்மைப் பணியாளர்களின் கோரிக்கைகள் முற்றிலும் நியாயமானவை. அக்கோரிக்கைகளை நிறைவேற்றுவது குறித்து அரசு தூய்மைப் பணியாளர்களுடன் முறையான பேச்சுவார்த்தை நடத்த வேண்டும் எனக் கேட்டுக்கொள்கிறேன்.
—நெல்லை முபாரக்,
மாநிலத் தலைவர்,
SDPI கட்சி, தமிழ்நாடு.
@afsarkodlipet “ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುತ್ತಿರುವ ವಿಷಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ರಸ್ತೆ ನಿರ್ಮಾಣದ ತಾಂತ್ರಿಕ ದೋಷಗಳನ್ನು ಪರಿಶೀಲಿಸಿ, ಅಪಘಾತ ತಡೆಗೆ ತಕ್ಷಣ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಜನರ ಜೀವದೊಂದಿಗೆ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲಿ.”
ದಾವಣಗೆರೆ ನಗರದ ಸಾರ್ವಜನಿಕರ ಸುರಕ್ಷತೆಯ ಪ್ರಶ್ನೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕು.
ದಾವಣಗೆರೆ ನಗರದ RTO ಸರ್ಕಲ್ನಿಂದ ಅಕ್ತರ್ ರಝಾ ಸರ್ಕಲ್ವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುವ ಕುರಿತು ಸಾರ್ವಜನಿಕರು ಗಂಭೀರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ರಸ್ತೆಯ ನಿರ್ಮಾಣದ ಸಂದರ್ಭದಲ್ಲಿ ವೈಜ್ಞಾನಿಕ ಹಾಗೂ ಸುರಕ್ಷತಾ ಮಾನದಂಡಗಳನ್ನು ಸಮರ್ಪಕವಾಗಿ ಪಾಲಿಸಲಾಗಿದೆಯೇ ಎಂಬ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ರಸ್ತೆಯ ಕೆಲವು ಭಾಗಗಳ ವಿನ್ಯಾಸ, ತಿರುವುಗಳು, ಎತ್ತರ-ತಗ್ಗು, ರಸ್ತೆ ಗುರುತುಗಳ ಕೊರತೆ, ಸಮರ್ಪಕ ಸೂಚನಾ ಫಲಕಗಳ ಅಭಾವ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಅಪಾಯ ಎದುರಿಸುವಂತಾಗಿದೆ.
ಈ ವಿಡಿಯೋವನ್ನು ಗಮನಿಸಿ
ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ ಆಡಲು ಯಾವುದೇ ಯೋಜನೆಗೂ ಅವಕಾಶ ಇರಬಾರದು. ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳ ಸುರಕ್ಷತೆ ನಮ್ಮೆಲ್ಲರ ಆದ್ಯತೆಯಾಗಬೇಕು.
ಆದ್ದರಿಂದ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯ ಆಯುಕ್ತರು ಹಾಗೂ ಸಂಬಂಧಪಟ್ಟ ಇಂಜಿನಿಯರ್ಗಳು ಮತ್ತು ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ:
1️⃣ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಬೇಕು.
2️⃣ ರಸ್ತೆಯ ವಿನ್ಯಾಸ ಹಾಗೂ ತಾಂತ್ರಿಕ ದೋಷಗಳಿದ್ದರೆ ಅವುಗಳನ್ನು ತಕ್ಷಣ ಸರಿಪಡಿಸಬೇಕು.
3️⃣ ಅಗತ್ಯವಿರುವ ಕಡೆ ಸಮರ್ಪಕ ರಸ್ತೆ ಗುರುತುಗಳು, ಸೂಚನಾ ಫಲಕಗಳು, ವೇಗ ನಿಯಂತ್ರಣ ಕ್ರಮಗಳು ಹಾಗೂ ಇತರೆ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಬೇಕು.
4️⃣ ರಸ್ತೆ ಅಪಘಾತಗಳನ್ನು ತಡೆಗಟ್ಟಲು ತಾತ್ಕಾಲಿಕ ಕ್ರಮಗಳ ಜೊತೆಗೆ ಶಾಶ್ವತ ಪರಿಹಾರವನ್ನು ಒದಗಿಸಬೇಕು.
