ಕಲಬುರಗಿ ಜಿಲ್ಲೆಯ ಹಾಸ್ಟೆಲ್ಗಳ ದುಸ್ಥಿತಿ: ಬಡ ವಿದ್ಯಾರ್ಥಿಗಳ ಪಾಲಿನ ‘ವಂಚಕ’ ಕಾಂಗ್ರೆಸ್ ಸರ್ಕಾರ!
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ರವರೇ, ಕಲಬುರಗಿ ಜಿಲ್ಲೆಯ ಹಾಸ್ಟೆಲ್ಗಳ ಮೂಕ ವೇದನೆಯನೊಮ್ಮೆ ಆಲಿಸಿ!
ನಾಳೆ ತಾವು ಕಲಬುರಗಿಗೆ ಆಗಮಿಸುತ್ತಿದ್ದೀರಿ. ಆದರೆ ನಿಮ್ಮ ಸ್ವಾಗತಕ್ಕೆ ಸಜ್ಜಾಗಿರುವುದು ಅಭಿವೃದ್ಧಿಯ ಚಿತ್ರಣವಲ್ಲ; ಸರ್ಕಾರಿ ಹಾಸ್ಟೆಲ್ಗಳಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿರುವ ಸಾವಿರಾರು ಬಡ ವಿದ್ಯಾರ್ಥಿಗಳ ನೋವಿನ ವಾಸ್ತವ ಹಾಗೂ ನಿಮ್ಮ ಕಾಂಗ್ರೆಸ್ ಸರ್ಕಾರದ ವಿಫಲತೆಯ ಪ್ರತಿಬಿಂಬ.
ಇಂದಿನ @Vijaykarnataka ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಯ ಪ್ರಕಾರ, ಕಲಬುರಗಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ 110 ಹಾಸ್ಟೆಲ್ಗಳಿಗೆ ಕಳೆದ ಎರಡು ವರ್ಷಗಳಿಂದ ಬೆಡ್, ಕಾಟ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸಿಲ್ಲ. ಇದರ ಪರಿಣಾಮವಾಗಿ 13,520ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆಲದ ಮೇಲೆಯೇ ಮಲಗುವುದು, ಒಂದೇ ಹಾಸಿಗೆಯಲ್ಲಿ ಇಬ್ಬರು ಮಲಗುವುದು ಹಾಗೂ ಮುರಿದುಹೋದ ಮಂಚಗಳಲ್ಲೇ ದಿನ ಕಳೆಯುವಂತಹ ದುಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಪ್ರಶ್ನೆಗೆ ಅಧಿಕಾರಿಗಳಿಂದ ಕೇಳಿಬರುತ್ತಿರುವ ಒಂದೇ ಉತ್ತರ—"ಹಣವಿಲ್ಲ."
SCSP-TSP ಯೋಜನೆಯಡಿ ಮೀಸಲಾಗಿರುವ ರೂ.53,000 ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲು ಸರ್ಕಾರಕ್ಕೆ ಹಣವಿದೆ. ಆದರೆ ಹಾಸ್ಟೆಲ್ಗಳಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮಾತ್ರ ಹಣವಿಲ್ಲವೇ? ಬಡ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭವಿಷ್ಯಕ್ಕಿಂತ ಪ್ರಚಾರ ಹಾಗೂ ರಾಜಕೀಯವೇ ಮುಖ್ಯವೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
ಸನ್ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಕಲಬುರಗಿ ಪ್ರವಾಸವು ಕೇವಲ ಅಧಿಕಾರಿಗಳ ಸಭೆ, ಭಾಷಣ ಹಾಗೂ ಛಾಯಾಚಿತ್ರಗಳಿಗೆ ಸೀಮಿತವಾಗಬಾರದು. ದಯವಿಟ್ಟು ಒಂದು ಬಾರಿ ಈ ಹಾಸ್ಟೆಲ್ಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ನೈಜ ಬದುಕಿನ ಪರಿಸ್ಥಿತಿಯನ್ನು ಕಣ್ಣಾರೆ ನೋಡಿ. ಅವರ ಸಂಕಷ್ಟಕ್ಕೆ ಸ್ಪಂದಿಸಿ, ಅಗತ್ಯ ಮೂಲಸೌಕರ್ಯಗಳನ್ನು ತಕ್ಷಣವೇ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ.
