ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅನರ್ಘ್ಯ ರತ್ನ ಶಹೀದ್ ಭಗತ್ ಸಿಂಗ್ ಅವರ ಶೌರ್ಯ ಎಲ್ಲಾ ಪೀಳಿಗೆಗೂ ಪ್ರೇರಣಾಶಕ್ತಿ.
ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್ ಸಿಂಗ್ ಅವರ ಜನ್ಮದಿನದಂದು ಶತ ಶತ ನಮನಗಳು.
#BhagatSingh
ಅಮರ ಕ್ರಾಂತಿಕಾರಿ, ಭಾರತಾಂಬೆಯ ವೀರ ಪುತ್ರ ಭಗತ್ ಸಿಂಗ್ ಅವರ ಜಯಂತಿಯಂದು ಭಾವಪೂರ್ಣ ಪ್ರಣಾಮಗಳು.
ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ನೇಣುಗಂಬವೇರಿದ ಅವರ ಅಪ್ರತಿಮ ತ್ಯಾಗ, ಶೌರ್ಯ ಹಾಗೂ ದೇಶಪ್ರೇಮ ಪ್ರತಿಯೊಬ್ಬ ಭಾರತೀಯನಲ್ಲಿ ರಾಷ್ಟ್ರಭಕ್ತಿಯ ಕಿಚ್ಚನ್ನು ಎಂದೆಂದಿಗೂ ಪ್ರಜ್ವಲಿಸುತ್ತಿರುತ್ತದೆ.
It was a pleasure to participate in The Conclave 2026 – India’s Next Chapter, organised by Pratidin Media Network in New Delhi.
In #Telangana, we are building an education-to-employment ecosystem, from quality schooling to skill development through the #YoungIndiaSkillsUniversity and Advanced Technology Centres.
Telangana needs greater support from the Union Government for critical infrastructure, including the Regional Ring Road. This is not a North-South issue; it is about equal opportunities and equal justice for every state.
On delimitation, the interests and representation of all regions must be protected. The freeze on Lok Sabha seats should continue.
Strengthening democracy, federalism, equitable representation, quality education and employment opportunities for our youth must remain our shared national priority.
#TheConclave2026
ಪ್ರಖರ ರಾಷ್ಟ್ರೀಯವಾದಿ ನೇತಾರ, ಶ್ರೇಷ್ಠ ಸಂಘಟಕ, ವಿಶ್ವ ಹಿಂದೂ ಪರಿಷತ್ತಿನ ಆಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ, ರಾಮ ಜನ್ಮಭೂಮಿ ಚಳವಳಿಯ ಹಿರಿಯ ಧುರೀಣ ಶ್ರೀ ಅಶೋಕ್ ಸಿಂಘಾಲ್ ಜೀ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ, ಹೆಮ್ಮೆಯ ಪ್ರಧಾನಮಂತ್ರಿ ಶ್ರೀ @narendramodi ಜೀ ರವರ ನುಡಿ ನಮನದ ವಿಶೇಷ ಲೇಖನ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ತಪ್ಪದೇ ಓದಿ!
ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆ, ಸಾಂಸ್ಕೃತಿಕ ಜಾಗೃತಿ ಹಾಗೂ ಭವ್ಯ ರಾಮಮಂದಿರ ನಿರ್ಮಾಣಕ್ಕೆ ತಮ್ಮ ಜೀವನವನ್ನೇ ಧಾರೆ ಎರೆದ ಶ್ರೀ ಸಿಂಘಾಲ್ ಜೀ ರವರ ಅಪ್ರತಿಮ ತ್ಯಾಗ, ಶಿಸ್ತು ಮತ್ತು ದೇಶಪ್ರೇಮದ ತತ್ತ್ವಗಳು ಸದಾ ಮಾರ್ಗದರ್ಶಕವಾಗಿವೆ.
It was a privilege to warmly welcome our senior leader, Hon’ble Union Minister of Home Affairs and Cooperation, Shri @AmitShah Ji, in Hubballi.