ಸಂಬಂಧಪಟ್ಟ ಅಧಿಕಾರಿಗಳು ಈ ಮನವಿಯನ್ನು ತುರ್ತಾಗಿ ಪರಿಗಣಿಸಿ, ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದು ಆಗ್ರಹಿಸುತ್ತೇನೆ.
Tag:
ದಾವಣಗೆರೆ ಸ್ಮಾರ್ಟ್ ಸಿಟಿ, ದಾವಣಗೆರೆ ಮಹಾನಗರ ಪಾಲಿಕೆ, ಸಂಬಂಧಪಟ್ಟ ಇಂಜಿನಿಯರ್ಗಳು ಮತ್ತು ಅಧಿಕಾರಿಗಳು.
Davanagere Smart City Limited
Davanagere City Corporation / ದಾವಣಗೆರೆ ಮಹಾನಗರ ಪಾಲಿಕೆ
Davanagere District Administration
Davanagere Police
Karnataka Chief Minister
Department of Urban Development, Government of Karnataka
@DC_Davanagere@CMofKarnataka@SpDavanagere@ZP_Davangere@DULTBangalore@SWDGoK
— ಅಪ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪರಾಜಿತ ಅಭ್ಯರ್ಥಿ
📞 Contact: 8050940867
📧 Email: [email protected]
#Davangere #SmartCity #RoadSafety #AkhtarRazaCircle #RTORoad #PublicSafety #SDPIKarnataka
ವಿವಿಧ ಜನಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 19ರಂದು ‘#ಚಲೋ_ಬೆಂಗಳೂರು’
ಜನರ ಸಮಸ್ಯೆಗಳು, ಸಾಮಾಜಿಕ ನ್ಯಾಯ, ಸಂವಿಧಾನಬದ್ಧ ಹಕ್ಕುಗಳು ಹಾಗೂ ಸಮಾನ ಅವಕಾಶಗಳಿಗಾಗಿ ಧ್ವನಿ ಎತ್ತುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಈ ಹಿನ್ನೆಲೆಯಲ್ಲಿ, ವಿವಿಧ ಪ್ರಮುಖ ಜನಪರ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಎಸ್ಡಿಪಿಐ ಕರ್ನಾಟಕದ ವತಿಯಿಂದ ದಿನಾಂಕ 19/08/2026ರಂದು ‘ಚಲೋ ಬೆಂಗಳೂರು’ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.
ಇದು ಕೇವಲ ಒಂದು ಪ್ರತಿಭಟನೆಯಲ್ಲ; ಜನರ ಹಕ್ಕುಗಳು, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಂವಿಧಾನದ ಆಶಯಗಳ ರಕ್ಷಣೆಗೆ ನಡೆಯುವ ಹೋರಾಟವಾಗಿದೆ.
🔹 ಜನರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು.
🔹 ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ನ್ಯಾಯಯುತ ಅವಕಾಶ ಹಾಗೂ ಪ್ರಾತಿನಿಧ್ಯ ಕಲ್ಪಿಸಬೇಕು.
🔹 ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸಿ, ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶವನ್ನು ಖಾತ್ರಿಪಡಿಸಬೇಕು.
🔹 ಸರ್ಕಾರದ ಗಮನಕ್ಕೆ ತಂದಿರುವ ಜನಪರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು.
ಜನರ ಧ್ವನಿಯನ್ನು ಸರ್ಕಾರದವರೆಗೆ ಇನ್ನಷ್ಟು ಬಲವಾಗಿ ತಲುಪಿಸುವ ಉದ್ದೇಶದಿಂದ ನಡೆಯುವ ಈ ಹೋರಾಟಕ್ಕೆ ನಾಡಿನ ಎಲ್ಲಾ ನ್ಯಾಯಪರ ನಾಗರಿಕರು, ಸಾಮಾಜಿಕ ಹೋರಾಟಗಾರರು, ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ‘ಚಲೋ ಬೆಂಗಳೂರು’ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡುತ್ತೇನೆ.
