ಹಿರಿಯ ಮುಖಂಡರು ಹಾಗೂ ಮಾಜಿ ಸಂಸದರಾದ ಶ್ರೀ ಕೆ. ಬಿ. ಶಾಣಪ್ಪ ಅವರು ವಿಧಿವಶರಾದ ವಿಷಯ ತಿಳಿದು ಮನಸ್ಸಿಗೆ ತೀವ್ರ ದುಃಖವಾಯಿತು.
ದೇವರು ಅವರ ಆತ್ಮಕ್ಕೆ ಚಿರ ಶಾಂತಿ ಕರುಣಿಸಿ, ಕುಟುಂಬಸ್ಥರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುವೆ.
ಕೋವಿಡ್-19 ತುರ್ತು ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕ ಪೂರೈಕೆ ಮೇಲ್ವಿಚಾರಣೆಗಾಗಿ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡು, ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು,ಜಿಲ್ಲಾಡಳಿತ ಹಾಗೂ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ, ಕೊರೋನಾ ನಿರ್ವಹಣೆ, ಆಕ್ಸಿಜನ್ ದಾಸ್ತಾನು, ಬೇಡಿಕೆ ಹಾಗೂ ಪೂರೈಕೆಯ ವಿಷಯವಾಗಿ ಸಮಾಲೋಚಿಸಲಾಯಿತು.
ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲಾ ಪ್ರವಾಸ ಕೈಗೊಂಡು "ಕೋವಿಡ್-19 ನಿರ್ವಹಣೆ ಹಾಗೂ ಆಮ್ಲಜನಕ ಸರಬರಾಜು" ವಿಷಯವಾಗಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿರುವುದರ ಹಾಗೂ ಆಕ್ಸಿಜನ್ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿರುವುದರ ಕುರಿತು ಇಂದಿನ ಪತ್ರಿಕಾ ವರದಿಗಳು.
#KarnatakaFightsCorona | #MaskUpKarnataka | @BJP4Karnataka
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರು, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಾಜ ಸುಧಾರಕರಾದ ಶ್ರೀ ಗೋಪಾಲಕೃಷ್ಣ ಗೋಖಲೆ ಅವರ ಜನ್ಮದಿನದಂದು ಗೌರವ ನಮನಗಳು.
#GopalKrishnaGokhale
ಸದ್ಯ ಜಿಂದಾಲ್ ಆಕ್ಸಿಜನ್ ಉತ್ಪಾದನಾ ಘಟಕವು, ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದ್ದು, ರಾಜ್ಯದ ಆಕ್ಸಿಜನ್ ಬೇಡಿಕೆಯನ್ನು ನೀಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಅದಾಗ್ಯೂ ಕೋವಿಡ್ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಘಟಕದ ಮುಖ್ಯಸ್ಥರಲ್ಲಿ ಉತ್ಪಾದನೆಯನ್ನು ಹೆಚ್ಚಿಸುವಂತೆ ಕೇಳಿಕೊಳ್ಳಲಾಯಿತು.
ಇಂದು ಬಳ್ಳಾರಿಯ ಸಂಡೂರಿನಲ್ಲಿರುವ ಜಿಂದಾಲ್ ಕಂಪನಿ ಎದುರುಗಡೆ ಸಾವಿರ ಆಕ್ಸಿಜನ್ ಬೆಡ್ ಹೊಂದಿರುವ ತುರ್ತು ಆಸ್ಪತ್ರೆಯ ನಿರ್ಮಾಣ ಕಾರ್ಯ ಪರಿಶೀಲಿಸಿ, ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸಲಾಯಿತು.
ಧಾರವಾಡದಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಮತ್ತು ಜಿಲ್ಲೆಯಲ್ಲಿನ ಆರೋಗ್ಯ ಸೌಲಭ್ಯಗಳ ವಿಷಯವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದರ ಹಾಗೂ ಕೋವಿಡ್-19 ವಾರ್ ರೂಮ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದರ ಕುರಿತು ಇಂದಿನ ಪತ್ರಿಕಾ ವರದಿಗಳು.
#KarnatakaFightsCorona | #MaskUpKarnataka
Held meeting with district officials & proprietors of oxygen production unit at Koppal & discussed production &supply of oxygen in the district.
ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು &ಆಮ್ಲಜನಕ ಉತ್ಪಾದನಾ ಘಟಕದ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಆಕ್ಸಿಜನ್ ಲಭ್ಯತೆ, ಪೂರೈಕೆ ಕುರಿತು ಸಮಾಲೋಚಿಸಲಾಯಿತು.
ಇಂದು ಧಾರವಾಡದ ಜಿಲ್ಲಾಧಿಕಾರಿ ಕಛೇರಿಯಲ್ಲಿನ "ಕೋವಿಡ್ ವಾರ್ ರೂಮ್"ಗೆ ಭೇಟಿ ನೀಡಿ, ಪರಿಶೀಲಿಸಿ, ಅಲ್ಲಿನ ಸೌಲಭ್ಯ ಹಾಗೂ ಕಾರ್ಯ ವಿಧಾನವನ್ನು ವೀಕ್ಷಿಸಲಾಯಿತು.
