🚩 ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪರವಾನಗಿ ಭೂಮಾಪಕರ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ರೈತ ಬಂಧುಗಳು ಬೆಂಬಲ ಸೂಚಿಸಿದರು. ಖಾಯಂ ನೇಮಕಾತಿ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ✊
#LSStrike#FreedomPark#EqualPayForEqualWork#LicensedSurveyors
ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಪರವಾನಗಿ ಭೂಮಾಪಕರ ಐತಿಹಾಸಿಕ ಧರಣಿ ಮುಂದುವರಿದಿದೆ. ಖಾಯಂ ನೇಮಕಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆಗಾಗಿ ಸಾವಿರಾರು ಭೂಮಾಪಕರು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದಾರೆ. ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಲಿ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಟಿ ವೈದ್ಯ ಶ್ರೀ ಹನುಮಂತ ಬೊಮ್ಮಗೌಡ ಅವರು ಪರವಾನಗಿ ಭೂಮಾಪಕರ ನ್ಯಾಯಸಮ್ಮತ ಹೋರಾಟಕ್ಕೆ ಬೆಂಬಲ ಸೂಚಿಸಿರುವುದು ನಮಗೆ ಹೆಮ್ಮೆಯ ವಿಷಯ. ಅವರ ಪ್ರೋತ್ಸಾಹ ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ. ಹೃತ್ಪೂರ್ವಕ ಧನ್ಯವಾದಗಳು. 🙏🚩
4 ತಿಂಗಳಿಂದ ಪರವಾನಗಿ ಭೂ ಮಾಪಕರು ಮುಷ್ಕರದಲ್ಲಿದ್ದಾರೆ ಸರ್. ಇನ್ನೆಷ್ಟು ದಿನ ನಿರ್ಲಕ್ಷ್ಯ?
ಸರ್ಕಾರಿ ಪರವಾನಗಿ ಭೂ ಮಾಪಕರ ಬೇಡಿಕೆಗಳಿಗೆ ತಕ್ಷಣ ನ್ಯಾಯ ನೀಡಿ. #JusticeForLicensedSurveyor
ಗೌರವಾನ್ವಿತ ಶಶಿಕಾಂತ ಗುರೂಜಿಯವರಿಗೆ — ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗೌರವಾಧ್ಯಕ್ಷರಿಗೆ — 4,500+ ಪರವಾನಗಿ ಭೂಮಾಪಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು 🙏 ಮಾನ್ಯ ಮುಖ್ಯಮಂತ್ರಿ @DKShivakumar ಅವರಿಗೆ ನಮ್ಮ ಸಮಸ್ಯೆಯನ್ನು ತಲುಪಿಸಿದ ತಮ್ಮ ಬೆಂಬಲ ಮರೆಯಲಾಗದು.
ರೈತ-ಭೂಮಾಪಕ ಬಂಧ ಶಾಶ್ವತ.
#surveyor#farmer
Hon'ble @DKShivakumar Sir 🙏
"Team Karnataka." "Social justice." "Solution-oriented governance."
These are exactly what 4,500+ Licensed Surveyors have awaited for 27 years.
Same work as Govt Surveyors. No salary. No security. 2 HC orders pending.
Please include us in the Team.
"ಪರವಾನಗಿ ಭೂಮಾಪಕರ ಬಗ್ಗೆ ಕಾಳಜಿ ವಹಿಸುತ್ತಿರುವ ತಮಗೆ ಧನ್ಯವಾದಗಳು. ಕಳೆದ ಮೂರುವರೆ ತಿಂಗಳುಗಳಿಂದ ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ತಕ್ಷಣವೇ ವೇತನ ನಿಗದಿಪಡಿಸಿ, ಉದ್ಯೋಗ ಭದ್ರತೆ ನೀಡಿ, ನಮ್ಮ ಹೋರಾಟ ಹಾಗೂ ರೈತರ ಕಷ್ಟಕ್ಕೆ ನ್ಯಾಯ ಒದಗಿಸಬೇಕು."
#ಪರವಾನಗಿ_ಭೂಮಾಪಕರಿಗೆ_ನ್ಯಾಯ_ಬೇಕು
"ಪರವಾನಗಿ ಭೂ ಮಾಪಕರ ನೋವು ಯಾರಿಗೂ ಕಾಣುತ್ತಿಲ್ಲ ಸಾರ್...
ರೈತರ ಜಮೀನು ಸಮಸ್ಯೆ ಬಗೆಹರಿಸುವಾಗ ನಾವು ಬೇಕು.
ಸರ್ಕಾರದ ಗುರಿ ತಲುಪಿಸುವಾಗ ನಾವು ಬೇಕು.
ಆದರೆ ನಮ್ಮ ಬದುಕಿನ ಪ್ರಶ್ನೆ ಬಂದಾಗ ಮಾತ್ರ
ನಮ್ಮನ್ನು ಎಲ್ಲರೂ ಮರೆತುಬಿಡುತ್ತಾರೆ.
ನಮ್ಮ ಸೇವೆ ಬೇಕು,
ಆದರೆ ನಮ್ಮ ಬದುಕಿಗೆ ಭದ್ರತೆ ಬೇಡವೇ ಸಾರ್?"