As always, Amit Shah Ji’s presence brings renewed energy and enthusiasm to Karyakartas across the state.
ರಾಜ್ಯಕ್ಕೆ ನಿನ್ನೆ ಆಗಮಿಸಿದ ನಮ್ಮೆಲ್ಲರ ಹಿರಿಯ ನಾಯಕರು, ಮಾನ್ಯ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಜೀ ರವರನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅದರಪೂರ್ವಕವಾಗಿ ಸ್ವಾಗತಿಸಲಾಯಿತು. ಎಂದಿನಂತೆ ಶ್ರೀ ಅಮಿತ್ ಶಾ ಜೀ ರವರ ಆಗಮನ ಪಕ್ಷದ ಕಾರ್ಯಕರ್ತರಲ್ಲಿ ನವೋಲ್ಲಾಸ ಮೂಡಿಸಿದ್ದು, ಅವರ ಉಪಸ್ಥಿತಿ ಮತ್ತು ಮಾರ್ಗದರ್ಶನ ಪಕ್ಷದ ಸಂಘಟನೆಗೆ ಹೆಚ್ಚಿನ ಶಕ್ತಿ ತುಂಬಿದೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ @JoshiPralhad , ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು ಹಾಗು ರಾಜ್ಯ ಸಭಾ ಸದಸ್ಯರಾದ ಶ್ರೀ @profmnagaraja , ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಶ್ರೀ @BSBommai , ಶ್ರೀ @JagadishShettar , ಹುಬ್ಬಳ್ಳಿ-ಧಾರವಾಡ ಮೇಯರ್ ಶ್ರೀಮತಿ ದುರ್ಗಮ್ಮ ಬೀಜ್ವಾಡ, ಶಾಸಕರುಗಳಾದ ಶ್ರೀ @BelladArvind , ಶ್ರೀ ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಶ್ರೀ ಲಿಂಗರಾಜ್ ಪಾಟೀಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೆಮ್ಮೆಯ ಪ್ರಧಾನಿ ಆದರಣೀಯ ಶ್ರೀ ನರೇಂದ್ರ ಮೋದಿ ಜೀ ರವರು ಸಾರ್ಥಕ ಜನಸೇವೆ, ಸಮರ್ಥ ನಾಯಕತ್ವದ ಹಿನ್ನಲೆಯಲ್ಲಿ ಯಶಸ್ವಿ 25 ವರ್ಷಗಳನ್ನು ಪೂರೈಸಿರುವ ನಿಮಿತ್ತ ಪಕ್ಷ ನಡೆಸುತ್ತಿರುವ 'ಸೇವಾ ಸಂಕಲ್ಪ ಅಭಿಯಾನ'ದ ನಡುವೆ, ಇಂದು ನಮ್ಮ ಹಿರಿಯ ನಾಯಕರು, ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ @AmitShah ಜೀ ರವರನ್ನು ಹುಬ್ಬಳ್ಳಿಯಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಲಾಯಿತು. ವಿಕಸಿತ ಭಾರತದ ಸಾಕಾರದ ನಿಟ್ಟಿನಲ್ಲಿ ನೆಚ್ಚಿನ ಪ್ರಧಾನಿಗಳ ಪರಿಕಲ್ಪನೆಗೆ ಅನುಗುಣವಾಗಿ, ಅವರಿಗೆ ಹೆಗಲಿಗೆ ಹೆಗಲುಕೊಟ್ಟು ಹಗಲಿರುಳು ಶ್ರಮಿಸುತ್ತಿರುವ ನಮ್ಮ ಶ್ರೀ ಅಮಿತ್ ಶಾ ಜೀ ಅವರ ದೃಢ ನೇತೃತ್ವ ನಮಗೆಲ್ಲರಿಗೂ ಸದಾ ಸ್ಫೂರ್ತಿದಾಯಿಯಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಅಭೂತಪೂರ್ವ ಯಶಸ್ಸು ಕಂಡ #BallariChalo ಪಾದಯಾತ್ರೆಯ ಸಂಪೂರ್ಣ ವಿವರಗಳನ್ನು ಇದೇ ಸಂದರ್ಭದಲ್ಲಿ ಮಾನ್ಯ ಶ್ರೀ ಅಮಿತ್ ಶಾ ಜೀ ರವರಿಗೆ ಸಲ್ಲಿಸಲಾಯಿತು. ಬಳ್ಳಾರಿ ಯಾತ್ರೆಯುದ್ದಕ್ಕೂ ಅಸಂಖ್ಯಾತ ಕಾರ್ಯಕರ್ತರು ಹಾಗೂ ಸಾರ್ವಜನಿಕರು ತೋರಿದ ಅಭೂತಪೂರ್ವ ಬೆಂಬಲದ ಚಿತ್ರಣವನ್ನು ವಿವರಿಸಲಾಯಿತು. ಬರುವ ದಿನಗಳಲ್ಲಿ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಲು, ನಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಮಾರ್ಗದರ್ಶನ ಪಡೆಯಲಾಯಿತು. ಬಳ್ಳಾರಿ ಚಲೋ ಸೇರಿದಂತೆ ರಾಜ್ಯದಲ್ಲಿ ಪಕ್ಷ ಸಂಘಟನೆಯ ಚಟುವಟಿಗಳ ಕುರಿತು ಅಮಿತ್ ಶಾ ಜೀ ಮೆಚ್ಚುಗೆ ವ್ಯಕ್ತಪಡಿಸಿದರು. 