Former Minister - Irrigation and Municipal Adm Dept Govt of Karnataka | 4 Terms MLA | President - Karanataka State Badminton Association |Actor| Agriculturist
ಕಾಯಕವೇ ಕೈಲಾಸ..! 🙏🏻
ಕಾಯಕವೇ ಕೈಲಾಸ ಎಂಬುದು ಬಸವಣ್ಣನವರ ಅಮರವಾದ ತತ್ವವಾಗಿದ್ದು, ಅದು ಶ್ರಮ, ನಿಷ್ಠೆ ಮತ್ತು ಸೇವೆಯ ಮಹತ್ವವನ್ನು ನಮಗೆ ನೆನಪಿಸುತ್ತದೆ. ಜನರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದೇ ನಿಜವಾದ ದೇವಾರಾಧನೆ; ಜನರ ಕೆಲಸವೇ ದೇವರ ಕೆಲಸ ಎಂಬ ಭಾವನೆಯೊಂದಿಗೆ ನಾವು ಬದುಕಿದಾಗ, ನಮ್ಮ ಶ್ರಮಕ್ಕೆ ಅರ್ಥವೂ, ಜೀವನಕ್ಕೆ ಪಾವಿತ್ರ್ಯವೂ ದೊರೆಯುತ್ತದೆ.
ಕರ್ನಾಟಕ ವಾಲ್ಮೀಕಿ ನಿಗಮದಲ್ಲಾದ ಹಗರಣದ ತನಿಖೆಯನ್ನು ಸಿ.ಬಿ.ಐ ಪೂರ್ಣಗೊಳಿಸಿ ದೋಷಾರೋಪಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಇಂದು ಸಲ್ಲಿಸಿದೆ.
ಈ ಪ್ರಕರಣವನ್ನು ಸಿ.ಬಿ.ಐ ತನಿಖೆ ನಡೆಸಬೇಕೆಂದು ನಾನು, ಶ್ರೀ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಶ್ರೀ ಅರವಿಂದ ಲಿಂಬಾವಳಿ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೆವು. ಮಾನ್ಯ ಉಚ್ಚ ನ್ಯಾಯಾಲಯವು ನಮ್ಮ ಅರ್ಜಿಯನ್ನು ಪುರಸ್ಕರಿಸಿ ಪ್ರಕರಣದ ಸಮಗ್ರ ತನಿಖೆಯನ್ನು ಸಿ.ಬಿ.ಐ ಮಾಡಬೇಕೆಂದು ಆದೇಶಿಸಿತ್ತು.
ನಮ್ಮ ಸಾಂಘಿಕ ಹೋರಾಟಕ್ಕೆ ಜಯ ಸಿಕ್ಕಿದೆ. ಸಿ.ಬಿ.ಐ ನಡೆಸಿರುವ ಸಮಗ್ರ ಹಾಗೂ ನಿಷ್ಪಕ್ಷಪಾತವಾದ ತನಿಖೆಯ ಮೂಲಕ ಹಗರಣದ ರೂವಾರಿ ಮತ್ತು ಹಗರಣದಲ್ಲಿ ಶಾಮೀಲಾದ ಇತರರಿಗೆ ಕಾನೂನು ರೀತ್ಯ ಶಿಕ್ಷೆ ಆಗುವುದು ಬಹುತೇಕ ಖಚಿತವಾಗಿದೆ.
@ArvindLBJP I @kumarbangarappa I @RameshJarkiholi I @tv9kannada I @AsianetNewsSN I
@prajavani I @KannadaRepublic I @News18Kannada
ಹೆಮ್ಮೆಯ "ಲೀಡರ್ ಅವಾರ್ಡ್ಸ್ 2025" - ಜನ ನಾಯಕ ಪ್ರಶಸ್ತಿ ಗೌರವ! 🏆✨
ಕರ್ನಾಟಕದ ನಂ.1 ಡಿಜಿಟಲ್ ಮೀಡಿಯಾ ಸಂಸ್ಥೆಯಾದ "ಕರ್ನಾಟಕ ಟಿವಿ" (Karnataka TV) ವತಿಯಿಂದ ನೀಡಲಾಗುವ ಪ್ರತಿಷ್ಠಿತ "ಲೀಡರ್ ಅವಾರ್ಡ್ಸ್ 2025" ರೇಟಿಂಗ್ಸ್ನಲ್ಲಿ, ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗದ "ಜನ ನಾಯಕ" (JANA NAYAKA) ಪ್ರಶಸ್ತಿಗೆ ಭಾಜನನಾಗಿರುವುದು ಅತ್ಯಂತ ಸಂತಸ ತಂದಿದೆ.