#JusticeForLicensedSurveyors
"ಸಾರ್...
ನಮ್ಮ ನೋವು ಇಷ್ಟು ಚಿಕ್ಕದಾಗಿತ್ತೇ ನಿಮಗೆ?
ವರ್ಷಗಳ ಕಾಲ ಸರ್ಕಾರದ ಕೆಲಸ ಮಾಡಿದೆವು,
ರೈತರ ಕಷ್ಟಗಳಿಗೆ ಸ್ಪಂದಿಸಿದೆವು,
ಬಿಸಿಲು-ಮಳೆ ಎನ್ನದೆ ಕರ್ತವ್ಯ ನಿರ್ವಹಿಸಿದೆವು.
ಆದರೆ ಇಂದು ನಮ್ಮದೇ ಬದುಕು ಬೀದಿಗೆ ಬಂದಾಗ,
ನಮ್ಮ ಪರವಾಗಿ ಮಾತನಾಡುವಷ್ಟು ಸೌಜನ್ಯ ತೋರಿಸಲಿಲ್ಲ
#JusticeForLicensedSurveyors
ಗೌರವಾನ್ವಿತ @DrParameshwara ಸರ್ — ಕಂದಾಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಕ್ಕೆ ಅಭಿನಂದನೆಗಳು 🙏
ರಾಜ್ಯದ 4500+ ಪರವಾನಗಿ ಭೂಮಾಪಕರು 27 ವರ್ಷಗಳಿಂದ ಖಾಯಂ ನೇಮಕಾತಿಗಾಗಿ ಕಾಯುತ್ತಿದ್ದಾರೆ.
2 ಹೈಕೋರ್ಟ್ ಆದೇಶಗಳು ಬಾಕಿ. 5.78 ಲಕ್ಷ ಅರ್ಜಿಗಳು ಬಾಕಿ.
ತಮ್ಮ ಗಮನ ಬೇಡುತ್ತಿದ್ದೇವೆ.
@DKShivakumar#JusticeForLicensedSurveyors
"ನಾವು ಕೇಳಿದ್ದು ಅಧಿಕಾರವಲ್ಲ ಸಾರ್...
ನಾವು ಕೇಳಿದ್ದು ಗೌರವಯುತ ಬದುಕು ಮಾತ್ರ.
ಇಷ್ಟು ವರ್ಷ ಸೇವೆ ಮಾಡಿದ ನಂತರವೂ
'ನಾಳೆ ಏನಾಗುತ್ತದೋ?' ಎಂಬ ಭಯದಲ್ಲೇ ಬದುಕುತ್ತಿದ್ದೇವೆ.
ನಮ್ಮ ಹೋರಾಟದ ಹಿಂದೆ ರಾಜಕೀಯ ಇಲ್ಲ,
ನಮ್ಮ ಕಣ್ಣೀರಿನ ಹಿಂದೆ ಸಾವಿರಾರು ಕುಟುಂಬಗಳ ನೋವಿದೆ.
#JusticeForLicensedSurveyors
ಭಗವದ್ಗೀತೆ ನಮಗೆ ಕರ್ತವ್ಯವನ್ನು ಕಲಿಸಿತು.
ಅದರಂತೆ ಪರವಾನಗಿ ಭೂ ಮಾಪಕರು ವರ್ಷಗಳ ಕಾಲ ರೈತರ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿದ್ದಾರೆ.
ಫಲದ ಅಪೇಕ್ಷೆಯಿಲ್ಲದೆ ದುಡಿದವರು,
ಇಂದು ಬದುಕಿನ ಭದ್ರತೆಗಾಗಿ ಹೋರಾಡುವ ಪರಿಸ್ಥಿತಿ ಬಂದಿದೆ.
ಕರ್ತವ್ಯವನ್ನು ನಾವು ಮರೆತಿಲ್ಲ,
ಸರ್ಕಾರ ತನ್ನ ಭರವಸೆಯನ್ನು ಮರೆತಿದೆ?
ಪರವಾನಗಿ ಭೂ ಮಾಪಕರ ಅಳಲು ಕೇಳಿ!
"ಸರ್, ನೀವು ಮಾಡಿದ ಕೆಲಸಕ್ಕೆ ಕೂಲಿ ಪಡೆದಿದ್ದೀರಿ.
ಆದರೆ ವರ್ಷಗಳಿಂದ ಸರ್ಕಾರದ ಕೆಲಸ ಮಾಡುತ್ತಿರುವ ಪರವಾನಗಿ ಭೂ ಮಾಪಕರ ಕೂಲಿ ಇನ್ನೂ ಬಾಕಿಯೇ ಇದೆ. ನಮ್ಮನ್ನು ಖಾಯಂಗೊಳಿಸಿ.
ಇಲ್ಲವಾದಲ್ಲಿ ‘ಸಮಾನ ಕೆಲಸಕ್ಕೆ ಸಮಾನ ವೇತನ’ ತತ್ವವನ್ನು ಕೂಡಲೇ ಜಾರಿಗೊಳಿಸಿ. ದುಡಿಯುವವರಿಗೆ ನ್ಯಾಯ ಕೊಡಿಸುವ ಸಮಯ ಬಂದಿದೆ."
@DKShivakumar@DKSureshINC