ಪರೀಕ್ಷೆ ಮೇಲೆ ಪರೀಕ್ಷೆಗಳನ್ನು ನಡೆಸಿದರೂ ಕೆಪಿಎಸ್ಸಿ ಪ್ರಶ್ನೆ ಪತ್ರಿಕೆಯಲ್ಲಿ ದೋಷ, ಅನುವಾದದಲ್ಲಿ ದೋಷ, ಪರೀಕ್ಷಾ ವೇಳಾಪಟ್ಟಿ, ಫಲಿತಾಂಶದಲ್ಲಿ ಗೊಂದಲ, ಪ್ರಶ್ನೆಪತ್ರಿಕೆ ಸೋರಿಕೆ, ಅವ್ಯವಹಾರ, ಭ್ರಷ್ಟಾಚಾರ ಇದು ಕೆಪಿಎಸ್ಸಿ ಸಂಸ್ಥೆ ಕುರಿತಾಗಿ ಸಾರ್ವಜನಿಕರ ನಿಲುವು.
ವಿದ್ಯಾರ್ಥಿಗಳು ಭ್ರಷ್ಟ @INCKarnataka ದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಿರಂತರ ಹೋರಾಟ ಮಾಡಿದರೂ ಅವರ ಅವರ ಕೂಗಿಗೆ ಮನ್ನಣೆ ದೊರಕಿಲ್ಲ. ಕೆಪಿಎಸ್ಸಿ ನಡೆಸುವ ಪರೀಕ್ಷೆಯಲ್ಲಿ ಪ್ರತಿ ಬಾರಿಯು ಅಭ್ಯರ್ಥಿಗಳಿಗೆ ಅನ್ಯಾಯ ನಡೆದರೂ ಅದನ್ನು ಸರಿಪಡಿಸುವ ಕೆಲಸವನ್ನು ಸರ್ಕಾರವಿನ್ನೂ ಮಾಡಿಲ್ಲ.
ಇನ್ನಾದರೂ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡು ಕೆಪಿಎಸ್ಸಿ ಗೊಂದಲವನ್ನು ಸರಿಪಡಿಸುವ ಕೆಲಸವನ್ನು ಮಾಡಬೇಕು.
#CongressFailsKarnataka #KPSCಮೋಸ #KPSCMosa
ಗೊಂದಲ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ವಿಳಂಬ ನೀತಿ, ಪಾರದರ್ಶಕತೆ ಇಲ್ಲದೆ ಇರುವುದು, ಅಸಮರ್ಥ ಪರೀಕ್ಷಾ ನಿಯಂತ್ರಕರು, ಅವೈಜ್ಞಾನಿಕ ಪರೀಕ್ಷಾ ಪದ್ಧತಿ,
ಪರೀಕ್ಷಾರ್ಥಿಗಳ ಭವಿಷ್ಯವನ್ನು ಹಾಳುಗೆಡುವುತ್ತಿರುವುದು, ಸಾಲು ಸಾಲು ತಪ್ಪುಗಳಾದರೂ ತಿದ್ದುಕೊಳ್ಳದೆ ಇರುವುದು, ದಕ್ಷ ಅಧಿಕಾರಿಗಳನ್ನು ವರ್ಗ ಮಾಡುವ ಮೂಲಕ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತಿರುವ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಡಳಿತಾತ್ಮಕ ಬದಲಾವಣೆ, ಪರಿವರ್ತನೆ ಆಗದೆ ಇದ್ದರೆ ಸಂಸ್ಥೆಯನ್ನು ಮುಚ್ಚುವುದೇ ಒಳ್ಳೆಯದು.
ಸರ್ಕಾರ ಇನ್ನಾದರೂ ಕ್ರಮ ಕೈಗೊಳ್ಳಲಿ. ಅಧಿಕಾರಿ, ಒಳ್ಳೆಯ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಬೇಕೆಂದು ಅಹರ್ನಿಶಿ ಓದುವ ಮಕ್ಕಳಿಗೆ, ಪರೀಕ್ಷಾರ್ಥಿಗಳಿಗೆ, ಮಗ/ಮಗಳು ಓದಿ ಅಧಿಕಾರಿ ಆಗುತ್ತಾರೆಂದು ಕನಸಿನ ಗೋಪುರ ಕಟ್ಟಿಕೊಂಡಿರುವ ಪೋಷಕರ ನೋಯಿಸಬೇಡಿ. ಲೋಕಸೇವಾ ಆಯೋಗದ ಶುದ್ದೀಕರಣ ಪ್ರಾರಂಭವಾಗಲಿ.
