"ಜೀವನದಲ್ಲಿ ದೊಡ್ಡ ಬದಲಾವಣೆ ಒಂದು ದಿನದಲ್ಲಿ ಆಗುವುದಿಲ್ಲ. ಆದರೆ ಪ್ರತಿದಿನ ಮಾಡುವ ಸಣ್ಣ ಪ್ರಯತ್ನಗಳು ಒಂದು ದಿನ ದೊಡ್ಡ ಬದಲಾವಣೆ ತರುತ್ತವೆ. 🌱"
"⏳"
"ನಿನ್ನ ಕನಸುಗಳಿಗೆ ನೀನೇ ಜವಾಬ್ದಾರ. ಇತರರು ಪ್ರೇರಣೆ ಕೊಡಬಹುದು, ಆದರೆ ಹೆಜ್ಜೆ ಇಡುವುದು ನೀನೇ. 🚶♂️"
"ಇಂದು ಕಷ್ಟವಾಗಬಹುದು, ಆದರೆ ನಾಳೆಯ ಯಶಸ್ಸಿಗೆ ಅದು ಅಡಿಪಾಯವಾಗಿರುತ್ತದೆ. 💪
ಡಿಗ್ರಿ ಮುಗಿಸಿ,
'ಸರ್ಕಾರಿ ನೌಕರಿ' ಎನ್ನುವ ಚಕ್ರವ್ಯೂಹಕ್ಕೆ
ಸಿಲುಕುವ ಭಾರತದ ಬಹುಪಾಲು ಯುವಕರು ಶಾಲೆಯಲ್ಲಿ ಪ್ರತಿಭಾವಂತರಾಗಿದ್ದವರೇ.
ಬಡತನ ಮತ್ತು ಮಧ್ಯಮವರ್ಗದ ಹಣಕಾಸಿನ ಕೊರತೆಗಳು, ಅವರಿಗೆ ತೋರುವ ಏಕೈಕ ರಾಜಮಾರ್ಗವೆಂದರೆ,
'ಸರ್ಕಾರಿ ನೌಕರಿ'.
ಆದರೆ, ಪರೀಕ್ಷೆ ಪಾಸಾಗುವೆ, ಎನ್ನುವ ಛಲದಿಂದ ಆರಂಭವಾಗುವ ಅವರ ದಂಡಯಾತ್ರೆ, ಬಹಳ ಬಾರಿ ಅರ್ಧ ದಾರಿಯಲ್ಲೇ ಹಳ್ಳಹಿಡಿಯುತ್ತದೆ.
ಅನಾರೋಗ್ಯವೋ,
ಪ್ರೀತಿ-ಪ್ರೇಮಗಳ ವ್ಯವಸಾಯವೋ,
ಯೌವ್ವನದ ಚಿಗಿತವೋ,
ಕೆಟ್ಟವ್ಯಸನಗಳ ಜಿಗಿತವೋ,
ಅಥವಾ,
ಕುಟುಂಬದಲ್ಲಿ ಘಟಿಸುವ ಅನಾಹುತಗಳೋ,
ಆಕಾಂಕ್ಷಿಯನ್ನ ನಾಲ್ಕುಗೋಡೆಗಳ ಬಂಧಿಯನ್ನಾಗಿಸಿಬಿಡುತ್ತವೆ.
ಇಲ್ಲಿ 4-5 ವರ್ಷ ಕೊಳೆತ ನಂತರ ಫಸಲೆಲ್ಲಿಯದು ಹೇಳಿ?
ಶಾಲೆಯಲ್ಲಿ ಕಾಲೇಜಿನಲ್ಲಿ ಟಾಪರ್ ಆಗಿದ್ದವರು, ಇಲ್ಲಿ ಪಾಪರ್ ಆಗೋದೇಕೆ?
ಏಕೆಂದರೆ ಅಲ್ಲಿ ತಿಂಗಳಿಗೊ, ಅರ್ಧವರ್ಷಕ್ಕೊ ಪರೀಕ್ಷೆಗಳಿದ್ದವು.
