Held a meeting with Shri Mudit Mittal, IRAS, Divisional Railway Manager, South Western Railway, Mysuru Division, at my office today to discuss key railway infrastructure and connectivity issues concerning Dakshina Kannada.
@SWRRLY#IndianRailways#RailInfrastructure
#DakshinaKannada
ನನ್ನ ಪತ್ರಕ್ಕೆ ತ್ವರಿತವಾಗಿ ಸ್ಪಂದಿಸಿ ಉತ್ತರ ನೀಡಿದ ಹಾಗೂ ಮೈಸೂರು–ಪಂಡರಪುರ ಗೋಲ್ ಗುಂಬಜ್ ಎಕ್ಸ್ಪ್ರೆಸ್ ರೈಲಿನ ಪ್ರಯಾಣದ ಅವಧಿ ಕಡಿತಗೊಳಿಸುವ ಕುರಿತು ಸಕಾರಾತ್ಮಕ ಕ್ರಮ ಕೈಗೊಂಡಿರುವುದಕ್ಕಾಗಿ ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ವಿ.ಸೋಮಣ್ಣ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
South Western Railway will introduce six-day-a-week MEMU services between Yelahanka and Arsikere from July 14.
Train no. 66505 will leave Yelahanka at 6.45 am and reach Arsikere at 11 am, while Train No. 66506 will depart Arsikere at 2.10 pm and arrive at Yelahanka at 7.15 pm. An inaugural special from Tiptur to Yelahanka will run on July 13. The eight-coach service will improve connectivity for commuters via Yeswantpur, Tumakuru and Tiptur @SWRRLY@drmsbc
ವಿಜಯಪುರದ ರೈಲ್ವೆ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ!
ಕೋಚಿಂಗ್ ಡಿಪೋ ಸ್ಥಾಪಿಸುವಂತೆ ಹಾಗೂ ರೈಲು ನಿಲ್ದಾಣಕ್ಕೆ ಹೆಚ್ಚುವರಿ ಪ್ರವೇಶ ಮತ್ತು ನಿರ್ಗಮನ ದ್ವಾರ ನಿರ್ಮಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ.
ವಿಜಯಪುರದ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಎರಡು ಮಹತ್ವದ ಬೇಡಿಕೆಗಳ ಕುರಿತು ಪತ್ರ ಬರೆದಿದ್ದೇನೆ.
🔹 ವಿಜಯಪುರದಲ್ಲಿ ಕೋಚಿಂಗ್ ಡಿಪೋ (Coaching Depot) ಸ್ಥಾಪನೆ.
🔹 ಪ್ರಯಾಣಿಕರ ಅನುಕೂಲಕ್ಕಾಗಿ ವಿಜಯಪುರ ರೈಲು ನಿಲ್ದಾಣಕ್ಕೆ ಹೆಚ್ಚುವರಿ ಪ್ರವೇಶ ಹಾಗೂ ನಿರ್ಗಮನ ದ್ವಾರ ನಿರ್ಮಾಣ.
ವಿಜಯಪುರವು ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿರುವುದರ ಜೊತೆಗೆ, ಉತ್ತರ ಕರ್ನಾಟಕದ ಪ್ರಮುಖ ರೈಲು ಸಂಪರ್ಕ ಕೇಂದ್ರವೂ ಆಗಿದೆ. ಇಲ್ಲಿ ಕೋಚಿಂಗ್ ಡಿಪೋ ಸ್ಥಾಪನೆಯಾದರೆ ಹೊಸ ರೈಲುಗಳ ಆರಂಭಕ್ಕೆ ವೇಗ ಸಿಗುವುದಲ್ಲದೆ, ರೈಲುಗಳ ನಿರ್ವಹಣಾ ಸಾಮರ್ಥ್ಯ ಹೆಚ್ಚಾಗಿ ಉತ್ತರ ಕರ್ನಾಟಕದ ರೈಲ್ವೆ ಜಾಲದ ವಿಸ್ತರಣೆಗೆ ಹೊಸ ಆಯಾಮ ದೊರೆಯಲಿದೆ.
