ಜಗತ್ತಿನ ಹಲವಾರು ದೇಶಗಳು ತಮ್ಮ ಕಲಿಕೆಯ ವ್ಯವಸ್ಥೆಯನ್ನು ತಾಯ್ನುಡಿ ಮಾಧ್ಯಮದಲ್ಲಿ ಕಟ್ಟುವುದರ ಮೂಲಕ ಹೇಗೆ ಬೆಳವಣಿಗೆ ಕಂಡಿವೆ, ಅನ್ನುವುದನ್ನು ‘Mothertongue Education’ ಪುಸ್ತಕ ಒಳಗೊಂಡಿದೆ. ಈ ಕುರಿತು ಒಂದು ಸಂವಾದ ಪುಸ್ತಕದ ಲೇಖಕರಾದ ‘ಎಚ್. ಎನ್. ಫಣೀಶ್’ ಅವರೊಂದಿಗೆ ಬನ್ನಿ, ಪಾಲ್ಗೊಳ್ಳಿ!
https://t.co/1iQUiJgA3E
ಉರು ಬಟ್ಟಲಿನಲ್ಲಿ (fuel cell) ಹೆಚ್ಚಾಗಿ ಹೈಡ್ರೋಜನ್ ಗಾಳಿಯನ್ನು ಉರುವಲಾಗಿ ಬ���ಸಿದರೂ ಈ ಬರಹದಲ್ಲಿ ತಿಳಿಸಲಾದ ’ಒಲೆಯಿಂದ ಕರೆಂಟ್’ ಪಡೆಯುವ ಸಲಕರಣೆಯಲ್ಲಿ, ಇದ್ದಿಲಿನಲ್ಲಿರುವ ಕರಿಗೆಯನ್ನು (ಕಾರ್ಬನನ್ನು) ಉರುವಲಾಗಿ ಬಳಸಲಾಗುತ್ತದೆ.
https://t.co/LKu9qW8ElD
ಇತ್ತೀಚಿನ ವರುಶಗಳಲ್ಲಿ ಹಲವಾರು ಕಡೆ ಬಳಕೆಯಾಗುತ್ತಿರುವ ಉರು ಬಟ್ಟಲು (fuel cell) ಹಿಂದಿರುವ ಚಳಕವೆಂದರೆ ಹೈಡ್ರೋಜನ್ ನಂತಹ ಉರುವಲು ಗಾಳಿ ಮತ್ತು ಉಸಿರುಗಾಳಿಯನ್ನು (ಆಕ್ಸಿಜನ್) ಎಡೆಬಿಡದ ರಾಸಾಯನಿಕ ಒಡನಾಟಕ್ಕೆ ಒಳಪಡಿಸಿ ಕರೆಂಟನ್ನು ಪಡೆಯುವುದು.
https://t.co/LKu9qW86w5
ಉರಿಯುತ್ತಿರುವ ಇದ್ದಿಲ ಒಲೆಯಲ್ಲಿ ಚಿಕ್ಕ ಕೋಲಿನಂತೆ ಕಾಣು��� ಉರುಬಟ್ಟಲು(fuel cell) ಇಟ್ಟಾಗ ತುಸು ಹೊತ್ತಿನಲ್ಲಿಯೇ ಉರುಬಟ್ಟಲಿನ ಇನ್ನೊಂದು ತುದಿಯಲ್ಲಿ ಕರೆಂಟ್ ಹರಿಯ ತೊಡಗುತ್ತದೆ. ಈ ಕರೆಂಟನ್ನ ಅಲೆಯುಲಿಗೆ (ಮೊಬೈಲ್) ಹುರುಪು ತುಂಬಲು, ಚಿಕ್ಕ ದೀಪ ಬೆಳಗಿಸಲು / ಇನ್ನಾವುದೋ ಚಿಕ್ಕ ಸಲಕರಣೆ ನಡೆಸಲು ಬಳಸಬಹುದು
https://t.co/LKu9qW86w5
ಈಜುವಾಗ ಎದುರಾಗುವ ನೀರಿನ ಇದಿರು ಸೆಳೆತವನ್ನು ಕಡಿಮೆ ಮಾಡುವಲ್ಲಿ ಶಾರ್ಕ್ಗಳಿಗೆ ಅವುಗಳ ಪೊರೆ ನೆರವಾಗುತ್ತದೆ. ಇದನ್ನು ಬಳಸಿಕೊಂಡು ಸ್ಪೀಡೋ ಎಂಬ ಕಂಪನಿ ಚುರುಕು-ಈಜುಡುಗೆಗಳನ್ನು ಹೊರತಂದಿದೆ.
https://t.co/TSuBt2IULd
4×2 ಗಾಡಿಗಳಲ್ಲಿ ಮೊದಲು ಕಸುವು ಮುಂದಿನ ಇಲ್ಲವೇ ಹಿಂದಿನ ಎರಡು ಗಾಲಿಗಳಿಗೆ ಮೊದಲು ತಲುಪಿ, ನಂತರ ಅವುಗಳು ಇತರೆ 2 ಗಾಲಿಗಳನ್ನು ಎಳೆದು ಗಾಡಿ ಸಾಗುವಂತೆ ನೋಡಿಕೊಳ್ಳುತ್ತವೆ. ಮೊದಲು ಕಸುವನ್ನು ತಲುಪುವ ಎರಡು ಗಾಲಿಗಳು ಹಿಂಬದಿಯವು ಇಲ್ಲವೇ ಮುಂಬದಿಯವು ಆಗಿರಬಹುದು.
