ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು (20.07.2026) ಅಶೋಕನಗರದ SVVP English Medium School ನಲ್ಲಿ ಹನುಮಂತನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಸೂರ್ಯ ಪ್ರಸಾದ್ ಎಸ್. ಅವರಿಂದ ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.#BedaBro#RiseKarntaka
ಭಾಷೆ ಎಂದೂ ನಿಮಗೂ ಮತ್ತು ಪೊಲೀಸ್ ನೆರವಿಗೂ ಮಧ್ಯೆ ಅಡ್ಡಿಯಾಗಬಾರದು.
ಕೃತಕ ಬುದ್ಧಿಮತ್ತೆ (AI) ಆಧಾರಿತ ಬಹುಭಾಷಾ ಬೆಂಬಲದೊಂದಿಗೆ, 'ನಮ್ಮ 112' ಭಾಷೆಯ ಅಡೆತಡೆಗಳನ್ನು ನಿವಾರಿಸಿ, ಅತ್ಯಂತ ವೇಗವಾದ, ಸ್ಪಷ್ಟವಾದ ಮತ್ತು ಎಲ್ಲರನ್ನೂ ಒಳಗೊಳ್ಳುವ ತುರ್ತು ಸಹಾಯವನ್ನು ಒದಗಿಸುತ್ತದೆ — ಅತೀ ಅವಶ್ಯಕತೆಯಿರುವ ಸಂದರ್ಭದಲ್ಲಿ ಪ್ರತಿಯೊಂದು ಕರೆಯನ್ನು ಸರಿಯಾಗಿ ಗ್ರಹಿಸುವುದನ್ನು ಇದು ಖಚಿತಪಡಿಸುತ್ತದೆ.
ಯಾವುದೇ ತುರ್ತು ಸಂದರ್ಭದಲ್ಲಿ 112 ಗೆ ಕರೆ ಮಾಡಿ. ಪೊಲೀಸ್ ಸಹಾಯವು ನಿಮ್ಮದೇ ಭಾಷೆಯಲ್ಲಿ ಕೇವಲ ಒಂದು ಕರೆಯ ಅಂತರದಲ್ಲಿದೆ.
Language should never stand between you and help.
With AI-powered multilingual support, Namma 112 breaks language barriers to provide faster, clearer, and more inclusive emergency assistance—ensuring every call is understood when it matters most.
📞 Dial 112 in any emergency. Help is just a call away, in your language.
#Namma112 #BengaluruCityPolice #InclusiveSafety #EmergencySupport #LanguageIsNoBarrier #Dial112
@CPBlr@seemantsingh96@DgpKarnataka@KarnatakaCops@CMofKarnataka@PriyankKharge
@kotadkaake@BlrCityPolice@Ravi_LA Sir please dm us for exact issue..
We increased the patrolling there ..
we sent you our contact details also ..
If any emergency dial namma 112 for quick assistance
ಮಹಿಳೆಯರ ಹಾಗೂ ಸಾರ್ವಜನಿಕರ ಸುರಕ್ಷತೆ ನಮ್ಮ ಆದ್ಯತೆ!
ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ, ಇಂದು ಜೆ.ಪಿ. ನಗರ ಠಾಣಾ ವ್ಯಾಪ್ತಿಯ ಸೆಂಟ್ರಲ್ ಮಾಲ್ (Central Mall) ನಲ್ಲಿ 'ರಾಣಿ ಚೆನ್ನಮ್ಮ ಪಡೆ'ಯಿಂದ ವಿಶೇಷ ರೂಟ್ ಮಾರ್ಚ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೆಳಕಂಡ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು:
✅ ಮಹಿಳೆಯರ ಸುರಕ್ಷತೆಗಾಗಿ KSP App ನ 'Safe Connect' (SOS) ಫೀಚರ್, Safety Island ಹಾಗೂ ಮಹಿಳಾ ನೆರವು ಕೇಂದ್ರಗಳು.
✅ ತುರ್ತು ಸಹಾಯಕ್ಕಾಗಿ 112 ಸಹಾಯವಾಣಿ.
✅ ಸೈಬರ್ ವಂಚನೆ (Cyber Fraud) ತಡೆಗೆ 1930 ಹೆಲ್ಪ್ಲೈನ್.
✅ ಮೊಬೈಲ್ ಹಾಗೂ ಸರಗಳ್ಳತನ (Chain/Mobile Snatching) ತಡೆಗಟ್ಟುವಿಕೆ.