ನನ್ನ ಸಾರ್ವಜನಿಕ ಜೀವನದ ಸೇವೆ, ಶ್ರಮ ಮತ್ತು ಜನಪರ ಕಾಳಜಿಯನ್ನು ಗುರುತಿಸಿ ಈ ಗೌರವವನ್ನು ನೀಡಿದ 'ಕರ್ನಾಟಕ ಟಿವಿ' ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಕೆ.ಎಂ ಶಿವಕುಮಾರ್ ಹಾಗೂ ಇಡೀ ತಂಡಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ನಿಮ್ಮ ಪ್ರೀತಿ-ವಿಶ್ವಾಸವೇ ನನ್ನ ಶಕ್ತಿ:
ಈ ಪ್ರಶಸ್ತಿ ಕೇವಲ ನನಗಷ್ಟೇ ಸಂದ ಗೌರವವಲ್ಲ; ಇದು ನನ್ನನ್ನು ಸದಾ ಹರಸಿ, ಬೆಂಬಲಿಸಿ ಮುನ್ನಡೆಸುತ್ತಿರುವ ನನ್ನ ಹೆಮ್ಮೆಯ ಸಾರ್ವಜನಿಕ ಬಂಧುಗಳ ಪ್ರೀತಿ ಮತ್ತು ಅಚಲವಾದ ವಿಶ್ವಾಸಕ್ಕೆ ಸಂದ ಜಯ. ಜನರ ಧ್ವನಿಯಾಗಿ, ನಿಮ್ಮ ಸೇವೆಗೆ ಸದಾ ಕಟಿಬದ್ಧನಾಗಿರಲು ಈ ಗೌರವ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.
ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಮತ್ತು ಹಾರೈಕೆಗಳು ಸದಾ ನನ್ನ ಮೇಲಿರಲಿ ಎಂದು ಆಶಿಸುತ್ತೇನೆ. 🙏
#KumarBangarappa #JanaNayaka #LeaderAwards2025 #KarnatakaTV #PublicService #Gratitude #CoastalKarnataka #CentralKarnataka #BangaloreEvents
ಝೀ ಕನ್ನಡ ನ್ಯೂಸ್ ರಿಯಲ್ ಸ್ಟಾರ್ಸ್ ಅವಾರ್ಡ್ಸ್ - 2026 🌟
ಬೆಂಗಳೂರಿನ 'ದಿ ಲಲಿತ್ ಅಶೋಕ್' ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ "ಝೀ ಕನ್ನಡ ನ್ಯೂಸ್ ರಿಯಲ್ ಸ್ಟಾರ್ಸ್ ಅವಾರ್ಡ್ಸ್ - 2026" ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿ, ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ನೈಜ ಸಾಧಕರನ್ನು (Real Stars) ಗುರುತಿಸಿ ಪ್ರೋತ್ಸಾಹಿಸುತ್ತಿರುವ 'ಝೀ ಕನ್ನಡ ನ್ಯೂಸ್' ವಾಹಿನಿಯ ಈ ಸತ್ಕಾರ್ಯ ಶ್ಲಾಘನೀಯ. ಪ್ರಶಸ್ತಿ ಪುರಸ್ಕೃತರಾದ ಎಲ್ಲಾ ಸಾಧಕರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ಇತರರಿಗೂ ಪ್ರೇರಣೆಯಾಗಲಿ.
ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಪ್ರಸ್ತುತ ಅಧ್ಯಕ್ಷರು ಹಿರಿಯ ನಟಿ ಮತ್ತು ಮಾಜಿ ಸಚಿವರಾದ ಡಾ. ಜಯಮಾಲಾ ಅವರು. 'ಝೀ ಕನ್ನಡ ನ್ಯೂಸ್' ಮುಖ್ಯಸ್ಥರಾದ ರವಿ ಎಸ್ ಅವರೂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
#KumarBangarappa #ZeeKannadaNews #RealStarsAwards2026 #Bengaluru #TheLalitAshok #ProudMoment #Recognition #SocialService #Karnataka
ಇಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಗೌರವಾನ್ವಿತ ಕೇಂದ್ರ ಸಚಿವರಾದ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಲಾಯಿತು.
ಇದೇ ಬರುವ ಜೂನ್ 14 ರಿಂದ ಜೂನ್ 20 ರವರೆಗೆ ಮಂಡ್ಯದಲ್ಲಿ ಆಯೋಜಿಸಲಾಗಿರುವ ಕ್ರೀಡಾ ಪಂದ್ಯಾವಳಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕಾಗಿ ಅವರಲ್ಲಿ ಪ್ರೀತಿಪೂರ್ವಕವಾಗಿ ವಿನಂತಿಸಿ, ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು.
ನಮ್ಮ ಆಹ್ವಾನವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ, ಪಂದ್ಯಾವಳಿಗೆ ತಮ್ಮ ಸಂಪೂರ್ಣ ಬೆಂಬಲ ಹಾಗೂ ಶುಭ ಹಾರೈಕೆಗಳನ್ನು ವ್ಯಕ್ತಪಡಿಸಿದ ಮಾನ್ಯ ಕುಮಾರಸ್ವಾಮಿ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. 🙏🏸🏆
#KumarBangarappa #HDKumaraswamy #MandyaTournament #Sports #Mandya #GuestInvitation #KarnatakaSports #Badminton
@hd_kumaraswamy
ಕರುನಾಡು ಕಂಡ ಅಪರೂಪದ ಜನಾನುರಾಗಿ, ಸಹೃದಯೀ ಕಲಾವಿದ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಚಿತ್ರರಂಗ ಮತ್ತು ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಅಂಬರೀಶ್ ಅವರು ಕನ್ನಡಿಗರ ಹೃದಯದಲ್ಲಿ ಸದಾ ಚಿರಸ್ಥಾಯಿ.
