ಇಡೀ ಬೈಂದೂರು ಕ್ಷೇತ್ರ ಮೆಚ್ಚಿದ ಜನ ನಾಯಕ
ಅಭಿವೃದ್ಧಿಯ ಹರಿಕಾರ @BYRBJP
ತಾಯಿ ಜಗನ್ಮಾತೆ ನಿಮ್ಮೆಲ್ಲ ಇಷ್ಟಾರ್ಥಗಳು ಈಡೇರಿಸಲಿ.🙏
ನಿಮಗೆ ಸುಖ , ಶಾಂತಿ , ಸಮೃದ್ಧಿ ,ಆಯುರ್ ಆರೋಗ್ಯ , ಐಶ್ವರ್ಯ ಸಿರಿ ಸಂಪತ್ತು ಕೊಟ್ಟು ಕಾಪಾಡುವಂತಾಗಲಿ ಕ್ಷೇತ್ರದಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಮಾಡುವಂತೆ
ಶಕ್ತಿ ಸಾಮರ್ಥ್ಯವನ್ನು ಕರುಣಿಸಲಿ
'ಭಾರತದ ತೂಗು ಸೇತುವೆ ಮನುಷ್ಯ' ಎಂದೇ ಖ್ಯಾತರಾಗಿದ್ದ ಸುಳ್ಯದ ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
ನದಿ, ಕೊಳ್ಳ, ಹಳ್ಳಗಳಿಂದಾಗಿ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದ ಅನೇಕ ದುರ್ಗಮ ಪ್ರದೇಶಗಳಿಗೆ ಕಡಿಮೆ ವೆಚ್ಚದಲ್ಲಿ ದೇಶದಾದ್ಯಂತ 160 ಕ್ಕೂ ಅಧಿಕ ತೂಗು ಸೇತುವೆಗಳನ್ನು ನಿರ್ಮಿಸಿ ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಗೆ ಕಾರಣರಾಗಿ, ನೂರಾರು ದುರ್ಗಮ ಪ್ರದೇಶಗಳಿಗೆ ಆಶಾಕಿರಣವಾಗಿದ್ದರು. ಇವರ ಕಾರ್ಯ ಎಂದೆಂದಿಗೂ ಸ್ಮರಣೀಯ.
ಓಂ ಶಾಂತಿಃ 🙏
#GirishBharadwaj #HangingBridge
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ತಾಲೂಕಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಅಗತ್ಯ ಜಮೀನು ಹಸ್ತಾಂತರ ಹಾಗೂ ಅಗತ್ಯ ಪ್ರಸ್ತಾವವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸುವಂತೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಕುರಿತು ಪತ್ರಿಕಾ ವರದಿಗಳು.
Heartiest Congratulations to our U19 Women's Cricket team for winning the #U19WorldCup . A historic achievement and a proud moment for Indian cricket. 🇮🇳
Wishing each and every member of the team the very best. @BCCIWomen@BCCI
ಬೈಂದೂರು ವಿಧಾನಸಭಾ ವ್ಯಾಪ್ತಿಯ ಯಡಮೊಗ್ಗೆ ಗ್ರಾಮಕ್ಕೆ ನೀರಾವರಿ ಯೋಜನೆ ಕಲ್ಪಿಸುವ ಕುರಿತು ಇಂದು ಯಡಮೊಗ್ಗೆ ಗ್ರಾಮಸ್ತರೊಂದಿಗೆ ಚರ್ಚಿಸಲಾಯಿತು.
