Top Tweets for #blde
ನಮ್ಮ ಪೂಜ್ಯ ತಂದೆಯವರಾದ ಬಿ.ಎಂ. ಪಾಟೀಲರ ಪುಣ್ಯಸ್ಮರಣೆಯ ನಿಮಿತ್ತ #BLDE ಡೀಮ್ಡ್ ವಿವಿ ಆವರಣದಲ್ಲಿರುವ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಹೋದರ MLC ಶ್ರೀ ಸುನೀಲಗೌಡ ಪಾಟೀಲ ಮತ್ತು ಕುಟುಂಬದ ಸದಸ್ಯರೊಂದಿಗೆ ಪಾಲ್ಗೊಂಡು ಗೌರವದ ನಮನಗಳನ್ನು ಸಲ್ಲಿಸಿದೆ.
ನಮ್ಮ ತಂದೆಯವರ ಆದರ್ಶಗಳು, ಸೇವಾ ಮನೋಭಾವ ಮತ್ತು ಶಿಕ್ಷಣದ ಮೂಲಕ ಸಮಾಜ ಕಟ್ಟುವ ಸಂಕಲ್ಪವು ಸದಾ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ.
#bmpatil

Options Outlook Based on Machine Learning: Returns up to 204.37% in 1 Year
https://t.co/myI8BaChEZ
#rklb #srrk #ionq #iren #leu #joby #blde #crnt #aaoi #hims #stocks #stockmarket #stocktrading #investing

ಬಸವನಾಡಿನಲ್ಲಿ ಹರಿಯಲಿದೆ ಸಮೃದ್ಧ ಹಾಲಿನ ಹೊಳೆ!
ನೀರಾವರಿಯ ಸದುಪಯೋಗ, ಜಿಲ್ಲೆಯಲ್ಲಿ ಸುಸ್ಥಿರ ಹೈನುಗಾರಿಕೆಯಿಂದ ರೈತರ, ಮಹಿಳೆಯರ, ಯುವಜನರ ಆರ್ಥಿಕ ಸಬಲತೆಗೆ ಶಕ್ತಿ.
#BLDE ಸಂಸ್ಥ ವತಿಯಿಂದ #ಅಕ್ಷಯಕಲ್ಪ ಹಾಗೂ #ಕೃಷಿಕಲ್ಪ ಸಂಸ್ಥೆಗಳ ಸಯಯೋಗದಲ್ಲಿ ಹೈನು ಉದ್ಯಮ ಆಸಕ್ತರಿಗೆ ತರಬೇತಿ, ಉದ್ಯಮಶೀಲತೆ ಬೆಳವಣಿಗೆಗೆ ಕ್ರಮ
ಇದು ಹಾಲು ಸಂಗ್ರಹ ಯೋಜನೆಯಲ್ಲ-ರೈತರನ್ನು ಉದ್ಯಮಿಗಳನ್ನಾಗಿ ರೂಪಿಸುವ ಸಮಗ್ರ ಚಳವಳಿ!
#ಕ್ಷೀರಕ್ರಾಂತಿ
ಬಡತನದ ಬೇಗೆಯಲ್ಲೂ ನನಸಾದ ಕನಸು!
ಬಾಬಾನಗರದ ಕೃಷಿಕನ ಮಗಳು ಪ್ರತೀಕ್ಷಾ ಶಿಂಧೆ, ಬಡತನವನ್ನು ಮೀರಿ MBBS ಸೀಟು ಗಿಟ್ಟಿಸಿಕೊಂಡು ವೈದ್ಯೆಯಾಗುವ ಪಥದಲ್ಲಿ ಹೆಜ್ಜೆ ಇಟ್ಟಿದ್ದಾಳೆ.
ಆಕೆಯ ಓದಿಗೆ ನೆರವಾಗಿದೆ #BLDE ಸಂಸ್ಥೆ
ಆಲ್ ದ ಬೆಸ್ಟ್ ಪ್ರತೀಕ್ಷಾ!
ಶೈಕ್ಷಣಿಕ ಕ್ರಾಂತಿಯ ಹೊಸ ಅಧ್ಯಾಯಕ್ಕೆ BLDE ಸಜ್ಜು!
ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳು | ಬೆಂಗಳೂರಿನಲ್ಲೂ ಹೊಸ ಶಾಖೆಗಳ ಆರಂಭ
ಅವಿಭಜಿತ ವಿಜಯಪುರ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿ ಸೃಷ್ಟಿಸಿರುವ #BLDE ಸಂಸ್ಥೆ, ಈಗ ತನ್ನ ಸೇವಾ ವಿಸ್ತಾರವನ್ನು ರಾಜಧಾನಿ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳತ್ತ ವಿಸ್ತರಿಸಲು ಸಜ್ಜಾಗಿದೆ ಎಂಬ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರಗಳಲ್ಲಿ ನರ್ಸಿಂಗ್, ಫಾರ್ಮಸಿ, ಎಂಜಿನಿಯರಿಂಗ್ ಇತ್ಯಾದಿ ಹೊಸ ಆರೋಗ್ಯ ವಿಜ್ಞಾನ ಕಾಲೇಜ್ ಪ್ರಾರಂಭಿಸಲು ಯೋಜನೆ ರೂಪಿಸಿದೆ. ಬೆಳೆಯುತ್ತಿರುವ ವಿಜಯಪುರ ನಗರದಲ್ಲಿ ಮತ್ತೊಂದು ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆಯೂ ಹರ್ಷದಾಯಕವೆನಿಸಿದೆ.
ಜ್ಞಾನ ವಿಸ್ತಾರದಿಂದ ಉತ್ತಮ ಸಮಾಜ ಸ್ಥಾಪನೆಯಾಗಿ, ಸದೃಢ ದೇಶ ನಿರ್ಮಾಣಕ್ಕೆ ಸಹಕಾರಿಯಾಗಲಿದೆ.

