*ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?.......*
*ಅಂದು ಉತ್ತರ ಕರ್ನಾಟಕ: ಇಂದು ದಕ್ಷಿಣ ಕರ್ನಾಟಕ.*
*PDO ಮರುಪರೀಕ್ಷೆ ಆಗಲೇಬೇಕು*
*ಮಾನ್ಯ ಶ್ರೀ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ರವರಿಗೆ ದಿನಾಂಕ 8/12/2024 ರಂದು ನಡೆದ "ಪಂಚಾಯತ್ ಅಭಿವೃದ್ಧಿ ಅಧಿಕಾರಿ" ಪರೀಕ್ಷೆಯಲ್ಲಿ PSI-545 ಹಗರಣದ ಮಾದರಿಯಲ್ಲಿಯೇ ಬ್ಲೂಟುತ್ ಸದ್ದು ಮಾಡಿದೆ... ಕೇವಲ ತುಮಕೂರುನಲ್ಲಿ ಒಬ್ಬ ಅಭ್ಯರ್ಥಿ ಬ್ಲೂಟುತ ಬಳಸಿಲ್ಲ, ಇದರ ಹಿಂದೆ ಒಂದು ದೊಡ್ಡ ಗ್ಯಾಂಗ್ ಇದೆ.*
*ನಮಗೆಲ್ಲ ನೆನಪಿದೆ ಮಾನ್ಯರೇ, ತಾವೇ ಮುಂದಾಳತ್ವ ವಹಿಸಿಕೊಂಡು PSI ಹಗರಣವನ್ನು ಬಯಲಿಗೆಳೆದು, ಅಕ್ರಮದ ಅಪರಾಧಿಗಳಿಗೆ ಜೈಲುಗಂಬಿ ಎಣಿಸಲಿಕ್ಕೆ ಹಚ್ಚಿದಿರಿ... PDO HK ಮತ್ತು NON HK ಪರೀಕ್ಷೆಯಲ್ಲಿ "ಬ್ಲೂಟುತ್ ಬಳಕೆ"ಮತ್ತು "ಪ್ರಶ್ನೆ ಪತ್ರಿಕೆ ಸೋರಿಕೆ" ಆಗಿರುವುದು ಜಗತ್-ಜಾಹಿರ ವಾಗಿದೆ... ಬಡ ಅಭ್ಯರ್ಥಿಗಳು 5-6 ವರ್ಷದಿಂದ ಪರೀಕ್ಷೆಗೆ ಹಗಲು-ರಾತ್ರಿ ತಯಾರಿ ನಡೆಸಿದ್ದರು ... ಅಕ್ರಮವಾಗಿ ಸರ್ಕಾರಿ ಹುದ್ದೆಗಳು ಮಾರಾಟ ವಾದರೆ, ಪ್ರತಿಭಾನ್ವಿತ ಬಡ ಅಭ್ಯರ್ಥಿಗಳ ಗತಿಯೇನು? ಇದಕ್ಕೆ ಉತ್ತರ ತಾವು ಕೊಡಬೇಕು. ಯುವಕರ ಕಣ್ಮಣಿ ನೀವು, ನಿಮ್ಮ ಮೇಲೆ ಲಕ್ಷಾಂತರ ಅಭ್ಯರ್ಥಿಗಳು ಭರವಸೆ ಇಟ್ಟಿದ್ದಾರೆ.... ಇದಕ್ಕೆ ಪರಿಹಾರ ಹುಡಿಕಿ, ಅಕ್ರಮದಲ್ಲಿ ಭಾಗಿಯಾದ ಆರೋಪಿಗಳಿಗೆ ಜೈಲಿಗಟ್ಟಿಸಿ, "ಮರುಪರೀಕ್ಷೆ "ನಡೆಸುವಂತೆ KPSC ಗೆ ಅದೇಶಿಸಬೇಕೆಂದು AKSSA ಸಂಘಟನೆ ಪರವಾಗಿ ಕೇಳಿಕೊಳ್ಳುತ್ತೇವೆ*
(@AKSSAofficial ) @secretarykpsc@shalinirajnish@siddaramaiah@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@BasanagoudaBJP@RAshokaBJP@BYVijayendra@INCIndia@INCKarnataka@BJPindia__@BJPKarnataka
Village accountant ಪರೀಕ್ಷೆ ನಡೆಸಿದಂತ KEA ಇಂದು ಕೀ ಉತ್ತರಗಳನ್ನು ಹೊರಡಿಸಿರುತ್ತೀರಿ ನೀವು ಹೊರಡಿಸಿರುವ ಕೀ ಉತ್ತರಗಳಲ್ಲಿ ಸಾಕಷ್ಟು ತಪ್ಪಾಗಿದ್ದು ವಿದ್ಯಾರ್ಥಿಗಳಿಗೆ ಗೊಂದಲವನ್ನು ಉಂಟು ಮಾಡಿದೆ
executive director ಪ್ರಸನ್ನ ಕುಮಾರ್ sir ರವರಿಗೆ ಮನವಿ ಮಾಡಿಕೊಳ್ಳುವುದು ಈ ಕೂಡಲೇ VAO ಮತ್ತು PSI 402 revised ಕೀ ಉತ್ತರಗಳನ್ನು ಸರಿಪಡಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. @KEA_karnataka@siddaramaiah
