ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಕೆ. ಸಿ. ಜನರಲ್ ಆಸ್ಪತ್ರೆಯ ಮುಂಭಾಗ ಇರುವ ಸರಕಾರಿ ಶಾಲೆ ಬಳಿ ಇಂದು ತ್ರಿವರ್ಣ ಯಾತ್ರೆಗೆ ಚಾಲನೆ ನೀಡಿ, ಮಲ್ಲೇಶ್ವರಂನ 18 ನೇ ಕ್ರಾಸ್ ಆಟದ ಮೈದಾನದವರೆಗೆ ನಡೆದ ಯಾತ್ರೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಾದ ಶ್ರೀ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಸಹ ಉಸ್ತುವಾರಿಗಳಾದ ಶ್ರೀ ಸುಧಾಕರ್ ರೆಡ್ಡಿ, ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್, ಶಾಸಕರಾದ ಶ್ರೀ ಕೆ. ಗೋಪಾಲಯ್ಯ, ಶ್ರೀ ಸಿ. ಕೆ. ರಾಮಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಂದೀಶ್ ರೆಡ್ಡಿ, ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕಾ ಅವಿನಾಶ್, ಶ್ರೀಮತಿ ರೂಪಾಲಿ ನಾಯ್ಕ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ಹರೀಶ್, ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
#HarGharTiranga #TrivarnaYatre
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮೇರು ಸಾಹಿತಿ, ಗೋಕಾಕ್ ವರದಿ'ಯ ಮೂಲಕ ಕನ್ನಡಕ್ಕೆ ಪ್ರಥಮ ಭಾಷೆಯ ಸ್ಥಾನಮಾನ ದೊರಕಿಸಿಕೊಡಲು ಅಡಿಪಾಯ ಹಾಕಿಕೊಟ್ಟ ತಾಯಿ ಭುವನೇಶ್ವರಿಯ ಹೆಮ್ಮೆಯ ಪುತ್ರ, ದಿವಂಗತ ಡಾ. ವಿ.ಕೃ.ಗೋಕಾಕ್ ಅವರ ಜನ್ಮದಿನದಂದು ಆ ಮಹಾನ್ ಚೇತನಕ್ಕೆ ಭಾವಪೂರ್ಣ ನಮನಗಳು.
'ಭಾರತ ಸಿಂಧು ರಶ್ಮಿ'ಯಂತಹ ಮಹಾಕಾವ್ಯ ಸೇರಿದಂತೆ ವೈವಿಧ್ಯಮಯ ಸಾಹಿತ್ಯಿಕ ಕೊಡುಗೆಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಅವರ ಸಾಧನೆ ಮತ್ತು ಕೊಡುಗೆಗಳು ಅವಿಸ್ಮರಣೀಯ.
ಹಿರಿಯ ನಾಯಕರು, ಮಾಜಿ ಸಚಿವರು, ಆತ್ಮೀಯರಾದ ಶ್ರೀ @sriramulubjp ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
ದೇವರು ನಿಮಗೆ ಉತ್ತಮ ಆಯುರಾರೋಗ್ಯದೊಂದಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜನಸೇವೆ, ಸಂಘಟನೆ ಮಾಡುವ ಶಕ್ತಿಯನ್ನು, ದೇಶಸೇವೆಯ ಇನ್ನೂ ಉಜ್ವಲ ಅವಕಾಶಗಳನ್ನು ಕರುಣಿಸಲಿ ಎಂದು ಶುಭ ಹಾರೈಸುತ್ತೇನೆ.
ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ @narendramodi ಜೀ ರವರ 'ನಶೆ ಮುಕ್ತ ಭಾರತ' (#NashaMuktBharatAbhiyaan) ನಿರ್ಮಾಣದ ಕರೆಗೆ ಬೆಂಬಲವಾಗಿ, ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ ಪೋಸ್ಟರ್ ಬಿಡುಗಡೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಅನುಸೂಯಕ್ಕನವರು ಹಾಗೂ ರಾಜಯೋಗಿನಿ ಬ್ರಹ್ಮಕುಮಾರಿ ಸ್ನೇಹಕ್ಕನವರು ಸಾನ್ನಿಧ್ಯ ವಹಿಸಿ, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಯುವಜನರೇ ನಮ್ಮ ದೇಶದ ನಿಜವಾದ ಶಕ್ತಿ. ದುಷ್ಟ ಚಟಗಳಿಂದ ದೂರವಿದ್ದು, ಆರೋಗ್ಯಕರ ಹಾಗೂ ಸುದೃಢ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯೂ ದೃಢಸಂಕಲ್ಪ ತೊಡುವ ಮೂಲಕ ಪ್ರಧಾನಿಗಳ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಜೊತೆಯಾಗಿ ಮುನ್ನಡೆಯಬೇಕಿದೆ. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಶಿವಕುಮಾರ್, ಡಾ. ವೀರೇಂದ್ರ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶ್ರೀ ಕೆ.ಎಸ್.ಗುರುಮೂರ್ತಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ರಾಜ್ಯದಲ್ಲಿ ಒಂದೆಡೆ ಭೀಕರ ಬರಗಾಲದಿಂದ ರೈತರು, ಸಾರ್ವಜನಿಕರು ಬಿಂದಿಗೆ ನೀರಿಗೂ ಪರದಾಡುತ್ತಾ ಕಣ್ಣೀರು ಹಾಕುತ್ತಿದ್ದರೆ, ಇನ್ನೊಂದೆಡೆ ಅತಿವೃಷ್ಟಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಂತೂ ಇಂತೂ 2 ತಿಂಗಳ ನಂತರ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ಸದಸ್ಯರು, ಇನ್ನೇನು ಜನರ ಬಳಿಗೆ ತೆರಳುತ್ತಿದ್ದಾರೆ, ಜನರ ಸಂಕಷ್ಟ ಆಲಿಸಲಿದ್ದಾರೆ ಎಂದುಕೊಳ್ಳುವ ಹೊತ್ತಿಗೆ, ಕಾಂಗ್ರೆಸ್ ಪಕ್ಷದ ಅಸಲಿ ಮುಖವಾಡ ಮತ್ತೊಮ್ಮೆ ಕಳಚಿ ಬಿದ್ದಿದೆ.
'ಬರ ಅಧ್ಯಯನ'ಕ್ಕೆಂದು ಬಳ್ಳಾರಿಗೆ ತೆರಳಿದ ಸಚಿವ ಶ್ರೀ ಬಿ.ನಾಗೇಂದ್ರ ಅವರು ಕಾಂಗ್ರೆಸ್ ಕಾರ್ಯಕರ್ತರ ಅದ್ದೂರಿ ಸಂಭ್ರಮಾಚರಣೆ, ಸತ್ಕಾರ ಹಾಗೂ ಬೃಹತ್ ಹಾರ-ತುರಾಯಿ ಹಾಕಿಸಿಕೊಳ್ಳುವ ಮೂಲಕ ಸಂಭ್ರಮೋತ್ಸವ ಆಚರಿಸಿಕೊಂಡಿರುವುದು @INCKarnataka ಪಕ್ಷದ ಬೇಜಾವಾಬ್ದಾರಿ, ಸಂವೇದನಾರಹಿತ ಮನಸ್ಥಿತಿಗೆ ಕನ್ನಡಿ ಹಿಡಿದಿದೆ. ರೈತರು ಕಣ್ಣೀರು ಹಾಕುತ್ತಿದ್ದರೆ ನಮಗೇನು, ತಾವು ಸಚಿವರಾಗಿರುವುದೇ ದೊಡ್ಡ ಸಾಧನೆ ಎನ್ನುವಂತೆ ಇವರ ವರ್ತನೆ ನೋಡಿ ಜನರೇ ಹಿಡಿ ಶಾಪ ಹಾಕುತ್ತಿದ್ದಾರೆ.
ಇದು ಬರ ಅಧ್ಯಯನ ಪ್ರವಾಸವೋ, ಸಚಿವರ ವೈಯಕ್ತಿಕ ಸಂಭ್ರಮಾಚರಣೆಯೋ ಎನ್ನುವುದನ್ನು ಮುಖ್ಯಮಂತ್ರಿ ಶ್ರೀ @DKShivakumar ಅವರೇ ಉತ್ತರಿಸಬೇಕು. ಸಚಿವ ಸ್ಥಾನಗಳಿಂದ ಹಿಡಿದು ಪ್ರತಿಯೊಂದಕ್ಕೂ 'ರೇಟ್ ಕಾರ್ಡ್' ಇಟ್ಟು ಹೆಚ್ಚು ಬೆಲೆ ಕೂಗಿದವರಿಗೆ ಆದ್ಯತೆ ನೀಡಲಾಗುತ್ತಿರುವ ಕಾಂಗ್ರೆಸ್ ಸಂಸ್ಕೃತಿಯನ್ನು ಅವರದೇ ಪಕ್ಷದ ನಾಯಕರು ಬಯಲು ಮಾಡಿದ್ದಾರೆ. ಹಾಗಾಗಿ, ಗಂಭೀರ ಆರೋಪ ಹೊತ್ತಿದ್ದರೂ, ಹೆಚ್ಚು ಮೊತ್ತ ನೀಡಿ ಸ್ಥಾನ 'ಗಿಟ್ಟಿಸಿಕೊಂಡ' ಸಚಿವರಿಗೆ ಈ ಸಂಭ್ರಮೋತ್ಸವ ಕೂಡ ಸಹಜವಾದದ್ದೇ!
