ಇತ್ತೀಚಿಗೆ ಲಂಡನ್ನಲ್ಲಿ ನಡೆದ ಸ್ಕೈಟ್ರಾಕ್ಸ್ ವರ್ಲ್ಡ್ ಏರ್ಪೋರ್ಟ್ ಅವಾರ್ಡ್ಸ್ 2026ರಲ್ಲಿ ಕೆಂಪೇಗೌಡ ಅಂತಾರಾಷ್��್ರೀಯ ವಿಮಾನ ನಿಲ್ದಾಣ ಬೆಂಗಳೂರು ಸತತ ಮೂರ���ೇ ವರ್ಷವೂ ಭಾರತ ಮತ್ತು ದಕ್ಷಿಣ ಏಷ್ಯಾದ 'ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ' ಎಂಬ ಗೌರವಕ್ಕೆ ಪಾತ್ರವಾಗಿದೆ. ಜೊತೆಗೆ, ಜಾಗತಿಕ ಶ್ರೇಯಾಂಕದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಸ್ಥಾನವು 48ನೇ ಸ್ಥಾನದಿಂದ 41ನೇ ಸ್ಥಾನಕ್ಕೆ ಏರಿಕೆಯಾಗಿದೆ. ಈ ಮೂಲಕ ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಗೊಂಡಿದೆ.
ಈ ಮಹತ್ತರ ಸಾಧನೆಯು ನಮ್ಮ ಸಿಬ್ಬಂದಿ ವರ್ಗ ಮತ್ತು ಸಹಭಾಗಿ ಸಂಸ್ಥೆಗಳ ಅವಿರತ ಶ್ರಮ ಹಾಗೂ ವಿಶ್ವದರ್ಜೆಯ ಪ್ರಯಾಣಿಕ ಅನುಭವವನ್ನು ನೀಡುವಲ್ಲಿ ನಮಗಿರುವ ಬದ್ಧತೆಯ ಪ್ರತಿಫಲವಾಗಿದೆ. ಭವಿಷ್ಯದ ದೃಷ್ಟಿಕೋನದೊಂದಿಗೆ ಸನ್ನದ್ಧರಾಗುತ್ತಿರುವ ನಾವು, ಪ್ರತಿ ಪ್ರಯಾಣಿಕರಿಗೂ ತಡೆರಹಿತ ಹಾಗೂ ಅತ್ಯುತ್ತಮ ಪ್ರಯಾಣದ ಅನುಭವ ನೀಡಲು ಶ್ರಮಿಸುತ್ತಿದ್ದೇವೆ. ಅಷ್ಟೇ ಅಲ್ಲದೆ, ಈ ಭಾಗದ ಪ್ರಮುಖ ವರ್ಗಾವಣೆ ಕೇಂದ್ರವಾಗಿ ನಮ್ಮ ಪಾತ್ರವನ್ನು ಇನ್ನಷ್ಟು ಬಲಪಡಿಸುವತ್ತ ದಿಟ್ಟ ಹೆಜ್ಜೆಯಿರಿಸಿದ್ದೇವೆ.
ಈ ಯಶಸ್ಸಿನ ಪಯಣದಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು.
#ಸ್ಕೈಟ್ರಾಕ್ಸ್ #ಪ್ರಶಸ್ತಿ #ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬೆಂಗಳೂರುವಿಮಾನನಿಲ್ದಾಣ #ವಿಮಾನ #ನಮ್ಮಬೆಂಗಳೂರು #ಬೆಂಗಳೂರು
ಕಾಕ್ಪಿಟ್ ಸಂವಹನ ಇರಲಿ, ಫ್ರೀಕ್ವೆನ್ಸಿ ಹಾಪಿಂಗ್ ತಂತ್ರಜ್ಞಾನವಿರಲಿ ಅಥವಾ ವಿಂಡ್ಶೀಲ್ಡ್ ವೈಪರ್ನಂತಹ ಆವಿಷ್ಕಾರವೇ ಇರಲಿ.. ವಾಯುಯಾನ ಕ್ಷೇತ್ರದ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಅಪ್ರತಿಮ. ವಿಮಾನ ಪ್ರಯಾಣವನ್ನು ಸುಗಮವಾಗಿಸಲು ಮಹಿಳಾ ವಿಜ್ಞಾನಿಗಳು ಮತ್ತು ಸಂಶೋಧಕರ ಪಾತ್ರ ಬಹಳ ದೊಡ್ಡದು.