ದಿನಂಪ್ರತಿ Homework ಕೊಡಲಾಗುತ್ತಿತ್ತು.
ತಪ್ಪಿದರೆ, ಛಡಿಏಟು,
ಅಥವಾ,
Fail ಆಗುವ ಶಿಕ್ಷೆ ಇರುತ್ತಿತ್ತು.
ಆದರೆ,
ಈ ಸ್ಪರ್ಧಾತ್ಮಕ ಪರೀಕ್ಷೆಯ ಜಾಲದಲ್ಲಿ,
ಯಾವುದೂ ಕಡ್ಡಾಯವಲ್ಲ,
It Depends on you,
Short notes ಮಾಡುವುದು,
PYQ ವಿಶ್ಲೇಷಣೆ ಮಾಡೋದು,
Weekly Test ಬರೆಯೋದು,
ಇದೆಲ್ಲವೂ ನಿಮ್ಮ ಆಯ್ಕೆ.
ಇಲ್ಲಿ ಶಿಕ್ಷಕರು ನಿಮಗೆ ಒತ್ತಾಯ ಮಾಡಲಾಗಲ್ಲ,
ಬೈಯಿಸಿಕೊಳ್ಳುವ ವಯಸ್ಸೂ ನಿಮ್ಮದಲ್ಲ.
ಇನ್ನು ಹೊಡೆಯೋದಂತೂ,
ದೂರದ ಮಾತು.
ಇಂದಿನ ಯುವಕರಿಗೆ ಬೈದು ಬುದ್ಧಿಹೇಳುವವರಿಗಿಂತ, ನಗಿಸಿ, Temporary Dopamine Hit ಮಾಡಿಸುವವರೇ ಬಹುಪಾಲು ಇಷ್ಟವಾಗೋದು.
ಹಾಗಾಗಿ,
Accountability ಯ ಕೊರತೆ...
ನಿಮ್ಮನ್ನು ದಿನದಿಂದ ದಿನಕ್ಕೆ,
ಆಲಸಿ ಮತ್ತು ಹೊಣೆಗೇಡಿಯನ್ನಾಗಿಸುತ್ತದೆ.
ಹಲವು ವರ್ಷಗಳ ನಂತರ ತಿರುಗಿ ನೋಡಿದಾಗ,
ಜೇಬೂ ಖಾಲಿ,
ಆಕಡೆ,
Plan B ಕೂಡ ಇರಲ್ಲ,
ಈ ಕಡೆ ಪರೀಕ್ಷೆಯಲ್ಲಿಯೂ Fail.
ನೀವು, ಪ್ರೀತಿಸಿದ ಹುಡುಗಿಯನ್ನ ಇನ್ಯಾರೋ ಮದುವೆಯಾಗುವ ದೃಶ್ಯ ನಿಮ್ಮ ಕರುಳು ಹಿಂಡುತ್ತದೆ.
ನಿಮ್ಮ ಇಷ್ಟದ ಹುಡುಗನ ಮದುವೆಯಾಗಲು, ನಿಮ್ಮ ಅಪ್ಪ ನಿರಾಕರಿಸೋದು, ನಿಮ್ಮ ಹೃದಯವನ್ನ ಒಡೆದುಬಿಡುತ್ತದೆ.
ಜ್ಞಾನೋದಯ ಆಗುವ ವೇಳೆಗೆ 27-28ರ ಗಂಟೆ ಜೋರಾಗಿ ಬಡಿಯುತ್ತಿರುತ್ತದೆ.
ಇದು ನನ್ನ ಜೀವನದಲ್ಲಿಯೂ ಆದದ್ದೇ.
But, ನಿಮ್ಮ ಜೀವನದಲ್ಲಿ ಇದಾಗಬಾರದು,
ಎನ್ನೋದೆ ನನ್ನ ಉದ್ದೇಶ.