ಬುಕ್ ಬ್ರಹ್ಮ ಸಾಹಿತ್ಯ ಉತ್ಸವ~2025 ಇಂದಿನಿಂದ 3 ದಿನಗಳ ಕಾಲ ಬೆಂಗಳೂರು ಸೆಂಟ್ ಜಾನ್ ಆಡಿಟೋರಿಯಂ ಆವರಣದಲ್ಲಿ ಆಯೋಜನೆಯಾಗಿದ್ದು, ಸಾಹಿತ್ಯ ಪ್ರೇಮಿಗಳ, ಗಮನ ಸೆಳೆಯುತ್ತಿದೆ.
ನಮ್ಮ ವಿಜಯಪುರದ #BLDE ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸ್ಟಾಲ್ ಕೂಡ ತೆರೆಯಲಾಗಿದೆ. ಡಾ. ಫ.ಗು. ಹಳಕಟ್ಟಿ ಅವರ ಲೇಖನ ಸೂಚಿ, ಡಾ. ಎಂ. ಎಂ. ಕಲಬುರ್ಗಿ ಅವರ ಸಮಗ್ರ ವಚನ ಸಾಹಿತ್ಯ, ಶಿಕ್ಷಣ ದೀಪ್ತಿ ಸೇರಿದಂತೆ ಹಲವು ಪುಸ್ತಕಗಳನ್ನು ಶೇ. 50ರಷ್ಟು ರಿಯಾಯತಿಯಲ್ಲಿ ಕೊಳ್ಳುವ ಸದವಕಾಶವನ್ನು ಕಲ್ಪಿಸಲಾಗಿದೆ.
ಸಾಹಿತ್ಯಾಸಕ್ತರು,ಪುಸ್ತಕ ಪ್ರೇಮಿಗಳು ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.
#bookbramha

