Today, SDPI Gurgunta submitted a memorandum to the PDO regarding the stray dog menace in Gurgunta. As the PDO was unavailable, it was handed over to the Accountant. We urge the authorities to take immediate and permanent action to ensure public safety. @CMofKarnataka @RaichurDc
ಇಂದು ಗುರುಗುಂಟ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಎಸ್ಡಿಪಿಐ ಗುರುಗುಂಟ ವತಿಯಿಂದ ಪಿಡಿಒ ಅವರಿಗೆ ಮನವಿ ಸಲ್ಲಿಸಲಾಯಿತು. ಪಿಡಿಒ ಅವರು ಸ್ಥಳದಲ್ಲಿರದ ಕಾರಣ ಮನವಿಯನ್ನು ಅಕೌಂಟೆಂಟ್ ಅವರಿಗೆ ಸಲ್ಲಿಸಲಾಯಿತು. ಸಾರ್ವಜನಿಕರ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ. #sdpi@ZPRaichur
The Gurgunta–Hutti Gold Mines main road is in a terrible condition. Huge potholes are putting the lives of thousands of workers, students, farmers, and commuters at risk every single day.
How long will this negligence continue?
#SDPI@IamGKumarNaik@CMofKarnataka@Manappadvajjal
सोशल डेमोक्रेटिक पार्टी ऑफ इंडिया जंतर-मंतर पर शांतिपूर्ण प्रदर्शन कर रहे युवाओं पर किए गए बर्बर लाठीचार्ज और न्याय, शिक्षा सुधार तथा रोजगार की मांग उठा रहे युवाओं के प्रति केंद्र सरकार के दमनकारी रवैये की कड़ी निंदा करती है। उनकी जायज़ मांगों पर संवेदनशीलता से विचार करने के बजाय सरकार ने बल प्रयोग और भय का रास्ता चुना है, जो लोकतांत्रिक मूल्यों और शांतिपूर्ण विरोध के संवैधानिक अधिकार पर सीधा हमला है। हम पुलिस कार्रवाई की निष्पक्ष जांच और दोषियों के विरुद्ध तत्काल जवाबदेही सुनिश्चित करने की मांग करते हैं।
@cockroachjantaparty #CJP #SDPI #JantarMantar
ರಾಜ್ಯ ರಾಜಧಾನಿ ಬೆಂಗಳೂರಿನ ಟೌನ್ ಹಾಲ್ನಲ್ಲಿ ಇಂದು ನಡೆದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಯುವ ಘಟಕವಾಗಿರುವ ಯಂಗ್ ಡೆಮಾಕ್ರೆಟ್ಸ್ ರಾಜ್ಯ ಯುವ ಅಸೆಂಬ್ಲಿ ಹಾಗೂ ರಾಜ್ಯ ಆರ್ಗನೈಸಿಂಗ್ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ನೂತನವಾಗಿ ರಾಜ್ಯ ಉಪ ಸಂಚಾಲಕರಾಗಿ ಆಯ್ಕೆಯಾದ ಆತ್ಮೀಯರೂ, ಹೋರಾಟಗಾರರು, ಬಂಟ್ವಾಳ ಪುರಸಭೆಯ ಮಾಜಿ ಉಪಾಧ್ಯಕ್ಷರಾದ #ಮೋನಿಶ್_ಅಲಿ @moonishbantwal ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐
ಯುವಕರ ಧ್ವನಿಯಾಗಿ, ಸಮಾಜದ ಹಿತಕ್ಕಾಗಿ ಹಾಗೂ ನ್ಯಾಯದ ಪರ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತಿರುವ ನಿಮ್ಮ ನಾಯಕತ್ವ ಇನ್ನಷ್ಟು ಬಲವಾಗಿ ಬೆಳೆಯಲಿ. ನಿಮ್ಮ ನೇತೃತ್ವದಲ್ಲಿ ಯಂಗ್ ಡೆಮಾಕ್ರೆಟ್ಸ್ ಸಂಘಟನೆ ರಾಜ್ಯದಾದ್ಯಂತ ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆದು, ಯುವಕರಿಗೆ ದಿಕ್ಕು ತೋರಿಸುವ ಶಕ್ತಿಯಾಗಿ ರೂಪುಗೊಳ್ಳಲಿ ಎಂದು ಹಾರೈಸುತ್ತೇನೆ.