✊ ನಮ್ಮ ಹಕ್ಕುಗಳಿಗಾಗಿ — ನಮ್ಮ ನ್ಯಾಯಕ್ಕಾಗಿ — ನಮ್ಮ ಭವಿಷ್ಯಕ್ಕಾಗಿ
📅 ದಿನಾಂಕ: 19 ಆಗಸ್ಟ್ 2026
📍 ಬೆಂಗಳೂರು
ಬನ್ನಿ… ಭಾಗವಹಿಸಿ… ಜನಪರ ಹೋರಾಟವನ್ನು ಬಲಪಡಿಸಿ.
— ಅಪ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ
#ChaloBengaluru #SDPIKarnataka #SDPI #SocialJustice #ConstitutionalRights #EqualRights #PeoplePower #Justice #ಜನಪರ_ಹೋರಾಟ #ಚಲೋ_ಬೆಂಗಳೂರು
Independence Day Message
Jai Hind! Jai Samvidhan!
Heartfelt Independence Day
Greetings to all our fellow citizens.
~ABDUL MAJEED,
State President, SDPI Karnataka
#SDPIKarnataka#HappyIndependenceDay2026
ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ
ಅವಧಿ ಹಾಗೂ ನಿಯಮ ಮೀರಿ ಕಾರ್ಯಚರಿಸುತ್ತಿರುವ ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಡಿಸಿ ಕಚೇರಿ ಚಲೋ...
ಆಗಸ್ಟ್ 18, ಮಂಗಳವಾರ
ಬೆಳಿಗ್ಗೆ 9.30ಕ್ಕೆ ಟೋಲ್ ಬಳಿಯಿಂದ
SDPI ಮಂಗಳೂರು ಗ್ರಾಮಾಂತರ ಜಿಲ್ಲೆ
#RemoveBrahmarakotluToll
#BrahmarakotluTollHatao
ಕಲೀಲುಲ್ಲಾ ಕುಟುಂಬದ ಕಣ್ಣೀರಿನ ನಡುವೆ ನ್ಯಾಯಕ್ಕಾಗಿ ನಮ್ಮ ಧ್ವನಿ ಇನ್ನಷ್ಟು ಗಟ್ಟಿಯಾಗಿದೆ…
ಇಂದು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಲಾಕಪ್ ಡೆತ್ ಪ್ರಕರಣದ ಕುರಿತು ಪತ್ರಿಕಾ ಗೋಷ್ಠಿ ನಡೆಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಪ್ರಕರಣದ ಕುರಿತು ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಪತ್ರಿಕಾ ಗೋಷ್ಠಿಯ ಬಳಿಕ ಮೃತ ಕಲೀಲುಲ್ಲಾ ಅವರ ಧರ್ಮಪತ್ನಿ ಶಹನಾಜ್ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದೆ. ಈ ಸಂದರ್ಭದಲ್ಲಿ ಅವರ ಮುದ್ದು ಮಕ್ಕಳಾದ ಮೊಹಮ್ಮದ್ ಹಾಶಿಂ (8 ವರ್ಷ) ಮತ್ತು ಶಿಫಾ (4 ವರ್ಷ) ಅವರನ್ನು ಭೇಟಿಯಾಗಿ, ಅವರೊಂದಿಗೆ ಮಾತನಾಡಿ ಧೈರ್ಯ ತುಂಬುವ ಪ್ರಯತ್ನ ಮಾಡಿದೆ.
ತಂದೆಯನ್ನು ಕಳೆದುಕೊಂಡ ಈ ಪುಟ್ಟ ಮಕ್ಕಳ ಮುಖದಲ್ಲಿನ ನೋವು ಮತ್ತು ತಾಯಿಯ ಕಣ್ಣೀರನ್ನು ಕಂಡಾಗ ಮನಸ್ಸು ಭಾರವಾಯಿತು. ಕುಟುಂಬದ ಆಧಾರಸ್ತಂಭವನ್ನೇ ಕಳೆದುಕೊಂಡಿರುವ ಈ ಕುಟುಂಬದ ನೋವನ್ನು ಕೇವಲ ಮಾತುಗಳಿಂದ ಸಮಾಧಾನಪಡಿಸಲು ಸಾಧ್ಯವಿಲ್ಲ.
