“ಎಲ್ಲ ಹೆಣ್ಣು ದೇವತೆಗಳೂ ಶಕ್ತಿಯ ಸ್ವರೂಪವೇ. ಜಗತ್ತಿನ ಸೃಷ್ಟಿಯಾಗಿರುವುದು ಈ ಶಕ್ತಿಯಿಂದ. ನಮ್ಮನ್ನೆಲ ಆವರಿಸಿರುವ ಮಾಯೆಯೂ ಈ ಶಕ್ತಿಯೇ. ನಿನ್ನ ಮಾಯೆಯಿಂದ ನನ್ನನ್ನು ಮುಕ್ತಗೊಳಿಸೆಂದು ನಾವು ಪ್ರಾರ್ಥಿಸಬೇಕು ಎಂದು ಗೋವಿಂದಭಗವತ್ಪಾದರ ಶಿಷ್ಯರೂ, ಅದ್ವೈತ ಸಿದ್ಧಾಂತದ ಪ್ರವರ್ತಕರೂ ಜ್ಞಾನಮಾರ್ಗಿಗಳೂ ಆದ ಶಂಕರಯತಿಗಳು ಬೋಧಿಸುತ್ತಿದ್ದರು.”