ನಿಮ್ಮ ಮುಂದಿನ ಹಾದಿ ಯಶಸ್ಸಿನಿಂದ ಕೂಡಿರಲಿ. ಇನ್ನಷ್ಟು ಎತ್ತರಗಳನ್ನು ತಲುಪಲಿ ಎಂಬುದು ನಮ್ಮ ಹಾರೈಕೆ.
ಇಂಕಿಲಾಬ್ ಜಿಂದಾಬಾದ್
ಯಂಗ್ ಡೆಮಾಕ್ರೆಟ್ಸ್ ಜಿಂದಾಬಾದ್
At the Town Hall in Bengaluru, during the Young Democrats State Youth Assembly and the inauguration of the State Organizing Committee, heartfelt congratulations to Moonish Ali Shaah, activist and former Vice President of Bantwal Municipality, on being selected as the State Deputy Coordinator 💐
May your leadership grow stronger and guide the youth towards justice and social progress. Wishing you great success and greater heights ahead.
Inquilab Zindabad
Young Democrats Zindabad
#YoungDemocrats #StateYouthAssembly #SDPI #SDPIKarnataka #YouthPower #InquilabZindabad #PoliticalChange #Bengaluru #Leadership #YouthLeader
Condemn the Forcible Removal of Sonam Wangchuk and Fellow Protesters
Stop Suppressing Peaceful Democratic Protests
I strongly condemn the Modi Government's forcible removal of Sonam Wangchuk from Jantar Mantar, effectively crushing the peaceful protest he had sustained through a 21-day indefinite hunger strike in support of the movement against alleged irregularities in the NEET examination. Instead of engaging with the legitimate demands raised by Sonam Wangchuk and the protest committee, the government chose to use the court's directions as a pretext to suppress a peaceful and democratic expression of dissent. A government committed to democratic values should respond to public grievances through dialogue, not by silencing peaceful protests. I urge the Union Government to immediately address the demands raised by Sonam Wangchuk and the protest committee through meaningful engagement and ensure a just, transparent, and democratic resolution.
#SonamWangchuk #PeacefulProtest #RightToProtest
सोनम वांगचुक के अनिश्चितकालीन आमरण अनशन की लगातार अनदेखी लोकतांत्रिक मूल्यों के प्रति केंद्र सरकार की उदासीनता को दर्शाती है। शांतिपूर्ण विरोध का सम्मान करते हुए सरकार को तुरंत संवाद शुरू करना चाहिए, छात्रों और लद्दाख के लोगों की चिंताओं का समाधान करना चाहिए तथा न्याय, जवाबदेही और संविधान की भावना की रक्षा करनी चाहिए। #SonamWangchuk #Ladakh #Democracy #SDPI
I strongly condemn the forcible removal of Sonam Wangchuk from Jantar Mantar after his 21-day hunger strike. Peaceful democratic protests must be met with dialogue, not suppression. The Union Government must engage with the legitimate demands of the protest committee and ensure a just, transparent, and democratic resolution. #SonamWangchuk #RightToProtest #Democracy #Ladakh #NEET #SDPI
The Social Democratic Party of India strongly condemns the brutal lathi charge on peaceful protesters at Jantar Mantar and the Union government's repressive response to youth demanding justice, education reforms and employment. Instead of addressing their genuine concerns, the government has chosen intimidation and force, undermining democratic values and the constitutional right to peaceful protest. We demand an impartial inquiry into the police action and immediate accountability for those responsible. #SDPI #Jantarmantar #CJP
ಹುಬ್ಬಳ್ಳಿ ನಗರದ ವಾರ್ಡ್ ನಂ.79ರ ಎಸ್.ಎಂ. ಕೃಷ್ಣ ನಗರದಲ್ಲಿ SDPI ಕಾರ್ಯಕರ್ತರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳ ಮೇಲಿನ ನೇರ ದಾಳಿ. ಸ್ಥಳೀಯ ಸಮಸ್ಯೆಗಳ ಬಗ್ಗೆ ಕಾರ್ಪೊರೇಟರ್ ಅವರನ್ನು ಪ್ರಶ್ನಿಸಿದ ಕಾರಣಕ್ಕೆ, ಗುಂಪೊಂದು ಕಚೇರಿಯೊಳಗೆ ನುಗ್ಗಿ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ ಮತ್ತು ಅಸ್ವೀಕಾರಾರ್ಹ.