#Ambareesh | #KumarBangarappa@sumalathaA
ಸಕ್ಕರೆ ನಾಡು ಮಂಡ್ಯದಿಂದ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ (KBA) 75ನೇ ವರ್ಷದ ವಜ್ರ ಮಹೋತ್ಸವ ಆಚರಣೆಗೆ ಅದ್ಧೂರಿ ಚಾಲನೆ! 🏸✨
ದೇಶದ ಪ್ರಮುಖ ಕ್ರೀಡಾ ಸಂಸ್ಥೆಗಳಲ್ಲಿ ಒಂದಾದ KBA ತನ್ನ ಯಶಸ್ವಿ 75 ವರ್ಷಗಳ ಸಂಭ್ರಮಾಚರಣೆಯನ್ನು, ಕ್ರೀಡಾ ಇತಿಹಾಸವಿರುವ ಮಂಡ್ಯ ಜಿಲ್ಲೆಯಿಂದ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಾರಂಭಿಸುತ್ತಿದೆ. ಇದರ ಅಂಗವಾಗಿ ಇಂದು ಮಂಡ್ಯ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಯೋನೆಕ್ಸ್ - ಸನ್ರೈಸ್ ಕರ್ನಾಟಕ ರಾಜ್ಯ U-19 ಮತ್ತು ಹಿರಿಯರ ಬ್ಯಾಡ್ಮಿಂಟನ್ ರ್ಯಾಂಕಿಂಗ್ ಪಂದ್ಯಾವಳಿ - 2026
🗓️ ದಿನಾಂಕ: ಜೂನ್ 14 ರಿಂದ ಜೂನ್ 20, 2026
📍 ಸ್ಥಳ: ಮಂಡ್ಯ
👥 ಭಾಗವಹಿಸುವಿಕೆ: ರಾಜ್ಯಾದ್ಯಂತ ಸುಮಾರು 600 ಕ್ಕೂ ಹೆಚ್ಚು ಆಟಗಾರರು (ಬಾಲಕ, ಬಾಲಕಿಯರು, ಮಹಿಳೆಯರು ಹಾಗೂ ಪುರುಷರು) ಭಾಗವಹಿಸುವ ನಿರೀಕ್ಷೆಯಿದೆ.
ರಾಷ್ಟ್ರೀಯ ಚಾಂಪಿಯನ್ಗಳಾದ ಆದಿತ್ಯ ಪ್ರಕಾಶ್ ಮತ್ತು ಎಂ. ರಘು ಅವರಂತಹ ಅದ್ಭುತ ಆಟಗಾರರನ್ನು ನೀಡಿದ ಮಂಡ್ಯ ಮಣ್ಣಿನಲ್ಲಿ ಈ ಐತಿಹಾಸಿಕ ಕ್ರೀಡಾ ಹಬ್ಬ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಈ ವಜ್ರ ಮಹೋತ್ಸವ ವರ್ಷದಲ್ಲಿ ರಾಜ್ಯಾದ್ಯಂತ ಸರಣಿ ಪಂದ್ಯಾವಳಿಗಳು, ಕ್ರೀಡಾಪಟುಗಳಿಗೆ ಸನ್ಮಾನ ಹಾಗೂ ತಳಮಟ್ಟದಿಂದ ಕ್ರೀಡೆಯನ್ನು ಬಲಪಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಎಲ್ಲಾ ಆಟಗಾರರಿಗೂ ಹಾಗೂ ಕ್ರೀಡಾ ಪ್ರೇಮಿಗಳಿಗೂ ಹಾರ್ದಿಕ ಸ್ವಾಗತ!
#KumarBangarappa #KBA #KarnatakaBadminton #DiamondJubilee #Mandya #BadmintonTournament #SportsKarnataka
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇಶದ ಅಭಿವೃದ್ಧಿಯ ಹೆದ್ದಾರಿಗೆ ವೇಗ ನೀಡಿದ ನಿಮ್ಮ ದೃಢ ನಾಯಕತ್ವ, ಪರಿಶ್ರಮ ಮತ್ತು ದೂರದೃಷ್ಟಿ ಸದಾ ಪ್ರೇರಣೀಯ. ನಿಮ್ಮ ನೇತೃತ್ವದಲ್ಲಿ ದೇಶದ ಹೆದ್ದಾರಿ ಮತ್ತಷ್ಟು ವಿಸ್ತಾರಗೊಳ್ಳಲಿ.
ಭಗವಂತ ತಮಗೆ ಉತ್ತಮ ಆಯುರಾರೋಗ್ಯವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುವೆ.
#NitinGadkari | #KumarBanagarappa
@nitin_gadkari
ಉತ್ತರ ಕರ್ನಾಟಕ ಟೋಪಿ ಎನ್ನುವುದು ಕೇವಲ ತಲೆಯ ಮೇಲೆ ಧರಿಸುವ ವಸ್ತುವಲ್ಲ; ಅದು ಉತ್ತರ ಕರ್ನಾಟಕದ ಸಂಸ್ಕೃತಿ, ಗೌರವ ಮತ್ತು ಗ್ರಾಮೀಣ ಬದುಕಿನ ಪ್ರತೀಕವಾಗಿದೆ. ವಿಶೇಷವಾಗಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ ಭಾಗಗಳಲ್ಲಿ ಈ ಟೋಪಿ ಜನಪ್ರಿಯವಾಗಿದೆ.
