ಮೈಸೂರಲ್ಲಿ ಹುಟ್ಟಿ, ತಂದೆಯವರ ಕೆಲಸದ ಕಾರಣಕ್ಕೆ ಕರ್ನಾಟಕದ ಉದ್ದಗಲಕ್ಕೂ ಶಾಲಾ ದಿನಗಳಲ್ಲಿ ಅಲೆಮಾರಿಯಂತೆ ಓಡಾಡುತ್ತ ಶಾಲೆ ಮುಗಿಸಿದ ಹುಡುಗನೊಬ್ಬ ಆ ದಿನಗಳಲ್ಲಿ ಕಲಿತದ್ದು ಭಾರತದ ಸಣ್ಣಪುಟ್ಟ ಊರುಗಳಲ್ಲಿ "ನಂಬಿಕೆ" ಅನ್ನುವುದು ಹೇಗೆ ಕೆಲಸ ಮಾಡುತ್ತೆ ಅನ್ನುವ ತಿಳುವಳಿಕೆ.
ಮುಂದೆ ಓದು ಮುಗಿಸಿ, ಸ್ಟಾರ್ಟ್ ಅಪ್ ಜಗತ್ತಿಗೆ ಕಾಲಿಟ್ಟು, ಎರಡು ಸೋಲುಗಳ ನಂತರ ಹೆಚ್ಚು ಕಡಿಮೆ ದಿವಾಳಿ ಹಂತಕ್ಕೆ ತಲುಪಿ, ಬ್ಯಾಂಕ್ ಖಾತೆಯಲ್ಲಿ ಕೇವಲ 800 ರೂಪಾಯಿ ಹಣವಿದ್ದಾಗಲೂ ಛಲ ಬಿಡದೆ ನುಗ್ಗಿ ಇಂದು ಭಾರತಾದ್ಯಂತ ಒಳ್ಳೆಯ ನಿದ್ದೆ ಮಾಡಬೇಕೆಂದರೆ, ಸಲೀಸಾಗಿ ಕೂತು ಕೆಲಸ ಮಾಡಬೇಕೆಂದರೆ ಒಳ್ಳೆಯ ಹಾಸಿಗೆ, ಫರ್ನಿಚರ್ ಇತ್ಯಾದಿಗಳನ್ನು ಅತ್ಯಂತ ಗುಣಮಟ್ಟದಲ್ಲಿ ಒದಗಿಸುವ ದೊಡ್ಡ ಬ್ರಾಂಡ್ ಕಟ್ಟಿದ್ದಾರೆ. ಕಳೆದ ವರ್ಷ ಐಪಿಓ ಕೂಡ ಆಗಿರುವ ಈ ಸಂಸ್ಥೆ ಕೆಲಸ ಮಾಡುತ್ತಿದ್ದ ನೂರಾರು ಉದ್ಯೋಗಿಗಳಿಗೆ ತಮ್ಮ ಸ್ವಂತ ಮನೆ ಕಟ್ಟಿಕೊಳ್ಳಲು, ಮಕ್ಕಳನ್ನು ಒಳ್ಳೆಯ ಶಾಲೆಯಲ್ಲಿ ಓದಿಸಲು ನೆರವಾಗಿದೆ.
@mundhebanni ಇಪ್ಪತ್ತೈದನೆಯ ಸಂಚಿಕೆಯಲ್ಲಿ ನಮ್ಮ ಜೊತೆಯಾಗಿದ್ದಾರೆ ವೇಕ್ ಫಿಟ್ ಸಂಸ್ಥೆಯ ಕೋ-ಫೌಂಡರ್ ಚೈತನ್ಯ ರಾಮಲಿಂಗೇಗೌಡ (@InfiniChai) ಅವರು. ಇಷ್ಟು ದೊಡ್ಡ ಸಂಸ್ಥೆಯ ಸ್ಥಾಪಕರಾದರು ಅವರಲ್ಲಿ ಒಬ್ಬ ಸಾಮಾನ್ಯ ಕನ್ನಡಿಗನಲ್ಲಿರುವ ವಿನಯ ಎದ್ದು ಕಾಣುತ್ತದೆ. ತುಂಬಿದ ಕೊಡ ತುಳುಕಲ್ಲ ಅಂತ ಇವರನ್ನು ನೋಡಿಯೇ ಹೇಳಿದ್ದು ಅನ್ನಿಸುತ್ತದೆ.
ಪೂರ್ತಿ ಸಂಚಿಕೆ ಈಗ ನಿಮ್ಮೆದುರು. ಲಿಂಕ್ ಮೊದಲ ಕಮೆಂಟಿನಲ್ಲಿದೆ..
🚀 ಈಗ ಅಮೇರಿಕಾದ ಷೇರು ಮಾರುಕಟ್ಟೆಯಲ್ಲಿ ಹೊಸದಾಗಿ ಬರುತ್ತಿರುವ ಸ್ಪೇಸ್ಎಕ್ಸ್ (SpaceX) IPO ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ ಆಗಲಿದೆ.
📌 ಒಟ್ಟಾರೆ Issue price - $75 ಬಿಲಿಯನ್
📌 ಇರುವ ಬೇಡಿಕೆ -$300 ಬಿಲಿಯನ್
- ಇದು ವಿಶ್ವದ ಹಲವು ದೇಶಗಳ ಒಟ್ಟು ಷೇರು ಮಾರುಕಟ್ಟೆ ಮೌಲ್ಯಕ್ಕಿಂತಲೂ ದೊಡ್ಡದಾಗಿದೆ 🌍
ಸ್ಪೇಸ್ಎಕ್ಸ್ ಒಳಗಿನ ಚಿತ್ರಣ-
- 4,400+ ಹಾಲಿ ಮತ್ತು ಮಾಜಿ ಉದ್ಯೋಗಿಗಳು ಮಿಲಿಯನೇರ್ಗಳಾಗಬಹುದು 💰
- ನೂರಾರು ಉದ್ಯೋಗಿಗಳು $100 ಮಿಲಿಯನ್ಗಿಂತಲೂ ಹೆಚ್ಚು ಮೌಲ್ಯದ ಈಕ್ವಿಟಿ ಹೊಂದಿದ್ದಾರೆ.
✅ $300 ಬಿಲಿಯನ್ ಎಂಬುದು ಹಲವಾರು ರಾಷ್ಟ್ರಗಳ ಜಿಡಿಪಿಗಿಂತ (GDP) ಹೆಚ್ಚಾಗಿದೆ
✅ ಮಿಲಿಯನೇರ್ ಆಗಲಿರುವ ಉದ್ಯೋಗಿಗಳ ಸಂಖ್ಯೆ ಹಲವು ಸಣ್ಣ ಪಟ್ಟಣಗಳ ಜನಸಂಖ್ಯೆಗಿಂತ ದೊಡ್ಡದಾಗಿರಬಹುದು.
✅ಆರಂಭದಲ್ಲಿ ಬಂಡವಾಳಕ್ಕಾಗಿ ಪರದಾಡುತ್ತಿದ್ದ (cash burning) ಸ್ಟಾರ್ಟ್ಅಪ್ ಹಂತದಿಂದ ಶುರು ಆಗಿ ಸಿಲಿಕಾನ್ ವ್ಯಾಲಿಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಉದ್ಯೋಗಿ ಸಂಪತ್ತು ಸೃಷ್ಟಿಸಿದ ಯಶೋಗಾಥೆಯಾಗಿ ಸ್ಪೇಸ್ಎಕ್ಸ್ ಇಂದು ಬೆಳೆದು ನಿಂತಿದೆ. 🚀
✅ನಿಮ್ಮ ಸಂಪೂರ್ಣ ಹಣವನ್ನು ಕಳೆದುಕೊಳ್ಳದಂತೆ ಉಳಿಸುವ 'ಮ್ಯಾಜಿಕ್ ಫಾರ್ಮುಲಾ'
ನೀವು ಹೊಸ ಮನೆ ಕಟ್ಟುವಾಗ ನಿಮಗೆ ಬೇಕಾದ ರೀತಿಯಲ್ಲಿ, ನಿಮ್ಮ ಫ್ಯಾಮಿಲಿ ಅಲ್ಲಿ ಎಷ್ಟು ಜನ ಇದಾರೆ,ನಿಮ್ಮ ಬಜೆಟ್ ಎಷ್ಟಿದೆ,ನಿಮ್ಮ ಸೈಟ್ ಅಳತೆ ಎಷ್ಟಿದೆ ಇದರ ಆಧಾರದ ಮೇಲೆ ಒಂದು ಪ್ಲಾನ್ ಮಾಡುತ್ತೀರಾ.
ಅದರ ಆಧಾರದ ಮೇಲೆ ಹೊಸ ಮನೆ ಕಟ್ಟಲು ಶುರು ಮಾಡುತ್ತೀರಿ.
ಅದೇ ತರಹ ಸ್ಟಾಕ್ ಮಾರ್ಕೆಟ್ ಕೂಡ.ನಿಮ್ಮ ಬಳಿ ಇರುವ ಹಣದ ಆಧಾರದ ಮೇಲೆ ಷೇರುಗಳನ್ನು ಖರೀದಿ ಮಾಡಿ.ಇದನ್ನೇ Position Size ಅಂತ ಕರೆಯುತ್ತಾರೆ.
