ರೋಪ್ವೇ ನಿರ್ಮಾಣದಿಂದ ಜಗದ್ಗುರು ಶ್ರೀ ಶಂಕರಾಚಾರ್ಯರ ತಪೋಭೂಮಿ ಕೊಡಚಾದ್ರಿಗೆ ತೆರಳಲು ಈಗಿರುವ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
ಅನೇಕ ಮಂದಿಗೆ ಉದ್ಯೋಗಾವಕಾಶ, ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ
ಪ್ರಕೃತಿಗೆ ಹಾನಿಯಾಗದಂತೆ ನೂತನ ತಂತ್ರಜ್ಞಾನ ಅಳವಡಿಸಿ ರೋಪ್ವೇ ನಿರ್ಮಿಸಲು ಅಧಿಕಾರಿಗಳೊಡನೆ ಮಾತುಕತೆ ನಡೆಯುತ್ತಿದೆ. @BSYBJP
ಎನ್ ಸಿ ಇ ಆರ್ ಟಿಯವರು ಏನೂ ಮೇಲಿಂದ ಇಳಿದು ಬಂದವರಲ್ಲ.
ಎನ್ ಸಿ ಇ ಆರ್ ಟಿ ಗಿಂತ ಒಳ್ಳೆಯ ಪಟ್ಯಪುಸ್ತಕಗಳನ್ನು ಕನ್ನಡಿಗರೇ ಮಾಡಬಹುದು.
ಎನ್ ಸಿ ಇ ಆರ್ ಟಿಯ ಅನಗತ್ಯ ಬಿಲ್ಡಪ್ ಎದುರು ಕನ್ನಡಿಗರು ಹೆಚ್ಚು ಮಾತನಾಡಬೇಕು.
ಕನ್ನಡ ವಿರೋಧಿಗಳು ಆಳವಾಗಿ, ಪದರಪದರವಾಗಿ ಬೇರೂರಿದ್ದಾರೆ. ಅವರನ್ನು ಎದುರಿಸಲು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ ಎನ್ನುತ್ತಾರೆ ಚಿತ್ರಸಾಹಿತಿ, ಕನ್ನಡ ಚಿಂತಕ ಕವಿರಾಜ್.
#ನಮ್ಮನಾಡು_ನಮ್ಮಆಳ್ವಿಕೆ ಯ ವತಿಯಿಂದ 14-6-2026 ರಂದು, ಕರ್ನಾಟಕ ರಕ್ಷಣಾ ವೇದಿಯೆಯ "ಸಮಗ್ರ ಭಾಷಾ ನೀತಿ, ಸಮಗ್ರ ಭಾಷಾ ಯೋಜನೆ, ಕರ್ನಾಟಕದ ಸಾಧ್ಯತೆಗಳು-ಸವಾಲುಗಳು, ಒಂದು ದಿನದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಸಾಹಿತಿ ಶ್��ೀ ಕವಿರಾಜ್ ಅವರ ನುಡಿಗಳು.
ವೀಡಿಯೊ ಕೃಪೆ: ಕರವೇ
ನವಲಿ ಜಲಾಶಯ ಕೂಡಲೇ ಶುರುವಾಗಲಿ!
ತುಂಗಭದ್ರಾ ಅಣೆಕಟ್ಟಿನ ಸಾಮರ್ಥ್ಯ ಹೂಳಿನಿಂದ 133 TMCಯಿಂದ 102 TMCಗೆ ಇಳಿದಿದೆ. ತಜ್ಞರು, ಮುಂದೆ 80 TMC ಸಂಗ್ರಹ ಮಾತ್ರ ಸಾಧ್ಯ ಎಂದು ಎಚ್ಚರಿಸುತ್ತಿದ್ದಾರೆ.
50 TMC ನೀರನ್ನು ಸಂಗ್ರಹಿಸಿ ಈ ನಷ್ಟವನ್ನು ಸರಿದೂಗಿಸಬಲ್ಲ ಕನಕಗಿರಿಯ ನವಲಿ ಸಮತೋಲನ ಜಲಾಶಯ ಯೋಜನೆಯ DPR ನಾಲ್ಕು ವರ್ಷಗಳಿಂದ ಧೂಳು ತಿನ್ನುತ್ತಿದೆ. ಯೋಜನೆಯ ಅಂದಾಜು ವೆಚ್ಚ ₹13,000 ಕೋಟಿ.