ಸುರಕ್ಷಿತವಾಗಿ ವಿಮಾನದಲ್ಲಿ ಹಾರಾಟ ನಡೆಸಿ, ಸುಸೂತ್ರವಾಗಿ ಭೂಸ್ಪರ್ಶ ಮಾಡಲು ಕಾರಣರಾದ ಅಪ್ರತಿಮ ಮಹಿಳಾ ಸಾಧಕರನ್ನು ಈ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಗೌರವದಿಂದ ಸ್ಮರಿಸೋಣ
ಎಲ್ಲಾ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮ��ಿಳಾ ದಿನಾಚರಣೆಯ ಶುಭಾಶಯಗಳು.
#ಅಂತಾರಾಷ್ಟ್ರೀಯಮಹಿಳಾದಿನಾಚರಣೆ #ಮಹಿಳಾದಿನ #ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣ #ಬೆಂಗಳೂರುವಿಮಾನನಿಲ್ದಾಣ #ವಿಮಾನ
ಪ್ರಯಾಣಿಕರ ಗಮನಕ್ಕೆ
ಮಧ್ಯಪ್ರಾಚ್ಯದ ಹಲವು ಭಾಗಗಳಲ್ಲಿ ಉಂಟಾಗುತ್ತಿರುವ ಬದಲಾದ ಪರಿಸ್ಥಿತಿಗಳಿಂದಾಗಿ, ಕೆಲವು ಅಂತಾರಾಷ್ಟ್ರೀಯ ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಿದೆ.
ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಗೆ ಪ್ರಯಾಣ ಪ್ರಾರಂಭಿಸುವ ಮುನ್ನ, ತಮ್ಮ ���ಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ ವಿಮಾನದ ಇತ್ತೀಚಿನ ಸ್ಥಿತಿಗತಿಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
ಪ್ರಯಾಣಿಕರಿಗೆ ನೆರವು ಒದಗಿಸಲು, ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಟರ್ಮಿನಲ್ 2ರ ಕರ್ಬ್ಸೈಡ್ನಲ್ಲಿ (ಹಂತ 3) ಮತ್ತು
ಟರ್ಮಿನಲ್ 1ರ ಆಕಾಸಾ ಟಿಕೆಟಿಂಗ್ ಕೌಂಟರ್ ಪಕ್ಕದಲ್ಲಿ ಪ್ರತ್ಯೇಕ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಪ್ರಯಾಣಿಕರ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ಉಂಟಾಗಬಹುದಾದ ಅನಾನುಕೂಲಗಳನ್ನು ಕಡಿಮೆ ಮಾಡಲು, ನ���ವು ವಿಮಾನಯಾನ ಸಂಸ್ಥೆಗಳು ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ.
ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು.
#ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬೆಂಗಳೂರುವಿಮಾನನಿಲ್ದಾಣ #ನಮ್ಮಬೆಂಗಳೂರು #ಪ್ರಯಾಣ
ತಲುಪುವ ಸಂಭ್ರಮದಷ್ಟೇ, ಸಾಗುವ ಹಾದಿಯೂ ಸುಖಕರವಾಗಿರಲಿ!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ನಿಮ್ಮ ಪ್ರಯಾಣದ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು ನಾವು ದಕ್ಷ ಕಾರ್ಯಾಚರಣೆ ಹಾಗೂ ವೈಯಕ್ತಿಕ ಕಾಳಜಿಯ ಸೇವೆಯನ್ನು ಒಗ್ಗೂಡಿಸಿದ್ದೇವೆ. ಪ್ರಯಾಣದ ಪ್ರತಿ ಹೆಜ್ಜೆಯಲ್ಲೂ ನೆರವಾಗಲು 'ಕೇರ್ ಬೈ ಬಿಎಲ್ಆರ್' ವತಿಯಿಂದ 'ಭೇಟಿ ಮತ್ತು ಸಹಾಯ' ಸೇವೆಯನ್ನು ಪರಿಚಯಿಸಲಾಗಿದೆ. ಈ ಸೌಲಭ್ಯವು ಟರ್ಮಿನಲ್ 1 ಮತ್ತು ಟರ್ಮಿನಲ್ 2 ಎರಡರಲ್ಲ�� ಲಭ್ಯವಿದೆ.