ಈ ದಾಳಿಯಲ್ಲಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿರುವುದು ಕಳವಳಕಾರಿ. ಜನರ ಪರವಾಗಿ ಧ್ವನಿ ಎತ್ತುವವರನ್ನು ಹಿಂಸೆಯಿಂದ ಮೌನಗೊಳಿಸಲು ಯತ್ನಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಪಾಯಕಾರಿಯಾಗಿದೆ.
ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡು ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು.
@HMOKarnataka @DGP_Karnataka @CPHubballi @DC_Dharwad
#Hubballi #SDPI #JusticeForSDPIWorkers #Democracy #Karnataka #StopPoliticalViolence
ಹುಬ್ಬಳ್ಳಿಯ ವಾರ್ಡ್ 79ರಲ್ಲಿ ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದ SDPI ಕಾರ್ಯಕರ್ತರ ಮೇಲೆ ಕಚೇರಿಯೊಳಗೆ ನುಗ್ಗಿ ನಡೆದಿರುವ ಭೀಕರ ಹಲ್ಲೆ ಖಂಡನೀಯ. ಪ್ರಶ್ನಿಸುವುದು ಪ್ರಜಾಪ್ರಭುತ್ವದ ಹಕ್ಕು. ರಾಜಕೀಯ ಒತ್ತಡಕ್ಕೆ ಮಣಿಯದೆ ಹಲ್ಲೆಕೋರರನ್ನು ತಕ್ಷಣ ಬಂಧಿಸಿ. @compolhdc@DgpKarnataka#Hubli#LawAndOrder
ರಾಜ್ಯ ರಾಜಧಾನಿ ಬೆಂಗಳೂರಿನ ಟೌನ್ ಹಾಲ್ನಲ್ಲಿ ಇಂದು ನಡೆದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಯುವ ಘಟಕವಾಗಿರುವ ಯಂಗ್ ಡೆಮಾಕ್ರೆಟ್ಸ್ ರಾಜ್ಯ ಯುವ ಅಸೆಂಬ್ಲಿ ಹಾಗೂ ರಾಜ್ಯ ಆರ್ಗನೈಸಿಂಗ್ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ನೂತನವಾಗಿ ರಾಜ್ಯ ಸಂಚಾಲಕಿಯಾಗಿ ಆಯ್ಕೆಯಾದ ಹೋರಾಟಗಾರರು ಯುವ ವಕೀಲೆಯೂ ಆಗಿರುವ #ಹರ್ಶಿತಾ_ಜೇ_ಕೆ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐
ಯುವಕರ ಧ್ವನಿಯಾಗಿ, ಸಮಾಜದ ಹಿತಕ್ಕಾಗಿ ಹಾಗೂ ನ್ಯಾಯದ ಪರ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತಿರುವ ನಿಮ್ಮ ನಾಯಕತ್ವ ಇನ್ನಷ್ಟು ಬಲವಾಗಿ ಬೆಳೆಯಲಿ. ನಿಮ್ಮ ನೇತೃತ್ವದಲ್ಲಿ ಯಂಗ್ ಡೆಮಾಕ್ರೆಟ್ಸ್ ಸಂಘಟನೆ ರಾಜ್ಯದಾದ್ಯಂತ ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆದು, ಯುವಕರಿಗೆ ದಿಕ್ಕು ತೋರಿಸುವ ಶಕ್ತಿಯಾಗಿ ರೂಪುಗೊಳ್ಳಲಿ ಎಂದು ಹಾರೈಸುತ್ತೇನೆ.
