ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿದೆ ಎಂಬುದಕ್ಕೆ ಹಿಂದೂಗಳ ಅಂಗಡಿಗಳ ಮೇಲೆ "ಕಾಂಗ್ರೆಸ್ ಬ್ರದರ್ಸ್" ನಡೆಸಿದ ದಾಂಧಲೆಯೇ ಸಾಕ್ಷಿ! ತುಘಲಕ್ @INCKarnataka ಸರ್ಕಾರದ ಅತಿಯಾದ ಓಲೈಕೆಯಿಂದಾಗಿಯೇ ಬ್ರದರ್ಸ್ ಬಾಲಬಿಚ್ಚಿ, ದುಷ್ಟತನ ಮೆರೆಯುತ್ತಿದ್ದಾರೆ.
ಸೌಹಾರ್ದತೆಯ ಭಾಷಣ ಬಿಗಿಯುವ @PriyankKharge ಅವರೇ, ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವ ಆ ದುಷ್ಟರ ಹೆಡೆಮುರಿ ಕಟ್ಟಿ! "ಕಾಂಗ್ರೆಸ್ ಬ್ರದರ್ಸ್" ಎಂಬ ಮಮಕಾರ ಪಕ್ಕಕ್ಕಿಟ್ಟು, ಕಾನೂನು ಸುವ್ಯವಸ್ಥೆ ಕಾಪಾಡಿ. ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಿ.
#CongressFailsKarnataka
ಗೃಹ ಲಕ್ಷ್ಮಿ ಹಣವನ್ನು ಪ್ರತಿ ತಿಂಗಳು ಮನೆ ಒಡತಿಗೆ ಹಾಕುತ್ತೇವೆ ಎಂದು ಪುಂಗಿ ಊದಿದ @INCKarnataka ಇದೀಗ ಗೃಹ ಲಕ್ಷ್ಮಿಯನ್ನು ಚುನಾವಣಾ ಲಕ್ಷ್ಮಿಯನ್ನಾಗಿ ಮಾಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ @laxmi_hebbalkar ಅವರು ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಯಾಗಿಲ್ಲ ಎಂದು ಗೃಹ ಲಕ್ಷ್ಮಿ ಕಂತುಗಳ ಹಣವನ್ನು ನುಂಗಿ ಹಾಕಿದ್ದೇ 3 ವರ್ಷದ ಸಾಧನೆಯಾಗಿದೆ.
#CongressFailsKarnataka
#3YearsOfINCMisrule
ಶೃಂಗೇರಿಯ ಧರ್ಮಭೂಮಿಯಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ. ಪಕ್ಷದ ಅಭ್ಯರ್ಥಿ ಶ್ರೀ ಡಿ.ಎನ್. ಜೀವರಾಜ್ ಅವರ ಈ ಗೆಲುವು, ನಮ್ಮ ಚುನಾವಣಾ ವ್ಯವಸ್ಥೆ ಹಾಗೂ ನ್ಯಾಯಾಂಗದ ಮೇಲಿನ ವಿಶ್ವಾಸಕ್ಕೆ ಸಿಕ್ಕ ಗೆಲುವು. ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದ ಸಮಸ್ತ ಮತದಾರ ಬಂಧುಗಳಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಸತತ ಪರಿಶ್ರಮ ಮತ್ತು ದಣಿವರಿಯದ ಹೋರಾಟಕ್ಕೆ ಇಂದು ಪ್ರತಿಫಲ ದೊರೆತಿದೆ. ಹೈಕೋರ್ಟ್ ಆದೇಶದಂತೆ ನಡೆದ ಅಂಚೆ ಮತಗಳ ಮರು ಎಣಿಕೆ ನಂತರ ಫಲಿತಾಂಶ ಘೋಷಿಸಲಾಗಿದೆ. ಸಂವಿಧಾನಾತ್ಮಕ ಹೋರಾಟದ ಮೂಲಕ ಮತದಾರರ ಪ್ರತಿ ಮತಕ್ಕೂ ಗೌರವ ತಂದುಕೊಟ್ಟ ಶ್ರೀ ಜೀವರಾಜ್ ಅವರಿಗೆ ಹೃತ್ಪೂರ್ವಕ, ಹೆಮ್ಮೆಯ ಅಭಿನಂದನೆಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯ ಯಾವತ್ತೂ ಸೋಲುವುದಿಲ್ಲ ಎನ್ನುವುದಕ್ಕೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಪ್ರಕರಣ ಸಾಕ್ಷಿಯಾಗಿದೆ.