✅ ಇ-ಲಾಸ್ಟ್ (E-Lost) ವರದಿ ಮಾಡುವ ವಿಧಾನ.
ಭಯಮುಕ್ತ ಮತ್ತು ಸುರಕ್ಷಿತ ವಾತಾವರಣಕ್ಕಾಗಿ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರೆಯಲಿವೆ.
ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.
#BengaluruPolice #SafetyFirst #RaniChennammaPade #JPNagar #PublicSafety #CyberSecurity #SafeCity
RISE Karnataka × #BedaBro | ಮಾದಕವಸ್ತು ಮುಕ್ತ ಪೀಳಿಗೆಯ ನಿರ್ಮಾಣ
ಬೆಂಗಳೂರು ದಕ್ಷಿಣ ವಿಭಾಗದ ಗಿರಿನಗರ ಪೊಲೀಸ್ ತಂಡವು ಅಂತರರಾಷ್ಟ್ರೀಯ ಮಾದಕವಸ್ತು ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಓರ್ವ ನೈಜೀರಿಯಾ ಪ್ರಜೆಯನ್ನು ಬಂಧಿಸಲಾಗಿದ್ದು, ಅಂದಾಜು ₹12 ಕೋಟಿ ಮೌಲ್ಯದ 5 ಕೆ.ಜಿ ಎಂಡಿಎಂಎ (MDMA) ಮತ್ತು 1,000 ಎಕ್ಸ್ಟಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೀದಿ ಬದಿಯ ಪೆಡ್ಲರ್ಗಳಿಂದ ಹಿಡಿದು ಅಂತರರಾಷ್ಟ್ರೀಯ ಪೂರೈಕೆದಾರರವರೆಗೆ, ಮಾದಕವಸ್ತು ಜಾಲದ ಪ್ರತಿಯೊಂದು ಕೊಂಡಿಯ ವಿರುದ್ಧವೂ ನಮ್ಮ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ.
ಮಾದಕವಸ್ತುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅನಾಮಧೇಯವಾಗಿ ವರದಿ ಮಾಡಿ: 1908 | 112 | ಕೆಎಸ್ಪಿ (KSP) ಆಪ್ | ಮಾದಕವಸ್ತು ಮುಕ್ತ ಕರ್ನಾಟಕ
#RISEKarnataka #BedaBro #DrugFreeKarnataka #WarAgainstDrugs #BengaluruCityPolice
@CPBlr@seemantsingh96@DgpKarnataka@CMofKarnataka@PriyankKharge
ಉಪ ಪೊಲೀಸ್ ಆಯುಕ್ತರು ದಕ್ಷಿಣ ವಿಭಾಗದ
ಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಮುಖ ಮನೆಗಳ್ಳತನ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ!
ಸುಮಾರು 18 ವರ್ಷಗಳಿಂದ ನಂಬಿಕಸ್ಥಳಾಗಿ ಕೆಲಸ ಮಾಡುತ್ತಿದ್ದ ಮನೆಗೆಲಸದ ಮಹಿಳೆಯೇ ಕಳ್ಳತನ ಮಾಡಿರುವುದನ್ನು ಪತ್ತೆಹಚ್ಚಿ, ಆರೋಪಿತೆಯನ್ನು ಬಂಧಿಸಲಾಗಿದೆ. ಬಂಧಿತಳಿಂದ ಸಾರ್ವಜನಿಕರ ಸುಮಾರು ಐವತ್ತು ಲಕ್ಷ ರೂಪಾಯಿ ಒಟ್ಟು ಮೌಲ್ಯದ ಈ ಕೆಳಗಿನ ಸ್ವತ್ತನ್ನು ಯಶಸ್ವಿಯಾಗಿ ಮರಳಿ ವಶಪಡಿಸಿಕೊಳ್ಳಲಾಗಿದೆ:
🔹 262 ಗ್ರಾಂ ಚಿನ್ನಾಭರಣಗಳು
🔹 2 ಕೆಜಿ 366 ಗ್ರಾಂ ಬೆಳ್ಳಿ ಬಿಸ್ಕೆಟ್ಗಳು ಹಾಗೂ ಬೆಳ್ಳಿ ವಸ್ತುಗಳು
🔹 ₹65,000/- ನಗದು ಹಣ
🔹 05 ರೇಷ್ಮೆ ಸೀರೆಗಳು
ನಮ್ಮ ಮಾರ್ಗದರ್ಶನದಲ್ಲಿ ಶ್ರಮವಹಿಸಿ, ಸಾರ್ವಜನಿಕರ ಸ್ವತ್ತನ್ನು ಯಶಸ್ವಿಯಾಗಿ ಮರಳಿ ಪಡೆದ ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮೀನಾರಾಯಣ @acpjayanagar ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಗಿರೀಶ್ ಎಂ.ಎಲ್ @jayanagarps ಮತ್ತು ಅವರ ಇಡೀ ತಂಡದ ವೃತ್ತಿಪರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತೇನೆ.