ನಿಮ್ಮ ಮುಂದಿನ ಹಾದಿ ಯಶಸ್ಸಿನಿಂದ ಕೂಡಿರಲಿ. ಇನ್ನಷ್ಟು ಎತ್ತರಗಳನ್ನು ತಲುಪಲಿ ಎಂಬುದು ನಮ್ಮ ಹಾರೈಕೆ.
ಇಂಕಿಲಾಬ್ ಜಿಂದಾಬಾದ್
ಯಂಗ್ ಡೆಮಾಕ್ರೆಟ್ಸ್ ಜಿಂದಾಬಾದ್
At the Town Hall in Bengaluru, during the Young Democrats State Youth Assembly and the inauguration of the State Organizing Committee, heartfelt congratulations to Harshitha J.K., activist and young advocate, on being selected as the State Coordinator 💐
Wishing you great success as your leadership grows stronger and inspires youth across the state.
Inquilab Zindabad
Young Democrats Zindabad
#YoungDemocrats #StateYouthAssembly #SDPI #SDPIKarnataka #YouthPower #InquilabZindabad #PoliticalChange #Bengaluru #Leadership #YouthLeader
ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ಸಾರ್ವಜನಿಕರು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಲು ವಿಶೇಷ ವೆಬ್ಸೈಟ್ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ.
(https://t.co/JZsUigBMd8)
ಗುರಗುಂಟ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಹಾಗೂ ಸಾರ್ವಜನಿಕರು ಭಯದಿಂದ ಸಂಚರಿಸುತ್ತಿದ್ದಾರೆ. ದಯವಿಟ್ಟು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ತಕ್ಷಣ ಕ್ರಮ ಕೈಗೊಳ್ಳಿ. @CMofKarnataka@DKShivakumar@DCRaichur#Gurgunta#Raichur#PublicSafety
SIR ನ ಹೆಸರಲ್ಲಿ "ಟಾರ್ಗೆಟ್ ಕೊಲೆ": ಒತ್ತಡ ತಾಳಲಾರದೆ 3 ಸಿಬ್ಬಂದಿ ಬಲಿ
"ಯಾವೊಬ್ಬ ಅರ್ಹ ಮತದಾರನೂ ಬಿಟ್ಟು ಹೋಗಬಾರದು" ಎಂದು ಭಾಷಣ ಮಾಡುವ ಚುನಾವಣಾ ಆಯೋಗವೇ, ತನ್ನ ಸಿಬ್ಬಂದಿಯ ಜೀವವನ್ನು ಬಲಿ ಕೊಡುತ್ತಿದೆಯಾ?
SIR ಪ್ರಕ್ರಿಯೆಯ ಹೆಸರಿನಲ್ಲಿ ವಿಧಿಸಲಾಗಿರುವ ಅವೈಜ್ಞಾನಿಕ ಟಾರ್ಗೆಟ್, ಅಮಾನವೀಯ ಕೆಲಸದ ಒತ್ತಡದಿಂದ ಇದುವರೆಗೆ 3 ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ದಿನಕ್ಕೆ ನೂರಾರು ಮನೆ, ನಿದ್ರೆಯಿಲ್ಲದ ರಾತ್ರಿ, ಮೇಲಧಿಕಾರಿಗಳ ಬೆದರಿಕೆ - ಇದೇ ಆಗಿದೆ ಸಿಬ್ಬಂದಿಯ ಸ್ಥಿತಿ.
