In the 1990s, Bengaluru residents wrote “Naale Baa” (Come Tomorrow) on its doors to ward off an evil spirit. Today, the irony is that Karnataka’s own Chief Minister @DKShivakumar appears to be receiving the same message at 10 Janpath.
While Karnataka is confronted with farmers in distress, drought concerns, crumbling roads, infrastructure failures and mounting public grievances, the @INCKarnataka government remains consumed by its internal power struggle. Instead of discussing solutions for Karnataka, its leaders are busy discussing who should resign, who should become a Minister and who should retain power.
The desperation for ministerial berths tells its own story. Congress leaders appear determined to secure their share of power now because they know that public confidence in this government has already eroded.
Karnataka gave Congress a decisive mandate to govern, not a mandate to spend five years fighting over power. Yet, the government’s attention continues to remain fixed on its internal equations rather than the problems confronting the people.
Today, Congress leaders are being told “Naale Baa” at 10 Janpath. In 2028, when they go knocking on the doors of Karnataka’s people seeking votes, it will be the people who tell them “Naale Baa.”
#CongressFailsKarnataka
ರಾಜ್ಯದಲ್ಲಿ ಒಂದೆಡೆ ಭೀಕರ ಬರಗಾಲದಿಂದ ರೈತರು, ಸಾರ್ವಜನಿಕರು ಬಿಂದಿಗೆ ನೀರಿಗೂ ಪರದಾಡುತ್ತಾ ಕಣ್ಣೀರು ಹಾಕುತ್ತಿದ್ದರೆ, ಇನ್ನೊಂದೆಡೆ ಅತಿವೃಷ್ಟಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಂತೂ ಇಂತೂ 2 ತಿಂಗಳ ನಂತರ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ಸದಸ್ಯರು, ಇನ್ನೇನು ಜನರ ಬಳಿಗೆ ತೆರಳುತ್ತಿದ್ದಾರೆ, ಜನರ ಸಂಕಷ್ಟ ಆಲಿಸಲಿದ್ದಾರೆ ಎಂದುಕೊಳ್ಳುವ ಹೊತ್ತಿಗೆ, ಕಾಂಗ್ರೆಸ್ ಪಕ್ಷದ ಅಸಲಿ ಮುಖವಾಡ ಮತ್ತೊಮ್ಮೆ ಕಳಚಿ ಬಿದ್ದಿದೆ.
'ಬರ ಅಧ್ಯಯನ'ಕ್ಕೆಂದು ಬಳ್ಳಾರಿಗೆ ತೆರಳಿದ ಸಚಿವ ಶ್ರೀ ಬಿ.ನಾಗೇಂದ್ರ ಅವರು ಕಾಂಗ್ರೆಸ್ ಕಾರ್ಯಕರ್ತರ ಅದ್ದೂರಿ ಸಂಭ್ರಮಾಚರಣೆ, ಸತ್ಕಾರ ಹಾಗೂ ಬೃಹತ್ ಹಾರ-ತುರಾಯಿ ಹಾಕಿಸಿಕೊಳ್ಳುವ ಮೂಲಕ ಸಂಭ್ರಮೋತ್ಸವ ಆಚರಿಸಿಕೊಂಡಿರುವುದು @INCKarnataka ಪಕ್ಷದ ಬೇಜಾವಾಬ್ದಾರಿ, ಸಂವೇದನಾರಹಿತ ಮನಸ್ಥಿತಿಗೆ ಕನ್ನಡಿ ಹಿಡಿದಿದೆ. ರೈತರು ಕಣ್ಣೀರು ಹಾಕುತ್ತಿದ್ದರೆ ನಮಗೇನು, ತಾವು ಸಚಿವರಾಗಿರುವುದೇ ದೊಡ್ಡ ಸಾಧನೆ ಎನ್ನುವಂತೆ ಇವರ ವರ್ತನೆ ನೋಡಿ ಜನರೇ ಹಿಡಿ ಶಾಪ ಹಾಕುತ್ತಿದ್ದಾರೆ.
