🚫 International Day Against Drug Abuse and Illicit Trafficking
@jjnagarps ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಿಬಿಎಂಪಿ ಪಿಯು ಕಾಲೇಜಿನಲ್ಲಿ ಹಾಗೂ ಸಂಗಂ ಸರ್ಕಲ್ ಬಳಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
#SayNoToDrugs#DrugAwareness#DrugFreeKarnataka#KSPApp
#VehicleSafety#TheftPrevention
🚔 ನಿಮ್ಮ ಎಚ್ಚರಿಕೆ – ನಿಮ್ಮ ವಾಹನದ ಸುರಕ್ಷತೆ !
ಸುರಕ್ಷಿತವಾಗಿ ಪಾರ್ಕ್ ಮಾಡಿ, ಕಳ್ಳತನ ತಡೆಯಿರಿ @BlrCityPolice.
🏍️ ದ್ವಿಚಕ್ರ ವಾಹನ ಕಳ್ಳತನ ತಡೆಗಾಗಿ ಸಾರ್ವಜನಿಕರಿಗೆ ಸಲಹೆಗಳು.
#EmergencyNumbers
📞🚨 ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ಈ ಸಂಖ್ಯೆಗಳಿಗೆ ಕರೆ ಮಾಡಿ
ಯಾವುದೇ ತುರ್ತು ಪರಿಸ್ಥಿತಿ, ಅಪರಾಧ, ಅಪಘಾತ ಅಥವಾ ಸಹಾಯದ ಅಗತ್ಯವಿದ್ದಲ್ಲಿ ಈ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ, ನಿಮ್ಮ ಸುರಕ್ಷತೆ ನಮ್ಮ ಆದ್ಯತೆ @BlrCityPolice
ಸಾರ್ವಜನಿಕರ ಸುರಕ್ಷತೆಗಾಗಿ ಈ ಸಂಖ್ಯೆಗಳ ಮಾಹಿತಿಯನ್ನು ಹಂಚಿಕೊಳ್ಳಿ
ಮನೆ, ಅಂಗಡಿ, ಕಚೇರಿ & ಅಪಾರ್ಟ್ಮೆಂಟ್ಗಳಲ್ಲಿ ಪ್ರವೇಶ & ನಿರ್ಗಮನ ಸ್ಥಳಗಳಲ್ಲಿ ಸ್ಪಷ್ಟ ಚಿತ್ರಣವನ್ನು ದಾಖಲಿಸುವಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ
#CCTV ಕೇವಲ ಕ್ಯಾಮೆರಾ ಅಲ್ಲ, ಅದು ಅಪರಾಧ ತಡೆಗಟ್ಟುವ & ನಿಮ್ಮ ಸುರಕ್ಷತೆಯನ್ನು ಹೆಚ್ಚಿಸುವ ಪರಿಣಾಮಕಾರಿ ಸಾಧನವಾಗಿದೆ @BlrCityPolice#CrimePrevention#PublicSafety
@jjnagarps#RowdyChecking
ಸಾರ್ವಜನಿಕರ ಸುರಕ್ಷತೆ & ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿನ್ನೆ ದಿನ ತಡರಾತ್ರಿ ಜೆಜೆನಗರ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿ & ಸಿಬ್ಬಂದಿಗಳೊಂದಿಗೆ ರೌಡಿ ಶೀಟರ್ಗಳ ವ್ಯಾಪಕ ಪರಿಶೀಲನಾ ಕಾರ್ಯಾಚರಣೆ ನಡೆಸಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಯಿತು.
@jjnagarps#RowdyChecking
ಸಾರ್ವಜನಿಕರ ಸುರಕ್ಷತೆ & ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿನ್ನೆ ದಿನ ತಡರಾತ್ರಿ ಜೆಜೆನಗರ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿ & ಸಿಬ್ಬಂದಿಗಳೊಂದಿಗೆ ರೌಡಿ ಶೀಟರ್ಗಳ ವ್ಯಾಪಕ ಪರಿಶೀಲನಾ ಕಾರ್ಯಾಚರಣೆ ನಡೆಸಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಯಿತು.
#RowdyChecking
ಸಾರ್ವಜನಿಕರ ಸುರಕ್ಷತೆ & ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿನ್ನೆ ತಡರಾತ್ರಿ ಪಶ್ಚಿಮ ವಿಭಾಗದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿ & ಸಿಬ್ಬಂದಿಗಳಿಂದ ರೌಡಿ ಶೀಟರ್ಗಳ ವ್ಯಾಪಕ ಪರಿಶೀಲನಾ ಕಾರ್ಯಾಚರಣೆ ನಡೆಸಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಯಿತು @BlrCityPolice.