ಫೀಲ್ಡ್ಗೆ ಕಳುಹಿಸಿ "ಟಾರ್ಗೆಟ್ ಮುಗಿಸದಿದ್ದರೆ ಕ್ರಮ" ಎಂದು ಹೆದರಿಸುವುದು, ಮಾನವೀಯತೆಗೇ ಮಾಡಿದ ಅವಮಾನ. ಕಾಗದದ ಮೇಲಿನ ಅಂಕಿಅಂಶಕ್ಕಾಗಿ ಜೀವಗಳನ್ನು ಪಣಕ್ಕೆ ಇಡುವುದು ಯಾವ ಪ್ರಜಾಪ್ರಭುತ್ವ?
@ECISVEEP ಮತ್ತು ರಾಜ್ಯ ಚುನಾವಣಾ ಆಯುಕ್ತರೇ @ceokarnataka ಅವರೇ, ಇದು ಚುನಾವಣಾ ಸುಧಾರಣೆಯಾ ಅಥವಾ ಸಿಬ್ಬಂದಿ ದೌರ್ಜನ್ಯವಾ? ಕೂಡಲೇ ಟಾರ್ಗೆಟ್ ಪದ್ಧತಿಯನ್ನು ರದ್ದುಮಾಡಿ. ಸತ್ತವರ ಕುಟುಂಬಕ್ಕೆ ಪರಿಹಾರ ಘೋಷಿಸಿ. ಇಲ್ಲದಿದ್ದರೆ ಈ "ಟಾರ್ಗೆಟ್ ಕೊಲೆ"ಗಳಿಗೆ ನೇರವಾಗಿ ನೀವೇ ಹೊಣೆ.
ಸಿಬ್ಬಂದಿಯ ರಕ್ತದಿಂದ ತೋಯ್ದ ಮತದಾರರ ಪಟ್ಟಿ ನಮಗೆ ಬೇಡ.
SIR ಹೆಸರಲ್ಲಿ ನಡೆಯುತ್ತಿರುವುದು ಸುಧಾರಣೆಯಲ್ಲ.
#News_Link
SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು
https://t.co/gjNhnKfrsd
#SDPI #SIR #VoterRights #ElectoralRoll #Ramdurg #Belagavi #Democracy #ElectionAwareness #BLO #IndiaPoliticsIf
#SIRScam #StopKillingStaff #CEOKarnataka
SIR ಪ್ರಕ್ರಿಯೆ ಕುರಿತು ಸ್ಪಷ್ಟತೆ: BLO ಗೊಂದಲ ನಿವಾರಣೆಗೆ ಕರೋಶಿಯಲ್ಲಿ ತರಬೇತಿ ಕಾರ್ಯಾಗಾರ
ಕರೋಶಿ, ಜುಲೈ 5: ಬೆಳಗಾವಿ ಜಿಲ್ಲೆಯ ಕರೋಶಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಜನರಲ್ಲಿ ಅರಿವು ಮೂಡಿಸುವುದಕ್ಕೂ, BLO ಗಳಿಗೆ ಉಂಟಾಗಿರುವ ಗೊಂದಲಗಳನ್ನು ನಿವಾರಿಸುವುದಕ್ಕೂ ಜಾಗೃತಿ ಮತ್ತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಾನು, SIR ಪ್ರಕ್ರಿಯೆಯ ಸರಿಯಾದ ತಿಳುವಳಿಕೆ ಇಲ್ಲದಿದ್ದರೆ ಅನೇಕ ಅರ್ಹ ನಾಗರಿಕರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಮತದಾರರ ಪಟ್ಟಿಯಿಂದ ಯಾರೂ ಹೊರಗುಳಿಯದಂತೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ಕರೆ ನೀಡಿದೆ.
