ಕರ್ನಾಟಕ ಏಕೀಕರಣದ ರೂವಾರಿ, ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ ಜಯಂತಿ ಕನ್ನಡಿಗರ ಆತ್ಮಗೌರವದ ದಿನ. ಅವರು ಬಿತ್ತಿದ ಏಕತೆಯ ಬೀಜವೇ ಇಂದು ಕರ್ನಾಟಕವಾಗಿ ಬೆಳೆದಿದೆ. ಆ ಕನಸನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಹೆಗಲ ಮೇಲಿದೆ. ಆ ಮಹಾನ್ ಚೇತನಕ್ಕೆ ಶತಶತ ನಮನಗಳು.
ಕ್ಷಮೆಯಾಚನೆ ಒಪ್ಪಿಕೊಳ್ಳುತ್ತೇವೆ.
ಆದರೆ ಕನ್ನಡಿಗರ ಸ್ವಾಭಿಮಾನವನ್ನು ಮತ್ತೆ ಮತ್ತೆ ಕೆಣಕುವ ತಪ್ಪು ಮಾಡಬೇಡಿ.
ಕನ್ನಡಿಗರ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಿದರೆ, ಉತ್ತರವೂ ಅಷ್ಟೇ ದೃಢವಾಗಿರುತ್ತದೆ
ಕರವೇ ರಾಜ್ಯದ್ಯಕ್ಷರಾದ ಟಿಎ ನಾರಾಯಣಗೌಡರ ಆದೇಶದ ಮೇರೆಗೆ ಹಿಂದಿ ಹೇರಿಕೆ ಮಾಡುತ್ತಿದ್ದ ಕೇಂದ್ರ ಸರ್ಕಾರದ ಅಧೀನದ ಭಾರತ್ ಎಲೆಕ್ಟ್ರಿಕಲ್ ಸಂಸ್ಥೆ ಹಾಕಿದಂತ ಹಿಂದಿ ನಾಮಪತ್ರಗಳನ್ನು ಧ್ವಂಸಗೊಳಿಸಿದ ಕರವೇ 🔥💪🏻
@karave_KRV
ಕರ್ನಾಟಕದ ಹೆಮ್ಮೆ, ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜಕುಮಾರ್ ಅವರಿಗೆ ಜನ್ಮದಿನದ ಗೌರವ ನಮನಗಳು. ಅಣ್ಣಾವ್ರ ಕಲೆ, ಮಾನವೀಯತೆ, ಕನ್ನಡಾಭಿಮಾನ ಮತ್ತು ಸಂಸ್ಕಾರಯುತ ಬದುಕು ಇಂದಿಗೂ ಅನೇಕ ಪೀಳಿಗೆಗಳಿಗೆ ಸ್ಪೂರ್ತಿ. ಅವರ ನೆನಪು ಕನ್ನಡಿಗರ ಹೃದಯದಲ್ಲಿ ಶಾಶ್ವತ.
#ಕರವೇಸಾಮಾಜಿಕಜಾಲತಾಣ#ಕರವೇಹೋರಾಟಗಳು#ಕನ್ನಡ#ಕರವೇ#karave#krv
ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಸಲಹಿದ ತಿಮ್ಮಕ್ಕನವರು ತಮ್ಮ ಬಹುಪಾಲು ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟವರು.
ಇಂದು ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ಅವರನ್ನು ಚಿರಸ್ಥಾಯಿಯಾಗಿಸಿದೆ. ಅಗಲಿದ ಮಹಾಚೇತನಕ್ಕೆ ನಮನಗಳು.
