ದಿನಾಂಕ:29.05.2026 ರಂದು ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಟ್ ಆಫ್ ಲಿವಿಂಗ್ ಗೆ ಸನ್ಮಾನ್ಯ ಉಪರಾಷ್ಟ್ರಪತಿಗಳಾದ ಶ್ರೀ ಸಿ.ಪಿ.ರಾಧಾಕೃಷ್ಣನ ರವರು ಪ್ರವಾಸ ಕೈಗೊಳ್ಳಲಿದ್ದು, ಸದರಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ/ಸಿಬ್ಬಂದಿಯವರಿಗೆ ಸೂಕ್ತ ಸೂಚನೆಗಳನ್ನು ನೀಡಲಾಯಿತು.
ದಿನಾಂಕ:10.05.2026 ರಂದು ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳು ಶ್ರೀ ನರೇಂದ್ರ ಮೋದಿ ರವರು ಪ್ರವಾಸ ಕೈಗೊಳ್ಳಲಿದ್ದು, ಸದರಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ/ಸಿಬ್ಬಂದಿಯವರಿಗೆ ಸೂಕ್ತ ಸೂಚನೆಗಳನ್ನು ನೀಡಲಾಯಿತು.
ಇತ್ತೀಚೆಗೆ ಮೊಬೈಲ್ ಕಳೆದುಕೊಂಡ ವ್ಯಕ್ತಿಗಳು ನೂತನ #CEIR ವೆಬ್ ಪೋರ್ಟಲ್ ಗೆ ಭೇಟಿ ನೀಡಿ, ಮಾಹಿತಿ ನೀಡಿ ನೊಂದಾಯಿಸಿಕೊಂಡಿದ್ದು, ಕಗ್ಗಲಿಪುರ ಪೊಲೀಸರು ಸದರಿ ಪೋರ್ಟಲ್ ನ ಸಹಾಯದಿಂದ ಮೊಬೈಲ್ ಅನ್ನು ಪತ್ತೆ ಮಾಡಲಾಗಿದ್ದು, ಇಂದು ಕಗ್ಗಲಿಪುರದ ಶ್ರೀ ವೆಂಕಟಚಲ ASI ರವರು ಸದರಿ ಮೊಬೈಲ್ ಅನ್ನು ವಾರಸುದರರಿಗೆ ಮರಳಿಸಿರುತ್ತಾರೆ.
"ಅಪರಾಧ ತಡೆ ಮಾಸಾಚರಣೆ"ಯ ಪ್ರಯುಕ್ತ ಈ ದಿನ ಕಗ್ಗಲೀಪುರ ಪೊಲೀಸ್ ಠಾಣೆ ವತಿಯಿಂದ ತಾತಗುಣಿ ಗ್ರಾಮದಲ್ಲಿ ರಸ್ತೆ ಸುರಕ್ಷತೆ, ಸೈಬರ್ ಅಪರಾಧಗಳು, ಸರಗಳ್ಳತನ, ಮನೆಗಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿತು. ಹಾಗೂ 1098, 112 & 1930 ತುರ್ತು ಸಹಾಯವಾಣಿಗಳ ಬಗ್ಗೆ ತಿಳಿಸಲಾಯಿತು.
ಮಹಮದ್ ಯಾಸೀನ್ ಎಂಬುವರಿಗೆ ಕಗ್ಗಲೀಪುರದ SBI ಬ್ಯಾಂಕ್ ಸರ್ಕಲ್ ಬಳಿ 18 ಗ್ರಾಂ ತೂಕದ ಚಿನ್ನದ ಸರವೊಂದು ದೊರಕಿದ್ದು, ಅದನ್ನು ಕಗ್ಗಲೀಪುರ ಪೊಲೀಸ್ ಠಾಣೆಗೆ ತಂದು ನೀಡಿರುತ್ತಾರೆ. ಸದರಿ ಚಿನ್ನದ ಸರದ ವಾರಸುದಾರರನ್ನು ಪತ್ತೆ ಮಾಡಿ, ಖಚಿತಪಡಿಸಿಕೊಂಡು, ಕಳೆದುಕೊಂಡಿರುವ ಚಿನ್ನದ ಸರವನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.
