ನೇಮಕಾತಿಯೂ ಇಲ್ಲ, ಕಟ್ಟಿದ ಹಣವೂ ವಾಪಸ್ ಇಲ್ಲ! ಇದು "ಕಮಿಷನ್ ಮಾಸ್ಟರ್" ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಲೂಟಿ ಸರ್ಕಾರದ ಅಸಲಿ ಮುಖ!
ಕೆಪಿಎಸ್ಸಿ ಮೂಲಕ 750 ಭೂಮಾಪಕರ (Surveyors) ನೇಮಕಾತಿಗೆ ಅರ್ಜಿ ಆಹ್ವಾನಿಸಿ, ಲಕ್ಷಾಂತರ ನಿರುದ್ಯೋಗಿ ಯುವಕರಿಂದ ಕೋಟ್ಯಂತರ ರೂಪಾಯಿ ಲೂಟಿ ಮಾಡಿ, ಈಗ ಪರೀಕ್ಷೆಯನ್ನೂ ರದ್ದುಗೊಳಿಸಲಾಗಿದೆ. ಇತ್ತ ಉದ್ಯೋಗವೂ ಇಲ್ಲ, ಅತ್ತ ಯುವಕರು ಕಷ್ಟಪಟ್ಟು ಕಟ್ಟಿದ ಅರ್ಜಿ ಶುಲ್ಕವನ್ನೂ ವಾಪಸ್ ನೀಡದೆ ಈ ಕಾಂಗ್ರೆಸ್ ಸರ್ಕಾರ ಮಹಾವಂಚನೆ ಮಾಡಿದೆ!
ಉದ್ಯೋಗಾಕಾಂಕ್ಷಿಗಳ ಕನಸಿನ ಜೊತೆ ಚೆಲ್ಲಾಟವಾಡುವುದು ಈ ಲಜ್ಜೆಗೆಟ್ಟ @INCKarnataka ಸರ್ಕಾರದ ಚಾಳಿಯಾಗಿದೆ. ರಾಜ್ಯದಲ್ಲಿ ಬರೋಬ್ಬರಿ 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಇವರದ್ದೇ ಅಧಿಕೃತ ದಾಖಲೆಗಳು ಹೇಳುತ್ತಿವೆ. ಶಾಸಕ ಆರ್.ವಿ. ದೇಶಪಾಂಡೆ ಸಮಿತಿ ವರದಿಯ ಪ್ರಕಾರ ರಾಜ್ಯದಲ್ಲಿ 7 ಲಕ್ಷ ನಿರುದ್ಯೋಗಿಗಳು ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿದ್ದಾರೆ. ಆದರೂ ಹುದ್ದೆಗಳನ್ನು ಭರ್ತಿ ಮಾಡದ ಈ ಸರ್ಕಾರ, ಯುವಕರ ಭವಿಷ್ಯವನ್ನು ಕತ್ತಲಿಗೆ ತಳ್ಳುತ್ತಿದೆ.
ರಾಜ್ಯದಲ್ಲಿ ಸದ್ಯಕ್ಕೆ 5.72 ಲಕ್ಷಕ್ಕೂ ಹೆಚ್ಚು ಸರ್ವೇ ಅರ್ಜಿಗಳು ಬಾಕಿ ಉಳಿದಿವೆ. ಭೂಮಾಪಕರಿಲ್ಲದೆ ಜಮೀನು ಅಳತೆ, ಪೋಡಿ, ನಕ್ಷೆ ತಯಾರಿಕೆಗೆ ಅನ್ನದಾತರು ವರ್ಷಗಟ್ಟಲೆ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಸಕಾಲಕ್ಕೆ ದಾಖಲೆ ಸಿಗದೆ ಬೆಳೆ ಸಾಲವೂ ಸಿಗದೆ ಕಣ್ಣೀರು ಹಾಕುತ್ತಿದ್ದಾರೆ.
ಮುಖ್ಯಮಂತ್ರಿ @DKShivakumar ಅವರೇ, ರಿಯಲ್ ಎಸ್ಟೇಟ್ ದಂಧೆ ಮತ್ತು ಕಮಿಷನ್ ಲೂಟಿಯಲ್ಲಿ ಬ್ಯುಸಿಯಾಗಿರುವ ನಿಮಗೆ ಯುವಕರ, ರೈತರ ಕಷ್ಟ ಕಾಣಿಸುತ್ತಿಲ್ಲವೇ?