#ಸಾಲುಮರದ_ತಿಮ್ಮಕ್ಕ
ಕನ್ನಡದ ಸಾಹಿತ್ಯ ಲೋಕದ ದಿವ್ಯ ಚೇತನ,ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ #ಕುವೆಂಪು ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು
ಕುವೆಂಪು ಅವರು ಜಗತ್ತಿಗೆ 'ಮನುಜ ಮತ ವಿಶ್ವಪಥ’ ಸಂದೇಶ ಸಾರುವ ಮೂಲಕ ವಿಶ್ವಮಾನವ ಎನಿಸಿಕೊಂಡಿದ್ದು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹಿರಿಮೆ ಅಪರಿಮಿತವಾದುದು
#ಕುವೆಂಪು#ಕರವೇ
ಎಲ್ಲ ಧರ್ಮಗಳ ಧರ್ಮಗುರುಗಳನ್ನು ಭೇಟಿಮಾಡಿ, ಧರ್ಮಕೇಂದ್ರಗಳಲ್ಲಿ ಕನ್ನಡದ ಅನುಷ್ಠಾನದ ಕುರಿತು ಸಹಭಾಗಿತ್ವ ಕೋರುವ ಅಭಿಯಾನದ ಮುಂದುವರೆದ ಭಾಗವಾಗಿ ಬೆಂಗಳೂರಿನ ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೊ ಅವರನ್ನು ಇಂದು ಭೇಟಿ ಮಾಡಿದೆ. ಈ ಭೇಟಿ ಒಂದು ಅವಿಸ್ಮರಣೀಯ ಅನುಭವವಾಗಿತ್ತು. ಗುರುಗಳು ಅತ್ಯಂತ ಆಪ್ಯಾಯತೆ ಮತ್ತು ಪ್ರೀತಿಯಿಂದ ಬರಮಾಡಿಕೊಂಡರು.
ಕ್ರೈಸ್ತ ದೇವಾಲಯಗಳಲ್ಲಿ ಕನ್ನಡ ಅನುಷ್ಠಾನದ ಕುರಿತು ಹಲವು ವರ್ಷಗಳಿಂದ ಇರುವ ಬೇಡಿಕೆಗಳ ಕುರಿತು ಅವರೊಂದಿಗೆ ಚರ್ಚಿಸಿದೆ. ಕನ್ನಡ ನಾಡು ಎಲ್ಲ ಧರ್ಮಗಳನ್ನೂ ಒಳಗೆ ತಂದುಕೊಂಡು ಹೇಗೆ ಬೆಳೆದುಬಂದಿದೆ ಎಂಬುದನ್ನು ವಿವರಿಸಿದೆ. ಸಹಬಾಳ್ವೆ, ಸೋದರತ್ವ, ಸಹಕಾರ ಮತ್ತು ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ಮಹತ್ವದ ಕುರಿತು ಅವರೊಂದಿಗೆ ಮಾತನಾಡಿದೆ. ಕನ್ನಡ ಸಂಸ್ಕೃತಿಗೆ ಕ್ರೈಸ್ತ ಅನುಯಾಯಿಗಳ ಕೊಡುಗೆಯನ್ನು ಸ್ಮರಿಸಿದೆ. ವಿಶೇಷವಾಗಿ ಬಿ.ಎಲ್.ರೈಸ್, ಲಾರ್ಡ್ ಕಬ್ಬನ್, ರೆವೆರೆಂಡ್ ಫರ್ಡಿನ್ಯಾಂಡ್ ಕಿಟೆಲ್, ಕ್ರಾಫರ್ಡ್ ಇನ್ನಿತರರು ಕನ್ನಡ ನಾಡಿನ ಪರಂಪರೆಯ ಭಾಗವಾಗಿರುವುದು ಮತ್ತು ಕನ್ನಡಿಗರ ಪಾಲಿಗೆ ಎಂದಿಗೂ ಅಜರಾಮರ ವ್ಯಕ್ತಿತ್ವಗಳಾಗಿ ಉಳಿದುಕೊಂಡಿರುವುದನ್ನು ನಾನು ವಿವರಿಸಿದೆ.