ನಮ್ಮ ಅನ್ನದಾತರು, ಜನ ಜಾನುವಾರುಗಳು ಸಂಕಷ್ಟದಲ್ಲಿರುವ ಕಾಲದಲ್ಲಿ, ಅವರ ಪರಿಸ್ಥಿತಿಗಳನ್ನು ಅಪಹಾಸ್ಯ ಮಾಡುವ ರೀತಿಯ ಇಂತಹ ವರ್ತನೆಗಳನ್ನು, ಹಾರ-ತುರಾಯಿ ಸಂಭ್ರಮಗಳನ್ನು ಬದಿಗಿಟ್ಟು ಸಚಿವರುಗಳು ಕೂಡಲೇ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲಿ ಎಂದು ಆಗ್ರಹಿಸುತ್ತೇವೆ.
#CongressFailsKarnataka
ನಮ್ಮ ನೇಕಾರರ ಪ್ರತಿ ಕಾಯಕದಲ್ಲೂ ಭಾರತೀಯತೆಯ ಹೆಮ್ಮೆ - ಪ್ರತಿಯೊಂದು ನೂಲಿನಲ್ಲೂ ಈ ನೆಲದ ಸಾಂಸ್ಕೃತಿಕ ಜೀವಂತಿಕೆ!
ನಮ್ಮ ನೆಲದ ಸಂಸ್ಕೃತಿ, ಪರಂಪರೆ ಮತ್ತು ಕಲಾತ್ಮಕತೆಯನ್ನು ತಮ್ಮ ಕೈಚಳಕದಿಂದ ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುತ್ತಿರುವ ನೇಕಾರ ಬಂಧುಗಳಿಗೆ ನಮನಗಳು.
ನೇಕಾರರ ಕೈಯಲ್ಲಿ ಮೂಡುವ ಪ್ರತಿಯೊಂದು ಕೈಮಗ್ಗವೂ ಒಂದು ಬಟ್ಟೆ ಮಾತ್ರವಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆಗಳ ಪ್ರತೀಕ, ನಮ್ಮ ಸ್ವದೇಶಿ ಶಕ್ತಿಯ ಸಂಕೇತ. ನೇಕಾರರ ಬದುಕಿಗೆ ಭದ್ರತೆ, ಅವರ ಕೌಶಲ್ಯಕ್ಕೆ ಗೌರವ ಹಾಗೂ ಅವರ ಪರಿಶ್ರಮಕ್ಕೆ ಸೂಕ್ತ ಮೌಲ್ಯ ದೊರೆಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ.
ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸೋಣ, ಕೈಮಗ್ಗವನ್ನು ಪ್ರೋತ್ಸಾಹಿಸೋಣ; ನೇಕಾರರ ಕೈಗಳನ್ನು ಬಲಪಡಿಸಿ, ನಮ್ಮ ಪರಂಪರೆಯನ್ನು ಉಳಿಸೋಣ, ಬೆಳೆಸೋಣ, ಮತ್ತಷ್ಟು ಶ್ರೀಮಂತಗೊಳಿಸೋಣ!
#NationalHandloomDay
Karnataka Is Drowning in Issues and this Congress Govt Is Busy Selling Cabinet Seats to the Highest Bidder
For the first 3 years, this @INCKarnataka government held Karnataka's governance hostage over the CM's chair. That fight was "settled." Now, a new war has broken out over cabinet berths. Farmers are staring at a drought with no relief in sight. Youth are searching for jobs. And what is the Congress high command doing through all of this? Running an auction, which will put even IPL auctions to shame. This is not a government. This is a marketplace.
The list of ministers was drawn up, dropped, and redrawn, not on merit, not on public service, but on who paid and who didn't. One name was quietly removed, why? Was it because the payment didn't come through? Another name was suddenly replaced, why? Was it because they received a higher bid? Cabinet berths are not items to be bought and sold. They are a responsibility to the people of our state.
The people of Karnataka gave this Congress 135+ seats hoping for governance. A mandate they thought would give the state a stable, firm, issue-free government for five years. But even with a mandate that strong, they cannot stop fighting each other. The only thing they have fought for is their individual power, not for people and their problems. People of Karnataka have realised that the only thing that matters to Congress is power, and come 2028, they will send them packing for this betrayal.
