ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ತೆರೆಗೆ ತರುವುದು ಸಾಮಾನ್ಯ ವಿಷಯವಲ್ಲ ಒಂದಷ್ಟು ಕಡೆ ಸೀನ್ & song ಅವಶ್ಯಕತೆ ಇರಲಿಲ್ಲ ಅದನ್ನ ಬಿಟ್ಟರೆ ಒಳ್ಳೆ interval ಸಿಗುತ್ತೆ. ಇನ್ನೂ ಸೆಕೆಂಡ್ ಹಾಫ್ನಲ್ಲಿ ಒಂದು ಮಸ್ತ್ ಸೆಂಟಿಮೆಂಟ್ twist ಸಿಗುತ್ತೆ ಅದು ಪ್ರೇಕ್ಷಕರ ಮನ ಮುಟ್ಟುತ್ತೆ
ಒಟ್ಟಾರೆಯಾಗಿ MAX mass entertainment movie. 2/2
MAX movie ನೋಡುವಾಗ ತಮಿಳಿನ ಖೈದಿ ಸಿನಿಮಾ ನೆನಪು ಬಂದೆ ಬರುತ್ತೆ. ಯಾಕೆಂದರೆ, ಎರಡೂ ಸಿನಿಮಾಗಳಲ್ಲಿಯೂ ಬರುವ ಒಂದು ರಾತ್ರಿಯಲ್ಲಿ ನಡೆಯುವ ಕಥೆ, ಪೋಲಿಸ್ ಸ್ಟೇಷನ್ ಮೇಲಿನ ಅಟ್ಯಾಕ್ ಕಾಮನ್ ಪಾಯಿಂಟ್ಗಳು. ಕಥೆ ವಿಚಾರಕ್ಕೆ ಬಂದರೆ ಇಲ್ಲಿ ಬೇರೆಯದೇ ಇದೆ, 'ಮ್ಯಾಕ್ಸ್' full mass movie. full ವೇಗವಾಗಿದೆ ಸಿನಿಮಾ ಸಾಗುತ್ತೆ. 1/2
ಪ್ರೀತಿ ಒಂದು ಭಾವನೆಯೇ ಅಲ್ಲ. ಕಾಮ ಕ್ರೋಧ ಮದ ಮೋಹ ಮಾತ್ಸರ್ಯ ಲೋಭ ಎಂಬ ಆರು ವೈರಿಗಳ ಪಟ್ಟಿಯಲ್ಲಿ ಪ್ರೀತಿಯೇ ಇಲ್ಲ. ಪ್ರೀತಿ ಎಂಬುದು ಹಾಗಿದ್ದರೆ ಏನು ? ಕಾಮವೇ? .. ಮೋಹವೇ ?
ಗೊತ್ತಿಲ್ಲದೇ ಇದ್ದರೆ ಪ್ರೀತಿಯನ್ನು ಕೊಂದುಬಿಡಿ. ಅದು ಆಗದೆ ಹೋದರೆ,
"ಪ್ರೀತಿಸುವವರನ್ನು ಕೊಂದುಬಿಡಿ"
ಒಮ್ಮೆ ನೀವು ಈ ಪುಸ್ತಕವನ್ನು ಓದಿ ಬಿಡಿ.
2/2
ಪ್ರೀತಿಸುವವರನ್ನು ಕೊಂದುಬಿಡಿ ಎಂಬ ಟೈಟಲ್ ನೋಡಿನೇ ಓದಬೇಕು ಅನಿಸಿ ತೆಗೆದುಕೊಂಡೆ. ಒಂದು ರೀತಿಯಲ್ಲಿ ಈ ಶೀರ್ಷಿಕೆಯೇ ವಿಚಿತ್ರವಾಗಿದೆ. ಇದರೊಳಗೆ ಏನಿರಬಹುದು ಎಂಬ ಕುತೂಹಲ ಹುಟ್ಟುತ್ತದೆ.
ಪ್ರೀತೀನ ಸಾಯಿಸೋದು ಕೇಳಿದ್ದೀನಿ ಆದರೆ ಮೊದಲಬಾರಿ ಪ್ರೀತಿಸಿದವರನ್ನು ಕೊಂದುಬಿಡಿ ಅನ್ನೋದು ಕೇಳಿದ್ದು.
