ನಾರಾಯಣ ಆಸ್ಪತ್ರೆ ಬೊಮ್ಮಸಂದ್ರ, ಪ್ರತಿ ಒಬ್ಬ ಡಾಕ್ಟರ್, ನರ್ಸ್ ಎಲ್ಲರೂ ಇಂಗ್ಲೀಶ್ ಅಲ್ಲೇ ಮಾತಾಡ್ತ ಇದ್ದಾರೆ. ಕನ್ನಡ ಬರುತ್ತೋ ಇಲ್ಲವೋ ಗೊತ್ತಿಲ್ಲ. ಕೆಲವರು ತಮಿಳಿನಲ್ಲಿ ಮಾತಾಡ್ತ ಇದ್ದಾರೆ. Border ಊರು ಆಗಿದ್ದರಿಂದ ತಮಿಳು ಅರ್ಥ ಆಗತ್ತೆ. ಆದರೆ ಕನ್ನಡದವರೆ ಆದ ನನ್ನ ಅತ್ತೆ (ಇಲ್ಲೇ ಹತ್ತಿರದಲ್ಲಿ ಸ್ವಂತ ಮನೆ, ಇಲ್ಲೇ ಹುಟ್ಟಿ ಬೆಳೆದ ಜನ) ನನಗೆ ಏನು ಅರ್ಥ ಆಗುತ್ತಾ ಇಲ್ಲ ಇಲ್ಲಿ, ಎಲ್ಲದಕ್ಕೂ ಇನ್ನೊಬ್ಬರ ಮುಖ ನೋಡಬೇಕು ಅಂದಾಗ ನಿಜವಾಗಿಯೂ ಬೇಜಾರಾಯ್ತು.
ನಮ್ಮ ಊರಲ್ಲೇ ನಮ್ಮನ್ನ ಕೇಳ ದರ್ಜೆ ಜನ ಅನ್ನೋ ಥರ ನೋಡುವುದು ಎಷ್ಟು ಸರಿ?
ದೇಶದ ಎಲ್ಲಿಂದನೋ ಡಾಕ್ಟರುಗಳು ಬರಬಹುದು, ಹಾಗಂತ local ಜನರ ಜತೆ ಮಾತೆ ಆಡದೆ ಕೇವಲ ಪರಭಾಷೆಯಲ್ಲಿ ಮಾತಾಡಿ ಇಡೀ ಜೀವನ ಸಾಗಿಸೋದು ಎಷ್ಟು ಸರಿ?
ಶಿವಮೊಗ್ಗದಲ್ಲಿ ಹೊರಗಡೆ ಇಂದ ಬಂದ doctors ಸಹಾ ಕನ್ನಡ ಕಲಿತು ಮಾತಾಡುತ್ತಾರೆ (ಬೆಂಗಳೂರಿನಲ್ಲೂ ಹಲವರು ಇರಬಹುದು, ಹಳೇ ಕಾಲದವರಂತೂ ಖಂಡಿತ ಕಲಿತಿರುತ್ತಾರೆ).
ಬೆಂಗಳೂರಿಗೆ (ಮಣಿಪಾಲ್ ಸಹ ನೋಡಿದ್ದೇನೆ) ಇದೆಂಥ ರೋಗ?
ಇಂಗ್ಲಿಷ್, ಹಿಂದೀ ಗೊತ್ತಿಲ್ಲದೆ ಇರುವವ ಈ ದೇಶದ ಪ್ರಜೆ ಅಲ್ಲವಾ? ಅವನಿಗೆ ಈ ದೇಶದ ಸೌಕರ್ಯದ ಮೇಲೆ ಹಕ್ಕಿಲ್ಲವ?
ಕನ್ನಡದವರು ಕಡಿಮೆ ದುಡ್ಡು ಕೊಡುತ್ತಾರ? Development, ಒಕ್ಕೂಟ ವ್ಯವಸ್ಥೆ ಹೆಸರಲ್ಲಿ ನಾವಾಗಲೇ ಎರಡನೇ ದರ್ಜೆ ಪ್ರಜೆ ಆಗಿ ಹೋಗಿದ್ದೀವಿ. ಕರಾಳ ಭವಿಷ್ಯವಿದೆ ಮುಂದೆ.
ಸ್ವತಂತ್ರ ದಿನ..
ಉತ್ಸಾಹ, ದೇಶಭಕ್ತಿಯಿಂದ ಘೋಷಣೆ ಕೂಗುತ್ತಿರುವ ಮಕ್ಕಳ ಮೆರವಣಿಗೆ ಈ ದೇಶದ ಕತೆ ಹೇಳ್ತಾ ಇದೆ..
ಗುಂಡಿ ಬಿದ್ದಿರುವ ರಸ್ತೆ. ಗುಂಡಿಗಳನ್ನು ಹಾರಿಕೊಂಡು ಸಾಗುವ ಮಕ್ಕಳಿಗೆ ಅದೊಂದು ಸಮಸ್ಯೆ ಎಂದೇ ಅನ್ನಿಸಿರದು. ಅಂಬುಲೆನ್ಸ್ ಬಂದಾಗ ಹೇಗೆ ಸ್ಪಂದಿಸಬೇಕೆಂಬ ನಾಗರಿಕ ಪ್ರಜ್ಞೆ ಕಲಿಸದ ಹಿರಿಯರು.
ದೇಶಪ್ರೇಮ = ಘೋಷಣೆ ಎಂಬಂತಾಗಿದೆ
ಬೆಂಗಳೂರಿನ ಪ್ರದೇಶಗಳಿಗೆ ಇದ್ದ ಹಳೆಯ #ಕನ್ನಡದ್ದೇ ಹೆಸರುಗಳು ಮತ್ತು ಈಗಿನ ಹೊಸ ಹೆಸರುಗಳು ಪಟ್ಟಿ.
ತಪ್ಪದೆ ಕನ್ನಡಿಗರಿಗೆ ಮುಟ್ಟುವ ಹಾಗೆ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಿ.🙏
ಕೊಡಿಗೆಹಳ್ಳಿ- ಸಹಕಾರ ನಗರ
ಸಿದ್ಧಾಪುರ - ಜಯನಗರ
ಶಿವನಹಳ್ಲಿ - ಶಿವನಗರ
ಹೊಸಹಳ್ಳಿ - ವಿಜಯನಗರ
ಗಂಗೇನಹಳ್ಳಿ - ಗಂಗಾನಗರ
ಬಿನ್ನಮಂಗಲ - ಇಂದಿರಾನಗರ
ಸುಂಕೇನಹಳ್ಳಿ - ಬಸವನಗುಡಿ
ಬಸವನಗುಡಿ - ಬುಲ್ ಟೆಂಪಲ್
ತಿಮ್ಮೇನಹಳ್ಳಿ- ಗೋವಿಂದರಾಜನಗರ
ಕೋತಿಬಂಡೆ - ಮಾರುತಿ ಮಂದಿರ
ಜರಗನಹಳ್ಳಿ - ಜೆಪಿ ನಗರ
ದಂಡು - ಕಂಟೋನ್ಮೆಂಟ್ ?
ಜೇಡರಹಳ್ಳಿ - ಸಂಪಗಿರಾಮನಗರ
ಆನೆಪಾಳ್ಯ - ಗಜೇಂದ್ರ ನಗರ
ಕಳ್ಳ ದಾಸರಹಳ್ಳಿ - ಶ್ರೀನಗರ
ಸುಂಕೇನ ಹಳ್ಳಿ= ನಾರಾ ಕಾಲೋನಿ
ಸೀಗೆ ಬೇಲಿ= ಕೃ ರಾ ಮಾರುಕಟ್ಟೆ
ದೊಡ್ಡಪೇಟೆ= ಅವೆನ್ಯೂ ರಸ್ತೆ
ಅರಳೇ ಪೇಟೆ = ಕಾಟನ್ ಪೇಟೆ
ಎಮ್ಮೆ ಹೊಳೆ = ವೃಷಭಾವತಿ
ಕೆಂಚೇನಹಳ್ಳಿ - ರಾಜರಾಜೇಶ್ವರಿ ನಗರ,
ಗವಿಪುರ ಗುಟ್ಟಳ್ಳಿ = ಕೆಂಪೇಗೌಡ ನಗರ
ಹೊಂಬೆಗೌಡನಗರ - ವಿಲ್ಸನ್ ಗಾರ್ಡನ್?
ತಾಯಪ್ಪನಹಳ್ಳಿ - ಜಯನಗರ ಟಿ ಬ್ಲಾಕ್
ಜಿಂಕೆ ತಿಮ್ಮನಹಳ್ಳಿ- ವಾರಣಾಸಿ(ಹೊರಮಾವು ಹತ್ರ)
ದೀವಟಿಗೆ ರಾಮನಹಳ್ಳಿ - ದೀಪಾಂಜಲಿ ನಗರ
ಅಕ್ಕಿತಿಮ್ಮನಹಳ್ಳಿ - ಶಾಂತಿನಗರ/ರಿಚ್ಮಂಡ್ ಟೌನ್
ಕೆಂಗುಂಟೆ = ಅಜಾದ್ ನಗರ (ಚಾಮರಾಜಪೇಟೆ, ೯ನೇ ರಸ್ತೆ)
ಕೇತಮಾರನಹಳ್ಳಿ - ಬಸವೇಶ್ವರ ನಗರ / ರಾಜಾಜಿನಗರ ಕೆ ಬ್ಲಾಕ್(ನಾಗಪುರ)
ನಿಮಗೆ ಗೊತ್ತಿರುವ ಹೆಸರುಗಳು ಇದ್ರೆ, ತಪ್ಪದೆ ತಿಳಿಸಿ.