ನಿಮ್ಮ ಬಳಿ ಇರುವ ಹಣ,ನೀವು Risk ತೆಗೆದುಕೊಳ್ಳುವ ಸಾಮರ್ಥ್ಯ, ಒಟ್ಟಾರೆ ಸ್ಟಾಕ್ ಮಾರ್ಕೆಟ್ ಪರಿಸ್ಥಿತಿ ನೋಡಿಕೊಂಡು ಹಣ ಹೂಡಿಕೆ ಮಾಡುವುದು.
Position Sizing ಅಂದರೆ, ನಿಮ್ಮ ಒಟ್ಟು ಹೂಡಿಕೆ ಬಂಡವಾಳದಲ್ಲಿ (Total Capital) ಒಂದು ನಿರ್ದಿಷ್ಟವಾದ ಟ್ರೇಡ್ಗಾಗಿ (Single Trade) ಅಥವಾ ಷೇರುಗಳ ಖರೀದಿಗಾಗಿ ಎಷ್ಟು ಹಣವನ್ನು ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆ.
ನಿಮ್ಮ ಬಳಿ 1 ಲಕ್ಷ ರೂಪಾಯಿ ಇದೆ ಅಂದುಕೊಳ್ಳಿ.
ಎಲ್ಲಾ ಹಣವನ್ನು ಒಂದೇ ಷೇರಿನಲ್ಲಿ ಹಾಕುವ ಬದಲು ಸ್ವಲ್ಪ ಪ್ರಮಾಣದ ಅಂದ್ರೆ 25% -30% ಹಣವನ್ನು ಹೂಡಿಕೆ ಮಾಡುವುದು.
ಷೇರಿನ ಏರಿಕೆ ಇಳಿಕೆ ನೋಡಿಕೊಂಡು ಮತ್ತಷ್ಟು ಹಣವನ್ನು ನಿಧಾನಕ್ಕೆ ಹೂಡಿಕೆ ಮಾಡ್ತಾ ಹೋಗುವುದು.
ಇದರ ಮುಖ್ಯ ಉದ್ದೇಶ- ನಿಮ್ಮ ಒಟ್ಟಾರೆ ಹಣವನ್ನು ಸಂರಕ್ಷಿಸುವುದು (Capital Protection).
ಯಾವುದೇ ಒಂದು ಷೇರಿನಲ್ಲಿ ದೊಡ್ಡ ನಷ್ಟವಾದರೂ, ನಿಮ್ಮ ಒಟ್ಟಾರೆ ಹಣ ದೊಡ್ಡ ಮಟ್ಟದಲ್ಲಿ loss ಆಗದಂತೆ ನೋಡಿಕೊಳ್ಳುವುದು.
1. 💰 ಒಟ್ಟು ಬಂಡವಾಳ (Total Capital/Account Size)
ನಿಮ್ಮ ಬಳಿ ಹೂಡಿಕೆ ಮಾಡಲು ಲಭ್ಯವಿರುವ ಒಟ್ಟು ಹಣ ಎಷ್ಟು ಎಂದು ಮೊದಲು ನಿರ್ಧರಿಸಿ.
ಉದಾಹರಣೆಗೆ: ನಿಮ್ಮ ಟ್ರೇಡಿಂಗ್ ಖಾತೆಯಲ್ಲಿರುವ ಒಟ್ಟು ಹಣ ₹1,00,000 ಆಗಿರಬಹುದು.
2. 🛡️ ರಿಸ್ಕ್ ಪರ್ ಟ್ರೇಡ್ (Risk per Trade - % of Capital)
ಯಾವುದೇ ಒಂದು ಟ್ರೇಡ್ನಲ್ಲಿ ನಷ್ಟ ಸಂಭವಿಸಿದರೆ, ನಿಮ್ಮ ಒಟ್ಟು ಬಂಡವಾಳದಲ್ಲಿ ಎಷ್ಟು ಶೇಕಡಾ ಹಣವನ್ನು ಕಳೆದುಕೊಳ್ಳಲು ನೀವು ಸಿದ್ಧರಿದ್ದೀರಾ ಎಂಬುದನ್ನು ಮೊದಲೇ ನಿರ್ಧರಿಸಬೇಕು.ಇದು Position Sizing ನ ಅತಿ ಮುಖ್ಯವಾದ ಅಂಶ.
Rule of Thumb- ಯಾವುದೇ ಒಂದು ಟ್ರೇಡ್ನಲ್ಲಿ ಒಟ್ಟು ಹಣದ 1% ರಿಂದ 2% ಕ್ಕಿಂತ ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ಇರುವುದು.
ಲೆಕ್ಕಾಚಾರ-
ಒಟ್ಟು ಹಣ = ₹1,00,000
ಪ್ರತಿ ಟ್ರೇಡ್ ಗೆ ನೀವು ತೆಗೆದುಕೊಳ್ಳುವ ರಿಸ್ಕ್ = 2%
1,00,000*0.02 =2,000
ಇದು ನಿಮ್ಮ ಒಟ್ಟು ಬಂಡವಾಳದಲ್ಲಿ ಆ ಟ್ರೇಡ್ಗಾಗಿ ನೀವು ಕಳೆದುಕೊಳ್ಳಬಹುದಾದ ಗರಿಷ್ಠ ಹಣ.
ಮನೆಯನ್ನು ಕಟ್ಟುವ ಮುನ್ನ ಬಜೆಟ್ ಮತ್ತು ಸೈಜ್ ಅನ್ನು ಹೇಗೆ ನಿರ್ಧರಿಸುತ್ತೇವೆಯೋ, ಅದೇ ರೀತಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಪೊಸಿಷನ್ ಸೈಜಿಂಗ್ ಅನ್ನು ನಿರ್ಧರಿಸುವುದು ಅತ್ಯಂತ ಮುಖ್ಯ. ಇದು ಕೇವಲ ಟ್ರೇಡಿಂಗ್ ತಂತ್ರವಲ್ಲ, ಬದಲಿಗೆ ನಿಮ್ಮ ಬಂಡವಾಳವನ್ನು ದೀರ್ಘಕಾಲದವರೆಗೆ ಸಂರಕ್ಷಿಸುವ ಒಂದು ರಿಸ್ಕ್ ಮ್ಯಾನೇಜ್ಮೆಂಟ್ನ ಮೂಲಭೂತ ನಿಯಮವಾಗಿದೆ.
Like, Share, Retweet ❤️ 💚
👇👇
Start reading charts every day.
At first, all you see are candles, lines, and noise.
But over time, something changes.
Day after day, chart after chart, your eyes begin to spot patterns automatically.
That’s not talent.
That’s experience.
That’s muscle memory being built.
Don’t think in days.
Don’t think in weeks.
Think in decades.
It’s not about how much you make this week.
It’s about how much you learn today and how much you can earn over the next 25–30 years.
Trading and investing are not get-rich-quick schemes.
They are lifelong skills.
The field is wide open.
The internet is free.
The knowledge is available.
The opportunity is unlimited.
Go explore.
Go experiment.
Go fail.
Go learn.
Go build.
Most people spend their lives working for money.
A few learn the skill of making money work for them.
Learn it.
Master it.
Make money. 💰
The charts may look the same every day. But if you pay attention, every day they teach you something new.📈💰
Let's start,try 🔥🔥
ಇವೆಲ್ಲ simple fundamental checklist.. ಇಲ್ಲಿಂದ ನಿಮ್ಮ ಕಲಿಕೆ ಶುರು ಮಾಡಿ.
The "Step-by-Step Guide"
ಸ್ಟಾಕ್ ಮಾರ್ಕೆಟ್ನಲ್ಲಿ ಲಾಭ ಮಾಡಬೇಕೇ? ಹಾಗಾದ್ರೆ Fundamental Analysis ಕಲಿಯಿರಿ! 📈✅
ಕಂಪನಿಯ Sales ಇಂದ ಹಿಡಿದು Shareholding pattern ವರೆಗೆ, https://t.co/8kHcsC9QxS ಮೂಲಕ ಸುಲಭವಾಗಿ ಅನಾಲಿಸಿಸ್ ಮಾಡುವುದು ಹೇಗೆ?
ಹೂಡಿಕೆದಾರರೇ, ಈ ಪೋಸ್ಟ್ ನಿಮಗಾಗಿ! 💎
Fundamentals of Stocks - Basics
ಯಾವುದೇ ಒಂದು ಸ್ಟಾಕ್ ಅನ್ನು Fundamental Analysis ಮೂಲಕ ಹೇಗೆ ನೋಡಬಹುದು?
https://t.co/8kHcsC9QxS Website ಮೂಲಕ ಒಂದು ಕಂಪನಿಯ ಒಟ್ಟಾರೆ Fundamental Analysis ಮಾಡಬಹುದು.
Step 1-
1. ಒಂದು ಕಂಪನಿಯ ಮಾರುಕಟ್ಟೆ ಮೌಲ್ಯ ಎಷ್ಟಿದೆ ಅಂತ ಮೊದಲು ನೋಡಿ.