ಈ ಸೇವೆಗಳನ್ನು ಕಾಯ್ದಿರಿಸಲು ಇರುವ 4 ಸುಲಭ ಮಾರ್ಗಗಳು:
*ವಿಮಾನ ನಿಲ್ದಾಣದಲ್ಲಿರುವ ಕೇರ್ ಬೈ ಬಿಎಲ್ಆರ್ ಕೌಂಟರ್ಗೆ ಭೇಟಿ ನೀಡಿ
*ಪಲ್ಸ್ ಆ್ಯಪ್ ಮೂಲಕ ಕ್ಷಣಾರ್ಧದಲ್ಲಿ ಬುಕ್ ಮಾಡಿ
*ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಅಧಿಕೃತ ಜಾಲತಾಣ ಬಳಸಿ ಕಾಯ್ದಿರಿಸಿ
*ವೈಯಕ್ತಿಕ ನೆರವಿಗಾಗಿ ನಮ್ಮ ಸಹಾಯವಾಣಿಗೆ ಕರೆ ಮಾಡಿ
ಹೆ��್ಚಿನ ವಿವರಗಳಿಗಾಗಿ ಈ ಲಿಂಕ್ಗೆ ಭೇಟಿ ನೀಡಿ: https://t.co/vsiRsxRewF
#ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬೆಂಗಳೂರುವಿಮಾನನಿಲ್ದಾಣ #ಕೇರ್ಬೈಬಿಎಲ್ಆರ್ #ನಮ್ಮಬೆಂಗಳೂರು #ಪ್ರಯಾಣ
ಗಣರಾಜ್ಯೋತ್ಸವದ ಅಂಗವಾಗಿ ಲಾಲ್ಬಾಗ್ ಉದ್ಯಾನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕದ ಮೇರು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಆಧಾರಿತ 'ತೇಜಸ್ವಿ ವಿಸ್ಮಯ' ಫಲಪುಷ್ಪ ಪ್ರದರ್ಶನದಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 'ಬೃಹತ್ ಕಾರ್ಪೊರೇಟ್ ಕಚೇರಿ ಉದ್ಯಾನವನ' ವಿಭಾಗದಲ್ಲಿ ���್ರಥಮ ಬಹುಮಾನಕ್ಕೆ ಭಾಜನವಾಗಿದೆ.
ಈ ಪ್ರತಿಷ್ಠಿತ ಗೌರವವು ಪರಿಸರ ಪ್ರಜ್ಞೆ ಮತ್ತು ಸೌಂದರ್ಯಯುತ ಆವರಣವನ್ನು ನಿರ್ವಹಿಸುವ ನಮ್ಮ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಸುಸ್ಥಿರತೆ ಮತ್ತು ಹಸಿರು ಪರಿಸರವನ್ನು ಉತ್ತೇಜಿಸುವಲ್ಲಿ ನಮ್ಮ ಸಮರ್ಪಣಾ ಭಾವವನ್ನು ಪ್ರತಿಬಿಂಬಿಸುವುದಲ್ಲದೆ, ಎಲ್ಲರಿಗೂ ಸ್ವಾಗತ ಕೋರುವ ಪರಿಸರ ಸ್ನೇಹಿ ತಾಣವನ್ನು ರೂಪಿಸುವ ನಮ್ಮ ನಿರಂತರ ಪ್ರಯತ್ನಕ್ಕೆ ದೊರೆತ ಮನ್ನಣೆಯಾಗಿದೆ.
@HorticultureGoK
#ಪೂರ್ಣಚಂದ್ರತೇಜಸ್ವಿ #ತೇಜಸ್ವಿಪ್ರಪಂಚ #ತೇ��ಸ್ವಿವಿಸ್ಮಯ #ಲಾಲ್ಬಾಗ್
#ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬೆಂಗಳೂರುವಿಮಾನನಿಲ್ದಾಣ #ನಮ್ಮಬೆಂಗಳೂರು #ಉದ್ಯಾನವನ #ಪ್ರಯಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಗೆ ಪ್ರತಿಷ್ಠಿತ ಮನ್ನಣೆ!