ಇನ್ನೊಂದು ಅತ್ಯಂತ ನೋವಿನ ಸಂಗತಿಯೆಂದರೆ, ಇದುವರೆಗೆ ಯಾವುದೇ ಹಿರಿಯ ಸರ್ಕಾರಿ ಅಧಿಕಾರಿ ಅಥವಾ ಜಿಲ್ಲಾಧಿಕಾರಿಗಳು ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಕನಿಷ್ಠ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಿಸಿಲ್ಲ ಎಂಬುದು ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದೆ.
ಒಬ್ಬ ವ್ಯಕ್ತಿ ಪೊಲೀಸ್ ವಶದಲ್ಲಿದ್ದಾಗ ಮೃತಪಟ್ಟಿರುವುದು ಸಾಮಾನ್ಯ ಘಟನೆ ಅಲ್ಲ. ಇದು ಅತ್ಯಂತ ಗಂಭೀರವಾದ ಮಾನವ ಹಕ್ಕುಗಳ ಪ್ರಶ್ನೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಗಳು ಸಂತ್ರಸ್ತ ಕುಟುಂಬದ ಮನೆಗೆ ತೆರಳಿ ಅವರ ನೋವನ್ನು ಆಲಿಸಿ, ಸರ್ಕಾರ ಅವರೊಂದಿಗಿದೆ ಎಂಬ ಭರವಸೆ ನೀಡುವುದು ಕನಿಷ್ಠ ಮಾನವೀಯ ಕರ್ತವ್ಯ.
ಸರ್ಕಾರಕ್ಕೆ ಸಂತ್ರಸ್ತ ಕುಟುಂಬದ ಕಣ್ಣೀರು ಕಾಣುತ್ತಿಲ್ಲವೇ?
ಇದು ಕೇವಲ ಕಲೀಲುಲ್ಲಾ ಅವರ ಕುಟುಂಬದ ಪ್ರಶ್ನೆಯಲ್ಲ. ಪೊಲೀಸ್ ಠಾಣೆಗೆ ನ್ಯಾಯಕ್ಕಾಗಿ ತೆರಳುವ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಜೀವ, ಗೌರವ ಮತ್ತು ಮಾನವ ಹಕ್ಕುಗಳ ಪ್ರಶ್ನೆ.
ಸರ್ಕಾರದ ಮುಂದೆ ನಮ್ಮ ಪ್ರಮುಖ ಬೇಡಿಕೆಗಳು:
🔴 ಸಂತ್ರಸ್ತ ಕುಟುಂಬಕ್ಕೆ ಕನಿಷ್ಠ ₹50 ಲಕ್ಷ ಪರಿಹಾರವನ್ನು ತಕ್ಷಣ ನೀಡಬೇಕು.
🔴 ಕುಟುಂಬದ ಒಬ್ಬ ಅರ್ಹ ಸದಸ್ಯರಿಗೆ ಖಾಯಂ ಸರ್ಕಾರಿ ಉದ್ಯೋಗ ನೀಡಬೇಕು.
🔴 ಕಲೀಲುಲ್ಲಾ ಅವರ ಮಕ್ಕಳಾದ ಮೊಹಮ್ಮದ್ ಹಾಶಿಂ ಮತ್ತು ಶಿಫಾ ಅವರ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು.
🔴 ಪ್ರಕರಣದ ಕುರಿತು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು.
🔴 ತಪ್ಪಿತಸ್ಥರೆಂದು ತನಿಖೆಯಲ್ಲಿ ಸಾಬೀತಾಗುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಹಾಗೂ ಉದಾಹರಣಾತ್ಮಕ ಕಾನೂನು ಕ್ರಮ ಕೈಗೊಳ್ಳಬೇಕು.
🔴 ಕುಟುಂಬಕ್ಕೆ ಶೀಘ್ರ ನ್ಯಾಯ ದೊರಕುವಂತೆ ಪ್ರಕರಣದ ವಿಚಾರಣೆಯನ್ನು ಫಾಸ್ಟ್ಟ್ರ್ಯಾಕ್ ಮಾದರಿಯಲ್ಲಿ ನಡೆಸಬೇಕು.
