ಕರ್ನಾಟಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಮೂರನೇ ಭಾಷೆಯಾಗಿ ಜಾರಿಗೊಳಿಸಬೇಕು ಎಂದು ಎನ್ಸಿಇಆರ್ಟಿ ಸೂಚನೆ ಹೊರಡಿಸಿದೆ. ದೇಶದಲ್ಲಿ ತುಘಲಕ್ ದರ್ಬಾರು ನಡೆಯುತ್ತಿದೆಯೇ? ದೇಶವನ್ನು ಒಡೆಯುವ ಸಂಚೇನಾದರೂ ನಡೆಯುತ್ತಿದೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಕೇಂದ್ರೀಯ ಸಂಸ್ಥೆಗಳ ಈ ಹುಚ್ಚಾಟಗಳಿಂದಾಗಿ ದೇಶ ದುರ್ಬಲವಾಗುತ್ತಿದೆ.
ಎನ್ಸಿಇಆರ್ಟಿ ಹೊರಡಿಸಿರುವ ಸೂಚನೆ ರಾಜ್ಯದ ಭಾಷಾ ಕಾನೂನು, ಸಂವಿಧಾನದ ಒಕ್ಕೂಟ ವ್ಯವಸ್ಥೆ ಹಾಗೂ ಕರ್ನಾಟಕದ ಸ್ವಾಭಿಮಾನದ ಮೇಲಿನ ನೇರ ದಾಳಿಯಾಗಿದೆ. ಈ ಆದೇಶವನ್ನು ಕರ್ನಾಟಕ ರಕ್ಷಣಾ ವೇದಿಕೆ ಅತ್ಯಂತ ತೀವ್ರವಾಗಿ ಖಂಡಿಸುತ್ತದೆ ಮಾತ್ರವಲ್ಲ, ಈ ಆದೇಶವನ್ನು ಹೊರಡಿಸಿದ ಅಧಿಕಾರಿಗಳ ವಿರುದ್ಧ ದೇಶದ್ರೋಹದ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡು ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸುತ್ತದೆ.
ಕರ್ನಾಟಕ ಕನ್ನಡ ಭಾಷಾ ಕಲಿಕಾ ಅಧಿನಿಯಮ, 2015 ಹಾಗೂ ಅದರಡಿ ರೂಪಿಸಲಾದ ನಿಯಮಗಳ ಪ್ರಕಾರ ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸುವುದು ಕಡ್ಡಾಯವಾಗಿದೆ. ಈ ಕಾನೂನು ಸಿಬಿಎಸ್ಇ, ಐಸಿಎಸ್ಇ ಸೇರಿದಂತೆ ಎಲ್ಲ ಶಾಲೆಗಳಿಗೂ ಅನ್ವಯಿಸುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಪರಿಗಣಿಸುವ ಎನ್ಸಿಇಆರ್ಟಿ ನಿರ್ಧಾರವು ರಾಜ್ಯದ ಕಾನೂನನ್ನು ಉಲ್ಲಂಘಿಸುವ ದುಸ್ಸಾಹಸವಾಗಿದೆ. ಕರ್ನಾಟಕವನ್ನು ನಾವು ಎನ್ಸಿಇಆರ್ಟಿಗೆ ಬರೆದುಕೊಟ್ಟಿಲ್ಲ. ನಮ್ಮ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರವೂ ಆ ಸಂಸ್ಥೆಗೆ ಇಲ್ಲ.
ಕರ್ನಾಟಕದ ಕಾನೂನು ಸ್ಪಷ್ಟವಾಗಿದ್ದರೂ ಅದನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಆದೇಶ ಹೊರಡಿಸಿರುವುದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಇದು ನೇರವಾಗಿ ದೇಶ ಒಡೆಯುವ ಸಂಚು ಎಂದೇ ನಾವು ಭಾವಿಸಬೇಕಾಗುತ್ತದೆ.
ಕರ್ನಾಟಕದ ಭಾಷಾ ಕಾನೂನನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ. ಕನ್ನಡವನ್ನು ಮೂರನೇ ಭಾಷೆಗೆ ಇಳಿಸುವ ಯಾವುದೇ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಕರ್ನಾಟಕದ ಕಾನೂನು ಹಾಗೂ ರಾಜ್ಯದ ಭಾಷಾ ಹಕ್ಕುಗಳಿಗೆ ಗೌರವ ನೀಡಬೇಕು.
ರಾಜ್ಯ ಸರ್ಕಾರ ಕೂಡಲೇ ಈ ವಿಷಯದಲ್ಲಿ ಅಧಿಕೃತ ನಿಲುವು ಪ್ರಕಟಿಸಿ, ಎನ್ಸಿಇಆರ್ಟಿ ಆದೇಶವನ್ನು ತಿರಸ್ಕರಿಸಿ ಕನ್ನಡದ ಹಕ್ಕನ್ನು ರಕ್ಷಿಸಬೇಕು. ಕನ್ನಡದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನವೇ ಅಂತಿಮ. ರಾಜ್ಯದ ಕಾನೂನಿಗಿಂತ ಮೇಲಾಗಿ ಯಾವುದೇ ಸಂಸ್ಥೆ ಅಥವಾ ಅಧಿಕಾರ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು.
