ಜೀವನ್ ಭೀಮಾ ನಗರ ಸುಧಾಮ್ ನಗರದಲ್ಲಿರುವ ಶಾಲೆಯಿಂದ ಬಾಲಕಿ ಕಾಣೆಯಾಗಿರುವ ಕುರಿತು ಆಕೆಯ ತಾಯಿಯವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ.
ತಕ್ಷಣ ಜೀವನ ಭೀಮಾ ನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ ಕಾಣೆಯಾಗಿದ್ದ ಬಾಲಕಿಯನ್ನು ಪತ್ತೆಹಚ್ಚಿ, ಸುರಕ್ಷಿತವಾಗಿ ತಾಯಿಯವರಿಗೆ ಒಪ್ಪಿಸಿರುತ್ತಾರೆ.
ಸದಾ ಚಲನಶೀಲ. ಕಾರ್ಯಾಚರಣೆಗೆ ಸಿದ್ಧ!
ಸಮನ್ವಯ, ಸಂವಹನ ಮತ್ತು ನೈಜ-ಸಮಯದ ಮೇಲ್ವಿಚಾರಣೆಯನ್ನು ಕ್ಷೇತ್ರಮಟ್ಟಕ್ಕೆ ಮತ್ತಷ್ಟು ಹತ್ತಿರ ತರುವ ಬೆಂಗಳೂರು ನಗರ ಪೊಲೀಸರ 'ಮೊಬ��ಲ್ ಕಮಾಂಡ್ ಸೆಂಟರ್' ಇಲ್ಲಿದೆ.
ಬೃಹತ್ ಕಾರ್ಯಕ್ರಮಗಳ ನಿರ್ವಹಣೆಯಿಂದ ಹಿಡಿದು ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸುವವರೆಗೆ, ಚಕ್ರಗಳ ಮೇಲಿನ ಈ ಕಮಾಂಡ್ ಸೆಂಟರ್ ನಮ್ಮ ತಂಡಗಳು ಸದಾ ಸಂಪರ್ಕದಲ್ಲಿರಲು, ಮಾಹಿತಿಯುಕ್ತವಾಗಿರಲು ಮತ್ತು ತಕ್ಷಣದ ಕ್ರಮಕ್ಕೆ ಸಿದ್ಧವಾಗಿರಲು ನೆರವಾಗುತ್ತದೆ.
ಸ್ಮಾರ್ಟ್ ತಂತ್ರಜ್ಞಾನ. ಬಲಿಷ್ಠ ಸಮನ್ವಯ. ಸುರಕ್ಷಿತ ಬೆಂಗಳೂರು.
On the Move. Ready for Action!
Meet the Mobile Command Centre of Bengaluru City Police, bringing coordination, communication and real-time monitoring closer to the ground.
From managing major events to responding to critical situations, this command centre on wheels helps our teams stay connected, informed and ready to act.
Smarter Technology. Stronger Coordination. Safer Bengaluru.