545 ಪೊಲೀಸ್ ಸಬ್ಇ ನ್ಸ್ಪೆಕ್ಟರ್ ಹುದ್ದೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದು ಖಂಡನೀಯ. ಈಗಾಗಲೇ, ಪರೀಕ್ಷಾರ್ಥಿಗಳು ಸಾಕಷ್ಟು ಮಾನಸಿಕವಾಗಿ ನೊಂದಿದ್ದು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಸದಾ ಬೇಜವಾಬ್ದಾರಿ ಹೇಳಿಕೆ ಕೊಡುವುದರಲ್ಲಿ ನಿರತರಾಗಿರುವ ಗೃಹ ಮಂತ್ರಿಗಳು ಹಾಗೂ ಆದ್ಯತೆಗಳನ್ನು ಬಿಟ್ಟು ಮತ ಬ್ಯಾಂಕ್ ಬಲವರ್ಧನೆಯಲ್ಲಿ ನಿರತರಾಗಿರುವ ಸರ್ಕಾರಕ್ಕೆ ಅಭ್ಯರ್ಥಿಗಳ ಕಷ್ಟ ಕಾರ್ಪಣ್ಯಗಳು ಅರ್ಥವಾಗುತ್ತಿಲ್ಲ. ಸಕಾಲದಲ್ಲಿ ಫಲಿತಾಂಶಗಳನ್ನು ಪ್ರಕಟ ಮಾಡಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕಾಗಿದ್ದ ಸರ್ಕಾರ ಮೀನಾ ಮೇಷ ಎಣಿಸುತ್ತಿರುವುದು ಇವರ ಅಸಾಮರ್ಥ್ಯ ತೋರಿಸುತ್ತದೆ.
ಈ ಕೂಡಲೇ ಪಿ.ಎಸ್.ಐ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡದೆ ಇದ್ದಲ್ಲಿ, ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ.
#545PSIresults I #Congressfailedyouth I @CMofKarnataka I @DrGParameshwara I @VijayaKarnataka I @Vijayavani_Digi I @Prajavani I @AsianetNewsSN I @NewsFirstKan I @HosadiganthaWeb I @OneindiaKannada I
ಕೆಪಿಟಿಸಿಎಲ್ ನ ಲೈನ್ ಮ್ಯಾನ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನಿಶ್ ಮೇಡಂ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಸತ್ಯವತಿ ಮೇಡಂ ಅವರಿಗೂ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅಕ್ಟೋಬರ್ 21ರ ಸೋಮವಾರ ಬೆಳಗ್ಗೆ 12 ಗಂಟೆಗೆ ಬೆಂಗಳೂರಿನ ಕೆಪಿಟಿಸಿಎಲ್ ಕಚೇರಿ ಬಳಿ ಬರಬೇಕೆಂದು ಮನವಿ ಮಾಡಿಕೊಳ್ಳತ್ತಿದ್ದೇವೆ.
ಧನ್ಯವಾದಗಳು 🙏 @thekjgeorge@siddaramaiah@kptcl_official
🇮🇳ಸರ್ಕಾರಕ್ಕೆ ಬಡವರ್ಗದ ಆಕಾಂಕ್ಷಿಗಳ ಹೃದಯಪೂರ್ವಕ ಮನವಿ 🇮🇳
@kptcl_official@thekjgeorge
ಕೆಪಿಟಿಸಿಎಲ್ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ 2975 ಹುದ್ದೆಗಳಿಗೆ 10ನೇ ತರಗತಿ ಅಂಕಗಳ ಶೇಕಡವಾರು ಜೇಷ್ಠತೆಯ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸಬಾರದು ಎಂಬುದು AKSSA ಸಂಘಟನೆಯ ಪ್ರಬಲವಾದ ಒತ್ತಾಯವಾಗಿದೆ. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರವೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು ಎನ್ನುವುದು ಸಂಘಟನೆಯ ಮನವಿಯಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ ಮೂಲಕವೇ ನೇಮಕಾತಿ ಪ್ರಕ್ರಿಯೆ ಏಕೆಂದರೆ, ಕೆಪಿಟಿಸಿಎಲ್ ನ ಲೈನ್ ಮ್ಯಾನ್ ಹುದ್ದೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಬಡವರ್ಗದ, ತಳ ಸಮುದಾಯದ ಆಕಾಂಕ್ಷಿಗಳೇ ಹೆಚ್ಚಾಗಿ ಇದ್ದಾರೆ. ಇಂತಹ ಹುದ್ದೆಗಳು ಬಡವರ್ಗದ ಹುದ್ದೆಗಳು, ಈ ರೀತಿಯ ಹುದ್ದೆಗಳಲ್ಲಿ ನ್ಯಾಯ ಸಮ್ಮತ ನಿಯಮ, ಮಾದರಿಯನ್ನು ಅನುಸರಿಸಿದರೆ ಸಮಾಜದ ಕಟ್ಟ ಕಡೆಯ ವರ್ಗಕ್ಕೆ ನ್ಯಾಯ ಒದಗಿಸಿದಂತೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ವರ್ಗದ ಯುವಕರ ಆಕ್ರೋಶಕ್ಕೆ ಸರ್ಕಾರ ಗುರಿಯಾಗಬೇಕಾಗುತ್ತದೆ.