#ಕನ್ನಡ #ಬೆಂಗಳೂರು
Someone please invite this Brother to every School in Bharat.
Our kids need to know that - What we See Isn't Necessarily The Truth.
When will our Regulator be Strict about Artificial Colours? 🥺 It's there Everywhere Now. Especially on Road Side Food. Even Big Restaurants add Artificial Colour to Entice the Customers.
Every Child Should Watch This. Our Next Generation Needs better Food.
Share Widely !!!
#FI
ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ.
#ಕಲಬುರ್ಗಿಮಾಸ#MMKalburgi
3. ವೈದಿಕತೆಗೆ ಪರ್ಯಾಯವಾಗಿ ಹುಟ್ಟಿದ ಲಿಂಗಾಯತ ಧರ್ಮ
ಉತ್ತರ ಭಾರತದಿಂದ ಬೌದ್ಧ, ಜೈನ, ಆಗಮಿಕ ಶೈವ, ವೈದಿಕ ಧರ್ಮಗಳು ಪ್ರಾಚೀನ ಕರ್ನಾಟಕಕ್ಕೆ ವಲಸೆ ಬಂದವು.
ವಲಸೆ ಬಂದ ಜೈನ, ವೈದಿಕ ಧರ್ಮಗಳ ಭಾಷೆ, ಸಾಹಿತ್ಯ ಕಾಡ್ಗಿಚ್ಚಿನಂತೆ ಹಬ್ಬಿದವು. ವೈದಿಕದ ಪ್ರಭಾವದಿಂದ ಒಂದು ಪುರೋಹಿತ ವರ್ಗವೂ ಸೃಷ್ಟಿಯಾಯಿತು.
ಮೂಲತಃ ಆರ್ಯರಾಗಿದ್ದ ವೈದಿಕರಿಗೆ ಕನ್ನಡ ಮಾತೃಭಾಷೆಯೆನಿಸಲಿಲ್ಲ. ಅವರಿಗೆ ಸಂಸ್ಕೃತ ತಮ್ಮ ಪವಿತ್ರ ಗ್ರಂಥಗಳನ್ನು ಬರೆಯುವ ದೇವ ಭಾಷೆಯಾದರೆ, ಕನ್ನಡ ಕೇವಲ ಆಡು ಭಾಷೆಯಾಯಿತು.
ವೈದಿಕರು ತಮ್ಮ ಧರ್ಮ, ಪುರಾಣಗಳನ್ನು ಪ್ರಚಾರ ಮಾಡಲು ಕೇವಲ ಭಾಷೆ, ಸಾಹಿತ್ಯ ಮತ್ತು ಸಿದ್ದಾಂತಗಳನ್ನು ಬಳಸಲಿಲ್ಲ. ನಮ್ಮ ನೆಲ, ನದಿ, ಬೆಟ್ಟ, ಕಾಡುಗಳನ್ನೂ ಬಳಸಿಕೊಂಡರು.
ಆರ್ಯರ ವೈದಿಕ ಧರ್ಮವನ್ನು ಬಸವಾದಿ ಶರಣರು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ತನ್ನದೇ ಸ್ವತಂತ್ರ ತತ್ವ, ಆಚರಣೆಗಳಿದ್ದ ಬಹುಸಂಖ್ಯಾತರ ಲಿಂಗಾಯತ ಧರ್ಮ ಸ್ಥಾಪಿಸಿದರು.
ಪ್ರವಾಹದಂತೆ ಬಂದ ಶರಣ ಚಳುವಳಿಯಲ್ಲಿ ವೈದಿಕತೆಯ ವರ್ಣ, ಜಾತಿ, ಲಿಂಗ ಬೇಧಗಳು ಕೊಚ್ಚಿ ಹೋದವು.
ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು:
ಪ್ರಾಚೀನ ಕರ್ನಾಟಕದಲ್ಲಿ ವ್ಯವಸ್ಥಿತ ಧರ್ಮವಿರಲಿಲ್ಲ ಕೇವಲ ವೃತ್ತಿಯಾಧಾರಿತ ಗುಂಪುಗಳಿದ್ದವು. ಉತ್ತರ ಭಾರತದಿಂದ ಬೌದ್ಧ, ಜೈನ, ಆಗಮಿಕ ಶೈವ, ವೈದಿಕ ಧರ್ಮಗಳು ಇಲ್ಲಿಗೆ ವಲಸೆ ಬಂದವು.
ಇಲ್ಲಿ ಪ್ರಾಬಲ್ಯ ಸಾಧಿಸಲು ಅವುಗಳ ನಡುವೆ ನಡೆದ ಸಂಘರ್ಷದಲ್ಲಿ ವೈದಿಕ ಧರ್ಮ ಜಯಗೊಳಿಸಿತು. ಬೌದ್ಧ ನಾಶವಾದರೆ, ಜೈನ ದುರ್ಬಲವಾಯಿತು, ಆಗಮಿಕ ಶೈವ ವೈದಿಕಕ್ಕೆ ಶರಣಾಯಿತು.
ನಮ್ಮ ರಾಜರು ಉತ್ತರ ಭಾರತವನ್ನು ರಾಜಕೀಯವಾಗಿ ವಿರೋಧಿಸಿದರೂ ಅದರ ಧರ್ಮ, ಸಂಸ್ಕೃತಿ, ಭಾಷೆಗಳನ್ನು ಒಪ್ಪಿಕೊಂಡು ಪೋಷಿಸಿದರು. ಇದರಿಂದ ಕನ್ನಡಿಗರು ಅವುಗಳ ಹಿಡಿತಕ್ಕೆ ಬಂದರು.
ವಲಸೆ ಧರ್ಮಗಳ ಬಸದಿ, ದೇವಸ್ಥಾನಗಳು ಇಲ್ಲಿ ಹಬ್ಬಿದವು. ಅವುಗಳ ತತ್ವ ಪ್ರಸಾರ ಮಾಡುವ ತೀರ್ಥಂಕರ ಪುರಾಣ, ರಾಮಾಯಣ, ಮಹಾಭಾರತ ಶಿಲ್ಪಗಳು ಈ ದೇವಾಲಯಗಳಲ್ಲಿ ಎದ್ದು ನಿಂತವು.
ವೈದಿಕದ ಪ್ರಭಾವದಿಂದ ಒಂದು ಪುರೋಹಿತ ವರ್ಗ ಸೃಷ್ಟಿಯಾಯಿತು. ತೆರಿಗೆ ಹಣದಲ್ಲಿ ಒಂದು ಪಾಲನ್ನು ದಾನವಾಗಿ ಪಡೆದು ಪ್ರಜೆಗಳನ್ನು ಶೋಷಿಸಲು ಅದು ರಾಜರ ಜೊತೆ ಕೈಜೋಡಿಸಿತು.
ವಲಸೆ ಧರ್ಮಗಳ ಜೊತೆ ವರ್ಣ ಜಾತಿ ವ್ಯವಸ್ಥೆಗಳೂ ಕೂಡ ಒಳ ಬಂದವು. 9ನೇ ಶತಮಾನದ ಹೊತ್ತಿಗೆಲ್ಲಾ ಇವು ಸಮಸ್ಯೆಯಾಗಿ ಬೆಳೆದು ನಿಂತಿದ್ದು ಜೈನ ಕೃತಿ ವಡ್ಡಾರಾಧನೆಯಲ್ಲಿ ಕಾಣುತ್ತದೆ.
(‘ವಚನ ಸಾಹಿತ್ಯ: ವೈದಿಕ ವಿರೋಧ ಮತ್ತು ಜಾತಿ ನಿರಸನ’ ಲೇಖನದಿಂದ ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೧.)
ಸಂಸ್ಕೃತದ ಹಬೆಯಲ್ಲಿ ನಲುಗಿದ ಕನ್ನಡ:
ವಲಸೆ ಬಂದ ಜೈನ, ವೈದಿಕ ಧರ್ಮಗಳ ಭಾಷೆ, ಸಾಹಿತ್ಯ ಕಾಡ್ಗಿಚ್ಚಿನಂತೆ ಹಬ್ಬಿದವು. ತಮಿಳು ಕವಿಗಳು ಸಿಲಪ್ಪದಿಕಾರಂನಂತಹ ಸ್ಥಳೀಯ ಚರಿತ್ರೆ ಬರೆದರೆ, ಕನ್ನಡ ಕವಿಗಳು ಉತ್ತರದ ಕಥೆಗಳನ್ನೇ ಮತ್ತೆ ಮತ್ತೆ ಬರೆದರು.