ಈ ಸಂಧರ್ಭದಲ್ಲಿ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ, ಮುಖಂಡರಾದ ಶ್ರೀ ಕೃಷ್ಣ ಪ್ರಸಾದ, ಶ್ರೀ ಸುರೇಶ್ ಶೆಟ್ಟಿ, ಶ್ರೀ ಬಾಲಚಂದ್ರ ಭಟ್, ಶ್ರೀ ಪ್ರಾಣೇಶ್ ಯಡಿಯಾಳ್, ಶ್ರೀ ವೇಣುಗೋಪಾಲ್ ಶೆಟ್ಟಿ ಹಾಗೂ ಯಡಮೊಗ್ಗೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. @gantihole
ಸಮೃದ್ಧ ಬೈಂದೂರು ತಂಡವು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಹಾಗೂ AJINORAH ಸಹಭಾಗಿತ್ವದಲ್ಲಿ ಇಂದು ಬೈಂದೂರು ಪಟ್ಟಣದ ಜೆ.ಎನ್.ಆರ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಲಾಯಿತು.
ಜಪಾನ್, ಚೈನಾ, ಕೊರಿಯಾ, ದುಬೈ ಸೇರಿದಂತೆ ದೇಶ-ವಿದೇಶಗಳ ನೂರಾರು ಪ್ರತಿಷ್ಠಿತ ದೈತ್ಯ ಕಂಪೆನಿಗಳು ಈ ಮೇಳದಲ್ಲಿ ಪಾಲ್ಗೊಂಡು ರಾಜ್ಯದ ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರಕುವ ಆಶಾಭಾವ ಮೂಡಿದೆ.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ ಅವರು, ಶ್ರೀ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಮೇಘರಾಜ್ ಅವರು ಹಾಗೂ ವಿವಿಧ ಕಂಪೆನಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಸಮೃದ್ಧ ಬೈಂದೂರು, ಆಜಿನೋರಾ ಕೌಶಲಾಭಿವೃದ್ಧಿ ಸಂಸ್ಥೆ ಎನ್.ಎಸ್.ಡಿ.ಸಿ. ಇವುಗಳ ಸಹಯೋಗದಲ್ಲಿ ಬೈಂದೂರಿನಲ್ಲಿ ನಡೆದ ಬೃಹತ್ ಉದ್ಯೋಗ ಮೇಳದ ಹಾಗೂ ಪರಿಶೀಲನ ಸಭೆಯ ಕುರಿತು ಪತ್ರಿಕೆಯ ವರದಿಗಳು.
ಬೈಂದೂರು ಕ್ಷೇತ್ರಕ್ಕೆ ಬಿ.ಎಸ್.ಎನ್.ಎಲ್.
28 ಟವರ್ ಗಳು ಮಂಜೂರಾಗಿದೆ. ಬೈಂದೂರಿನ 19 ಟವರ್ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಸೆಪ್ಟೆಂಬರ್ ಅಂತ್ಯದೊಳಗೆ ಉದ್ಘಾಟನೆಯಾಗಿ ಕಾರ್ಯಾರಂಭ ಮಾಡಲಿವೆ.
ಬೈಂದೂರು ಅಭಿವೃದ್ಧಿಯೆಡೆಗೆ ದಾಪುಗಾಲಿಡುತ್ತಿದ್ದು, ವತ್ತಿನೆಣೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ. ಮುಂದಿನ ದಿನಗಳಲ್ಲಿ ಕೊಡಚಾದ್ರಿ ರೋಪ್, ಇಲ್ಲಿನ ಬೀಚ್ಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಇನ್ನಷ್ಟು ಬಲಪಡಿಸುವ ಮೂಲಕ ಮಾದರಿ ಕ್ಷೇತ್ರವಾಗಿ ರೂಪಿಸಲಾಗುವುದು ಎಂದು ತಿಳಿಸಲಾಯಿತು.
@BJP4Karnataka@gantihole@YashpalBJP@nalinkateel@CaptBrijesh@KotasBJP@BjpUdupi
Congratulations to the Indian Men's Hockey team on putting up a fabulous play at the #Paris2024 and securing a Bronze by defeating Spain 2-1.
Chak De India 🇮🇳
#Olympics#Cheer4Bharat
ಓಂ ನವಕುಲಾಯ ವಿದ್ಮಹೇ ವಿಶದಂತಯೇ ಧೀಮಹಿ ತನ್ನೋ ಸರ್ಪಃ ಪ್ರಚೋದಯಾತ್..!!