2028ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯ ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಮ್ಮ ಸಂಘಟಿತ ಹೋರಾಟ ಹಾಗು ಜನಜಾಗೃತಿ ಕಾರ್ಯಕ್ರಮಗಳು ಮುಂದುವರೆಯಲಿದೆ.
ಶ್ರೀ ಅಮಿತ್ ಶಾ ಜೀ ರವರು ಹಾಗೂ ಪಕ್ಷದ ವರಿಷ್ಠರ ಮಾರ್ಗದರ್ಶನ ಹಾಗು ಬೆಂಬಲವೇ ನಮಗೆ ಶ್ರೀರಕ್ಷೆಯಾಗಿದೆ.
ಸಹಕಾರ ಕ್ಷೇತ್ರದಲ್ಲಿ ನವಚೈತನ್ಯ ತುಂಬುವ ನಿಟ್ಟಿನಲ್ಲಿ ಇಂದು ಕೊಲ್ಲಾಪುರ ಕನ್ನೇರಿ ಯ ಶ್ರೀ ಸಿದ್ಧಗಿರಿ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಹುಕ್ಕೇರಿ ನಿಡಸೋಸಿಯ ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮೀಜಿಗಳ ದಿವ್ಯಸಾನ್ನಿಧ್ಯದಲ್ಲಿ ಬೆಳಗಾವಿಯ ಎಕ್ಸಾಂಬಾದಲ್ಲಿ ನಡೆದ ಶ್ರೀ ಬೀರೇಶ್ವರ ಕೋ-ಆಪ್. ಕ್ರೆಡಿಟ್ ಸೊಸೈಟಿಯ ನೂತನ ಆಡಳಿತ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯಿತು.
ಮಾಜಿ ಸಂಸದರೂ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಮಾಜಿ ಸಚಿವರು, ನಿಪ್ಪಾಣಿ ಶಾಸಕರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಹಕಾರ ರಾಜ್ಯ ಸಚಿವರಾದ ಶ್ರೀ ಮುರಳೀಧರ ಮೊಹೋಲ್, ವಿಧಾನಸಭಾ ವಿರೋಧ ಪಕ್ಷದ ನಾಯಕ ಶ್ರೀ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷದ ನಾಯಕ ಶ್ರೀ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಶ್ರೀ ಧನಂಜಯ್ ಮಹಾದಿಕ್, ಶ್ರೀ ಅಜಿತ್ ಗೋಪ್ಚಡೆ, ಸಂಘದ ಹಿರಿಯರಾದ ಶ್ರೀ ಅರವಿಂದ ದೇಶಪಾಂಡೆ, ಮಾಜಿ ಶಾಸಕ ಶ್ರೀ ಅನಿಲ ಬೆನಕೆ, ಪ್ರಮುಖರಾದ ಶ್ರೀ ಸುಭಾಶ್ ಪಾಟೀಲ, ಶ್ರೀಮತಿ ಗೀತಾ ಸುಳೆ ಸೇರಿದಂತೆ ಹಲವಾರು ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿಯ ಚಾವಟ ಗಲ್ಲಿಯಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಭೀಕರ ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ವಿಧಾನಸಭೆ ವಿರೋಧ ಪಕ್ಷ ನಾಯಕ ಶ್ರೀ @RAshokaBJP ಅವರೊಂದಿಗೆ ಇಂದು ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು. ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಕುಟುಂಬಗಳಿಗೆ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.
ಘಟನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಮೃತಪಟ್ಟ ದಾಮೊನೆ ಕುಟುಂಬದ ಸದಸ್ಯರಿಗೆ ರಾಜ್ಯ ಸರ್ಕಾರದ ವತಿಯಿಂದ ಅಗತ್ಯ ನೆರವು ಹಾಗೂ ಪರಿಹಾರ ನೀಡಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀ ಸುಭಾಶ್ ಪಾಟೀಲ, ಶಾಸಕರಾದ ಶ್ರೀ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಶ್ರೀ ಅನಿಲ ಬೆನಕೆ, ಪ್ರಮುಖರಾದ ಶ್ರೀ ಸಂಜಯ ಪಾಟೀಲ, ಶ್ರೀ ಅರವಿಂದ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು
ಅಧಿವೇಶನ ಮುಗಿದ ಬಳಿಕ ಬಿಜೆಪಿ ನಾಯಕರು ಮನೆ ಸೇರುತ್ತಾರೆ ಎಂದು ಮುಖ್ಯಮಂತ್ರಿಗಳು ಭಾವಿಸಿದ್ದರು. ಆದರೆ ಬಿಜೆಪಿ ಯಾವುದೇ ರಾಜಿಯಿಲ್ಲದೆ ಪಾದಯಾತ್ರೆ ಘೋಷಿಸಿತು, ಈಗ ಸಿಎಂ ಡಿಕೆಶಿ ಭಯದಿಂದ ನಡುಗುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಈ ಪಾದಯಾತ್ರೆ ಅಲುಗಾಡಿಸಲಿದೆ. ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ.
* ಶ್ರೀ @BYVijayendra, ರಾಜ್ಯಾಧ್ಯಕ್ಷರು
#BallariChalo
#CongressFailsKarnataka
This military training is definitely not for the weak. The grit, discipline and determination of these fearless soldiers deserve the highest respect! 🫡🔥
PM @narendramodi held fruitful discussions with President Putin on the full range of the India-Russia Special and Privileged Strategic Partnership.
He noted the significant progress made across sectors in recent years. Innovation, space, energy, fertilisers and people-to-people ties remain key focus areas of the enduring India-Russia friendship.
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಪಾವನ ಸಂದರ್ಭದಲ್ಲಿ, ಶ್ರೀ ಗುರು ರಾಘವೇಂದ್ರ ರಾಯರ ಮೂಲ ಬೃಂದಾವನದ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.
"ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೊಳಗಿದೆ ರಣಕಹಳೆ"
ದುಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ ಆರಂಭವಾಗಿದೆ. ತುಘಲಕ್ ಸರ್ಕಾರ ತೊಲಗುವವರೆಗೂ ಹೋರಾಟ ನಿರಂತರವಾಗಿರಲಿದೆ.