@HosadiganthaWeb I @prajavani I @tv9kannada I @AsianetNewsSN I @Vijayavani_Digi I @VijayaKarnataka I @OneindiaKannada I @AKSSAofficial I @secretarykpsc I #KPSCMosa I #KPSC I #RevampKPSC I
“ಕಾಂಗ್ರೆಸ್ ಬಂದಿದೆ - ಕೆಪಿಎಸ್ಸಿಯಲ್ಲಿ ಅಕ್ರಮಗಳು ಹೆಚ್ಚುತ್ತಿದೆ”
ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೂ ಭ್ರಷ್ಟ @INCKarnataka ಸರ್ಕಾರಕ್ಕೂ ಬಿಡಿಸಲಾಗದ ನಂಟು!!
ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಯನ್ನು ಎರೆಡೆರೆಡು ಬಾರಿ ತಪ್ಪಾಗಿ ನಡೆಸಿದ್ದು ಮಾತ್ರವಲ್ಲದೆ, ಈಗ ಮುಖ್ಯ ಪರೀಕ್ಷೆಗೆ ಬಿಡುಗಡೆಗೊಳಿಸಿರುವ ಆಯ್ಕೆಪಟ್ಟಿಯಲ್ಲಿಯೂ ಹಲವಾರು ಅಕ್ರಮಗಳು ನಡೆದಿವೆ.
ಇನ್ನೂ ಸಿಟಿಐ ಹುದ್ದೆಗೆ ಸಂಬಂಧಿಸಿದ ಆಯ್ಕೆ ಪಟ್ಟಿಯಲ್ಲಿಯೂ ಸಹ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿರುವವರು ಆಯ್ಕೆಯಾಗಿರುವುದು ಸಹ ಬೃಹತ್ ಅಕ್ರಮ ನಡೆದಿರುವ ಸ್ಪಷ್ಟ ಸೂಚಕ.
ಇದಲ್ಲದೆ ನಡು ರಾತ್ರಿಯಲ್ಲಿ ಆಯ್ಕೆ ಪಟ್ಟಿಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ರಾತ್ರಿ ಅವಧಿಯಲ್ಲಿ ಕೆಪಿಎಸ್ಸಿ ಕಾರ್ಯ ನಿರ್ವಹಿಸುತ್ತಿರುವುದು ಯಾವ ಪುರುಷಾರ್ಥ ಸಾಧನೆಗಾಗಿ..??
ಸಿಎಂ @siddaramaiah ಅವರೆ, ಕೆಎಎಸ್ ಮುಖ್ಯ ಪರೀಕ್ಷೆ ಆಯ್ಕೆ ಪಟ್ಟಿ ಹಾಗೂ ಸಿಟಿಐ ಹುದ್ದೆ ಆಯ್ಕೆ ಪಟ್ಟಿಯನ್ನು ತತಕ್ಷಣ ತಡೆಹಿಡಿದು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ನಾವು ಆಗ್ರಹಿಸುತ್ತೇವೆ.
#CongressFailsKarnataka #KPSCScam
ಭಾರತೀಯ ಜನತಾ ಪಕ್ಷದ ಕೇಂದ್ರ ಶಿಸ್ತು ಸಮಿತಿಯಿಂದ ಯತ್ನಾಳರಿಗೆ ನೋಟೀಸು ಬಂದಿದೆ ಎಂದು ಮಾಧ್ಯಮಗಳು ವಿಜೃಂಭಿಸುತ್ತಿದೆ.
ನನಗೆ ಅಧಿಕೃತವಾಗಿ ಯಾವುದೇ ನೋಟೀಸು ಬಂದಿರುವುದಿಲ್ಲ. ನೋಟೀಸು ಬಂದಮೇಲೆ ಕೆಲವ್ಯಕ್ತಿಗಳ ಏಕಸ್ವಾಮ್ಯತೆ, ಏಕಪಕ್ಷೀಯ ನಿರ್ಧಾರಗಳು, ಉತ್ತರ ಕರ್ನಾಟಕದ ಕಡೆಗಣನೆ, ಕುಟುಂಬ ರಾಜಕಾರಣ, ಕಾಂಗ್ರೆಸ್ ಪಕ್ಷದ ವೈಫಲ್ಯಗಳನ್ನು ರಾಜ್ಯದ ಜನತೆಗೆ ವಿವರಿಸಲು ವಿಫಲವಾಗಿರುವ ಪಕ್ಷದ ಧೋರಣೆ, ಹೊಂದಾಣಿಕೆ ರಾಜಕೀಯ ಸೇರಿದಂತೆ ಸ್ವಜನಪಕ್ಷಪಾತದ ಬಗ್ಗೆ ವಿವರವಾಗಿ ಲಿಖಿತ ರೂಪದಲ್ಲಿ ಉತ್ತರ ನೀಡುತ್ತೇನೆ.