ಮೊಹಮ್ಮದ್ ಹಾಶಿಂ ಮತ್ತು ಶಿಫಾ ಅವರ ಕಣ್ಣೀರಿನ ಪ್ರಶ್ನೆಗೆ ನ್ಯಾಯವೇ ಉತ್ತರವಾಗಬೇಕು.
ಈ ಕುಟುಂಬ ಒಂಟಿಯಲ್ಲ. ನ್ಯಾಯ ಸಿಗುವವರೆಗೆ ನಾವು ಅವರ ಜೊತೆಗಿದ್ದೇವೆ.
ಸಂತ್ರಸ್ತ ಕುಟುಂಬಕ್ಕೆ ನ್ಯಾಯ, ಗೌರವ ಮತ್ತು ಸೂಕ್ತ ಪರಿಹಾರ ದೊರೆಯುವವರೆಗೆ SDPI ತನ್ನ ಹೋರಾಟವನ್ನು ಮುಂದುವರಿಸಲಿದೆ.
ನಿಯೋಗದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಸದ್ದಾಂ ಹೋಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಜಾಫರ್ , ಜಿಲ್ಲಾ ಸಮಿತಿ ಸದಸ್ಯರಾದ ಜೀಲಾನ್ ಬಾಷಾ ರವರು ಉಪಸ್ಥಿತರಿದ್ದರು.
Amid the Tears of Kaleel Ullah’s Family, Our Voice for Justice Has Grown Stronger…
Today, I held a press conference regarding the Hagaribommanahalli lock-up death case in Vijayanagara district, urging the State Government to ensure justice for the victim’s family and to order an impartial judicial inquiry into the case.
After the press conference, I visited the home of Shahanaz, the wife of the deceased, Kaleel Ullah, and met the family to offer my condolences and support. During the visit, I also met their young children, Mohammed Hashim (8) and Shifa (4), spoke with them and tried to give them courage and reassurance during this difficult time.
Seeing the pain on the faces of these young children who have lost their father, and the tears of their mother, was deeply heartbreaking. The suffering of a family that has lost its primary breadwinner cannot be eased through words alone.
What is even more painful is that so far, no senior government official or Deputy Commissioner has visited the bereaved family or even taken the basic step of offering condolences. This has only added to the family’s pain and sense of abandonment.
A person losing his life while in police custody is not an ordinary incident. It is a serious human rights issue. In such circumstances, it is the basic humanitarian responsibility of government representatives to visit the victim’s family, listen to their concerns and assure them that the government stands with them.
Does the government not see the tears of this grieving family?
This is not merely a question concerning Kaleel Ullah’s family. It is a question of the life, dignity and
The Social Democratic Party of India organised a Contemporary Political Dialogue on 9 August 2026 at the Photo Journalists Association Hall in Panaji, Goa. The programme brought together invited participants for discussions on contemporary political and social issues affecting the people of Goa. The discussions also focused on strengthening the Party’s grassroots presence and expanding its engagement with people across the state.
SDPI National Secretary Alfonse Franco welcomed the gathering, while National General Secretaries Elyas Thumbe and Riyaz Farangipete addressed the programme on contemporary political developments and the need for organised political work in Goa. As part of the organisational process, a seven member Organising Committee comprising one Convener and six Joint Conveners was constituted to coordinate and strengthen the Party’s activities in the state. The programme concluded with a commitment to deepen engagement with the people and build a stronger grassroots organisational presence in Goa.
கடந்த சில நாட்களுக்கு முன்னர் உடல்நலக்குறைவால் காலமான, இந்தியன் யூனியன் முஸ்லிம் லீக் தேசியத் தலைவர் பேராசிரியர் கே.எம்.காதர் மொகிதீன் அவர்களின் மூத்த மகனார் மருத்துவர் கே.கலீலூர் ரஹ்மான் அவர்களின் மறைவையொட்டி, திருச்சியில் உள்ள பேராசிரியர் அவர்களின் இல்லத்திற்குச் சென்று, அவரை நேரில் சந்தித்து ஆறுதல் தெரிவித்தேன். அப்போது எஸ்டிபிஐ கட்சியின் மாநிலச் செயலாளர் வழக்கறிஞர் ஹஸ்ஸான் பைஜி மற்றும் மாவட்ட நிர்வாகிகள் உடன் இருந்தனர்.