ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಇಂದು ಬೆಳಿಗ್ಗೆ ಲಾಲ್ ಭಾಗಿನಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ನಡೆದ ಪ್ರತಿಭಟನೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್ ಭಾಗವಹಿಸಿದರು.
#ManipurVoilence#Manipur
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಎಂ.ಎನ್.ಜಿ ಫೌಂಡೇಶನ್ ಹಾಗೂ ಬೂಯ ಗೈಸ್ ಪಾಣೆಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಹಯೋಗದೊಂದಿಗೆ 🩸🩸ಬೃಹತ್ ರಕ್ತದಾನ ಶಿಬಿರ🩸🩸18.06.2023 ಆದಿತ್ಯವಾರ ದಂದು ಬೆಳಿಗ್ಗೆ 8.00 ಗಂಟೆಯಿಂದ ಬಿ.ಸಿ ರೋಡ್ ತಲಪಾಡಿಯ ಅಲ್ ಖಝಾನ ಹಾಲಿನಲ್ಲಿ ನಡೆಯಲಿದೆ.
ದ.ಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ @Ongc_Mrpl ಸಂಸ್ಥೆಯ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬ ವಿಚಾರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದೆ. ಈ ಸಂದರ್ಭದಲ್ಲಿ ಅಭಿಷೇಕ್ ಬೆಳ್ಳಿಪ್ಪಾಡಿ, ರಮಾನಂದ ಪೂಜಾರಿ, ದೀಕ್ಷಿತ್, ಇಸ್ಮಾಯಿಲ್, ಸಂಜನಾ, ಸೌಹಾನ್ ಎಸ್.ಕೆ, ಮಹೇಶ್ ಉಪಸ್ಥಿತರಿದ್ದರು.
#MRPL#ONGC
ಒರಿಸ್ಸಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡ ಘಟನೆಯು ಅತೀವ ದುಃಖವನ್ನು ನೀಡಿದೆ. ಮೃತರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸುತ್ತಾ, ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
#TrainAccident#TrainAccidentInOdisha
ಮಹಾರಾಷ್ಟ್ರದ ಮಾಜಿ ಮಂತ್ರಿಗಳು ಹಾಗೂ ನಾಗಪುರದ ಶಾಸಕರಾದ
ಶ್ರೀ ಸುನಿಲ್ ಕೆದಾರ್ ಅವರೊಂದಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಸೆಂಟ್ರಲ್ ಮಾರ್ಕೆಟ್ ಪ್ರದೇಶದಲ್ಲಿ ಅಂಗಡಿಗಳಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಜೆ.ಆರ್ ಲೋಬೋ ಅವರ ಪರವಾಗಿ ಪ್ರಚಾರ ನಡೆಸಆಯಿತು.
@SunilKedar1111
ಎಐಸಿಸಿ ಜಿಲ್ಲಾ ಉಸ್ತುವಾರಿ ಮಹಾರಾಷ್ಟ್ರದ ಮಾಜಿ ಮಂತ್ರಿಗಳು ಹಾಗೂ ನಾಗಪುರದ ಶಾಸಕರಾದ ಶ್ರೀ ಸುನಿಲ್ ಕೆದಾರ್ ಅವರ ಜೊತೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿಗೆ ಭೇಟಿ ನೀಡಿ ಚುನಾವಣಾ ತಯಾರಿಯ ಬಗ್ಗೆ ಚರ್ಚೆ ನಡೆಸಲಾಯಿತು.
ಎಐಸಿಸಿ ಜಿಲ್ಲಾ ಉಸ್ತುವಾರಿ ಮಹಾರಾಷ್ಟ್ರದ ಮಾಜಿ ಮಂತ್ರಿಗಳು ಹಾಗೂ ನಾಗಪುರದ ಶಾಸಕರಾದ ಶ್ರೀ ಸುನಿಲ್ ಕೆದಾರ್ ಅವರು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಫಾರೂಕ್ ಪೆರ್ನೆ ಇವರ ನೇತೃತ್ವದಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು.
ಮಹಾರಾಷ್ಟ್ರದ ಮಾಜಿ ಮಂತ್ರಿಗಳು ಹಾಗೂ ನಾಗಪುರದ ಶಾಸಕರಾದ ಸುನಿಲ್ ಕೆದಾರ್ ಅವರು ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ .ಜಿ, ಕೆಪಿಸಿಸಿ ಉಸ್ತುವಾರಿ ನಂದಕುಮಾರ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.
ಮಹಾರಾಷ್ಟ್ರದ ಮಾಜಿ ಮಂತ್ರಿಗಳು ಹಾಗೂ ನಾಗಪುರದ ಶಾಸಕರಾದ ಸುನಿಲ್ ಕೆದಾರ್ ಅವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಹೊಯ್ಗೆ ಬಜಾರ್ ವಾರ್ಡ್ಗೆ ಭೇಟಿ ನೀಡಿ ಬೂತ್ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮಾನಂದ ಪೂಜಾರಿ,ಸೌಹಾನ್ ಎಸ್.ಕೆ, ವಾರ್ಡ್ ಅಧ್ಯಕ್ಷರಾದ ಶರತ್ ರಾವ್ ಹಾಜರಿದ್ದರು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೊಡಿಯಾಲ್ ಗುತ್ತು ಪ್ರದೇಶದಲ್ಲಿ ಮಹಾರಾಷ್ಟ್ರದ ಮಾಜಿ ಮಂತ್ರಿಗಳು ಹಾಗೂ ನಾಗಪುರದ ಶಾಸಕರಾದ ಶ್ರೀ ಸುನಿಲ್ ಕೆದಾರ್ ಅವರು ಮನೆ ಮನೆಗಳಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಜೆ.ಆರ್ ಲೋಬೋ ಅವರ ಪರವಾಗಿ ಪ್ರಚಾರ ನಡೆಸಿದರು. ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಹಿರೇಬಂಡಾಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಬ್ಲಾಕ್ ಅಧ್ಯಕ್ಷರಾದ ಕೆ. ಬಿ ರಾಜಾರಾಂ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಫಾರೂಕ್ ಪೆರ್ನೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವಾಲ್ ಬಿ.ಕೆ ಹಾಜರಿದ್ದರು.