ಜೈನ, ವೈದಿಕ ಕವಿಗಳು ರಾಮಾಯಣ, ಮಹಾಭಾರತ, ತೀರ್ಥಂಕರ ಪುರಾಣಗಳನ್ನು ಮಾತ್ರ ಬರೆದರು. ಪಂಚತಂತ್ರ, ಬಾಣ ಕಾದಂಬರಿಗಳಂತಹ ಲೌಕಿಕ ಸಾಹಿತ್ಯವೂ ಉತ್ತರದ ಅನುವಾದವಾಗಿತ್ತು.
ವಿರೋಧವನ್ನು ಲೆಕ್ಕಿಸದೆ ಒಳಬಂದ ವೈದಿಕರ ಭಾಷೆ ಸಂಸ್ಕೃತ ತನ್ನ ವ್ಯಾಕರಣ, ಛಂದಸ್ಸು, ನಿಘಂಟುಗಳನ್ನು ಕನ್ನಡದ ಮೇಲೆ ಹೇರಿತು. ತಾನೇ ಕನ್ನಡದ ತಾಯಿಯೆಂದು ಬಿಂಬಿಸಿತು.
ಮೂಲತಃ ಆರ್ಯರಾಗಿದ್ದ ವೈದಿಕರಿಗೆ ಕನ್ನಡ ಮಾತೃಭಾಷೆಯೆನಿಸಲಿಲ್ಲ. ಅವರಿಗೆ ಸಂಸ್ಕೃತ ತಮ್ಮ ಪವಿತ್ರ ಗ್ರಂಥಗಳನ್ನು ಬರೆಯುವ ದೇವ ಭಾಷೆಯಾದರೆ, ಕನ್ನಡ ಕೇವಲ ಆಡು ಭಾಷೆಯಾಯಿತು.
ಪ್ರಾಚೀನ ಜೈನ, ಲಿಂಗಾಯತ ಕವಿಗಳು ಕನ್ನಡದಲ್ಲಿ ಅಮೋಘವಾದ ಸಾಹಿತ್ಯ ಬರೆದರು. ಆದರೆ ವೈದಿಕರಲ್ಲಿ ಕುಮಾರ ವ್ಯಾಸ, ಲಕ್ಷ್ಮೀಶರಂತಹ ಮಹಾ ಕವಿಗಳು ಬಂದಿದ್ದು 15ನೇ ಶತಮಾನದಷ್ಟು ತಡವಾಗಿ.
ಶ್ರೀವೈಷ್ಣವರು 11ನೇ ಶತಮಾನದಲ್ಲಿ ಕರ್ನಾಟಕಕ್ಕೆ ಬಂದರೂ 17ನೇ ಶತಮಾನದತನಕ ಅವರು ಕನ್ನಡದಿಂದ ದೂರವುಳಿದರು. ಇದರಿಂದ ಕನ್ನಡ ತನ್ನ ನೆಲದಲ್ಲೇ ಮಲಮಗನಂತೆ ಬದುಕಬೇಕಾಯಿತು.
(‘ಕನ್ನಡಿಗರ ಮಾತೃ ಭಾಷಾ ಪ್ರಜ್ಞೆಯ ಇತಿಹಾಸ‘ ಲೇಖನದಿಂದ ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೧.)
ವೈದಿಕರು ನಮ್ಮ ಇತಿಹಾಸ ಅಳಿಸಿದರು:
ವೈದಿಕರು ತಮ್ಮ ಧರ್ಮ, ಪುರಾಣಗಳನ್ನು ಪ್ರಚಾರ ಮಾಡಲು ಕೇವಲ ಭಾಷೆ, ಸಾಹಿತ್ಯ ಮತ್ತು ಸಿದ್ದಾಂತಗಳನ್ನು ಬಳಸಲಿಲ್ಲ. ನಮ್ಮ ನೆಲ, ನದಿ, ಬೆಟ್ಟ, ಕಾಡುಗಳನ್ನೂ ಬಳಸಿಕೊಂಡರು.
ಪ್ರಾಚೀನ ಕಾಲದಿಂದ ಬೆಳೆದು ಬಂದಿದ್ದ ಸ್ಥಳಗಳ ಇತಿಹಾಸ, ಹೆಸರು ಅಳಿಸಿ ಹಾಕಿದರು. ಅವುಗಳ ಬದಲು ತಮ್ಮ ಪುರಾಣಗಳೊಂದಿಗೆ ಸಂಬಂಧ ಕಲ್ಪಿಸುವ ಹೊಸ ಕಥೆ, ಹೆಸರು ಸೃಷ್ಟಿಸಿದರು.
17ನೇ ಶತಮಾನದವರೆಗೆ ಸವದತ್ತಿ ಎಲ್ಲಮ್ಮ ಒಬ್ಬ ಗ್ರಾಮ ದೇವತೆ. ನಂತರ ರೇಣುಕಾ-ಜಮದಗ್ನಿ ಪುರಾಣವನ್ನು ಅವಳ ಮೇಲೆ ಹೇರಲಾಯಿತು. ಮಂಡ್ಯ ಮಾಂಡವ್ಯ ಋಷಿಯ ನೆಲೆಯಾಯಿತು.
ಹಿರಿ ಹೊಳೆ ‘ಕೃಷ್ಣಾ ನದಿ’ಯಾಯಿತು, ಕರಿ ಹೊಳೆ ‘ಮಲಪ್ರಭೆ’ಯಾಯಿತು . ಸಿಕ್ಕಸಿಕ್ಕಲ್ಲಿ ಕಪಿಲಾ, ಕಣ್ವ ಆಶ್ರಮಗಳೆದ್ದವು ಅಥವಾ ರಾಮ, ಸೀತೆಯಂತಹ ಉತ್ತರ ಭಾರತದ ಪುರಾಣ ಪಾತ್ರಗಳು ಓಡಾಡಿದವು.
ಈ ಕಥೆಗಳು ಆರ್ಯ ಸಂಸ್ಕೃತಿಯಿಂದ ಬಂದ ವೈದಿಕರ ಪ್ರಾಬಲ್ಯ ಹೆಚ್ಚಿಸಿದವು. ಆದರೆ ಅವುಗಳನ್ನು ನಂಬಿ ತಮ್ಮ ನಿಜ ಇತಿಹಾಸ ಮರೆತ ಕನ್ನಡಿಗರು ತಮ್ಮ ಅಸ್ಮಿತೆಯನ್ನೂ ಕಳೆದುಕೊಂಡರು.
(‘ಕಳಲೆ ವೀರಶೈವ ಅರಸು ಮನೆತನ ವಿಚಾರ ಸಂಕಿರಣ ಅಧ್ಯಕ್ಷ ಭಾಷಣದಿಂದ’ ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)
ವೈದಿಕತೆಗೆ ಪರ್ಯಾಯವಾಗಿ ಹುಟ್ಟಿದ ಲಿಂಗಾಯತ ಧರ್ಮ:
ಆರ್ಯರ ವೈದಿಕ ಧರ್ಮವನ್ನು ಬಸವಾದಿ ಶರಣರು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ತನ್ನದೇ ಸ್ವತಂತ್ರ ತತ್ವ, ಆಚರಣೆಗಳಿದ್ದ ಬಹುಸಂಖ್ಯಾತರ ಲಿಂಗಾಯತ ಧರ್ಮ ಸ್ಥಾಪಿಸಿದರು.
ಪ್ರವಾಹದಂತೆ ಬಂದ ಶರಣ ಚಳುವಳಿಯಲ್ಲಿ ವೈದಿಕತೆಯ ವರ್ಣ, ಜಾತಿ, ಲಿಂಗ ಬೇಧಗಳು ಕೊಚ್ಚಿ ಹೋದವು. ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ’ ಎಂದು ಹೇಳುವಷ್ಟು ಸಮತಾ ಭಾವನೆ ಬೆಳೆಯಿತು.
ವೈದಿಕ ಧರ್ಮದ ಅಸಂಖ್ಯಾತ ದೇವರುಗಳ ಬದಲು ಶರಣರು ಏಕದೇವೋಪಾಸನೆಯನ್ನು ಪ್ರತಿಪಾದಿಸಿದರು. ಇಷ್ಟಲಿಂಗ ಪೂಜೆಯ ಆಚರಣೆ ತಂದು ಕಲ್ಲಿನ ದೇಗುಲಗಳನ್ನುತಿರಸ್ಕರಿಸಿದರು.
ಸೋಹಂ ತತ್ವದ ಮೂಲಕ ಮೋಕ್ಷ ಸಂಪಾದನೆ ವೈದಿಕ ಧರ್ಮದ ಮುಖ್ಯ ದ್ಯೇಯ. ಇದಕ್ಕೆ ಪ್ರತಿಯಾಗಿ ಶರಣರು ಕಾಯಕ, ದಾಸೋಹಗಳ ಮೂಲಕ ಸಮಾಜಮುಖಿಯಾಗಿ ಬದುಕುವುದನ್ನು ಕಲಿಸಿದರು.