ಶುಭಮಸ್ತು
ಕರ್ನಾಟಕ ಸರ್ಕಾರದ ಆಡಳಿತದಲ್ಲಿ ದಕ್ಷತೆ ಹಾಗೂ ಕ್ರಿಯಾಶೀಲತೆ ಹೆಚ್ಚಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಕ, ಮಾಡಬೇಕಾದ ಕರ್ನಾಟಕ ಲೋಕಸೇವಾ ಆಯೋಗದ ವ್ಯವಸ್ಥೆ ದಿನೇ ದಿನೇ ದಿಕ್ಕು ತಪ್ಪುತ್ತಿದೆ, ತುಕ್ಕು ಹಿಡಿಯುತ್ತಿದೆ, ಗೊಂದಲಗಳ ಗೂಡಾಗುತ್ತಿದೆ. ಉದ್ಯೋಗಾಕಾಂಕ್ಷಿತ ರಾಜ್ಯದ ಅಭ್ಯರ್ಥಿಗಳು #KPSC ಯ ಪರೀಕ್ಷೆಗಳು ಹಾಗೂ ಆಯ್ಕೆ ಕುರಿತು ಕನಸು ಕಟ್ಟಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಇದು ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು ಅನೇಕ ಇಲಾಖೆಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆಯನ್ನು ಎದುರಿಸುವಂತಾಗಿದೆ.
ನಾಗರಿಕ ಸೇವೆಗಳ ಪರೀಕ್ಷೆಗಳನ್ನು ಸುಧಾರಣೆ ಮಾಡಬೇಕೆಂಬ ಉದ್ದೇಶದಿಂದ ನೀಡಿರುವ ಪಿಸಿ ಹೋಟಾ ಸಮಿತಿಯ ಕೆಲವು ಶಿಫಾರಸುಗಳೇ ಈಗ ಕನ್ನಡಿಗ ಅಭ್ಯರ್ಥಿಗಳಿಗೆ ಮಾರಕವಾಗಿದೆ, #KPSC ನಿರಂತರವಾಗಿ ದಕ್ಷತೆ, ಪ್ರಾಮಾಣಿಕತೆ ಮೆರೆಯುವಲ್ಲಿ ವಿಫಲವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಗೊಂದಲಗಳು ತಲೆ ಎತ್ತಲು ಎಡೆಮಾಡಿಕೊಟ್ಟಿದೆ.
ನಾಡಿನ ಪ್ರತಿಭಾನ್ವಿತ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಸರ್ಕಾರ ಜರೂರು ಕ್ರಮ ವಹಿಸಲಿ ಎಂದು @INCKarnataka ಸರ್ಕಾರವನ್ನು ಒತ್ತಾಯಿಸುವೆ.
#CongressFailsKarnataka
ರಾಜ್ಯದಲ್ಲಿ ಭ್ರಷ್ಟ @INCKarnataka ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಕರ್ನಾಟಕ ಲೋಕಸೆವಾ ಆಯೋಗ ನೂರಾರು ಕರ್ಮಕಾಂಡಗಳಿಂದ ವಿವಾದಕ್ಕೆ ಒಳಗಾಗಿದೆ. ಇದರ ನಡುವೆ ಇದೀಗ ಕನ್ನಡಿಗರಿಗೆ ಕೂಕ್ ಕೊಟ್ಟು ಪರಭಾಷಿಕರಿಗೆ ಮಣಿ ಹಾಕುತ್ತಿದೆ.
ಕೆಪಿಎಸ್ಸಿಯಲ್ಲಿ ಆಡಳಿತಾತ್ಮಕವಾಗಿ ಮತ್ತು ಆಯೋಗದಲ್ಲಿ ಸುಧಾರಣೆ ತರಲು ಪರೀಕ್ಷಾ ನಿಯಂತ್ರಕರು ಹೊರ ರಾಜ್ಯದ ಅಧಿಕಾರಿಗಳಾಗಿರಬೇಕೆಂಬ ಶಿಫಾರಸು ಮಾಡಲಾಗಿದೆ.
