ಹುಬ್ಬಳ್ಳಿಯ ಅರವಿಂದ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗವಹಿಸಿ, ಚುನಾವಣಾ ಸಿದ್ಧತೆ ಹಾಗೂ ಸಂಘಟನಾತ್ಮಕ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಯಿತು.
ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀ ಎಸ್.ವಿ. ಸಂಕನೂರು ಅವರ ಗೆಲುವಿಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದು, ಮತದಾರರನ್ನು ಸಂಪರ್ಕಿಸುವುದು ಹಾಗೂ ಚುನಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಕುರಿತು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ @JoshiPralhad , ಶಾಸಕರಾದ ಶ್ರೀ @BelladArvind , ಶ್ರೀ @MTenginkai , ಶ್ರೀ ಎಂ.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಲಿಂಗರಾಜ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಧಾರವಾಡ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಶ್ರೀ ನಿಂಗಪ್ಪ ಸುತಗಟ್ಟಿ, ಶ್ರೀ ಜಯತೀರ್ಥ ಕಟ್ಟಿ ಸೇರಿದಂತೆ ಮಾಜಿ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಒಗ್ಗಟ್ಟಿನ ಸಂಘಟನಾ ಶಕ್ತಿ ಮತ್ತು ಕಾರ್ಯಕರ್ತರ ಪರಿಶ್ರಮದೊಂದಿಗೆ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಶ್ರೀ ಎಸ್.ವಿ. ಸಂಕನೂರು ಅವರ ಗೆಲುವಿಗಾಗಿ ಸಂಕಲ್ಪದಿಂದ ಕಾರ್ಯನಿರ್ವಹಿಸೋಣ.
#MLCElection #WestGraduateConstituency @BJP4Karnataka@blsanthosh@BJP4India
ಹಾವೇರಿ ತಾಲೂಕಿನ ದೇವಗಿರಿಯ ಬಿ.ಎಂ. ಇಂಟರ್ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಪ್ರಧಾನಮಂತ್ರಿ ಶ್ರೀ @narendramodi ಜೀ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸೇವಾ ಸಂಕಲ್ಪ ಅಭಿಯಾನ ಹಾಗೂ ‘ಮೇರಾ ಸಪನೋಂ ಕಾ ಭಾರತ್’ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಂಗೋಲಿ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದೆನು.
ಮೋದಿ ಜೀ ಅವರ ಜನಸೇವೆ, ಸುಶಾಸನ ಹಾಗೂ ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಸಾಧನೆಗಳ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದೆನು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದೆನು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ, ಬಿಜೆಪಿ ಮುಖಂಡರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
#SevaSankalpAbhiyan
#MeraSapnoKaBharat
#BJPKarnataka
ಉತ್ತಮ ಸಂಪರ್ಕದಿಂದ ವೇಗದ ಪ್ರಗತಿ; ಬಲಿಷ್ಠ ಮೂಲಸೌಕರ್ಯದಿಂದ ವಿಕಸಿತ ಭಾರತ.
ಪಿಎಂ ಗತಿಶಕ್ತಿ ಯೋಜನೆಯ ಮೂಲಕ ರಸ್ತೆ, ರೈಲು, ಬಂದರು ಸೇರಿದಂತೆ ವಿವಿಧ ವಲಯಗಳ ಮೂಲಸೌಕರ್ಯ ಅಭಿವೃದ್ಧಿಯನ್ನು ಸಮಗ್ರ ದೃಷ್ಟಿಕೋನದೊಂದಿಗೆ ಮುನ್ನಡೆಸಲಾಗುತ್ತಿದೆ. ಪ್ರಧಾನಿ ಶ್ರೀ @narendramodi ಅವರ ನೇತೃತ್ವದಲ್ಲಿ ಪ್ರಕ್ರಿಯೆಗಳ ಸರಳೀಕರಣ, ಉತ್ತಮ ಸಮನ್ವಯ ಮತ್ತು ವೇಗದ ಅನುಷ್ಠಾನಕ್ಕೆ ಒತ್ತು ನೀಡಲಾಗುತ್ತಿದೆ.
ಬಲಿಷ್ಠ ಸಂಪರ್ಕ ಜಾಲದ ಮೂಲಕ ಭಾರತದ ಅಭಿವೃದ್ಧಿಯ ಪಯಣವನ್ನು ಮತ್ತಷ್ಟು ವೇಗಗೊಳಿಸುವ ದಿಟ್ಟ ಹೆಜ್ಜೆ.
#PMGatiShakthi
What a spectacular victory for Team India!