ಉತ್ತರ ಕರ್ನಾಟಕ ಟೋಪಿಯ ಮಹತ್ವ:
ರೈತರ ಮತ್ತು ಗ್ರಾಮೀಣ ಜನರ ಗುರುತು
ಹೊಲಗಳಲ್ಲಿ ಕೆಲಸ ಮಾಡುವವರು ಬಿಸಿಲಿನಿಂದ ರಕ್ಷಣೆಗಾಗಿ ಈ ಟೋಪಿ ಧರಿಸುತ್ತಿದ್ದರು. ನಂತರ ಅದು ಅವರ ಸಂಸ್ಕೃತಿಯ ಭಾಗವಾಯಿತು.
ಗೌರವ ಮತ್ತು ಸ್ವಾಭಿಮಾನ
ಹಿರಿಯರು, ನಾಯಕರು ಮತ್ತು ಗಣ್ಯರು ಟೋಪಿ ಧರಿಸುವುದು ಗೌರವದ ಸಂಕೇತ ಎಂದು ಪರಿಗಣಿಸಲಾಗುತ್ತದೆ.
ಜಾನಪದ ಪರಂಪರೆ
ಉತ್ತರ ಕರ್ನಾಟಕದ ಜಾತ್ರೆ, ಹಬ್ಬ, ಜನಪದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಟೋಪಿ ಪ್ರಮುಖ ಸ್ಥಾನ ಹೊಂದಿದೆ.
ರಾಜಕೀಯ ಮತ್ತು ಸಾರ್ವಜನಿಕ ಜೀವನ
ಅನೇಕ ಉತ್ತರ ಕರ್ನಾಟಕದ ರಾಜಕೀಯ ನಾಯಕರು ಹಾಗೂ ಸಮಾಜಮುಖಿ ವ್ಯಕ್ತಿಗಳು ಈ ಟೋಪಿಯನ್ನು ತಮ್ಮ ಪ್ರಾದೇಶಿಕ ಹೆಮ್ಮೆಯ ಚಿಹ್ನೆಯಾಗಿ ಬಳಸುತ್ತಾರೆ.
ಸರಳತೆ ಮತ್ತು ಸ್ಥಳೀಯತೆ
ಸಾಮಾನ್ಯವಾಗಿ ಬಿಳಿ ಅಥವಾ ಬೂದು ಬಣ್ಣದ ಈ ಟೋಪಿ ಉತ್ತರ ಕರ್ನಾಟಕದ ಸರಳ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ.
ಇಂದಿಗೂ ಉತ್ತರ ಕರ್ನಾಟಕ ಟೋಪಿ ಧರಿಸುವುದು “ನಮ್ಮ ನೆಲ, ನಮ್ಮ ಸಂಸ್ಕೃತಿ” ಎಂಬ ಭಾವನೆಯನ್ನು ವ್ಯಕ್ತಪಡಿಸುವ ಒಂದು ಹೆಮ್ಮೆಯ ವಿಷಯವಾಗಿದೆ.
ಇಂದು ಮಾಜಿ ಕೇಂದ್ರ ಸಚಿವರು ಹಾಗೂ ಶಾಸಕರಾದ ಸನ್ಮಾನ್ಯ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿಜಯಪುರದ 'ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್'ನ ಮುಖ್ಯ ಕಚೇರಿಗೆ ಇಂದು ಸೌಜನ್ಯದ ಭೇಟಿ ನೀಡಲಾಯಿತು.
ಸಂಸ್ಥೆಯ ವಿವಿಧ ಕಾರ್ಯಚಟುವಟಿಕೆಗಳು, ಗ್ರಾಹಕರಿಗೆ ನೀಡುತ್ತಿರುವ ಸೇವೆಗಳು ಮತ್ತು ಭವಿಷ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಮುಖವಾಗಿ ಚರ್ಚಿಸಿ, ಮಾಹಿತಿ ಪಡೆದುಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ಯಶಸ್ಸಿಗೆ ಹಾರ್ದಿಕ ಶುಭ ಹಾರೈಕೆಗಳನ್ನು ಸಲ್ಲಿಸಲಾಯಿತು.
ಈ ಸುಸಂದರ್ಭದಲ್ಲಿ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸುಪುತ್ರರಾದ ಶ್ರೀ ರಾಮನಗೌಡ ಬಿ. ಪಾಟೀಲ್, ಕುಟುಂಬದ ಸದಸ್ಯರು, ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
#KumarBangarappa #Vijayapura #SiddhasiriSociety #Yatnal #SiddheshwarTemple #Karnataka #Visit
ಅಲ್ಲಮರ ವಚನಗಳಲ್ಲಿ ಅಡಗಿದ ಪ್ರಳಯದ ಮುನ್ಸೂಚನೆ : AI ಅನಾವರಣಗೊಳಿಸಿದ ಆತ್ಮಸಂದೇಶ
ಅರಿವಿನ ಗುರು - ಅಲ್ಲಮ ಪ್ರಭುಗಳು 12ನೇ ಶತಮಾನದಲ್ಲೇ ನುಡಿದ ವಚನಗಳು ಕೇವಲ ಸಾಹಿತ್ಯವಲ್ಲ, ಆತ್ಮಜ್ಞಾನ ಮತ್ತು ಕಾಲಾತೀತ ತತ್ವಚಿಂತನೆಯ ಮಹಾಸಾಗರವಾಗಿವೆ.