ಕಾರ್ಯಾಗಾರದಲ್ಲಿ PPT (Presentation) ಆಧಾರದ ಮೇಲೆ SIR ಎನ್ಯೂಮರೇಷನ್ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಸರಳವಾಗಿ ವಿವರಿಸಲಾಯಿತು. ಫಾರ್ಮ್ಗಳ ಸರಿಯಾದ ಭರ್ತಿ ವಿಧಾನ, ಅಗತ್ಯ ದಾಖಲೆಗಳ ಸಿದ್ಧತೆ, ‘Logical Discrepancy’ ಗುರುತಿಸುವ ವಿಧಾನ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳನ್ನು ಸ್ಪಷ್ಟಪಡಿಸಲಾಯಿತು. BLO ಗಳು ಹಾಗೂ ಕಾರ್ಯಕರ್ತರಿಗೆ ಎದುರಾಗುವ ಪ್ರಾಯೋಗಿಕ ಸಮಸ್ಯೆಗಳಿಗೂ ಪರಿಹಾರ ಮಾರ್ಗಗಳನ್ನು ಸೂಚಿಸಲಾಯಿತು.
ಇದಲ್ಲದೆ, ಮನೆಮನೆಗೆ ತೆರಳಿ ಜನರಿಗೆ ಸಹಾಯ ಮಾಡುವ ವಿಧಾನಗಳು, ಡೇಟಾ ಸಂಗ್ರಹಣೆ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಯಾರೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮಾಡುವ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು.
ಭಾರತದಂತಹ ದೇಶದಲ್ಲಿ ಅನಕ್ಷರಸ್ಥರ ಪ್ರಮಾಣ ಇನ್ನೂ ಹೆಚ್ಚಿರುವ ಹಿನ್ನೆಲೆ, ತಾಂತ್ರಿಕ ಪ್ರಕ್ರಿಯೆಗಳ ಬಗ್ಗೆ ಸಮಗ್ರ ಅರಿವು ಮೂಡಿಸುವುದು ಅತ್ಯಗತ್ಯವೆಂದು ತಿಳಿಸಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಯಕರು SIR ಪ್ರಕ್ರಿಯೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬ ಅರ್ಹ ಮತದಾರರ ಹಕ್ಕು ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಮೌಝಮ್ ಜಾ ಮುಲ್ಲಾನಿ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಜಾಕೀರ್ ನಾಯಕ್ವಾಡಿ, ಚಿಕ್ಕೋಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ತಬ್ರೇಜ್ ಶೇಖ್, ಕರೋಶಿ ಜಾಮಿಯಾ ಮಸೀದಿ ಧರ್ಮಗುರುಗಳು, ಆಡಳಿತ ಮಂಡಳಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Clarification on SIR Process: Training Workshop Held in Karoshi to Address BLO Confusion
Karoshi, July 5: A training and awareness workshop was organized in Karoshi, Belagavi district, to create public awareness about the Special Intensive Revision (SIR) process of the electoral roll and to address the confusion faced by Booth Level Officers (BLOs).
Speaking as the chief guest at the program, I cautioned that without proper understanding of the SIR process, many eligible citizens may be deprived of their right to vote. I urged everyone to remain vigilant to ensure that no one is excluded from the voters’ list.
During the workshop, the entire SIR enumeration process was explained in a simple manner using a PPT (presentation). Various technical aspects, including the correct method of filling forms, preparation of required documents, and identification of “logical discrepancies,” were clearly explained. Practical issues faced by BLOs and party workers were also addressed with appropriate solutions.
Additionally, guidance was provided on methods of assisting people through door-to-door visits, precautions to be taken during data collection, and measures to ensure that no eligible voter is left out of the electoral roll.
Considering that the rate of illiteracy is still relatively high in a country like India, I emphasized that creating comprehensive awareness about technical processes is extremely important.
Leaders present at the event also stressed that raising awareness about the SIR process is essential and that safeguarding the voting rights of every eligible citizen is a collective responsibility.
The workshop was presided over by District President Mouzam Ja Mullani.
District Secretary Zakir Nayakvadi, Chikkodi Assembly Constituency Committee President Tabrez Shaikh, religious leaders of Karoshi Jamia Masjid, management committee members, office bearers of various organizations, party workers, and hundreds of members of the public participated and made the program a success.
#SIR #VoterRights #ElectoralRoll #SDPI #Belagavi #Karoshi #Democracy #BLO #ElectionAwareness #India