Market Cap of a Company.
ಇದು ಕಂಪನಿಯ ಗಾತ್ರವನ್ನು ತಿಳಿಸುತ್ತದೆ (Large Cap, Mid Cap ಅಥವಾ Small Cap).
https://t.co/1qhPgHfAeo
2.ROE ಮತ್ತು ROCE ಎಷ್ಟಿದೆ ಅನ್ನುವುದನ್ನು ನೋಡಿ.
ಇವು ಕನಿಷ್ಠ 15% ರಿಂದ 20% ಕ್ಕಿಂತ ಹೆಚ್ಚಿದ್ದರೆ ಕಂಪನಿಯು ತನ್ನ ಬಂಡವಾಳವನ್ನು ಸಮರ್ಥವಾಗಿ ಬಳಸುತ್ತಿದೆ ಎಂದರ್ಥ.
ROE -
https://t.co/3SvqUw8g5G
ROCE -
https://t.co/mSm5JzKAaE
3.EPS growth 💹 Earnings Per Share ಎಷ್ಟಿದೆ ಅನ್ನುವುದನ್ನು ನೋಡಿ.
ಪ್ರತಿ ಷೇರಿನ ಮೇಲಿನ ಗಳಿಕೆಯು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರಬೇಕು.
4.P/E ಮತ್ತು PEG Ratio ಎಷ್ಟಿದೆ ನೋಡಿ.
ಒಂದೇ Sector ಅಲ್ಲಿ ಇರುವ ಇತರ ಕಂಪನಿಗಳ ಜೊತೆ
PE Ratio ಪರಿಶೀಲನೆ ಮಾಡಿ.
PE Ratio
https://t.co/LZc09S5ViE
PEG -
https://t.co/jTkkULAj9S
Sectoral PE
https://t.co/WKuuXnWOyh
5.ಒಂದು ಕಂಪನಿಯ Sales Growth 📈 ಎಷ್ಟಿದೆ ಅನ್ನುವುದನ್ನು ನೋಡಿ.
Sales Growth -
https://t.co/O5WFaVQLX3
ಇದು ಮೊದಲ ಹಂತ.
ನಂತರದ ಅತಿ ಮುಖ್ಯ ಹಂತಗಳು -
1. ತ್ರೈಮಾಸಿಕ ಫಲಿತಾಂಶ Quarterly Results ನೋಡಿ. ಇದು ಅತಿ ಮುಖ್ಯ.
ಇದರಲ್ಲಿ ಕಂಪನಿಯು 3 ತಿಂಗಳ ಅವಧಿಯಲ್ಲಿ ಮಾರಾಟ ಮಾಡಿದ Sales ನೋಡಿ.
ಒಂದು ತ್ರೈಮಾಸಿಕ ಅವಧಿಯ ಫಲಿತಾಂಶ ಅನ್ನು ಇದರ ಹಿಂದಿನ ತ್ರೈಮಾಸಿಕ ಅವಧಿಯ ಫಲಿತಾಂಶದೊಂದಿಗೆ ಹೋಲಿಕೆ ಮಾಡಿ.
ತ್ರೈಮಾಸಿಕ ಫಲಿತಾಂಶ ಹೇಗೆ ಓದಬೇಕು?
https://t.co/uqHT9PjvnJ
Sales Growth (ಮಾರಾಟದ ಬೆಳವಣಿಗೆ)- ಕಂಪನಿಯ ಮಾರಾಟವು ಪ್ರತಿ ವರ್ಷ (YoY) ಮತ್ತು ಪ್ರತಿ ತ್ರೈಮಾಸಿಕದಲ್ಲಿ (QoQ) ಹೆಚ್ಚಾಗುತ್ತಿರಬೇಕು.
Compare QoQ.
ಹೆಚ್ಚಾಗಿದೆಯೋ ಅಥವಾ ಇಲ್ಲವೋ ಅನ್ನುವುದು ಅತಿ ಮುಖ್ಯ.
2.ಒಂದು ತ್ರೈಮಾಸಿಕ ಅವಧಿಯಿಂದ ಇನ್ನೊಂದು ತ್ರೈಮಾಸಿಕ ಅವಧಿಗೆ ಹೆಚ್ಚಾಗಿದೆಯೋ ಇಲ್ಲವೋ ಪರಿಶೀಲನೆ ಮಾಡಿ.
QoQ should increase.
3. OPM ಅಂದ್ರೆ Operating Profit Margin.
ಇದರ Percentage ನೋಡಿ. ಇದು ಹೆಚ್ಚಾಗ್ತಾ ಇದೇನೋ ಅಥವಾ ಕಡಿಮೆ ಆಗ್ತಾ ಇದೇನೋ ಅದು ಅತಿ ಮುಖ್ಯ.
OPM ಕಂಪನಿಯ ಕೆಲಸದ ದಕ್ಷತೆಯನ್ನು ತೋರಿಸುತ್ತದೆ. ಮಾರ್ಜಿನ್ ಸ್ಥಿರವಾಗಿದ್ದರೆ ಅಥವಾ ಹೆಚ್ಚಾಗುತ್ತಿದ್ದರೆ ಕಂಪನಿಗೆ ಮಾರುಕಟ್ಟೆಯಲ್ಲಿ ಉತ್ತಮ ಹಿಡಿತವಿದೆ ಎಂದು ಅರ್ಥ.
4.ಇದರ ಜೊತೆಗೆ EBITDA & PAT growth 📈💹
ಎಷ್ಟಿದೆ ನೋಡಿ.
ತೆರಿಗೆಯ ನಂತರದ ನಿವ್ವಳ ಲಾಭ (Profit After Tax) ಹೆಚ್ಚಾಗುತ್ತಿರಬೇಕು.
ಇದನ್ನು QoQ ಜೊತೆಗೆ YoY ಜೊತೆ ಹೋಲಿಕೆ ಮಾಡಿ ನೋಡಿ.
Next Step-
ಆಸ್ತಿ ಮತ್ತು ಹೊಣೆಗಾರಿಕೆ (Balance Sheet Analysis)
ಕೇವಲ ಲಾಭ ನೋಡಿದರೆ ಸಾಲದು, ಕಂಪನಿಯ ಆಸ್ತಿಗಳ ಬಗ್ಗೆಯೂ ತಿಳಿಯಿರಿ.
Reserves: ಕಂಪನಿಯ ಬಳಿ ಇರುವ ನಗದು ಮೀಸಲು ನಿಧಿ ಹೆಚ್ಚಾಗುತ್ತಿದೆಯೇ?
Borrowings: ಸಾಲಗಳು ಕಾಲಕ್ರಮೇಣ ಕಡಿಮೆಯಾಗುತ್ತಿವೆಯೇ ಎಂದು ನೋಡಿ.
Cash Flow from Operations: ಕಂಪನಿಯು ನಿಜವಾಗಿಯೂ ನಗದು ರೂಪದಲ್ಲಿ ಲಾಭ ಗಳಿಸುತ್ತಿದೆಯೇ ಅಥವಾ ಕೇವಲ ಲೆಕ್ಕಪತ್ರದಲ್ಲಿ ಮಾತ್ರ ತೋರಿಸುತ್ತಿದೆಯೇ ಎಂದು ಇಲ್ಲಿ ತಿಳಿಯುತ್ತದೆ. ನಗದು ಹರಿವು (Cash Flow) ಪಾಸಿಟಿವ್ ಆಗಿರಬೇಕು.
Next Step-
Shareholdeing patterns ನೋಡಿ.
ಅಂದ್ರೆ ಕಂಪನಿಯಲ್ಲಿ ಮಾಲೀಕರು Owner ಎಷ್ಟು ಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ.
60 ರಿಂದ 70% ವರೆಗೆ ಇದ್ದರೆ ಉತ್ತಮ.
ಇದರ ಜೊತೆಗೆ FIIs ಅಂದ್ರೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು,DIIs ದೇಶಿಯ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಎಷ್ಟು ಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ ಅನ್ನುವುದನ್ನು ಕೂಡ ನೋಡಿ.
ಇತ್ತೀಚಿನ ದಿನಗಳಲ್ಲಿ ಅವರು ಮಾರಾಟ ಮಾಡಿದ ಪ್ರಮಾಣ,ಮಾರಾಟ ಮಾಡಿದ ಪ್ರಮಾಣ ಇದರಲ್ಲಿ ಗೊತ್ತಾಗುತ್ತೆ.
ಒಂದು ಕಂಪನಿಯ ಆರ್ಥಿಕ ಸ್ಥಿತಿಗತಿಯನ್ನು ಅಳೆಯಲು https://t.co/8kHcsC9QxS ಒಂದು ಅತ್ಯುತ್ತಮ ಸಾಧನ. ಹೂಡಿಕೆ ಮಾಡುವ ಮುನ್ನ ಈ ಮೇಲಿನ ಅಂಶಗಳನ್ನು ಗಮನಿಸಿ.
ಇವೆಲ್ಲಾ Simple things.. ಇಲ್ಲಿಂದ ನಿಮ್ಮ Fundamental Analysis ಶುರು ಮಾಡಿ.ಇದನ್ನು @babruvahanaa share ಮಾಡಿದ್ದಾರೆ.