1/2
ಒಬ್ಬ ವ್ಯಕ್ತಿಯ ಬದುಕನ್ನೇ ಬದಲಿಸಿ ವ್ಯಕ್ತಿತ್ವ ರೂಪಿಸಬಲ್ಲದ್ದು ಈ ಪುಸ್ತಕ
ಎಲ್ಲರೂ ಸಮಯವಿದ್ದಾಗ ಓದುವುದಕ್ಕಿಂತ ಸಮಯ ಮಾಡಿಕೊಂಡು ಓದುವುದು ಉತ್ತಮ,
ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ
"ಪುಸ್ತಕವಿಲ್ಲದ ಮನೆ ಆತ್ಮವಿಲ್ಲದ ದೇಹದಂತೆ"
ಎಲ್ಲಾ ನನ್ನ ಸಹೃದಯಿ ಪುಸ್ತಕ ಅಭಿಮಾನಿಗಳಿಗೆ
ವಿಶ್ವ ಪುಸ್ತಕ ದಿನದ ಶುಭಾಶಯಗಳು
#kannadabooks
ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ... ಬಹಳ ಮುಖ್ಯ.
ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು.ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ ಮಾಡುವ ಮನೆಗಳನ್ನು ನಿರ್ಮಿಸುವ ಅಗತ್ಯವನ್ನು ಒತ್ತಿಹೇಳಲು ನಾನು ಈ ಅವಕಾಶವನ್ನು ಬಳಸಲು ಬಯಸುತ್ತೇನೆ. ಬೆಂಗಳೂರಿನ ನನ್ನ ಫಾರ್ಮ್ ಹೌಸ್ಗಾಗಿ ನಾನು ಮಾಡಿದ್ದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
20-36 ಅಡಿ ಆಳದ ರೀಚಾರ್ಜ್ ಬಾವಿಗಳನ್ನು ಸೈಟ್ನಾದ್ಯಂತ ಆಯಕಟ್ಟಿನ ಬಿಂದುಗಳಲ್ಲಿ ಸ್ಥಾಪಿಸಲಾಗಿದ್ದು, ರೀಚಾರ್ಜ್ ಬಾವಿಗಳಿಗೆ ಮೇಲ್ಮೈ ನೀರಿನ ಹರಿವನ್ನು ನಿರ್ದೇಶಿಸಲು ಸಾಕಷ್ಟು ಇಳಿಜಾರುಗಳಿವೆ. ಪ್ರತಿಯೊಂದು ಬಾವಿಯು ಫಿಲ್ಟರ್ ವ್ಯವಸ್ಥೆಯನ್ನು ಹೊಂದಿದೆ, ವಿವಿಧ ಸಮುಚ್ಚಯಗಳೊಂದಿಗೆ ಒಂದು ಹೂಳು ಬಲೆ, ಅಂದರೆ ಕಲ್ಲಿನ ಗಾತ್ರಗಳು ಮತ್ತು ಮರಳು, ಪದರಗಳ ಮೂಲಕ ನೀರಿನ ಅಂಗೀಕಾರವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ .
ರೀಚಾರ್ಜ್ ಬಾವಿ - ರೀಚಾರ್ಜ್ ಪಿಟ್ಗೆ ಹೋಲಿಸಿದರೆ - ಹೆಚ್ಚು ನೀರನ್ನು ಸಂಗ್ರಹಿಸಬಹುದು ಮತ್ತು ಹೆಚ್ಚು ಆಳವಾದ ಜಲಚರಗಳನ್ನು ತಲುಪಲು ತಲಾಧಾರದಲ್ಲಿನ ಸರಂಧ್ರ ಪದರಗಳ ಮೂಲಕ ನೀರನ್ನು ನಿಧಾನವಾಗಿ ಹರಿಯುವಂತೆ ಮಾಡುತ್ತದೆ.
ನಾನು ಪರ್ಮಾಕಲ್ಚರ್ ತತ್ವಗಳನ್ನು ಸಹ ಜಾರಿಗೆ ತಂದಿದ್ದೇನೆ. ಪರ್ಮಾಕಲ್ಚರ್ ಪರಿಸರವನ್ನು ಪುನರುಜ್ಜೀವನಗೊಳಿಸುವ ವೃತ್ತಾಕಾರದ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ, ಅದನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಪರ್ಮಾಕಲ್ಚರ್ನ ಪ್ರಮುಖ ಫಲಿತಾಂಶವೆಂದರೆ ನೀರಿನ ಬೇಡಿಕೆಯಲ್ಲಿನ ಕಡಿತ. ಮಣ್ಣಿನಿಂದ ಬಾಷ್ಪೀಕರಣದ ನಷ್ಟವನ್ನು ಕಡಿಮೆ ಮಾಡುವ ತೋಟವನ್ನು ಬಳಸಿಕೊಂಡು ಸೂಕ್ತವಾದ ನೆಲದ ಹೊದಿಕೆಯೊಂದಿಗೆ ಸತ್ತ ಎಲೆಗಳು ಮತ್ತು ಮರದ ಚಿಪ್ಸ್ ಬಳಸಿ ಮಲ್ಚಿಂಗ್ ಮಾಡುವ ಮೂಲಕ ಇದನ್ನು ಸಾಧಿಸಲಾಗುತ್ತದೆ.