'ವಿಂಗ್ಸ್ ಇಂಡಿಯಾ 2026' ಪ್ರಶಸ್ತಿ ಸಮಾರಂಭದಲ್ಲಿ 25 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ವಿಭಾಗದಲ್ಲಿ 'ವರ್ಷದ ಅತ್ಯುತ್ತಮ ���ಿಮಾನ ನಿಲ್ದಾಣ' ಪ್ರಶಸ್ತಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಭಾಜನವಾಗಿದೆ. ಇದು ನಮ್ಮ ಕಾರ್ಯಕ್ಷಮತೆ, ಸುಸ್ಥಿರತೆ ಮತ್ತು ಪ್ರಯಾಣಿಕರ ಸೇವೆಯ ಬದ್ಧತೆಗೆ ಸಂದ ಮನ್ನಣೆಯಾಗಿದೆ. ಈ ಯಶಸ್ಸಿಗೆ ಕಾರಣರಾದ ಎಲ್ಲ ಪ್ರಯಾಣಿಕರು, ಸಹಯೋಗಿ ಸಂಸ್ಥೆಗಳು ಮತ್ತು ತಂಡಗಳಿಗೆ ಹೃದಯಪೂರ್ವಕ ಧನ್ಯವಾದಗಳು.
@RamMNK
@MoCA_GoI
@AAI_Official
@ficci_india
#ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬೆಂಗಳೂರುವಿಮಾನನಿಲ್ದಾಣ #ನಮ್ಮಬೆಂಗಳೂರು #ಪ್ರಯಾಣ
ಕುಂಚ ಹಿಡಿದ ನಮ್ಮ ಕೆಐಎಎಫ್ ಪುಟಾಣಿಯ ಕೈಗಳಲ್ಲಿ, ನಮ್ಮ ಕರ್ತವ್ಯದ ನಿಷ್ಠೆ ಹಾಗೂ ಪ್ರಯಾಣಿಕರ ಜೊತೆಗಿನ ಪ್ರತಿಯೊಂದು ಸ್ಪಂದನೆಯಲ್ಲಿ ಸದಾ ಜಾಗೃತವಾಗಿರುವುದು ಭಾರತದ ಗಣರಾಜ್ಯದ ಚೈತನ್ಯ.
ಸಮಸ್ತ ಭಾರತೀಯರಿಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ವತಿಯಿಂದ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
#ಗಣರಾಜ್���ೋತ್ಸವ2026 #ತ್ರಿವರ್ಣಧ್ವಜ #ಕೆಂಪೇಗೌಡಅಂತರರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬೆಂಗಳೂರುವಿಮಾನನಿಲ್ದಾಣ #ನಮ್ಮಬೆಂಗಳೂರು #ದೇಶಪ್ರೇಮ #ಭಾರತೀಯರು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಿಂದ ಪ್ರಯಾಣಿಕರಿಗೆ ಸಲಹೆ:
ಪ್ರಯಾಣಿಕರು ಭದ್ರತಾ ತಪಾಸಣೆಗೆ ಸಾಕಷ್ಟು ಸಮಯಾವಕಾಶವನ್ನು ಮೀಸಲಿಟ್ಟು ಪ್ರಯಾಣವನ್ನು ಯೋಜಿಸಿ. ಹೆಚ್ಚಿನ ಮಾಹಿತಿಗಾಗಿ, ತಾವು ಪ್ರಯಾಣ ಮಾಡಲಿರುವ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸುವಂತೆ ಕೋರುತ್ತೇವೆ.
ನಿಮ್ಮ ಪ್ರಯಾಣ ಸುಖಕರವಾಗಿರಲಿ!
#ಪ್ರಯಾಣಸಲಹೆ
#ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬೆಂಗಳೂರುವಿಮಾನನಿಲ್ದಾಣ #ವಿಮಾನ
ಸುಗ್ಗಿಯ ಹಬ್ಬಕ್ಕೆ ಹುಗ್ಗಿಯ ಸಿಹಿ; ಕರುನಾಡ ರೈತರ ಶ್ರಮಕ್ಕೆ ಜಾಗತಿಕ ರೆಕ್ಕೆ!