ಜೊತೆಗೆ, ಪೊಲೀಸ್ ಪೇದೆ (constable) ಆಕಾಂಕ್ಷಿಗಳು ಕೂಡ ಕೆಪಿಟಿಸಿಎಲ್ ನ ಲೈನ್ ಮ್ಯಾನ್ ಹುದ್ದೆಗಳ ಸ್ಪರ್ಧಾರ್ಥಿಗಳು ಆಗಿದ್ದಾರೆ. ಒಂದು ವೇಳೆ ಪೊಲೀಸ್ ಇಲಾಖೆಯಲ್ಲಿ ಹುದ್ದೆ ಪಡೆಯಲು ವಿಫಲವಾಗುವ ಅಭ್ಯರ್ಥಿಗಳು ಈ ಹುದ್ದೆಗಳನ್ನು ಪಡೆದು ತಮ್ಮ ಬಡ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಬಹುದು ಎಂಬ ಒಂದು ಸಣ್ಣ ಆಸೆಯನ್ನು ತಮ್ಮ ಮನದಲ್ಲಿ ಇರಿಸಿಕೊಂಡಿದ್ದಾರೆ.
ಈ ಕಾರಣಗಳಿಂದಾಗಿ ಲೈನ್ ಮ್ಯಾನ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕವೇ ನೇಮಕಾತಿ ಪ್ರಕ್ರಿಯೆ ಕೈಗೊಂಡು ರಾಜ್ಯದ ಬಡವರ್ಗದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರು ಮತ್ತು ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಕ್ಕೆ ನಮ್ಮ ಸಂಘಟನೆಯು ಒತ್ತಾಯಿಸುತ್ತಿದೆ.
ಕೊನೆಯ ಮಾತು:- " ಬಡ ಮಕ್ಕಳ ಕಣ್ಣೀರಿನ ಶಾಪದ ಬೆಂಕಿ ಯಾವುದೇ ಸರ್ಕಾರವನ್ನು ಸುಡದೆ ಸುಮ್ಮನೆ ಬಿಡುವುದಿಲ್ಲ" ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲಿ.
ಧನ್ಯವಾದಗಳು 🙏
💥 KPTCL ಅಭ್ಯರ್ಥಿಗಳ ಗಮನಕ್ಕೆ 💥
@KJGeorgeOffice@siddaramaiah@AKSSAofficial
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಿ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ 2975 ಹುದ್ದೆಗಳನ್ನು ಎಸ್ ಎಸ್ ಎಲ್ ಸಿ ಅಂಕಗಳು ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಧಿ ಸೂಚನೆ ಹೊರಡಿಸಲಾಗಿದೆ. ಆದರೆ ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಬೇಕೆಂದು ರಾಜ್ಯದ ಬಹುತೇಕ ಆಕಾಂಕ್ಷಿಗಳ ಬೇಡಿಕೆಯಾಗಿದೆ.
ಈ ಬಗ್ಗೆ ಈಗಾಗಲೇ ನಮ್ಮ ಸಂಘಟನೆಯಲ್ಲಿ ಆಂತರಿಕವಾಗಿ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಯಾವ ರೀತಿಯ ಹೋರಾಟ ಮಾಡಬೇಕೆಂಬ ಬಗ್ಗೆ ಆಕಾಂಕ್ಷಿಗಳೊಂದಿಗೆ ವಿಷಯವನ್ನು ಹಂಚಿಕೊಳ್ಳಲಾಗುವುದು. ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿ ಎಲ್ಲಾ ಆಕಾಂಕ್ಷಿಗಳಿಗೂ ನ್ಯಾಯ ಒದಗಿಸಲು ಸಂಘಟನೆಯೂ ಬದ್ಧವಾಗಿದೆ.