ಇನ್ನೊಂದೆಡೆ, ��ೆಂಗಳೂರಿನ ಸುರಂಗ ರಸ್ತೆ ಯೋಜನೆಗೆ ₹22,000 ಕೋಟಿಯ ಬಿಡ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರವಾಗಲಿದೆ. ಅದಾನಿ ಕಂಪೆನಿಯ ಬಿಡ್ ಮೂಲ ಮಾನದಂಡಕ್ಕಿಂತ 96% ಹೆಚ್ಚಾಗಿದೆ!
ಲಕ್ಷಾಂತರ ರೈತರಿಗೆ ಜೀವನಾಡಿಯಾಗುವ ನೀರಿನ ಯೋಜನೆ ಮುಖ್ಯವೇ? ಅಥವಾ ಬೆಂಗಳೂರಿನ ಕಾರುಗಳಿಗಾಗಿ ಸುರಂಗ ರಸ್ತೆ ಮುಖ್ಯವೇ?
ಕರ್ನಾಟಕ ಎಂದರೆ ಬೆಂಗಳೂರು ಮಾತ್ರವಲ್ಲ. ನೀರಾವರಿಯ ಅಭಿವೃದ್ಧಿ, ಕೃಷಿಯ ಅಭಿವೃದ್ಧಿ = ಪ್ರಾದೇಶಿಕ ಸಮತೋಲನವೂ.
ಬೆಂಗಳೂರ ಆಚೆಯೂ ಯೋಚಿಸಿ. ಕರ್ನಾಟಕದ ಬೆಳವಣಿಗೆ ಬೆಂಗಳೂರ ಆಚೆಯೂ ಆಗಬೇಕು.
��ವಲಿ ಜಲಾಶಯ ಕಾರ್ಯ ಕೂಡಲೇ ಶುರುವಾಗಲಿ.
#ನಮ್ಮನಾಡು_ನಮ್ಮಆಳ್ವಿಕೆ #ThinkBeyondBengaluru #Tungabhadra #NavaliReservoir
ಒಳ್ಳೇ ಬಿರುಸು....
ಕನ್ನಡಿಗರ ಪರ ನಿಂತ ಮೇಲೆ ಈ ಆತ್ಮವಿಶ್ವಾಸ ಯಾವ ಲೀಡರಿಗಾದರೂ ಬಂದೇ ಬರುತ್ತದೆ. @Nikhil_Kumar_k
ಪ್ರತಿಯೊಂದು ಕನ್ನಡಪರ ವಿಚಾರಗಳನ್ನೂ ನಾವು ಇನ್ನು ಮುಂದೆ ನಿಕಿಲ್ ಅವರಿಗೆ ಟ್ಯಾಗ್ ಮಾಡೋಣ.
#ಕನ್ನಡ_ಕೇಂದ್ರಿತ_ರಾಜಕಾರಣ
ರಸ್ತೆ ಚರಂಡಿ nodi ಅಳೆಯಬೇಡಿ, ಇಲ್ಲಿನ ರೈತರು , ಮೈಸೂರು ಒಡೆಯರು ಸಿಟಿ ಬೆಳೆಯಲಿಕ್ಕೆ , ಟೆಕ್ hub ಆಗಲಿಕ್ಕೆ ಮಾಡಿದ ದೂರ ದೃಷ್ಟಿ, ಶರಾವತಿ ಯಿಂದ ಬಂದ ವಿದ್ಯುತ್, ಕಾವೇರಿ ಯಿಂದ ಬಂದ ನೀರ��� ಅದಕ್ಕಾಗಿ ಬಿಟ್ಟು ಕೊಟ್ಟ ನೆಲದ ಬಗ್ಗೆ ಯೋಚಿಸಿ ಹೇಳಿ
@BSYBJP killed Karnataka by opening up agri land purchase for outsiders in Karnataka. He back stabbed Kannadigas by claiming this as a reform.
It is a travesty that not many Kannadigas are aware of/even understanding the loot that is happening in agri land purchase by outsiders.