A thrilling contest, a determined performance, and a moment of immense pride for every Indian. Our champions have once again proved their mettle and brought home the Gold at Asian Games 2026. 🏆
Heartiest congratulations to the entire team. May the Tricolour continue to soar higher! 🇮🇳
#INDvsPAK #AsianGames2026 #GoldMedal
When Dimagi Naxal brigade is trying to stoke flames , a responsible Govt is working relentlessly to bid goodbye to another major problem affecting the countrymen .
ಭಾರತದ ಕ್ರೀಡಾ ಭವಿಷ್ಯವನ್ನು ನಿರ್ಮಿಸುವುದು ಕೇವಲ ಮೂಲಸೌಕರ್ಯಗಳನ್ನು ನಿರ್ಮಿಸುವುದಲ್ಲ; ಪ್ರತಿಯೊಂದು ಪ್ರತಿಭೆಗೂ ಬೆಳೆಯಲು ಅವಕಾಶ ನೀಡುವ ಕ್ರೀಡಾ ಸಂಸ್ಕೃತಿಯನ್ನು ರೂಪಿಸುವುದಾಗಿದೆ.
ತಳಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಗುಣಮಟ್ಟದ ತರಬೇತಿ ಮತ್ತು ವಿಶ್ವಮಟ್ಟದ ಅವಕಾಶಗಳನ್ನು ಒದಗಿಸುವ ಮೂಲಕ ಯುವ ಕ್ರೀಡಾಪಟುಗಳು ದೊಡ್ಡ ಕನಸು ಕಾಣಲು ಮೋದಿ ಸರ್ಕಾರ ಪ್ರೋತ್ಸಾಹಿಸುತ್ತಿದೆ.
ಏಕೆಂದರೆ, ಬಲಿಷ್ಠ ಕ್ರೀಡಾ ವ್ಯವಸ್ಥೆಯೇ ಆತ್ಮವಿಶ್ವಾಸವುಳ್ಳ, ಶಿಸ್ತಿನ ಮತ್ತು ಸಮರ್ಥ ಯುವ ಪೀಳಿಗೆಯ ಅಡಿಪಾಯವಾಗಿದೆ.
#SevaSankalpAbhiyan
#NamoSevaAnkahiKahaniyan
Heartfelt birthday greetings to Hon’ble Union Minister for Tourism & Culture, Shri Gajendra Singh Shekhawat Ji. Your commitment to taking India’s rich heritage, culture and tourism to greater heights is truly admirable. May Maa Bharati bless you with good health, happiness and strength to continue serving the nation with dedication.
@gssjodhpur
ಸೇವಾ ಸಂಕಲ್ಪದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವತಿಯಿಂದ ಹುಬ್ಬಳ್ಳಿಯ ದುರ್ಗದ ಬೈಲ್ ಸರ್ಕಲ್ ನಲ್ಲಿ ಇಂದು ಹಮ್ಮಿಕೊಂಡಿದ್ದ 'ನಮೋ ಸೇವಾ ಗಾಥಾ- ಬೀದಿ ನಾಟಕ' ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದೆನು.
ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ @narendramodi ಜೀ ಅವರ ಸಾಧನೆಗಳನ್ನು ಬಿಂಬಿಸುವ ದೃಶ್ಯಗಳನ್ನು ರಂಗ ಮತ್ತು ಸಿನಿಮಾ ಕಲಾವಿದರು ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಲಿಂಗರಾಜ ಪಾಟೀಲ, ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷರಾದ ಮಂಜುನಾಥ ಕಾಟಕರ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಸಭಾ ನಾಯಕರಾದ ಶಿವು ಮೆಣಸಿನಕಾಯಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.
#SevaSankalpAbhiyan @BJP4Karnataka@BJP4India@blsanthosh@NitinNabin
A Golden Moment for Indian Women’s Hockey!
Heartiest congratulations to the Indian Women’s Hockey Team for scripting a remarkable chapter in Indian sporting history at the Asian Games 2026 in Nagoya, Japan.
In a thrilling final, our women displayed tremendous determination and composure to defeat China 1–0 and secure the Gold Medal, ending a 44-year wait for the Asian Games title.
A special appreciation to Lalremsiami for the decisive goal and to Savita Punia for her outstanding performance between the posts. Every member of the team has made the nation proud with their hard work, courage and fighting spirit.
This historic triumph also secures India’s direct qualification for the 2028 Los Angeles Olympics, giving Indian hockey another reason to look forward with confidence.
A proud day for every Indian.