#BengaluruCityPolice #MobileCommandCentre #SmartPolicing #PublicSafety
"ನಿಮ್ಮ ದೂರು – ನಮ್ಮ ಜವಾಬ್ದಾರಿ; ಕಳೆದು ಹೋದ ಮೊಬೈಲ್ ಮತ್ತೆ ನಿಮ್ಮ ಕೈಯಲ್ಲಿ!" 📱
ನಮ್ಮ ಪೊಲೀಸ್ ತಂಡದ ತ್ವರಿತ ಕ್ರಮದಿಂದ ಕಳೆದುಹೋಗಿದ್ದ ಫೋನ್ ಅನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ಅದರ ಮಾಲೀಕರಿಗೆ ಸುರಕ್ಷ��ತವಾಗಿ ಹಿಂತಿರುಗಿಸಲಾಗಿದೆ.@DcpIndiranagar
ಈ ದಿನ ಮಾನ್ಯ ಡಿಸಿಪಿ ಸಾಹೇಬರು, ಇಂದಿರಾನಗರ ಪೊಲೀಸ್ ಠಾಣೆ ಭೇಟಿ ನೀಡಿ, ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ನಿರಂತರ ಗಸ್ತು, ಪರಿಣಾಮಕಾರಿ ಬೀಟ್ ವ್ಯವಸ್ಥೆ, ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಬಲಪಡಿಸುವಂತೆ ಸೂಚಿಸಿದರು. ಜೊತೆಗೆ, ಸೈಬರ್ ಅಪರಾಧಗಳ ನಿಯಂತ್���ಣ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿದರು
ರಾತ್ರಿ ಸಮಯದಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ವಿಶೇಷ ರಾತ್ರಿ ಗಸ್ತು ನಡೆಸಿ, ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಕಿಡಿಗೇಡಿಗಳನ್ನು ಪರಿಶೀಲಿಸುತ್ತಿದ್ದು ನಿರಂತರ ಗಸ್ತು ಮತ್ತು ಕಟ್ಟುನಿಟ್ಟಿನ ತಪಾಸಣೆಯಿಂದ ಅಪರಾಧ ನಿಯಂತ್ರಣದ ಜೊತೆಗೆ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡುತ್ತಿದೆ @acppnagar@DcpIndiranagar@AddlCPEast
ಇಂದಿರಾನಗರ ವಿಭಾಗದಲ್ಲಿ *“ಆಪರೇಷನ್ ಬ್ರೋಕನ್ ವಿಂಡೋ”* ಕಾರ್ಯಾಚರಣೆ ಕೈಗೊಂಡು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದವರ ವಿರುದ್ಧ 90 ಲಘು ಪ್ರಕರಣಗಳು ಹಾಗೂ 33 COTPA ಪ್ರಕರಣಗಳನ್ನು ದಾಖಲಿಸಿ, ಮಾನ್ಯ ನ್ಯಾಯಾಲಯಕ್ಕೆ ದಂಡ ವಿಧಿಸಲು ವರದಿ ಸಲ್ಲಿಸಲಾಗಿದೆ.
#OperationBrokenWindow
ಹೊಸದಾಗಿ ರಚನೆಯಾದ ಇಂದಿರಾನಗರ ವಿಭಾಗದ ಡಿಸಿಪಿ ಸರ್ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ ಕರ್ತವ್ಯ ನಿರ್ವಹಣೆಯ ಕುರಿತು ಅಗತ್ಯ ಸೂಚನೆಗಳನ್ನು ನೀಡಿದರು. ಜೊತೆಗೆ ತಮ್ಮ ಅನುಭವ ಹಂಚಿಕೊಂಡು,ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮಾರ್ಗದರ್ಶನ ನೀಡಿದರು @acppnagar@DcpIndiranagar@AddlCPEast
#ಬೆಂಗಳೂರು ನಗರದ ನೂತನ ಕೇಂದ್ರ ಪೊಲೀಸ್ ಆಯುಕ್ತರಾದ ಮಾನ್ಯ ಶ್ರೀ ಲಾಭು ರಾಮ್, IPS ರವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಸ್ವಾಗತ.
ಇಂದು ನೂತನ ಕೇಂದ್ರ ಪೊಲೀಸ್ ಆಯುಕ್ತರಾದ ಶ್ರೀ ಲಾಭುರಾಮ್,IPS ರವರು ಇಂದಿರಾನಗರ ವಿಭಾಗದ ಅಧಿಕಾರಿಗಳೊಂದಿಗೆ ಅಪರಾಧ ತಡೆ,ಪತ್ತೆ ಹಾಗೂ ತನಿಖೆ ಕುರಿತು ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಈ ದಿನ ಠಾಣಾ ಸರಹದ್ದಿನಲ್ಲಿ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡುವ ಮೂಲಕ ಅನ���ಮಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲಾಯಿತು
@DcpIndiranagar @acppnagar
Indiranagar Police Conduct Surprise Inspection on Active Rowdy-Sheeters, Issue Strict Warning
Bengaluru:
In a decisive move to tighten law and order and curb anti-social elements, police officials from the newly formed #Indiranagar Division of #Bengaluru carried out surprise early-morning inspections at the residences of prominent active rowdy-sheeters on Sunday.