ವೇಗದ ಹೊಸ ಪ್ರತೀಕ... ದೆಹಲಿ-ಮೀರತ್ RRTS ! 🇮🇳
🚀 180 ಕಿಮೀ/ಗಂಟೆಗೆ ವೇಗ
🏗️ ವಿಶ್ವ ದರ್ಜೆಯ ಮೂಲಸೌಕರ್ಯ
⏱️ ಹಿಂದೆಂದಿಗಿಂತಲೂ ವೇಗದ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣ
ಒಂದು ಕಾಲದಲ್ಲಿ ಹಲವು ಗಂಟೆಗಳನ್ನು ತೆಗೆದುಕೊಳ್ಳುತ್ತಿದ್ದ ಪ್ರಯಾಣ ಈಗ ನಿಮಿಷಗಳಿಗೆ ಇಳಿಯುತ್ತಿದೆ. ಸುಧಾರಿತ ಸಂಪರ್ಕ, ಆಧುನಿಕ ನಗರಗಳ ಅಭಿವೃದ್ಧಿ ನವ ಭಾರತದ ಹೊಸ ಗುರುತಾಗುತ್ತಿದೆ.
ಇದು ಕೇವಲ ರೈಲಲ್ಲ, ಇದು ಅಭಿವೃದ್ಧಿ ಹೊಂದಿದ ಭಾರತದ ಹೆಚ್ಚುತ್ತಿರುವ ವೇಗ ಮತ್ತು ಬದಲಾಗುತ್ತಿರುವ ಚಿಂತನೆಯ ಸಂಕೇತವಾಗಿದೆ. 🚄
#ViksitBharat #NamoBharat
Haha, Bengaluru has always been a city built by people from all over India. Tamils, Kannadigas, Telugus, Malayalis, North Indians and many others have all contributed to its growth.
People usually move where opportunities exist. Instead of blaming migrants, every state should focus on creating more jobs and infrastructure so people have the choice to stay closer to home.
And for the record, migrants don't create traffic—poor urban planning does. 😄
The Western Ghats areas in three states GJ, Goa,MH will be declared Eco-Sensitive Areas This will help protect the area that holds is among the world's top
bio-diversity hotspots.Initially KARNATAKA was included but KA is questioning the very rationale behind the entire exercise.
I am a native Kannadiga from Sidlaghatta.
We Kannadigas are losing our lands for the incompetency of Indian corporates who are not willing to invest in Northern Karnataka.
25 ವರ್ಷದ ಹಿಂದೆ ಮೈಸೂರಿನಲ್ಲಿ ಪಿಯೂಸಿ ಓದುವಾಗ ಮನೆ ಶ್ರೀರಾಂಪುರದಲ್ಲಿತ್ತು, ಅಲ್ಲಿಂದ ಜೆಪಿನಗರದ ಸ್ನೇಹಿತನ ಮನೆಗೆ ಹೋಗಿ ಸ್ನೇಹಿತನ ಲೂನಾನಲ್ಲಿ ಮಹಾಜನ ಕಾಲೇಜಿನಲ್ಲಿ ನಡೆಯುತ್ತಿದ್ದ CET ಪರೀಕ್ಷೆಗೆ ಹೋಗುವಾಗ ಮಾನಸಗಂಗೋತ್ರಿ ರಸ್ತೆಯಲ್ಲಿ ಲೂನ ಕೆಟ್ಟುಹೋಯಿತು. CET ಪರೀಕ್ಷೆಗೆ ಹೋದಾಗ ತಡವಾಗಿತ್ತು. ಹಾಗಿದ್ದೂ ಪರೀಕ್ಷೆ ಬರೆಯೊಕ್ಕೆ ಬಿಟ್ಟಿದ್ರು.. CET ರಾಜ್ಯ ಸರಕಾರ ನಡೆಸುತಿತ್ತು. ಭಾರತ ಸರಕಾರದಂತೆ ಅತೀಯಾದ ಜನ ವಿರೋಧಿ ನಿಯಮಗಳು ಇರಲಿಲ್ಲ.