ರಾಜ್ಯದ ಸಾರಿಗೆ ಇಲಾಖೆಯನ್ನು ಕೋಮಾಗೆ ತಳ್ಳಿದ ಕೀರ್ತಿ ಡಕೋಟಾ ಸಾರಿಗೆ ಸಚಿವ @RLR_BTM ಅವರಿಗೆ ಸಲ್ಲಬೇಕು.!
ಕೇವಲ ಬುರುಡೆ ಬಿಡುವ ರಾಮಲಿಂಗಾರೆಡ್ಡಿ ಅವರ ಸಾಧನೆ ಸಣ್ಣದಲ್ಲ.! ಸಾರಿಗೆ ಇಲಾಖೆಯನ್ನು ಹಾಳುಬಾವಿಗೆ ತಳ್ಳಿ ನೆಮ್ಮದಿಯಾಗಿ ನಿದ್ರಿಸುತ್ತಿರುವ ಸಾಧಕರಾಗಿದ್ದಾರೆ.
#CongressFailsKarnataka
#PMInLokSabha
The leadership that has developed at the grassroots level among women must be recognised and taken into account. Therefore, those who oppose this today will have to pay the price for a long time: PM Modi
via NaMo App
#PMInLokSabha
Do not weigh this from a political perspective; this is a decision in the national interest. Today, women across the country and the world will observe our decisions, but more than the decision itself, they will judge our intent: PM Modi
via NaMo App
Deeply saddened by the loss of Sqn Ldr Anuj and Flt Lt Purvesh Duragkar in the tragic Su-30 crash. Their courage and service to the nation will always be remembered with pride and gratitude. My heartfelt condolences to the bereaved families. The nation stands firmly with them in this hour of grief.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ @eshwar_khandre ಅವರಿಗೆ ಹಾರ್ದಿಕ ಅಭಿನಂದನೆಗಳು.
ಸಮಾಜದ ಬಾಂಧವರನ್ನು ಒಗ್ಗೂಡಿಸುವ ಮತ್ತು ಬಸವಾದಿ ಶರಣರ ತತ್ವಗಳನ್ನು ಸಾರುವ ಮಹಾಸಭೆಯ ಜವಾಬ್ದಾರಿಯ ಹೊಣೆಯನ್ನು ವಹಿಸಿಕೊಂಡಿರುವುದು ಸಂತಸದ ವಿಚಾರವಾಗಿದ್ದು, ಸಮಾಜದ ಏಳಿಗೆ, ಸಂಘಟನೆ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಮಹಾಸಭೆಯು ಹಮ್ಮಿಕೊಳ್ಳುವ ಕಾರ್ಯಗಳು ನಿಮ್ಮ ನೇತೃತ್ವದಲ್ಲಿ ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
Heartily welcome Shri C. P. Radhakrishnan Ji, Hon’ble Vice President of India, on his arrival in our State to attend the 7th Year Punya Smaranotsava of the revered Dr. Shri Shivakumara Mahaswamiji at Siddaganga Shri Kshetra.
His presence honours the timeless legacy of Dr. Shri Shivakumara Mahaswamiji, whose life of service continues to inspire our society.
ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಾಗಲಕೋಟೆ, ಹುಬ್ಬಳ್ಳಿ - ಧಾರವಾಡ, ಧಾರವಾಡ ಗ್ರಾಮಾಂತರ, ಮೈಸೂರು ಮತ್ತು ಮೈಸೂರು ಗ್ರಾಮಾಂತರ ಜಿಲ್ಲಾ ಘಟಕಗಳ ಜಿಲ್ಲಾವಾರು ವಿಶೇಷ ಸಭೆ ನಡೆಸಲಾಯಿತು.
