*ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು*
*ಮುಂದೆ ಓದಿ*
https://t.co/bYmiUVGGVh
*ಈದಿನ ಯೂಟ್ಯೂಬ್ ಈಗ ಮತ್ತೆ ನಿಮ್ಮ ಮುಂದೆ*
ನೀವು ಸಬ್ಸ್ಕ್ರೈಬ್ ಮಾಡಿ, ನಿಮ್ಮ ಬಳಗದವರಿಗೂ ಸಬ್ಸ್ಕ್ರೈಬ್ ಮಾಡಲು ತಿಳಿಸಿ
https://t.co/ZhtCT1tPFG
ತಮಿಳು ಅಭಿಮಾನಿಗಳು ಬಿ. ಸರೋಜಾದೇವಿಯವರನ್ನು ಪ್ರೀತಿಯಿಂದ ಕರೆಯುತ್ತಿದ್ದುದ್ದು ಕನ್ನಡತ ಪೈಂಕಿಲಿ ಅಂತ. ಅಂದರೆ, ಕನ್ನಡದ ಅರಗಿಣಿ ಅಂತ ಅರ್ಥ. ನಿಜವಾಗಿಯೂ ಸರೋಜಮ್ಮ ಅರಗಿಣಿಯೆ ಆಗಿದ್ದರು☺️
#BSarojaDevi#ripbsarojadevi
ಅಭಿನಯದಲ್ಲಿ ತೀಕ್ಷ್ಣತೆ, ಸಾಮಾಜಿಕ ಬದುಕಿನಲ್ಲಿ ಸರಳತೆ ಮತ್ತು ಅಭಿಮಾನಿಗಳೊಂದಿಗೆ ಅಂತರಂಗದ ನಂಟು – ಇವೆಲ್ಲವನ್ನೂ ಒಂದೇ ವ್ಯಕ್ತಿತ್ವದಲ್ಲಿ ಕಾಣಬಹುದಾದ ವ್ಯಕ್ತಿ ಶಿವಣ್ಣ. ಹುಟ್ಟುಹಬ್ಬದ ಶುಭಾಶಯಗಳು ಪ್ರೀತಿಯ ಶಿವಣ್ಣ.... ಬದುಕು ಮತ್ತಷ್ಟು ಸೊಬಗುಗೊಳ್ಳಲಿ😍🥰#shivarajkumar#nimmashivanna#kannadafilm#happybirthday❤️
ಇಂತಹ ದುಃಖದ ಘಟನೆಗಳು ನಮ್ಮ ಮನಸ್ಸನ್ನು ತುಂಬಾ ನೋಯಿಸುತ್ತವೆ. ಮಲೈ ಮಹದೇಶ್ವರ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ತಾಯಿ ಹುಲಿ ಮತ್ತು ಅದರ ನಾಲ್ಕು ಮರಿ ಹುಲಿಗಳಿಗೆ ವಿಷ ಹಾಕಿ ಕೊಲ್ಲಲಾದ ಸುದ್ದಿ ನಮ್ಮ ಪರಿಸರದ ಭವಿಷ್ಯಕ್ಕೆ ದೊಡ್ಡ ಎಚ್ಚರಿಕೆಯ ಸಂಕೇತವಾಗಿದೆ.
#mmhills#savetigers#karnatakaforestdepartment
ಉಗ್ರತೆಯು ಮಾನವೀಯತೆಯ ವಿರುದ್ಧದ ಕ್ರೂರತೆಯಾಗಿದೆ. ಈ ಭಯೋತ್ಪಾದನೆಗೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು😔
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಜೀವಗಳು ಮತ್ತು ಈ ಚಿತ್ರ.... ಹೃದಯ ಹಿಂಡುತ್ತಿದೆ.....
#ಕಾಶ್ಮೀರ#phahalgamattack
ಕನ್ನಡ ಚಿತ್ರರಂಗ ಮತ್ತು ದೂರದರ್ಶನದಲ್ಲಿ ಹಾಸ್ಯ ಕಲಾವಿದರಾಗಿ ವಿಜೃಂಭಿಸಿದ್ದ ಬ್ಯಾಂಕ್ ಜನಾರ್ಧನ್ ಅವರು ಇನ್ನಿಲ್ಲ. 5೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನೀಡಿರುವ ಐಕಾನಿಕ್ ಹಾಸ್ಯ ಪಾತ್ರಗಳು ಮತ್ತು ಶಕ್ತಿಯುತ ಪೋಷಕ ಪಾತ್ರಗಳು ಅವರ ನೆನಪನ್ನು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಸುತ್ತವೆ.
ಅಂತಿಮ ವಿದಾಯಗಳು ಸರ್
#BankJanardhan#rip
Actor Kishore and filmmaker Suman Kittur have come together to form #Beru, an organisation that works towards conserving our forests and its guardians. Read more: https://t.co/1WIyIujgQO
ಶ್ಯಾಮ್ ಬೆನಗಲ್ ಅವರು ಸಮಾನಾಂತರ ಸಿನಿಮಾ ಚಳುವಳಿಯನ್ನು ಹುಟ್ಟು ಹಾಕಿ ಭಾರತೀಯ ಚಿತ್ರರಂಗದಲ್ಲಿ ಕ್ರಾಂತಿಯನ್ನುಂಟು ಮಾಡಿದವರು. ಜಾತಿ, ವರ್ಗ ಮತ್ತು ಲಿಂಗಗಳ ಸಂಕೀರ್ಣ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಅವರ ಸಾಂಪ್ರದಾಯಿಕ ಕಥೆ ಹೇಳುವಿಕೆಗೆ ನಾನು ಎಂದೆಂದಿಗೂ ಅಭಿಮಾನಿ.
ಅಂತಿಮ ವಿದಾಯಗಳು🙏🙏#syambenegal#IndianFilmIndustry
ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ಇಂದು ಕೃಷ್ಣ ಪ್ರಸಾದ್ ಅವರ 'ಸಹಜಸಮೃದ್ಧ' ತಂಡ ಆಯೋಜಿಸಿದ್ದ ಬಾಳೆ ಮೇಳ ಉದ್ಘಾಟಿಸಿದೆ. ಸ್ಥಳೀಯ ಬಾಳೆಹಣ್ಣುಗಳ ಸಮೃದ್ಧ ವೈವಿಧ್ಯತೆ ಮತ್ತು ಅವುಗಳ ಸಂರಕ್ಷಣೆಯ ಅಗತ್ಯಗಳನ್ನು ಒತ್ತಿಹೇಳಲು ಮೈಸೂರಿನಲ್ಲಿ ಮೂರು ದಿನಗಳ ಕಾಲ (ನವೆಂಬರ್22,23,24)ಈ ಬಾಳೆಹಣ್ಣಿನ ಮೇಳ ನಡೆಯಲಿದೆ. ಆಸಕ್ತರು ಭೇಟಿ ನೀಡಬಹುದು.
ಪ್ರೀತಿಯ ದ್ವಾರಕೀಶ್ ಅಂಕಲ್, ನನ್ನ ವೃತ್ತಿ ಬದುಕಿಗೆ ನೀವು ತೋರಿಸಿದ ಮಾರ್ಗದರ್ಶನ, ನಿಮ್ಮ ಆ ಅಕ್ಕರೆಯನ್ನು ಎಂದಿಗೂ ಮರೆಯಲಾರೆ..... ಹೋಗಿ ಬನ್ನಿ......
ಅಂಕಲ್ ಕುಟುಂಬದವರಿಗೆ ಸಾಂತ್ವನಗಳು.
#dwarkish#kannadamovies#RIP