ಶರಣರು ಸಂಸ್ಕೃತದ ಬದಲು ಕನ್ನಡ, ಹಳಗನ್ನಡದ ಬದಲು ಜನಭಾಷೆ ನಡುಗನ್ನಡ ಬಳಸಿದರು. ಆರ್ಯರ ಪುರಾಣಗಳ ಬದಲು ಚನ್ನಯ್ಯ, ಅಕ್ಕರಂತಹ ಸ್ಥಳೀಯ ಮಹಾತ್ಮರ ಚರಿತ್ರೆ ಬರೆದರು .
900 ವರ್ಷದ ಇತಿಹಾಸದಲ್ಲಿ ಒಬ್ಬ ಶರಣ ಕವಿಯೂ ರಾಮಾಯಣ, ಮಹಾಭಾರತಗಳನ್ನು ಬರೆಯಲಿಲ್ಲ. ಬದಲಿಗೆ ಅವು ವಿದ್ಯೆಯಲ್ಲ, ಸೋದರ ವಧೆಯ ಕಥೆಯೆಂದು ಟೀಕಿಸಿ ದೂರವುಳಿದರು.
ವೈದಿಕ ಸಂಸ್ಕೃತಿ ವಿರುದ್ಧ ಹೋರಾಡಿದ ಬಸವಣ್ಣ:
ಆರ್ಯರ ವೈದಿಕ ಧರ್ಮವನ್ನು ಬಸವಾದಿ ಶರಣರು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ತನ್ನದೇ ಸ್ವತಂತ್ರ ತತ್ವ, ಆಚರಣೆಗಳಿದ್ದ ಬಹುಸಂಖ್ಯಾತರ ಲಿಂಗಾಯತ ಧರ್ಮ ಸ್ಥಾಪಿಸಿದರು.
ಪ್ರವಾಹದಂತೆ ಬಂದ ಶರಣ ಚಳುವಳಿಯಲ್ಲಿ ವೈದಿಕತೆಯ ವರ್ಣ, ಜಾತಿ, ಲಿಂಗ ಬೇಧಗಳು ಕೊಚ್ಚಿ ಹೋದವು. ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ’ ಎಂದು ಹೇಳುವಷ್ಟು ಸಮತಾ ಭಾವನೆ ಬೆಳೆಯಿತು.
ವೈದಿಕ ಧರ್ಮದ ಅಸಂಖ್ಯಾತ ದೇವರುಗಳ ಬದಲು ಶರಣರು ಏಕದೇವೋಪಾಸನೆಯನ್ನು ಪ್ರತಿಪಾದಿಸಿದರು. ಇಷ್ಟಲಿಂಗ ಪೂಜೆಯ ಆಚರಣೆ ತಂದು ಕಲ್ಲಿನ ದೇಗುಲಗಳನ್ನುತಿರಸ್ಕರಿಸಿದರು.
ಸೋಹಂ ತತ್ವದ ಮೂಲಕ ಮೋಕ್ಷ ಸಂಪಾದನೆ ವೈದಿಕ ಧರ್ಮದ ಮುಖ್ಯ ದ್ಯೇಯ. ಇದಕ್ಕೆ ಪ್ರತಿಯಾಗಿ ಶರಣರು ಕಾಯಕ, ದಾಸೋಹಗಳ ಮೂಲಕ ಸಮಾಜಮುಖಿಯಾಗಿ ಬದುಕುವುದನ್ನು ಕಲಿಸಿದರು.
ಶರಣರು ಸಂಸ್ಕೃತದ ಬದಲು ಕನ್ನಡ, ಹಳಗನ್ನಡದ ಬದಲು ಜನಭಾಷೆ ನಡುಗನ್ನಡ ಬಳಸಿದರು. ಆರ್ಯರ ಪುರಾಣಗಳ ಬದಲು ಚನ್ನಯ್ಯ, ಅಕ್ಕರಂತಹ ಸ್ಥಳೀಯ ಮಹಾತ್ಮರ ಚರಿತ್ರೆ ಬರೆದರು .
900 ವರ್ಷದ ಇತಿಹಾಸದಲ್ಲಿ ಒಬ್ಬ ಶರಣ ಕವಿಯೂ ರಾಮಾಯಣ, ಮಹಾಭಾರತಗಳನ್ನು ಬರೆಯಲಿಲ್ಲ. ಬದಲಿಗೆ ಅವು ವಿದ್ಯೆಯಲ್ಲ, ಸೋದರ ವಧೆಯ ಕಥೆಯೆಂದು ಟೀಕಿಸಿ ದೂರವುಳಿದರು.
(‘ಲಿಂಗಾಯತ: ಕನ್ನಡಿಗರು ಸೃಷ್ಟಿಸಿದ ಕರ್ನಾಟಕದ ಮೊದಲ ಧರ್ಮ’
ಲೇಖನದಿಂದ ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭.)
If God has the power to create the entire universe—its mountains, oceans, forests, and every living being—do we really believe He needs our money, printed on paper, to be rich or impressed??
ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ.
#ಕಲಬುರ್ಗಿಮಾಸ#MMKalburgi
2. ಶರಣರಿಗೆ ಪ್ರೇರಣೆಯಾಗಿದ್ದು ವೇದಗಳಲ್ಲ ತಮಿಳು ಪುರಾತನರು, ನಾಥರು.
ವೇದ ಆಗಮಗಳು ಶರಣ ತತ್ವದ ಮೂಲವೆಂದು ಕೆಲವರು ಹೇಳುತ್ತಾರೆ. ಇದಕ್ಕೆ ಯಾವುದೇ ಆಧಾರವಿಲ್ಲ. ಕೆಲವು ಆಗಮಗಳ ಕೊನೆಯಲ್ಲಿ ಶರಣ ತತ್ವ ಜೋಡಿಸಿ ಒಂದು ಕಲ್ಪಿತ ಇತಿಹಾಸ ಸೃಷ್ಟಿಸುವ ಪ್ರಯತ್ನವಷ್ಟೇ.
ತಮಿಳು ಪುರಾತನರು
ವಚನಗಳು ಯಾವುದೇ ಸಂಸ್ಕೃತ ಸಾಹಿತ್ಯದಿಂದ ಹುಟ್ಟಲಿಲ್ಲ. ಶರಣರಿಗೆ ಸ್ವಲ್ಪ ಮಟ್ಟಿಗೆ ಪ್ರೇರಣೆಯಾಗಿದ್ದು ತಮಿಳಿನ ಪುರಾತನರು ಮತ್ತು ಜಾತ್ಯತೀತವಾಗಿದ್ದ ಪ್ರಾಚೀನ ನಾಥ ಪಂಥ.
ತಮಿಳುನಾಡಿನ ೬೩ ಪುರಾತನರು ೧೦ನೇ ಶತಮಾನಕ್ಕಿಂತ ಮುಂಚೆ ಬದುಕ್ಕಿದ್ದವರು. ತಮಿಳು ಶೈವ ಪರಂಪರೆಯನ್ನು ಬೆಳೆಸಿದ ಅನೇಕ ಪುರಾತನರು ಹಿಂದುಳಿದ ಮತ್ತು ದಲಿತ ಜಾತಿಗಳಿಂದ ಬಂದಿದ್ದರು.
ಪುರಾತನರು ರಚಿಸಿದ ತಮಿಳು ಭಕ್ತಿ ಸಾಹಿತ್ಯವೇ ‘ತೆವಾರಂ’. ತಮಿಳು ವೈಷ್ಣವ ಆಚಾರ್ಯರು ಇವರನ್ನು ಬದಿಗಿರಿಸಿ ಸಂಸ್ಕೃತ ಭಾಷೆಯ ಆಗಮ ನಿಷ್ಠ ಸಿದ್ದಾಂತ ಸಾಹಿತ್ಯ ಬೆಳೆಸಿದರು.
ಬಸವಣ್ಣನವರೂ ಸೇರಿದಂತೆ ಅನೇಕ ಶರಣರು ತಮ್ಮ ವಚನಗಳಲ್ಲಿ ಪುರಾತನರನ್ನು ನೆನೆಯುತ್ತಾರೆ. ಆಚಾರ್ಯರ ಆಗಮ ನಿಷ್ಠ ಸಂಸ್ಕೃತ ಸಾಹಿತ್ಯದ ಬದಲು ಶರಣರು ಪುರಾತನರ ದೇಶೀ ಸಾಹಿತ್ಯ ಮನ್ನಿಸಿದರು.
ಶರಣರ ಮೇಲಾದ ಪುರಾತನರ ಪ್ರಭಾವ ಅನೇಕ ಶಾಸನಗಳಲ್ಲಿಯೂ ಕಾಣುತ್ತವೆ. ಅರ್ಜುನವಾಡ ಶಾಸನದಲ್ಲಿ ಬಸವಣ್ಣನವರ ವಂಶಸ್ಥ ಹಾಲ ಬಸವಿದೇವ ಭಕ್ತಿಯಿಂದ ಪುರಾತನರನ್ನು ಸ್ಮರಿಸುತ್ತಾನೆ.