ಇವುಗಳನ್ನು ಹೇಳೋಕೆ 20-30 ಸಾವಿರ ಕೋರ್ಸ್ ಬೇರೆ ಇವೆ.ಅದೆಲ್ಲ ಬೇಕಾಗಿಲ್ಲ.
Simple ಆಗಿ ನೀವೇ ಕಲಿಯಬಹುದು.
🚦ಸಿಗ್ನಲ್ ಜಂಪ್ ಮಾಡುವುದರಿಂದ ಕೆಲವು ಕ್ಷಣಗಳು ಉಳಿಯಬಹುದು...
ಆದರೆ ಒಂದು ಜೀವ ಕಳೆದುಕೊಳ್ಳುವ ಅಪಾಯ ಹೆಚ್ಚಾಗುತ್ತದೆ.
ಕೆವಲ 2 ಸೆಕೆಂಡ್ಗಳ ತಾಳ್ಮೆ ಇರಲಿ,
ಸುರಕ್ಷಿತವಾಗಿ ಮನೆ ಸೇರಿ. 🏠
1/1
PE Ratio
https://t.co/hTSORtZRPW
Sectoral PE
https://t.co/lsfswA6OzD
ROE
https://t.co/xalGlhd70s
ROCE
https://t.co/GUKUwx6mf5
Debt to Equity Ratio
https://t.co/I97PSXpa3F
PEG Ratio
https://t.co/h1YmqixGOG
Sales Growth
https://t.co/xibIrDJ1J1
ಷೇರು ಮಾರುಕಟ್ಟೆಗೆ ಸಂಬಂಧಪಟ್ಟ ಕೆಲವು Basics ತಿಳಿದುಕೊಳ್ಳಿ..
Fundamental Analysis ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಬರೆದಿರುವ ಪೋಸ್ಟ್ ಗಳಿಂದ ಶುರು ಮಾಡಿ..
PE,PEG,SectoralPE, ROE,ROCE,DE Ratio, Sales Growth,M Cap 👇👇
(Retweet+Bookmark 🔖)
ಫಂಡಮೆಂಟಲ್ ಅನಾಲಿಸಿಸ್ (Fundamental Analysis) ಎಂಬುದು ಲಾಂಗ್ ಟರ್ಮ್ ಹೂಡಿಕೆಗೆ ಒಂದು ಗಟ್ಟಿ ಅಡಿಪಾಯ ಇದ್ದಂತೆ. ಬರೀ ಟಿಪ್ಸ್ ನಂಬಿ ಹಣ ಕಳೆದುಕೊಳ್ಳುವುದಕ್ಕಿಂತ, ಸ್ವತಃ Analysis ಮಾಡುವುದನ್ನು ಕಲಿಯಿರಿ.
ಒಂದೊಂದಾಗಿ ಓದಿ ನಿಮ್ಮದೇ ಆದ ನೋಟ್ಸ್ ಮಾಡಿಕೊಳ್ಳಿ.
ಸ್ಟಾಕ್ ಮಾರ್ಕೆಟ್ ಅಲ್ಲಿ retailers ಹಣ ಕಳೆದುಕೊಳ್ಳಲು ಮುಖ್ಯ ಕಾರಣ ಅಂದ್ರೆ ಸುಮ್ಮನೆ ತಮ್ಮ ಹತ್ತಿರ ಹಣ ಇದ್ದಾಗ ಯಾವುದೋ ಒಂದು ಸ್ಟಾಕ್ Buy ಮಾಡೋದು.
ತಮ್ಮ ಹತ್ತಿರ ಇರುವ ಒಟ್ಟಾರೆ ಹಣದಲ್ಲಿ ಎಷ್ಟು Buy ಮಾಡಬೇಕು ಅನ್ನೋದನ್ನು ಲೆಕ್ಕ ಹಾಕುವುದಿಲ್ಲ. ಸುಮ್ಮನೆ Random ಆಗಿ Buy ಮಾಡ್ತಾ ಹೋಗೋದು.
- ಯಾವುದೇ ಸ್ಪಷ್ಟ ಯೋಜನೆಯಿಲ್ಲದೆ, ಕೇವಲ ತಮ್ಮ ಟ್ರೇಡಿಂಗ್ ಅಕೌಂಟ್ನಲ್ಲಿ ಹಣವಿದೆ ಎಂಬ ಒಂದೇ ಕಾರಣಕ್ಕೆ ಯಾವುದೋ ಒಂದು ಷೇರನ್ನು ಖರೀದಿಸುವುದು (Random Buying).
- ತಮ್ಮ ಒಟ್ಟು ಬಂಡವಾಳದಲ್ಲಿ ಒಂದು ನಿರ್ದಿಷ್ಟ ಟ್ರೇಡ್ಗೆ ಎಷ್ಟು ಹಣವನ್ನು ಹಂಚಿಕೆ ಮಾಡಬೇಕು ಎಂಬ ಕನಿಷ್ಠ ಲೆಕ್ಕಾಚಾರವೂ ಇಲ್ಲದೆ, ಮನಬಂದಂತೆ ಷೇರುಗಳನ್ನು Buy ಮಾಡುತ್ತ ಹೋಗುವುದೇ ಬಹುತೇಕರು ಮಾಡುವ ಅತಿ ದೊಡ್ಡ ತಪ್ಪು.
ಷೇರು ಮಾರುಕಟ್ಟೆಯಲ್ಲಿ ದೀರ್ಘಕಾಲ ಉಳಿದು ಹಣ ಗಳಿಕೆ ಮಾಡಬೇಕು ಅಂದ್ರೆ, ನೀವು ಕಲಿಯಲೇಬೇಕಾದ ಅತ್ಯಂತ ಪ್ರಮುಖ ಸೂತ್ರ ಎಂದರೆ 'ಪೊಸಿಷನ್ ಸೈಜಿಂಗ್' (Position Sizing).
ಷೇರು ಮಾರುಕಟ್ಟೆಯಲ್ಲಿ 'ಪೊಸಿಷನ್ ಸೈಜಿಂಗ್' (Position Sizing) ಅಂದ್ರೆ ನೀವು ಟ್ರೇಡ್ ತೆಗೆದುಕೊಳ್ಳುವ ಮೊದಲು, ನಿಮ್ಮ ಒಟ್ಟು ಬಂಡವಾಳದಲ್ಲಿ ಎಷ್ಟು ಹಣವನ್ನು ಅಪಾಯಕ್ಕೆ (Risk) ಒಡ್ಡುತ್ತಿದ್ದೀರಿ ಎಂದು ನಿರ್ಧರಿಸುವುದು. ನಿಮ್ಮ ಪೋರ್ಟ್ಫೋಲಿಯೊದ ಸಣ್ಣ ಶೇಕಡಾವಾರು ಹಣದಲ್ಲಿ ರಿಸ್ಕ್ ತೆಗೆದುಕೊಂಡು ಹಣ ಹೂಡಿಕೆ ಮಾಡಬೇಕು. ನಿಮ್ಮ ಹತ್ತಿರ ಇರುವ ದೊಡ್ಡ ಮೊತ್ತವನ್ನಲ್ಲ.
ಉದಾಹರಣೆ (1% ರಿಸ್ಕ್ ಮತ್ತು 4% ಸ್ಟಾಪ್-ಲಾಸ್)
ಒಬ್ಬ ಟ್ರೇಡರ್ ಬಳಿ ಇರುವ ಬಂಡವಾಳ ಮತ್ತು ಎಷ್ಟು ರಿಸ್ಕ್ ತೆಗೆದುಕೊಳ್ಳುತ್ತಾನೆ ಎಂಬುದನ್ನು ಲೆಕ್ಕಾಚಾರ ಹಾಕೋಣ.
ಒಟ್ಟು ಬಂಡವಾಳ (Portfolio)- ₹5,00,000
ಪ್ರತಿ ಟ್ರೇಡ್ಗೆ ರಿಸ್ಕ್ (Risk per trade) -1% (ಅಂದರೆ ₹5,000)
ಸ್ಟಾಪ್-ಲಾಸ್ (Stop-Loss)- 4% ರಿಂದ 5%
//Stoploss ಯಾಕೆ ಬಳಕೆ ಮಾಡಬೇಕು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.
https://t.co/HaAztc2WFT
https://t.co/XxIedP88Gw
https://t.co/o76Vp2Tge5 //
ಈಗ ಸೂತ್ರವನ್ನು ಅನ್ವಯಿಸಿದಾಗ-
ಪೊಸಿಷನ್ ಸೈಜ್ % = 1% / 4% = 25%
ಹೂಡಿಕೆ ಮಾಡಬೇಕಾದ ಮೊತ್ತ (Position Size in ₹) = ₹5,00,000 ದ 25% = ₹1,25,000
ನೀವು ₹1,25,000 ಮೌಲ್ಯದ ಷೇರುಗಳನ್ನು ಖರೀದಿಸಿದಾಗ, ಒಂದು ವೇಳೆ ಮಾರುಕಟ್ಟೆ ನಿಮ್ಮ ವಿರುದ್ಧವಾಗಿ ಹೋಗಿ 4% ಸ್ಟಾಪ್-ಲಾಸ್ ಹಿಟ್ ಆದರೆ, ನಿಮ್ಮ ನಷ್ಟ ಕೇವಲ ₹5,000 ಆಗಿರುತ್ತದೆ. ಇದು ನಿಮ್ಮ ಒಟ್ಟು ಬಂಡವಾಳದ 1% ಹಣ ಮಾತ್ರ.