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಹತ್ಯೆ ನಡೆಸುತ್ತಿರುವ ಪ್ರವೃತ್ತಿ ಮತ್ತೂ ಮುಂದುವರಿದಿದೆ. ಬಾಂಗ್ಲಾದೇಶದಲ್ಲಿ ಇರುವ ಅಸಮರ್ಥ ಮಧ್ಯಂತರ ಸರ್ಕಾರದ ಕೈಯಲ್ಲಿ ತನ್ನ ನಾಗರಿಕರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಸ್ವಾತಂತ್ರ್ಯ ಬಂದಾಗ 25% ಇದ್ದ ಹಿಂದೂಗಳ ಸಂಖ್ಯೆ ಈಗ ಬಾಂಗ್ಲಾದೇಶದಲ್ಲಿ 7%ಗೆ ಕುಸಿದಿದೆ. ಇದು ಮುಸ್ಲಿಂ ಬಾಹುಳ್ಯ ಇರುವಲ್ಲಿ ಹಿಂದೂಗಳು ನೆಮ್ಮದಿಯಾಗಿ ಬಾಳಲು ಸಾಧ್ಯವಿಲ್ಲ ಎನ್ನುವ ಕಟುಸತ್ಯವನ್ನು ಪ್ರದರ್ಶಿಸಿದೆ. ವಿಶ್ವಸಂಸ್ಥೆ, ಭಾರತದಂತಹ ರಾಷ್ಟ್ರಗಳು ತಕ್ಷಣವೇ ಮಧ್ಯ ಪ್ರವೇಶಿಸದೆ ಹೋದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳು ಅಳಿವಿನಂಚಿಗೆ ತಲುಪುವ ಅಪಾಯಗಳು ದಟ್ಟವಾಗಿವೆ.
ತುಂಬಿ ತುಳುಕಾಡುತ್ತಿರುವ ಬಸ್, ಕುರಿಗಳಂತೆ ತುಂಬಿಸಿಕೊಂಡು ಹೋಗುವ ಬಸ್, ಬಸ್ ಇಲ್ಲವೆಂದರೆ ಶಿಕ್ಷಣ ಮೊಟಕು. ಇದು ಗ್ರಾಮೀಣ ಕರ್ನಾಟಕದ ನಿತ್ಯ ರೋಧನೆಯಾಗಿದೆ.
ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆ ನಿತ್ಯ ನರಕ ಅನುಭವಿಸುತ್ತಿದೆ. ಸಾರಿಗೆ ಸಚಿವರು ಯಾರಿಗೆ ಸಚಿವರು ಎನ್ನುವುದೇ ತಿಳಿಯುತ್ತಿಲ್ಲ. ಲೋಕಲ್ ರಾಜಕಾರಣದಲ್ಲಿ ಕಾಲಹರಣ ಮಾಡುವ ಸಚಿವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವುದೆಂದು?
#CongressFailsKarnataka
'ಗಾತ್ರಕ್ಕಿಂತ ಗುಣ ಮುಖ್ಯ' ಅನ್ನುವ ಹಾಗೆ ಸುದೀರ್ಘ ಕಾಲಕ್ಕಿಂತಲೂ ಶಾಶ್ವತ ಸಾಧನೆ ಬಹಳ ಮುಖ್ಯ! ಈ ನಿಟ್ಟಿನಲ್ಲಿ ಅರಸು ಅವರ ಹತ್ತಿರಕ್ಕೂ ಬರಲಾಗದಿದ್ದರೂ, ಎತ್ತರಕ್ಕೆ ಏರಲಾಗದಿದ್ದರೂ, ಹಿಂದುಳಿದ ವರ್ಗಗಳ ಹರಿಕಾರ ಸನ್ಮಾನ್ಯ ಶ್ರೀ ದೇವರಾಜ ಅರಸ್ ಅವರ ದಾಖಲೆ ದಾಟಿ, ರಾಜ್ಯದ ಸುದೀರ್ಘ ಅವಧಿಯ ಮುಖ್ಯಮಂತ್ರಿಗಳಾಗುತ್ತಿರುವ ಶ್ರೀ @siddaramaiah ನವರಿಗೆ ಅಭಿನಂದನೆಗಳು!