Congratulations, Champions! 🇮🇳🏆
#AsianGames2026 #IndianWomensHockey #Hockey #GoldMedal #TeamIndia
ಗಾಂಧೀ ಜಯಂತಿ ಹಾಗೂ ಶಾಸ್ತ್ರೀ ಜಯಂತಿ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಅಂಗವಾಗಿ ಇಂದು ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಸರಳತೆ, ಸತ್ಯ, ಶಿಸ್ತು, ಸ್ವಚ್ಛತೆ ಹಾಗೂ ದೇಶಸೇವೆಯ ಮೌಲ್ಯಗಳನ್ನು ತಮ್ಮ ಬದುಕಿನ ಮೂಲಕ ತೋರಿದ ಈ ಮಹನೀಯರ ಆದರ್ಶಗಳು ಸದಾ ನಮಗೆ ದಾರಿದೀಪವಾಗಿವೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ, ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಮಹಾನಗರ ಪಾಲಿಕೆ ಸದಸ್ಯರು, ಪೌರಕಾರ್ಮಿಕರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
Gandhi Jayanti & Lal Bahadur Shastri Jayanti
On the birth anniversaries of Mahatma Gandhi and Bharat Ratna Shri Lal Bahadur Shastri Ji, paid floral tributes and offered my respectful homage to these great leaders.
Their lives and ideals of truth, simplicity, discipline, cleanliness and dedicated service to the nation continue to inspire generations.
Union Minister Shri @JoshiPralhad, MLA Shri @MTenginkai , BJP District President Shri Tippanna Majjagi, elected representatives, sanitation workers and other dignitaries were present on the occasion.
#GandhiJayanti #LalBahadurShastriJayanti
ಸ್ವಚ್ಛ ವಾರ್ಡ್ – ಸುಂದರ ವಾರ್ಡ್ 🧹
ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 36, 37 ಹಾಗೂ 38ರಲ್ಲಿ ಆಯೋಜಿಸಿದ್ದ ‘ಸ್ವಚ್ಛ ವಾರ್ಡ್ – ಸುಂದರ ವಾರ್ಡ್’ ಜಾಗೃತಿ ಅಭಿಯಾನದಲ್ಲಿ ಮಾನ್ಯ ಕೇಂದ್ರ ಸಚಿವರಾದ ಶ್ರೀ @JoshiPralhad ಅವರೊಂದಿಗೆ ಭಾಗವಹಿಸಲಾಯಿತು.
ಸ್ವಚ್ಛತೆ ಕೇವಲ ಒಂದು ದಿನದ ಅಭಿಯಾನವಲ್ಲ, ಅದು ಪ್ರತಿಯೊಬ್ಬರ ದೈನಂದಿನ ಜವಾಬ್ದಾರಿ. ನಮ್ಮ ಮನೆ, ರಸ್ತೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಆರೋಗ್ಯಕರ ಸಮಾಜ ನಿರ್ಮಿಸೋಣ.
ಸ್ವಚ್ಛತೆಯೇ ಸೇವೆ, ಸ್ವಚ್ಛತೆಯೇ ಸಂಕಲ್ಪ!
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ @MTenginkai , ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಮಹಾನಗರ ಪಾಲಿಕೆ ಸದಸ್ಯರು, ಪೌರಕಾರ್ಮಿಕರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
#SwachhBharatAbhiyan #SwachhWardSundarWard.
@BJP4Karnataka@BJP4India@blsanthosh@NitinNabin@narendramodi
ಮಾಜಿ ಪ್ರಧಾನಮಂತ್ರಿ, ಭಾರತ ರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
ಸರಳತೆ, ಪ್ರಾಮಾಣಿಕತೆ, ಶಿಸ್ತು ಮತ್ತು ದೇಶಭಕ್ತಿಯ ಪ್ರತೀಕವಾಗಿದ್ದ ಶಾಸ್ತ್ರಿ ಜೀ ಅವರ ಜೀವನ ನಮಗೆ ಸದಾ ಪ್ರೇರಣೆಯಾಗಿದೆ. “ಜೈ ಜವಾನ್, ಜೈ ಕಿಸಾನ್” ಎಂಬ ಅವರ ಘೋಷಣೆ ದೇಶದ ಸೈನಿಕರು ಹಾಗೂ ರೈತರ ಮಹತ್ವವನ್ನು ಸಾರುತ್ತದೆ.
ದೇಶದ ಏಕತೆ, ಸಮೃದ್ಧಿ ಮತ್ತು ಸ್ವಾವಲಂಬನೆಗಾಗಿ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ.
ಶಾಸ್ತ್ರಿ ಜಯಂತಿಯ ಹಾರ್ದಿಕ ಶುಭಾಶಯಗಳು. 🙏
On the birth anniversary of former Prime Minister and Bharat Ratna Shri Lal Bahadur Shastri, I pay my respectful tributes.
A symbol of simplicity, integrity, discipline and patriotism, Shastri Ji’s life continues to inspire every Indian. His timeless call, “Jai Jawan, Jai Kisan,” beautifully recognised the vital contribution of our soldiers and farmers.
His dedication to the unity, progress and self-reliance of India will always be remembered.