ವಿವಿಧ ರಿಸ್ಕ್ ಮಿತಿಗಳಿಗೆ ಲೆಕ್ಕಾಚಾರ (ಒಟ್ಟು ಬಂಡವಾಳ ₹5,00,000 ಇದ್ದಾಗ)
1. 0.5% ರಿಸ್ಕ್ (₹2,500) & 4% ಸ್ಟಾಪ್-ಲಾಸ್ ಇದ್ದರೆ-
ಪೊಸಿಷನ್ ಸೈಜ್ = 12.5%
ಹೂಡಿಕೆ ಮೊತ್ತ = ₹62,500
2. 1% ರಿಸ್ಕ್ (₹5,000) & 4% ಸ್ಟಾಪ್-ಲಾಸ್ ಇದ್ದರೆ-
ಪೊಸಿಷನ್ ಸೈಜ್ = 25%
ಹೂಡಿಕೆ ಮೊತ್ತ = ₹1,25,000
3. 2% ರಿಸ್ಕ್ (₹10,000) & 4% ಸ್ಟಾಪ್-ಲಾಸ್ ಇದ್ದರೆ-
ಪೊಸಿಷನ್ ಸೈಜ್ = 50%
ಹೂಡಿಕೆ ಮೊತ್ತ = ₹2,50,000
ಪೊಸಿಷನ್ ಸೈಜಿಂಗ್ ಏಕೆ ಮುಖ್ಯ?
ಬಂಡವಾಳದ ರಕ್ಷಣೆ (Protects Your Capital)-ಇದು ನಿಮ್ಮ ನಷ್ಟವನ್ನು ಕಡಿಮೆ ಮಾಡುತ್ತದೆ
ಮತ್ತು ಷೇರು ಮಾರುಕಟ್ಟೆಯಲ್ಲಿ ದೀರ್ಘಕಾಲ ಉಳಿದು ಹಣ ಗಳಿಕೆ ಮಾಡಲು ಸಹಾಯ ಮಾಡುತ್ತದೆ.
Controls Drawdowns- ಪ್ರತಿ ಟ್ರೇಡ್ಗೆ ಸಣ್ಣ ರಿಸ್ಕ್ ತೆಗೆದುಕೊಳ್ಳುವುದರಿಂದ, ಒಂದು ವೇಳೆ ಸತತ ನಷ್ಟಗಳಾದರೂ (Losing streak), ಒಟ್ಟಾರೆ ಹಣಕ್ಕೆ ದೊಡ್ಡ ಹೊಡೆತ ಬೀಳುವುದಿಲ್ಲ ಮತ್ತು ಸುಲಭವಾಗಿ ರಿಕವರಿ ಮಾಡಬಹುದು.
ಶಿಸ್ತು ಮೂಡಿಸುತ್ತದೆ (Improves Discipline)-ರಿಸ್ಕ್ ಕಡಿಮೆಯಿದ್ದಾಗ ಟ್ರೇಡರ್ಗಳ ಭಾವನೆಗಳು (Emotions) ನಿಯಂತ್ರಣದಲ್ಲಿರುತ್ತವೆ. ಭಯ ಅಥವಾ ದುರಾಸೆ ಇಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ದೀರ್ಘಕಾಲೀನ ಬೆಳವಣಿಗೆ (Enables Long-Term Growth)- ನಿರಂತರವಾಗಿ ಸಣ್ಣ ರಿಸ್ಕ್ ಮತ್ತು ಉತ್ತಮ ಟ್ರೇಡಿಂಗ್ ತಂತ್ರವು ಕಾಂಪೌಂಡಿಂಗ್ (Compounding) ಮೂಲಕ ಸಂಪತ್ತು ಸೃಷ್ಟಿಸಲು ನೆರವಾಗುತ್ತದೆ.
ವಿವಿಧ ರೀತಿಯ ಟ್ರೇಡರ್ಗಳು ತಮ್ಮ ಶೈಲಿಗೆ ತಕ್ಕಂತೆ ರಿಸ್ಕ್ ಮಿತಿಯನ್ನು ಹಾಕಿಕೊಳ್ಳಬಹುದು.
ವೃತ್ತಿಪರ ಸ್ವಿಂಗ್ ಟ್ರೇಡರ್ (Professional Swing Trader)- 0.5% ರಿಂದ 1%
Conservative traders - 0.25% ರಿಂದ 0.5%
Agressive traders-1% ರಿಂದ 2%
ಮೊದಲು ನಿಮ್ಮ ರಿಸ್ಕ್ ನಿರ್ಧರಿಸಿ (ಹೆಚ್ಚಿನವರಿಗೆ 0.5% - 1% ಸೂಕ್ತ).
ಯಾವಾಗಲೂ ಚಾರ್ಟ್ ಸ್ಟ್ರಕ್ಚರ್ (Chart Structure) ಅಥವಾ ಪ್ರೈಸ್ ಆಕ್ಷನ್ ಆಧಾರದ ಮೇಲೆ ಸ್ಟಾಪ್-ಲಾಸ್ ನಿರ್ಧರಿಸಿ, ಕೇವಲ ನಿಮ್ಮ ಬಳಿ ಇರುವ ಹಣದ ಆಧಾರದ ಮೇಲಲ್ಲ.
ಪ್ರತಿ ಬಾರಿ ಟ್ರೇಡ್ ಮಾಡುವಾಗಲೂ ಪೊಸಿಷನ್ ಸೈಜ್ ಲೆಕ್ಕ ಹಾಕಿ.
ನಿಮ್ಮ ಟ್ರೇಡಿಂಗ್ ಯೋಜನೆಯಿಂದ ವಿಚಲಿತರಾಗಬೇಡಿ. ನಿರಂತರತೆ (Consistency) ಮಾರುಕಟ್ಟೆಯಲ್ಲಿ ನಿಮ್ಮ ಅತಿ ದೊಡ್ಡ ಅಸ್ತ್ರ.
ಟ್ರೇಡಿಂಗ್ನ ನಿಯಮ (Risk First)-
ಮೊದಲು ರಿಸ್ಕ್ ➔ ನಂತರ ಸ್ಟಾಪ್-ಲಾಸ್ ➔ ಪೊಸಿಷನ್ ಸೈಜ್ ➔ ಕೊನೆಗೆ ಎಂಟ್ರಿ.
ನಿಮ್ಮ ನಷ್ಟವನ್ನು mange ಮಾಡೋದು ಕಲಿತರೆ, ಲಾಭ ತನ್ನಿಂತಾನೇ ಬರುತ್ತದೆ.
Like, Share, Retweet ❤️ 💚
ಕನ್ನಡಲ್ಲಿ ಸ್ಟಾಕ್ ಮಾರ್ಕೆಟ್ ಬಗ್ಗೆ ಬರೆಯೋ (ಅಂದ್ರೆ ಪ್ರತಿ ದಿನ ಪೋಸ್ಟ್ ಮಾಡೋರು 5-6) ಇರಬಹುದು , ಅವಾಗವಾಗ ಪೋಸ್ಟ್ ಮಾಡೋರು ಒಂದ್ 10 ಖಾತೆ ಹೆಚ್ಚ್ ಅಂದ್ರೆ . ಕೆಳಗಿನ ಲಿಂಕ್ ನಲ್ಲಿ ಮಾಡಿರೋ ವಿಡಿಯೋ ನೋಡಿ , ಈ ವಿಡಿಯೋ ಮಾಡೋಕ್ ಮುಂಚೆ ಸುಮಾರ್ 2-3 ಘಂಟೆ ತಯಾರಿ ಮತ್ತೆ ವಿಡಿಯೋ ಮಾಡಿ ಎಡಿಟ್ ಮಾಡಿ ಹಾಕೋ ಹೊತ್ತಿಗೆ 3-4 ಗಂಟೆ ಶ್ರಮ. ನನ್ನದು ಸ್ವಾರ್ಥ ಇಲ್ಲ ಅಂತ ಏನಿಲ್ಲ, ಅಕೌಂಟ್ ಗ್ರೋ ಮಾಡಬೇಕು ಅನ್ನೋದು ಎಲ್ಲರಿಗು ಇರತ್ತೆ , ಆದ್ರೆ ಇಲ್ಲಿ ನಾನು ವಿಡಿಯೋ ನ paywall ಹಿಂದೆ ಇಟ್ಟಿಲ್ಲ, ಫ್ರೀ ಇದೆ , ಆದ್ರೂ 566 ವ್ಯೂ ಈಗ್ಲೂ ,
566 ವ್ಯೂ ನಲ್ಲಿ ಒಂದ್ 50 ಜನ ಅವ್ರಿಗೆ ಈ ಮಾಹಿತಿ ಇಷ್ಟ ಆಯ್ತು ಅಂತ REPOST ಮಾಡಿದ್ರೆ ಒಂದಷ್ಟು ಸಾವಿರ ಜನಕ್ಕೆ ತಲುಪಿರೋದು .