Guided by the core policing principle of "Dushta Nigraha and Shishta Paripalana", a team of officers and staff visited the homes of known offenders across the division limits to monitor their activities.During the inspections, the #RowdySheeters were formally counselled to abandon criminal paths and reintegrate into mainstream society. However, officials delivered a stern warning that any violation of legal directives or continued involvement in unlawful activities would be met with the strictest legal action.
Deputy Commissioner of Police, Indiranagar Division, Chennabasavanna, IPS, urged the public to actively partner with law enforcement in maintaining peace in the neighborhood. Emphasizing community cooperation, the DCP encouraged law-abiding citizens to report grievances directly to their local police stations and assist the department in cracking down on rowdyism.
To ensure accountability and uninterrupted public access, the DCP assured residents that his doors remain open if complaints go unaddressed at the local station or sub-division levels. Citizens seeking escalation can contact the DCP’s office directly at 080-22942312 to check his availability and schedule an in-person meeting to resolve their issues within the framework of the law.
@DcpIndiranagar@CCP_Blr@IPSHemant@BlrCityPolice@KarnatakaCops
ಕಳೆದುಹೋದ ಮೊಬೈಲ್ ಮರಳಿ ಸಿಕ್ಕಾಗ ಅದರ ಮಾಲೀಕರ ಮುಖದಲ್ಲಿ ಮೂಡುವ ಸಂತೋಷವೇ ನಮಗೆ ದೊಡ್ಡ ತೃಪ್ತಿ. ಸರಿಯಾದ ವಾರಸುದಾರರನ್ನು ಗುರುತಿಸಿ, ಪರಿಶೀಲನೆಯ ನಂತರ ಮೊಬೈಲ್ ಹಸ್ತಾಂತರಿಸುವುದು ಕೇವಲ ಕರ್ತವ್ಯವಲ್ಲ, ಅದು ಸಾರ್ವಜನಿಕರಲ್ಲಿ ಪೊಲೀಸರ ಮೇಲಿನ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸವಾಗಿದೆ @acppnagar@DcpIndiranagar
ರೌಡಿ ಶೀಟರ್ಗಳ ಮನೆಗಳಿಗೆ ದಿಢೀರ್ ಭೇಟಿ – ಎಚ್ಚರಿಕೆ!
ಇಂದು ಸಕ್ರಿಯ ರೌಡಿ ಶೀಟರ್ಗಳ ಮನೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.
@halasuru34152@CCP_Blr@DcpIndiranagar
ಮನೆ ಮನೆಗೆ ಪೊಲೀಸ್ ಉಪಕ್ರಮದಡಿ ಠಾಣಾ ಸರಹದ್ದಿನಲ್ಲಿ ಇರುವ ಮನೆಗಳಿಗೆ ಭೇಟಿ ನೀಡಿ ಅವರ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದು ಜೊತೆಗೆ ತುರ್ತು ���ಹಾಯವಾಣಿಗಳ ಬಗ್ಗೆ, ಸನ್ಮಿತ್ರ, ಸೈಬರ್ ಅಪರಾಧಗಳ ಬಗ್ಗೆ ಪರಸ್ಪರ ಸಮಾಲೋಚನೆ ನಡೆಸಲಾಯಿತು.
@DcpIndiranagar @acppnagar
ಡಿಸಿಪಿ ಸರ್ ಅವರು ಜೀವನ ಭೀಮಾ ನಗರ ಪೊಲೀಸ್ ಠಾಣೆ ಭೇಟಿ
ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ನಿರಂತರ ಗಸ್ತು, ಪರಿಣಾಮಕಾರಿ ಬೀಟ್ ವ್ಯವಸ್ಥೆ, ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಬಲಪಡಿಸುವಂತೆ ಸೂಚಿಸಿದರು. ಜೊತೆಗೆ, ಸೈಬರ್ ಅಪರಾಧಗಳ ನಿಯಂತ್ರಣ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿದರು.