ಪಶ್ಚಿಮ ವಿಭಾಗದ ಪೊಲೀಸ್ ಸಿಬ್ಬಂದಿಯ ದೈಹಿಕ ಸದೃಢತೆ, ಮಾನಸಿಕ ಆರೋಗ್ಯ & ಒತ್ತಡ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಯೋಗ ಶಿಬಿರವನ್ನು ಆಯೋಜಿಸಲಾಗಿತ್ತು.
ಅಧಿಕಾರಿ & ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿ ವಿವಿಧ ಯೋಗಾಸನಗಳು & ಪ್ರಾಣಾಯಾಮ ಅಭ್ಯಾಸ ಮಾಡಿದರು @BlrCityPolice.
Continuing the drive against illegal narcotics, East Division Police teams conducted operations across 6 Police Station limits and seized banned substances including Ganja, MDMA, Methamphetamine, Cocaine, E-Cigarettes.
Total seizure worth approximately ₹1.6 Cr
#drugfreesociety
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ಹಾಗೂ ನಗರದ ವಿವಿಧ ಪೊಲೀಸ್ ಠಾಣೆಗಳು ನಡೆಸಿದ ಬೃಹತ್ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದೆ. ಹೆಬ್ಬಾಳ, ಇಂದಿರಾನಗರ, ಜೀವನ ಭೀಮಾನಗರ, ಸುದ್ದಗುಂಟೆಪಾಳ್ಯ, ಹೆಣ್ಣೂರು, ಬಾಣಸವಾಡಿ, ಹಲಸೂರು ಮತ್ತು ಕೆ.ಜಿ.ಹಳ್ಳಿ ಠಾಣಾ ಸರಹದ್ದುಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ಅಂತರರಾಷ್ಟ್ರೀಯ ಮತ್ತು ಅಂತರರಾಜ್ಯ ಮಟ್ಟದ ಲಿಂಕ್ ಹೊಂದಿದ್ದ ಒಟ್ಟು 23 ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ. ಒಟ್ಟು ₹8 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಉಪ ಪೊಲೀಸ್ ಆಯುಕ್ತರುಗಳುಗಳಾದ ಶ್ರೀ ರಾಜ ಇಮಾಮ್ ಕಾಸಿಂ (ಕ್ರೈಮ್-02 ವಿಭಾಗ), ಡಾ. ವಿಕ್ರಮ್ ಅಮಟೆ, ಐಪಿಎಸ್ (ಪೂರ್ವ ವಿಭಾಗ), ಶ್ರೀ ಬಿ.ಎಸ್. ನೇಮಗೌಡ, ಐಪಿಎಸ್ (ಉತ್ತರ ವಿಭಾಗ) ಹಾಗೂ ಮೊಹಮ್ಮದ್ ಸುಜೀತ, ಐಪಿಎಸ್ (ಆಗ್ನೇಯ ವಿಭಾಗ) ರವರುಗಳ ನೇರ ನೇತೃತ್ವದಲ್ಲಿ, ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ಮತ್ತು ಸಂಬಂಧಪಟ್ಟ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟರ್ಗಳು ಹಾಗೂ ಸಿಬ್ಬಂದಿಯವರ ತಂಡವು ಅತ್ಯಂತ ಚಾಣಾಕ್ಷತನದಿಂದ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.
In a major step toward building a drug-free Bengaluru, a massive joint operation conducted by the CCB’s (Central Crime Branch) Anti-Narcotics Wing and various police stations across the city has been highly successful. Simulataneous raids were carried out across the jurisdictions of Hebbal, Indiranagar, Jeevan Bhimanagar, Sudguntapalya, Hennur, Banaswadi, Halasuru, and K.G. Halli police stations, leading to the arrest of 23 drug peddlers with international and interstate links. Drugs worth a total of ₹8 crore were seized during the operation.
Under the leadership of DCPs — Raja Imam Kasim (Crime-02 Division), Dr. Vikram Amathe, IPS (East Division), Mr. B.S. Nemagouda, IPS (North Division), and Mohammad Sujeetha, IPS (Southeast Division)—the team consisting of the CCB Anti-Narcotics Wing, along with police inspectors and personnel from the respective stations, successfully cracked this case with utmost tactical brilliance.
@CPBlr@seemantsingh96@DgpKarnataka
ಮಲ್ಲೇಶ್ವರಂ ಪೊಲೀಸರು ಚಿನ್ನದ ಕಳವು ಪ್ರಕರಣವನ್ನು ಭೇದಿಸಿ, ಚಿನ್ನಾಭರಣಗಳನ್ನು ಖರೀದಿಸುವ ನೆಪದಲ್ಲಿ ಕಳವು ಮಾಡಿದ್ದ 2 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹1.64 ಕೋಟಿ ಮೌಲ್ಯದ 1 ಕೆಜಿ 08 ಗ್ರಾಂ ತೂಕದ ಚಿನ್ನದ ಗಟ್ಟಿಗಳು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Malleshwaram Police cracked a gold theft case and arrested 2 accused who stole ornaments on the pretext of buying them. 1 kg 08 grams of gold bars and ornaments worth ₹1.64 crore have been seized.