(‘ತಮಿಳು ಪುರಾತನ ಶೈವ ಪಂಥ – ನಾಥ ಪಂಥ-ಶರಣ ಪಂಥ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)
ಶರಣರ ಮೇಲೆ ನಾಥರ ಪ್ರಭಾವ
ಶಿವ ಭಕ್ತಿಯ ಪ್ರಾಚೀನ ನಾಥ ಪಂಥದಿಂದಲೂ ಶರಣರು ಪ್ರೇರೇಪಿತರಾದರು. ಜನಿವಾರ ಹರಿದು, ವೈದಿಕ ಧರ್ಮ ತ್ಯಜಿಸಿ ಬಸವಣ್ಣನವರು ನಾಥ ಪಂಥ ಸೇರಿದರು ಎನ್ನಲು ಆಧಾರವಿದೆ.
ಬಾಗೇವಾಡಿ, ಕೂಡಲ ಸಂಗಮ, ಮಂಗಳವಾಡಿ, ಕಲ್ಯಾಣ ಮುಂತಾದ ಸ್ಥಳಗಳು ಬಸವಣ್ಣನವರ ಬದುಕಿನ ಮುಖ್ಯ ನೆಲೆಗಳಾಗಿದ್ದವು. ಅವು ಆ ಕಾಲದ ನಾಥ ಪಂಥದ ಪ್ರಸಿದ್ಧ ಕೇಂದ್ರಗಳೂ ಆಗಿದ್ದವು.
ಅನೇಕ ವಚನಗಳು ನಾಥರನ್ನು ಸ್ಮರಿಸುತ್ತವೆ. ನಾಥ ಗುರು ಗೋರಕ್ಷರ ೧೧ ವಚನಗಳು ದೊರಕಿವೆ. ಗೋರಕ್ಷ, ಬಸವಣ್ಣನವರ ವಚನಗಳಲ್ಲಿ ಹೋಲಿಕೆಯಿದೆ. ನಾಥ ಸಾಹಿತ್ಯದಲ್ಲಿಯೂ ‘ಲಿಂಗಧಾರಿ’ಗಳ ಉಲ್ಲೇಖವಿದೆ.
ಅಲ್ಲಮ, ಅಕ್ಕ, ಸಿದ್ದರಾಮರಂತಹ ಸುಪ್ರಸಿದ್ಧ ಶರಣರು ನಾಥ ಮೂಲದಿಂದ ಬಂದವರು. ಹಲವಾರು ವಚನಕಾರರ ಮುದ್ರಿಕೆಯಲ್ಲಿ ‘ನಾಥ’ ಪದವಿದೆ. ಉದಾ: ರಾಮನಾಥ (ಜೇಡರ ದಾಸಿಮಯ್ಯ).
ಜಗಳೂರಿನ ಕಲ್ಲೇದೇವರಪುರ ಶಾಸನದಲ್ಲಿ (೧೨೭೯) ನಾಥ ಗುರು ಮತ್ತು ಪ್ರಸಿದ್ಧ ಶರಣರ ಹೆಸರುಗಳು ಒಟ್ಟಿಗೇ ಕಾಣಿಸುತ್ತದೆ: ಚತುರಂಗಿನಾಥ , ಗೋರಖನಾಥ, ಬಸವರಾಜ, ಚೆನ್ನ, ಹೊನ್ನ, ಬಂಕ ಇತ್ಯಾದಿ.
ಬಾಲಸಂಗಯ್ಯನ ವಚನಗಳು (೧೫-೧೬ನೇ ಶತಮಾನ) “ಕೂಡಲಸಂಗಮಾವದೂತನ ವಚನಗಳು” ಶೀರ್ಷಿಕೆಯಿಂದ ಪ್ರಕಟವಾಗಿವೆ. ನಾಥರಿಗೆ ‘ಆವದೂತ’ರೆಂದೂ ಕರೆಯುತ್ತಿದ್ದರು.
(‘ನಾಥ ಸಂಪ್ರದಾಯ- ಶರಣ ಸಂಪ್ರದಾಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)
ನಾಥರಿಗಿಂತ ಭಿನ್ನವಾಗಿ ಬೆಳೆದ ಶರಣರು
ಪ್ರಾಚೀನ ನಾಥ ಪಂಥ ಭಾರತದಲ್ಲಿ ವ್ಯಾಪಕವಾಗಿ ಹರಡಿತ್ತು. ಅದರ ಯೋಗನಿಷ್ಠೆ, ವರ್ಣ, ಲಿಂಗ ಬೇಧಗಳನ್ನು ನಿರಾಕರಿಸುವ ನೀತಿಯಿಂದ ಶರಣರು ಆಕರ್ಷಿತರಾದರೂ ಅವರಿಗಿಂತ ಭಿನ್ನವಾಗಿಯೇ ಬೆಳೆದರು.
ಅನೇಕ ನಾಥ ಪಂಗಡಗಳು ಮದ್ಯ, ಮಾಂಸ, ಮಹಿಳೆಯರನ್ನು ಬಳಸಿಕೊಳ್ಳುವ ವಾಮಾಚಾರಕ್ಕೆ ತಿರುಗಿದ್ದವು. ಅಂತಹ ‘ಕಾಪಾಲಿಕಾ ಆಚರಣೆ’ಗಳನ್ನು ಅಲ್ಲಮ ಮುಂತಾದ ಶರಣರು ತಿರಸ್ಕರಿಸಿದರು.
ನಾಥರು ಧಾರ್ಮಿಕವಾಗಿ ಜಾತ್ಯತೀತವಾಗಿದ್ದರು. ಯಾವ ಜಾತಿಯವರು ಬೇಕಾದರೂ ಅವರನ್ನು ಸೇರಬಹುದಿತ್ತು. ಸಹ ಭೋಜನಕ್ಕೆ ಮಾನ್ಯತೆಯಿದ್ದರೂ ಅವರಲ್ಲಿ ಜಾತ್ಯತೀತ ರಕ್ತ ಸಂಬಂಧಗಳಿಗೆ ಅವಕಾಶವಿರಲಿಲ್ಲ.
“ಉಂಬುವುದು ಉಡುವುದು ಶಿವಾಚಾರ, ಕೊಂಬುದು ಕೊಡುವುದು ಕುಲಾಚಾರ… ” ಎಂದು ಶರಣರು ಈ ದ್ವಂದ್ವತೆಯನ್ನು ಖಂಡಿಸಿದರು. ತಮ್ಮ ಜಾತ್ಯತೀತತೆಯನ್ನು ರಕ್ತ ಸಂಬಂಧದವರೆಗೂ ವಿಸ್ತರಿಸಿದರು.
ನಾಥರ ಯೋಗ ನಿಷ್ಠೆ ಮತ್ತು ಜಾತ್ಯತೀತ ನಿಲುವಿಗೆ ಬಸವಣ್ಣನವರು ಇಷ್ಟಲಿಂಗ, ಜಂಗಮ, ಕಾಯಕ, ದಾಸೋಹಗಳಂತಹ ಅಂಶಗಳನ್ನು ಜೋಡಿಸಿ ಹೊಸ ಧರ್ಮವನ್ನು ಅಸ್ತಿತ್ವಕ್ಕೆ ತಂದರು.
ಪ್ರಸಿದ್ಧ ನಾಥ ಗುರು ಸಿದ್ಧರಾಮರು ಬಸವಣ್ಣನವರ ಅನುಯಾಯಿಗಳಾದರು. ಮಹಾರಾಷ್ಟ್ರ, ಕರ್ನಾಟಕದಲ್ಲಿ ಅಪಾರ ಸಂಖ್ಯೆಯಲ್ಲಿದ್ದ ಅವರ ಭಕ್ತರು ಕೂಡ ಬಸವ ಧರ್ಮದಲ್ಲಿ ಲೀನವಾದರು.
(‘ನಾಥ ಸಂಪ್ರದಾಯ- ಶರಣ ಸಂಪ್ರದಾಯ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)
ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ.
#ಕಲಬುರ್ಗಿಮಾಸ#MMKalburgi
1. ಲಿಂಗಾಯತದಲ್ಲಿ ವೈದಿಕತೆ ಒಳಹೊಕ್ಕ ನಂತರ ಇಷ್ಟಲಿಂಗ ತೆಗೆದ ಶರಣರು.
12ನೇ ಶತಮಾನದಲ್ಲಿ ಬಸವಣ್ಣನವರು ಸೃಷ್ಟಿಸಿದ ಹೊಸ ಧರ್ಮದಲ್ಲಿ ಹಲವಾರು ಸಮುದಾಯಗಳು ಮುಖ್ಯವಾಗಿ ಶ್ರಮಿಕ ವರ್ಗಗಳು ಸೇರಿಕೊಂಡವು.
ಆದರೆ ಬಸವಣ್ಣನವರ ನಂತರ ಲಿಂಗಾಯತ ಸಮಾಜ, ಧರ್ಮ ಕವಲೊಡೆಯಿತು.
ಅನುಯಾಯಿಗಳಾಗಿ ಬಂದು ಗುರುಗಳಾಗಿ ಬದಲಾದ ವೀರಶೈವರ ಮೂಲಕ ವೈದಿಕತೆ ಮತ್ತೆ ನುಸುಳಿ
ಲಿಂಗಾಯತದ ಅಂತರಂಗ ಮಲೀನವಾಯಿತು.
