ಸರ್ಕಾರದ ಅಧಿಸೂಚನೆಯಂತೆ "ಶ್ರೀರೂಪ, ಭಾ.ಆ.ಸೇ" ಆದ ನಾನು ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಯಾಗಿ ದಿನಾಂಕ: 05-01-2026ರಂದು ಪ್ರಬಾರ ವಹಿಸಿಕೊಂಡಿರುತ್ತೇನೆ. ನನ್ನ ವೈಯಕ್ತಿಕ ಗಮನಕ್ಕೆ ತರಬಯಸುವ ರಹಸ್ಯ/ ಮಹತ್ವದ ಪತ್ರಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಿದೆ.
#Chamarajanagar
ಮಕ್ಕಳ ನಗುವಿನಲ್ಲಿ ನಾಳಿನ ಸುಂದರ ಸಮಾಜದ ಕನಸಿದೆ!
ಪ್ರತಿ ಮಗುವಿಗೂ ಸಮಾನ ಅವಕಾಶ, ಪ್ರತಿ ಕನಸಿಗೂ ಸಾಧನೆಯ ಹಾದಿ ದೊರೆಯಲಿ!
ಜಿಲ್ಲೆಯ ಸಮಸ್ತ ಮುದ್ದು ಮಕ್ಕಳಿಗೆ ���ಕ್ಕಳ ದಿನಾಚರಣೆಯ ಹೃದಯಪೂರ್ವಕ ಶುಭಾಶಯಗಳು! 💐
🌾 ರೈತರೇ ಗಮನಿಸಿ! ಬೆಳೆ ವಿಮೆ ಮಾಡಿಸಿ – ಬೆಳೆಗಳಿಗೆ ರಕ್ಷಣೆ ಪಡೆಯಿರಿ!
ಹಿಂಗಾರು ಹಂಗಾಮು 2026-27ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಚಾಮರಾಜನಗರ ಜಿಲ್ಲೆಯಲ್ಲಿ ಈರುಳ್ಳಿ ಮತ್ತು ಟೊಮ್ಯಾಟೊ ಬೆಳೆಗಳಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ.
📅 ಕೊನೆಯ ದಿನಾಂಕ: 30 ನವೆಂಬರ್ 2026
#Chamarajanagar
ಕೆಪಿಎಸ್ಸಿ ಪರೀಕ್ಷೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಕಾಪಾಡಲು ರಾಜ್ಯ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದೆ. ಪರೀಕ್ಷಾ ಅಕ್ರಮಗಳಿಗೆ ಯಾವುದೇ ಅವಕಾಶ ನೀಡದೆ, ಅರ್ಹ ಅಭ್ಯರ್ಥಿಗಳಿಗೆ ನ���ಯಾಯ ಒದಗಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಭದ್ರತೆ, ಇಬ್ಬರು ಮೇಲ್ವಿಚಾರಕರ ನೇಮಕ ಹಾಗೂ ಹೊಸ OMR ವ್ಯವಸ್ಥೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಭ್ಯರ್ಥಿಗಳು ವದಂತಿಗಳಿಗೆ ಕಿವಿಗೊಡದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂತೆ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಆಲೂರು, ನಂಜದೇವನಪುರ ಗ್ರಾ.ಪಂ ನಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ
ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಆಸಕ್ತಿಯುಳ್ಳವರು https://t.co/6IdRUOKVlN ವೆಬ್ಸೈಟ್ ಮೂಲಕ ಅರ್ಜಿಯನ್ನು ನವೆಂಬರ್ 15ರವರೆಗೆ ಸಲ್ಲಿಸಬಹುದಾಗಿದೆ.
"ಕನ್ನಡದ ಕಂಪು ಮನೆಮನಗಳಲ್ಲಿ ಹರಡಲಿ, ಕರ್ನಾಟಕದ ಕೀರ್ತಿ ಜಗದಗಲ ಪಸರಿಸಲಿ, ನಮ್ಮ ಚಾಮರಾಜನಗರದ ಹಿರಿಮೆ ವಿಶ್ವದಾದ್ಯಂತ ಬೆಳಗಲಿ!"
ಕನ್ನಡ ಭಾಷೆಯನ್ನು ಪ್ರೀತಿಸೋಣ, ಗೌರವಿಸೋಣ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಸಮಸ್ತ ಜನತೆಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕನ್ನಡಿಗರೊಂದಿಗೆ ನಾವಿದ್ದೇವೆ; ನಿಮ್ಮ ಸುರಕ್ಷಿತ ವಾಪಸಾತಿ ನಮ್ಮ ಆದ್ಯತೆ
ಸೌದಿ ಅರೇಬಿಯಾದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಕರ್ನಾಟಕದ ಸುಮಾರು 600ಕ್ಕೂ ಹೆಚ್ಚು ಉಮ್ರಾ ಯಾತ್ರಿಕರು ಸಿಲುಕಿಕೊಂಡಿದ್ದಾರೆ. ಅವರು ಸುರಕ್ಷಿತವಾಗಿ ಮತ್ತು ಶೀಘ್ರವಾಗಿ ತಾಯ್ನಾಡಿಗೆ ಮರಳುವುದನ್ನು ಖಚಿತಪಡಿಸಲು ನಮ್ಮ ಕರ್ನಾಟಕ ಸರ್ಕಾರವು ಭಾರತ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ��ಮನ್ವಯ ಸಾಧಿಸುತ್ತಿದೆ.