ಕರ್ನಾಟಕದ ಕೇಡರ್ ಅಧಿಕಾರಿಗಳು ಇರುವಾಗಲೇ ಪ್ರಶ್ನೆ ಪತ್ರಿಕೆಯಲ್ಲಿ ಹಲವು ಬಾರಿ ಕನ್ನಡ ವ್ಯಾಕರಣ ದೋಷಗಳು ಆಗುತ್ತಿವೆ. ಇದರ ನಡುವೆ ಹೊರ ರಾಜ್ಯದ ಅಧಿಕಾರಿಗಳು ಆಯೋಗದ ಚುಕ್ಕಾಣೆ ಹಿಡಿದರೆ ಕೆಪಿಎಸ್ಸಿ ಅಧೋಗತಿ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ.
#CongressFailsKarnataka #KPSCscam
ಕೆಪಿಎಸ್ಸಿಯ ನಿರಂತರ ಎಡವಟ್ಟುಗಳು – @INCKarnataka ಸರ್ಕಾರದ ನಿರ್ಲಕ್ಷ್ಯದ ಪ್ರತಿಬಿಂಬ.
ಕೆಪಿಎಸ್ಸಿ ನಡೆಸುವ ಪ್ರತಿಯೊಂದು ನೇಮಕಾತಿ ಪರೀಕ್ಷೆಯಲ್ಲೂ ಗೊಂದಲ, ಲೋಪ, ದೋಷ, ಅಸಮರ್ಪಕತೆಯ ಸರಣಿ ಮುಂದುವರಿಯುತ್ತಲೇ ಇದೆ. ಕನ್ನಡದಲ್ಲಿ ಸೂಕ್ತ ಹಾಗೂ ನಿಖರವಾದ ಪ್ರಶ್ನೆಗಳು ನೀಡುವಲ್ಲಿ ನಿರಂತರ ವಿಫಲವಾಗುತ್ತಿರುವುದು ಕೆಪಿಎಸ್ಸಿಯ ಅವ್ಯವಸ್ಥಿತ ಕಾರ್ಯಪದ್ಧತಿಯಲ್ಲದೇ, ಕಾಂಗ್ರೆಸ್ ಸರ್ಕಾರದ ಅಸಮರ್ಥ ಆಡಳಿತವನ್ನೂ ಮುಚ್ಚುಮರೆಯಿಲ್ಲದಂತೆ ಬಹಿರಂಗಪಡಿಸಿದೆ.
ಮುಖ್ಯಮಂತ್ರಿ @siddaramaiah ನವರ ಎಚ್ಚರಿಕೆಗೂ ಕಡೆಗಣನೆ, ಪರೀಕ್ಷಾರ್ಥಿಗಳ ಭವಿಷ್ಯಕ್ಕೂ ಕೊಕ್ಕೆ—ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ ಎಂಬುದಕ್ಕೆ ಕೆಪಿಎಸ್ಸಿಯ ನಿರ್ವಹಣಾ ವೈಫಲ್ಯವೇ ದೊಡ್ಡ ಉದಾಹರಣೆ. ಈ ಅವ್ಯವಸ್ಥೆಯಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳು ಅವಕಾಶಗಳಿಂದ ವಂಚಿತರಾಗಿದ್ದಾರೆ.
ಈ ಅಸಡ್ಡೆ ನಿಲುವನ್ನು ನಮ್ಮ ಪಕ್ಷವು ಖಂಡಿಸುತ್ತದೆ. ಕೆಪಿಎಸ್ಸಿ ಭ್ರಷ್ಟಾಚಾರದ ಕೇಂದ್ರವಾಗದೇ, ಮೆರಿಟ್ ಆಧಾರಿತ ನೇಮಕಾತಿಗೆ ವೇದಿಕೆಯಾಗಬೇಕು. ಈ ನಿರ್ಲಕ್ಷ್ಯ ನಿಲ್ಲಿಸದಿದ್ದರೆ, ಅವಕಾಶವಂಚಿತರಾಗುತ್ತಿರುವ, ಅನ್ಯಾಯಕ್ಕೊಳಗಾಗುತ್ತಿರುವ ಯುವಕರ ಪರವಾಗಿ ಬಿಜೆಪಿ ತೀವ್ರ ಹೋರಾಟಕ್ಕಿಳಿಯಲಿದೆ!