ಪವಿತ್ರ ಶ್ರಾವಣ ಮಾಸದ ಮೊದಲ ಹಬ್ಬ ನಾಗ ಪಂಚಮಿಯು ಸರ್ವರಿಗೂ ಒಳಿತನ್ನುಂಟು ಮಾಡಲಿ, ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಶುಭಾಶಯಗಳು.
ನಾಗದೇವತೆಗಳ ದೈವಿಕ ಆಶೀರ್ವಾದವು ನಿಮ್ಮ ಜೀವನಕ್ಕೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ. #NagaPanchami
ವಿಶ್ವ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು.
ಕುಂದಾಪ್ರ ಭಾಷಿಗೆ ಅದ್ರದ್ದೇ ಆದ್ ಹಿರಿಮೆ ಇತ್ತ್. ಸಾದ್ನಿ ಮಾಡ್ದೋರ್ ನಾಡಿನ್ ಹೆಸ್ರ್ ಬೆಳ್ಸಿರ್. ಕುಂದಪ್ರದ್ ಯಕ್ಷಗಾನು, ಜನು ಯಾವ್ ನಮ್ನಿ ವಿಶೇಷ್ವೋ ಅದೇ ನಮ್ನಿ ಅಲ್ಲಿದ್ ಭಾಷಿಯೂ ವಿಶೇಷ. ಇದು ಬರೀ ಭಾಷಿ ಅಲ್ಲ, ಅದ್ ಅಲ್ಲಿನೋರ್ ಬದ್ಕ್. ಕುಂದಾಪ್ರ ಭಾಷಿ ಮಾತಾಡು ನನ್ನ ಎಲ್ಲಾ ಸ್ನೇಹಿತರಿಗೆ ವಿಶ್ವ ಕುಂದಾಪ್ರ ಕನ್ನಡ ದಿನದ್ ಶುಭಾಷಯಗಳು.
ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ಅವರನ್ನು ಭೇಟಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ "ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ನಿರ್ಮಾಣ" ಮಾಡಲು ಮನವಿಯ ಕುರಿತು ಪತ್ರಿಕಾ ವರದಿಗಳು.
ಬೈಂದೂರಿನಲ್ಲಿ “ಮೂಕಾಂಬಿಕಾ ವಿಮಾನ ನಿಲ್ದಾಣ” ಮಂಜೂರಾತಿಗೆ ಕೇಂದ್ರ ವಿಮಾನಯಾನ ಸಚಿವರಲ್ಲಿ ಮನವಿ
ಕೇಂದ್ರ ವಿಮಾನಯಾನ ಸಚಿವರಾದ ಶ್ರೀ ಕಿಂಜರಾಪು ರಾಮ ಮೋಹನ ನಾಯ್ಡು ಅವರನ್ನು ಭೇಟಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯ ಒತ್ತಿನೆಣೆಯಲ್ಲಿ ಮೂಕಾಂಬಿಕಾ ವಿಮಾನ ನಿಲ್ದಾಣ ಮಂಜೂರು ಮಾಡಲು ಇಂದು ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರೊಂದಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯ ಉಡುಪಿ ಜಿಲ್ಲೆಯ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿರುತ್ತದೆ. ಭಾರತದ ವಿವಿಧ ರಾಜ್ಯಗಳಿಂದ ಹಾಗೂ ಹೊರದೇಶಗಳಿಂದ ಪ್ರತಿದಿನ 10,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಬೈಂದೂರು ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದ ಅತೀ ಸಮೀಪವಿರುವ ಒತ್ತಿನೆಣೆಯಲ್ಲಿ ಸುಮಾರು 500 ಎಕರೆಗೂ ಅಧಿಕ ಸ್ಥಳ ಲಭ್ಯವಿದ್ದು ಅಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಭಕ್ತಾಧಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಆದ್ದರಿಂದ ಮೂಕಾಂಬಿಕಾ ವಿಮಾನ ನಿಲ್ದಾಣಕ್ಕೆ ಮಂಜೂರಾತಿ ನೀಡುವಂತೆ ಮನವಿ ಮಾಡಿದೆನು.