ಹಿಂದೆ ವಿಜಯಪುರ ರೈಲು ನಿಲ್ದಾಣದ ಆವರಣದಲ್ಲಿದ್ದ ಗೂಡ್ಸ್ ಶೆಡ್ ಅನ್ನು ಅಲಿಯಾಬಾದ್ ಗೆ ಸ್ಥಳಾಂತರಿಸಿರುವ ಹಿನ್ನೆಲೆಯಲ್ಲಿ, ಕೋಚಿಂಗ್ ಡಿಪೋ ಸ್ಥಾಪನೆಗೆ ಅಗತ್ಯವಿರುವ ಸ್ಥಳದ ಕೊರತೆಯೂ ಇರುವುದಿಲ್ಲ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದೇನೆ.
ಅದೇ ರೀತಿ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಪ್ರವೇಶ ಹಾಗೂ ನಿರ್ಗಮನ ದ್ವಾರ ನಿರ್ಮಿಸಿದರೆ ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲವಾಗುವುದಲ್ಲದೆ, ರೈಲು ನಿಲ್ದಾಣದ ಸೇವೆಯ ಗುಣಮಟ್ಟ ಮತ್ತು ಕಾರ್ಯಕ್ಷಮತೆಯೂ ಮತ್ತಷ್ಟು ಉತ್ತಮಗೊಳ್ಳಲಿದೆ ಎಂಬುದನ್ನೂ ಮನವರಿಕೆ ಮಾಡಿಕೊಟ್ಟಿದ್ದೇನೆ.
ವಿಜಯಪುರವನ್ನು ಉತ್ತರ ಕರ್ನಾಟಕದ ಅತ್ಯಾಧುನಿಕ ಹಾಗೂ ಪ್ರಮುಖ ರೈಲ್ವೆ ಕೇಂದ್ರವನ್ನಾಗಿ ರೂಪಿಸುವ ನಮ್ಮ ಪ್ರಯತ್ನಗಳು ನಿರಂತರವಾಗಿ ಮುಂದುವರಿಯಲಿದೆ.
@VSOMANNA_BJP@AshwiniVaishnaw
Jnanabharati halt will get a 95-metre platform extension along with passenger amenities such as toilets, platform shelters, & drinking water facilities in next 12 to 18months.
This work will enable longer trains to halt at GNB, strengthening seamless integration with Namma Metro
3-4 ತಿಂಗಳಲ್ಲಿ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ಆರಂಭ
ಬೆಂಗಳೂರಿನಿಂದ 100 ಕಿ.ಮೀ. ದೂರದ ಸ್ಥಳಗಳಿಗೆ ಚತುಷ್ಪಥ ರೈಲ್ವೆ
ಬೆಂಗಳೂರಿನಿಂದ 100 ಕಿ.ಮೀ. ವ್ಯಾಪ್ತಿಯ ನಗರಗಳಿಗೆ ಚತುಷ್ಪಥ (4-Lane) ರೈಲ್ವೆ ಮಾರ್ಗ ಹಾಗೂ ಮಂಗಳೂರಿಗೆ ಸುಗಮ ಸಂಪರ್ಕ ಕಲ್ಪಿಸುವ ನಮ್ಮ ಪ್ರಸ್ತಾವನೆಗೆ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವರಾದ ಶ್ರೀ ವಿ.ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸಂತಸ ತಂದಿದೆ.
ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯದ ಪ್ರಮುಖ ರೈಲ್ವೆ ಬೇಡಿಕೆಗಳನ್ನು ನಾನು ಅವರ ಮುಂದಿಟ್ಟಿದ್ದೆ. ಬೆಂಗಳೂರಿನಿಂದ ತುಮಕೂರು, ಮೈಸೂರು, ಹಿಂದೂಪುರ ಹಾಗೂ ಕೋಲಾರಕ್ಕೆ 4 ಪಥದ ಹಳಿ ನಿರ್ಮಾಣ, ಬೆಂಗಳೂರು-ಮಂಗಳೂರು ನಡುವೆ ಸಕಲೇಶಪುರ-ಗುಂಡ್ಯ ಮಾರ್ಗವಾಗಿ ಸಮಾನಾಂತರ ರಸ್ತೆ-ರೈಲು ಯೋಜನೆ ಹಾಗೂ ತುಮಕೂರು-ಚಿತ್ರದುರ್ಗ-ದಾವಣಗೆರೆ ಜೋಡಿಹಳಿ ನಿರ್ಮಾಣ ಸೇರಿದಂತೆ ನಮ್ಮ ಹಲವು ಮನವಿಗೆ ಸಚಿವರು ಭರವಸೆಯ ಮುದ್ರೆ ಒತ್ತಿದ್ದು, ರಾಜ್ಯದ ಮೂಲಸೌಕರ್ಯ ವಲಯಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ.