ಅರಸು ಅವರ ಹಲವು ಸೈದ್ಧಾಂತಿಕ ನಿಲುವು, ನಿರ್ಧಾರಗಳನ್ನು, ಕಾರ್ಯಗಳನ್ನು ನಾವು ಮೆಚ್ಚಿಕೊಳ್ಳದೆ ಇದ್ದರೂ, ಅವರ ದಿಟ್ಟತನ, ಜನರ ಬಗ್ಗೆ ಅವರ ಕಾಳಜಿ, ಅವರು ತಂದ ಹಲವು ಐತಿಹಾಸಿಕ ಸುಧಾರಣೆಗಳನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಎಷ್ಟು ದಿನ ಕುರ್ಚಿ ಮೇಲೆ ಕೂತಿದ್ದರು ಎನ್ನುವುದಕ್ಕಿಂತಲೂ ಆ ಸ್ಥಾನದಲ್ಲಿ ಕುಳಿತು ಮಾಡಿದ ಕೆಲಸಗಳಿಗೆ ಮಹತ್ವ ಹೆಚ್ಚು! ಇಂದು ಈ ಕುರಿತು ಪತ್ರಿಕೆಗಳಲ್ಲಿ ವರದಿಗಳನ್ನು ನೋಡುವಾಗ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ಪ್ರಶ್ನೆಗಳನ್ನು ಹಂಚಿಕೊಳ್ಳುತ್ತಿದ್ದೇನೆ -
1. ದೇವರಾಜ ಅರಸು ಅವರು ‘ಉಳುವವನೇ ಭೂಮಿಯ ಒಡೆಯ’ ಸುಧಾರಣೆ ತಂದು ಲಕ್ಷಾಂತರ ಬಡವರ ಜೀವನದಲ್ಲಿ ಪರಿವರ್ತನೆ ತಂದರು. ಅವರೆಂದೂ ಹಗರಣದಲ್ಲಿ ಸಿಲುಕಿ ನಿವೇಶನ ಹಿಂದಿರುಗಿಸಿಲ್ಲ, ಅಕ್ರಮ ವಲಸಿಗರಿಗೆ ಭೂಮಿ ನೀಡಲು ಮುಂದಾಗಲಿಲ್ಲ. ಸುಧಾರಣೆಗೂ ‘ವಹಿವಾಟಿಗೂ’ ವ್ಯತ್ಯಾಸವಿದೆ ಅಲ್ಲವೇ?
2. ಅರಸು ಅವರು ಹಿಂದುಳಿದ ವರ್ಗಕ್ಕೆ ‘ಅಧಿಕಾರ’ ನೀಡಿದರು, ಹಿಂದುಳಿದವರನ್ನು ಮುಂದಕ್ಕೆ ತಂದರು. ಅವರು ‘ಅಂಕಿ-ಅಂಶ’ಗಳ ಜಾತಿ ಜನಗಣತಿ ವರದಿ ಹಿಡಿದು ಎಂದೂ ರಾಜಕೀಯ ಮಾಡಲಿಲ್ಲ. ಅರಸು ಅವರು ಹಿಂದುಳಿದ ಸಮಾಜವನ್ನು ಒಗ್ಗೂಡಿಸಿ, ಮೇಲೆಕ್ಕೆತ್ತಲು ರಾಜಕೀಯ ಮಾಡಿದರು, ತಮ್ಮ ರಾಜಕೀಯಕ್ಕಾಗಿ ಸಮುದಾಯಗಳನ್ನು ಬಳಸಿಕೊಂಡು ಮೇಲಕ್ಕೇರಲಿಲ್ಲ. ಅವರೆಂದೂ ಯಾವ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡಲಿಲ್ಲ. ಅಹಿಂದ ವರ್ಗಗಳನ್ನು ಬಳಸಿಕೊಂಡು ಮೇಲಕ್ಕೆ ಬರುವುದಕ್ಕೂ, ಆ ವರ್ಗಗಳನ್ನು ಮೇಲೆಕ್ಕೆ ತರುವುದಕ್ಕೂ ವ್ಯತ್ಯಾಸವಿದೆಯಲ್ಲವೇ?
