Wishing a very Happy Birthday to honorable MLA Hubballi-Dharwad, Shri Prasad Abbayya! On this auspicious occasion, I had the privilege of greeting him and presenting a beautifully crafted 'Hoysala Chennakeshava' idol symbol of our state's rich cultural heritagea
ನಮ್ಮ ಪಾಲಿಕೆಯ ನೂತನ ಮಹಾಪೌರರಾಗಿ ಅಧಿಕಾರ ವಹಿಸಿಕೊಂಡಿರುವ ಶ್ರೀಮತಿ ದುರ್ಗಮ್ಮ ಶಶಿಕಾಂತ ಬಿಜವಾಡ ಹಾಗೂ ಉಪ ಮಹಾಪೌರರಾಗಿ ಆಯ್ಕೆಯಾದ ಶ್ರೀಮತಿ ರತ್ನಾಬಾಯಿ ನಾಜರೆ ಅವರನ್ನು ಇಡೀ ಆಡಳಿತ ವರ್ಗದ ಪರವಾಗಿ ತುಂಬು ಹೃದಯದಿಂದ ಸ್ವಾಗತಿಸಿ, ಅಭಿನಂದಿಸುತ್ತೇನೆ.
A proud and monumental step forward for the Hubballi-Dharwad Municipal Corporation (HDMC)! We are thrilled to announce that we are set to become the first urban local body in Karnataka to transform wet waste into biogas.
ಹುಬ್ಬಳ್ಳಿ-ಧಾರವಾಡದ ತ್ಯಾಜ್ಯ ನಿರ್ವಹಣೆಯಲ್ಲಿ ಇದೊಂದು ಹೊಸ ಮೈಲುಗಲ್ಲು. ಪಾಲಿಕೆ ಹಾಗೂ ಬಿಪಿಸಿಎಲ್ (BPCL) ಸಹಯೋಗದಲ್ಲಿ ಹಸಿ ತ್ಯಾಜ್ಯದಿಂದ ಜೈವಿಕ ಅನಿಲ (Bio-CNG) ಉತ್ಪಾದಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಪರಿಸರ ಸ್ನೇಹಿ ಯೋಜನೆಯ ಜವಾಬ್ದಾರಿಯುತ ಭಾಗವಾಗಿರುವುದು ನನಗೆ ಹೆಮ್ಮೆಯ ವಿಚಾರ.
ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಅವರ ಅಧಿಕಾರಾವಧಿಯ ಅಂತಿಮ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು, ನಮ್ಮ ಅವಳಿನಗರದಲ್ಲಿ ಪಾಲಿಕೆಯ ವತಿಯಿಂದ ಕೈಗೊಂಡ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಮೆಲುಕು ಹಾಕುವ ಅವಕಾಶ ದೊರೆಯಿತು.
ಹುಬ್ಬಳ್ಳಿಯಲ್ಲಿ ದಕ್ಷಿಣ ಭಾರತದ ಮೊದಲ ತ್ಯಾಜ್ಯದಿಂದ ಇಂಧನ (Waste-to-Energy) ಉತ್ಪಾದನಾ ಘಟಕ ಸ್ಥಾಪನೆಯಾಗಿರುವುದು ನಮ್ಮ ನಗರದ ಪರಿಸರ ಸಂರಕ್ಷಣೆಯತ್ತ ಇಟ್ಟಿರುವ ಒಂದು ದೊಡ್ಡ ಹೆಜ್ಜೆಯಾಗಿದೆ.
ಯೋಗವು ಕೇವಲ ವ್ಯಾಯಾಮವಲ್ಲ, ಅದು ದೇಹ, ಮನಸ್ಸು ಮತ್ತು ಉಸಿರಿನ ನಡುವಿನ ಸಮತೋಲನ. ಬನ್ನಿ, ಯೋಗವನ್ನು ನಮ್ಮ ದೈನಂದಿನ ಜೀವನದ ಭಾಗವಾಗಿಸೋಣ ಹಾಗೂ ಆರೋಗ್ಯವಂತ ಸಮಾಜವನ್ನು ನಿರ್ಮಿಸೋಣ. ಸಮಸ್ತ ನಾಡಿನ ಜನತೆಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.
#InternationalYogaDay#YogaDay#ಯೋಗದಿನ#HealthAndWellness
ಬದುಕು ರೂಪಿಸಲು, ಜೀವನದ ಪಾಠ ಕಲಿಸಿದ ನಮ್ಮ ಮೊದಲ ಗುರುವೇ ಅಪ್ಪ. ತಾನು ಹಿಂದೆ ನಿಂತು ನಮ್ಮನ್ನು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ತುಂಬು ಹೃದಯದ ಕೃತಜ್ಞತೆಗಳು. ಸಮಸ್ತರಿಗೂ ವಿಶ್ವ ಅಪ್ಪಂದಿರ ದಿನದ ಹಾರ್ದಿಕ ಶುಭಾಶಯಗಳು!
#FathersDay#HappyFathersDay#ಅಪ್ಪ#FathersDay2026
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆರ್ಥಿಕ ಸಬಲೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಮುನ್ಸಿಪಲ್ ಬಾಂಡ್ಗಳ (Municipal Bonds) ಬಳಕೆಯ ಕುರಿತು ಆಳವಾದ ಅಧ್ಯಯನ ನಡೆಸುವ ಉದ್ದೇಶದಿಂದ, ಪಾಲಿಕೆಯ ಹಿರಿಯ ಜನಪ್ರತಿನಿಧಿಗಳೊಂದಿಗೆ ಗುಜರಾತಿನ ಸೂರತ್ಗೆ ಭೇಟಿ ನೀಡಲಾಯಿತು.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ, ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ, ಉಪಮಹಾಪೌರರಾದ ಶ್ರೀ ಸಂತೋಷ್ ಚೌಹಾಣ್, ಸಭಾನಾಯಕರಾದ ಶ್ರೀ ಈರೇಶ ಅಂಚಟಗೇರಿ ಹಾಗೂ ವಿರೋಧ ಪಕ್ಷದ ನಾಯಕರಾದ ಶ್ರೀ ಇಮ್ರಾನ ಯಲಿಗಾರ ಅವರನ್ನೊಳಗೊಂಡ ನಿಯೋಗದೊಂದಿಗೆ ಮುಂಬೈ ಮಹಾನಗರ ಪಾಲಿಕೆಗೆ ಅಧ್ಯಯನ ಭೇಟಿ ನೀಡಲಾಯಿತು.
To the woman who does it all with so much grace and love. You are the heart of our home and the strength behind everything we do. Happy Mother’s Day to the best Mom in the world! ❤️🌹 #MothersDay#MomLove
ಪ್ರಜಾಪ್ರಭುತ್ವದ ಆಧಾರ ಸ್ತಂಭವನ್ನು ನಿರ್ಮಿಸಿದ ಮಹಾನ್ ಚೇತನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದ ಶುಭಾಶಯಗಳು. 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಎಂಬ ಅವರ ಆಶಯವನ್ನು ಸಾಕಾರಗೊಳಿಸೋಣ.
.
.
#Drbrambedkar#Ambedkarjayanti