ಇದರ ವಿರುದ್ಧ ಬಂಡಾಯವೆದ್ದು ಅನೇಕ ನಾಥ ಮತ್ತು ದಲಿತ ಪಂಗಡಗಳು ಇಷ್ಟಲಿಂಗ ತೆಗೆದು ವಿಭಿನ್ನ ಪರಂಪರೆ ಸೃಷ್ಟಿಸಿಕೊಂಡರು.
ಹೊರನಡೆದ ಈ ಸಂಪ್ರದಾಯಗಳಲ್ಲಿ ಲಿಂಗಕಟ್ಟಿಕೊಂಡು ಬಸವತತ್ವ ಬಿಟ್ಟವರ ಮೇಲೆ ದೊಡ್ಡ ತಿರಸ್ಕಾರವಿದೆ. ಮೂಲ ಶರಣರ ಪಥದಿಂದ ತಮ್ಮನ್ನು ಅಗಲಿಸಿದ ನೋವು, ಆಕ್ರೋಶ ಕಾಣುತ್ತದೆ.
ಲಿಂಗಾಯತದಿಂದ ದಲಿತ, ನಾಥ ಪಂಥಗಳು ಬೇರೆಯಾದರೂ ಅವು ಶರಣತತ್ವ ಬಿಡಲು ಸಾಧ್ಯವಾಗಲಿಲ್ಲ. ಬಸವಣ್ಣನವರ ಮೇಲಿನ ಪ್ರೀತಿ, ಅಭಿಮಾನ, ಭಕ್ತಿ ಕಡಿಮೆಯಾಗಲಿಲ್ಲ.
ಬಸವಣ್ಣ ಅಲ್ಲಮ. ನಾಗಮ್ಮ, ನೀಲಮ್ಮ ಮುಂತಾದ ಹೆಸರುಗಳು ಇವರಲ್ಲಿಯೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಇವರಿಗೆಲ್ಲ ಕಲ್ಯಾಣ ಒಂದು ಮರೆಯಲಾಗದ ನೆನಪಾಯಿತು.
ಅವುಗಳ ಇತಿಹಾಸ, ಪರಂಪರೆ, ಪವಿತ್ರ ಕ್ಷೇತ್ರಗಳೆಲ್ಲಾ ಲಿಂಗಾಯತಕ್ಕೆ ಬೆಸೆದುಕೊಂಡಿವೆ.
ಲಿಂಗಾಯತದ ವಿಸ್ತಾರವಾದ ಮರುಕಲ್ಪನೆಯಲ್ಲಿ ಶರಣ ಮೂಲದ ಎಲ್ಲಾ ಸಮುದಾಯಗಳ ನಡುವೆ ಸಂವಾದ ನಡೆಯಬೇಕಿದೆ.
ಈ ಮಹತ್ವದ ಐತಿಹಾಸಿಕ ಬೆಳೆವಣಿಗೆಗಳನ್ನು ಬೆಳಕಿಗೆ ತಂದ ಕಲಬುರ್ಗಿಯವರ ಮಹತ್ವದ ಸಂಶೋಧನೆಯನ್ನು ಸರಳ ಕನ್ನಡಲ್ಲಿ ಕ್ರೋಡೀಕರಿಸಲಾಗಿದೆ.
ಲಿಂಗಾಯತ ಧರ್ಮದಲ್ಲಿ ನುಸುಳಿದ ವೈದಿಕತೆ:
12ನೇ ಶತಮಾನದಲ್ಲಿ ಕರ್ನಾಟಕದ ಸಾಮಾಜಿಕ ಚಿತ್ರಣ ಬದಲಾಯಿತು. ಬಸವಣ್ಣ ಸೃಷ್ಟಿಸಿದ ಹೊಸ ಧರ್ಮದಲ್ಲಿ ಸಮಾಜದ ಎಲ್ಲಾ ಸ್ತರಗಳು, ಮುಖ್ಯವಾಗಿ ಶ್ರಮಿಕ ವರ್ಗಗಳು, ಸೇರಿಕೊಂಡವು.
ಪ್ರವಾಹದಂತೆ ಬಂದ ಲಿಂಗಾಯತ ಧರ್ಮದಲ್ಲಿ ಸ್ಥಾವರ ಲಿಂಗ ಪೂಜಿಸುತ್ತಿದ್ದ ಕಾಳಾಮುಖ, ಮಹಾವ್ರತಿ, ಪಾಶುಪತರಂತಹ ಅನೇಕ ವೈದಿಕ ಶೈವ ಧರ್ಮಗಳು ಕೊಚ್ಚಿ ಹೋದವು.
ನಾಥ ಪಂಥ ಕೂಡ ಬಸವಣ್ಣನವರ ಪ್ರಭಾವಕ್ಕೆ ಸಿಲುಕಿತು. ಯೋಗನಿಷ್ಠೆ, ಪ್ರಾಣಲಿಂಗ ಆರಾಧನೆ, ಜಾತ್ಯತೀತ ಮನಸ್ಸಿದ್ದ ಅನೇಕ ನಾಥ ಪಂಗಡಗಳೂ ಲಿಂಗಾಯತದಲ್ಲಿ ಲೀನವಾದವು.
ಇದೇ ರೀತಿ ಒಳ ಬಂದ ಆಂಧ್ರದ ಶುದ್ಧಶೈವ ಆಚಾರ್ಯರು ಮಾತ್ರ ಸಂಪೂರ್ಣವಾಗಿ ಲೀನವಾಗದೆ ಅನೇಕ ವೈದಿಕ ಆಚರಣೆಗಳನ್ನು ಉಳಿಸಿಕೊಂಡರು. ಇಷ್ಟಲಿಂಗ ಹಿಡಿದರೂ ಜನಿವಾರ ಬಿಡಲಿಲ್ಲ.
ಬಸವಣ್ಣನವರ ನಂತರ ಇವರ ಪ್ರಭಾವದಿಂದ ಲಿಂಗಾಯತದಲ್ಲಿ ವೈದಿಕತೆ ನುಸುಳಿತು. ಜಾತಿ, ಮಡಿ, ಮೈಲಿಗೆ, ಆಚರಣೆಗಳು ಮರುಕಳಿಸಿ ಸಮಾನತೆ ಕುಗ್ಗಿತು. ವಚನಗಳ ಬದಲು ಸಂಸ್ಕೃತ ಕೃತಿಗಳು ಬಂದವು.
ಇದನ್ನು ಪ್ರತಿಭಟಿಸಿ ಅನೇಕ ಶರಣ ಸಮುದಾಯಗಳು ನೋವು, ಆಕ್ರೋಶದಿಂದ ಇಷ್ಟಲಿಂಗ ತ್ಯಜಿಸಿ ಲಿಂಗಾಯತ ಧರ್ಮದಿಂದ ಹೊರ ನಡೆದವು. ಬಸವಣ್ಣ ಕಟ್ಟಿದ್ದ ಸಮಾಜ ಚೂರಾಯಿತು.
(‘ಬಸವೋತ್ತರ ಯುಗ: ಮೂರು ಕವಲುಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)
ನೋವು, ಆಕ್ರೋಶದಿಂದ ಪ್ರತ್ಯೇಕವಾದ ಶರಣರು:
ಆಚಾರ್ಯರ ಮೂಲಕ ನುಸುಳಿದ ವೈದಿಕತೆಯಿಂದ ಲಿಂಗಾಯತದ ಅಂತರಂಗ ಮಲೀನವಾಯಿತು. ಇದರ ವಿರುದ್ಧ ಬಂಡಾಯವೆದ್ದು ಅನೇಕ ನಾಥ ಮತ್ತು ದಲಿತ ಪಂಗಡಗಳು ಹೊರನಡೆದವು.
ಬಸವಣ್ಣನವರ ಪ್ರಭಾವದಿಂದ ನಾಥ ಪಂಗಡಗಳು ಪ್ರಾಣ ಲಿಂಗ ಪೂಜೆ ಬಿಟ್ಟು ಇಷ್ಟಲಿಂಗ ಹಿಡಿದಿದ್ದವು. ಆದರೆ ನಂತರ ಇವು ಇಷ್ಟಲಿಂಗ ಬಿಟ್ಟು ಮತ್ತೆ ಪ್ರಾಣಲಿಂಗದತ್ತ ಹೊರಳಿದವು.
ಈ ಬಂಡಾಯ ಪ್ರಬಲವಾಗಿದ್ದು ೧೫ನೇ ಶತಮಾನದ ಕೊಡೇಕಲ್ ಬಸವಣ್ಣನವರ ಕಾಲದಲ್ಲಿ. ಅವರ ನೇತ್ರತ್ವದಲ್ಲಿ ಅತ್ತ ಲಿಂಗಾಯತ, ಇತ್ತ ನಾಥವೂ ಅಲ್ಲದ ಆರೂಢ ಪರಂಪರೆ ರೂಪಗೊಂಡಿತು.
ಲಿಂಗಾಯತದಲ್ಲಿ ಜಾತಿ ತೆಲೆಯೆತ್ತುತ್ತಿದ್ದಂತೆ ಅನೇಕ ದಲಿತ ಸಮುದಾಯಗಳು ಬೆಚ್ಚಿದವು. ಅವು ತಮ್ಮ ಮೂಲ ಜಾತಿಗಳಿಗೆ ಹಿಂದಿರುಗಿ, ಕೊಡೇಕಲ್ ಬಸವಣ್ಣನವರ ಶಿಷ್ಯ ಮಂಟೇಸ್ವಾಮಿಯವರ ಭಕ್ತರಾದರು.