ಪ್ರೊ. ಶ್ರೀ ಎಸ್. ಎಚ್. ಲಗಳಿ ಅವರು ವಿದ್ಯಾರ್ಥಿಗಳ ಮೆಚ್ಚಿನ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಹಾಗೂ ದಕ್ಷ ಆಡಳಿತಗಾರರಾಗಿ ನಮ್ಮ #BLDE ಕಾಲೇಜಿನ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. #ಜಮಖಂಡಿ ಕ್ಯಾಂಪಸ್ ಅಭಿವೃದ್ಧಿಯಲ್ಲಿ ಅವರ ಪಾತ್ರ ಅಪಾರವಾಗಿದೆ. ಸುದೀರ್ಘ 55 ವರ್ಷಗಳ ನಿಸ್ವಾರ್ಥ ಸೇವೆ ಪೂರೈಸುತ್ತಿರುವುದು ಹೆಮ್ಮೆಯ ವಿಷಯ. ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.
ಅವರ ದೀರ್ಘ ಸೇವೆ ಮತ್ತು ಸಾಧನೆಗಳು ಉಳಿದ ಎಲ್ಲರಿಗೂ ಪ್ರೇರಣೆಯಾಗಿ ಮುಂದುವರೆಯಲಿ.

ವಿಜಯಪುರ: #BLDE ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಹೈಟೆಕ್ ಆಯುರ್ವೇದ ಆಸ್ಪತ್ರೆ ಸ್ಥಾಪಿಸಲಾಗಿದೆ. ಭಾನುವಾರ ಈ ಅತ್ಯಾಧುನಿಕ ಆಸ್ಪತ್ರೆಯನ್ನು ಪರಮಪೂಜ್ಯ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮಿಗಳು ಉದ್ಘಾಟಿಸಿದರು. ಒಂದೇ ಸೂರಿನಡಿ ಆಯುರ್ವೇದ ಹಾಗೂ ಅಲೋಪತಿ ಸೇವೆಗಳನ್ನು ಪಡೆಯಬಹುದಾಗಿದೆ.
@KannadaPrabha

ಬಿಎಲ್ ಡಿಇ ಸಂಸ್ಥೆಯ ನವೀಕೃತ ಡಾ. ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರದ ಕಟ್ಟಡದ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಲಾಯಿತು.
ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಶ್ರೀ @MBPatil ಅವರು ಸೇರಿದಂತೆ ಶಾಸಕರು, ಮುಖಂಡರು ಉಪಸ್ಥಿತರಿದ್ದರು.
.
.
#Vijayapura #BLDE
@kharge