ಎನ್ಸಿಇಆರ್ಟಿ ತನ್ನ ಕನ್ನಡ ವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯದಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಿದೆ. ಒಂದು ವೇಳೆ ಎನ್ಸಿಇಆರ್ಟಿ ಬಲವಂತವಾಗಿ ಈ ಆದೇಶವನ್ನು ಜಾರಿಗೊಳಿಸಲು ಯತ್ನಿಸಿದರೆ ರಾಜ್ಯದಲ್ಲಿ ರಕ್ತಕ್ರಾಂತಿಯೇ ನಡೆಯುತ್ತದೆ. ಅದನ್ನು ತಡೆಯಲು ಸಾಧ್ಯವಿಲ್ಲ.
🚶 BENGALURU'S FOOTPATHS ARE GETTING THEIR SPACE BACK
From July 1–10, the Greater Bengaluru Authority (GBA) is running a 'Safe Footpath Campaign' across 1,000 km of road network — clearing encroachments from footpaths in all five city corporations.
📊 WHY THIS MATTERS
30% of every 1,000 road accident deaths in Bengaluru are pedestrians. The Supreme Court has been clear: walking on a footpath safely is a fundamental right, not a privilege.
🚫 WHAT'S BEING CLEARED
➡Illegal parking on footpaths (vehicles will be towed)
➡Name boards, chairs, tables, and kiosks blocking pedestrian paths
➡Vendors and shops spilling onto walkways
✅ HOW IT'S BEING DONE
➡Notices will be issued before any action — not a sudden crackdown
➡Action will follow the Street Vendors' Protection Act and SC guidelines
➡Municipal officers, police, and clearance teams will coordinate
➡Damaged slabs and kerbs will be repaired alongside clearance
It follows the #1KmChallenge encouraging people to walk short distances instead of driving — Bengaluru is trying to become more walkable, one footpath at a time.
🗣️ WE NEED YOUR EYES ON THE GROUND
Let's make Bengaluru's footpaths walkable again — together.
#SafeFootpathBengaluru #PedestrianRights #GBA #WalkableBengaluru #BengaluruTraffic #Bengaluru #Citylife #CommuterLife
ಬೆಂಗಳೂರಿನ ಜಾಲಹಳ್ಳಿಯ ಬಿಇಎಲ್ ವೃತ್ತದಲ್ಲಿ ಅಕ್ರಮವಾಗಿ, ಅನಧಿಕೃತವಾಗಿ, ಅನೈತಿಕವಾಗಿ ಅಳವಡಿಸಲಾಗಿದ್ದ ಹಿಂದಿ ನಾಮಫಲಕವನ್ನು ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತೆರವುಗೊಳಿಸಿದ್ದಾರೆ. ಕರ್ನಾಟಕದ ನೆಲದಲ್ಲಿ ಹಿಂದಿ ಹೇರಿಕೆಯನ್ನು ನಾವು ಯಾವತ್ತಿಗೂ ಸಹಿಸುವುದಿಲ್ಲ. ಹಿಂದಿಯನ್ನು ಯಾವುದೋ ಒಂದು ಬಾಗಿಲಲ್ಲಿ ತಂದು ಹಾಕುವುದನ್ನು ನಾವು ಗಮನಿಸುತ್ತಲೇ ಇರುತ್ತೇವೆ. ಹಿಂದಿ ಸಾಮ್ರಾಜ್ಯಶಾಹಿಗಳ ಸಂಚನ್ನು ನಾವು ವಿಫಲಗೊಳಿಸುತ್ತಲೇ ಬರುತ್ತೇವೆ. ಕರ್ನಾಟಕದ ನೆಲದಲ್ಲಿ ಹಿಂದಿ ಹೇರಿಕೆಗೆ ಯಾವುದೇ ಅವಕಾಶವನ್ನು ನಾವು ನೀಡುವುದಿಲ್ಲ.