ಇದಕ್ಕೆ ಪರಿಹಾರ ಏನು?
ಸಿಂಪಲ್,
2 ವರ್ಷ ಸಂಪೂರ್ಣವಾಗಿ ಓದೋದು.
ನಂತರ,
ನಿಮ್ಮಿಷ್ಟದ ಕ್ಷೇತ್ರದಲ್ಲಿ,
ಅದೆಷ್ಟೇ ಸಣ್ಣ ಕೆಲಸವಾದರೂ ಸರಿ,
Part time ಕೆಲಸ ಮಾಡಲು ಹೊರಡೋದು.
ಬೇಕಾದರೆ, ಮುಂದೆ ನೀವು ಉದ್ಯೋಗ ನಿಲ್ಲಿಸಿ ಓದಿ ಪರವಾಗಿಲ್ಲ,
ಆದರೆ, ತಪ್ಪದೇ, 2 ವರ್ಷ ಓದಿದ ನಂತರ,
ಒಂದಲ್ಲ ಒಂದು ಕಡೆ ಕನಿಷ್ಠ 6 ತಿಂಗಳು ಕೆಲಸ ಮಾಡಿ.
ಯಾಕೆಂದರೆ,
ಈ ಜಗತ್ತಿನ ಕ್ರೂರತನ,
ಮತ್ತು ಸಮಾಜದ ಮುಖವಾಡ ನಿಮಗೆ,
ಅಲ್ಲಿ ಅರ್ಥವಾಗುತ್ತದೆ.
ತದ ನಂತರ, Job ಬಿಟ್ಟು ಬಂದರೂ,
ಚೆನ್ನಾಗಿ ಓದುತ್ತೀರಿ.
ಆ ಉದ್ಯೋಗ ನಿಮ್ಮಲ್ಲಿದ್ದ ಅಹಂಕಾರವನ್ನ ಮೆಟ್ಟಿ ಪುಡಿಮಾಡಿರುತ್ತದೆ, ನಿಮ್ಮ Attitude ಅನ್ನ ನಿರ್ನಾಮ ಮಾಡಿರುತ್ತದೆ.
Life Will Make you humble.
ಪ್ರೀತಿ ಪ್ರೇಮ ಮತ್ತು ಕೆಟ್ಟ ಹವ್ಯಾಸಗಳಿಂದ ಹೊರಬರಲು ಇರುವ Best ಉಪಾಯ,
ಉದ್ಯೋಗ ಮಾಡೋದು.
ಆದ್ದರಿಂದ,
ಯಾವುದೇ ಕಾರಣಕ್ಕೂ ಕೆಲಸವಿಲ್ಲದೆ ಕೂರಬೇಡಿ.
ಕಂಪ್ಯೂಟರ್ ಕಲಿಯಿರಿ,
Spoken English ಕಲಿಯಿರಿ,
ಮನೆ ಬಿಟ್ಟು ನಗರಗಳಿಗೆ ಹೋಗಿ Interview ಕೊಟ್ಟು ನೋಡಿ...
ಅಥವಾ,
ಸ್ವಂತದ್ದಾಗಿ ಏನಾದರೂ ಮಾಡಿ,
But,
ಯಾವುದೇ ಕಾರಣಕ್ಕೂ,
ಸರ್ಕಾರಿ, ಉದ್ಯೋಗದ ನೆಪ ಹೇಳುತ್ತ,
Idle ಆಗಿ ಕುಳಿತು, ಕಳೆಯಾಗಬೇಡಿ.
ಕಳೆದ 2.5 ವರ್ಷಗಳ ಬೋಧನೆಯ ಅವಧಿಯಲ್ಲಿ ನಾನು ನೋಡಿದ ಆಕಾಂಕ್ಷಿಗಳಲ್ಲಿ ಹೆಚ್ಚು Serous ಆಗಿ ಇದ್ದವರು, ಇರುವವರು,
1. Job ಮಾಡುತ್ತ ಓದುವವರು,
2. Housewife ಗಳು,
3. ಈಗಾಗಲೇ ಉದ್ಯೋಗ ಮಾಡಿ, ಉದ್ಯೋಗ ಬಿಟ್ಟು ಬಂದು ಓದುತ್ತಿರುವವರು.