The accused have been remanded to judicial custody.
#BengaluruCityPolice #CrimeDetection #PublicSafety
@CPBlr@seemantsingh96@DgpKarnataka@KarnatakaCops
3 ಆರೋಪಿಗಳನ್ನು ಬಂಧಿಸಿ, 60 ಕಳುವಾದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಯನಗರ ಹಾಗೂ ಸಂಪಿಗೆಹಳ್ಳಿ ಪೊಲೀಸರು ಹಲವು ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನು ಭೇದಿಸಿ, ₹37 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಿಂದ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ 32 ಪ್ರಕರಣಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ.
ನಾಗರಿಕರು ಹಾಗೂ ಅವರ ಸ್ವತ್ತಿನ ರಕ್ಷಣೆಗೆ ಬೆಂಗಳೂರು ನಗರ ಪೊಲೀಸ್ ಸದಾ ಬದ್ಧವಾಗಿದೆ.
3 accused arrested. 60 stolen two-wheelers recovered.
Jayanagar and Sampigehalli Police cracked multiple two-wheeler theft cases and seized vehicles worth ₹37 lakh. The operation helped detect 32 cases registered across different police station limits in Bengaluru.
Bengaluru City Police remains committed to protecting citizens and their property.
#BengaluruCityPolice #CrimeDetection #SafeBengaluru
@CPBlr@seemantsingh96@DgpKarnataka@KarnatakaCops
ಮಾದಕ ವಸ್ತುಗಳ ವಿರುದ್ಧದ ಮಹತ್ವದ ಕಾರ್ಯಾಚರಣೆಯಲ್ಲಿ, ಸಿಸಿಬಿ ನಾರ್ಕೋಟಿಕ್ಸ್ ಕಂಟ್ರೋಲ್ ಘಟಕವು ಹೆಬ್ಬಾಳ, ಇಂದಿರಾನಗರ, ಜೀವನ್ ಭೀಮಾನಗರ, ಸುದ್ದುಗುಂಟೆಪಾಳ್ಯ, ಹೆಣ್ಣೂರು, ಬಾಣಸವಾಡಿ, ಹಲಸೂರು ಮತ್ತು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗಳೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ 23 ಆರೋಪಿಗಳನ್ನು ಬಂಧಿಸಿದೆ. ಈ ವೇಳೆ ₹4 ಕೋಟಿ ಮೌಲ್ಯದ ಮಾದಕ ವಸ್ತುಗಳು ಹಾಗೂ ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಅಂದಾಜು ಮಾರುಕಟ್ಟೆ ಮೌಲ್ಯ ₹8 ಕೋಟಿಯಾಗಿದೆ.
ಬಂಧಿತರಲ್ಲಿ 2 ವಿದೇಶಿ ಪ್ರಜೆಗಳು, 6 ಇತರೆ ರಾಜ್ಯಗಳ ವ್ಯಕ್ತಿಗಳು ಹಾಗೂ 15 ಸ್ಥಳೀಯರು ಸೇರಿದ್ದಾರೆ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮಾದಕ ವಸ್ತುಗಳ ಪೂರೈಕೆ ಜಾಲವನ್ನು ಪತ್ತೆಹಚ್ಚಲು ಮುಂದಿನ ತನಿಖೆ ಮುಂದುವರಿದಿದೆ.
ಮಾದಕ ವಸ್ತುಗಳ ಹಾವಳಿಯ ವಿರುದ್ಧದ ಹೋರಾಟದಲ್ಲಿ ಬೆಂಗಳೂರು ನಗರ ಪೊಲೀಸ್ ತನ್ನ ದೃಢ ನಿಲುವನ್ನು ಮುಂದುವರಿಸಿದೆ.
In a major anti-drug crackdown, CCB Narcotics Control Unit along with Hebbal, Indiranagar, Jeevan Bhimanagar, Suddaguntepalya, Hennur, Banaswadi, Halsur and K.G. Halli Police arrested 23 accused and seized narcotics and related items worth ₹4 crore, with an estimated market value of ₹8 crore.
The accused include 2 foreign nationals, 6 out-of-state persons and 15 locals. All have been remanded to judicial custody, and further investigation is underway to trace the supply network.
Bengaluru City Police remains firm in its fight against the drug menace.
#SayNoToDrugs #BengaluruCityPolice #CCB #DrugFreeBengaluru
@CPBlr@seemantsingh96@DgpKarnataka@KarnatakaCops