ನಾನು ಖಾತೆ ಶುರು ಮಾಡಿದ್ಮೇಲೆ ಒಂದಷ್ಟು ಒಳ್ಳೆ ಹೊಸ ಖಾತೆಗಳು ಬಂದ್ವು ಆದ್ರೆ ಅವ್ರು ಈಗ ನಿಲ್ಸ್ ಬಿಟ್ಟಿದ್ದಾರೆ
X ಅಲ್ಗಾರಿತಮ್ ಹೇಗೆ ಕೆಲಸ ಮಾಡತ್ತೆ ಅಂದ್ರೆ, ಪೋಸ್ಟ್ ಹಾಕಿದ ಮೊದಲ ಒಂದು ಘಂಟೆ ಲಿ ಅದು ಒಂದ್ 200-300 ಜನಕ್ಕೆ ತೋರಿಸತ್ತೆ , ಮೊದಲ ಒಂದು ಗಂಟೆ ಲಿ ಒಂದ್ 50 ಲೈಕ್ಸ್ , 50 🔁🔁🔁 repost ಬಂದ್ರೆ ಒಂದಷ್ಟು ಸಾವಿರ ಜನಕ್ಕೆ ತೋರಿಸತ್ತೆ , ಒಂದಷ್ಟು ಸಾವಿರ ದಲ್ಲಿ 100 repost ಬಂದ್ರೆ views multiply ಆಗತ್ತೆ .
ಬೇಕಿದ್ರೆ ಈ ಪೋಸ್ಟ್ ನಲ್ಲಿ ಪ್ರಯೋಗ ಮಾಡೋಣ , 100🔁🔁🔁 repost ಬರ್ಲಿ ಎಷ್ಟ್ ಜನಕ್ಕೆ ತಲುಪತ್ತೆ ಅಂತ ನಿಮಗೆ ಆಶ್ಚರ್ಯ ಆಗತ್ತೆ .
@GBA_office@GBAChiefComm ಪಾರ್ಕ್ ಗಳಲ್ಲಿ ಈ ರೀತಿ (pull up bar )ಪುಲ್ ಅಪ್ ಬಾರ್ ಹಾಕಿದ್ರೆ ನಿಜವಾಗ್ಲೂ ಸಹಾಯ ಆಗತ್ತೆ , ಬಹಳಷ್ಟು ಜನ ಜಿಮ್ ಹೋಗೋಕೆ ಟೈಮ್ ಇಲ್ಲದವರು ೫-೧೦ ಪುಲ್ ಅಪ್ ಮಾಡಿದ್ರೆ upper body ವರ್ಕೌಟ್ ಆಗತ್ತೆ .
ಇದು ಬೇಕು ಅನ್ನೋರು ಪೋಸ್ಟ್ ಶೇರ್ ಮಾಡಿ
ಕೇವಲ Price ಮತ್ತು Volume ಬಳಸಿ ಮಾರುಕಟ್ಟೆಯ ಟ್ರೆಂಡ್ ಗುರುತಿಸುವುದು ಹೇಗೆ?
ಷೇರು ಮಾರುಕಟ್ಟೆಯಲ್ಲಿ ತಾಂತ್ರಿಕ ವಿಶ್ಲೇಷಣೆ (Technical Analysis) ಮಾಡುವಾಗ ನಾವು ಗಮನಿಸಬೇಕಾದ ಎರಡು ಅತ್ಯಂತ ಪ್ರಮುಖ ಮತ್ತು ಶಕ್ತಿಶಾಲಿ ಅಂಶಗಳೆಂದರೆ
ಬೆಲೆ (Price) ಮತ್ತು ವ್ಯಾಪಾರದ ಪ್ರಮಾಣ (Volume).
-Price and Volume
ಇಡೀ ಮಾರುಕಟ್ಟೆಯ ಚಲನೆಯನ್ನು ಅರ್ಥಮಾಡಿಕೊಳ್ಳಲು ಇವೆರಡೇ ಸಾಕು. ಇವುಗಳನ್ನು ಸರಳವಾಗಿ, ಉದಾಹರಣೆಗಳೊಂದಿಗೆ ತಿಳಿಯೋಣ.
1. ಬೆಲೆ (Price) ಎಂದರೇನು?
ಷೇರು ಮಾರುಕಟ್ಟೆಯಲ್ಲಿ ಒಂದು ಷೇರಿಗೆ (Share) ಖರೀದಿದಾರರು ಮತ್ತು ಮಾರಾಟಗಾರರು ಒಪ್ಪಂದ ಮಾಡಿಕೊಳ್ಳುವ ಪ್ರಸ್ತುತ ಮೌಲ್ಯವೇ ಬೆಲೆ. ಇದು ಮಾರುಕಟ್ಟೆಯ ಸದ್ಯದ ಭಾವನೆಯನ್ನು (Sentiment) ತೋರಿಸುತ್ತದೆ.
ಉದಾಹರಣೆ- ನೀವು ಹಣ್ಣಿನ ಮಾರುಕಟ್ಟೆಗೆ ಖರೀದಿಸಲು ಹೋಗುತ್ತೀರಿ. ಅಲ್ಲಿ ಒಂದು ಕೆಜಿ ಸೇಬಿನ ಬೆಲೆ ₹200 ರೂಪಾಯಿ ಇರುತ್ತದೆ. ಈ ₹200 ಅನ್ನೋದು ಆ ಕ್ಷಣದ 'ಬೆಲೆ'. Price
2. Volume ಎಂದರೇನು?
ಒಂದು ನಿರ್ದಿಷ್ಟ ಸಮಯದಲ್ಲಿ (ಉದಾಹರಣೆಗೆ ಒಂದು ದಿನ ಅಥವಾ ಒಂದು ವಾರದಲ್ಲಿ) ಒಟ್ಟು ಎಷ್ಟು ಷೇರುಗಳು ಕೈ ಬದಲಾದವು (ಖರೀದಿ ಮತ್ತು ಮಾರಾಟದ ಒಟ್ಟು ಸಂಖ್ಯೆ) ಎಂಬುದನ್ನು Volume ಎನ್ನುತ್ತಾರೆ. ಇದು ಮಾರುಕಟ್ಟೆಯಲ್ಲಿ ಆ ಷೇರಿಗೆ ಇರುವ ಆಸಕ್ತಿ ಅಥವಾ ಶಕ್ತಿಯನ್ನು (Strength) ತೋರಿಸುತ್ತದೆ.
ಉದಾಹರಣೆ - ಅದೇ ಹಣ್ಣಿನ ಮಾರುಕಟ್ಟೆಯಲ್ಲಿ, ಇಡೀ ದಿನದಲ್ಲಿ ಒಟ್ಟು 500 ಕೆಜಿ ಸೇಬು ಮಾರಾಟವಾಯಿತು ಎಂದುಕೊಳ್ಳಿ. ಆ '500 ಕೆಜಿ' ಅನ್ನೋದೇ ಒಟ್ಟಾರೆ ವಹಿವಾಟಿನ ಪ್ರಮಾಣ (Transaction Volume) ಅಥವಾ ಖರೀದಿ-ಮಾರಾಟದ ಒಟ್ಟು ಸಂಖ್ಯೆ (ಸರಳವಾಗಿ ಅರ್ಥಮಾಡಿಕೊಳ್ಳಲು)
ಅಂದರೆ ಅಲ್ಲಿ ವ್ಯಾಪಾರ ಎಷ್ಟು ಜೋರಾಗಿ ನಡೆದಿದೆ ಎಂದು ಇದು ತಿಳಿಸುತ್ತದೆ.
ನೆನಪಿಡಿ - 1 ಷೇರನ್ನು ಒಬ್ಬರು ಮಾರಿ, ಇನ್ನೊಬ್ಬರು ಖರೀದಿಸಿದರೆ Volume '1' ಆಗುತ್ತದೆ (2 ಅಲ್ಲ).
RR Kabel Ltd ದಿನನಿತ್ಯದ (Daily) ಚಾರ್ಟ್.
ಈ ಚಾರ್ಟ್ನಲ್ಲಿ ನೀವು ಗಮನಿಸಬೇಕಾದ ಮುಖ್ಯ ಅಂಶಗಳು ಇಲ್ಲಿವೆ.
1. ಬೆಲೆ ಏರಿಕೆ (Price Rally)
ಏಪ್ರಿಲ್ ಮಧ್ಯಭಾಗದಿಂದ ಮೇ ತಿಂಗಳವರೆಗೆ ಬೆಲೆಯು ಸುಮಾರು ₹1,400 ರಿಂದ ₹2,000 ವರೆಗೆ ಉತ್ತಮ ಏರಿಕೆ ಕಂಡಿದೆ. ಕ್ಯಾಂಡಲ್ಗಳು ಮೇಲ್ಮುಖವಾಗಿ ಚಲಿಸುತ್ತಿರುವುದು ಅಂದ್ರೆ ಹಸಿರು ಬಣ್ಣದ ಕ್ಯಾಂಡಲ್ಸ್ ಸ್ಪಷ್ಟವಾದ ಅಪ್ಟ್ರೆಂಡ್ (Up-trend) ಅನ್ನು ತೋರಿಸುತ್ತಿವೆ.