NEET ಗೆ ತಡವಾಗಿ ಬಂದ ಮಕ್ಕಳನ್ನು ಪರೀಕ್ಷೆ ಬರೆಯೊಕ್ಕೆ ಬಿಡದ ಜನ ವಿರೋಧಿ ಭಾರತ ಸರಕಾರ ಯಾವ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡುತ್ತೆ? ಭಾರತ ಸರಕಾರದ ಎಲ್ಲಾ ಇಲಾಖೆಗಳೂ ಸಮಯಕ್ಕೆ ಸರಿಯಾಗಿಯೇ ಕೆಲಸ ನಡೆ���ುತ್ತವೆಯೇ? ಜನ ವಿರೋಧಿ ಭಾರತ ಸರಕಾರದ ಮಂತ್ರಿಗಳು ಸಮಯಕ್ಕೆ ಸರಿಯಾಗಿಯೇ ಬರುವರೇ?
ಪರೀಕ್ಷೆಯನ್ನು ಸರಿಯಾಗಿ ನಡೆಸಲು ಆಗದೇ ಮರುಪರೀಕ್ಷೆ ��ಡೆಸಿದ ಭಾರತ ಸರಕಾರ ಒಂದೆರಡು ನಿಮಿಷ ತಡವಾಗಿ ಬಂದ ಮಕ್ಕಳನ್ನು ಆಚೆ ನಿಲ್ಲಿಸಿರುವುದು ಭಾರತ ಸರಕಾರ ಮತ್ತು ಅದರಲ್ಲಿ ಅಧಿಕಾರದಲ್ಲಿರೋರು ಎಂತ ಕ್ರೂರಿಗಳು ಅನ್ನೋದು ಗೊತ್ತಾಗುತ್ತದೆ..
Why do we need NEET ?
Why can't education be moved to the state list ?
KCET was the best method which catered for needs of Kannadigas.
Why do we need "One nation, One exam" nonsense ?
I know you don't have courage to answer the questions of Kannadigas.
Another railway budget, another question.
If southern states contribute so much to the national economy, why do they continue to lag behind in railway allocations?
What is the formula behind these priorities?
ಸ್ವಾತಂತ್ರ್ಯ ಪೂರ್ವದಲ್ಲಿ (1937) ಯುವಕ "ಅಂದಾನಪ್ಪ ದೊಡ್ಡಮೇಟಿ" ಯವರು ಧಾರವಾಡ ಉತ್ತರ ಕ್ಷೇತ್ರದಿಂದ ಬಾಂಬೆ ಶಾಸನಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಆ ಕಾಲದಲ್ಲಿ ಬ್ರಿಟಿಷರ ಪ್ರಭಾವವಿದ್ದ ಆ ಶಾಸನಸಭೆಯಲ್ಲಿ ಕೇವಲ ಇಂಗ್ಲಿಷ್, ಮರಾಠಿ ಅಥವಾ ಗುಜರಾತಿ ಭಾಷೆಗಳಲ್ಲಿ ಮಾತ್ರ ಮಾತನಾಡಲು ನಿಯಮಾವಳಿಗಳು ಮತ್ತು ಅವಕಾಶಗಳಿದ್ದವು. ಕನ್ನಡ ಮಾತನಾಡುವ ದೊಡ್ಡ ಪ್ರಾಂತ್ಯವೇ ಮುಂಬೈ ಅಡಿಯಲ್ಲಿ ಇದ್ದರೂ, ಸದನದಲ್ಲಿ ಕನ್ನಡಕ್ಕೆ ಯಾವುದೇ ಮಾನ್ಯತೆ ಇರಲಿಲ್ಲ.
ಸ��ನದಲ್ಲಿ ��ಮ್ಮ ಮೊದಲ ಭಾಷಣದ ಸರದಿ ಬಂದಾಗ, ದೊಡ್ಡಮೇಟಿಯವರು ಇಂಗ್ಲಿಷ್ ಅಥವಾ ಮರಾಠಿ ಭಾಷೆಯನ್ನು ಬಳಸದೆ ನೇರವಾಗಿ ತಮ್ಮ ತಾಯಿ ನುಡಿಯಾದ ಕನ್ನಡದಲ್ಲೇ ಮಾತನಾಡಲು ಆರಂಭಿಸಿದರು. ಇದನ್ನು ಕಂಡು ಇಡೀ ಸದನ ಹಾಗೂ ಸ್ಪೀಕರ್ (ಸಭಾಪತಿ) ದಿಗ್ಭ್ರಮೆಗೊಂಡರು. ಮುಂಬೈ ಅಸೆಂಬ್ಲಿಯ ಇತಿಹಾಸದಲ್ಲೇ ಅಲ್ಲಿಯವರೆಗೆ ಯಾರೂ ಶಾಸನಸಭೆಯ ಒಳಗೆ ಕನ್ನಡದಲ್ಲಿ ಮಾತನಾಡಿರಲಿಲ್ಲ.