ಕರ್ನಾಟಕದ ಕ್ರೈಸ್ತ ದೇವಾಲಯಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆಗಳು, ಪ್ರವಚನಗಳು ನಡೆಯಬೇಕಾದ ಮಹತ್ವವನ್ನು ನಾನು ಒತ್ತಿಹೇಳಿದೆ. ಕನ್ನಡದಲ್ಲಿ ಪ್ರಾರ್ಥನೆ ಎಂಬುದು ಕೇವಲ ಕನ್ನಡಿಗರ ಅಪೇಕ್ಷೆ ಅಥವಾ ಅನುಕೂಲಕ್ಕೆ ಮಾತ್ರವಲ್ಲ, ಅದರ ಮೂಲಕ ಕನ್ನಡೇತರರನ್ನು ಕನ್ನಡದ ಮುಖ್ಯವಾಹಿನಿಗೆ ತರುವ ಕಾರ್ಯವೂ ನಡೆಯುತ್ತದೆ. ಕರ್ನಾಟಕದಲ್ಲಿ ಹತ್ತಾರು ವರ್ಷಗಳಿಂದ ವಾಸ ಮಾಡುತ್ತಿರುವವರನ್ನೂ ನಾವು ಕನ್ನಡಿಗರೆಂದೇ ಪರಿಗಣಿಸುತ್ತೇವೆ. ತಮ್ಮ ತಾಯ್ನುಡಿಯ ಜೊತೆಗೆ ಈ ನೆಲದ ನುಡಿಯನ್ನೂ ಅವರು ತಮ್ಮದಾಗಿಸಿಕೊಂಡರೆ ಅದರ ಲಾಭ ಅವರಿಗೇ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡದ ಪ್ರಾರ್ಥನೆಗಳು ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟೆ.
ನೀವು ತೆಗೆದುಕೊಳ್ಳುವ ತೀರ್ಮಾನ ಕರ್ನಾಟಕದ ಚರ್ಚುಗಳಲ್ಲಿ "ಕನ್ನಡ ಶಾಸನ" ವಾಗಬೇಕು. ಕರ್ನಾಟಕದ ಇತಿಹಾಸದಲ್ಲಿ ಅದೊಂದು ಮಹಾಶಾಸನವಾಗಿ ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಕನ್ನಡಿಗರು ನಿಮ್ಮನ್ನು ಸದಾ ಪ್ರೀತಿಯಿಂದ ನೆನೆಯುತ್ತಾರೆ ಎಂದು ಅವರಿಗೆ ಹೇಳಿದೆ.
ಆರ್ಚ್ ಬಿಷಪ್ ಅವರು ನನ್ನ ಮಾತುಗಳನ್ನು ಅತ್ಯಂತ ಆಸ್ಥೆಯಿಂದ, ಪ್ರೀತಿಯಿಂದ ಕೇಳಿಸಿಕೊಂಡರು. ಕನ್ನಡದ ಬೇಡಿಕೆ ಹೊತ್ತು ಅವರ ಬಳಿ ಬಂದಿದ್ದು ಅವರಿಗೆ ಅತ್ಯಂತ ಸಂತೋಷ ತಂದಿತ್ತು. ನಿಮ್ಮ ಈ ನಡೆಯೇ ನನಗೆ ಅತ್ಯಂತ ಸಂತೋಷ, ಸಂಭ್ರಮ ತಂದಿದೆ. ಖಂಡಿತವಾಗಿಯೂ ನೀವು ಆಡಿದ ಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ಈ ಬಗ್ಗೆ ನಮ್ಮಿಂದ ಸಾಧ್ಯವಾಗುವ ಎಲ್ಲ ಕಾರ್ಯಗಳನ್ನೂ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.
ಡಾ. ಪೀಟರ್ ಮಚಾಡೊ ಅಪಾರ ಜ್ಞಾನಿಗಳು, ಅವರ ತಿಳಿವಳಿಕೆಯ ಹರವು ವಿಸ್ತಾರವಾದದ್ದು. ಅವರು ನನ್ನೊಂದಿಗೆ ಸಾಕಷ್ಟು ವಿಷಯಗಳ ಕುರಿತು ಮಾತನಾಡಿದರು. ಅಪಾರವಾದ ಕನ್ನಡದ ಕಳಕಳಿಯೂ ಅವರಿಗಿದೆ. ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿ ಅಭಿನಂದಿಸಿದೆ.
