ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಾನ್ಯ ಪೊಲೀಸ್ ಮಹಾ ನಿರೀಕ್ಷಕರ ಕಚೇರಿ ಆವರಣ, ಡಿ.ಎ.ಆರ್ ಕೇಂದ್ರ ಸ್ಥಾನ ಹಾಗೂ ಅರಣ್ಯ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಾಯಿತು.
*ಇಂದು ನೆಟ್ಟ ಒಂದು ಗಿಡ, ನಾಳಿನ ಪೀಳಿಗೆಗೆ ಅಮೂಲ್ಯ ಜೀವದಾನ.*
*ಹಸಿರು ಪರಿಸರದ ನಿರ್ಮಾಣವೇ ನಮ್ಮೆಲ್ಲರ ಜವಾಬ್ದಾರಿ*.🌱🌍
ಒಂದೇ ಒಂದು ತಪ್ಪು ಕ್ಲಿಕ್... ಇಡೀ ಬ್ಯಾಂಕ್ ಬ್ಯಾಲೆನ್ಸ್ ಖಾಲಿ!
ಉಚಿತವಾಗಿ ಹಣ ಸಿಗುತ್ತೆ ಅಂತ ಅಪರಿಚಿತರು ಕಳುಹಿಸುವ ಯಾವುದೇ ಲಿಂಕ್ ಅಥವಾ APK ಫೈಲ್ಗಳನ್ನು ಡೌನ್ಲೋಡ್ ಮಾಡಬೇಡಿ. ನಿಮ್ಮ ಪರ್ಸನಲ್ ಡೇಟಾ ಮತ್ತು ಕಷ್ಟಪಟ್ಟು ದುಡಿದ ಹಣವನ್ನು ಸೈಬರ್ ಕಳ್ಳರಿಂದ ಕಾಪಾಡಿಕೊಳ್ಳಿ.
ಜಾಣನಡೆ ಅಂದ್ರೆ ಅದು ಸೈಬರ್ ಸೇಫ್!
@DgpKarnataka
ಕೌಲ್ಬಜಾರ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 115/2026 ರ ಮನೆಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
💍 159 ಗ್ರಾಂ ಬಂಗಾರದ ಆಭರಣಗಳು – ₹15,90,000
🥈 350 ಗ್ರಾಂ ಬೆಳ್ಳಿ ಆಭರಣಗಳು – ₹70,000
💵 ನಗದು – ₹20,000
ಒಟ್ಟು ₹16,80,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
*⚠️ APK ಫೈಲ್ ವಂಚನೆಯಿಂದ ಎಚ್ಚರ!*
WhatsApp ಹಾಗೂ ಇತರೆ ಆ್ಯಪ್ಗಳಲ್ಲಿ ಬರುವ *APK ಫೈಲ್ಗಳನ್ನು ಡೌನ್ಲೋಡ್ ಮಾಡಬೇಡಿ.*
ಒಂದು ಕ್ಲಿಕ್ ನಿಮ್ಮ ಹಣ, ಮಾಹಿತಿ ಮತ್ತು ಮೊಬೈಲ್ ಸುರಕ್ಷತೆಗೆ ಅಪಾಯ.
*Play Store ಅಥವಾ App Store ನಿಂದ ಮಾತ್ರ ಆ್ಯಪ್ಗಳನ್ನು ಡೌನ್ಲೋಡ್ ಮಾಡಿ.
*ಯೋಚಿಸಿ ಕ್ಲಿಕ್ ಮಾಡಿ – ಸುರಕ್ಷಿತವಾಗಿರಿ! 🔒*
ಪರಿಸರ ನಮಗೆ ಸೇರಿದ್ದಲ್ಲ, ನಾವು ಪರಿಸರಕ್ಕೆ ಸೇರಿದವರುʼ
ಸಮಸ್ತ ಜನತೆಗೆ ವಿಶ್ವ ಪರಿಸರ ದಿನದ ಶುಭಾಶಯಗಳು.