#BallariChalo#CongressFailsKarnataka
ಕನ್ನಡಿಗರ ಆಕ್ರೋಶದ ಕಹಳೆಯಾಗಿ, ರೈತರು, ಮಹಿಳೆಯರು, ಯುವಜನರು, ಶ್ರಮಿಕರು ಹಾಗೂ ಜನಸಾಮಾನ್ಯರ ಧ್ವನಿಯಾಗಿ, ಪಕ್ಷದ ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ಇಂದು ಲಿಂಗಸೂಗೂರಿನಲ್ಲಿ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಪಕ್ಷದ ಎಲ್ಲ ನಾಯಕರ ಉಪಸ್ಥಿತಿಯಲ್ಲಿ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು. ಅಧಿಕಾರದ ಮದದಲ್ಲಿ ಜನರ ಹಿತವನ್ನು ಮರೆತು, ಭ್ರಷ್ಟಾಚಾರ ಮತ್ತು ದುರಾಡಳಿತದಲ್ಲಿ ಮುಳುಗಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಈ ಪ್ರತಿಭಟನಾ ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ, ಇದು ಕರ್ನಾಟಕದ ಹಿತಕ್ಕಾಗಿ ನಡೆಯುತ್ತಿರುವ ಜನಾಂದೋಲನ! ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ.
ಭ್ರಷ್ಟ ಕಾಂಗ್ರೆಸ್ಗೆ ಜನಧ್ವನಿಯ ಎಚ್ಚರಿಕೆ - 'ಬಳ್ಳಾರಿ ಚಲೋ' ಪಾದಯಾತ್ರೆಗೆ ವಿಧ್ಯುಕ್ತ ಚಾಲನೆ
ದುರಾಡಳಿತ ನಡೆಸುತ್ತಿರುವ ಈ ಭ್ರಷ್ಟ, ರೈತವಿರೋಧಿ, ಶೋಷಿತರ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶದ ಅಭಿವ್ಯಕ್ತಿಯಾಗಿ ಪಕ್ಷ ಹಮ್ಮಿಕೊಂಡಿರುವ 10 ದಿನಗಳ ಐತಿಹಾಸಿಕ "ಬಳ್ಳಾರಿ ಚಲೋ" ಪಾದಯಾತ್ರೆಗೆ ಇಂದು ಲಿಂಗಸೂಗೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿ, ಹಿರಿಯ ಜನನಾಯಕರು, ಮಾಜಿ ಮುಖ್ಯಮಂತ್ರಿಗಳು. ರೈತಬಂಧು ನೇತಾರ ಸನ್ಮಾನ್ಯ ಶ್ರೀ @BSYBJP ಅವರು ಚಾಲನೆ ನೀಡಿದರು.
'ಬಿಜೆಪಿ ಯಾಕೆ ಪಾದಯಾತ್ರೆ ಮಾಡುತ್ತಿದೆ' ಎಂದು ಪ್ರಶ್ನಿಸುವ ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರೇ, ನಿಮ್ಮ ಸರ್ಕಾರದ ವೈಫಲ್ಯಗಳು, 187 ಕೋಟಿ ರೂ. ವಾಲ್ಮೀಕಿ ನಿಗಮದ ಹಗರಣ, ದಲಿತರ-ರೈತರ ದ್ರೋಹ ಹಾಗೂ ಯುವ ಜನರ ಭವಿಷ್ಯದ ಜೊತೆಗಿನ ನಿಮ್ಮ ಸರ್ಕಾರದ ಚೆಲ್ಲಾಟವೇ ನಮ್ಮ ಹೋರಾಟಕ್ಕೆ ಕಾರಣ! ಬಿ.ನಾಗೇಂದ್ರ ಅವರ ರಾಜೀನಾಮೆ ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಹಂತದ ಜಯ ಮಾತ್ರ. ಮುಂದಿನ ದಿನಗಳಲ್ಲಿ ಸಂಪುಟದ ಮತ್ತೊಬ್ಬ ಸಚಿವರ ರಾಜೀನಾಮೆ ನೀಡುವುದೂ ನಿಶ್ಚಿತವಾಗಿದೆ!