#KPSC_Fails #CongressFailsKarnataka
ಕೆಪಿಎಸ್ಸಿ ಪರೀಕ್ಷೆಯಲ್ಲಿ ಪದೇ ಪದೆ ದೋಷಗಳು ನಡೆಯುತ್ತಲೇ ಇದೆ. ಪರೀಕ್ಷೆ ಮೇಲೆ ಪರೀಕ್ಷೆಗಳನ್ನು ನಡೆಸಿದರೂ ಪ್ರಶ್ನೆ ಪತ್ರಿಕೆಯಲ್ಲಿ ಸುಮಾರು 50 ಪರ್ಸೆಂಟ್ ತಪ್ಪುಗಳು ಕಂಡು ಬರುತ್ತಿದೆ.
ಹೀಗಾಗಿ ವಿದ್ಯಾರ್ಥಿಗಳು ಭ್ರಷ್ಟ @INCKarnataka ದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಈ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ @BYVijayendra ಅವರು ಬೆಂಬಲ ನೀಡಿ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಇದೇ ವೇಳೆ ಪರಿಷತ್ ವಿಪಕ್ಷ ನಾಯಕ @NswamyChalavadi ಅವರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ್ದಾರೆ.
#CongressFailsKarnataka #KPSCMosa
ಕೆಪಿಎಸ್ಸಿ ನಡೆಸಿದ ಕೆಎಎಸ್(KAS) ಪೂರ್ವಭಾವಿ ಮರು ಪರೀಕ್ಷೆಯ ಕನ್ನಡ ಪತ್ರಿಕೆಯಲ್ಲಿ ಶೇ.50ರಷ್ಟು ತಪ್ಪುಗಳು ಇರುವುದನ್ನು ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರ ಗುರುತಿಸಿದೆ.
ನಿರ್ಲಜ್ಯ @INCKarnataka ಸರ್ಕಾರದ ದುರಾಡಳಿತದಲ್ಲಿ, ರಾಜ್ಯದ ಪ್ರತಿಷ್ಠಿತ ಪರೀಕ್ಷೆಯಲ್ಲೇ ಪದೇ ಪದೇ ಇಂತಹ ತಪ್ಪುಗಳು, ಪ್ರಮಾದಗಳು ಮರುಕಳಿಸುತ್ತಿರುವುದು ತಲೆ ತಗ್ಗಿಸುವ ವಿಚಾರ.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕೆಪಿಎಸ್ಸಿ ಯಿಂದ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು.
ಕರ್ನಾಟಕ ಲೋಕಸೇವಾ ಆಯೋಗ ಹಿಂದೆ ನಡೆಸಿರುವ ಪರೀಕ್ಷೆಗಳ ಫಲಿತಾಂಶವನ್ನೇ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ. ಈಗ ಹೊಸದಾಗಿ ನಡೆಸಿದ ಪರೀಕ್ಷೆಗಳಲ್ಲೂ ನಾನಾ ದೋಷಗಳಾಗಿವೆ.
ಇದರಿಂದ ಸರ್ಕಾರಿ ಹುದ್ದೆಗಾಗಿ ಹಗಲು- ಇರುಳು ಎನ್ನದೆ ನಿರಂತರವಾಗಿ ಕಷ್ಟಪಟ್ಟು ಓದುತ್ತಿರುವ ಅಭ್ಯರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ.
ಕೆಪಿಎಸ್ಸಿ ಶುದ್ಧೀಕರಣ ಆಗಲೇಬೇಕಿದೆ. ಇಲ್ಲವಾದರೇ ಆಯೋಗ ನಡೆಸುವ ಪರೀಕ್ಷೆಯಲ್ಲಿ ಪ್ರತಿ ಬಾರಿಯೂ ಒಂದಲ್ಲ ಒಂದು ಎಡವಟ್ಟುಗಳಿಂದ, ಲಕ್ಷಾಂತರ ಸ್ಪರ್ಧಾ ಆಕಾಂಕ್ಷಿಗಳ ಬದುಕು ಅಧೋಗತಿ ತಲುಪಲಿದೆ.
@siddaramaiah
#KPSC
ಲೋಕಸೇವಾ ಕೆಎಎಸ್ ಪೂರ್ವಭಾವಿ ಮರುಪರೀಕ್ಷೆಯ ಕನ್ನಡ ಪತ್ರಿಕೆಯಲ್ಲಿ ದೋಷಗಳಾಗಿರುವುದರಿಂದ ಮತ್ತೊಮ್ಮೆ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿ ಇಂದು ಫ್ರೀಡಂ ಪಾರ್ಕ್ನಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ @NswamyChalavadi , ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ @dheerajmuniraj , ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ @sapthagirigowda , ಸಂಘಟನೆಯ ಪ್ರಮುಖರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
#KPSCMosa