ಮುಖ್ಯಾಂಶಗಳು
👉 ವಿಜಯಪುರಕ್ಕೆ ವಂದೇ ಭಾರತ್: ಮುಂದಿನ 3-4 ತಿಂಗಳಲ್ಲಿ ವಿಜಯಪುರ ಜಿಲ್ಲೆಗೆ ಬಹುನಿರೀಕ್ಷಿತ 'ವಂದೇ ಭಾರತ್ ಸ್ಲೀಪರ್' ರೈಲು ಸಂಚಾರ ಆರಂಭವಾಗಲಿದೆ.
👉 ಬೆಂಗಳೂರು- ವಿಜಯಪುರ ನಡುವೆ ವಾರಕ್ಕೆ ಎರಡು ಸಲ ಸಂಚರಿಸುತ್ತಿರುವ ವಿಶೇಷ ರೈಲನ್ನು ಕಾಯಂ ಮಾಡಲಾಗುವುದು.
👉 ಬೆಂಗಳೂರು-ತುಮಕೂರು ಚತುಷ್ಪಥ: ಈ ಮಾರ್ಗದ ಸರ್ವೆ ಕಾರ್ಯ ಈಗಾಗಲೇ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಮುಂದಿನ ಒಂದೂವರೆ-ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ.
👉 ಬೆಂಗಳೂರು-ಕೋಲಾರ ನೇರ ಸಂಪರ್ಕ: ವೈಟ್ಫೀಲ್ಡ್ ವರೆಗಿನ ಸದ್ಯದ 4 ಪಥದ ಮಾರ್ಗವನ್ನು ಕೋಲಾರದವರೆಗೆ ವಿಸ್ತರಿಸಲಾಗುವುದು. ಇದಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.
👉 ಬೆಂಗಳೂರು-ಮೈಸೂರು ಲೈನ್: ಈ ಪ್ರಮುಖ ಮಾರ್ಗವನ್ನು ಕೂಡ ಚತುಷ್ಪಥವನ್ನಾಗಿ (4-Lane) ಮೇಲ್ದರ್ಜೆಗೇರಿಸಲು ಶೀಘ್ರದಲ್ಲೇ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
👉 ಬೆಂಗಳೂರು-ಮಂಗಳೂರು ಕನೆಕ್ಟಿವಿಟಿ: ಬಂದರು ನಗರಿ ಮಂಗಳೂರಿಗೆ ತ್ವರಿತ ರೈಲು ಸಂಚಾರಕ್ಕಾಗಿ ಸಕಲೇಶಪುರ-ಗುಂಡ್ಯ ನಡುವೆ ಸಮಾನಾಂತರ ರಸ್ತೆ ಮತ್ತು ರೈಲು ಮಾರ್ಗದ ಚತುಷ್ಪಥ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
👉 ತುಮಕೂರು-ದಾವಣಗೆರೆ ಜೋಡಿಹಳಿ: ಸದ್ಯ ಏಕಪಥವಾಗಿರುವ ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗವನ್ನು ಜೋಡಿಹಳಿಯನ್ನಾಗಿ (Double Track) ಪರಿವರ್ತಿಸುವ ನಮ್ಮ ಬೇಡಿಕೆಗೂ ಸಮ್ಮತಿ ಸಿಕ್ಕಿದೆ.
ಕರ್ನಾಟಕದ ಸಾರಿಗೆ ಇತಿಹಾಸದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿರುವ ಈ ಯೋಜನೆಗಳಿಗೆ ತಕ್ಷಣ ಒಪ್ಪಿಗೆ ನೀಡಿದ ಕೇಂದ್ರ ಸಚಿವ ಶ್ರೀ ವಿ.ಸೋಮಣ್ಣ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
@VSOMANNA_BJP
Shri V. Somanna, Hon'ble Union Minister of State for Railways and Jal Shakti will dedicate the Road Over Bridge in lieu of Level Crossing Gate No. 47 (Yelekeri Gate) at Channapatna and flag off Train No. 11014 Coimbatore - Lokmanya Tilak Terminus (Mumbai) Express with additional stoppage at Yelahanka Railway station today.