ಇದು ಬರ ಅಧ್ಯಯನ ಪ್ರವಾಸವೋ, ಸಚಿವರ ವೈಯಕ್ತಿಕ ಸಂಭ್ರಮಾಚರಣೆಯೋ ಎನ್ನುವುದನ್ನು ಮುಖ್ಯಮಂತ್ರಿ ಶ್ರೀ @DKShivakumar ಅವರೇ ಉತ್ತರಿಸಬೇಕು. ಸಚಿವ ಸ್ಥಾನಗಳಿಂದ ಹಿಡಿದು ಪ್ರತಿಯೊಂದಕ್ಕೂ 'ರೇಟ್ ಕಾರ್ಡ್' ಇಟ್ಟು ಹೆಚ್ಚು ಬೆಲೆ ಕೂಗಿದವರಿಗೆ ಆದ್ಯತೆ ನೀಡಲಾಗುತ್ತಿರುವ ಕಾಂಗ್ರೆಸ್ ಸಂಸ್ಕೃತಿಯನ್ನು ಅವರದೇ ಪಕ್ಷದ ನಾಯಕರು ಬಯಲು ಮಾಡಿದ್ದಾರೆ. ಹಾಗಾಗಿ, ಗಂಭೀರ ಆರೋಪ ಹೊತ್ತಿದ್ದರೂ, ಹೆಚ್ಚು ಮೊತ್ತ ನೀಡಿ ಸ್ಥಾನ 'ಗಿಟ್ಟಿಸಿಕೊಂಡ' ಸಚಿವರಿಗೆ ಈ ಸಂಭ್ರಮೋತ್ಸವ ಕೂಡ ಸಹಜವಾದದ್ದೇ!
ನಮ್ಮ ಅನ್ನದಾತರು, ಜನ ಜಾನುವಾರುಗಳು ಸಂಕಷ್ಟದಲ್ಲಿರುವ ಕಾಲದಲ್ಲಿ, ಅವರ ಪರಿಸ್ಥಿತಿಗಳನ್ನು ಅಪಹಾಸ್ಯ ಮಾಡುವ ರೀತಿಯ ಇಂತಹ ವರ್ತನೆಗಳನ್ನು, ಹಾರ-ತುರಾಯಿ ಸಂಭ್ರಮಗಳನ್ನು ಬದಿಗಿಟ್ಟು ಸಚಿವರುಗಳು ಕೂಡಲೇ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲಿ ಎಂದು ಆಗ್ರಹಿಸುತ್ತೇವೆ.
#CongressFailsKarnataka
ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಪಕ್ಷದ ನೇಕಾರ ಪ್ರಕೋಷ್ಠದ ವತಿಯಿಂದ ಇಂದು ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಇದೇ ಸಂದರ್ಭದಲ್ಲಿ ಸಾಧಕ ನೇಕಾರ ಬಂಧುಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಿ, ಅವರ ಕಾಯಕ ಮತ್ತು ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿಡುವ ಜೊತೆಗೆ ತಮ್ಮ ಕಾಯಕ ನಿಷ್ಠೆಯಿಂದ ದೇಶದ ಪ್ರಗತಿಗೆ ತಮ್ಮಗೆ ಕೊಡುಗೆ ನೀಡುತ್ತಿರುವ ನಮ್ಮ ನೇಕಾರ ಸಹೋದರ-ಸಹೋದರಿಯರ ಹಿತರಕ್ಷಣೆ ನಮ್ಮೆಲ್ಲರ ಬದ್ಧತೆಯಾಗಿದೆ.