ದಿನಾಂಕ:17.10.2024 ರಂದು ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಾತಗುಣಿ- ಕುಪ್ಪರೆಡ್ಡಿ ಕೆರೆ ಕ್ರಾಸ್ ಬಳಿ ವ್ಯಕ್ತಿಯೊಬ್ಬರನ್ನು ಬೆದರಿಸಿ, ಬಲವಂತವಾಗಿ ಕಾರನ್ನು ಕಿತ್ತುಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ವರದಿಯಾದ 4 ಗಂಟೆಯೊಳಗೆ, ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಪತ್ತೆ ಮಾಡಲಾಗಿರುತ್ತದೆ.
ಇತ್ತೀಚೆಗೆ ಮೊಬೈಲ್ ಕಳೆದುಕೊಂಡ ವ್ಯಕ್ತಿಗಳು ನೂತನ #CEIR ವೆಬ್ ಪೋರ್ಟಲ್ ಗೆ ಭೇಟಿ ನೀಡಿ, ಮಾಹಿತಿ ನೀಡಿ ನೊಂದಾಯಿಸಿಕೊಂಡಿದ್ದು, ಕಗ್ಗಲಿಪುರ ಪೊಲೀಸರು ಸದರಿ ಪೋರ್ಟಲ್ ನ ಸಹಾಯದಿಂದ ಮೊಬೈಲ್ ಅನ್ನು ಪತ್ತೆ ಮಾಡಲಾಗಿದ್ದು, ಇಂದು ಪಿ ಐ ಕಗ್ಗಲಿಪುರ ರವರಾದ ಶ್ರೀ ಕೆ. ವೆಂಕಟೇಶ್ ರವರು ಸದರಿ ಮೊಬೈಲ್ ಅನ್ನು ವಾರಸುದರರಿಗೆ ಮರಳಿಸಿರುತ್ತಾರೆ.
ಇತ್ತೀಚೆಗೆ ಮೊಬೈಲ್ ಕಳೆದುಕೊಂಡ ವ್ಯಕ್ತಿಯು ನೂತನ #CEIR ವೆಬ್ ಪೋರ್ಟಲ್ ಗೆ ಭೇಟಿ ನೀಡಿ, ಮಾಹಿತಿ ನೀಡಿ ನೊಂದಾಯಿಸಿಕೊಂಡಿದ್ದು, ಕಗ್ಗಲಿಪುರ ಪೊಲೀಸರು ಸದರಿ ಪೋರ್ಟಲ್ ನ ಸಹಾಯದಿಂದ ಮೊಬೈಲ್ ಅನ್ನು ಪತ್ತೆ ಮಾಡಲಾಗಿದ್ದು, ಇಂದು ಪಿ ಐ ಕಗ್ಗಲಿಪುರ ರವರಾದ ಶ್ರೀ ಆರ್. ವಿಜಯ ಕುಮಾರ ರವರು ಸದರಿ ಮೊಬೈಲ್ ಅನ್ನು ವಾರಸುದರರಿಗೆ ಮರಳಿಸಿರುತ್ತಾರೆ
ಈ ದಿನ ಮಾನ್ಯ ಶ್ರೀ. ಆರ್. ಹಿತೇಂದ್ರ ಐಪಿಎಸ್, ADGP (L&O) ರವರು ರಾಮನಗರ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ಜಿಲ್ಲೆಯಲ್ಲಿನ ಕಾನೂನು & ಸುವ್ಯವಸ್ಥೆಯ ಕುರಿತು ವಿಮರ್ಶನಾ ಸಭೆ ನಡೆಸಿ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮಾನ್ಯ @IgpRange ರವರಾದ ಡಾ. ಬಿಆರ್ ರವಿಕಾಂತೇಗೌಡ ಐಪಿಎಸ್ ರವರು ಉಪಸ್ಥಿತರಿದ್ದರು