👉ಉತ್ತರಿಸಬೇಕಾದ ಕೆಲವು ಪ್ರಶ್ನೆಗಳು:
➡️ 110 ಹಾಸ್ಟೆಲ್ಗಳಲ್ಲಿ 1,000 ಬೆಡ್ಗಳು, 2,000 ಕಾಟ್ಗಳು, 84 ಆರ್.ಒ. ಫಿಲ್ಟರ್ಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯಿರುವಾಗ, ಈ ಬಡ ವಿದ್ಯಾರ್ಥಿಗಳ ಬದುಕಿನ ಜವಾಬ್ದಾರಿ ಯಾರದು❓
➡️ ಜಿಲ್ಲೆಯ ಅಭಿವೃದ್ಧಿಯ ಹೊಣೆ ಹೊತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು ವಿದ್ಯಾರ್ಥಿಗಳ ಈ ಸಂಕಷ್ಟದ ಬಗ್ಗೆ ಏಕೆ ಗಮನಹರಿಸಿಲ್ಲ❓ಜಿಲ್ಲಾ ಉಸ್ತುವಾರಿ ಸಚಿವರ ಗಮನ ಎಲ್ಲಿದೆ❓ಯಾವ ವಿಷಯದ ಮೇಲಿದೆ ❓ಈ ನಿರ್ಲಕ್ಷ್ಯಕ್ಕೆ ಕೊನೆ ಯಾವಾಗ❓
➡️ SCSP/TSP ಅನುದಾನದ ಬಳಕೆಯ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಪ್ರಶ್ನೆಗಳಿಗೆ ಕಾಂಗ್ರೆಸ್ ಸರ್ಕಾರ ಯಾವ ಸ್ಪಷ್ಟನೆ ನೀಡಲಿದೆ❓
➡️ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಾದ ಅನುದಾನವು ಅವರ ಶಿಕ್ಷಣ ಮತ್ತು ಕಲ್ಯಾಣಕ್ಕೇ ಆದ್ಯತೆಯಾಗಿ ಬಳಕೆಯಾಗಬೇಕಲ್ಲವೇ❓
ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತದೆ. ಆದರೆ ಬಡ ವಿದ್ಯಾರ್ಥಿಗಳ ಮೂಲಭೂತ ಅಗತ್ಯಗಳೇ ಈ ಮಟ್ಟಿಗೆ ನಿರ್ಲಕ್ಷ್ಯಕ್ಕೊಳಗಾಗಿದ್ದರೆ, ಅದು ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಇದು ಕಲ್ಯಾಣಕಾರಿ ಆಡಳಿತದ ಲಕ್ಷಣವಲ್ಲ; ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಂಗ್ರೆಸ್ ಸರ್ಕಾರದ ತೀವ್ರ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ.
ಸನ್ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ನಾಳಿನ ಕಲಬುರಗಿ ಪ್ರವಾಸವು ಕೇವಲ ಪ್ರಚಾರದ ಕಾರ್ಯಕ್ರಮವಾಗದೆ, ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಆಶಾಕಿರಣ ಮೂಡಿಸುವ ಪ್ರವಾಸವಾಗಲಿ. ಹಾಸ್ಟೆಲ್ಗಳಿಗೆ ಖುದ್ದಾಗಿ ಭೇಟಿ ನೀಡಿ, ಸಮಸ್ಯೆಗಳನ್ನು ಪರಿಶೀಲಿಸಿ, ಬೆಡ್, ಕಾಟ್, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ತುರ್ತಾಗಿ ಒದಗಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
#CongressFailsKarnataka #SaveHostelStudents #StudentWelfare #SocialJustice #KalyanaKarnataka #KarnatakaPolitics
'ಛಲವೊಂದಿದ್ದರೆ ನ್ಯೂನತೆ ಅಡ್ಡಿಯಾಗಲಾರದು' ಎಂಬುದಕ್ಕೆ ಕಲಬುರಗಿ ತಾಲ್ಲೂಕಿನ ಹಣಮಂತ ಜಮಾದಾರ ಅವರು ಪ್ರತ್ಯಕ್ಷ ಸಾಕ್ಷಿ. ಎರಡೂ ಕಾಲಿಲ್ಲದಿದ್ದರೂ ಕೈಗಳ ಸಹಾಯದಿಂದ ತೆವಳಿಕೊಂಡು ತರಕಾರಿ ಬೆಳೆದು ಜೀವನೋಪಾಯಕ್ಕೆ ಯಶಸ್ವಿ ಮಾರ್ಗ ಕಂಡುಕೊಂಡಿದ್ದಾರೆ. ಇಚ್ಚಾಶಕ್ತಿಯೊಂದಿದ್ದರೆ ಎಲ್ಲವೂ ಸಾಧ್ಯವೆಂಬುದನ್ನು ಜಮಾದಾರ್ ಸಾಧಿಸಿ ತೋರಿಸಿದ್ದಾರೆ.