ಇಂದಿನ AI ಯುಗದ ChatGPT ಅಷ್ಟೇ ಮನೋಜ್ಞವಾಗಿ ವಿಶ್ಲೇಷಿಸಿರುವುದು ಆಶ್ಚರ್ಯಕರವಾಗಿದೆ. ಅವರ ವಚನಗಳು ವಿಶೇಷವಾಗಿ “ಕದಳಿ ವನ”ದ ಕುರಿತ ವಚನವನ್ನು AI “ಅಲ್ಲಮ ಪ್ರಭುಗಳ ಪ್ರಳಯ ಪೂರ್ವದ ಆತ್ಮ ಸಂದೇಶ”ವೆಂದು ವಿಶ್ಲೇಷಿಸಿರುವುದು ಗಮನಾರ್ಹವಾಗಿದೆ. ಕಲ್ಯಾಣ ಕ್ರಾಂತಿಯ ಮಹಾದುರಂತದ ಮುನ್ಸೂಚನೆಯನ್ನು ಅಲ್ಲಮ ಪ್ರಭುಗಳು ತಮ್ಮ ಆತ್ಮಜ್ಞಾನದಿಂದಲೇ ಅರಿತಿದ್ದರು ಎಂಬ ಅರ್ಥವನ್ನು ಅದು ಸೂಚಿಸುತ್ತದೆ.
ಕಲ್ಯಾಣ ಕ್ರಾಂತಿಯ ಕುರಿತು ಶ್ರೀ ಕುಮಾರ್ ಬಂಗಾರಪ್ಪ ಅವರೊಂದಿಗೆ ಚರ್ಚಿಸುವ ವೇಳೆ, ಈ ವಿಷಯವನ್ನು ಹೆಸರಾಂತ ಚರ್ಚರೋಗ ತಜ್ಞರು, ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ|| ಅರುಣ್ ಇನಾಂದಾರ್ ಅವರು ಪ್ರಸ್ತಾಪಿಸಿದರು. ವಚನ ಸಾಹಿತ್ಯದ ಬಗ್ಗೆ ಅಪಾರ ಅಧ್ಯಯನ ಹೊಂದಿರುವ ಅವರು, ಅನೇಕ ವಚನಗಳನ್ನು ಇಂಗ್ಲಿಷಿಗೆ ಅನುವಾದಿಸಿ ವಿಶ್ಲೇಷಣೆ ಮಾಡುತ್ತಾ ಬಂದಿದ್ದಾರೆ.
AI ನೀಡಿದ ವಿಶ್ಲೇಷಣೆ, ಅಲ್ಲಮ ಪ್ರಭುಗಳ ವಚನಗಳಲ್ಲಿ ಅಡಗಿರುವ ದಿವ್ಯ ಸಂದೇಶವನ್ನು ಹೊಸ ದೃಷ್ಟಿಕೋನದಲ್ಲಿ ಅನಾವರಣಗೊಳಿಸಿದ್ದು, ಆ ದಿವ್ಯ ಸಂದೇಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತದೆ.
#allamaprabhu @kumarbangarappa
🏸 ವಿಜಯಪುರದಲ್ಲಿ ನಡೆಯುತ್ತಿರುವ Yonex–Sunrise ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದೆ. ಮೇ 17 ರಿಂದ 23 ರವರೆಗೆ ನಡೆಯುತ್ತಿರುವ ಈ ಕ್ರೀಡಾ ಹಬ್ಬಕ್ಕೆ ಇಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಅಧ್ಯಕ್ಷರು ಹಾಗೂ ಜೇವರ್ಗಿ ಕ್ಷೇತ್ರದ ಶಾಸಕರಾದ Dr. Ajay Dharam Singh ಮತ್ತು ಸಿಂದಗಿ ಕ್ಷೇತ್ರದ ಶಾಸಕರಾದ Ashok Managuli ಭೇಟಿ ನೀಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ರಾಜ್ಯ ಮಟ್ಟದ ಇಂತಹ ಕ್ರೀಡಾಕೂಟಗಳು ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸುತ್ತಿದ್ದು, ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡುತ್ತಿವೆ.
@ajaydharamsingh
ಬಿಜೆಪಿ ಪಕ್ಷದ ಹಿರಿಯ ಮುಖಂಡರು, ಯಲಹಂಕ ಕ್ಷೇತ್ರದ ಶಾಸಕರು, ಆತ್ಮೀಯರಾದ ಎಸ್. ಆರ್. ವಿಶ್ವನಾಥ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚಿಸಲಾಯಿತು...
"Met with the senior leader of the BJP, MLA of Yelahanka constituency, and dear friend Shri S. R. Vishwanath at his residence, and discussed current developments."