ಕರುನಾಡ ನೆಲದ ಮಣ್ಣಿನ ಸೊಗಡು ಈಗ ಬಾನಂಗಳ ದಾಟಿ ಜಗತ್ತಿನಾದ್ಯಂತ ಪಸರಿಸುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಬಿಎಲ್ಆರ್ ಕಾರ್ಗೋ ಮೂಲಕ ಕರ್ನಾಟಕದ ರೈತರು ಬೆಳೆದ ತಾಜಾ ಕೃಷಿ ಉತ್ಪನ್ನಗಳು ದೇಶ-ವಿದೇಶಗಳನ್ನು ತಲುಪಿ ಮನ್ನಣೆ ಪಡೆಯುತ್ತಿವೆ. ನಮ್ಮ ರೈತರ ಶ್ರಮಕ್ಕೆ ಸಿಕ್ಕ ಈ ಜಾಗತಿಕ ಮನ್ನಣೆ ಸುಗ್ಗಿಯ ಸಂಭ್ರಮವನ್ನು ಹೆಚ್ಚಿಸಿ ಪ್ರತಿ ಕನ್ನಡಿ��ರಿಗೂ ಹೆಮ್ಮೆ ಮೂಡಿಸುತ್ತದೆ.
#ಸುಗ್ಗಿ #ಕೃಷಿಕ #ಕೃಷಿ #ರೈತ #ಕಾರ್ಗೋ #ಬಿಎಲ್ಆರ್ಕಾರ್ಗೋ #ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬೆಂಗಳೂರುವಿಮಾನನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವ���ಮಾನ ನಿಲ್ದಾಣ ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿಯಿಂದ (ಎಸಿಐ) 3ನೇ ಹಂತದ ಪ್ರವೇಶ ವರ್ಧನೆ ಮಾನ್ಯತೆ ಲಭಿಸಿದೆ! ಇದು ಯಾವುದೇ ಅಡೆತಡೆಯಿಲ್ಲದ, ಎಲ್ಲರನ್ನೂ ಒಳಗೊಂಡ, ಪ್ರತಿಯೊಬ್ಬರಿಗೂ ಗೌರವಯುತವಾದ ಪ್ರಯಾಣದ ಅನುಭವವನ್ನು ಸೃಷ್ಟಿಸುವ ನಮ್ಮ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ವಿಮಾನ ನಿಲ್ದಾಣದ ಪ್ರವೇಶ ಮಾನ್ಯತೆಯು ಕೇವಲ ಸೌಲಭ್ಯ ಮಾತ್ರವಲ್ಲ; ಅದು ಪ್ರಯಾಣಿಕರೆಂಬ ನಮ್ಮ ಅತಿಥಿಗಳಿಗೆ ನಾವು ನೀಡುವ ಪ್ರತಿಜ್ಞೆಯಾಗಿದೆ. ವಿಶೇಷ ಚೇತನರು ಅಥವಾ ಸಂಚರಿಸಲು ತೊಂದರೆ ಇರುವವರು ಪ್ರತಿ ಪ್ರಯಾಣವನ್ನು ಸುಲಭವಾಗಿ ಮತ್ತು ಗೌರವದಿಂದ ನಿರ್ವಹಿಸಲು ಸಾಧ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಶ್ರಮಿಸುತ್ತೇವೆ.
ಯೋಜನೆ ಮತ್ತು ಆಡಳಿತ, ಜಾಲತಾಣಗಳಲ್ಲಿ ಮಾಹಿತಿಯ ಪ್ರಸಾರ, ಮೂಲಸೌಕರ್ಯಗಳ ಸುಧಾರಣೆಗಳು ಮತ್ತು ಸಮುದಾಯ ಸಹಯೋಗಗಳು ಈ ಮಾನ್ಯತೆಯನ್ನು ಗಳಿಸಲು ನಮಗೆ ಸಹಾಯ ಮಾಡಿವೆ. ಈ ಮೈಲಿಗಲ್ಲು ನಮ್ಮ ಪ್ರಯಾಣಿಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ, ನಮ್ಮ ಅದ್ಭುತ ತಂಡಗಳ ಶ್ರದ್ಧೆ ಮತ್ತು ಎಸಿಯ ನೀಡಿದ ಮಾರ್ಗದರ್ಶನದ ಫಲಿತಾಂಶವಾಗಿದೆ. ನಾವೆಲ್ಲರೂ ಒಟ್ಟಾಗಿ, ಪ್ರಾಮಾಣಿಕವಾಗಿ ಎಲ್ಲರಿಗೂ ಸೇವೆ ಸಲ್ಲಿಸುವ ಮೂಲಕ ಅತ್ಯುತ್ತಮ ಅನುಭವ ನೀಡುವ ವಿಮಾನ ನಿಲ್ದಾಣವನ್ನು ರೂಪಿಸುತ್ತಿದ್ದೇವೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ನಿಮ್ಮ ಪ್ರವೇಶವು ಒಂದು ಆಯ್ಕೆಯಲ್ಲ, ಬದಲಿಗೆ ನಾವು ಗ್ರಾಹಕರಿಗೆ ಒದಗಿಸುವ ಭರವಸೆಯ ಮೂಲಾಧಾರವಾಗಿದೆ.
#ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣ #ಬೆಂಗಳೂರುವಿಮಾನನಿಲ್ದಾಣ #ವಿಮಾನ #ಎಸಿಐ #ಪ್ರವೇಶಮಾನ್ಯತೆ
ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದೊ ಸುಂದರ ✨
-ಶಂ.ಗು.ಬಿರಾದಾರ
ಪ್ರತಿಯೊಂದು ��ಗುವಿನಲ್ಲೂ ಒಂದು ಕನಸು ಅರಳಲು ಕಾಯುತ್ತಿರುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನವನ್ನು ಬೆಂಬಲಿಸಲು ನಮ್ಮೊಂದಿಗೆ ಕೈಜೋಡಿಸಿ ಆ ಕನಸುಗಳನ್ನು ನನಸಾಗಿಸಲು ಸಹಕರಿಸಿ. ನಿಮ್ಮ ಕೊಡುಗೆ ಕೇವಲ ಮಕ್ಕಳ ಅಗತ್ಯವನ್ನು ಪೂರೈಸುವುದಷ್ಟೇ ಅಲ್ಲದೇ, ಮಗುವಿನ ಭವಿಷ್ಯವನ್ನು ರೂಪಿಸಿ ಅವರ ಕನಸುಗಳನ್ನು ನನಸಾಗಿಸುತ್ತದೆ.
ದೇಣಿಗೆ ನೀಡಲು ಈ ಲಿಂಕ್ ಕ್ಲಿಕ್ ಮಾಡಿ: https://t.co/HP68QZ3Ulp
#ಮಕ್ಕಳದಿನಾಚರಣೆ #ಕನಸು #ಕನಸುಗಳು #ಚಿಣ್ಣರು
#ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣ #ಬೆಂಗಳೂರುವಿಮಾನನಿಲ್ದಾಣ #ಕನ್ನಡ
ಕೆಂಪೇಗೌಡ ಅಂತಾರಾಷ್ಟ್��ೀಯ ವಿಮಾನ ನಿಲ್ದಾಣ ಬೆಂಗಳೂರಿನಿಂದ ಪ್ರಯಾಣಿಕರಿಗೆ ಸಲಹೆ:
ಪ್ರಯಾಣಿಕರು ಭದ್ರತಾ ತಪಾಸಣೆಗೆ ಸಾಕಷ್ಟು ಸಮಯಾವಕಾಶವನ್ನು ಮೀಸಲಿಟ್ಟು ಪ್ರಯಾಣವನ್ನು ಯೋಜಿಸಿ. ಹೆಚ್ಚಿನ ಮಾಹಿತಿಗಾಗಿ, ತಾವು ಪ್ರಯಾಣ ಮಾಡಲಿರುವ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸುವಂತೆ ಕೋರುತ್ತೇವೆ.
ನಿಮ್ಮ ಪ್ರಯಾಣ ಸುಖಕರವಾಗಿರಲಿ!
#ಪ್ರಯಾಣಸಲಹೆ
#ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬೆಂಗಳೂರುವಿಮಾನನಿಲ್ದಾಣ #ವಿಮಾನ
ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ, ಗೌರವಾನ್ವಿತ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ರಾಮ್ ಮೋಹನ್ ನಾಯ್ಡು ಕಿಂಜ���ಾಪು ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಭವ್ಯ ರಾಷ್ಟ್ರಧ್ವಜಾರೋಹಣ ಸ್ತಂಭವನ್ನು ಉದ್ಘಾಟಿಸಿದರು. ಈ ಮೂಲಕ ನಮ್ಮ ದೇಶದ ಮೂಲಭೂತ ಗುಣಗಳಾದ ಏಕತೆ ಮತ್ತು ಪ್ರಗತಿಯ ಸಂಕಲ್ಪವನ್ನು ಸಂಭ್ರಮಿಸಲಾಯಿತು.