ಈ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾವು ನೀರನ್ನು ಸಂರಕ್ಷಿಸಬಹುದು ಮತ್ತು ಮಳೆ ನೀರು ಕೊಯ್ಲು ಉತ್ತಮಗೊಳಿಸಬಹುದು ಮತ್ತು ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸಬಹುದು. ಆ ದೃಶ್ಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
#ConserveWater #Rainharvesting
#BengaluruWaterCrisis
ಮಹಾಶಿವರಾತ್ರಿಯ ಶುಭ ದಿನದಂದು, ತಪಸ್ವಿ ಕಿರುಚಿತ್ರವನ್ನು ನಿಮ್ಮ ಮುಂದಿಡುತ್ತಿದ್ದೇವೆ
Rudrakshaproduction YouTube channel ನಲ್ಲಿ ನೋಡಿ ಹಂಚಿ ಹರಸಿ ❤
Presenting the short film Tapasvi on this auspicious day of #MahaShivaratri
Team eagerly expecting all your support ❤
https://t.co/6cDvZ4a5wm
ಜೊತೆ ಬೆಕ್ಕಿನ ಕಣ್ಣಿನ ಚೆಲುವೆರು ಕಾಣೆಯಾಗಿರುವುದು ಕೂಡ ಜೊತೆಯಾಗುತ್ತೆ ಓದುವಾಗ ಬೇಗ ತಿಳಿದುಕೊಳ್ಳಬೇಕು ಮುಂದೆ ಏನ್ ಆಗುತ್ತೆ ಅಂತ ಅನಿಸುತ್ತೆ, ಇಲ್ಲಿ ನಮ್ಮ ಹಿಮಾವಂತ್ ಅವನ ಕೇಸ್ ಬೇಧಿಸುತ್ತಾನೆ. ಒಂದೇ ಟೈಮ್ ನಲ್ಲಿ ಓದಿ ಮುಗಿಸಿದ್ದೆ ಅಷ್ಟು ಚೆನ್ನಾಗಿದೆ ನೀವು ಓದಿ.3/3
ಕೌಶಿಕ್ ಕೊಡುರಸ್ತೆಯವರ ಪತ್ತೇದಾರಿ ಕಾದಂಬರಿ "ಕಾಲಯ ತಸ್ಮೈ ನಮಃ " ಇದು ನಾನು ಓದುತ್ತಿರುವುದು ಇವರ ಮೂರನೇ ಪತ್ತೇದಾರಿ ಕಾದಂಬರಿ. ಕಪ್ಪು ಕಾದಂಬರಿ ಕೇಸು, ಕಮಲಾಪುರ ಎಸ್ಟೇಟ್, ಇಷ್ಟವಾಗಿತ್ತು, ಇನ್ನೂ ಇವರ 6 ಕಾದಂಬರಿಗಳನ್ನ ತಪ್ಪದೇ ಓದಬೇಕು ನಿರ್ಧಾರ ಮಾಡಿದ್ದೀನಿ.
ಕಾಲಯ ತಸ್ಮೈ ನಮಃ ಇದು ಓದುಗನನ್ನು ಕೊನೆಯವರೆಗೆ ಗುಟ್ಟು ಬಯಲಾಗದಂತೆ 1/3
ಬರೆದಿದ್ದಾರೆ,
ಈ ಕಾದಂಬರಿಯನ್ನು ಒಂದೇ ಟೈಮ್ ನಲ್ಲಿ ಓದಿ ಮುಗಿಸಿದೆ ಅಷ್ಟು ಚೆನ್ನಾಗಿ ಕತೆ ಕಟ್ಟಿದ್ದಾರೆ. ಒಂದು ಮಟ್ಟಿಗೆ ಪತ್ತೇದಾರಿ ಕಾದಂಬರಿಯನ್ನು ಓದುವಂತೆ ಪ್ರೇರಿಪೀಸಿದ್ದು ಇವರ ಕಾದಂಬರಿಗಳೇ.
ಈ ಕಾದಂಬರಿಯಲ್ಲಿ ನೀಲಿ ಕಣ್ಣಿನ ಚೆಲುವೆ ಕೊಲೆಯಿಂದ ಎಳೆ ಬಿಚ್ಚಿಕೊಳುತ್ತ ಹೋಗುತ್ತೆ ನಂತರ ನೀಲಿ ಕಣ್ಣಿನ, 2/3
So called ರಾಷ್ಟ್ರೀಯವಾದಿ ಪತ್ರಕರ್ತರು ಎಂದು ಹೇಳಿಕೊಳ್ಳುವ ಮೋದಿ ಸರ್ಕಾರದ ಭಟ್ಟಂಗಿ ಸುದ್ದಿ ಮಾಧ್ಯಮಗಳೆ ಈ ರಮಾಕಾಂತ್ನಾ ನೋಡಿಯಾದರೂ ಸ್ವಲ್ಪ ನೈಜ ಜರ್ನಲಿಸಂ ಕಲಿಯಿರಿ..