ಉದ್ಯೋಗಾಕಾಂಕ್ಷಿಗಳಿಂದ ವಸೂಲಿ ಮಾಡಿದ ಕೋಟ್ಯಂತರ ರೂಪಾಯಿ ಹಣ ಯಾರ ಜೇಬು ಸೇರಿದೆ? ಯುವಕರ ಅರ್ಜಿ ಶುಲ್ಕದಲ್ಲೂ ನಿಮ್ಮ ಕಮಿಷನ್ ಕಾರುಬಾರು ನಡೆಯುತ್ತಿದೆಯೇ?
ಕೂಡಲೇ ರದ್ದುಗೊಂಡಿರುವ ನೇಮಕಾತಿ ಪ್ರಕ್ರಿಯೆಯನ್ನು ಮರುಚಾಲನೆಗೊಳಿಸಿ, ಖಾಲಿ ಇರುವ ಎಲ್ಲಾ ಭೂಮಾಪಕರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಇಲ್ಲವೇ ಅಭ್ಯರ್ಥಿಗಳಿಂದ ಕಿತ್ತುಕೊಂಡ ಹಣವನ್ನು ತಕ್ಷಣವೇ ವಾಪಸ್ ನೀಡಬೇಕು. ಇಲ್ಲದಿದ್ದರೆ ಈ ನೊಂದ ಲಕ್ಷಾಂತರ ಯುವಕರು ಮತ್ತು ಅನ್ನದಾತರು ನಿಮ್ಮ ಈ ಜನವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ!
#CongressFailsKarnataka
ಕಂದಾಯ ಇಲಾಖೆಯಲ್ಲಿ ಭೂ ಮಾಪಕರ ಪಾತ್ರ ಪ್ರಮುಖವಾದದ್ದು. ಭೂ ಮಾಪಕರ ಮುಷ್ಕರದಿಂದ ಕಡತಗಳು ವಿಲೇವಾರಿಯಾಗದೆ ಸ್ಥಗಿತಗೊಂಡಿದೆ. ಹದ್ದುಬಸ್ತು, 11 E ಸ್ಕೆಚ್, ಜಮೀನು ಸರ್ವೇ, ಗಡಿ ಗುರುತು ಹಾಗೂ ಇತರೆ ಭೂ ದಾಖಲೆ ಸಿಗದೇ ರೈತರು ಪರದಾಡುವ ಸ್ಥಿತಿ ಬಂದಿದೆ. ಹದ್ದುಬಸ್ತು, 11 E ಸ್ಕೆಚ್ ಸಿಗದೇ ರೈತರಿಗೆ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಜಾಮೀನು ವ್ಯಾಜ್ಯಗಳು ಹೆಚ್ಚುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸಹ ಕರ್ನಾಟಕ ಲೋಕ ಸೇವಾ ಆಯೋಗದಿಂದ (KPSC) 750 ಭೂಮಾಪಕರ ನೇಮಕಾತಿ ಆಗುವ ಲಕ್ಷಣಗಳು ಕಾಣುತ್ತಿಲ್ಲ.
ಕಂದಾಯ ಇಲಾಖೆಯ ಬೆನ್ನೆಲುಬಾದ ಭೂ ಮಾಪಕರ ಕಥೆ ಹೇಳ ತೀರದಂತಾಗಿದೆ. ಇತ್ತ, ಭೂಮಾಪಕರ ಅನುಪಸ್ಥಿತಿಯಿಂದ ರೈತರಿಗೂ ತೊಂದರೆಯಾಗುತ್ತಿದೆ.
ಹಗಲು ರಾತ್ರಿ ಎನ್ನದೆ ಕಳೆದ ಎರಡು ದಶಕಗಳಿಂದ ಸೇವೆ ಮಾಡುತ್ತಿರುವ ಪರವಾನಗಿ ಭೂಮಾಪಕರ ಸೇವೆಯನ್ನು ಸರ್ಕಾರ ಖಾಯಂ ಗೊಳಿಸಿ ಅವರ ಕುಟುಂಬಗಳಿಗೆ ಆಸರೆಯಾಗಲಿ.
@Vijayavani_Digi I @CMofKarnataka I @AKSSAofficial I