ಅವರು ಕನ್ನಡದಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ ಅಸೆಂಬ್ಲಿಯ ಸಭಾಪತಿಗಳು ತಕ್ಷಣವೇ ಮಧ್ಯಪ್ರವೇಶಿಸಿ, "ನಿಮಗೆ ���ಂಗ್ಲಿಷ್ ಅಥವಾ ಮರಾಠಿ ಭಾಷೆ ಬರುತ್ತದಲ್ಲವೇ? ನಿಯಮಗಳ ಪ್ರಕಾರ ಆ ಭಾಷೆಯಲ್ಲೇ ಮಾತನಾಡಿ, ಇಲ್ಲಿ ಕನ್ನಡಕ್ಕೆ ಅವಕಾಶವಿಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆಗ ಎದೆಗುಂದದ ದೊಡ್ಡಮೇಟಿಯವರು ಅತ್ಯಂತ ವಿನಮ್ರವಾಗಿ ಆದರೆ ಅಷ್ಟೇ ದೃಢವಾಗಿ, "ಮಾನ್ಯ ಸಭಾಪತಿಗಳೇ, ನನಗೆ ಇಂಗ್ಲಿಷ್ ಬರಬಹುದು. ಆದರೆ ನನ್ನನ್ನು ಆರಿಸಿ ಸದನಕ್ಕೆ ಕಳುಹಿಸಿದ ಲಕ್ಷಾಂತರ ಕನ್ನಡಿಗ ಮತದಾರರಿಗೆ ಇಂಗ್ಲಿಷ್ ಬರುವುದಿಲ್ಲ. ನಾನು ಇಲ್ಲಿ ನನ್ನ ವೈಯಕ್ತಿಕ ಪಾಂಡಿತ್ಯ ಪ್ರದರ್ಶಿಸಲು ಬಂದಿಲ್ಲ, ನನ���ನ ಜನರ ��್ವನಿಯಾಗಿ ಬಂದಿದ್ದೇನೆ. ನನ್ನ ಜನರಿಗೆ ತಿಳಿಯುವ ನನ್ನದೇ ಮಾತೃಭಾಷೆಯಲ್ಲಿ ಮಾತನಾಡುವುದು ನನ್ನ ಹಕ್ಕು" ಎಂದು ನೇರವಾಗಿ ಉತ್ತರಿಸಿದರು. ಅವರ ಈ ತರ್ಕಬದ್ಧ ಮತ್ತು ಸ್ವಾಭಿಮಾನಿ ಉತ್ತರಕ್ಕೆ ಸಭಾಪತಿಗಳು ಕೂಡ ಸುಮ್ಮನಾಗಿ ಭಾಷಣ ಮುಂದುವರಿಸಲು ಅನುಮತಿ ನೀಡಬೇಕಾಯಿತು.
ಬರೆ ಭಾಷಣ ಮಾಡುವುದಷ್ಟೇ ಅಲ್ಲದೆ, ಅದೇ ಅಧಿವೇಶನದಲ್ಲಿ ಅವರು ಶಾಸನಸಭೆಯ ಮುಂದೆ ಅಧಿಕೃತವಾಗಿ "ಕನ್ನಡ ಮಾತನಾಡುವ ಎಲ್ಲಾ ಪ್ರಾಂತ್ಯಗಳನ್ನು ಒಟ್ಟುಗೂಡಿಸಿ ಪ್ರತ್ಯೇಕ ಕರ್ನಾಟಕ ರಾಜ್ಯವನ್ನು ರಚಿ��ಬೇಕು" ಎಂಬ ಐತಿಹಾಸಿಕ ನಿರ್ಣಯವನ್ನು ಮಂಡಿಸಿದರು. ಬ್ರಿಟಿಷ್ ಭಾರತದ ಶಾಸನಸಭೆಯೊಂದರಲ್ಲಿ 'ಕರ್ನಾಟಕ ಏಕೀಕರಣ'ದ ಪರವಾಗಿ ಮಂಡನೆಯಾದ ಪ್ರಪ್ರಥಮ ಸಂಸದೀಯ ನಿರ್ಣಯ ಇದಾಗಿತ್ತು.