ತಂದೆಯಿಂದ ಮಗನಿಗೆ, ಪೀಳಿಗೆಯಿಂದ ಪೀಳಿಗೆಗೆ ನೇಯಲಾಗುವ ಪ್ರತಿಯೊಂದು ನೂಲಿನಲ್ಲೂ ಭಾರತೀಯತೆಯ ಜೀವಂತಿಕೆ ಹಾಗೂ ಕಲಾತ್ಮಕತೆಯ ಸ್ಪರ್ಶವಿದೆ. ಹೆಮ್ಮೆಯ ನಾಯಕ, ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರ 'ವೋಕಲ್ ಫಾರ್ ಲೋಕಲ್' ಕರೆಗೆ ಓಗೊಟ್ಟು, ನಮ್ಮ ಸ್ವದೇಶಿ ಕೈಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸುವುದು ಮತ್ತು ನೇಕಾರ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ನಮ್ಮೆಲ್ಲರ ಬದ್ಧತೆ ಮತ್ತು ಕರ್ತವ್ಯವಾಗಿದೆ.
ಕಾರ್ಯಕ್ರಮದಲ್ಲಿ ನೇಕಾರ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಶ್ರೀ.ಬಿ.ಎಸ್.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಶ್ರೀ ಕೇಶವ ಪ್ರಸಾದ್, ಮಾಜಿ ಶಾಸಕರಾದ ಶ್ರೀ.ಎಂ.ಡಿ.ಲಕ್ಷ್ಮೀನಾರಾಯಣ್, ರಾಜ್ಯ ಪ್ರಕೋಷ್ಠಗಳ ಸಂಯೋಜಕ ಶ್ರೀ ದತ್ತಾತ್ರಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಶ್ರೀ ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಶ್ರೀ ಸಪ್ತಗಿರಿ ಗೌಡ ಸೇರಿದಂತೆ ಹಲವಾರು ಪ್ರಮುಖ ಮುಖಂಡರು, ನಮ್ಮ ಕಾರ್ಯಕರ್ತರು, ನೇಕಾರ ಬಂಧುಗಳು ಪಾಲ್ಗೊಂಡಿದ್ದರು.
#NationalHandloomDay
ಬಯಲಾಯ್ತು ಕಾಂಗ್ರೆಸ್ ಸರ್ಕಾರದ ಮಂತ್ರಿಗಿರಿ 'ರೇಟ್' ಕಾರ್ಡ್!
ಸಂಪುಟ ವಿಸ್ತರಣೆ ವಿಚಾರದಲ್ಲಿ @INCKarnataka ಪಕ್ಷದ ಹಿರಿಯ ಶಾಸಕರ ಮಾತುಗಳು ಮತ್ತು ಹಣ ಕೊಟ್ಟವರಿಗೆ ಸ್ಥಾನದ ಆರೋಪಗಳು ಈ ಭ್ರಷ್ಟ ಸರ್ಕಾರದ ಅರಾಜಕತೆ ಹಾಗೂ ಅನೈತಿಕ ಮುಖವನ್ನು ಜಗಜ್ಜಾಹೀರುಗೊಳಿಸಿದೆ. ಕಾಂಗ್ರೆಸ್ ಪರಿಸ್ಥಿತಿ, 'ಮನೆಯೊಂದು ನೂರು ಬಾಗಿಲು' ಎನ್ನುವಂತಾಗಿದೆ!
#CorruptCongress #CongressFailsKarnataka
ತ್ರಿವಿಧ ದಾಸೋಹಿ, ಪದ್ಮಭೂಷಣ ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯಭೂಮಿ ಸಿದ್ಧಗಂಗಾ ಮಠಕ್ಕೆ ಇಂದು ಸಕುಟುಂಬ ಸಮೇತ ಭೇಟಿ ನೀಡಿ, 'ನಡೆದಾಡುವ ದೇವರು' ಶ್ರೀಗಳ ದಿವ್ಯಗದ್ದುಗೆಯ ದರ್ಶನ ಪಡೆದು ಪೂಜೆ ಸಲ್ಲಿಸಲಾಯಿತು.
ನಂತರ ಶ್ರೀಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳನ್ನು ಭೇಟಿ ಮಾಡಿ, ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ, ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಸುರೇಶ್ ಗೌಡ, ಮುಖಂಡರಾದ ಶ್ರೀ ಮೋಹನ್ ಕುಮಾರ್, ಶ್ರೀ ಶಿವಣ್ಣ, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.