1954ರ ಅಕ್ಟೋಬರ್ 21ರಂದು (BEL ಸ್ಥಾಪನೆಯಾದಾಗ) ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಕೆಂಗಲ್ ಹನುಮಂತಯ್ಯ. ಅವರು ಮುತುವರ್ಜಿ ವಹಿಸಿ ಬಿಇಎಲ್ ಸಂಸ್ಥೆ ಕರ್ನಾಟಕದಲ್ಲಿ ಸ್ಥಾಪನೆಯಾಗಲು ಕಾರಣಕರ್ತರಾಗಿದ್ದರು. ಅವರು ಈ ಸಂಸ್ಥೆಯನ್ನು ಬರಮಾಡಿಕೊಂಡಿದ್ದು ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಾಡಲಿ ಎಂದಲ್ಲ. ರಕ್ಷಣಾ ಸಂಸ್ಥೆಗಳ ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸುವ ಈ ಸಂಸ್ಥೆಯನ್ನು ಹುಟ್ಟುಹಾಕುವ ಜೊತೆಗೆ, ಪೋಷಿಸಿ ಬೆಳೆಸಿಕೊಂಡು ಬಂದವರು ಕನ್ನಡಿಗರು. ಆದರೆ ಇದೇ ಸಂಸ್ಥೆಯ ಮೂಲಕ ಜಾಲಹಳ್ಳಿಯ ಬಿಇಎಲ್ ವೃತ್ತದಲ್ಲಿ ಅನಧಿಕೃತವಾಗಿ ಹಿಂದಿ ಫಲಕವನ್ನು ಹಾಕಿಸುವ ಉದ್ದೇಶವಾದರೂ ಏನು? ಅದೂ ಕೂಡ ಸಂಸ್ಥೆಯ ಒಳಗಿನ ಭಾಗದಲ್ಲಿ ಅಲ್ಲ, ಸಾರ್ವಜನಿಕ ರಸ್ತೆಯಲ್ಲಿ ಹಿಂದಿಯನ್ನು ಮೆರೆಸಲು ಏನು ಕಾರಣ?
ಕರ್ನಾಟಕದಲ್ಲಿ ಬಿಇಎಲ್ ಮಾತ್ರವಲ್ಲದೆ, ಬಿಇಎಂಎಲ್, ಎಚ್ ಎ ಎಲ್, ಐಟಿಐನಂಥ ಪ್ರತಿಷ್ಠಿತ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು ಕನ್ನಡಿಗರು. ಬೆಂಗಳೂರನ್ನು ಕೈಗಾರಿಕಾ ರಾಜಧಾನಿಯನ್ನಾಗಿ ಮಾಡಿದ್ದು ಈ ಸಂಸ್ಥೆಗಳು. ಇಷ್ಟೇ ಅಲ್ಲದೆ ಸಿಎಸ್ ಐಆರ್, ಎಚ್ ಎಂಟಿ ನಂಥ ಸಂಸ್ಥೆಗಳೂ ಇಲ್ಲಿವೆ. ಈ ಸಂಸ್ಥೆಗಳನ್ನು ನಾವು ಹಿಂದಿಯನ್ನರಿಗೆ ಬರೆದುಕೊಟ್ಟಿಲ್ಲ. ಈ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆ ಮಾಡುವುದು ದೊಡ್ಡ ಕುತಂತ್ರದ ಭಾಗ. ನಾವು ಇದನ್ನು ಸಹಿಸಿಕೊಳ್ಳುವುದಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆ ಇಂದು ಬಿಇಎಲ್ ವೃತ್ತದಲ್ಲಿ ಅಳವಡಿಸಲಾಗಿದ್ದ ಹಿಂದಿ ನಾಮಫಲಕವನ್ನು ಕಿತ್ತು ಹಾಕಿದೆ. ನಾಮಫಲಕ ಅಳವಡಿಸುವ ಮೂಲಕ ಕನ್ನಡಿಗರನ್ನು ಕೆರಳಿಸುವ ಮಾಡಿರುವ ಬಿಇಎಲ್ ಆಡಳಿತ ಮಂಡಳಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ವಜಾ ಮಾಡಬೇಕು. ಬಿಇಎಲ್ ಆಡಳಿತ ಮಂಡಳಿ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ.
ಭವಿಷ್ಯದಲ್ಲಿ ಇಂಥ ಅಧಿಕಪ್ರಸಂಗಿತನವನ್ನು ಯಾರೇ ಮಾಡಿದರೂ ಕರ್ನಾಟಕ ರಕ್ಷಣಾ ವೇದಿಕೆ ಅತ್ಯುಗ್ರವಾಗಿ ಪ್ರತಿಭಟಿಸುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸುತ್ತದೆ.
(ಟಿ.ಎ.ನಾರಾಯಣಗೌಡ)
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ಚೋಳರಿಗಿಂತ 500 ವರ್ಷಗಳ ಮುಂಚೆ, ಕನ್ನಡಿಗ ಇಮ್ಮಡಿ ಪುಲಿಕೇಶಿ ನೂರು ಹಡಗುಗಳೊಂದಿಗೆ ಈಗಿನ ಮಹಾರಾಷ್ಟ್ರದಲ್ಲಿ ನೌಕಾ ಯುದ್ಧ ಮಾಡಿದ ಸಾಕ್ಷಿ ಪತ್ತೆಯಾಗಿದೆ. ಭಾರತೀಯ ನೌಕಾದಳದ ಪಿತಾಮಹ ಚಾಲುಕ್ಯ ಚಕ್ರೇಶ್ವರ, ಕನ್ನಡ ಕುಲತಿಲಕ ಇಮ್ಮಡಿ ಪುಲಿಕೇಶಿ 💛❤️