ಕಾಲೇಜು ಮುಗಿಸಿ ಓದಲು ಬಂದ Maximum ವಿದ್ಯಾರ್ಥಿಗಳು,
Chill ಮಾಡುತ್ತಿರುತ್ತಾರೆ.
I have seen it.
But,
My dear juniors,
Life is Very Very Brutal.
ಜಾಗೃತರಾಗಿ.
ಕಲಿಯದೇ,
ದುಡಿಯದೇ,
ಬೆಳೆಯದೇ
ಹೋದಿರೆಂದರೆ,
ಬಡತನವೆಂಬ ಹೊದಿಕೆ
ನಿಮ್ಮನ್ನ ಮುಸುಕು ಹಾಕಿ ಮಲಗಿಸಿಬಿಡುತ್ತದೆ.
ಉದ್ಯೋಗ ನಿಮ್ಮ Personality ಗೆ Seriousness ತಂದರೆ,
ಹಣ ನಿಮಗೆ Freedom ಕೊಡುತ್ತದೆ.
ಇಷ್ಟೆಲ್ಲ ಉಪದೇಶ ಮಾಡಲುಕಾರಣ,
ನನ್ನ ಉದ್ಯೋಗ.
ಒಬ್ಬ ಆಕಾಂಕ್ಷಿಯಾಗಿದ್ದಾಗ,
ರಾತ್ರಿ 10 ಕ್ಕೆ ಮಲಗಿ, ಬೆಳಿಗ್ಗೆ 8 ಕ್ಕೆ ಏಳುತ್ತ...
ಮತ್ತೆ ಮಧ್ಯಾಹ್ನ 1-2 ಗಂಟೆ ನಿದ್ದೆ ಹೊಡೆಯುತ್ತಿದ್ದ ನಾನು....
ಈಗ ರಾತ್ರಿ 12 ಕ್ಕೆ ಮಲಗಿದರೂ,
ಬೆಳಿಗ್ಗೆ 7 ಕ್ಕೆಂದರೆ, ಎದ್ದುಬಿಡುತ್ತೇನೆ.
ಏಳಲೇ ಬೇಕು, ಎನ್ನುವ ಕೆಲಸದ ಒತ್ತಡ ನನ್ನ Subconscious mind ಗಿದೆ.
ಇನ್ನು, Bank ಕೆಲಸ,
GST ಕೆಲಸ,
ವಿದ್ಯಾರ್ಥಿಗಳ Message ಗಳಿಗೆ Reply,
ಅದು ಇದು ಎನ್ನುತ್ತ ಮಧ್ಯಾಹ್ನ ಮಲಗೋದೆ ಅಪರೂಪ,
ಮಲಗಿದರೂ 20 ನಿಮಿಷಕ್ಕೆ ಅಕ್ಷಿಗಳು,
ವಿಶಾಲವಾಗಿಬಿಡುತ್ತವೆ.
So,
Come on...
ಏಳಿ, ಎದ್ದೇಳಿ,
2 ವರ್ಷ ಚೆನ್ನಾಗಿ ಓದಿ,
ಈ ಕ್ರೂರ ಜಗತ್ತಿನ ಪರಿಚಯ ಮಾಡಿಕೊಳ್ಳಿ.
ಮತ್ತು,
ಇನ್ನೂ ಒಂದು ಹೇಳ್ತೀನಿ...
If you are really Talented,
ನಿಮಗೆ ಸರ್ಕಾರಿ ನೌಕರಿ ಏನೇನೂ ಅಲ್ಲ.
ಇಡಿ ಜಗತ್ತೇ ನಿಮಗಾಗಿ ತೆರೆದಿದೆ.
