Don't buy LG products! One of the worst service in Arkalgud 573102,Holenarasipura573211,Channarayapatna573116,these locations.The washing machine broke down just three months after I bought it, and now they are asking for ₹8,000 to repair it!
@LGE_Global@lg_india@LGCommercial
ಅಂತಿಮ ವರ್ಷದ ಸಾಮಾನ್ಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್ 2023-24 ನೇ ಸಾಲಿನಲ್ಲಿ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡುವಂತಿರಲಿಲ್ಲ.ಇವಾಗ ಅದನ್ನು ಮರುಪಾವತಿ ಮಾಡಬೇಕಾ? @CMofKarnataka@drmcsudhakar@DCTE_Karnataka@SWDGoK
@SWDGoK@CMofKarnataka@DKShivakumar@CMahadevappa ನೀವು ಹೇಳಿರುವ ಹಾಗೆ ಪಾರದರ್ಶಕವಾಗಿ ಇದೆ ಆದರೆ ಅದರ ಗುಣಮಟ್ಟವನ್ನು ನಾವು ಫೋಟೋ ನೋಡಿ ಹೇಳಲು ಅಸಾಧ್ಯ. ಅದರ ರುಚಿ ನೋಡಿದಾಗಲೇ ಗೊತ್ತಾಗುತ್ತೆ.ಇದರ ಬಗ್ಗೆ ಸ್ವಲ್ಪ ಗಮನ ಹರಿಸಿ ಸರ್.🙏
@SWDGoK@CMofKarnataka@DKShivakumar@CMahadevappa ಹಿಂದುಳಿದ ವರ್ಗಗಳ ಇಲಾಖಾ ಹಾಸ್ಟೆಲ್ಗಳಲ್ಲಿ ಪ್ರತಿ ವರ್ಷ ಊಟದ ಮೆನು ಚಾರ್ಟ್ ಪರಿಷ್ಕರಣೆಯಾಗುತ್ತದೆ,ಮತ್ತು ಉತ್ತಮ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ 3 ವರ್ಷವಾದರೂ ಮೆನು ಚಾರ್ಟ್ ಬದಲಾಗಿಲ್ಲ ,ಇಲ್ಲಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ .
ನಮಸ್ಕಾರ,
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ, ಆಹಾರ ಪಾರದರ್ಶಕತೆ ಮತ್ತು ಜಿಲ್ಲಾವಾರು ಶ್ರೇಯಾಂಕವು ಈ ನಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದೆ: https://t.co/h37zXHEvjV. ಯಾವುದೇ ಸಮಯದಲ್ಲಿ ಅಥವಾ ಯಾವುದೇ ಜಿಲ್ಲೆಯ ವಸತಿ ನಿಲಯಗಳ ಆಹಾರ ಪಾರದರ್ಶಕತೆಯನ್ನು ತಾವು ಪರಿಶೀಲಿಸಬಹುದು.
ವಂದನೆಗಳು,
#SocialWelfare_Karnataka
ಹಿಂದುಳಿದ ವರ್ಗಗಳ ಇಲಾಖಾ ಹಾಸ್ಟೆಲ್ಗಳಲ್ಲಿ ಪ್ರತಿ ವರ್ಷ ಊಟದ ಮೆನು ಚಾರ್ಟ್ ಪರಿಷ್ಕರಣೆಯಾಗುತ್ತದೆ,ಮತ್ತು ಉತ್ತಮ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ 3 ವರ್ಷವಾದರೂ ಮೆನು ಚಾರ್ಟ್ ಬದಲಾಗಿಲ್ಲ ,ಇಲ್ಲಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ . @CMofKarnataka@HCMahadevappa#Congress
#SSP ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನಾಂಕವಾಗಿತ್ತು ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಹಲವು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕವನ್ನು ವಿಸ್ತರಿಸಬೇಕಾಗಿ ತಮ್ಮಲ್ಲಿ ವಿನಂತಿ.@drmcsudhakar@siddaramaiah#students
@KSRTC_Journeys@RLR_BTM ಹಲವು ಮಾರ್ಗಗಳಲ್ಲಿ ಕಾಲೇಜಿಗೆ ಹೋಗುವ ಸಮಯಕ್ಕೆ ಅಶ್ವಮೇಧ ಮಾದರಿಯ ಬಸ್ಸುಗಳು ಬರುತ್ತವೆ ಅದರಲ್ಲಿ ವಿದ್ಯಾರ್ಥಿನಿಯರು ಮಾತ್ರ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗುತ್ತಾರೆ, ವಿದ್ಯಾರ್ಥಿ ಗಳಿಗೆ ಅನ್ಯಾಯವಾಗುತ್ತಿದೆ .ಮಹಿಳೆಯರಿಗೆ ಉಚಿತ ಇದೆ ಎಂದಮೇಲೆ ಪಾಸುಗಳಿಗೂ ಅನುಮತಿ ನೀಡಿ.. @KSRTC_Journeys@siddaramaiah@DKShivakumar@RLR_BTM
ಅಶ್ವಮೇಧ ಬಸ್ಸಿನಲ್ಲಿ ವಿದ್ಯಾರ್ಥಿ ಪಾಸುಗಳಿಗೆ ಅನುಮತಿ ಇಲ್ಲವೇ....?