ನಮ್ಮ ಹಾಗೂ ಮುಂದಿನ ಪೀಳಿಗೆಗಾಗಿ ಪರಿಸರದ ರಕ್ಷಣೆ ಹಾಗೂ ಸಂರಕ್ಷಣೆ ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಲಿ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಬೆಂಬಲ ಸೂಚಿಸಿ ಜಾಗೃತಿ ರ್ಯಾಲಿ ನಡೆಸಿದ್ದು, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿ ರಸ್ತೆ ಸುರಕ್ಷತೆಯ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸಿದರು. ಅಭಿಯಾನಕ್ಕೆ ಇತರೆ ಇಲಾಖೆಗಳೂ ಕೈಜೋಡಿಸಬೇಕೆಂದು ಮನವಿ. ಹೆಲ್ಮೆಟ್ ಧರಿಸಿ, ಜೀವ ಉಳಿಸಿ.
ಬಳ್ಳಾರಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮನೆ ಕಳ್ಳತನ ತಡೆಯಲು ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಜಾರಿಗೆ ತರಲಾಗಿದೆ. ಮನೆಗೆ ಬೇಗ ಹಾಕಿ ಊರಿಗೆ/ಪ್ರವಾಸಕ್ಕೆ ತೆರಳುವವರು ಕೆಳಗಿನ ಅಧಿಕೃತ ವಾಟ್ಸಾಪ್ ಗೆ ಅಗತ್ಯ ಮಾಹಿತಿ ಕಳುಹಿಸಬೇಕು. ಬಳಿಕ ಆ ಮನೆಯನ್ನು ವಿಶೇಷ ನಿಗಾಪಟ್ಟಿಗೆ ಸೇರಿಸಿ ನಿಯಮಿತ ಗಸ್ತು ನಡೆಸಲಾಗುತ್ತದೆ.
📷
ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತೆ ಹಾಗೂ ಅಪಘಾತಗಳನ್ನು ತಡೆಯಲು ಪ್ರತಿಯೊಬ್ಬರು ರಸ್ತೆಯ ತಿರುವುಗಳಲ್ಲಿ ತಿರುಗುವ ಮುನ್ನ 30 ಮೀಟರ್ ಮುಂಚೆ ಇಂಡಿಕೇಟರ್ ಬಳಸಿ: ನೀವು ಯಾವುದೇ ಕಡೆಗೆ ತಿರುಗಬೇಕಾದರೂ ಕನಿಷ್ಠ 30 ಮೀಟರ್ಗಿಂತ ಮುಂಚಿತವಾಗಿ ವಾಹನದ ಇಂಡಿಕೇಟರ್ ಆನ್ ಮಾಡುವುದನ್ನು ಮರೆಯಬೇಡಿ.
ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ 04 ಮೊಬೈಲ್ಗಳನ್ನು CEIR ಪೋರ್ಟಲ್ನ ಸಹಾಯದಿಂದ ಪತ್ತೆ ಹಚ್ಚಿ, ಸಂಬಂಧಿತ ವಾರಸುದಾರರಿಗೆ ಯಶಸ್ವಿಯಾಗಿ ಹಸ್ತಾಂತರಿಸಲಾಯಿತು.
ಎಪಿಎಂಸಿ ಹಾಗೂ ಪಿ.ಡಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ 06 ಮೊಬೈಲ್ಗಳನ್ನು CEIR ಪೋರ್ಟಲ್ನ ಸಹಾಯದಿಂದ ಪತ್ತೆ ಹಚ್ಚಿ, ಸಂಬಂಧಿತ ವಾರಸುದಾರರಿಗೆ ಯಶಸ್ವಿಯಾಗಿ ಹಸ್ತಾಂತರಿಸಲಾಯಿತು.
🚨 ಅಕ್ಕ ಪಡೆ ವತಿಯಿಂದ ಜಾಗೃತಿ ಕಾರ್ಯಕ್ರಮ 🚨
ಬಳ್ಳಾರಿ ನಗರದ ಮಕ್ಕಳು ಮತ್ತು ಮಹಿಳೆಯರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಲಾಯಿತು.
📞 1098 ಮಕ್ಕಳ ಸಹಾಯವಾಣಿ ಮತ್ತು 181 ಮಹಿಳಾ ಸಹಾಯವಾಣಿ ಕುರಿತು ಮಾಹಿತಿ ನೀಡಿ, ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಯ ಮಹತ್ವವನ್ನು ವಿವರಿಸಲಾಯಿತು.
