ವಿಕಸಿತ ಭಾರತ – ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ 125 ದಿನಗಳ ಉದ್ಯೋಗದ ಖಾತ್ರಿ. 💼🌱
✅ ನಿರುದ್ಯೋಗ ಭತ್ಯೆ
✅ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ
✅ ಗ್ರಾಮ ಪಂಚಾಯಿತಿಗಳ ಮೂಲಕ ಗ್ರಾಮೀಣ ಅಭಿವೃದ್ಧಿ
ಬಲಿಷ್ಠ ಗ್ರಾಮ ಪಂಚಾಯಿತಿಗಳಿಂದ ವಿಕಸಿತ ಭಾರತದೆಡೆಗೆ ನಮ್ಮ ಹೆಜ್ಜೆ.
#VBGRAMG#ViksitBharat#RuralDevelopment
ಸ್ವಚ್ಛತಾ ಹೀ ಸೇವಾ
ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮ ಪಂಚಾಯತಿ ಏಕ್ ದಿನ ಏಕ್ ಗಂಟಾ ಸಾಥ್ ಅಂಗವಾಗಿ ಶೌಚಾಲಯ ಮುಂದೆ ಸ್ವಚ್ಛತೆ, ಆರೋಗ್ಯ ಶಿಬಿರ, ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿ ನೆಡುವುದು.
ಅಂತರಾಷ್ಟ್ರೀಯ ಯೋಗಾ ದಿನಾಚರಣೆ
ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ 11ನೇ ಅಂತರರಾಷ್ಟ್ರೀಯ ಯೋಗಾ ದಿನಾಚರಣೆ ಮಾಡಿ ಕೂಲಿಕಾರ ಮಹಿಳೆಯರಿಗೆ ಯೋಗಾಸನ ಮಾಡಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು.
ರೋಜಗಾರ ದಿವಸ ಆಚರಣೆ
ನಾವಲಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಕಾಯ೯ನಿವ೯ಹಿಸುತ್ತಿರುವ ಕೂಲಿಕಾರರಿಗೆ ರೋಜಗಾರ ದಿವಸ ಆಚರಣೆ ಮಾಡಿ, ನರೇಗಾ ಯೋಜನೆ ಕುರಿತು ಮಾಹಿತಿ ತಿಳಿಸಲಾಯಿತು.
ವಿಶ್ವ ಪರಿಸರ ದಿನಾಚರಣೆ.
ರಬಕವಿ-ಬನಹಟ್ಟಿ ತಾಲೂಕಿನ ಗ್ರಾಮ ಪಂಚಾಯಿತಿ, ಶಾಲಾ ಆವರಣ, ಉದ್ಯಾನವನ, ಅಮೃತ ಸರೋವರದ ದಂಡೆಯ ಮೇಲೆ ಮತ್ತು ರಸ್ತೆ ಬದಿ ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಯಲ್ಲಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡಿಗಣಿ ಗ್ರಾಮದ ರೈತ ಅರ್ಜುನ ಕೆಸರಕೊಪ್ಪರವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದ್ರಾಕ್ಷಿ ಬೆಳೆದಿದ್ದಾರೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಪಡೆಯಲು ಉಚಿತ ಸಹಾಯವಾಣಿ 8277506000 ಗೆ ಕರೆ ಮಾಡಿ.
ನರೇಗಾ ದಿವಸ ಆಚರಣೆ
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ, ಹನಗಂಡಿ, ಮದಭಾವಿ ಮತ್ತು ಢವಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಮೃತ ಸರೋವರ ಮತ್ತು ಕೆರೆಯ ದಂಡೆಯ ಮೇಲೆ ನರೇಗಾ ದಿವಸ ಕಾಯ೯ಕ್ರಮ ಹಮ್ಮಿಕೊಂಡು, ಕೇಕ್ ಕತ್ತರಿಸಿ ಮೂಲಕ ಆಚರಣೆ ಮಾಡಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿಇದ್ದರು
ಹಿಪ್ಪುನೇರಳೆ ಕಾಮಗಾರಿಯಿಂದ ಅಧಿಕ ಆದಾಯ
ಜಿಲ್ಲೆ : ಬಾಗಲಕೋಟೆ
ತಾಲೂಕು :ರಬಕವಿ-ಬನಹಟ್ಟಿ
ಗ್ರಾಮ ಪಂಚಾಯಿತಿ: ಮದಭಾವಿ
ಗ್ರಾಮ : ಮಾರಾಪೂರ
ರಮೇಶ ಬಿಸನಕೊಪ್ಪ ಅವರು 10 ವಷ೯ಕ್ಕಿಂತ ಹೆಚ್ಚುಕೈಲ ರೈತರಿಗೆ ಕೆಲಸ ನಿವ೯ಹಿಸುತ್ತಿದ್ದು, ಪ್ರಸ್ತುತ ನರೇಗಾ ಯೋಜನೆಯಡಿ ಸುಮಾರು 4 ತಿಂಗಳಿಂದ ಹಿಪ್ಪುನೇರಳೆ ನಾಟಿ ಮಾಡಿ ಕೊಂಡು 70ಸಾ. ಬಂದಿದೆ.
ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ' ಅಭಿಯಾನ
ಯಲ್ಲಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಂಡಿಗಣಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಮಿ೯ಕ ಆಯವ್ಯಯ ತಯಾರಿಸಲು ಮನೆ ಮನೆಗೆ ಭೇಟಿ ನೀಡಿ, ಕಾಮಗಾರಿ ಬೇಡಿಕೆ ಪಡೆದುಕೊಳ್ಳಲಾಯಿತು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಮಾ೯ವಾಗಿರುವ ಸಕಾ೯ರಿ ಪ್ರೌಢ ಶಾಲೆ ಆವರಣದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಶೌಚಾಲಯ ಕಾಮಗಾರಿ.