ತಮಿಳುನಾಡಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಉಪಯೋಗ ಇರುವುದರಿಂದ ಬೊಮ್ಮಸಂದ್ರ-ಹೊಸೂರು ಮೆಟ್ರೊ ಆಗಲಿ ಎಂದು ತಮಿಳುನಾಡಿನವರು ಬಯಸುತ್ತಾರೆ. ಐದು ನೂರು ಎಕರೆ ಗಳಷ್ಟು ದೊಡ್ಡ ಐಟಿ ಪಾರ್ಕ್ ಹೊಸೂರಿನಲ್ಲಿ ಬರುತ್ತದೆ. ತದನಂತರ, ಬೆಂಗಳೂರಿಗೆ ಬರಬೇಕಾದ ಮತ್ತು ಇಲ್ಲಿರುವ ಐಟಿ ಕಂಪನಿಗಳು ಸಹ ಹೊಸೂರಿಗೆ ಸ್ಥಳಾಂತರ ಆಗುತ್ತವೆ. ಈಗಾಗಲೇ STRR ಮುಗಿಯುವುದರಲ್ಲಿದೆ. ಕನ್ನಡಿಗರು ಈ ಮೆಟ್ರೊ ಯೋಜನೆಯನ್ನು ಶತಾಯಗತಾಯ ವಿರೋಧಿಸಬೇಕು.
ಪರೀಕ್ಷೆ ನಡೆಸುವಲ್ಲಿಯೇ ವೈಫಲ್ಯ,
ಪಾರದರ್ಶಕತೆ ಕಾಪಾಡುವಲ್ಲಿಯೂ ವಿಫಲ,
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕಾಂಗ್ರೆಸ್ ನಿರಂತರ ಚೆಲ್ಲಾಟ!
ಕಷ್ಟಪಟ್ಟು ಓದಿದ ಲಕ್ಷಾಂತರ ಅಭ್ಯರ್ಥಿಗಳ ಕನಸುಗಳ ಜೊತೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ಯುವ ಸಮೂಹ ತಕ್ಕಪಾಠ ಕಲಿಸಲಿದೆ.
#CongressFailsKarnataka
ಕನ್ನಡಿಗರು ವಿಶ್ವದಾದ್ಯಂತ ಜರುಗುವ ಪ್ರಮುಖ ಹಣಕಾಸು ವಿದ್ಯಮಾನಗಳನ್ನು ಗಮನಿಸುತ್ತಿರಬೇಕು. ಇವುಗಳು ನಮ್ಮ ವೈಯಕ್ತಿಕ #ಹಣಹೂಡಿಕೆ ಗಳ ಮೇಲೂ ಪರಿಣಾಮವನ್ನು ಬೀರುತ್ತವೆ. ಕೆಲವೊಂದು ಜಾಗತಿಕ ಬೆಳವಣಿಗೆಗಳ ಕುರಿತು ಇಲ್ಲಿ ಬರೆದಿದ್ದೇನೆ.
➡️ ಅಮೆರಿಕದ ಡಾಲರ್ ಮೂಲಕ ವಿಶ್ವ ವಾಣಿಜ್ಯ ನಡೆಯುವುದು ಸರಿಯಷ್ಟೆ. ಈ ಪಟ್ಟವು ಮುಂದುವರಿಯುವ ಬಗ್ಗೆ ಅನುಮಾನಗಳು ಗಟ್ಟಿಯಾಗುತ್ತಿದ್ದಂತೆ ವಾರೆನ್ ಬಫೆಟ್ ಅವರು ಅಮೆರಿಕದ ಷೇರುಪೇಟೆಯಲ್ಲಿನ ತಾವು #ಹಣಹೂಡಿಕೆ ಮಾಡಿದ್ದ ಬಿಲಿಯನ್ ಗಟ್ಟಲೆ ಡಾಲರುಗಳನ್ನು ಲಾಭದ ಸಮೇತ ಜಪಾನ್ ದೇಶಕ್ಕೆ ವರ್ಗಾಯಿಸಿದರು. ಏಕೆ ಗೊತ್ತೆ? ಜಪಾನ್ ದೇಶದ ಅಗ್ಗದ ಬಡ್ಡಿದರಗಳು global forward trade (ಇದರ ಬಗ್ಗೆ ನಾಲ್ಕು ವರ್ಷಗಳ ಹಿಂದೆ ಮಾಡಿದ ಟ್ವೀಟ್ ಅನ್ನು ಕೊಟ್ಟಿದ್ದೇನೆ ನೋಡಿ) ಅನ್ನು ಹುಟ್ಟುಹಾಕಿದ್ದವು. ಜಪಾನ್ ದೇಶದಲ್ಲಿ ಸಾಲು ಮಾಡಿ ಅಮೆರಿಕ ಮತ್ತಿತರ ಬಲಾಢ್ಯ ದೇಶಗಳ, ಇನ್ನೂ ಹೆಚ್ಚಿನ ಬಡ್ಡಿ ಸಿಗುವ ಬಾಂಡುಗಳು, ಸರಕುಗಳು (commodities) ಮತ್ತು ಷೇರುಗಳಲ್ಲಿ #ಹಣಹೂಡಿಕೆ ಮಾಡಿ ಆಗರ್ಭ ಸಿರಿವಂತರು ಆರಾಮಾಗಿ ಮಿಲಿಯಗಟ್ಟಲೆ ಡಾಲರುಗಳ ಲಾಭ ಮಾಡಿಕೊಳ್ಳುತ್ತಿದ್ದರು.