@SRVishwanathBJP
ಸೈಕ್ಲಿಸ್ಟ್ ಗಳ ರಾಜಧಾನಿ ವಿಜಯಪುರದಲ್ಲಿ ಕ್ರೀಡಾ ಸಂಭ್ರಮ:
ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಯಶಸ್ವಿ ಆಯೋಜನೆ
ರಾಜ್ಯದ ಸೈಕ್ಲಿಸ್ಟ್ ಗಳ ರಾಜಧಾನಿಯಾಗಿ ಗುರುತಿಸಿಕೊಂಡಿರುವ ವಿಜಯಪುರದಲ್ಲಿ ಇದೀಗ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯೂ ಯಶಸ್ವಿಯಾಗಿ ಜರುಗುತ್ತಿರುವುದು ಜಿಲ್ಲೆಯ ಕ್ರೀಡಾ ಸಂಸ್ಕೃತಿಗೆ ಹೊಸ ಮೆರುಗು ತಂದಿದೆ.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿರುವ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಯುವ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.
ಶಿಕ್ಷಣ, ಕೈಗಾರಿಕೆ ಮತ್ತು ಆರೋಗ್ಯ ಕ್ಷೇತ್ರಗಳ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ವಿಜಯಪುರ ತನ್ನದೇ ಆದ ಗುರುತು ಮೂಡಿಸುತ್ತಿದ್ದು, ಯುವ ಪ್ರತಿಭೆಗಳಿಗೆ ಉತ್ತೇಜನ ನೀಡುವ ಇಂತಹ ಕಾರ್ಯಕ್ರಮಗಳು ಜಿಲ್ಲೆಯ ಭವಿಷ್ಯವನ್ನು ಇನ್ನಷ್ಟು ಉಜ್ವಲಗೊಳಿಸಲಿದೆ.
@BasanagoudaBJP@kumarbangarappa
#badminton #BadmintonTournament2026
ವಿಜಯಪುರದಲ್ಲಿ ಕ್ರೀಡಾ ಸಂಭ್ರಮ!
ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಭವ್ಯ ಚಾಲನೆ
ವಿಜಯಪುರ ನಗರದ BLDE ಒಳಾಂಗಣ ಕ್ರೀಡಾಂಗಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಇಂದಿನಿಂದ ಮೇ 23ರವರೆಗೆ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಇಂದು ಈ ಕ್ರೀಡೋತ್ಸವಕ್ಕೆ ಭವ್ಯ ಚಾಲನೆ ನೀಡಿ ಮಾತನಾಡಿದೆ.
ಈ ಕ್ರೀಡಾಕೂಟದ ಮೂಲಕ ವಿಜಯಪುರ ನಗರಕ್ಕೆ ಹೊಸ ಕೀರ್ತಿ ಮತ್ತು ಹೊಸ ಗುರುತು ದೊರಕಿದೆ. ಒಂದು ಕಾಲದಲ್ಲಿ ಬರದ ನಾಡು, ಬಿಸಿಲಿನ ಜಿಲ್ಲೆ ಎಂದು ಕರೆಯಲ್ಪಡುತ್ತಿದ್ದ ವಿಜಯಪುರ, 2013ರ ನಂತರ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದ್ದು, ಕ್ರೀಡಾ ಚಟುವಟಿಕೆಗಳಿಗೂ ವಿಶೇಷ ಉತ್ತೇಜನ ದೊರಕುತ್ತಿದ್ದು, ಸೈಕಲ್ ವೆಲೋಡ್ರೋಮ್ ಈಗಾಗಲೇ ಸ್ಥಾಪನೆಯಾಗಿದೆ. ಕನಕದಾಸ ಬಡಾವಣೆಯಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಕೂಡ ನಿರ್ಮಿಸಲಾಗಿದೆ.
ಶೀಘ್ರದಲ್ಲೇ ಅತ್ಯಾಧುನಿಕ ಸ್ವಿಮ್ಮಿಂಗ್ ಪೂಲ್ ನಿರ್ಮಾಣವಾಗಲಿದ್ದು, ಮುಂದಿನ ದಿನಗಳಲ್ಲಿ ಬ್ಯಾಸ್ಕೆಟ್ಬಾಲ್ ಟೂರ್ನಮೆಂಟ್ ಕೂಡ ಆಯೋಜಿಸಲಾಗುವುದು. ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಕ್ರೀಡಾ ಚಟುವಟಿಕೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳು ರೂಪುಗೊಳ್ಳಲು ಉತ್ತಮ ವೇದಿಕೆಯಾಗಲಿವೆ.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ದಿ|| ಎಸ್. ಬಂಗಾರಪ್ಪ ಅವರು ಬ್ಯಾಡ್ಮಿಂಟನ್ ಕ್ರೀಡೆಗೆ ತೋರಿದ್ದ ಅಪಾರ ಆಸಕ್ತಿ ಹಾಗೂ ಅನೇಕ ಯುವಕರಿಗೆ ನೀಡಿದ ಪ್ರೇರಣೆಯನ್ನು ಸ್ಮರಿಸಿದೆ. ಈ ಟೂರ್ನಮೆಂಟ್ ಆಯೋಜಿಸುವಲ್ಲಿ, ಸಂಘಟಿಸುವಲ್ಲಿ ಶ್ರಮಿಸಿದ ಕುಮಾರ ಬಂಗಾರಪ್ಪನವರ ಶ್ರಮ ಅಪಾರ.