ಧನ್ಯವಾದಗಳು 🙏
@kptcl_official@KJGeorgeOffice@siddaramaiah
ಗೌರವಾನ್ವಿತರೇ,
KPTCL ನ Junior Powerman & Junior Station Attendant ಒಟ್ಟು 2,975 ಹುದ್ದೆಗಳಿಗೆ SSLC ಅಂಕಗಳು ಮತ್ತು ದೈಹಿಕ ಪರೀಕ್ಷೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಬದಲು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಬೇಕೆಂದು ಲಕ್ಷಾಂತರ ಅಭ್ಯರ್ಥಿಗಳ ಮನವಿ.
@siddaramaiah@CMofKarnataka
ಮರು ಪರೀಕ್ಷೆಯಿಂದ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸಿದ್ದಾರೆ ಆದರೆ ಇಂತಹ ಅತಿದೊಡ್ಡ ಪ್ರಮಾದಕ್ಕೆ ಕಾರಣಕರ್ತರಾದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಏಕೆ ಇಲ್ಲ ? ಮರು ಪರೀಕ್ಷೆಗೆ ಮುನ್ನ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ #KPSC_Mosa#KASReExam
@KEA_karnataka@CMofKarnataka@drmcsudhakar VAO ಹುದ್ದೆಗೆ ಅರ್ಜಿ ಸಲ್ಲಿಸಿದ್ದು ಪಾವತಿಯನ್ನು ಸಹ ಮಾಡಲಾಗಿರುತ್ತದೆ. ಪಾವತಿ ಸ್ಥಿತಿಯನ್ನು ಪರಿಶೀಲಿಸಿದಾಗ payment successful ಎಂದು ಬರುತಿದ್ದು ಆದರೆ ಅರ್ಜಿಯನ್ನು ಮುದ್ರಿಸಲು ಹೋದರೆ ನಿಮ್ಮ ಪಾವತಿ ಬಾಕಿ ಇದೆ ಎಂದು ಬರುತ್ತಿದ್ದೆ..... ದಯವಿಟ್ಟು ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಿಕೊಡಿ.
@KEA_karnataka
VAO ಹುದ್ದೆಗೆ ಅರ್ಜಿ ಸಲ್ಲಿಸಿದ್ದು ಪಾವತಿಯನ್ನು ಸಹ ಮಾಡಲಾಗಿರುತ್ತದೆ. ಪಾವತಿ ಸ್ಥಿತಿಯನ್ನು ಪರಿಶೀಲಿಸಿದಾಗ payment successful ಎಂದು ಬರುತಿದ್ದು ಆದರೆ ಅರ್ಜಿಯನ್ನು ಮುದ್ರಿಸಲು ಹೋದರೆ ನಿಮ್ಮ ಪಾವತಿ ಬಾಕಿ ಇದೆ ಎಂದು ಬರುತ್ತಿದ್ದೆ..... ದಯವಿಟ್ಟು ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಿಕೊಡಿ.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ಡ್ರಗ್ಸ್ ವಿರುದ್ಧ ಕಡಿವಾಣಕ್ಕೆ ಅಳಿಲು ಸೇವೆ ಸಲ್ಲಿಸಲಿದೆ
ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರು ಕಾಲೇಜುಗಳಿಗೆ ಭೇಟಿ ನೀಡಿ ಅರಿವಿನ ಕಾರ್ಯಕ್ರಮಗಳನ್ನು ಕೈಗೊಳ್ಳಲಿದ್ದಾರೆ
ಕರ್ನಾಟಕ ಡ್ರಗ್ಸ್ ಮುಕ್ತವಾಗಲಿ
@CMofKarnataka@siddaramaiah@DgpKarnataka
@KEA_karnataka ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಉಳಿದಿದ್ದ 670 ಹುದ್ದೆಗಳಿಗೆ ಪರೀಕ್ಷೆ ನಡೆಸಿ ವರ್ಷವಾಗುತ್ತಾ ಬಂದಿದೆ ಇನ್ನೂ ಕೂಡ ಅಂತಿಮ ಪಲಿತಾಂಶ ಪ್ರಕಟಗೊಂಡಿಲ್ಲ ಸ್ವಲ್ಪ ಬದ್ಧತೆ ಇದ್ದಾರೆ ಕೂಡಲೇ ಪಲಿತಾಂಶ ಬಿಡುಗಡೆಗೊಳಿಸಿ ;
ಇಲ್ಲದಿದ್ದರೆ ಮುಂದಿನ ದಿನದಲ್ಲಿ ವಿದ್ಯಾರ್ಥಿಗಳ ಆಕ್ರೋಶವನ್ನು ಎದುರಿಸಬೇಕಾಗುತ್ತದೆ
@drmcsudhakar