ಏಸುಕ್ರಿಸ್ತರು ಬೋಧಿಸಿದ್ದು, ಕರುಣೆ, ಪ್ರೀತಿ ಮತ್ತು ಶಾಂತಿಯನ್ನು. ಕನ್ನಡದ ನೆಲವು ಕೂಡ ಇದೇ ಮೌಲ್ಯಗಳನ್ನು ಪ್ರತಿಪಾದಿಸಿಕೊಂಡು ಬಂದಿದೆ. ನಮ್ಮ ನೆಲದ ಮಹಾದರ್ಶನಿಕ ಬಸವಣ್ಣನವರು "ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ. ದಯವೇ ಧರ್ಮದ ಮೂಲವಯ್ಯಾ. ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ" ಎಂದು ಹನ್ನೆರಡನೆ ಶತಮಾನದಲ್ಲೇ ಹೇಳಿದ್ದರು. ಕನ್ನಡದ ನೆಲ ಇಂಥ ಮಹಾ ಆದರ್ಶಗಳನ್ನು ಹೊತ್ತು ನಡೆದಿದೆ. ಕರ್ನಾಟಕದ ನೆಲದಲ್ಲಿ ವಾಸಿಸುವವರು ಕನ್ನಡದ ಈ ಪ್ರೀತಿಯನ್ನು ಧರಿಸಿದರೆ ಅದಕ್ಕಿಂತ ಸಂತೋಷ ಇನ್ನೇನಿರಲು ಸಾಧ್ಯ?
ರಸವೆ ಜನನ,ವಿರಸವೆ ಮರಣ,ಸಮರಸವೆ ಜೀವನ ಎಂದು ಜೀವನದ ಕುರಿತು ಪರಿಣಾಮಕಾರಿಯಾಗಿ ಹೇಳಿದ ಶ್ರೇಷ್ಠ ಕವಿ, ಜ್ಞಾನಪೀಠ ಪುರಸ್ಕೃತ ದ.ರಾ.ಬೇಂದ್ರೆ ಅವರ
ಪುಣ್ಯಸ್ಮರಣೆಯಂದು ಗೌರವ ನಮನಗಳು.
#ಕರವೇ#ಬೇಂದ್ರೆ@karave_KRV
ಭಾರತ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಮಹಿಳಾ ಹೋರಾಟಗಾರ್ತಿ, ಕನ್ನಡ ನಾಡಿನ ವೀರವನಿತೆ,ಬ್ರಿಟಿಷರ ವಿರುದ್ಧ ಖಡ್ಗ ಹಿಡಿದು ಹೋರಾಡಿದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯಂದು ಶತಕೋಟಿ ಪ್ರಣಾಮಗಳು.ಅವರ ಜೀವನಗಾಥೆ ನಮ್ಮೆಲ್ಲರಿಗೂ ಪ್ರೇರಣೆ.
#kitturranichennamma#ಕರವೇಸಾಮಾಜಿಕಜಾಲತಾಣ#ಕರವೇ#KRV#karave
ಕುವೆಂಪು ಪರಂಪರೆಯ ಮಂತ್ರ ಮಾಂಗಲ್ಯ ವಿವಾಹದಲ್ಲಿ ಭಾಗವಹಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಟಿ.ಎ. ನಾರಾಯಣ ಗೌಡರು, ಖ್ಯಾತ ಗಾಯಕಿ ಸುಹಾನಾ ಸೈಯದ್ ಮತ್ತು ನಿತಿನ್ ಶಿವಂಶ್ ದಂಪತಿಗೆ ಹಾರ್ದಿಕ ಶುಭಾಶಯ ಕೋರಿದರು.
“ಕುವೆಂಪು ತತ್ವಗಳೇ ಕನ್ನಡ ನಾಡಿನ ನಿಜವಾದ ಸಂಸ್ಕೃತಿ” — ಟಿ.ಎ.ನಾರಾಯಣ ಗೌಡ
#ಕುವೆಂಪು#ಮಂತ್ರಮಾಂಗಲ್ಯ#ಕರವೇ