ಈ ವಿಶಿಷ್ಟ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಈ ಸಂದರ್ಭದ ಮಹತ್ವವನ್ನು ಒತ್ತಿಹೇಳುತ್ತಾ, "ನಾವು ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯನ್ನು ಹೆಮ್ಮೆಯಿಂದ ಸ್ಮರಿಸುತ್ತಿದ್ದೇವೆ. ಈ ವರ್ಷವಿಡೀ ��ಡೆಯುವ ಉತ್ಸವವು ನಮ್ಮ ಮೂಲ, ಸಂಸ್ಕೃತಿ ಮತ್ತು ಪರಂಪರೆಗೆ ಸಲ್ಲಿಸುವ ಶ್ರೇಷ್ಠ ಗೌರವವಾಗಿದೆ. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಪ್ರೇರಿತರಾಗಿ, ಭಾರತವನ್ನು ವಿಶ್ವ ಭೂಪಟದಲ್ಲಿ ಅತ್ಯಂತ ಉಜ್ವಲ ತಾಣವಾಗಿ ನಿಲ್ಲಿಸುವ ನಿಟ್ಟಿನಲ್ಲಿ ನಮ್ಮ ಸಾಮೂಹಿಕ ಸಂಕಲ್ಪವನ್ನು ಮತ್ತೊಮ್ಮೆ ದೃಢಪಡಿಸೋಣ" ಎಂದು ಕರೆ ನೀಡಿದರು.
#ವಂದೇಮಾತರಂ #ಭಾರತ #ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬೆಂಗಳೂರುವಿಮಾನನಿಲ್ದಾಣ #ವಿಮಾನ #ನಮ್ಮಬೆಂಗಳೂರು #ಬೆಂಗಳೂರು
ನಮ್ಮ ರಾಷ್ಟ್ರೀಯ ಗೀತೆ ವಂದೇ ಮಾತರಂನ 150ನೇ ವರ್ಷಾಚರಣೆಯ ಈ ಮಹತ್ವದ ಸಂದರ್ಭದಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಗೆ ಆಗಮಿಸಿದ ನಾಗರಿಕ ವಿಮಾನಯಾನ ಸಚಿವರಾದ ಗೌರವಾನ್ವಿತ
ಶ್ರೀ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಈ ಸ್ಮರಣೀಯ ಹೆಮ್ಮೆಯ ಆಚರಣೆಯ ಭಾಗವಾಗಿ, ನಮ್ಮ ಹೊಸ ರಾಷ್ಟ್ರಧ್ವಜಾರೋಹಣ ಸ್ತಂಭವನ್ನು ಅನಾವರಣಗೊಳಿಸಲಾಯಿತು.
#ವಂದೇಮಾತರಂ #ಭಾರತ #ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬೆಂಗಳೂರುವಿಮಾನನಿಲ್ದಾಣ #ವಿಮಾನ #ನಮ್ಮಬೆಂಗಳೂರು #ಬೆಂಗಳೂರು
ವಿಮಾನಯಾನ ಕ್ಷೇತ್ರದ ಪದಗಳನ್ನು ಪರಿಚಯಿಸುವ ನಮ್ಮ ಪುಟ್ಟ ಪ್ರಯತ್ನಕ್ಕೆ ನೀವು ನೀಡಿದ ಅಭೂತಪೂರ್ವ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು! ಕನ್ನಡದಲ್ಲಿ ಇನ್ನಷ್ಟು ಪದ, ವಿಷಯಗಳನ್ನು ಪಡೆಯಲು ನಮ್ಮ ಈ ಖಾತೆಯನ್ನು ಅನುಸರಿಸ���ು ಮರೆಯದಿರಿ.
#ಕರ್ನಾಟಕರಾಜ್ಯೋತ್ಸವ #ಕನ್ನಡರಾಜ್ಯೋತ್ಸವ #ಕನ್ನಡ #ದರಾಬೇಂದ್ರೆ #ಅಂಬಿಕಾತಯದತ್ತ #ಪ್ರತಿದಿನಕನ್ನಡ #ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣ #ಬೆಂಗಳೂರುವಿಮಾನನಿಲ್ದಾಣ