ಬರದಿಂದ ಕಂಗಾಲಾದ ರೈತರು, ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆಗಳಿಗಾಗಿ ಕಾಯುತ್ತಿರುವ ಯುವಜನತೆ ಮತ್ತು ಕೊಳ್ಳೆ ಹೊಡೆಯಲ್ಪಟ್ಟ ಶೋಷಿತ ಸಮುದಾಯಗಳ ಹಕ್ಕಿಗಾಗಿ ಈ ಜನಾಂದೋಲನ ರೂಪ ಪಡೆದಿದೆ. ಸಂತ್ರಸ್ತ ರೈತರಿಗೆ ನೆರವಾಗುವ ಬದಲು ರಿಯಲ್ ಎಸ್ಟೇಟ್ನಲ್ಲಿ ನಿರತರಾಗಿರುವ ಈ ಭ್ರಷ್ಟ ಸರ್ಕಾರದ ಬಣ್ಣ ಬಯಲು ಮಾಡಿ, ಇದನ್ನು ಬುಡಸಮೇತ ಕಿತ್ತೊಗೆಯುವುದೇ ನಮ್ಮ ಗುರಿ!
ಪಕ್ಷದ ಈ 10 ದಿನಗಳ ಐತಿಹಾಸಿಕ ಪಾದಯಾತ್ರೆ ರಾಜ್ಯದ ಪರಿವರ್ತನೆಯ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಮುಂದಿನ ಒಂದೂವರೆ ವರ್ಷಗಳಲ್ಲಿ ಈ ಜನವಿರೋಧಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲು ಮಾಡಿ, ಜನರೇ ಈ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತೊಗೆದು ಎನ್.ಡಿ.ಎ. ಸರ್ಕಾರವನ್ನು ಅಧಿಕಾರಕ್ಕೆ ತರುವವರೆಗೆ ನಮ್ಮ ಸುದೀರ್ಘ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಸಂಸದರೂ ಆಗಿರುವ ಶ್ರೀ @BSBommai , ಶ್ರೀ @JagadishShettar , ವಿಧಾನಸಭೆ ವಿರೋಧ ಪಕ್ಷದ ನಾಯಕ ಶ್ರೀ @RAshokaBJP , ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀ @NswamyChalavadi , ರಾಜ್ಯ ಸಹ ಉಸ್ತುವಾರಿ ಶ್ರೀ @ReddySudhakar21, ಮಾಜಿ ಉಪಮುಖ್ಯಮಂತ್ರಿಗಳು, ಸಂಸದರೂ ಆಗಿರುವ ಶ್ರೀ @govind_karjol ಮಾಜಿ ಸಚಿವರಾದ @sriramulubjp , ಮಾಜಿ ಸಚಿವರು, ಶಾಸಕರಾದ ಶ್ರೀ @CTRavi_BJP , ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರಾದ ಶ್ರೀ @nrkbjp , ಶಾಸಕರುಗಳಾದ ಶ್ರೀ @JanardhanaBJP , ಶ್ರೀ ಮಾನಪ್ಪ ವಜ್ಜಲ್, ಡಾ.ಶಿವರಾಜ್ ಪಾಟೀಲ್ ಸೇರಿದಂತೆ ಪಕ್ಷದ ನಾಯಕರುಗಳು, ಪ್ರಮುಖರು, ಪದಾಧಿಕಾರಿಗಳು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
ಬನ್ನಿ, ನೀವೂ ಕೂಡ ಈ ಜನಾಂದೋಲನದಲ್ಲಿ ಜೊತೆಯಾಗಿ, ಜನಾಕ್ರೋಶಕ್ಕೆ ಧ್ವನಿಯಾಗಿ!