ಮನವಿಯ ಬಗ್ಗೆ ಮಾನ್ಯ ಕೇಂದ್ರ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ. @RamMNK@gantihole@BJP4Karnataka@KotasBJP
Proud moment for Bharat! 🇮🇳 🇷🇺 🎖
Heartfelt congratulations to Hon'ble Prime Minister Shri @narendramodi ji on being bestowed with Russia’s highest civilian honour, the Order of St. Andrew the Apostle.
@PMOIndia@narendramodi_in
ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 76ನೇ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು.
ರಾಷ್ಟ್ರೀಯ ಚಿಂತನೆಗಳು, ದೇಶದ ಬಗೆಗಿನ ಗೌರವ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಎಬಿವಿಪಿಯ ಕೊಡುಗೆ ಅಪಾರವಾಗಿದೆ.
ಸಮಸ್ತ ವಿದ್ಯಾರ್ಥಿ ವೃಂದಕ್ಕೆ ರಾಷ್ಟ್ರೀಯ ವಿದ್ಯಾರ್ಥಿ ದಿನದ ಹಾರ್ದಿಕ ಶುಭಾಶಯಗಳು.
#ರಾಷ್ಟ್ರೀಯವಿದ್ಯಾರ್ಥಿದಿನ
#NationalStudentsDay
#akhilbaratiyavidyartiparishat
@ABVPVoice@ABVPKarnataka
ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವರಾದ ಸನ್ಮಾನ್ಯ ಶ್ರೀ ನಿತಿನ್ ಜೈರಾಂ ಗಡ್ಕರಿಯವರನ್ನು ಇಂದು ಅವರ ಗೃಹ ಕಛೇರಿಯಲ್ಲಿ ಭೇಟಿ ಮಾಡಿ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗಬೇಕಾದ ಹೆದ್ದಾರಿ ಕಾಮಗಾರಿಗಳ ಅಗತ್ಯತೆಗಳ ಬಗ್ಗೆ ಚರ್ಚಿಸಿ ಈ ಕೆಳಕಂಡ ಯೋಜನೆಗಳಿಗೆ ಅನುಮೋದನೆ ದೊರಕಿಸಿಕೊಡಲು ಕೋರಲಾಯಿತು
1) ಆಗುಂಬೆಘಾಟಿ ರಸ್ತೆಗೆ ಪರ್ಯಾಯವಾಗಿ ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 4 ಪಥದ ಸುರಂಗ ಮಾರ್ಗದ ರಸ್ತೆ ನಿರ್ಮಾಣ.
2) ಕುಂದಾಪುರದಿಂದ ಗಂಗೊಳ್ಳಿ ಬಂದರಿನವರೆಗೆ 5.60 ಕಿ.ಮೀ ಉದ್ದದ ರಸ್ತೆ ಹಾಗು ಭಾರಿ ಸೇತುವೆ ನಿರ್ಮಾಣ.
3) ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ವಿವಿಧೋದ್ದೇಶ ಬಂದರಿನವರೆಗೆ ತಾರಾಪತಿ ಅಳವೆಕೋಡಿ ಮೂಲಕ ವಿಸ್ತರಣೆ ಮಾಡಿ 3.80 ಕಿ.ಮೀ ಉದ್ದದ ರಸ್ತೆ ಹಾಗು ಸೇತುವೆಗಳ ನಿರ್ಮಾಣ.
4) ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ರಾಣಿಬೆನ್ನೂರಿನವರೆಗೆ ಬಾಕಿ ಉಳಿದ ಭಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣ
5) ರಾ. ಹೆದ್ದಾರಿ 369 ಇ ಸಾಗರದಿಂದ ಮರಕುಟಕವರೆಗೆ ದ್ವಿಪಥ ರಸ್ತೆ (ಸಾಗರ ಪಟ್ಟಣದ ಬೈಪಾಸ್ ರಸ್ತೆ ಸೇರಿ) ನಿರ್ಮಾಣ
ಸನ್ಮಾನ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸಂಬಂದಿಸಿದ ಕೇಂದ್ರ ಭೂಸಾರಿಗೆ ಮಂತ್ರಾಲಯದ ಅಧಿಕಾರಿಗಳಿಗೆ ಸದರಿ ಕಾಮಗಾರಿಗಳ ಯೋಜನಾವರದಿ ತಯಾರಿಸಲು ಸಮಾಲೋಚಕರನ್ನು ತಕ್ಷಣ ನಿಯೋಜಿಸಲು ಸೂಚಿಸಿದ್ದು ಯೋಜನಾ ವರದಿ ಪಡೆದು ಮಂಜೂರಾತಿ ನೀಡಲು ಸಹ ಕ್ರಮವಹಿಸಲು ಸೂಚಿಸಿದರು.
ಕ್ಷೇತ್ರದ ಹೆದ್ದಾರಿಗಳ ಸಮಗ್ರ ಅಭಿವೃದ್ಧಿಗೆ ತಮ್ಮ ಬೆಂಬಲ ನೀಡುತ್ತಿರುವ ಮಾನ್ಯ ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವರಾದ ಸನ್ಮಾನ್ಯ ಶ್ರೀ ನಿತಿನ್ ಜೈರಾಂ ಗಡ್ಕರಿಯವರಿಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳು.
@nitin_gadkari | @MORTHIndia
Met Hon'ble Union Minister for Railways Shri @AshwiniVaishnaw Ji today and discussed the following issues pertaining to Railways in Shivamogga Constituency.
◾ Introduction of Yeshwantapur-Shivamogga-Yeshwantapur Vande Bharath Express.
◾Sanctioning of Talguppa-Sirsi-Tadasa-Hubballi new Railway Line.
◾Sanctioning of Shivamogga-Shringeri-Mangalore new Railway line.
◾Shivamooga-Biruru Doubling work.
◾Kotegangur Coaching depot and terminal station.
◾Shivamogga-Shikaripura-Ranebennur new railway line.
◾ Development of Bhadravathi Railway Station
◾Restoring of Shivamogga-Renigunta-Chennai bi-weekly special train
◾Extension of Train Number 16581/16582 into daily train
◾Stoppage of train 16227/16228 at Haranally Railway Station
◾Stoppage of trains at Mookabika Railway Station, Byndoor
◾Stoppage of Trains at Senapur railway Station, Udupi Dist.
Gratitude to Hon'ble @RailMinIndia for his good will and assurance for all possible support.
@BSYBJP | @BYVijayendra | @VSOMANNA_BJP | @chennibjp | @JnanendraAraga | @gantihole | @KotasBJP | @SWRRLY
"ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯನ್ನು ಕರಾಳ ದಿನಗಳಿಂದ ಹೊರತೆಗೆಯುವ ಪ್ರಥಮ ಹೆಜ್ಜೆ ಶುರುವಾಗಿದ್ದು, ನೂರಕ್ಕೆ ನೂರರಷ್ಟು ಆಶಾದಾಯಕವಾಗಿದೆ."
ಕೇಂದ್ರ ಉಕ್ಕು ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರ ತೆಗೆದುಕೊಂಡ ಕೇವಲ 20 ದಿನಗಳಲ್ಲಿ ವಿಐಎಸ್ಎಲ್ ಕಾರ್ಖಾನೆಗೆ ಆಗಮಿಸಿ,
ಶತಮಾನಗಳ ಇತಿಹಾಸವಿರುವ ನಮ್ಮ ಉಕ್ಕಿನನಗರಿ ಭದ್ರಾವತಿಯ ವಿಐಎಸ್ಎಲ್ಗೆ ಅಗತ್ಯ ಬಂಡವಾಳ ಹೂಡಿಕೆ ಹಾಗೂ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ಆವರಣದ ಕಚೇರಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿದರು.
@hd_kumaraswamy@SteelMinIndia