#CorruptCongress #CongressFailsKarnataka
ನಾಡಿನ ಸಮಸ್ತ ನೇಕಾರ ಬಂಧುಗಳಿಗೆ ರಾಷ್ಟ್ರೀಯ ಕೈಮಗ್ಗ ದಿನದ ಶುಭಾಶಯಗಳು. ನಮ್ಮ ಭವ್ಯ ಸಂಸ್ಕೃತಿ, ಸ್ವದೇಶಿ ಪರಂಪರೆ ಹಾಗೂ ನಮ್ಮ ಸಮಸ್ತ ನೇಕಾರ ಸಮುದಾಯದ ನಿಸ್ವಾರ್ಥ ಕಾಯಕ ಪರಿಶ್ರಮದ ಸಂಕೇತವಾಗಿ ನಾವು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸುತ್ತೇವೆ.
ಸ್ವದೇಶಿ ಉತ್ಪನ್ನಗಳನ್ನು ಹೆಮ್ಮೆಯಿಂದ ಬಳಸೋಣ, ಕಲಾವಂತಿಕೆಯ ನಮ್ಮ ಕೈಮಗ್ಗಗಳನ್ನು ಮತ್ತೆ ಶ್ರೀಮಂತಗೊಳಿಸೋಣ, ಕೈಮಗ್ಗ ಕ್ಷೇತ್ರವನ್ನು ಸಶಕ್ತಗೊಳಿಸುವ ಮೂಲಕ ಪ್ರತಿಯೊಬ್ಬ ನೇಕಾರ ಕುಟುಂಬದ ಬದುಕಿನಲ್ಲಿ ಹೊಸ ಭರವಸೆ ಮೂಡಿಸಲು ಬದ್ಧರಾಗೋಣ.
#NationalHandloomDay
ಕೇವಲ ತಮ್ಮ ವೋಟ್ ಬ್ಯಾಂಕ್ ತುಷ್ಟೀಕರಣ ಮತ್ತು ಕ್ಷುಲ್ಲಕ ಓಲೈಕೆ ರಾಜಕೀಯಕ್ಕಾಗಿ ನಮ್ಮ ದೇಶದ ಸಾಂಸ್ಕೃತಿಕ, ಐತಿಹಾಸಿಕ ಸತ್ಯಗಳನ್ನು, ಸಾವಿರಾರು ವರ್ಷಗಳ ಧಾರ್ಮಿಕ ಮೌಲ್ಯಗಳನ್ನು @PriyankKharge , @Dr_Yathindra_S ಅವರಂತಹ @INCKarnataka ಮುಖಂಡರು ಹೀಯಾಳಿಸುತ್ತಿರುವುದು ಅವರ ಕಲುಷಿತ ಮನಸ್ಥಿತಿಯನ್ನು ಎತ್ತಿಹಿಡಿಯುತ್ತಿದೆ. ಶತ ಶತಮಾನಗಳಿಂದ ಬೆಳೆದುಬಂದ ನಾಗರಿಕತೆಯ ಮೂಲಬೇರುಗಳನ್ನು ಹೀಯಾಳಿಸಿ, ನಮ್ಮ ಧರ್ಮವನ್ನು ಪ್ರತ್ಯೇಕಿಸಿ, ಮತಬ್ಯಾಂಕ್ಗಾಗಿ ಹಿಂದುತ್ವವನ್ನು ವ್ಯಾಖ್ಯಾನಿಸುವ ಇಂತಹ ಕುತಂತ್ರದ ಯತ್ನಗಳು ಖಂಡನೀಯ. 'ಹಿಂದುತ್ವ ಎಂದರೆ ಜೀವನ ವಿಧಾನ' ಎಂದು ಈ ದೇಶದ ಸರ್ವೋಚ್ಚ ನ್ಯಾಯಾಲಯವೇ ಹೇಳಿದೆ.