2.High Volume Spike
ಚಾರ್ಟ್ನ ಕೆಳಭಾಗದಲ್ಲಿ ಮೇ ತಿಂಗಳ ಆರಂಭದಲ್ಲಿ ಒಂದು ದೊಡ್ಡ ಹಸಿರು ಬಣ್ಣದ Volume Bar ಇದೆ.
ಇದು ಆ ದಿನ ಸಾಮಾನ್ಯಕ್ಕಿಂತ 1244% ಹೆಚ್ಚು ವ್ಯಾಪಾರ ನಡೆದಿದೆ ಎಂದು ತೋರಿಸುತ್ತಿದೆ.
ಬೆಲೆ ಏರುತ್ತಿರುವಾಗಲೇ ಇಷ್ಟು ದೊಡ್ಡ Volume ಬಂದಿರುವುದು "Smart Money" ಅಥವಾ ದೊಡ್ಡ ಹೂಡಿಕೆದಾರರು ಈ ಷೇರನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದ್ದಾರೆ ಎಂಬುದಕ್ಕೆ ಸಾಕ್ಷಿ.
✅ಹತ್ತಾರು ಇಂಡಿಕೇಟರ್ಗಳನ್ನು ಬಳಸುವ ಬದಲು, ಕೇವಲ ಬೆಲೆಯ ಚಲನೆ (Price Action) ಮತ್ತು ವಹಿವಾಟಿನ ಪ್ರಮಾಣವನ್ನು (Volume) ಗಮನಿಸುವುದರಿಂದ ನೀವು ಮಾರುಕಟ್ಟೆಯ ದಿಕ್ಕನ್ನು ನಿಖರವಾಗಿ ಅರ್ಥಮಾಡಿಕೊಳ್ಳಬಹುದು.
✅ಸ್ಮಾರ್ಟ್ ಮನಿ (Smart Money) ಗುರುತಿಸುವಿಕೆ-ದೊಡ್ಡ ಸಂಸ್ಥೆಗಳು ಅಥವಾ ಹೂಡಿಕೆದಾರರು ಷೇರನ್ನು ಖರೀದಿಸಿದಾಗ ಚಾರ್ಟ್ನಲ್ಲಿ ದೊಡ್ಡ Volume ಬಾರ್ಗಳು ಕಾಣಿಸಿಕೊಳ್ಳುತ್ತವೆ. RR Kabel ಚಾರ್ಟ್ನಲ್ಲಿ ಅಂತಹ Volume ಬಂದಾಗ ಬೆಲೆಯು ಹೊಸ ಎತ್ತರಕ್ಕೆ ಏರಿಕೆ ಕಂಡಿದೆ.
"Price is what you pay, Value (confirmed by Volume) is what you get."
ಬೆಲೆಯು ದಾರಿಯನ್ನು ತೋರಿಸಿದರೆ, Volume ಆ ದಾರಿಯಲ್ಲಿ ಹೋಗಲು ಇರುವ ಇಂಧನದಂತೆ ಕೆಲಸ ಮಾಡುತ್ತದೆ.
Like, Share, Retweet ❤️ 💚
#SwingTrading #Investing
#TechnicalAnalysis #StockMarketIndia
ಸ್ಟಾಕ್ ಮಾರ್ಕೆಟ್ Technical Analysis ಕಲಿಯುವುದು ಬಹಳ ಸರಳ..
ಸ್ವಲ್ಪ ಸಮಯ ಮೀಸಲಿಟ್ಟು ಶ್ರದ್ಧೆಯಿಂದ ಕಲಿತರೆ 3 ರಿಂದ 6 ತಿಂಗಳಲ್ಲಿ ಕಲಿಯಬಹುದು..
15-20 ತಾಸು ವಿಡಿಯೋ ಮೂಲಕ ನಾನು ಬಹಳ ಸರಳವಾಗಿ ಹೇಳಿ ಕೊಡಬಲ್ಲೆ..
ಆದ್ರೆ ಅತಿ ಮುಖ್ಯವಾಗಿ ಬೇಕಾಗಿರುವುದು ನಿಮ್ಮನ್ನು ನೀವು ಅರಿತುಕೊಳ್ಳುವುದು.
ಒಟ್ಟಾರೆ ಷೇರು ಮಾರುಕಟ್ಟೆಯನ್ನು ಅರ್ಥ ಮಾಡಿಕೊಳ್ಳುವ ಮೊದಲು ನಿಮ್ಮನ್ನು ನೀವು ಅರಿತುಕೊಳ್ಳಿ..ಇದು ಅತಿ ಮುಖ್ಯ..
In trading, understanding your own mind is just as important as understanding the market itself.
ನೀವು ಬೆಳದು ಬಂದ ರೀತಿ,ನಿಮ್ಮ ಮಾನಸಿಕ ಸ್ಥಿತಿ, ಪ್ರತಿದಿನ ನೀವು ಜೀವನದಲ್ಲಿ ಶಿಸ್ತು ಬದ್ಧವಾಗಿ ಹೇಗೆ ನಡೆದುಕೊಳ್ಳುತ್ತೀರಿ ಇವೆಲ್ಲವೂ ನಿಮ್ಮ ಟ್ರೇಡಿಂಗ್ & ಇನ್ವೆಸ್ಟ್ಮೆಂಟ್ ಮೇಲೆ ಭಾರಿ ಪ್ರಮಾಣದ ಪ್ರಭಾವ ಬೀರುತ್ತದೆ.
ಇದನ್ನು ನೀವೇ ಅರ್ಥ ಮಾಡಿಕೊಂಡು ಯಶಸ್ವಿ ಆಗಲು ಬಹಳ ವರ್ಷಗಳೇ ತೆಗೆದುಕೊಳ್ಳುತ್ತದೆ.
ತಾಂತ್ರಿಕ ಕೌಶಲಕ್ಕಿಂತ ಮಾನಸಿಕ ಸ್ಥಿರತೆ (Psychology) ಮುಖ್ಯ.
ನಿಮ್ಮ ಮಾನಸಿಕ ಸ್ಥಿತಿ ಅಂದ್ರೆ ಭಯ (Fear) ಮತ್ತು ದುರಾಸೆ (Greed) ನಡುವಿನ ಸಮತೋಲನವೇ ಟ್ರೇಡಿಂಗ್ನ ಜೀವಾಳ.
⏳ ಯಶಸ್ಸಿನ ಹಾದಿ
ತಾಂತ್ರಿಕ ಅಂಶಗಳನ್ನು (Technical tools) ಕಲಿಯಲು ಕೆಲವು ವಾರಗಳು ಸಾಕು. ಆದರೆ, ನಿಮ್ಮ ಭಾವನೆಗಳನ್ನು ನಿಯಂತ್ರಿಸಿ, ಮಾರುಕಟ್ಟೆಯ ಏರಿಳಿತದ ನಡುವೆ ಸ್ಥಿತಪ್ರಜ್ಞರಾಗಿ ಇರುವುದನ್ನು ಕಲಿಯಲು ವರ್ಷಗಳೇ ಬೇಕಾಗಬಹುದು. ಮಾರುಕಟ್ಟೆಯಲ್ಲಿ ಹಣ ಮಾಡುವುದಕ್ಕಿಂತ ಮುಂಚೆ, ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಯಶಸ್ವಿ ಟ್ರೇಡರ್ ಆಗಲು ಇರುವ ಮೊದಲ ಮೆಟ್ಟಿಲು.
ಇದನ್ನು ನೀವು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತೀರಿ ಅಷ್ಟು ಬೇಗ ಸ್ಟಾಕ್ ಮಾರ್ಕೆಟ್ ಅಲ್ಲಿ ಹಣ ಗಳಿಕೆ ಮಾಡಬಹುದು.
Like, Share, Retweet ❤️💚
ಸ್ವಿಂಗ್ ಟ್ರೇಡಿಂಗ್ (Swing Trading) ಯಾಕೆ ಡೇ ಟ್ರೇಡಿಂಗ್ಗಿಂತ (Day Trading/Intraday) ಉತ್ತಮ?
✅ ಕಡಿಮೆ ಸ್ಕ್ರೀನ್ ಟೈಮ್ (Less Screen Time)
ಸ್ವಿಂಗ್ ಟ್ರೇಡಿಂಗ್: ದಿನವಿಡೀ ಚಾರ್ಟ್ಗಳ ಮುಂದೆ ಕುಳಿತುಕೊಳ್ಳುವ ಅಗತ್ಯವಿರುವುದಿಲ್ಲ. ಸಂಜೆ ಅಥವಾ ನಿಮ್ಮ ಬಿಡುವಿನ ವೇಳೆಯಲ್ಲಿ ಷೇರು ಮಾರುಕಟ್ಟೆಯನ್ನು ವಿಶ್ಲೇಷಿಸಿ,ಯಾವ ಸ್ಟಾಕ್ Buy ಮಾಡಬಹುದು ಅಂತಾ ನಿರ್ಧಾರ ಮಾಡಬಹುದು. ಇವು ಕೆಲವು ದಿನಗಳು ಅಥವಾ ವಾರಗಳವರೆಗೆ ಚಾಲ್ತಿಯಲ್ಲಿರುತ್ತವೆ.