But,
ಮೊದಲು,
ಮನೆ ಕಟ್ಟಿ ನಂತರ,
ಗುಡಿಸಲು ಕೆಡವಿ.
God bless you.
All the best 💐
-
ಪ್ರವೀಣ ಮ ಮಗದುಮ್ಮ
Reply @ [email protected]
ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಹೊಸ ದಾರಿಯಲ್ಲಿ ನಡೆಯೋಣ! 🚀
ಕನ್ನಡಿಗರೇ, ಜಗತ್ತು ವೇಗವಾಗಿ ಬದಲಾಗುತ್ತಿದೆ. ಹಳೆಯ ಪದ್ಧತಿಗಳಿಗೇ ಅಂಟಿಕೊಂಡರೆ ನಾವು ಜಾಗತಿಕ ಸ್ಪರ್ಧೆಯಲ್ಲಿ ಹಿಂದೆ ಬೀಳುವ ಸಾಧ್ಯತೆಯಿದೆ. ಈಗ ನಮಗೆ ಬೇಕಿರುವುದು ಕೇವಲ ಪದವಿಗಳಲ್ಲ, ಬದಲಾಗಿ 'ಬದುಕನ್ನು ರೂಪಿಸುವ ಕೌಶಲ್ಯಗಳು'.
ನಮ್ಮ ಯುವ ಪೀಳಿಗೆಗೆ ಈ ಕೆಳಗಿನ ನಾಲ್ಕು ಸೂತ್ರಗಳು ಅತಿ ಮುಖ್ಯ.
1. ಹೆಚ್ಚಿನ ಆದಾಯ ತರುವ ಕೌಶಲ್ಯಗಳು (High-Income Skills) 📈
ಕೇವಲ ಸಾಮಾನ್ಯ ಜ್ಞಾನದಿಂದ ಇಂದಿನ ಮಾರುಕಟ್ಟೆಯಲ್ಲಿ ನೆಲೆ ನಿಲ್ಲುವುದು ಕಷ್ಟ. ಡೇಟಾ ಅನಾಲಿಟಿಕ್ಸ್, ಡಿಜಿಟಲ್ ಮಾರ್ಕೆಟಿಂಗ್ ಅಥವಾ ಕ್ರಾಫ್ಟ್ ಸ್ಕಿಲ್ಗಳಿರಲಿ- ಯಾವುದೇ ಒಂದು ಕ್ಷೇತ್ರದಲ್ಲಿ 'ಸ್ಪೆಷಲಿಸ್ಟ್' ಆಗುವುದು ಇಂದಿನ ಅನಿವಾರ್ಯತೆ. ನಿಮ್ಮ ಕೌಶಲ್ಯವೇ ನಿಮ್ಮ ಆಸ್ತಿಯಾಗಲಿ.
2. ತಂತ್ರಜ್ಞಾನದ ಸದ್ಬಳಕೆ (Tech-Savvy Generation) 💻
AI (ಕೃತಕ ಬುದ್ಧಿಮತ್ತೆ) ಮತ್ತು ಹೊಸ ತಂತ್ರಜ್ಞಾನಗಳು ನಮ್ಮ ಕೆಲಸವನ್ನು ಕಸಿದುಕೊಳ್ಳುವುದಿಲ್ಲ, ಬದಲಾಗಿ ಅವುಗಳನ್ನು ಬಳಸದವರನ್ನು ಮಾತ್ರ ಹಿಂದೆ ಹಾಕುತ್ತವೆ. ತಂತ್ರಜ್ಞಾನವನ್ನು ಕೇವಲ ಮನರಂಜನೆಗೆ ಬಳಸದೆ, ನಮ್ಮ ವೃತ್ತಿಜೀವನದ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳೋಣ.