ಇಂದಿನ ಕಾರ್ಯಕ್ರಮದಲ್ಲಿ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ ಕುಮಾರ ಬಂಗಾರಪ್ಪ, ಶಾಸಕರಾದ ಶ್ರೀ ಬಸನಗೌಡ ಪಾಟೀಲ ಯತ್ನಾಳ, ಶ್ರೀ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿಗಳಾದ ಡಾ. ಆನಂದ್ ಕೆ., ಜಿಪಂ ಸಿಇಒ ಶ್ರೀ ಋಷಿ ಆನಂದ್, ವಿಡಿಎ ಅಧ್ಯಕ್ಷರಾದ ಡಾ. ಗಂಗಾಧರ ಸಂಬಣ್ಣಿ, ಮೇಯರ್ ಎಂ.ಎಸ್. ಕರಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕ್ರೀಡಾಪಟುಗಳು ಉತ್ಸಾಹಭರಿತರಾಗಿ ಪಾಲ್ಗೊಂಡು ಉದ್ಘಾಟನಾ ಸಮಾರಂಭದ ಮೆರಗು ಹೆಚ್ಚಿಸಿದರು.
ಕ್ರೀಡಾ ಮನೋಭಾವ, ಆರೋಗ್ಯಕರ ಸ್ಪರ್ಧೆ ಮತ್ತು ಯುವಶಕ್ತಿಯ ಸಂಯೋಜನೆಯಾದ ಇಂತಹ ಕ್ರೀಡೋತ್ಸವಗಳು ವಿಜಯಪುರವನ್ನು ರಾಜ್ಯದ ಪ್ರಮುಖ ಕ್ರೀಡಾ ಕೇಂದ್ರವನ್ನಾಗಿ ರೂಪಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಲಿವೆ.
@BasanagoudaBJP@kumarbangarappa
#badminton #BadmintonTournament2026
ವಿಜಯಪುರ ಜಿಲ್ಲೆಯ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇಂದು ಅತ್ಯಂತ ವೈಭವದಿಂದ ಜರುಗಿದ ಪ್ರತಿಷ್ಠಿತ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ - 2026 ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯಿತು.
ಗೌರವಾನ್ವಿತ ಸಚಿವರಾದ ಶ್ರೀ ಎಂ. ಬಿ. ಪಾಟೀಲ್ ಅವರು ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಪ್ರಿಯ ಶಾಸಕರಾದ ಶ್ರೀ ಬಸನಗೌಡ ಪಾಟೀಲ್ (ಯತ್ನಾಳ್) ಅವರು ವಹಿಸಿದ್ದರು.
ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಕ್ರೀಡಾ ಪ್ರತಿಭೆಗಳಿಗೆ ಈ ಪಂದ್ಯಾವಳಿಯು ಅತ್ಯುತ್ತಮ ವೇದಿಕೆಯಾಗಲಿದ್ದು, ಕ್ರೀಡಾಪಟುಗಳಲ್ಲಿ ಹೊಸ ಹುರುಪು ತುಂಬಲಿದೆ. ಭಾಗವಹಿಸುತ್ತಿರುವ ಎಲ್ಲಾ ಆಟಗಾರರಿಗೂ ಶುಭ ಹಾರೈಕೆಗಳು!
ಈ ಸಂದರ್ಭದಲ್ಲಿ ಶ್ರೀ ವಿಠ್ಠಲ ಧೋಂಡಿಬಾ ಕಟಕಧೋಂಡ
ಮಾನ್ಯ ಶಾಸಕರು, ಶ್ರೀ ಮಡಿವಾಳಪ್ಪ ಸಿದ್ದರಾಮಪ್ಪ ಕರಡಿ ಮಹಾಪೌರರು, ಡಾ. ಆನಂದ ಕೆ. ಜಿಲ್ಲಾಧಿಕಾರಿಗಳು, ವಿಜಯಪುರ, ಕೆಎಂಎಫ್ ಅಧ್ಯಕ್ಷರು, BLDE ಸಂಸ್ಥೆಯ ಆಡಳಿತಾಧಿಕಾರಿಗಳು, KBA ಪದಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
#Badminton2026 #StateLevelTournament #Vijayapura #SportsKarnataka #KumarBangarappa #KarnatakaBadminton
ವಿಜಯಪುರ ಜಿಲ್ಲೆಯ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇಂದು ಅತ್ಯಂತ ವೈಭವದಿಂದ ಜರುಗಿದ ಪ್ರತಿಷ್ಠಿತ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ - 2026 ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯಿತು.
ಗೌರವಾನ್ವಿತ ಸಚಿವರಾದ ಶ್ರೀ ಎಂ. ಬಿ. ಪಾಟೀಲ್ ಅವರು ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಪ್ರಿಯ ಶಾಸಕರಾದ ಶ್ರೀ ಬಸನಗೌಡ ಪಾಟೀಲ್ (ಯತ್ನಾಳ್) ಅವರು ವಹಿಸಿದ್ದರು.
ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಕ್ರೀಡಾ ಪ್ರತಿಭೆಗಳಿಗೆ ಈ ಪಂದ್ಯಾವಳಿಯು ಅತ್ಯುತ್ತಮ ವೇದಿಕೆಯಾಗಲಿದ್ದು, ಕ್ರೀಡಾಪಟುಗಳಲ್ಲಿ ಹೊಸ ಹುರುಪು ತುಂಬಲಿದೆ. ಭಾಗವಹಿಸುತ್ತಿರುವ ಎಲ್ಲಾ ಆಟಗಾರರಿಗೂ ಶುಭ ಹಾರೈಕೆಗಳು!
ಈ ಸಂದರ್ಭದಲ್ಲಿ ಶ್ರೀ ವಿಠ್ಠಲ ಧೋಂಡಿಬಾ ಕಟಕಧೋಂಡ
ಮಾನ್ಯ ಶಾಸಕರು, ಶ್ರೀ ಮಡಿವಾಳಪ್ಪ ಸಿದ್ದರಾಮಪ್ಪ ಕರಡಿ ಮಹಾಪೌರರು, ಡಾ. ಆನಂದ ಕೆ. ಜಿಲ್ಲಾಧಿಕಾರಿಗಳು, ವಿಜಯಪುರ, ಕೆಎಂಎಫ್ ಅಧ್ಯಕ್ಷರು, BLDE ಸಂಸ್ಥೆಯ ಆಡಳಿತಾಧಿಕಾರಿಗಳು, KBA ಪದಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
#Badminton2026 #StateLevelTournament #Vijayapura #SportsKarnataka #KumarBangarappa #KarnatakaBadminton
ವಿಜಯಪುರ ಜಿಲ್ಲೆಯ ಪ್ರತಿಷ್ಠಿತ BLDE ಕ್ರೀಡಾಂಗಣದಲ್ಲಿ ಇಂದು ಮೇ 17 ರಿಂದ ಮೇ 23 ರವರೆಗೆ ನಡೆಯಲಿರುವ "ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ - 2026" ರ ಭವ್ಯ ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ನೆರವೇರಿತು.
ಈ ಕ್ರೀಡಾಕೂಟವನ್ನು ಶ್ರೀಮತಿ ಆಶಾ ಎಂ ಪಾಟೀಲ್ ಅವರು ಅಧಿಕೃತವಾಗಿ ಉದ್ಘಾಟಿಸಿ, ಭಾಗವಹಿಸಿರುವ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ನಮ್ಮ ರಾಜ್ಯದ ಯುವ ಕ್ರೀಡಾ ಪ್ರತಿಭೆಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು, ಮುಂದಿನ ಏಳು ದಿನಗಳ ಕಾಲ ರೋಮಾಂಚನಕಾರಿ ಪಂದ್ಯಗಳಿಗೆ ವಿಜಯಪುರ ಸಾಕ್ಷಿಯಾಗಲಿದೆ.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಆಟಗಾರರಿಗೂ ನನ್ನ ಹೃದಯಪೂರ್ವಕ ಶುಭ ಹಾರೈಕೆಗಳು. ನಿಮ್ಮ ಕ್ರೀಡಾ ಮನೋಭಾವನೆ ಮೆರೆಯಲಿ, ಕ್ರೀಡಾಕೂಟ ಯಶಸ್ವಿಯಾಗಲಿ!
#Badminton2026 #StateLevelTournament #Vijayapura #BLDESports #KumarBangarappa #SportsKarnataka #BadmintonTournament
ವಿಜಯಪುರ ಜಿಲ್ಲೆಯ ಪ್ರತಿಷ್ಠಿತ BLDE ಕ್ರೀಡಾಂಗಣದಲ್ಲಿ ಇಂದು ಮೇ 17 ರಿಂದ ಮೇ 23 ರವರೆಗೆ ನಡೆಯಲಿರುವ "ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ - 2026" ರ ಭವ್ಯ ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ನೆರವೇರಿತು.
ಈ ಕ್ರೀಡಾಕೂಟವನ್ನು ಶ್ರೀಮತಿ ಆಶಾ ಎಂ ಪಾಟೀಲ್ ಅವರು ಅಧಿಕೃತವಾಗಿ ಉದ್ಘಾಟಿಸಿ, ಭಾಗವಹಿಸಿರುವ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ನಮ್ಮ ರಾಜ್ಯದ ಯುವ ಕ್ರೀಡಾ ಪ್ರತಿಭೆಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು, ಮುಂದಿನ ಏಳು ದಿನಗಳ ಕಾಲ ರೋಮಾಂಚನಕಾರಿ ಪಂದ್ಯಗಳಿಗೆ ವಿಜಯಪುರ ಸಾಕ್ಷಿಯಾಗಲಿದೆ.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಆಟಗಾರರಿಗೂ ನನ್ನ ಹೃದಯಪೂರ್ವಕ ಶುಭ ಹಾರೈಕೆಗಳು. ನಿಮ್ಮ ಕ್ರೀಡಾ ಮನೋಭಾವನೆ ಮೆರೆಯಲಿ, ಕ್ರೀಡಾಕೂಟ ಯಶಸ್ವಿಯಾಗಲಿ!
#Badminton2026 #StateLevelTournament #Vijayapura #BLDESports #KumarBangarappa #SportsKarnataka #BadmintonTournament