ಡಿಸಿಪಿ ಸರ್ ಅವರು ಜೀವನ ಭೀಮಾ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜನಸ್ನೇಹಿ ಸೇವೆ, ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆ, ಸಿಬ್ಬಂದಿಗಳ ಕುಂದುಕೊರತೆಗಳ ಪರಿಹಾರ, ಅಪರಾಧ ತಡೆ, ಸೈಬರ್ ಅಪರಾಧ ನಿಯಂತ್ರಣ, ರೌಡಿ ಚಟುವಟಿಕೆಗಳ ನಿಗ್ರಹ ಹಾಗೂ ಮಾದಕ ವಸ್ತುಗಳ ಹಾವಳಿ ತಡೆಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಶ್ರಮದಾನ ಕಾರ್ಯಕ್ರಮ
ಅಧಿಕಾರಿ ಹಾಗೂ ಸಿಬ್ಬಂದಿಗಳು ಠಾಣೆಯ ಶಿಸ್ತು, ಸ್ವಚ್ಛತೆ ಮತ್ತು ಸುಂದರ ಪರಿಸರವನ್ನು ಕಾಪಾಡುವ ಉದ್ದೇಶದಿಂದ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಈ ಸಂದರ್ಭದಲ್ಲಿ ಠಾಣೆಯ ಆವರಣ ಹಾಗೂ ಕಚೇರಿ ಪರಿಸರವನ್ನು ಸ್ವಚ್ಛಗೊಳ���ಸಿ, ಸ್ವಚ್ಛ ಮತ್ತು ಶಿಸ್ತುಬದ್ಧ ವಾತಾವರಣ ನಿರ್ಮಾಣಕ್ಕೆ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿದರು
ಎಚ್ಚರವಾಗಿರಿ, ಸುರಕ್ಷಿತವಾಗಿರಿ.
>ಬಲವಾದ ಪಾಸ್ವರ್ಡ್ ಬಳಸಿ (ಅಕ್ಷರಗಳು, ಸಂಖ್ಯೆಗಳು, ಚಿಹ್ನೆಗಳು)
> ವೈಯಕ್ತಿಕ ಮಾಹಿತಿ (ಹೆಸರು, ವಿಳಾಸ, OTP ಇತ್ಯಾದಿ) ಯಾರಿಗೂ ಹಂಚಬೇಡಿ
>ಅನುಮಾನಾಸ್ಪದ ಲಿಂಕ್ ಮತ್ತು ಮೆಸೇಜ್ಗಳ ಬಗ್ಗೆ ಎಚ್ಚರವಿರಲಿ
>ಟೂ-ಫ್ಯಾಕ್ಟರ್ ಅಥೆಂಟಿಕೇಶನ್ ಆನ್ ಮಾಡಿ
@blrcitypolice@dcpindiranagar@DcpEastBcp
🚨ಬೈಯಪ್ಪನಹಳ್ಳಿ ಪೊಲೀಸ್ ಠಾಣೆ 🚨
ಮಾದಕ ವಸ್ತುಗಳಿಂದ ದೂರವಿರಿ, ಇದು ನಮ್ಮ ಬದುಕನ್ನೇ ನಾಶಮಾಡುತ್ತದೆ."
ಒಂದೇ ಉತ್ತರ – "ಬೇಡ ಬ್ರೋ"
"ಒಮ್ಮೆ ಪ್ರಯತ್ನಿಸಿ ನೋಡಿ" ಎಂಬ ಆಮಿಷಗಳ ಮೂಲಕ ಯುವಕರನ್ನು ಬಲೆಗೆ ಸೆಳೆಯುತ್ತಾರೆ. ಅವರ ಬಲೆಗೆ ಬೀಳಬೇಡಿ.
ಆತ್ಮವಿಶ್ವಾಸದಿಂದ ಹೇಳಿ "ಬೇಡ ಬ್ರೋ".
@BlrCityPolice@dcpindiranagar@AcpHalasuru