3. ಹಣಕಾಸು ಸಾಕ್ಷರತೆ (Financial Freedom) 💰
ಹಣ ಗಳಿಸುವುದು ಒಂದು ಕಲೆಯಾದರೆ, ಅದನ್ನು ಉಳಿಸಿ ಬೆಳೆಸುವುದು ಒಂದು ವಿಜ್ಞಾನ. ಕೇವಲ ಉಳಿತಾಯದ ಮೇಲೆ ಅವಲಂಬಿತರಾಗದೆ, ಷೇರು ಮಾರುಕಟ್ಟೆ (Stock Market) ಮತ್ತು ಸರಿಯಾದ ಹೂಡಿಕೆಗಳ ಮೂಲಕ ಹಣದಿಂದ ಹಣ ಮಾಡುವ ಕಲೆ ನಮಗೆ ತಿಳಿದಿರಬೇಕು. ಆರ್ಥಿಕ ಶಿಸ್ತು ಸ್ವತಂತ್ರ ಜೀವನಕ್ಕೆ ಅಡಿಪಾಯ.
4. ಪ್ರಾಯೋಗಿಕ ಜೀವನ ಶಿಕ್ಷಣ (Practical Life Skills) 🤝
"ಪುಸ್ತಕದ ಬದನೆಕಾಯಿ ಅಡುಗೆಗೆ ಬಾರದು." ಸಮಾಜದಲ್ಲಿ ವ್ಯವಹರಿಸುವ ರೀತಿ, ನೆಟ್ವರ್ಕಿಂಗ್ ಬೆಳೆಸಿಕೊಳ್ಳುವುದು ಮತ್ತು ನಮ್ಮ ಆಲೋಚನೆಗಳನ್ನು ಜಗತ್ತಿಗೆ ಪರಿಚಯಿಸುವ (Marketing) ತಂತ್ರಗಳು ನಮಗೆ ಗೊತ್ತಿರಬೇಕು. ಸೋಲನ್ನು ಎದುರಿಸುವ ಧೈರ್ಯ ಮತ್ತು ಸತತ ಪ್ರಯತ್ನವೇ ಯಶಸ್ಸಿನ ಗುಟ್ಟು.
ನಿಮ್ಮ ಗುರಿ ಸ್ಪಷ್ಟವಾಗಿರಲಿ- ಕೇವಲ ಕೆಲಸ ಹುಡುಕುವವರಾಗಬೇಡಿ, ಕೆಲಸ ನೀಡುವ ಉದ್ಯಮಶೀಲ (Entrepreneur) ಕನ್ನಡಿಗರಾಗಿ ಬೆಳೆಯಿರಿ. ಬನ್ನಿ, ಹೊಸ ಕರ್ನಾಟಕವನ್ನು ಜ್ಞಾನ ಮತ್ತು ಕೌಶಲ್ಯದ ಮೂಲಕ ಕಟ್ಟೋಣ! ✊
#Kannada #FinancialLiteracy #SkillDevelopment #Entrepreneurship #ಕನ್ನಡಿಗ #SelfImprovement #StockMarketKannada
ಜನ್ಮ ದಿನದ ಶುಭಾಶಯಗಳು ಗಣಿನಾಡಿನ ಮಲ್ಲಿಕಾರ್ಜುನ್ ಸರ್ ಗೆ ಸಂಸ್ಕೃತಿ ಮತ್ತು ಒಳ್ಳೆಯ ವಿಚಾರಗಳನ್ನು ಟ್ವಿಟ್ಟರ್ ಮುಖಾಂತರ ತಿಳಿಸುತ್ತಾ ಇರಿ ಉತ್ತರ ಕರ್ನಾಟಕ HMT 👑 ದೇವರು ಆಶೀರ್ವಾದ ಸದಾ ಸಕಾರಾತ್ಮಕವಾಗಿರಲಿ 🫶🎂
@MallikarjunaNH
ನಮ್ಮ ಕೊಪ್ಪಳದ ಗವಿಸಿದ್ದೇಶ್ವರ ಮಠದ ಪವಿತ್ರ ಆವರಣಕ್ಕೆ Dr BRO ಅವರ ಭೇಟಿ ಸಂತಸ ತಂದಿದೆ. 🙏
ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಮಠದ ಮಹತ್ವವನ್ನು ವಿಶ್ವದ ಮೂಲೆಮೂಲೆಗೂ ತಲುಪಿಸುವ ನಿಮ್ಮ ಪ್ರಯತ್ನ ಶ್ಲಾಘನೀಯ. ❤️
ಕೊಪ್ಪಳದ ಮಣ್ಣಿನ ಪರಿಮಳವನ್ನು ಅನುಭವಿಸಿದ ನಿಮಗೆ ಹೃತ್ಪೂರ್ವಕ ಸ್ವಾಗತ."