🚔 ಸುರಕ್ಷಿತ ಪ್ರಯಾಣಕ್ಕೆ ಹೆಲ್ಮೆಟ್ ಕಡ್ಡಾಯ 🚔
ಕುಡುತಿನಿ ಪೊಲೀಸ್ ಠಾಣೆ ವತಿಯಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಅಪಘಾತ ಸಂದರ್ಭದಲ್ಲಿ ಜೀವ ರಕ್ಷಿಸುವ ಹೆಲ್ಮೆಟ್ ಅನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಯಿತು.
🛵 ನಿಯಮ ಪಾಲಿಸಿ – ಜೀವ ಉಳಿಸಿ.
ಸುರಕ್ಷಿತ ಮನೆ, ನಿಶ್ಚಿಂತೆಯ ಮನ
ನಿಮ್ಮ ಮನೆಗೆ ಬೀಗ ಹಾಕುವ ಮುನ್ನ, ನಮಗೆ ಮಾಹಿತಿ ನೀಡಲು ಮರೆಯದಿರಿ. ನಿಮ್ಮ ಮನೆಯ ಸುರಕ್ಷತೆಗಾಗಿ ನಮ್ಮ ಪೊಲೀಸರು ನಿರಂತರ ಗಸ್ತು ತಿರುಗಲಿದ್ದಾರೆ. ಈ ಸೇವೆಯ ಪ್ರಯೋಜನ ಪಡೆದುಕೊಳ್ಳಿ ಮತ್ತು ಅಪರಾಧಗಳನ್ನು ತಡೆಯುವಲ್ಲಿ ನಮ್ಮೊಂದಿಗೆ ಕೈಜೋಡಿಸಿ.
📵 “No Bill… No Box… No Deal!”
📱 ದಾಖಲೆಗಳಿಲ್ಲದ ಮೊಬೈಲ್ ಖರೀದಿ ಅಪಾಯಕರ.
⚠️ ಬಿಲ್ ಹಾಗೂ ಬಾಕ್ಸ್ ಇಲ್ಲದೆ ಮೊಬೈಲ್ ಖರೀದಿಸಬೇಡಿ.
🔍 IMEI ಸಂಖ್ಯೆ ಮತ್ತು ಮಾರಾಟಗಾರರ ವಿವರವನ್ನು ಪರಿಶೀಲಿಸಿ.
🚫 ಅನುಮಾನಾಸ್ಪದ ಕಡಿಮೆ ಬೆಲೆಯ ಆಫರ್ಗಳಿಂದ ದೂರವಿರಿ.
📵 “ಅಗ್ಗದ ಆಫರ್ ನೋಡಬೇಡಿ… ಸುರಕ್ಷತೆಯನ್ನು ನೋಡಿ!”
🚨 ಒಂದು ತಪ್ಪು ಕ್ಲಿಕ್ — ಖಾತೆ ಖಾಲಿಯಾಗಬಹುದು. 🚨
📩 ಅಪರಿಚಿತ SMS ಮತ್ತು ಲಿಂಕ್ಗಳಿಂದ ದೂರವಿರಿ.
🔐 OTP, ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
⚠️ ನಕಲಿ ಸಂದೇಶಗಳಿಗೆ ಮೋಸಹೋಗಬೇಡಿ.
📞 ಸೈಬರ್ ಸಹಾಯವಾಣಿ: 1930
🛡️ ಜಾಗೃತರಾಗಿರಿ — ಸುರಕ್ಷಿತವಾಗಿರಿ.
ಧನ್ಯವಾದಗಳು ಬಳ್ಳಾರಿ! ❤️
ಹೆಲ್ಮೆಟ್ ಧರಿಸಿ, ಸಂಚಾರ ನಿಯಮಗಳನ್ನು ಪಾಲಿಸುತ್ತಿರುವ ಬಳ್ಳಾರಿಯ ಜನತೆಗೆ ಜಿಲ್ಲಾ ಪೊಲೀಸ್ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. 🙏
ನೆನಪಿಡಿ: ಇದು ಕೇವಲ ಒಂದು ದಿನದ ಅಭಿಯಾನವಲ್ಲ, ಸುರಕ್ಷತೆ ನಿರಂತರ ಜವಾಬ್ದಾರಿ.
ಹೆಲ್ಮೆಟ್ ಧರಿಸುವುದು ನಿಮ್ಮ ರಕ್ಷಣೆಗಾಗಿ, ನಿಯಮ ಪಾಲನೆ ನಮ್ಮೆಲ್ಲರ ಕರ್ತವ್ಯ. 🏍️🪖