ಅಧಿಕೃತ ಖಾತೆ... ನಮ್ಮ ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ಹಾಗೂ ರೈತರು, ಶ್ರಮಿಕರು ಮತ್ತು ಯುವ ಜನತೆಯ ಏಳ್ಗೆಗಾಗಿ.
@ImSureshKushal
State Leader & Activist @ysrcparty📱9980049877
ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು, ಕನ್ನಡ ಬರೀ ನುಡಿಯಲ್ಲ, ನಮ್ಮ ಅಂತರಂಗದ ಮಾತು.
ನಮ್ಮ ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಜಗತ್ತಿನ ಸಮಸ್ತ ಕನ್ನಡ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.💛❤️🙏
#ಕನ್ನಡರಾಜ್ಯೋತ್ಸವ
ಕನ್ನಡ ಚಿತ್ರರಂಗದಲ್ಲಿ ತಮ್ಮ ಕಲಾ ಸೇವೆಯ ಮೂಲಕ ಚಿರಸ್ಥಾಯಿಯಾಗಿ ಉಳಿದ ಮೇರು ನಟ, ಅಭಿಮಾನಿಗಳಿಂದ ಸಾಹಸ ಸಿಂಹ, ಅಭಿನಯ ಭಾರ್ಗವ, ಹೃದಯವಂತ ಎಂದು ಬಿರುದು ಪಡೆದ ಕನ್ನಡದ ಮಾಣಿಕ್ಯ, ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಅನಂತ ನಮನಗಳು.
#drvishnuvardhan#ವಿಷ್ಣುವರ್ಧನ್#vishnuvardhan
"ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೆ ಯುಗೆ"
ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
ಭಗವಂತನ ಕೃಪೆಯಿಂದಾಗಿ ನಾಡಿನಾದ್ಯಂತ ಸುಖ-ಶಾಂತಿ, ಸಮೃದ್ಧಿ ನೆಲೆಸಲಿ. ಶ್ರೀ ಕೃಷ್ಣ ಪರಮಾತ್ಮ ಬೋಧಿಸಿದ ಭಗವದ್ಗೀತೆಯ ಸಂದೇಶಗಳು, ನಮ್ಮೆಲ್ಲರ ಜೀವನಕ್ಕೆ ಸ್ಪೂರ್ತಿಯ ಸೆಲೆಯಾಗಲಿ.
#srikrishnajanmastami
ಆಂಧ್ರ ಪ್ರದೇಶದ ಬಡವರು, ಶ್ರಮಿಕರು, ರೈತರ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿದ ನಾಯಕ, ಸಜ್ಜನ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ದಿವಂಗತ ಡಾ|| ಶ್ರೀ ವೈ ಎಸ್ ರಾಜಶೇಖರ್ ರೆಡ್ಡಿ ರವರ 77ನೇ ವರ್ಷದ ಜನ್ಮದಿನದ ಜಯಂತಿಯಂದು ಅವರಿಗೆ ಗೌರವಪೂರ್ವಕವಾದ ನಮನಗಳು.
#YSRajashekarReddy#YSRCongressParty#YSJaganMohanReddy#Sureshkushal
ಕನ್ನಡ ಚಿತ್ರರಂಗದ ಹೆಸರಾಂತ ನಟ, ಅಜಾತಶತ್ರು, ಕೊಡುಗೈ ದಾನಿ, ಕಲಿಯುಗ ಕರ್ಣ, ಮಂಡ್ಯದ ಗಂಡು, ರೆಬಲ್ ಸ್ಟಾರ್ ಡಾ|| ಶ್ರೀ ಅಂಬರೀಶ್ ಅವರ ಪುಣ್ಯ ಸ್ಮರಣೆಯಂದು ಶತಕೋಟಿ ನಮನಗಳು.
ಕಲಾಸೇವೆ ಹಾಗೂ ಜನಸೇವೆ ಮೂಲಕ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಅಪೂರ್ವ ವ್ಯಕ್ತಿತ್ವದ ಅವರ ಸಾಧನೆ ಅವಿಸ್ಮರಣೀಯವಾದದ್ದು.
#RebelStar#Ambareesh
ಮರಗಳ ಮಹಾತಾಯಿ, ಪರಿಸರ ಪ್ರೇಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಅನನ್ಯ ಸೇವಾಭಾವ, ಪರಿಸರ ಸ್ನೇಹಿ ಬದುಕು ಮತ್ತು ಮಾನವೀಯತೆಯ ಮೌಲ್ಯಗಳು ನಮ್ಮೆಲ್ಲರಿಗೂ ದಾರಿದೀಪವಾಗಿದ್ದವು. ಅವರ ನಿಧನ ಪರಿಸರ ಸಂರಕ್ಷಣೆ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ.
#SaalumaradaThimmakka
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ,
ಮಕ್ಕಳನ್ನೇ ಆಸ್ತಿಯಾಗಿ ಮಾಡಿ.
ಶಿಕ್ಷಣ ಮತ್ತು ಮೌಲ್ಯಗಳು ನಾವು ಮಕ್ಕಳಿಗೆ ನೀಡುವ ದೊಡ್ಡ ಆಸ್ತಿ. ಅವರು ಸಮಾಜದ ಆಧಾರ ಸ್ತಂಭಗಳು. ಮಕ್ಕಳು ಪ್ರೀತಿ, ಸೌಹಾರ್ದ, ಸಮಾನತೆಯಿಂದ ಬೆಳೆಯಬೇಕು.
ನಾಡಿನ ಸಮಸ್ತ ಎಲ್ಲಾ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.
#ಮಕ್ಕಳದಿನಾಚರಣೆ#ChildrensDay2025
ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಆಕ್ರಮಣ ಮಾಡಿದಾಗ ತನ್ನ ಒನಕೆಯನ್ನು ಅಸ್ತ್ರವನ್ನಾಗಿಸಿ ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ಸದೆಬಡಿದ ಕನ್ನಡ ನಾಡಿನ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.
#ಒನಕೆಓಬವ್ವ#OnakeObavva#YSRCongressParty#YSJaganMohanReddy