#DrBRO#GavisiddeshwaraMath
ಒಂದು ಕನಸು... ಒಂದು ಅವಕಾಶಕ್ಕಾಗಿ ಕಾಯುತ್ತಿದೆ. ❤️
ನನ್ನ ಆತ್ಮೀಯ ಗೆಳೆಯ ಯಮನೂರಪ್ಪ Bigg Boss Kannada Audition ನೀಡಿದ್ದಾರೆ. ಅವರಲ್ಲಿ ಪ್ರತಿಭೆ, ಆತ್ಮವಿಶ್ವಾಸ ಮತ್ತು ಜನರ ಮನ ಗೆಲ್ಲುವ ಗುಣ ಇದೆ.
ಅವರ ಕನಸಿಗೆ ಒಂದು ವೇದಿಕೆ ಸಿಗಲಿ. 🙏
@ColorsKannada#BiggBossKannadaSeason13#Yamanurappa
"ರೊಟ್ಟಿ–ಮುಟಗಿಯ ರುಚಿಯಲ್ಲಿ,
ಹಳ್ಳಿ ಮಣ್ಣಿನ ಪರಿಮಳವಿದೆ...
ಹೊಟ್ಟೆ ತುಂಬಿದರೂ,
ಮನಸ್ಸು ಮತ್ತೆ ಮನೆಗೆ ಓಡುತ್ತದೆ. "
ಬಾಲ್ಯದ ನೆನಪುಗಳ ಸವಿಯಾಗಿದೆ...
ಪ್ರತಿ ತುತ್ತಿನಲ್ಲೂ ಮನೆಯ ಪ್ರೀತಿ,
ಪ್ರತಿ ರುಚಿಯಲ್ಲೂ ಅಮ್ಮನ ಮಮತೆಯಿದೆ. 🌾"
Standard ಅಂದ್ರೆ...
Branded dress...
Car ನಲ್ಲಿ ಓಡಾಡೋದು...
Hifi hotel ನಲ್ಲಿ ತಿನ್ನೋದು ಅಲ್ಲ...
ಮತ್ತೊಬ್ಬ ವ್ಯಕ್ತಿಯ ಜೊತೆ ನಿನ್ನ behaviour ಹೇಗಿರುತ್ತೆ...
ನಿನ್ನ ವ್ಯಕ್ತಿತ್ವ ಎಂತದು ಅನ್ನುವುದರ ಬಗ್ಗೆ standard ಇರುತ್ತೆ...
#ashte...
"ಸಾಮಾನ್ಯ ಹುಡುಗನ ಕನಸುಗಳಿಗೆ ಗಡಿ ಇಲ್ಲ... 💫
ಗ್ರಾಮದಿಂದ ನಗರಕ್ಕೆ, ಹೋರಾಟದಿಂದ ಸಾಧನೆಗೆ, ಪ್ರತಿದಿನ ಒಂದು ಹೆಜ್ಜೆ ಮುಂದೆ. 🚶♂️🔥
ಇಂದು ಫೋಟೋ, ನಾಳೆ ಕಥೆ... ಒಂದು ದಿನ ಇತಿಹಾಸ. ❤️
#DreamBig#WorkHard#SelfMade#Trending#VeereshKumbar