https://t.co/6aGmiZbmuP
ಬಿಣಿಗೆಯಲ್ಲಿ ಉರುವಲು ಉರಿದು ನೀಡುವ ಕಸುವು, ಸಾಗಣಿಯ ಮೂಲಕ ಆಯಾ ಗಾಲಿಗಳಿಗೆ ಸಾಗಿದಾಗ ಅವುಗಳು ಗಾಡಿಯನ್ನು ಮುಂದಕ್ಕೆಳೆಯುತ್ತವೆ 4×4 ಡ್ರೈವ್ಟ್ರೈನ್ ಇರುವ ಗಾಡಿಗಳಲ್ಲಿ, ಇಂಜೀನ್ ಎಲ್ಲ ಗಾಲಿಗಳಿಗೆ ಒಟ್ಟಿಗೆ ಕಸುವನ್ನು ನೀಡ��� ಸೆಳೆಬಲದ(Torque) ಮೂಲಕ. ಗಾಡಿ ಸುಲಭವಾಗಿ ಮುಂದೆ ಸಾಗಬಹುದು
https://t.co/6aGmiZbmuP
4×4 ಎಂದರೆ, ಗಾಡಿಯ ಎಲ್ಲ ನಾಲ್ಕು ಗಾಲಿಗಳಿಗೆ ಒಂದೇ ಸಮಯದಲ್ಲಿ ಕಸುವನ್ನು ಗಾಡಿ ಕಳಿಸುವುದು. ಎಲ್ಲ ಬಂಡಿಗಳು ಡ್ರೈವ್ಟ್ರೈನ್ ಹೊಂದಿರುತ್ತವೆ, ಒಂದು 4×2 ಇಲ್ಲವೇ 4X4 ಡ್ರೈವ್ಟ್ರೈನ್. ಡ್ರೈವ್ಟ್ರೈನ್ ಇದು ಗಾಡಿಯ ಬಿಣಿಗೆ(Engine) ಕಸುವನ್ನು ಗಾಲಿಗಳಿಗೆ ಸಾಗಿಸುವ ಏರ್ಪಾಟು
https://t.co/6aGmiZaOFh
ಸಾಮಾನ್ಯವಾಗಿ ಎಸ್ಯುವಿ, ಪಿಕ್ಅಪ್ ಟ್ರಕ್ ಇಲ್ಲವೇ ಸಿರಿತನದ ಕಾರುಗಳಲ್ಲಿ 4X4 ಬರೆದಿರುವುದನ್ನು ನೋಡಿರುತ್ತೀರಿ. ಹೀಗೆಂದರೇನು? ಯಾವ ಕಾರಣಕ್ಕೆ ಗಾಡಿಗಳ ಮೇಲೆ ಹೀಗೆ ಬರೆಯುತ್ತಾರೆಂದು ಹಲವರಿಗೆ ಕುತೂಹಲ ಮೂಡುವುದು ಸಹಜ.
https://t.co/6aGmiZbmuP
ಈ ಹಣ್ಣಿನ ಹೊರಮಯ್ಯಿ ��ಕಾರದಲ್ಲಿ ಕಟ್ಟಡವನ್ನು ಮಾಡಿದ್ದರಿಂದ, ಸೂರ್ಯನ ಬೆಳಕು ಬೀಳುವ ಕೋನಕ್ಕೆ ತಕ್ಕಂತೆ ಅದು ದಿನವಿಡೀ ಹೊಂದಿಕೊಳ್ಳುತ್ತಾ ಹೋಗುತ್ತದೆ. ಇದರಿಂದಾಗಿ ಹಾಯನಿಸುವ ಬೆಳಕಿನ ಮತ್ತು ನೆರಳಿನ ಬೆರೆತ ಈ ಕಟ್ಟಡದಲ್ಲಿ ಉಂಟಾಗಿದೆ.
https://t.co/TSuBt2ImVF
ಬಾನಿನಿಂದ ನೆಗೆಯುವುದು ಒಂದು ಸಾಹಸದ ಆಟದಂತೆ ಅನಿಸಿದರೂ ಅದರ ಹಿಂದಿರುವ ವಿಜ್ಞಾನ ವಿಶೇಷವಾದದ್ದು. ಈ ವಿಡಿಯೋದಲ್ಲಿ ಬಾನ್ನೆಗೆತ ಅಂದರೆ ಸ್ಕೈ ಡೈವಿಂಗ್ ಕುರಿತು ಮಾಹಿತಿ ಒದಗಿಸಲಾಗಿದೆ.
https://t.co/OMb2H8F3g6
#ಕನ್ನಡದಲ್ಲಿಅರಿಮೆ#ಅರಿಮೆ#ತಿಳಿ#tili#ವಿದ್ಯಾರ್ಥಿಗಳಕಲಿಕೆಗೆಪೂರಕ