ಸಿಂಧು-ಸರಸ್ವತಿ ನದಿ ನಾಗರಿಕತೆಯಿಂದ ಹಿಡಿದು ಇಂದಿನವರೆಗೂ ವೇದ, ಉಪನಿಷತ್, ಪುರಾಣ, ರಾಮಾಯಣ, ಮಹಾಭಾರತದ ಮೌಲ್ಯಗಳು ಮತ್ತು ಸದಾಶಯಗಳು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ದೇಶದ ನಾಗರಿಕರ, ಗ್ರಾಮಗಳ ಹೆಸರಿನಲ್ಲಿ, ಹಬ್ಬ, ಜಾನಪದ, ದೇವಾಲಯಗಳಲ್ಲಿ, ಜನಮಾನಸದಲ್ಲಿ ಎಂದೆಂದಿಗೂ ಜೀವಂತವಾಗಿವೆ. ನಮ್ಮ ರಾಷ್ಟ್ರಗೀತೆ "ವಂದೇ ಮಾತರಂ", ಧ್ಯೇಯವಾಕ್ಯ "ಸತ್ಯಮೇವ ಜಯತೇ" ಇತ್ಯಾದಿ ನಮ್ಮ ಅಧಿಕೃತ ಸಂಕೇತಗಳೆಲ್ಲವೂ ಕೂಡ ಈ ನೆಲದ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಗಟ್ಟಿ ಬೇರುಗಳ ಸಾಕ್ಷಿಯಾಗಿದೆ. ನಿಮ್ಮ ಕೀಳು ಓಲೈಕೆಯ 'ಹಿಡನ್ ಅಜೆಂಡಾ'ಗಳಿಗೆ ಭಾರತರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಳ್ಳುವುದನ್ನು ಬಿಡಿ, ಅವರ ಹೆಸರತ್ತಲೂ ಕಾಂಗ್ರೆಸ್ ನವರಿಗೆ ನೈತಿಕತೆಯಿಲ್ಲ, ಆ ಮಹಾಪುರಷನಿಗೆ ಕಾಂಗ್ರೆಸ್ ಮಾಡಿರುವ ಅನ್ಯಾಯ, ಅವಮಾನಗಳಿಗೆ ಇತಿಹಾಸವೇ ಸಾಕ್ಷಿ!
ನಿಮ್ಮ ಭ್ರಷ್ಟಾಚಾರ, ಆಡಳಿತ ವೈಫಲ್ಯ, ರೈತ ವಿರೋಧಿ, ಜನವಿರೋಧಿ ನೀತಿಗಳು ಹಾಗೂ ಅಭಿವೃದ್ಧಿ ಶೂನ್ಯತೆಯನ್ನು ಮುಚ್ಚಿಹಾಕಲು, ಜನರ ಗಮನವನ್ನು ಬೇರೆಡೆ ಸೆಳೆಯಲು, ಹೀಗೆ ಅಸಂಬದ್ಧ ಹೇಳಿಕೆಗಳನ್ನು ನೀಡುವ ಕಾಂಗ್ರೆಸ್ ಸಂಸ್ಕೃತಿ ಹಾಗೂ ಮನಸ್ಥಿತಿ ಜನರಿಗೆ ಅರ್ಥವಾಗಿದೆ. ಹಿಂದೂ ಸಮುದಾಯದ ನಂಬಿಕೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪದೇ ಪದೇ ಅಪಮಾನಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಮುಂಬರುವ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ.
#HinduVirodhiCongress #SingleSamudhayaSarkara
ಜನಪ್ರಿಯ ಶಾಸಕರು ಹಾಗೂ ವಿಧಾನಸಭೆಯ ವಿಪಕ್ಷ ಉಪನಾಯಕರಾದ ಶ್ರೀ @BelladArvind ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
ಆ ದೇವರು ತಮಗೆ ಪೂರ್ಣ ಆಯುರಾರೋಗ್ಯವನ್ನು, ಸುಖ-ಸಮೃದ್ಧಿಗಳನ್ನು ಕರುಣಿಸಲಿ, ನಿಮ್ಮ ಸಮಾಜಮುಖಿ ಕಾಯಕ ಮತ್ತು ಸಂಘಟನಾ ಶಕ್ತಿ, ಜನಸೇವೆಗೆ ನಿರಂತರವಾಗಿ ಸಮರ್ಪಿತವಾಗುವಂತೆ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
ಅಯೋಧ್ಯೆಯ ಶ್ರೀರಾಮನ ಜನ್ಮಸ್ಥಳದಲ್ಲಿ, ಭಾರತದ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ನಾಗರಿಕತೆಯ ಮೌಲ್ಯಗಳ ಸಂಕೇತವಾಗಿ ಕೋಟ್ಯಂತರ ಜನರ ಶ್ರದ್ಧೆಯ ಕೇಂದ್ರವಾದ ಭವ್ಯ ಶ್ರೀರಾಮ ಮಂದಿರಕ್ಕೆ ಅಡಿಗಲ್ಲು ಹಾಕಿ ಇಂದಿಗೆ 6 ವರ್ಷಗಳ ಸಂಭ್ರಮ.
#AyodhyaRamMandir