ಹೊರನಡೆದ ಈ ಸಂಪ್ರದಾಯಗಳಲ್ಲಿ ಲಿಂಗಕಟ್ಟಿಕೊಂಡು ಬಸವ ತತ್ವ ಬಿಟ್ಟವರ ಮೇಲೆ ದೊಡ್ಡ ತಿರಸ್ಕಾರವಿದೆ. ಮೂಲ ಶರಣರ ಪಥದಿಂದ ತಮ್ಮನ್ನು ಅಗಲಿಸಿದ ನೋವು, ಆಕ್ರೋಶ ಕಾಣುತ್ತದೆ.
ಕೊಡೇಕಲ್ ಬಸವಣ್ಣ “ಹಂಗುಹರಿ ಲಿಂಗದ” ಎಂದರು. ಮಂಟೇಸ್ವಾಮಿಯವರು 9 ಹಿಂದುಳಿದ ವರ್ಗಗಳು ಮಾತ್ರ ನಿಜ ಲಿಂಗಾಯತರು, ಮಿಕ್ಕವರೆಲ್ಲ ‘ಕಲ್ಲು ವಡ್ಡರಾಗಿರಿ’ ಎಂದು ಶಾಪ ಕೊಟ್ಟರು.
(‘ಬಸವೋತ್ತರ ಯುಗ: ಮೂರು ಕವಲುಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)
ಲಿಂಗಾಯತರಿಂದ ಪ್ರತ್ಯೇಕವಾದ ಆರೂಢರು:
ನಾಥರು ಲಿಂಗಾಯತದಿಂದ ಹೊರ ನಡೆದರೂ ಶರಣರ ಪ್ರಭಾವ ತಪ್ಪಿಸಿಕೊಳ್ಳಲಾಗಲಿಲ್ಲ. ಪ್ರಾಣಲಿಂಗ ಪೂಜೆಯಂತ ತಮ್ಮ ಮೂಲ ತತ್ವಗಳಿಗೆ ಶರಣ ತತ್ವವನ್ನು ಬೆರಸಿ ಆರೂಢ ಪರಂಪರೆ ರೂಪಿಸಿದರು.
ಅತ್ತ ಲಿಂಗಾಯತ ಇತ್ತ ನಾಥವೂ ಅಲ್ಲದ ಸಮ್ಮಿಶ್ರ ಆರೂಢ ಸಂಪ್ರದಾಯದಲ್ಲಿ ಮೊದಲು ಬಂದವರು ದಿಗ್ಗಿ ಸಂಗಮನಾಥ. ಇವರು “ಪ್ರಾಣಲಿಂಗ ಸ್ಥಲವ ತಂದರು” ಎಂದು ನಂದಿ ಆಗಮಲೀಲೆ ಹೇಳಿದೆ.
ಇವರ ಸಮಕಾಲೀನ ತಿಪ್ಪಣ್ಣಯ್ಯ ಇಷ್ಟಲಿಂಗವನ್ನು ಬಹಿರಂಗದ ಪೂಜೆಯೆಂದು ತಿರಸ್ಕರಿಸಿದರು. ಬದಲಿಗೆ “ಹಿಂಗದಿಹ ಅನಂತರಂಗದ ಪ್ರಾಣಲಿಂಗದ” ಪೂಜೆಯಲ್ಲಿ ತೊಡಗಿಸಿಕೊಂಡರು.
ಕೃತಿಗಳ ಪ್ರಕಾರ ಇವರು 60 ವರುಷ ಸ್ನಾನ ಮಾಡಲಿಲ್ಲ. ಹರಿದ ಬಟ್ಟೆಯನ್ನೂ ಬದಲಿಸದೆ ತಮ್ಮ ಕಾಯಕ, ಪೂಜೆಯಲ್ಲಿ ತೊಡಗಿಕೊಂಡಿದ್ದರು. ವಿಭೂತಿಯನ್ನು ಬಿಟ್ಟು ಬೊಟ್ಟು ಧರಿಸುತ್ತಿದ್ದರು.
ಇವೆಲ್ಲಾ ಲಿಂಗಾಯತರಲ್ಲಿ ಹೆಚ್ಚುತ್ತಿದ್ದ ಬಾಹ್ಯ ವೈದಿಕ ಆಚರಣೆಗಳಿಗೆ ಬಂದ ಪ್ರತಿರೋಧ. ಆದರೆ ಅವರ ಶಿಷ್ಯ ಗುಂಡ ಬಸವೇಶ್ವರರಿಗೆ ಅಷ್ಟು ನಿರ್ದಾಕ್ಷಿಣ್ಯವಾಗಿ ಇಷ್ಟಲಿಂಗ ತೆಗೆಯಲು ಸಾಧ್ಯವಾಗಲಿಲ್ಲ.
ನಂತರ ಬಂದ ಕೊಡೇಕಲ್ ಬಸವಣ್ಣನವರ ಕಾಲದಲ್ಲಿ ಆರೂಢ ಪರಂಪರೆ ಪ್ರಬಲವಾಯಿತು. ಸಂಪೂರ್ಣವಾಗಿ ಇಷ್ಟಲಿಂಗ ತೆಗೆದು ಆರೂಢರು ಲಿಂಗಾಯತರಿಗಿಂತ ವಿಭಿನ್ನವಾಗಿ ಬೆಳೆದರು.
(‘ಗುಂಡ ಬಸವೇಶ್ವರನ ಚರಿತ್ರೆ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೫)
ಒಲ್ಲದ ಮನಸ್ಸಿನಿಂದ ಇಷ್ಟಲಿಂಗ ತೆಗೆದ ಗುಂಡ ಬಸವೇಶ್ವರರು:
ಬೇಸರದಿಂದ ಹೊರನಡೆದರೂ ಅನೇಕರಿಗೆ ಲಿಂಗಾಯತದ ಸಂಕೇತವಾದ ಇಷ್ಟಲಿಂಗ ತ್ಯಜಿಸುವುದು ಕಷ್ಟವಾಯಿತು. ಆ ನೋವು, ಅನಿವಾರ್ಯತೆ, ಗೊಂದಲ ಗುಂಡ ಬಸವೇಶ್ವರರ ಜೀವನದಲ್ಲಿ ಕಾಣುತ್ತದೆ.
ನಾಗಾವಿಯಲ್ಲಿ ನೆಲೆಸಿದ್ದ ಗುಂಡ ಬಸವೇಶ್ವರರು ಡಂಗುರದ ಹಾಡುಗಳ ಮೂಲಕ ನೀತಿ ಪ್ರಚಾರ ಮಾಡುತ್ತಿದ್ದರು. ಇವರು ದಿನಕ್ಕೆ 17 ಸಲ ಇಷ್ಟಲಿಂಗ ಮತ್ತು ಪ್ರಾಣಲಿಂಗ ಎರಡೂ ಪೂಜೆಗಳನ್ನು ಮಾಡುತಿದ್ದರು.
ಅವರು ಕರಡಿ ವಾದ್ಯದ ನಾದಕ್ಕೆ ಲಿಂಗಪೂಜೆ ಮಾಡುತ್ತಿದ್ದರು. ಇಷ್ಟಲಿಂಗ ತೆಗೆಯುವಂತೆ ಅವರ ದೈವ ಸಂಗಮೇಶನಿಂದ ಮೂರು ಬಾರಿ ಆಜ್ಞೆಯಾಯಿತು ಎಂದು “ಗುಂಡ ಬಸವೇಶ್ವರ ಚರಿತ್ರೆ” ಹೇಳುತ್ತದೆ.
ಆದರೂ ಒಪ್ಪದೇ ಗುಂಡ ಬಸವೇಶ್ವರರು ಇಷ್ಟಲಿಂಗ ತೆಗೆಯುವಂತೆ ಒಂದು ಬಹಿರಂಗ ಘಟನೆ ಪ್ರೇರೇಪಿಸಲಿ ಎಂದು ಕಾದರು. ಅಷ್ಟರಲ್ಲೇ ಅವರ ಲಿಂಗ ಪೂಜೆಗೆ ಕೆಲವು ಜಂಗಮರಿಂದ ವಿರೋಧ ಬಂದಿತು.
ಲಿಂಗ ಪೂಜೆಗೆ ಕರಡಿ ವಾದ್ಯ ಸೂಕ್ತವಲ್ಲ, ಅದನ್ನು ನಿಲ್ಲಿಸದಿದ್ದರೆ ನಿನ್ನನ್ನು ಕೊಲ್ಲುತ್ತೇವೆ ಎಂಬ ಬೆದರಿಕೆ ಬಂದಿತು. ಕರಡಿ ವಾದ್ಯವಿಲ್ಲದೆ ಪೂಜೆ ಮಾಡುವುದಿಲ್ಲ ಎಂದು ಅವರು ಇಷ್ಟಲಿಂಗ ಪೂಜೆ ನಿಲ್ಲಿಸಿದರು.