"ಅಪರಾಧ ಮುಕ್ತ ಬೆಂಗಳೂರೇ ನಮ್ಮ ಮೊದಲ ಆದ್ಯತೆ".
#BengaluruPolice #CrimeDetection #JayanagarPS #PublicSafety
ಆರೋಗ್ಯವೇ ಭಾಗ್ಯ! 'ಅವಾಯ್ಡಬಲ್ ಬ್ಲೈಂಡ್ನೆಸ್ ರಾಷ್ಟ್ರೀಯ ಮಿಷನ್' ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಇಂದು ನಮ್ಮ ದಕ್ಷಿಣ ವಿಭಾಗದ ಕಛೇರಿಯಲ್ಲಿ ಬೃಹತ್ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. 🩺🩸
ನಮ್ಮ ವಿಭಾಗದ 360 ಸಿಬ್ಬಂದಿ ಹಾಗೂ ಅಧಿಕಾರಿಗಳು ಸಮಗ್ರ ವೈದ್ಯಕೀಯ ತಪಾಸಣೆಗೆ ಒಳಪಟ್ಟರು. ಜೊತೆಗೆ, ಒಟ್ಟು 20 ಸಿಬ್ಬಂದಿ ಹಾಗೂ ಅಧಿಕಾರಿಗಳೊಂದಿಗೆ ನಾನೂ ಕೂಡ ರಕ್ತದಾನ ಮಾಡುವ ಮೂಲಕ ಈ ಸತ್ಕಾರ್ಯದಲ್ಲಿ ಭಾಗಿಯಾಗಿದ್ದೇನೆ.
ಪ್ರತಿದಿನ ಸಮಾಜದ ಸೇವೆಗಾಗಿ ಶ್ರಮಿಸುವ ನಮ್ಮ ಪೊಲೀಸ್ ಸಿಬ್ಬಂದಿಯ ದೈಹಿಕ ಹಾಗೂ ದೃಷ್ಟಿ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಈ ಶಿಬಿರವು ಅತ್ಯಂತ ಸಹಕಾರಿಯಾಗಿದೆ. ಸಹಕರಿಸಿದ ಎಲ್ಲಾ ವೈದ್ಯಕೀಯ ತಂಡಕ್ಕೆ ಧನ್ಯವಾದಗಳು.
#HealthCamp #BloodDonation
#BCP
ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ, ದಕ್ಷಿಣ ವಿಭಾಗದ ಜಯನಗರ 4th ಬ್ಲಾಕ್ನ ಪ್ರಮುಖ ಕಾಂಪ್ಲೆಕ್ಸ್ ಹಾಗೂ ರಸ್ತೆಗಳಲ್ಲಿ ದಿನಾಂಕ 05-07-2026 ರಂದು 'ರಾಣಿ ಚೆನ್ನಮ್ಮ ಪಡೆ'ಯಿಂದ ವಿಶೇಷ ರೂಟ್ ಮಾರ್ಚ್ ನಡೆಸಿ, ಮಹಿಳೆಯರ ಸುರಕ್ಷತೆಗಾಗಿ ಇರುವ KSP App ನ 'Safe Connect' (SOS) ಫೀಚರ್, Safety Island ಗಳು ಮತ್ತು ಮಹಿಳಾ ನೆರವು ಕೇಂದ್ರಗಳ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಅರಿವು ಮೂಡಿಸಲಾಯಿತು. ಮಹಿಳೆಯರ ಸುರಕ್ಷತೆ ಹಾಗೂ ಭಯಮುಕ್ತ ವಾತಾವರಣಕ್ಕಾಗಿ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರೆಯಲಿವೆ. #RaniChennammaPade #WomensSafety #BCP
#SafeConnect #SafetyIsland #WomenHelpDesk