ಅಂದಾನಪ್ಪ ದೊಡ್ಡಮೇಟಿಯವರು ಮೊದಲ ಬಾರಿಗೆ ಸದನದಲ್ಲಿ ತೋರಿದ ಈ ಕೆಚ್ಚೆದೆಯ ನಿಲುವೇ ಮುಂದೆ ಮುಂಬೈ ಪ್ರಾಂತ್ಯದಲ್ಲಿದ್ದ ಉತ್ತರ ಕರ್ನಾಟಕದ ಕನ್ನಡಿಗರಲ್ಲಿ ಭಾರಿ ರಾಜಕೀಯ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸಲು ಕಾರಣವಾಯಿತು.
1956ರಲ್ಲಿ ರಾಜ್ಯವೇನೋ ಒಂದಾಯಿತು ಆದರೆ ಹೊಸದಾಗಿ ಸೇರಿದ ಭಾ��ಗಳ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಮೂಡಿ, ಕೆಲವು ನಾಯಕರು "ಕರ್ನಾಟಕವನ್ನು ಉತ್ತರ ಮತ್ತು ದಕ್ಷಿಣ ಎಂದು ಎರಡು ಭಾಗಗಳಾಗಿ ವಿಭಜಿಸಬೇಕು" ಎಂಬ ಪ್ರಸ್ತಾವನೆ ತಂದರು. ಇದನ್ನು ಕೇಳಿ ಸಿಡಿದೆದ್ದ ದೊಡ್ಡಮೇಟಿಯವರು ವಿಧಾನಸಭೆಯಲ್ಲಿ, "ನನ್ನ ದೇಹವನ್ನು ಸೀಳಿ ಎರಡು ಮಾಡಲು ಬೇಕಾದರೆ ಕೊಡುವೆನು, ಆದರೆ ಕನ್ನಡಿಗರೆಲ್ಲರೂ ಒಟ್ಟಾಗಿ ಕಟ್ಟಿದ ಈ ಅಖಂಡ ಕರ್ನಾಟಕವನ್ನು ಎರಡು ಮಾಡಲು ಎಂದಿಗೂ ಅವಕಾಶ ಕೊಡೆನು" ಎಂದು ಸಿಂಹ ಘರ್ಜನೆ ಮಾಡಿದರು.
ಅಂದಾನಪ್ಪ ದೊಡ್ಡಮೇಟಿ ಅವರ ಈ ತೀಕ್ಷ್ಣ ಹಾಗೂ ಕನ್ನಡ ದೇಶಭಕ್ತಿಯ ನುಡಿಗಳಿಗೆ, ಸಮಾಜವಾದಿ ಧೀಮಂತ ನಾಯಕ ಶಾಂತವೇರಿ ಗೋಪಾಲಗೌಡರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಹೋರಾಟಕ್ಕೆ ಮತ್ತಷ್ಟು ರಾಜಕೀಯ ಮತ್ತು ಜನಬಲದ ಶಕ್ತಿಯನ್ನು ತುಂಬಿದರು.
ಆ ಒಂದು ಮಾತಿನ ಶಕ್ತಿಗೆ ಅಂದಿನ ಪ್ರತ್ಯೇಕತೆಯ ಧ್ವನಿಗಳು ಅಡಗಿ ಹೋಗಿದ್ದವು.
"ಇಂದು ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿಯಲ್ಲಿ ಬಿ ಜೆ ಪಿ ನೇತೃತ್ವದ ಮಹಾನಗರ ಪಾಲಿಕೆ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂಬ ನಿರ್ಣಯ ಕೈಗೊಳ್ಳಲು ತಿಣುಕಾಡುತ್ತಿದೆ ಎಂದರೆ ಎಂತ ವಿಪರ್ಯಾಸ".
#ಕರ್ನಾಟಕ #ಕನ್ನಡ #ಕನ��ನಡಿಗ #kannada #karnataka #shanataveri #andanappa