Warm wishes on Shastri Jayanti. 🙏
#LalBahadurShastri
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು. ಸತ್ಯ, ಅಹಿಂಸೆ ಹಾಗೂ ಸರಳತೆಯ ಅವರ ಆದರ್ಶಗಳು ಸದಾ ನಮಗೆ ಪ್ರೇರಣೆಯಾಗಲಿ.
ಗಾಂಧೀ ಜಯಂತಿಯ ಹಾರ್ದಿಕ ಶುಭಾಶಯಗಳು.
On the birth anniversary of Mahatma Gandhi, I pay my respectful tributes to him. May his timeless ideals of truth, non-violence and simplicity continue to inspire us.
Warm wishes on Gandhi Jayanti.
#GandhiJayanti
ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಮತ್ತೊಂದು ಬೃಹತ್ ಮೈಲಿಗಲ್ಲು!
🔹13,186 ಹೊಸ MBBS ಸೀಟುಗಳಿಗೆ ನೂತನ ಅನುಮೋದನೆ
🔹 ರಾಷ್ಟ್ರೀಯ ಒಟ್ಟು ಸೀಟುಗಳು: 1,40,214 (836 ಕಾಲೇಜು
🔹ಕರ್ನಾಟಕಕ್ಕೆ ದೇಶದಲ್ಲೇ ಪ್ರಥಮ ಸ್ಥಾನ: 1,650 ಹೊಸ ಸೀಟುಗಳು (ಒಟ್ಟು: 15,745)
ಪ್ರಧಾನಮಂತ್ರಿ ಶ್ರೀ @narendramodi ಅವರ ದೂರದೃಷ್ಟಿಯಿಂದ ನಮ್ಮ ಯುವ ವೈದ್ಯಕೀಯ ಆಕಾಂಕ್ಷಿಗಳ ಕನಸುಗಳಿಗೆ ನವ ಚೈತನ್ಯ ಸಿಕ್ಕಿದೆ.
#MedicalSeats #YouthOpportunities
Governance that puts people first!
At the #100YearsOfUPSC celebrations, PM Shri @narendramodi Ji, highlighted three pillars of India’s new work culture: Pro-People, Pro-Active and Good Governance.
Anticipate challenges, innovate solutions and make governance simpler for every citizen. 🇮🇳
#GoodGovernance
ಅನ್ನದಾತರ ಹಿತಕ್ಕೆ ಮೋದಿ ಸರ್ಕಾರದ ಮತ್ತೊಂದು ಮಹತ್ವದ ಹೆಜ್ಜೆ!
ಪ್ರಧಾನಿ ಶ್ರೀ @narendramodi ಜಿ ಅವರ ನೇತೃತ್ವದಲ್ಲಿ, 2026-27ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕದ ರೈತರಿಂದ MSP ಅಡಿಯಲ್ಲಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
#FarmersFirst#ModiForFarmers
ಅನ್ನದಾತನ ಶ್ರಮಕ್ಕೆ ಮತ್ತಷ್ಟು ಬಲ!
ಪ್ರಧಾನಮಂತ್ರಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರವು 2027-28ರ ರಬಿ ಬೆಳೆಗಳಿಗೆ ನೂತನ ಕನಿಷ್ಠ ಬೆಂಬಲ ಬೆಲೆ (MSP) ಘೋಷಿಸಿದೆ.
ಗೋಧಿ ₹2,610 | ಜೋಳ? ₹2,286 | ಕಡಲೆ ₹5,958 | ಮಸೂರ ₹7,390 | ಸಾಸಿವೆ ₹6,613 | ಕುಸುಮೆ ₹7,215
ಉತ್ಪಾದನಾ ವೆಚ್ಚದ ಮೇಲೆ 50%ರಿಂದ 106%ವರೆಗೆ ಮಾರ್ಜಿನ್ — ರೈತರ ಕಲ್ಯಾಣಕ್ಕೆ ಮೋದಿ ಸರ್ಕಾರದ ಮತ್ತೊಂದು ಮಹತ್ವದ ಹೆಜ್ಜೆ! 🇮🇳🌾
#MSP #RabiCrops #FarmersFirst
Captain Smit Machchhar has shown the true meaning of courage, duty and sacrifice.
Even in the face of grave danger and while seriously injured, he remained steadfast and put the safety and lives of others before his own. His extraordinary bravery and presence of mind helped save hundreds of lives and prevented what could have been an unimaginable tragedy.
Such courage does not come from strength alone. It comes from an unwavering sense of duty, deep compassion and the determination to stand firm when others are in danger.
The nation salutes Captain Smit Machchhar for his exceptional valour and selfless service. His courage will continue to inspire countless Indians and remind us of the dedication with which our armed forces protect and serve the nation.
India stands with Captain Machchhar and his family during this difficult time. May he recover swiftly, regain his strength and return to good health.
Our prayers and gratitude are with this brave son of India. Jai Hind! 🇮🇳