#PSISCAM ನಲ್ಲಿ ಹೀಗೂ ಆಗಿದೆ. ಶ್ರೀಮಂತನಾಗಿದ್ದ ಪಿಎಸ್ಐ ಅಭ್ಯರ್ಥಿ ಪರೀಕ್ಷಾ ಮುನ್ನಾ ದಿನ ರಾತ್ರಿ ಕಲಬುರಗಿ ರೈಲು ನಿಲ್ದಾಣ ಪ್ಲಾಟ್ ಫಾರಂನಲ್ಲಿ ಯಾಕೆ ಮಲಗಿದ್ದ ಎನ್ನುವುದು ಕುತೂಹಲ..
@Vijaykarnataka@Sudarshanvk2@RajeevaVK
#KPTCLSCM ನಮ್ಮ ಶಂಕೆ ದೃಢಪಟ್ಟಿದೆ. ಪರೀಕ್ಷೆಯಲ್ಲಿ ಅಕ್ರಮ ನಡದೇ ಇಲ್ಲ ಎಂದು ವಾದಿಸುತ್ತಿರುವವರಿಗೆ ಇಲ್ಲಿದೆ ಸಾಕ್ಷಿ...
#PSISCAM ಇನ್ನೂ ಆರಿಲ್ಲ. ಈಗ ಮತ್ತೊಂದು ಪರೀಕ್ಷಾ ಅಕ್ರಮ.. ಹೀಗಾದರೆ ಪ್ರತಿಭಾವಂತರಿಗೆ ಬೆಲೆ ಎಲ್ಲಿ?
#PSISCAM ಇನ್ನೂ ಜೀವಂತ ಇರುವಾಗಲೇ ಕೆಪಿಟಿಸಿಎಲ್
ಎಸ್ ಡಿಎ ಪರೀಕ್ಷೆಯಲ್ಲೂ ಬ್ಲೂಟೂತ್ ಅಕಮ್ರದ ವಾಸನೆ ಬಂದಿದೆ. ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು. ಆ ಮೂಲಕ ಉಳಿದವರಿಗೂ ಎಚ್ಚರಿಕೆ ಗಂಟೆ ರವಾನಿಸಬೇಕು.
ವಿಧಾನಸಭೆ ಕಲಾಪಗಳಿಗೆ ಮಾಧ್ಯಮಗಳ ಕೆಮೆರಾ ಬ್ಯಾನ್ ಮಾಡುವ ಮೂಲಕ, ಜನಪ್ರತಿನಿಧಿಗಳ ಅತಿರೇಕದ ನಡವಳಿಕೆಯನ್ನು ಸಾರ್ವಜನಿಕರಿಂದ ಮರೆಮಾಚುವ ಹುನ್ನಾರ ನಡೆಸಲಾಗಿದೆ. ವಿಧಾನಸಭೆ ಕಲಾಪದ ಫೋಟೊ ಬದಲು ಪುಟದಲ್ಲಿ ಖಾಲಿ ಜಾಗ ಬಿಡುವ ಮೂಲಕ ವಿಜಯ ಕರ್ನಾಟಕ #mediaban ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದೆ.
@Vijaykarnataka@CMofKarnataka