ಈ ಸಂಕಷ್ಟದ ಸಂದರ್ಭದಲ್ಲಿ ಯಾತ್ರಿಕರಿಗೆ ಅಗತ್ಯ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ.
ಯಾತ್ರಿಕರಿಗಾಗಿ ಸಹಾಯವಾಣಿ ಸಂಖ್ಯೆಗಳು:
- ಕರ್ನಾಟಕ ಹಜ್ ಇಲಾಖೆ: 9483503132 | 7899707775
- ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC): 1070 | 080-22253707
ವಿಮಾನ ಹಾರಾಟದ ಮಾಹಿತಿಗಾಗಿ ತಮ್ಮ ವಿಮಾನಯಾನ ಸಂಸ್ಥೆ ಅಥವಾ ಪ್ರವಾಸ ಆಯೋಜಕರನ್ನು ಸಂಪರ್ಕಿಸಿ. ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ (ರಿಯಾದ್) ಮತ್ತು ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ನೀಡುವ ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ರಾಜ್ಯದ ಯಾತ್ರಿಕರಲ್ಲಿ ಮನವಿ ಮಾಡುತ್ತೇವೆ.
The safety and well-being of every Kannadiga is our foremost priority.
Nearly 600 Umrah pilgrims from Karnataka are currently stranded in Saudi Arabia due to disruptions in flight operations. I am deeply concerned about their situation and the distress faced by their families back home.
The Government of Karnataka is closely monitoring the situation and coordinating with the Ministry of External Affairs, the Indian Embassy in Riyadh and the Consulate General in Jeddah to facilitate the safe and early return of our pilgrims.
The Karnataka Haj Department and State Emergency Operations Centre have activated helplines to provide assistance and support to the pilgrims and their families.
We urge all pilgrims to remain in touch with their airlines and tour operators and follow official advisories. We stand with them and their families during this difficult time.
Karnataka Haj Department: 9483503132 | 7899707775
SEOC: 1070 | 080-22253707
ಚಾಮರಾಜನಗರ ದಸರಾ ಮಹೋತ್ಸವ 2026ರ ಪ್ರಚಾರ���್ಕೆ ಬೃಹತ್ ಬಲೂನ್ಗಳ ಹಾರಾಟಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಎಸ್.ಪಿ ಮುತ್ತುರಾಜು ಅವರಿಂದ ಚಾಲನೆ!
🔹 ಜಿಲ್ಲಾಡಳಿತ ಭವನ, ಬಿ.ಆರ್. ಹಿಲ್ಸ್ ರಸ್ತೆ
🔹 ತಾಲೂಕು ಪಂಚಾಯತ್ ಕಚೇರಿ, ಸತ್ತಿ ರಸ್ತೆ
🔹 ಪೊಲೀಸ್ ಠಾಣೆ, ಸಂತೇಮರಳ್ಳಿ ರಸ್ತೆ
🔹 ಪಾಲಿಟೆಕ್ನಿಕ್ ಕಾಲೇಜು, ನಂಜನಗೂಡು ರಸ್ತೆ
ಚಾಮರಾಜನಗರ ದಸರಾ ಮಹೋತ್ಸವ – 2026ರ ಸಂಭ್ರಮದಲ್ಲಿ ಭಾಗವಹಿಸಲು ಕಲಾವಿದರು, ಕಲಾತಂಡಗಳು, ಕವಿಗಳು ಹಾಗೂ ಚಿತ್ರಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂದೇ ಅರ್ಜಿ ಸಲ್ಲಿಸಿ! 🎭✍️🎨
📅 ಕೊನೆಯ ದಿನಾಂಕ: ಅಕ್ಟೋಬರ್ 12, 2026 (ಸಂಜೆ 5:30 ರೊಳಗೆ)
#ChamarajanagarDasara#Dasara2026
ಕೇಂದ್ರದ ಉನ್ನತ ಮಟ್ಟದ ಅಧಿಕಾರಿಗಳ ತಂಡದಿಂದ ಬರ ಅಧ್ಯಯನ
IMCT ತಂಡವು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ, ಕುಡಿಯುವ ನೀರು, ಜಾನುವಾರುಗಳ ಮೇವು ಹಾಗೂ ಬರ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿತು.
ರೈತರೊಂದಿಗೆ ಸಮಾಲೋಚಿಸಿ ಬೆಳೆ ನಷ್ಟದ ಮಾಹಿತಿ ಪಡೆಯಲಾಯಿತು
#Chamarajanagar
ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗೆ ತ��ರಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಅನ್ನ ಸೇವೆ ಆ್ಯಪ್ ಮೂಲಕ ಮನೆಯಲ್ಲೇ ಸುಲಭವಾಗಿ e-KYC ಪೂರ್ಣಗೊಳಿಸಬಹುದು. ಹಿರಿಯರು ಹಾಗೂ ಮಕ್ಕಳಿಗೆ Face Authentication ಸೌಲಭ್ಯವೂ ಲಭ್ಯವಿದೆ. ಜನರ ಸಮಯ ಮತ್ತು ಶ್ರಮ ಉಳಿಸುವ ನಿಟ್ಟಿನಲ್ಲಿ ಈ ಡಿಜಿಟಲ್ ಸೇವೆ ಪರಿಚಯಿಸಲಾಗಿದೆ. ಸರಳ, ಸುಲಭ ಹಾಗೂ ಜನಸ್ನೇಹಿ e-KYC ಸೇವೆಗೆ ಅನ್ನ ಸೇವೆ ಆ್ಯಪ್ ಸಹಾಯಕರವಾಗಲಿದೆ.