3. ಅರಸು ಅವರು ಅಂದು ಪ್ರಧಾನಿ ಶ್ರೀಮಂತಿ ಇಂದಿರಾ ಗಾಂಧಿಯವರ ಹೈಕಮಾಂಡ್ ಎದುರು ರಾಜ್ಯದ ಹಿತಕ್ಕಾಗಿ ಎದೆಯುಬ್ಬಿಸಿ ನಿಂತರು. ಅವರೆಂದೂ, ಪ್ರತಿ ನಿರ್ಧಾರಕ್ಕೂ, ದೆಹಲಿಯ ಹಸಿರು ನಿಶಾನೆಗಾಗಿ ಕಾಯುತ್ತಿರಲಿಲ್ಲ. ಅವರೆಂದೂ 'ರಾಜ್ಯಕ್ಕೆ ಮಾರಿ, ಪರರಾಜ್ಯಕ್ಕೆ ಉಪಕಾರಿ' ಆಗಲಿಲ್ಲ, ಹೈಕಮಾಂಡ್ ಹೇಳಿತು ಅಂತ ಅಕ್ರಮ ನಿವಾಸಿಗಳಿಗೆ ಭೂಮಿ ಕೊಡಲು ಮುಂದಾಗಲಿಲ್ಲ. ಕುರ್ಚಿಗಾಗಿ ಯಾರೊಂದಿಗೂ ಒಳ ಒಪ್ಪಂದವನ್ನಾಗಲಿ, ಅದಕ್ಕಾಗಿ ತಂತ್ರಗಾರಿಕೆಯನ್ನಾಗಲಿ ಮಾಡಲಿಲ್ಲ. ‘ಸ್ವಾಭಿಮಾನ’ಕ್ಕೂ ‘ಶರಣಾಗತಿ’ಗೂ ಹೋಲಿಕೆ ಮಾಡಲು ಸಾಧ್ಯವೇ?
4. ಅರಸು ಅವರು ಶಾಶ್ವತವಾದ ಭೂ ಸುಧಾರಣೆ ತಂದರು. ಚುನಾವಣೆ ಗೆಲ್ಲಲು ಯಾವ ‘ಗ್ಯಾರಂಟಿ’ ಘೋಷಿಸಲಿಲ್ಲ. ರಾಜ್ಯದ ಬೊಕ್ಕಸ ಬರಿದು ಮಾಡಲಿಲ್ಲ. ‘ದೂರದೃಷ್ಟಿ’ಗೂ, ‘ಮತ ದೃಷ್ಟಿ’ಗೂ ದೊಡ್ಡ ಅಂತರವಿದೆ ಅಲ್ಲವೇ?
5. ಅರಸು ಅವರು ಹೊಸ ತಲೆಮಾರಿನ ಹಲವು ನಾಯಕರನ್ನು ಬೆಳೆಸಿದರು. ಅವರೆಂದಿಗೂ ಯಾರನ್ನೂ ಹತ್ತಿಕ್ಕಲು ಪ್ರಯತ್ನಿಸುತ್ತಾ, ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಾ ಕಾಲ ಕಳೆಯಲಿಲ್ಲ. 'ಅವರಷ್ಟು' ದಿನಗಳು ಅಧಿಕಾರದಲ್ಲಿರುವುದಕ್ಕೂ, 'ಅವರಂತೆ' ಅಧಿಕಾರ ನಡೆಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಅಲ್ಲವೇ?
ದಾಖಲೆ ಸರಿಗಟ್ಟಿದವರೆಲ್ಲ ಇತಿಹಾಸ ಬರೆಯುವುದಿಲ್ಲ, ಇತಿಹಾಸ ಅವರನ್ನು ನೆನಪಿಟ್ಟುಕೊಳ್ಳುವುದೂ ಇಲ್ಲ!
