ನೀವು @DrParameshwara ಎರಡರಲ್ಲೂ ಆಯ್ಕೆಯಾಗಿರುವ ಅಭ್ಯರ್ಥಿಗಳ ಅಭ್ಯರ್ಥಿಗಳನ್ನು ತೆಗೆಯುತ್ತಾ revised ಪಟ್ಟಿಯನ್ನು ಬಿಡುತ್ತಾ ಹೋದರೆ 402 ಅಭ್ಯರ್ಥಿಗಳ ಜೀವನ ನರಕವಾಗುತ್ತದೆ.
ಗೃಹ ಮಂತ್ರಿಗಳು 15 ದಿನದಲ್ಲಿ ಆದೇಶ ಪ್ರತಿ ನೀಡುತ್ತೇನೆ, ಎಂದು ಏಕೆ ಹೇಳುತ್ತಾ ಇಲ್ಲಿರುವ ಅಭ್ಯರ್ಥಿಗಳೊಂದಿಗೆ ಚೆಲ್ಲಾಟವನ್ನು ಆಡುತ್ತಿದ್ದೀರಾ. ನಮಗೂ ನಿಮ್ಮ ಆಶ್ವಾಸನೆಗಳನ್ನು ಕೇಳಿ ನರಕಾಯತನೇ ಆಗುತ್ತಿದೆ.
ಆದ್ದರಿಂದ ನೀವು ಸದನದಲ್ಲಿ ಹೇಳಿದ ಹಾಗೆ 20 ದಿನದಲ್ಲಿ ಆದೇಶ ಪ್ರತಿ ನೀಡಲು ವಿಫಲವಾದರೆ ಸೆಪ್ಟಂಬರ್ 11 ರಂದು ಎಲ್ಲಾ ಅಭ್ಯರ್ಥಿಗಳು ಮತ್ತು @AKSSAofficial ವಿದ್ಯಾರ್ಥಿ ಸಂಘಟನೆ, ರೈತರ ಸಂಘಟನೆಗಳೊಂದಿಗೆ, ಕನ್ನಡಪರ ಸಂಘಟನೆಗಳೊಂದಿಗೆ, ಮತ್ತು ಆಯ್ಕೆಯಾದ ಅಭ್ಯರ್ಥಿಗಳ ಪೋಷಕರೊಂದಿಗೆ ಸೇರಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡುವುದರೊಂದಿಗೆ ಅದೇ ದಿನ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ನಿರ್ಧರಿಸಿದ್ದೇವೆ.