ಬಿಎಲ್ ಡಿಇ ಸಂಸ್ಥೆ ಕಟ್ಟಿಬೆಳೆಸಿದ ಮಹನೀಯರ ಸ್ಮರಣೆ
#BLDE ಸಂಸ್ಥೆಯನ್ನು ಕಟ್ಟಿಬೆಳೆಸಿದ ಡಾ. ಫ.ಗು.ಹಳಕಟ್ಟಿ, ಬಂಥನಾಳ ಸಂಗನ ಬಸವ ಶಿವಯೋಗಿಗಳು, ಡಾ. ಬಿ.ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆಯ ಅಂಗವಾಗಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದೆ.
ದಿವ್ಯ ಸಾನಿಧ್ಯ ವಹಿಸಿದ್ದ ಬೇಲಿಮಠ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮಿಗಳು BLDE ಸಂಸ್ಥೆಯನ್ನು ಆರಂಭಿಸಿ,ಯಶಸ್ವಿಯಾಗಿ ಮುನ್ನಡೆಸಿದ ಬಂಥನಾಳ ಸಂಗನಬಸವ ಶಿವಯೋಗಿಗಳು, ಫ.ಗು.ಹಳಕಟ್ಟಿ, ಬಂಗಾರಮ್ಮ ಸಜ್ಜನ .ಬಿ.ಎಂ. ಪಾಟೀಲ ಮೊದಲಾದವರ ಸೇವೆಯನ್ನು ಸ್ಮರಿಸಿದರು. ಭವಿಷ್ಯದಲ್ಲಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಆಶೀರ್ವಚನ ನೀಡಿದರು.
ಎಐಸಿಸಿ ಅಧ್ಯಕ್ಷರು, ರಾಜ್ಯಸಭೆಯಲ್ಲಿನ ಪ್ರತಿಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ @kharge ಅವರು ಸಂಸ್ಥೆಯ ಶಿಕ್ಷಣ, ವೈದ್ಯಕೀಯ, ಸಾಹಿತ್ಯ ಮತ್ತು ಜನಪರ ಕಾರ್ಯಗಳನ್ನು ಮುಕ್ತಕಂಠದಿಂದ ಪ್ರಶಂಶಿಸಿದರು.
ಕಳೆದ 2 ವರ್ಷಗಳಲ್ಲಿ 400ಕ್ಕೂ ಹೃದಯ ಶಸ್ತ್ರ ಚಿಕಿತ್ಸೆ ನೆರವೇರಿಸಿ,ಯಶಸ್ವಿಯಾಗಿರುವ ಹೆಸರಾಂತ ಹೃದಯ ತಜ್ಞರಾದ ಡಾ. ರವಿ ಘತಂಟಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಿಜಯಪುರದ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು ಆವರಣದ ಗ್ರಂಥಾಲಯ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. BLDEAವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಆರ್. ಎಸ್. ಮುಧೋಳ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಡಾ. ಅರುಣ್ ಸಿ. ಇನಾಂದಾರ್, ಡಾ. ಆರ್. ವಿ. ಕುಲಕರ್ಣಿ, ತಮಿಳುನಾಡಿನ ನಾಗಸಂದ್ರ ಜಂಗಮ ಮಠದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮಿಗಳು, ಶಾಸಕರುಗಳಾದ ಶ್ರೀ @CSNadagoudaINC ,ಶ್ರೀ @ashokmanaguli63 , ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ವಿಜಯಾಶೆಟ್ಟಿ ಕೋರಿ, ಚಿಂತಕರು, ಬಸವಭಕ್ತರು, ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

#BLDE ಸಂಸ್ಥೆಯನ್ನು ಕಟ್ಟಿಬೆಳೆಸಿದ ಡಾ. ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಅಂಗವಾಗಿ ‘ಚಿಂತನ-ಸಾಂಸ್ಕೃತಿಕ ಬಳಗ’ ಹಮ್ಮಿಕೊಂಡಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಲು ಆಗಮಿಸಿದ ಪರಮಪೂಜ್ಯ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮಿಗಳು ಹಾಗೂ ತಮಿಳುನಾಡಿನ ನಾಗಸಂದ್ರ ಜಂಗಮ ಮಠದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮಿಗಳವರಿಗೆ ಗುರುವಂದನೆ ಸಲ್ಲಿಸಿ, ಆತ್ಮೀಯವಾಗಿ ಸ್ವಾಗತಿಸಲಾಯಿತು.

It is a matter of great joy that Dr. Arun C. Inamadar, a renowned dermatologist of our state and Pro Vice - Chancellor of #BLDE Deemed University, has been awarded the international ‘Surindar Kaur Best Pediatric Dermatologist Award – 2025’.
This honour comes in recognition of his exceptional service in the field of child health and his academic contributions.
Heartfelt congratulations to Dr. Inamadar, who has brought global recognition to #Basavanadu, and best wishes for continued success in the future.
ನಾಡಿನ ಖ್ಯಾತ ಚರ್ಮರೋಗ ತಜ್ಞರು, BLDE ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿಗಳಾದ ಡಾ. ಅರುಣ ಚಂ. ಇನಾಮದಾರ ಅವರಿಗೆ 'ಸುರಿಂದರ ಕೌರ ಅತ್ಯುತ್ತಮ ಮಕ್ಕಳ ಚರ್ಮ ರೋಗ ತಜ್ಞ-2025' ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿರುವುದು ಸಂತಸ ತರಿಸಿದೆ.
ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅನನ್ಯ ಸೇವೆ ಹಾಗೂ ಶೈಕ್ಷಣಿಕ ಅಧ್ಯಯನಗಳು ಈ ಗೌರವಕ್ಕೆ ಕಾರಣವಾಗಿವೆ.
ಬಸವನಾಡಿನ ಕೀರ್ತಿಯನ್ನು ಜಗದಗಲ ಬೆಳಗಿಸಿರುವ ಡಾ.ಇನಾಮಾದಾರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಮುಂದಿನ ಸಾಧನೆಗೆ ಶುಭಾಶಯಗಳು.