Saddened by the passing of former Union Home Minister Shri Shivraj Patil ji. A veteran parliamentarian, former Lok Sabha Speaker and seven-time MP from Latur, he served the nation with dignity and dedication through decades of public life. Heartfelt condolences to his family and well-wishers. Om Shanti 🙏
ಕಾರ್ಕಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಂದು ನಮ್ಮ ಪಕ್ಷದ ಮುಖಂಡರು , ಮಾಜಿ ಸಚಿವರು, ಜನಪ್ರಿಯ ಶಾಸಕರು ಮತ್ತು ಆತ್ಮೀಯರಾದ ಶ್ರೀ @karkalasunil ಅವರ ನಿವಾಸಕ್ಕೆ ಭೇಟಿ ನೀಡಿ, ಅವರೊಂದಿಗೆ ಕ್ಷೇತ್ರದ ಅಭಿವೃದ್ಧಿ, ಸಂಘಟನೆ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಸದರಾದ ಶ್ರೀ @CaptBrijesh , ಶಾಸಕರುಗಳಾದ ಶ್ರೀ ಯಶಪಾಲ್ ಸುವರ್ಣ, ಶ್ರೀ ಹರೀಶ್ ಪೂಂಜಾ, ಶ್ರೀ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ನವೀನ್ ಶೆಟ್ಟಿ, ಮಂಡಲ ಅಧ್ಯಕ್ಷರಾದ ಶ್ರೀ ನವೀನ್ ನಾಯಕ್ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಅನ್ನದಾತ ರೈತರ ಸಂತಸ ಮತ್ತು ಗೌರವದ 21ನೇ ಕಂತು!
ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ @narendramodi ಜೀ ರವರು ಇಂದು ಇಡೀ ದೇಶದ ಸುಮಾರು 9 ಕೋಟಿಗೂ ಹೆಚ್ಚಿನ ರೈತರ ಖಾತೆಗಳಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 18,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ 21ನೇ ಕಂತನ್ನು ವರ್ಗಾಯಿಸಲಿದ್ದಾರೆ.
ನಮ್ಮ ಅನ್ನದಾತರಿಗೆ ನೆರವಾಗುವುದು ನಮ್ಮ ಕರ್ತವ್ಯ, ಅದು ರಾಷ್ಟ್ರಕ್ಕೆ ಗೌರವ ಸಲ್ಲಿಸಿದಂತೆ! ನಮ್ಮ ರೈತರಿಗೆ ಎಲ್ಲ ರೀತಿಯ ನೆರವು, ಬೆಂಬಲ, ಸಹಕಾರ, ಅವರ ಆದಾಯ ದ್ವಿಗುಣಗೊಳಿಸುವುದೂ ಸೇರಿದಂತೆ ನಮ್ಮ ರೈತರ ಸಮಗ್ರ ಏಳಿಗೆ ನಿಟ್ಟಿನಲ್ಲಿ ಮೋದಿ ಜೀ ಸರ್ಕಾರ ನಿರಂತರವಾಗಿ ಕಾರ್ಯಪ್ರವೃತ್ತವಾಗಿದೆ.
ವಿದೇಶದಲ್ಲಿ ಬಹುಕಾಲ ಕಳೆಯುವ ಪಾರ್ಟ್ ಟೈಮ್ ರಾಜಕಾರಣಿ @RahulGandhi ಅವರನ್ನು ಹಲವು ಬಾರಿ ರೀ-ಲಾಂಚ್ ಮಾಡಿದರೂ, 95 ಚುನಾವಣಾ ಸೋಲನ್ನು ಕಂಡು ಶತಕದತ್ತ ಮುನ್ನುಗ್ಗುತ್ತಿದ್ದಾರೆ ! ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಪಕ್ಷಗಳನ್ನೂ ಜೊತೆಗೆ ಮುಳುಗಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಮಂದಬುದ್ಧಿಯ ಬಾಲಕನನ್ನು ಇಂಡಿ ಮೈತ್ರಿಕೂಟದ ನಾಯಕತ್ವದಿಂದ ಕೆಳಗಿಳಿಸಲು ಮೈತ್ರಿ ಪಕ್ಷಗಳು ಸಜ್ಜಾಗಿವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದೊಳಗೇ ನಕಲಿ ಗಾಂಧಿ ಕುಟುಂಬದ ವಿರುದ್ಧ ಬಂಡಾಯ ಏಳಲಿದೆ. ರಾಹುಲ್ ಗಾಂಧಿಗೆ ಶಾಶ್ವತವಾಗಿ ವಿದೇಶದಲ್ಲಿ ಇರುವ ಭಾಗ್ಯವನ್ನು ದೇಶದ ಜನತೆ ಕರುಣಿಸಲಿದ್ದಾರೆ.
#LoserRahul