ಸಾಯುವ ಸಮಯದಲ್ಲಿ ತಮ್ಮ ಐದು ಮಕ್ಕಳನ್ನು ಕರೆದು ಇಷ್ಟಲಿಂಗ ಪೂಜೆ ಮಾಡು ಎಂದರೆ ಮಾಡಿ ಬೇಡವೆಂದರೆ ನಿಲ್ಲಿಸಿ ಎಂದರು. ಅಂತ್ಯಕ್ರಿಯೆಯ ಸಮಯದಲ್ಲಿ ಕರಸ್ಥಲದಲ್ಲಿ ಇಷ್ಟಲಿಂಗ ಹಿಡಿದಿದ್ದರು.
(‘ಗುಂಡ ಬಸವೇಶ್ವರನ ಚರಿತ್ರೆ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೫)
ವಿಭಿನ್ನ ಪರಂಪರೆ ಸೃಷ್ಟಿಸಿದ ಕೊಡೇಕಲ್ ಬಸವಣ್ಣ, ಮಂಟೆ ಸ್ವಾಮಿ:
ಗುಂಡ ಬಸವೇಶ್ವರರ ನಂತರ ಬಂದ ಕೊಡೇಕಲ್ ಬಸವಣ್ಣ ಆರೂಢರನ್ನು ಸಂಘಟಿಸಿದರು. ಇವರು ಕಲ್ಯಾಣದ ಬಸವಣ್ಣನ ಭಕ್ತರಾಗಿದ್ದರೂ ಇಷ್ಟಲಿಂಗವಿಲ್ಲದ ವಿಭಿನ್ನ ಸಂಪ್ರದಾಯವನ್ನು ಬೆಳಸಿದರು.
ಇವರು ಒಂದು ಕಾಲಿನಲ್ಲಿ ಹಿಂದೂಗಳ ಪಾದರಕ್ಷೆ, ಮತ್ತೊಂದರಲ್ಲಿ ಮುಸುಲ್ಮಾನರ ಬೂಟು ಧರಿಸಿ ಸಂಚರಿಸುತ್ತಾ ಲಿಂಗಾಯತ, ನಾಥ ಮತ್ತು ಮುಸಲ್ಮಾನ ಸಂಸ್ಕೃತಿಗಳ ಸಮನ್ವಯ ಸಾಧಿಸಿದರು.
ಈ ಸಂಪ್ರದಾಯದ ಪೀಠಾಧಿಪತಿಗಳು ಲಿಂಗಾಯತರಾದರೂ ಇಷ್ಟಲಿಂಗ ಧರಿಸುವುದಿಲ್ಲ. ಸತ್ತವರನ್ನು ಮುಸ್ಲಿಮರಂತೆ ದಫನ್ ಮಾಡುತ್ತಾರೆ. ಹಿಂದೂ, ಮುಸ್ಲಿಂ ಗುರುಗಳು ಜಯಘೋಷ ಮತ್ತು ದೀನ್ ಹೇಳುತ್ತಾರೆ.
ಇವರ ಮಗ ರಾಚಪಯ್ಯ, ಶಿಷ್ಯ ಮಂಟೇಸ್ವಾಮಿ ದಕ್ಷಿಣಕ್ಕೆ ಹೋಗಿ ನೆಲಸಿದರು. ಆಚಾರ್ಯರ ನಡೆಯಿಂದ ರೋಸಿ ತಮ್ಮ ಮೂಲ ಜಾತಿಗಳಿಗೆ ಮರಳಿದ್ದ ದಲಿತರು ಮಂಟೇಸ್ವಾಮಿ ಭಕ್ತರಾದರು.
ಮಂಟೇಸ್ವಾಮಿ ಅನುಯಾಯಿಗಳು ಸೃಷ್ಟಿಸಿದ ಜಾನಪದ ಸಾಹಿತ್ಯದಲ್ಲಿ ತನ್ನ ಮೂಲ ಸ್ವರೂಪ ಕಳೆದುಕೊಂಡು ಶೋಷಣೆಯ ಮಾಧ್ಯಮವಾದ ಲಿಂಗಾಯತದ ವಿರುದ್ಧ ಆಕ್ರೋಶ ಕಾಣಿಸುತ್ತದೆ.
ಒಂದು ಹಾಡಿನಲ್ಲಿ ಮಡಿವಾಳ, ಕುಂಬಾರ, ಹಡಪದ ಮುಂತಾದ 9 ಹಿಂದುಳಿದ ಜಾತಿಗಳು ಮಾತ್ರ ನಿಜ ಲಿಂಗಾಯತರೆಂದು ಮಿಕ್ಕವೆರಲ್ಲ “ಕಲ್ಲು ವಡ್ಡರಾಗಿರಿ” ಎಂದು ಮಂಟೇಸ್ವಾಮಿ ಶಾಪ ಕೊಡುತ್ತಾರೆ.
(‘ಕೊಡೇಕಲ್ಲ ಬಸವಣ್ಣ: ಒಂದು ಅಧ್ಯಯನ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೬)
ಬೇರೆಯಾದರೂ ಹತ್ತಿರವೇ ಉಳಿದ ಶರಣ ಸಂಪ್ರದಾಯಗಳು:
ಲಿಂಗಾಯತದಿಂದ ದಲಿತ, ನಾಥ ಪಂಥಗಳು ಬೇರೆಯಾದರೂ ಅವು ಶರಣ ತತ್ವ ಬಿಡಲು ಸಾಧ್ಯವಾಗಲಿಲ್ಲ. ಅವುಗಳ ಇತಿಹಾಸ, ಪರಂಪರೆ, ಪವಿತ್ರ ಕ್ಷೇತ್ರಗಳೆಲ್ಲಾ ಒಂದಕ್ಕೊಂದು ಬೆಸೆದುಕೊಂಡಿವೆ.
ಈ ಎಲ್ಲಾ ಸಂಪ್ರದಾಯಗಳು ಬಸವಣ್ಣನವರ ಮೇಲೆ ಭಕ್ತಿ ಉಳಿಸಿಕೊಂಡವು. ಮಂಟೇ ಸ್ವಾಮಿಯ ಜನಪದದಲ್ಲಿ ಬಸವಣ್ಣನವರನ್ನು ಗುರುವಿಲ್ಲದ ಗುಡ್ಡ (ಶಿಷ್ಯ) ಎಂದು ಗೌರವಿಸಲಾಗಿದೆ.
ಬಸವಣ್ಣ ಅಲ್ಲಮ. ನಾಗಮ್ಮ, ನೀಲಮ್ಮ ಮುಂತಾದ ಹೆಸರುಗಳು ಇವರಲ್ಲಿಯೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಆರೂಢರಲ್ಲಿ ‘ಐಕ್ಯಸ್ಥಲದ ಶೂನ್ಯ ಸಿಂಹಾಸನಾಧಿಪತಿ’ ಎಂಬ ಸಂಪ್ರದಾಯವಿದೆ.
ಇವರಿಗೆಲ್ಲ ಕಲ್ಯಾಣ ಒಂದು ಮರೆಯಲಾಗದ ನೆನಪಾಯಿತು. ಕುಸಿದ ಕಲ್ಯಾಣವನ್ನು ಮತ್ತೆ ಕಾಲ್ಪನಿಕವಾಗಿ ಕಟ್ಟಲು ದಿಗ್ಗಿ ಸಂಗಮನಾಥ, ಗುಂಡ ಬಸವೇಶ್ವರ, ಕೊಡೇಕಲ್ ಬಸವಣ್ಣ ಪ್ರಯತ್ನಿಸಿದರು.
ಈ ಎಲ್ಲ ಪರಂಪರೆಗಳಿಗೂ ಸಂಗಮನಾಥ ಮುಖ್ಯ ದೈವ, ಕೂಡಲ ಸಂಗಮವೇ ಪವಿತ್ರ ಕ್ಷೇತ್ರ. ಕೂಡಲ ಸಂಗಮದಲ್ಲಿ ‘ಒಂಟಿ ಪಾದ ಮಂಟೇ ಸ್ವಾಮಿ’ ಹೆಸರಿನ ಒಂದೇ ಒಂದು ಪಾದ ಕೆತ್ತಿದ ಶಿಲ್ಪವಿದೆ.
ಮಂಟೇ ಸ್ವಾಮಿಗೆ ‘ಆದಿ ಸಂಗಮನಾಥ’ ಎಂಬ ಹೆಸರೂ ಇದೆ. ಕೂಡಲ ಸಂಗಮದಲ್ಲಿ ಮಂಟೇ ಸ್ವಾಮಿ, ಮಂಟೇ ಬಸವ ಹೆಸರಿನ ಮನೆತನಗಳು ತಾವು ಸಂಗಮೇಶ್ವರನ ಪೂಜಾರಿಗಳ ಗುರುಗಳೆಂದು ಹೇಳಿಕೊಳ್ಳುತ್ತಾರೆ
(‘ಕಪ್ಪಡಿ – ನಾಥ ಸಂಪ್ರದಾಯ – ಕಪಿಲಷಷ್ಠಿ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೬)