#BallariChalo #CongressFailsKarnataka
ಜನಕಾಳಜಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯದ ಹಿತದ ದೃಷ್ಟಿಯಿಂದ ನಾವು ಕೈಗೊಂಡ ಹೋರಾಟಕ್ಕೆ ಸಚಿವ ನಾಗೇಂದ್ರ ರಾಜೀನಾಮೆ ಸಲ್ಲಿಸುವ ಮೂಲಕ ಜಯ ದೊರಕಿದೆ. ನಾವು ಹೋರಾಟ ಆರಂಭಿಸಿದ್ದು ವ್ಯಕ್ತಿಗತ ವಿರೋಧಕ್ಕಾಗಿ ಅಲ್ಲ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಇತಿಹಾಸ ಕಂಡು ಕೇಳರಿಯದ ರೀತಿಯಲ್ಲಿ ಬ್ಯಾಂಕಿಗೆ ಕನ್ನ ಹಾಕಿ ಲೂಟಿ ಮಾಡಿದ ಪರಿಯನ್ನು ವಿರೋಧಿಸುವುದಕ್ಕಾಗಿ ಹಾಗೂ ಒಮ್ಮೆ ರಾಜೀನಾಮೆ ನೀಡಿದ್ದ ಆರೋಪಿತ ವ್ಯಕ್ತಿಯನ್ನು ಮತ್ತೆ ಸಚಿವರನ್ನಾಗಿ ಮಾಡಿ ಭ್ರಷ್ಟ ಹಾಗೂ ಲೂಟಿಕೋರತನವನ್ನು ಪೋಷಿಸುವ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ವಿರೋಧಿಸುವುದಕ್ಕಾಗಿ.
ಸದ್ಯ ಹೋರಾಟದ ಹಾದಿಯಲ್ಲಿ ಒಂದು ಹಂತ ತಲುಪಿ @INCKarnataka ಪಕ್ಷವನ್ನು ಮಣಿಸಿದ್ದೇವೆ. ವಿಧಾನಸೌಧದ ಉಭಯ ಸದನಗಳಲ್ಲಿಯೂ ನಮ್ಮ ಜೊತೆಗೆ ಕೈಜೋಡಿಸಿ ನಿಂತ @JanataDal_S ಪಕ್ಷಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ರಾಜ್ಯಾದ್ಯಂತ ಅಹೋರಾತ್ರಿ ಧರಣಿ ನಡೆಸಿದ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಪ್ರಮುಖರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಹೋರಾಟದ ನೈಜ ಕಾಳಜಿಯನ್ನು ಬೆಂಬಲಿಸಿದ ರಾಜ್ಯದ ಜನತೆಗೂ ಕೃತಜ್ಞತೆಗಳು.
ಈ ನಡುವೆ ಸೆಪ್ಟೆಂಬರ್ ೧ ರಿಂದ ಆರಂಭವಾಗುವ ನಮ್ಮ ಬೃಹತ್ ಪಾದಯಾತ್ರೆ ಎಂದಿನಂತೆ ಆರಂಭವಾಗಲಿದೆ. ಮಹರ್ಷಿ ವಾಲ್ಮೀಕಿ ನಿಗಮದ ಲೂಟಿಯಾದ ಹಣದಲ್ಲಿ ಭಾಗೀದಾರರಾದ ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯಾಗಬೇಕು, ತನಿಖೆ ಮುಂದುವರೆದಿರುವ ಈ ಹಂತದಲ್ಲಿ ನಾಗೇಂದ್ರ ಅವರೊಂದಿಗೆ ಕೈಜೋಡಿಸಿ ನಿಂತ ಕಾಂಗ್ರೆಸ್ ನ ಪ್ರಭಾವಿ ಶಕ್ತಿಗಳ ಅಸಲೀ ಮುಖವಾಡ ಕಳಚುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ.