ಬೆಳಗಾವಿಯ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ವತಿಯಿಂದ 2023-24ನೇ ಸಾಲಿನ ನವೆಂಬರ್ ತಿಂಗಳಲ್ಲಿ ನಡೆದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ #BLDE ಸಂಸ್ಥೆಯ ಮೂವರು ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ಮಾಡಿ ರ್ಯಾಂಕ್ ಗಳಿಸಿ, ನಮ್ಮ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ.

Blade Air Mobility Inc. (#BLDE) saw its stock climb after posting strong fourth quarter 2024 results. Revenue jumped 14.5% to $54.4 million, topping the $51.1 million expected, fueled by gains in its Medical and Passenger businesses. Excluding its exited Canada operations, revenue soared 22.1%.
The Medical segment grew 13.7% to $36.4 million with more trips and better fleet use, while Jet and Other revenue rocketed 84.7% to $8.8 million. Flight Profit rose 39.7% to $12.6 million, and the Flight Margin hit 23.2%, up from 19.0%. The net loss shrank by $24.1 million to $(9.8) million, and Adjusted EBITDA neared breakeven at $(0.4) million, a $4.9 million improvement.
CEO Rob Wiesenthal highlighted growth in urban air mobility, like the New York City airport service, while President Melissa Tomkiel noted early success in Europe and new medical contracts. For 2025, Blade forecasts revenue between $245 million and $265 million with positive Adjusted EBITDA. The stock rose 8.83% to $3.08 premarket.p
🪂
1) $LILM Lilium filed for bankruptcy a day ago.
2) Other companies to consider:
$JOBY Joby Aviation
$ACHR Archer Aviation
$EH Ehang Holding
$EVTL Vertical Aerospace
$EVEX Eve Holding
$BA Boeing
#BLDE Blade Air Mobility
Sources:
List #2 by @MarketBeatCom
and
https://t.co/lS7Kjy8imy
Lilium’s air taxi dream ends as company files for insolvency again https://t.co/IYjyUD4QtV by @IshveenaSingh
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರನ್ನು ಭೇಟಿಮಾಡಿ, #ಸಂಕ್ರಾಂತಿ ಯ ಶುಭಾಶಯಗಳನ್ನು ತಿಳಿಸಿದೆ. ಡಾ. ಎಂ.ಎಂ. ಕಲಬುರಗಿ ಅವರ ಸಮಗ್ರ ಸಾಹಿತ್ಯದ 42 ಸಂಪುಟಗಳು ರಾಜ್ಯ ಸರಕಾರದ ಅನುದಾನದಿಂದ #BLDE ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದವತಿಂದ ಪ್ರಕಟಣೆಗೊಂಡಿದ್ದು, ಈ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದೆ. ಇದೇ ಸಂದರ್ಭದಲ್ಲಿ ಇತಿಹಾಸಕಾರಾದ ಶ್ರೀ ಕೃಷ್ಣಾಕೊಲ್ಹಾರ ಕುಲಕರ್ಣಿ ಅವರ ಸಂಪಾದಕತ್ವದಲ್ಲಿ ಮೂಡಿಬಂದಿರುವ #ದಾಸಸಾಹಿತ್ಯ ಪ್ರಕಟಣೆಯ ಮಾಹಿತಿ ನೀಡಿ, ಅನುದಾನ ನೀಡುವಂತೆ ಕೋರಿದೆ. ಶ್ರೀ ಕೃಷ್ಣ ಕೊಲ್ಹಾರ ಕುಲಕರ್ಣಿ, ನಗರಾಭಿವೃದ್ಧಿ ಸಚಿವರಾದ ಶ್ರೀ @byrathi_suresh ಹಾಗೂ ಇತರರು ಜೊತೆಗಿದ್ದರು.




