ಅಂದು ರಾಮನ ಮುಂದೆ ಬದುಕೇ ತಕ್ಕಡಿಯಾಗಿ ತೂಗಿತ್ತು, ರಾಜ್ಯವೋ? ಸತ್ಯವೋ?
ಯಾವುದಾದರೊಂದನ್ನು ಆರಿಸಿಕೊಳ್ಳಬೇಕಿತ್ತು - ರಾಜ್ಯವನ್ನು ಆರಿಸಿಕೊಳ್ಳುವುದಾದರೆ ಸತ್ಯವನ್ನು ಬಿಡಬೇಕಿತ್ತು; ಸತ್ಯವನ್ನೇ ಆರಿಸಿಕೊಂಡರೆ ರಾಜ್ಯವನ್ನು ಮರೆತುಬಿಡಬೇಕಿತ್ತು!
- ಶ್ರೀ @SriSamsthana ರ #ಲೋಕಲೇಖ ಬ್ಲಾಗ್
#AYODHYAVERDICT
https://t.co/G18W2Vg7kX
#SaveDesiCows is not just a movement for people of Bharat; but an emotion, as GouMatha is not considered just an animal; she has been given a higher place of mother!
Donating to #DesiCows sheltered at @gouswarga is seamless now with e-Hundi, which is open to public from today!
‘ಅಧ್ಯಾಪನಕ್ಕೆ ಅವಕಾಶವಾಗದಿರುವುದಾದರೆ ಕುಲಪತಿ-ಪದವಿಯನ್ನೇ ತ್ಯಜಿಸುವೆ.’ - ಕಾ.ಇ. ದೇವನಾಥನ್, ಕುಲಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ.
ಹೀಗೆನ್ನುವವರು ಇಂದಿನ ಜಗತ್ತಿನಲ್ಲಿ ಎಷ್ಟು ಮಂದಿ ಸಿಗಬಹುದು? ಈ ಬಾರಿಯ ರಾಘವೇಂದ್ರ ಭಾರತೀ ಪಾಂಡಿತ್ಯಪುರಸ್ಕಾರವು ಅರ್ಹರಿಗೇ ಸಂದಿದೆ!
ಪ್ರಿಯ ಓದುಗರೇ,
ಶ್ರೀ ಶಂಕರ ಪರಂಪರೆಯ 34ನೆಯ ಪೀಠಾಧಿಪತಿಗಳಾದ ಶ್ರೀಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವವು ಇಂದು ನೆರವೇರಲಿದೆ. ಶ್ರೀ ಸತ್ಯನಾರಾಯಣ ಶರ್ಮರ ವಿದ್ವತ್ಪೂರ್ಣ ಲೇಖನ, ಶ್ರೀ ಸಂಸ್ಥಾನದವರ ಲೋಕಲೇಖವು ಈ ಬಾರಿಯ ಸಂಚಿಕೆಯ ಮೆರುಗು ಹೆಚ್ಚಿಸುತ್ತದೆ.
ಓದಿ ಹಾಗೂ ಸದಭಿಪ್ರಾಯ ತಿಳಿಸಿ.
#ಧರ್ಮಭಾರತೀ_ಮಾರ್ಚ್_2020
ಪ್ರಿಯ ಓದುಗರೇ,
ವಿಷ್ಣುಸಹಸ್ರನಾಮದ ಮಹತ್ವವನ್ನು ಸಾರುವ #ಧರ್ಮಭಾರತೀ_ಫೆಬ್ರವರಿ_2020 ತಿಂಗಳ ಸಂಚಿಕೆ ಸದ್ಯದಲ್ಲೇ ನಿಮ್ಮ ಕೈ ಸೇರಲಿದೆ. ಡಾ| ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ವಿದ್ವತ್ಪೂರ್ಣ ಲೇಖನ ಈ ಸಂಚಿಕೆಯ ಮಹತ್ವ ಹೆಚ್ಚಿಸುತ್ತದೆ. "ಕೃಷ್ಣಾರ್ಪಣಮ್" ಎಂಬ ವಿಶೇಷ ಕಾರ್ಯಕ್ರಮದ ವಿವರಣೆ ಇದರಲ್ಲಿದೆ. ಓದಿ ಹಾಗೂ ಸದಭಿಪ್ರಾಯಗಳನ್ನು ತಿಳಿಸಿ
ಶ್ರೀರಾಮಚಂದ್ರಾಪುರಮಠದ ಹೆಮ್ಮೆಯ ಅಂಗಸಂಸ್ಥೆಯಾದ #ಮಾಣಿ_ಮಠ ವು ಸಂಸ್ಥಾಪನೆಗೊಂಡು ಒಂದು ಮಂಡಲವು(೪೮ ವರ್ಷಗಳು) ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ- ಪುಟ್ಟ ಆದರೆ ಮನೋಹರವಾದ #ಗೋಸ್ವರ್ಗ ವೊಂದನ್ನು ಅಲ್ಲಿ ನಿರ್ಮಿಸುವ ಚಿಂತನೆಯು ನಿನ್ನೆ ಮೊಳಕೆಯೊಡೆಯಿತು..
@ShankaraPeetha@gouswarga
ನೀವು ಹಿಂದೆ ಎಂದಾದರೂ ಶ್ರೀರಾಮಚಂದ್ರಾಪುರಮಠದ ಸೇವೆಯನ್ನು ಮಾಡಿದ್ದರೆ, ಅಥವಾ ಪ್ರಕೃತ ಮಾಡುತ್ತಿದ್ದರೆ, ಅಥವಾ ಮುಂದೆ ಮಾಡುವ ಮನವುಳ್ಳವರಾಗಿದ್ದರೆ, ನಿಮಗಿದೋ @SriSamsthana ದ ಪ್ರೀತಿಯ ಕರೆ; ಬನ್ನಿ ಐತಿಹಾಸಿಕ #ಸರ್ವಸೇವಕ_ಸಮಾವೇಶ ಕೆ!