ನಿರ್ವಾಹಕರು ಅಶ್ವಮೇಧ ಬಸ್ಸಿನಲ್ಲಿ ವಿದ್ಯಾರ್ಥಿ ಪಾಸುಗಳನ್ನು ಅನುಮತಿಸುತ್ತಿಲ್ಲ ,ಮಹಿಳೆಯರಿಗೆ ಉಚಿತ ಪ್ರಯಾಣವಿದೆ ಆದರೆ ಹಣ ಕೊಟ್ಟು ಪಾಸುಗಳನ್ನು ಪಡೆದುಕೊಂಡ ನಾವು ಪ್ರಯಾಣಿಸಲು ಅನುಮತಿ ಇಲ್ಲವೇ ಇದು ಯಾವ ನ್ಯಾಯ?@KSRTC_Journeys@RLR_BTMಅನುಮತಿ ಇದ್ದರೆ ತಿಳಿಸಿ
ಪ್ರತಿ ಬೇಸಿಗೆ ರಜೆ ಮತ್ತು ಇತರ ರಜಾದಿನಗಳಲ್ಲಿ ಈ ತರಹದ ಸಾವುಗಳು ಸಾಮಾನ್ಯವಾಗಿವೆ ನಾನು ಸಾಕಷ್ಟು ವರ್ಷಗಳಿಂದ ಗಮನಿಸುತ್ತಿದ್ದೇನೆ. ಆಗಾಗಿ ಸರ್ಕಾರಗಳು ಯಾಕೆ ಶಾಲಾ ಹಂತದಲ್ಲೇ ಈಜನ್ನು ಶೈಕ್ಷಣಿಕ ಪಠ್ಯವಾಗಿ ಸೇರಿಸಬಾರದು. ಈ ಒಂದು ಕಲಿಕೆ ಅದೆಷ್ಟೋ ಮಂದಿಯ ಪ್ರಾಣ ಉಳಿಸಿ, ಮಕ್ಕಳಿಗೂ ಆತ್ಮಸ್ಥೈರ್ಯ ತುಂಬುವ ಕೆಲಸವಾಗುತ್ತದೆ.
@OPratham ಯಾವುದೇ ಮಕ್ಕಳು ಆಗಲಿ ತಂದೆ ತಾಯಿಗೆ ಹೆಮ್ಮೆ ಪಡುವ ಹಾಗೆ ಮಾಡಿಲ್ಲ ಅಂದರೂ ಪರವಾಗಿಲ್ಲ, ಆದರೆ ಅವರು ತಲೆ ತಗ್ಗಿಸುವಂತಹ ಕೆಲಸ ಮಾಡಬಾರದು.
ಸತ್ಯ ಮೇವ ಜಯತೇ......
#Revanna#PrajwalRevanna
ಅರಸೀಕೆರೆಯ ವಿದ್ಯಾರ್ಥಿನಿ ಇಂದು ನನ್ನ ಕೊರಳಿಗೆ ಹಾಕಿದ ಉಚಿತ ಬಸ್ ಟಿಕೆಟ್ ಗಳ ಮಾಲೆ ಆಕೆ ವ್ಯಕ್ತಪಡಿಸಿದ ಕೃತಜ್ಞತೆಯ ಮಾಲೆಯೂ ಹೌದು, ನಮ್ಮ ಸರ್ಕಾರದ ಸಾಧನೆಯ ಮಾಲೆಯೂ ಹೌದು, ಬಹುಷ: ಇದು ಈ ಚುನಾವಣೆಯ ವಿಜಯಮಾಲೆಯೂ ಇರಬಹುದೇನೋ?
ಅರಸೀಕೆರೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನನ್ನ ಕಡೆ ಏದುಸಿರುಬಿಡುತ್ತಾ ಓಡೋಡಿ ಬಂದ ಕಾನೂನು ವಿದ್ಯಾರ್ಥಿನಿ ಜಯಶ್ರೀ ತಾನು ಉಚಿತವಾಗಿ ಪ್ರಯಾಣಿಸಿದ್ದ ಬಸ್ ಟಿಕೆಟ್ ಗಳಲ್ಲಿಯೇ ಮಾಡಿಟ್ಟಿದ್ದ ಮಾಲೆಯನ್ನು ತಂದು ಹಾಕಿ ಕೃತಜ್ಞತೆ ಹೇಳಿದಳು.
‘’ನೀವು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ನಾನು ಕಾನೂನು ವ್ಯಾಸಂಗವನ್ನು ಸುಗಮವಾಗಿ ನಡೆಸುವಂತಾಗಿದೆ. ಎಂದಾದರೂ ನೀವು ಸಿಕ್ಕರೆ ಮಾಲೆ ಮಾಡಿ ಹಾಕಬೇಕೆಂದು ಉಚಿತ ಟಿಕೆಟ್ ಗಳನ್ನು ಸಂಗ್ರಹಿಸಿಟ್ಟಿದೆ. ನೀವು ಇಲ್ಲಿ ಬರುವುದು ಗೊತ್ತಾಗಿ ಅವುಗಳನ್ನು ಮಾಲೆ ಕಟ್ಟಿ ತಂದೆ’’ ಎಂದು ಹೇಳಿದ ಅವಳ ಮಾತುಗಳಲ್ಲಿ ಕೃತಜ್ಞತೆಯೂ ಇತ್ತು, ಸರ್ಕಾರದ ಬಗ್ಗೆ ಹೆಮ್ಮೆಯೂ ಇತ್ತು.
‘ಕಾನೂನು ವ್ಯಾಸಂಗ ಮುಗಿಸಿ ಒಳ್ಳೆಯ ವಕೀಲಳಾಗಿ ಸಮಾಜದ ಸೇವೆ ಮಾಡು, ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಆರೋಪಮಾಡುವ ದಾರಿ ತಪ್ಪಿದ ಜನರಿಗೆ ಸರಿಯಾದ ದಾರಿ ತೋರಿಸುವವಳಾಗು' ಎಂದು ಹಾರೈಸಿದೆ.