#GodiMedia
ಬೇರೆ ರಾಜ್ಯದವರ ಲಾಬಿ ಇಂದ ನಮ್ಮ ಕಾಡನ್ನು ಉಳಿಸಿಕೊಳ್ಳಬೇಕು ಬಂಡೀಪುರದ ಕಾಡಿನ ಹಾದಿಯಲ್ಲಿ ಯಾವ ರೈಲು ಬೇಡ ಹಾಗೂ ರಾತ್ರಿ ಸಂಚಾರ ನಿಷೇಧವನ್ನು ಹಾಗೆ ಇಡಬೇಕು,ಬಂಡೀಪುರದಲ್ಲಿ ಲಂಟಾನ ದಂತಹ ಕಳೆ ಗಿಡಗಳು ವನ್ಯ ಜೀವಿಗಳಿಗೆ ಮಾರಕವಾಗಿದೆ. ರೈಲು,ಫ್ಲೈಓವರ್,ರಾತ್ರಿ ಸಂಚಾರದಂತಹ ಕಾಮಗಾರಿಗಳು ಮತ್ತಷ್ಟು ವಿನಾಶ ತರಲಿದೆ. #ಬಂಡೀಪುರ_ಉಳಿಸಿ
ಬಾರುಕೋಲು ಚಳುವಳಿ ಬಗ್ಗೆ, kfc ವಿರುದ್ಧ ಹೊರಡಿದ್ದು, ಈ ನಗ್ನ ಥಿಯೇಟರ್’ನ ಕಲಾವಿದರು ಈ ನಾಟಕ ಮಾಡುವ ಮೂಲಕ ಅಸಾಧಾರಣ ಕೆಲಸ ಮಾಡಿದ್ದಾರೆ, ನನಗನಿಸಿದ್ದ ಮಟ್ಟಿಗೆ ಈ ದಂತಕತೆಯನ್ನು ನಾಟಕ ರೂಪ ಕೊಡುವುದು ಕಷ್ಟಕರ ಮಾತು, ಎಂ.ಡಿ.ಎನ್ ಅವರ ಹೋರಾಟದ ಬಗ್ಗೆ ಹೇಳುವುದ್ದಕ್ಕೆ ಈ ನಾಟಕ ಸಾಲದು ಒಂದು ದೊಡ್ಡ ಸಿನಿಮಾನೇ ಮಾಡಬಹುದು. 4/4
ಸ್ವಲ್ಪ ಕೇಳಿ ತಿಳಿದಿದ್ದೆ, ಸ್ವಲ್ಪ ಮಟ್ಟಿಗೆ ವಿಡಿಯೋ ಮೂಲಕ ನೋಡಿ ತಿಳಿದಿದ್ದೆ, ಇನ್ನೂ ಸ್ವಲ್ಪ ಪುಸ್ತಕ ಓದಿ ತಿಳಿದಿದ್ದೆ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರ ಬಗ್ಗೆ. ಇವರ ದಂತಕತೆಯೊಂದು ಕತೆಯಾಗಿದೆ ಈ ದಂತಕತೆಯನ್ನು ಬರವಣಿಗೆ ಮೂಲಕ ನಾಟಕರೂಪವನ್ನು ಕೊಟ್ಟವರು ಲೇಖಕರು ನಟರಾಜ ಹುಳಿಯಾರ್ ಅವರು. ಇದನ್ನ ನಿರ್ದೇಶನ ಮಾಡಿರುವವರು 1/4
ಎಂ,ಡಿ,ಎನ್ ಅವರ ಈ ಮಾತು ವಿಡಿಯೋ ದಲ್ಲಿ ನೋಡಿದ್ದೇ
"ರೈತನಲ್ಲ ಸಾಲಗಾರ, ಸರ್ಕಾರವೇ ಬಾಕಿದಾರ" ಎನ್ನುವ ಮೂಲಕ ನಿಲುವು ಹೊಂದಿದ್ದರು ಇದೆ ಮಾತು ಮತ್ತೆ ನಾಟಕದಲ್ಲಿ ಕೇಳಿದೆ. ಎಂ.ಡಿ.ಎನ್, ಅವರು ರೈತರಿಗೆ ಆಸರೆಯಾಗಿದ್ದರು ರೈತ ಚಳವಳಿಗೆ ತಾತ್ವಿಕ ನೆಲೆ ಒದಗಿಸಿದವರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 3/4