@ShankaraPeetha
ಶ್ರೀಮಠಕ್ಕೆ ಬಂದೊದಗಿದ ಮಹದಾಪತ್ತುಗಳ ಪರಿಹಾರಕ್ಕಾಗಿ ಬೆಂಗಳೂರಿನ ಶ್ರೀಬನಶಂಕರಿದೇವಿಯ ಸನ್ನಿಧಿಯಲ್ಲಿ ಸಾವಿರಾರು ಮಾತೆಯರು 2014ರ ಡಿಸೆಂಬರಿನಿಂದ ಆರಂಭಿಸಿ ಇಂದಿನವರೆಗೆ ಒಂದು ದಿನ ತಪ್ಪದೆ ದೀಪ ಹಚ್ಚಿದ್ದಾರೆ!
ಇದೋ ದೀಪಸರಣಿಯ ಅಂಕಿ-ಅಂಶಗಳು:
ದೀಪ ಹಚ್ಚಿದ ದಿನಗಳು - 1890
ಒಟ್ಟು ದೀಪಗಳು - 50,370
ಭಾಗವಹಿಸಿದ ಮಾತೆಯರು -2700
ಒರಿಸ್ಸಾದಲ್ಲಿ- ನಕ್ಸಲರ ಸಾಮ್ರಾಜ್ಯದ ನಡುವೆ ನಿಸ್ವಾರ್ಥವಾದ, ಜನಪರವಾದ, ಅನ್ಯಾದೃಶವಾದ ವಿಶ್ವವಿದ್ಯಾಲಯವೊಂದನ್ನು(Centurion University) ಸ್ವಪ್ರಯತ್ನದಿಂದ ಸಂಸ್ಥಾಪಿಸಿ, ಸಮರ್ಥವಾಗಿ ಮುನ್ನಡೆಸುತ್ತಿರುವ ಪ್ರೊ. ಮುಕ್ತಿಕಾಂತ ಮಿಶ್ರರ ಶುಭಾಗಮನ, ಅವರೊಂದಿಗೆ @VVV_University ಯ ಕುರಿತು ಸಂವಾದದೊಂದಿಗೆ ಇಂದಿನ ಸೂರ್ಯೋದಯ..
ತನ್ನ ತಾಯಿಯ ಅತಿವೃದ್ಧಾವಸ್ಥೆಯಲ್ಲಿ ಜನಿಸಿದ ಕರುವಿದು; ಬಳಿಕ ತಾಯಿ ಬಾಳಿದ್ದು ಎರಡೇ ದಿನ!
ಈಗ ಎರಡು ಮಮತಾಮಯಿ ಗೋವುಗಳು ಈ ತಬ್ಬಲಿಗೆ ಹಾಲೂಡುತ್ತವೆ; ಕೊರತೆ ಬೀಳುವ ಹಾಲನ್ನು @gouswarga ವು ನೀಡುತ್ತದೆ.
ಇದೆಲ್ಲದರ ನಡುವೆ ಈ ಪುಟ್ಟ ಕರು ನಮ್ಮೆಡೆಗೆ ಹರಿಸಿದ ಪ್ರೀತಿಗೆ ಮಾರುಹೋದೆವು! ಅದರೊಡನೆ ಇರುವಷ್ಟು ಕಾಲ ಜಗ ಮರೆತುಹೋಯಿತು!
ರಾಮಬಂಧುಗಳೇ, ಗುರುಬಂಧುಗಳೇ,
ಬೆಂಗಳೂರಿನ ನಮ್ಮ ಮಠದಲ್ಲಿ ಆರು ತಿಂಗಳ ಕಾಲ ನೆರವೇರಿದ #ಧಾರಾ_ರಾಮಾಯಣ ದಲ್ಲಿ ನೀವು 'ಯಾವುದೇ ಬಗೆಯಲ್ಲಿ' ಭಾಗಿಯಾಗಿದ್ದರೂ- ನಾಡಿದ್ದು ೧೯ರಂದು ನಡೆಯಲಿರುವ #ಕಾರಣ_ಸ್ಮರಣ ಕಾರ್ಯಕ್ರಮದಲ್ಲಿ ಪ್ರದತ್ತವಾಗಲಿರುವ ವಿಶಿಷ್ಟ ಆಶೀರ್ವಾದವನ್ನು ಪಡೆಯಲು ವ್ಯಾಸಪೀಠವು ನಿಮ್ಮನ್ನು ಪರಮ ಪ್ರೇಮದಿಂದ ಆಮಂತ್ರಿಸುತ್ತದೆ..
ಇನ್ನೂ ಹೊತ್ತು ಮೂಡದ ಹೊತ್ತು;
ತಂಪುತಂಪಾದ ವಾತಾವರಣ;
ಇಬ್ಬನಿಯ ಅಮೃತವೃಷ್ಟಿ;
ಎಲ್ಲೆಡೆ ಮುಸುಕಿದ ಮಂಜು;
ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯದೊಳಗೆ
ನಿರ್ಮಲ ಸರೋವರದ ತೀರದಲ್ಲಿ
ಆಗಸದಿ ತೇಲುವ ವೇದಿಕೆಯಲ್ಲಿ
ಅಂಬಾಧ್ವನಿಯ ಮೇಲನದಲ್ಲಿ
ಸಂತೂರಿನ ಮಧುರಮಧುರ ನಿನಾದ!
ಸ್ವರ್ಗವಿನ್ನು ಬೇರೆ ಎಲ್ಲಿದೆ?
#ಗೋದಿನ#Sankranthi2020@gouswarga