➡️ಡಾಲರ್ ಕುರಿತು ಅನುಮಾನಗಳು ಗಟ್ಟಿಯಾಗುತ್ತಿದ್ದಂತೆ ಜಪಾನ್ ದೇಶಕ್ಕೆ ತಾನು ಕೊಟ್ಟ ಸಾಲಗಳ ಬಗ್ಗೆ ಯೋಚನೆ ಶುರುವಾಯಿತು. ಜೊತೆಗೆ, ಆ ದೇಶದ ಕರೆನ್ಸಿಯಾದ ಎನ್ (¥) ಅನ್ನು ದಶಕಗಳ ಕಾಲ ದುರ್ಬಲವಾಗಿಟ್ಟಿದ್ದು ಸಾಕೆನಿಸಿತು. ಆ ದೇಶದ ಸಾಲಗಳೂ ಬಹಳವಾಗಿ ಬೆಳೆದಿದ್ದವು.
ಮೇಲ್ಕಂಡ ಕಾರಣಗಳಿಂದಾಗಿ ಜಪಾನ್ ತನ್ನ ಬಡ್ಡಿದರವನ್ನು ಏರಿಸಲು ಹೊರಟಿದೆ. ಒಂದು ಸಲ ಏರಿಕೆಯಾಗಿದೆ. ಮತ್ತೆ ಏರಿಸದಂತೆ ಟ್ರಂಪ್ ತಾಕೀತು ಮಾಡಿದ್ದಾರೆ. ಇದೆಲ್ಲ ಬಹಳ ಕಾಲ ನಡೆಯದು. ಇವನ್ನೆಲ್ಲ ಮನಗಂಡೇ ವಾರೆನ್ ಬಫೆಟ್ ಅವರು ತಮ್ಮ surplus cash ಅನ್ನು ಅಮೆರಿಕದ #ಷೇರು_ಮಾರುಕಟ್ಟೆ ಯಲ್ಲಿ #ಹಣಹೂಡಿಕೆ ಮಾಡುವ ಬದಲು ಜಪಾನ್ ದೇಶಕ್ಕೆ ವರ್ಗಾವಣೆ ಮಾಡಿದರು.
➡️ ಜಪಾನ್ ಬಡ್ಡಿದರದಲ್ಲಿ ಮತ್ತೆ ಮತ್ತೆ ಏರಿಕೆಯಾದರೆ global forward trade ಮಾಡುವುದು ಕಷ್ಟವಾಗುತ್ತದೆ. ಎನ್ ಬಲಗೊಳ್ಳುತ್ತದೆ. ಆಗರ್ಭ ಸಿರಿವಂತರು ವಿಶ್ವದಾದ್ಯಂತ ಮಾಡಿರುವ #ಹಣಹೂಡಿಕೆ ಗಳಿಂದ ಹೊರಬಂದು ಜಪಾನ್ ಸಾಲಗಳನ್ನು ತೀರಿಸುತ್ತಾರೆ.
➡️ ನಾವುಗಳು ಈ ಜಾಗತಿಕ ಬೆಳವಣಿಗೆಗಳನ್ನು ಅರಿತುಕೊಂಡು #ಹಣಹೂಡಿಕೆ ಮಾಡಬೇಕು.
➡️ ನೀತಿಪಾಠ: ಯಾವುದೇ ಒಂದು ರೀತಿಯ ಆಸ್ತಿ (asset) ಮೇಲೆ ಎಲ್ಲಾ ಹಣವನ್ನು ಹೂಡುವ ಬದಲು multi asset investment ಶೈಲಿಯನ್ನು ರೂಢಿಸಿಕೊಳ್ಳಬೇಕು. ಅಂದರೆ, ಷೇರುಗಳ ಜೊತೆಗೆ #ಚಿನ್ನ #ಬೆಳ್ಳಿ ಬಾಂಡುಗಳು ನಿಶ್ಚಿತ ಠೇವಣಿ (FD) ಇತ್ಯಾದಿಗಳನ್ನು ಪರಿಗಣಿಸಬೇಕು.
#ದುಡ್ಡಿನ_ಅರಿವು
https://t.co/Fk1AStHryl