ನಮ್ಮ ಕೊಳ್ಳೇಗಾಲದಲ್ಲಿ ರಾಜಕುಮಾರ ಮೂವಿ 100 Day's ಅದಾಗ ಥೇಟರ್ ಗೆ ಬಾಸ್ ಬಂದಿದ್ರು.ಈ ಜನ ಸಾಗರ ದಲ್ಲಿ ನಾನು ಕೊಡ ಇದ್ದೆ. ಅವಾಗ ಕಾಲೇಜೀ ಗೆ ಬಂಕ್ ಹಾಕಿ ಬಂದು ಇದ್ದೆ ಬಾಸ್ ನಾ ನೋಡಕೆ, Miss You Boss 🥺
#DrPuneethrajkumar#Appu
Jackie is a 2010 blockbuster Kannada action-masala film starring the legendary "Power Star" Puneeth Rajkumar and Bhavana. Written and directed by Duniya Soori and produced by the iconic Parvathamma Rajkumar.
@PuneethRajkumar#puneethrajkumar#bhavana#suri#drpuneethrajkumar
ವಯಸ್ಸು ಒಂದ್ ನಂಬರ್ ಅಷ್ಟೇ… ಶಿವಣ್ಣನ ಆ್ಯಕ್ಷನ್ಗೆ ಇಂದಿಗೂ ಯಾರೂ ಸರಿಸಾಟಿಯಿಲ್ಲ💥👌
ಗನ್ ಹಿಡಿದು ಕರುನಾಡ ಚಕ್ರವರ್ತಿ ಅಖಾಡಕ್ಕಿಳಿದರೆ, ಎದುರಾಳಿಗಳಿಗೆ ಉಳಿಗಾಲವೇ ಇಲ್ಲ 🔥
ಪವನ್ ಒಡೆಯರ್ ನಿರ್ದೇಶನ, ಅಜನೀಶ್ ಲೋಕನಾಥ್ ಮ್ಯೂಸಿಕ್—ಮಾಸ್, ಆ್ಯಕ್ಷನ್ ಮತ್ತು ಎಮೋಷನ್ ತುಂಬಿರುವ ‘ಬೇಲ್’ ಟ್ರೇಲರ್ ಈಗ ಔಟ್🔥
Trailer: https://t.co/gHp0w5UQn0
#Bail #BailTrailer #ShivaRajkumar #NamCinema #PavanWadeyar @PavanWadeyar@AJANEESHB@KvnProductions@NimmaShivanna
ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಡಾ. ರಾಜ್ಕುಮಾರ್ ಪ್ರತಿಮೆ ತೆರವು ಖಂಡಿಸಿ, ಅಭಿಮಾನಿಗಳ ತೀವ್ರ ಆಕ್ರೋಶ – *ಪ್ರತಿಭಟನೆಯಲ್ಲಿ ಶಾಸಕ @Raghukautilya ಭಾಗಿ.*
ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಈ ಹಿಂದೆ ಸ್ಥಾಪಿಸಲಾಗಿದ್ದ ವರನಟ, ನಟಸಾರ್ವಭೌಮ ಡಾ. ರಾಜ್ಕುಮಾರ್ ಅವರ ಪ್ರತಿಮೆಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಕನ್ನಡಾಭಿಮಾನಿಗಳು, ಡಾ. ರಾಜ್ಕುಮಾರ್ ಅಭಿಮಾನಿಗಳು ತೀವ್ರ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಘು ಕೌಟಿಲ್ಯ ಅವರು ಭಾಗವಹಿಸಿ, ಕನ್ನಡಾಭಿಮಾನಿಗಳ ಜೊತೆಗೂಡಿ ಸರ್ಕಾರದ ಹಾಗೂ ಪ್ರಾಧಿಕಾರದ ನಿರ್ಧಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಮೈಸೂರು ದಸರಾ ವಸ್ತುಪ್ರದರ್ಶನ ಆವರಣವು ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಅಲ್ಲಿ ಕನ್ನಡ ನಾಡು-ನುಡಿ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಯುಗಪುರುಷ ಡಾ. ರಾಜ್ಕುಮಾರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ, ಇತ್ತೀಚೆಗೆ ಪ್ರಾಧಿಕಾರದ ಅಧಿಕಾರಿಗಳು ಪ್ರತಿಮೆಯನ್ನು ತೆರವುಗೊಳಿಸಿರುವುದು ಅತ್ಯಂತ ಖಂಡನೀಯ ಇದು ರಾಜ್ ಹಾಗೂ ಕನ್ನಡ ಪ್ರೇಮಿಗಳ ಮನಸ್ಸಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು:
ಡಾ. ರಾಜ್ಕುಮಾರ್ ಅವರು ಕೇವಲ ಒಬ್ಬ ನಟರಲ್ಲ, ಅವರು ಕನ್ನಡ ನಾಡಿನ ಅಸ್ಮಿತೆ ಮತ್ತು ಸಾಂಸ್ಕೃತಿಕ ರಾಯಭಾರಿ.
ಅವರ ಪ್ರತಿಮೆಯನ್ನು ತೆರವುಗೊಳಿಸಿರುವುದು ನಾಡಿನ ಕೋಟ್ಯಂತರ ಕನ್ನಡಿಗರಿಗೆ ಮತ್ತು ಕನ್ನಡ ಭಾಷೆಗೆ ಎಸಗಿದ ಅಪಚಾರವಾಗಿದೆ.
ಅಧಿಕಾರಿಗಳು ತಕ್ಷಣವೇ ಕ್ಷಮೆಯಾಚಿಸಬೇಕು ಹಾಗೂ ಅದೇ ಜಾಗದಲ್ಲಿ ಪೂರ್ಣಪ್ರಮಾಣದ ಗೌರವದೊಂದಿಗೆ ಡಾ. ರಾಜ್ ಪ್ರತಿಮೆಯನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಘು ಕೌಟಿಲ್ಯ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, "ಕನ್ನಡ ನಾಡಿನ ಸಾಂಸ್ಕೃತಿಕ ರತ್ನ ಡಾ. ರಾಜ್ಕುಮಾರ್ ಅವರ ಪ್ರತಿಮೆಗೆ ಧಕ್ಕೆ ತಂದಿರುವುದು ಅತ್ಯಂತ ಹೇಯ. ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಪ್ರತಿಮೆ ತೆರವುಗೊಳಿಸಿದ ನಿರ್ಧಾರ ಸರಿ ಇಲ್ಲ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಹಾಗೂ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳ ಬಳಿ ತಕ್ಷಣವೇ ಚರ್ಚಿಸಲಾಗುವುದು. ತೆರವುಗೊಳಿಸಲಾದ ಸ್ಥಳದಲ್ಲೇ ಅತ್ಯಂತ ಗೌರವಪೂರ್ವಕವಾಗಿ ಡಾ. ರಾಜ್ ಪ್ರತಿಮೆಯನ್ನು ಮರುಸ್ಥಾಪಿಸುವವರೆಗೆ ನಾವೆಲ್ಲರೂ ವಿರಮಿಸುವುದಿಲ್ಲ" ಎಂದು ಬೆಂಬಲ ಸೂಚಿಸಿದರು.
ಪ್ರತಿಭಟನಾನಿರತ ಕನ್ನಡಾಭಿಮಾನಿಗಳು ಹಾಗೂ ಮುಖಂಡರು ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
#DrRajkumar #kannadacinema #kannadareels #RaghuKautilya