ನಮ್ಮ #BLDE ಸಂಸ್ಥೆಯ S.S.A ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪ್ರಿಯಾ ಶಂಕರ ಚವ್ಹಾಣ್ ‘ಕರ್ನಾಟಕ ರಾಜ್ಯ ಅಂಡರ್ 19’ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವುದು ಸಂತಸ ತರಿಸಿದೆ. ವಿಜಯಪುರದ ಕೀರ್ತಿ ಹೆಚ್ಚಿಸಿರುವ ಈ ಬಾಲಕಿಗೆ ಅಭಿನಂದನೆಗಳು.
ಜನವರಿ 4ರಿಂದ 12ರವರೆಗೆ ಗುಜರಾತಿನನಲ್ಲಿ ನಡೆಯಲಿರುವ ಅಂತಾರಾಜ್ಯ ಏಕದಿನ ಸರಣಿಯಲ್ಲಿ ಮಹಾರಾಷ್ಟ್ರ, ವಿದರ್ಭ, ಅಸ್ಸಾಂ, ಮಿಜೋರಾಂ ಹಾಗೂ ಚಂಡಿಗಡ ತಂಡಗಳ ವಿರುದ್ಧ ಆಡಲಿದ್ದಾಳೆ. 2023ರಲ್ಲಿ ಈ ಬಾಲಕಿ ಅಂಡರ್ 19 ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದ ಕಾರಣ ಈಗ ಪುನಃ ಆಯ್ಕೆಯಾಗಿರುವುದು ಮತ್ತಷ್ಟು ಹೆಮ್ಮೆಯ ಸಂಗತಿ. ಈ ಬಾರಿಯ ಸರಣಿ ಪಂದ್ಯಾವಳಿಗಳಲ್ಲೂ ಶ್ರೇಷ್ಠ ಸಾಧನೆ ಮಾಡಿ ಮುಂಬರುವ ದಿನಗಳಲ್ಲಿ ಭಾರತ ಮಹಿಳಾ ತಂಡಕ್ಕೂ ಆಯ್ಕೆಯಾಗಿ ರಾಜ್ಯಕ್ಕೂ ತರುವಂತಾಗಲಿ ಎಂದು ಹಾರೈಸುತ್ತೇನೆ.
#Under19CricketTeam

Last Seen Hashtags on Sotwe
kushakapila
Seen from Singapore
vwd
Seen from Brazil
Teenager() +filter:native_video within_time:2h
Seen from Netherlands
ometv #feet
Seen from Turkey
ENGAÑADO
Seen from Chile
VeroAffare
Seen from United States
TigglyChef
Seen from United States
xlii #teenager #nolimit() +filter:native_video
monkeyapp
Seen from Turkey
marththemoth
Seen from United States
Most Popular Users

Elon Musk 
@elonmusk
241.1M followers

Barack Obama 
@barackobama
119.1M followers

Cristiano Ronaldo 
@cristiano
112.3M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.1M followers

NASA 
@nasa
92.2M followers

Justin Bieber 
@justinbieber
91.3M followers

KATY PERRY 
@katyperry
88.6M followers

Taylor Swift 
@taylorswift13
82.5M followers

Lady Gaga 
@ladygaga
74M followers

Virat Kohli 
@imvkohli
71.4M followers

Kim Kardashian 
@kimkardashian
70.2M followers

YouTube 
@youtube
68.7M followers

Bill Gates 
@billgates
64.4M followers

Neymar Jr 
@neymarjr
64.3M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.7M followers

X 
@x
60.8M followers


