ಸದ್ಯ ಲೂಟಿಯಾಗಿರುವ ಹಣ ಪೂರ್ಣಪ್ರಮಾಣದಲ್ಲಿ ವಾಲ್ಮೀಕಿ ನಿಗಮಕ್ಕೆ ವಾಪಾಸಾಗಬೇಕು. ಪರಿಶಿಷ್ಟ ಕಲ್ಯಾಣದ ಕಾರ್ಯ ಆರಂಭವಾಗಬೇಕು. ಬರಗಾಲದ ಬೇಗೆ ರಾಜ್ಯದ ಜನತೆಯನ್ನು ಭಾಧಿಸುತ್ತಿದೆ, ಕುಡಿಯುವ ನೀರಿಗೂ ಹಾಹಾಕಾರ ಎದುರಾಗುತ್ತಿದೆ, ಬಿತ್ತನೆ ಮಾಡಿ ಆಕಾಶದತ್ತ ಮುಖಮಾಡಿ ನಿಂತಿರುವ ರೈತರ ಗೋಳನ್ನು ಈ ಭಂಡ ಸರ್ಕಾರ ಕೇಳುತ್ತಿಲ್ಲ, ಬರ ಪರಿಹಾರ ಕಾರ್ಯ ಆರಂಭಿಸಿಲ್ಲ, ಬರದ ಬವಣೆಗೆ ಸಿಲುಕಿರುವ ಪ್ರದೇಶಗಳನ್ನು ಗುರುತಿಸಿ ʼಬರ ಪೀಡಿತ ಪ್ರದೇಶʼ ಎಂದು ಘೋಷಣೆ ಮಾಡಿಲ್ಲ. ಜನ ಜಾನುವಾರುಗಳ ಸ್ಥಿತಿ ಅಸಹನೀಯ ವಾಗುತ್ತಿದೆ.
ನಿರುದ್ಯೋಗಿ ಯುವಜನರ ಪಾಲಿಗೆ ನಿರಂತರ ಕಂಟಕಪ್ರಾಯವಾಗಿರುವ ಈ ಸರ್ಕಾರ ಲಕ್ಷಾಂತರ ಯುವಜನರ ನೇಮಕಾತಿಗೆ ಪ್ರಕ್ರಿಯೆಯನ್ನು ಇನ್ನೂ ಕೂಡ ಸರಿಯಾಗಿ ಆರಂಭಸಿಲ್ಲ, KPSC ನಡೆಸಿದ ಪಶು ವೈದ್ಯಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಿನ್ನಲೆಯ ಕರ್ಮಕಾಂಡ, ನೂರಾರು ಕೋಟಿಯ ಭ್ರಷ್ಟಾಚಾರ ರಾಜ್ಯದಿಂದಾಗಿ ಯುವಜನತೆ ಹತಾಶೆಯ ಅಂಚು ತಲುಪುವ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ. ಪಂಚಭಾಗ್ಯಗಳಿಗೆ ಇತಿಶ್ರೀ ಹಾಡಲು ಕುಂಟು ನೆಪಗಳ ಮಾರ್ಗಗಳನ್ನು ಸಿಎಂ @DKShivakumar ನೇತೃತ್ವದ ಸರ್ಕಾರ ಕಂಡುಕೊಂಡಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ನಮ್ಮ ಪಾದಯಾತ್ರೆ ಮುಂದುವರೆದು ಜನರ ದನಿಯಾಗಿ ಮೊಳಗಲಿದೆ. ಈ ಭ್ರಷ್ಟ ಜನವಿರೋಧಿ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಪಾದಯಾತ್ರೆಯ ಉದ್ದೇಶ ಕರ್ನಾಟಕ ರಾಜ್ಯದ ಜನತೆಯ ಪರವಾದ ಬೃಹತ್ ಆಂದೋಲನವಾಗಿದೆ.
#CorruptCongress #CongressFailsKarnataka
ವಾಲ್ಮೀಕಿ ನಿಗಮದ ಲೂಟಿ ವಿರುದ್ಧದ ಜನಪರ, ಸತ್ಯದ ಹೋರಾಟಕ್ಕೆ ಮೊದಲ ಜಯ; ರಾಜ್ಯದ ಜನತೆ, ರೈತರು ಹಾಗೂ ಯುವಜನರ ನ್ಯಾಯಕ್ಕಾಗಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ!
#CorruotCongress#CongressFailsKarnataka
True leadership is tested not when people applaud, but when they disagree.
By choosing forgiveness over anger and guidance over retribution, PM @narendramodi ji once again has shown the strength of character that defines his leadership. In a time when bitterness is easy, he reminds the nation that compassion, patience and faith in our youth are the true hallmarks of a leader.
That is the spirit of a statesman who believes in building the future, not settling scores.