ಡೇ ಟ್ರೇಡಿಂಗ್: ಪ್ರತಿ ನಿಮಿಷವೂ ಮಾರುಕಟ್ಟೆಯನ್ನು ಗಮನಿಸುತ್ತಿರಬೇಕು. ಇದು ತುಂಬಾ ಕಷ್ಟ ಮತ್ತು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕೆಲಸವಾಗಿದೆ.
✅ ಕಡಿಮೆ ಮಾನಸಿಕ ಒತ್ತಡ (Lower Stress Levels)
ಡೇ ಟ್ರೇಡಿಂಗ್: ಇದು ಅತ್ಯಂತ ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಕೆಲಸ. ಸಣ್ಣ ತಪ್ಪುಗಳೂ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು, ಇದರಿಂದಾಗಿ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು.
ಸ್ವಿಂಗ್ ಟ್ರೇಡಿಂಗ್: ಹೆಚ್ಚಿನ ಸಮಯಾವಕಾಶವಿರುವ (Higher Timeframes) ಚಾರ್ಟ್ಗಳನ್ನು ಬಳಸುವುದರಿಂದ, ಆತುರವಿಲ್ಲದೆ ಶಾಂತವಾಗಿ ಮತ್ತು ಶಿಸ್ತಿನಿಂದ ನಿರ್ಧಾರ ತೆಗೆದುಕೊಳ್ಳಬಹುದು.
✅ ದೊಡ್ಡ ಲಾಭದ ಅವಕಾಶ (More Significant Moves)
ಮಾರುಕಟ್ಟೆಯ ಸಣ್ಣ ಸಣ್ಣ ಏರಿಳಿತಗಳಿಗಿಂತ, ಸ್ವಿಂಗ್ ಟ್ರೇಡರ್ಸ್ ದೊಡ್ಡ ಟ್ರೆಂಡ್ಗಳನ್ನು (Trends) ಇಲ್ಲಿ ಕಂಡುಹಿಡಿದು ಹಣ ಹೂಡಿಕೆ ಮಾಡಬಹುದು. ಅಂದರೆ, ಇಲ್ಲಿ ಟ್ರೇಡ್ಗಳ ಸಂಖ್ಯೆ ಕಡಿಮೆಯಿದ್ದರೂ, ಪ್ರತಿ ಟ್ರೇಡ್ನಲ್ಲಿ ಸಿಗುವ ಲಾಭ ದೊಡ್ಡದಾಗಿರುತ್ತದೆ.
✅ ಕಡಿಮೆ ಖರ್ಚು/ಕಮಿಷನ್ (Reduced Costs)
ಡೇ ಟ್ರೇಡರ್ಸ್: ದಿನಕ್ಕೆ ಹತ್ತಾರು ಟ್ರೇಡ್ಗಳನ್ನು ಮಾಡುವುದರಿಂದ ಬ್ರೋಕರೇಜ್ ಕಮಿಷನ್, ತೆರಿಗೆಗಳು ಮತ್ತು ಇತರ ಶುಲ್ಕಗಳು (Transaction Costs) ಹೆಚ್ಚಾಗುತ್ತವೆ.
ಸ್ವಿಂಗ್ ಟ್ರೇಡರ್ಸ್: ವಾರಕ್ಕೆ ಅಥವಾ ತಿಂಗಳಿಗೆ ಕೆಲವು ಟ್ರೇಡ್ಗಳನ್ನು ಮಾತ್ರ ಮಾಡುವುದರಿಂದ ಇಂತಹ ಅನಗತ್ಯ ಖರ್ಚುಗಳು ತುಂಬಾ ಕಡಿಮೆಯಿರುತ್ತವೆ.
✅ ಸಾಮಾನ್ಯ ಜೀವನಶೈಲಿಗೆ ಸೂಕ್ತ (Fits a Regular Lifestyle)
ನೀವು ಉದ್ಯೋಗದಲ್ಲಿದ್ದರೆ ಅಥವಾ ಸ್ವಂತ ಬಿಸಿನೆಸ್ ಹೊಂದಿದ್ದರೆ ಸ್ವಿಂಗ್ ಟ್ರೇಡಿಂಗ್ ಅತ್ಯುತ್ತಮ. ಆದರೆ ಡೇ ಟ್ರೇಡಿಂಗ್ ಮಾಡಲು ಮಾರುಕಟ್ಟೆಯ ಸಮಯದಲ್ಲೇ (Market Hours) ಪೂರ್ಣ ಸಮಯವನ್ನು ಮೀಸಲಿಡಬೇಕಾಗುತ್ತದೆ, ಇದು ಪೂರ್ಣಾವಧಿ ಕೆಲಸದಂತೆ ಇರುತ್ತದೆ.
✅ ಸ್ಪಷ್ಟವಾದ ಮಾರುಕಟ್ಟೆ ಚಿತ್ರಣ (Cleaner Market Structure)
ಚಿಕ್ಕ ಚಾರ್ಟ್ಗಳಲ್ಲಿ (1 ಅಥವಾ 5 ನಿಮಿಷ) ಮಾರುಕಟ್ಟೆಯ ಏರಿಳಿತಗಳು ತುಂಬಾ ಗೊಂದಲಮಯವಾಗಿರುತ್ತವೆ (Noise). ಆದರೆ ಸ್ವಿಂಗ್ ಟ್ರೇಡಿಂಗ್ನಲ್ಲಿ ಬಳಸುವ 4-ಗಂಟೆ ಅಥವಾ ದಿನದ (Daily) ಚಾರ್ಟ್ಗಳು ಸ್ಪಷ್ಟವಾದ ಸಿಗ್ನಲ್ಗಳನ್ನು ನೀಡುತ್ತವೆ. ಇದರಿಂದ ಗೆಲ್ಲುವ ಸಾಧ್ಯತೆ
(Win Rate) ಹೆಚ್ಚಿರುತ್ತದೆ.
✅ ತಾಳ್ಮೆ ಮತ್ತು ಶಿಸ್ತು (Compounding & Patience)
ಸ್ವಿಂಗ್ ಟ್ರೇಡಿಂಗ್ ನಿಮಗೆ ತಾಳ್ಮೆಯಿಂದ ಕಾಯುವುದನ್ನು ಮತ್ತು ಸರಿಯಾದ ರಿಸ್ಕ್ ಮ್ಯಾನೇಜ್ಮೆಂಟ್ (Risk Management) ಮಾಡುವುದನ್ನು ಕಲಿಸುತ್ತದೆ. ದೀರ್ಘಾವಧಿಯಲ್ಲಿ ಹಣವನ್ನು ಗಳಿಸಲು ಇದು ಬಹಳ ಮುಖ್ಯ.
Like, Share, Retweet ❤️ 💚
#Nifty50
- 23800-23850 Resistance
- 23100-23150 Support
- Nifty will trade in between these two ranges for the time being.
-Up down will continue between these two ranges 23150-23800
ಸದ್ಯದ ಮಟ್ಟಿಗೆ ನಮ್ಮ ಷೇರು ಮಾರುಕಟ್ಟೆಯಲ್ಲಿ ಏರಿಕೆ ಇಳಿಕೆ ನಡೀತಾ ಇದೆ. ಹೆಚ್ಚಿನ Volatility ಏರಿಳಿತ ಭಾರಿ ಪ್ರಮಾಣದಲ್ಲಿ ಇದೆ.
ಷೇರು ಮಾರುಕಟ್ಟೆಯಲ್ಲಿ ಸದ್ಯಕ್ಕೆ ಅನಿಶ್ಚಿತತೆ ಅಥವಾ Volatility ಹೆಚ್ಚಿದ್ದರೂ, ಕೆಲವು ನಿರ್ದಿಷ್ಟ ಸೆಕ್ಟರ್ಗಳು ಹೂಡಿಕೆದಾರರ ಗಮನ ಸೆಳೆಯುತ್ತಿವೆ. ಅವುಗಳ ವಿವರ ಇಲ್ಲಿದೆ.
📌 Nifty Pharma
📌 NIFTY HEALTHCARE
📌 Nifty Metal
📌 Nifty Chemicals
📌 Nifty Capital Mkt
ಈ ಸೆಕ್ಟರ್ ಗಳು ಉತ್ತಮ ಏರಿಕೆ ಕಂಡು Index ಅಲ್ಲಿ ಇರುವ ಅನೇಕ ಷೇರುಗಳು ಅತಿ ಹೆಚ್ಚಿನ ಮಟ್ಟದಲ್ಲಿ ಟ್ರೇಡ್ ಆಗ್ತಾ ಇವೆ.
ಇವುಗಳನ್ನು ಟ್ರ್ಯಾಕ್ ಮಾಡಿ ಏರಿಕೆ ಅಲ್ಲಿ ಕಂಡು ಬರುತ್ತಿರುವ ಷೇರುಗಳನ್ನು ಹುಡುಕಿ.