ಕೋವಿಡ್-19 ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ಉದ್ದೇಶದಿಂದ ಉಪಹಾರ ಗೃಹವನ್ನು ತಾತ್ಕಾಲಿಕವಾಗಿ ವಾರ್ ರೂಮ್ ಆಗಿ ಪರಿವರ್ತಿಸಲಾಗಿದ್ದು,
ಜಿಲ್ಲೆಯ ಜನತೆಯ ಸೇವೆಗಾಗಿ ಸಕ್ರಿಯ ಪಡೆಯೊಂದನ್ನು ನಿಯೋಜಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ, ಅಂಬ್ಯುಲೆನ್ಸ್ ಸೇವೆ, ರೆಮ್ಡಿಸಿವರ್ ಔಷಧಿ, ಆಕ್ಸಿಜನ್, ವೆಂಟಿಲೇಟರ್ ಹಾಗೂ ಇತರೆ ಅಗತ್ಯ ಸೇವೆಗಳ ಮಾಹಿತಿ ಒದಗಿಸಲಾಗುತ್ತಿದೆ.
ಧಾರವಾಡದಲ್ಲಿ ಆಕ್ಸಿಜನ್ ದಾಸ್ತಾನು,ಲಭ್ಯತೆ, ಸಕಾಲಕ್ಕೆ ಆಸ್ಪತ್ರೆಗಳಿಗೆ ಸರಬರಾಜು ಆಗುವ ಕುರಿತು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಲಾಯಿತು.
ಸರ್ಕಾರಿ &ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾಗದಂತೆ ತಕ್ಷಣಕ್ಕೆ ಕ್ರಮವಹಿಸಲು ಹುಬ್ಬಳ್ಳಿ, ಧಾರವಾಡ ನಗರಕ್ಕೆ ಪ್ರತ್ಯೇಕ 2 ಆಕ್ಸಿಜನ್ ರ್ಯಾಪಿಡ್ ಆ್ಯಕ್ಷನ್ ಟೀಮ್ ಗಳನ್ನು ರಚಿಸಲಾಗಿದೆ
ಕೋವಿಡ್ ಆಸ್ಪತ್ರೆಗಳಲ್ಲಿ ಆಮ್ಲಜನಕದ ತೊಂದರೆ ಎದುರಾದರೆ ಮಹಾನಗರ ಪಾಲಿಕೆ ಕಛೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಕರೆ ಮಾಡಿ ಬೇಡಿಕೆ ಇತ್ತರೆ, ತಕ್ಷಣಕ್ಕೆ ಸ್ಪಂದಿಸಿ 8-10 ನಿಮಿಷಗಳಲ್ಲಿ ತಲುಪಿಸುವಂತಹ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಆಕ್ಸಿಜನ್ ಪೂರೈಕೆಯಲ್ಲಾಗುತ್ತಿರುವ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.
ಇಂದು ಧಾರವಾಡದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೋವಿಡ್-19 ನಿರ್ವಹಣೆಯ ಕುರಿತು ಸಮಾಲೋಚಿಸಲಾಯಿತು.
ಸಭೆಯ ಪ್ರಮುಖಾಂಶಗಳು
ಸೋಂಕಿನಿಂದ ಮೃತಪಟ್ಟವರಿಗಾಗಿ ಹುಬ್ಬಳ್ಳಿಯ ಹೆಗ್ಗೇರಿ, ವಿದ್ಯಾನಗರ & ಧಾರವಾಡದ ಹೊಸಯಲ್ಲಾಪುರ ಸ್ಮಶಾನಗಳಲ್ಲಿ ಪಾಲಿಕೆ ವತಿಯಿಂದ ಉಚಿತವಾಗಿ ಶವ ಸಂಸ್ಕಾರ ಮಾಡುವ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ.
ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಎನ್.ಜಿ.ಒ. ಗಳ ಸಹಯೋಗದೊಂದಿಗೆ ಜಿಲ್ಲೆಯಾದ್ಯಂತ ಮನೆಮನೆಗೆ ಸೋಂಕಿನ ಸಣ್ಣಪುಟ್ಟ ಗುಣಲಕ್ಷಣಗಳು ಕಂಡುಬಂದರೂ ಸರಿಯಾದ ಔಷಧೋಪಚಾರ, ತಿಳುವಳಿಕೆ ನೀಡಿ, ಆರಂಭಿಕ ಹಂತದಲ್ಲಿಯೇ ಸೋಂಕನ್ನು ನಿಯಂತ್ರಿಸುವಂತೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಿ,
ಆಂದೋಲನದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.
ಕೊರೋನಾ ಪರೀಕ್ಷಾ ಕೇಂದ್ರದಲ್ಲಿ ಹೆಚ್ಚುತ್ತಿರುವ ಜನಸಂದಣಿ ತಪ್ಪಿಸುವ ಸಲುವಾಗಿ ಕಿಮ್ಸ್ ಆವರಣದಲ್ಲಿ ಇನ್ನೊಂದು ಕೇಂದ್ರ ತೆರೆಯುವಂತೆ ಸೂಚಿಸಲಾಗಿದ್ದು ಪಾಸಿಟಿವ್ ಫಲಿತಾಂಶ ನೀಡಲು ವಿಳಂಬ ಮಾಡದೆ 24 ಗಂಟೆಗಳಲ್ಲೇ ಒದಗಿಸುವ ವ್ಯವಸ್ಥೆ ರೂಪಿಸುವಂತೆ ತಿಳಿಸಲಾಗಿದೆ.