ದಣಿವರಿಯದ ದಯಾಮಯಿಗಳು, ಸುತ್ತೂರು ಶ್ರೀ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳೊಂದಿಗೆ ಶುಭಾಶಯ ಕೋರುತ್ತೇನೆ.
ಬಸವಾದಿ ಶರಣರ ಸರ್ವಸಮಾನತೆ, ಕಾಯಕಶ್ರದ್ಧೆಯ ಪರಂಪರೆಯನ್ನು ಮುಂದುವರಿಸುತ್ತಾ, ನಾಡಿನ ಸಾಮಾಜಿಕ-ಶೈಕ್ಷಣಿಕ-ಧಾರ್ಮಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸುತ್ತಾ ಬಂದಿರುವ ಶ್ರೀಗಳ ಮಾರ್ಗದರ್ಶನ ನಾಡಿಗೆ ಸದಾಕಾಲ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ.
#ಸುತ್ತೂರುಶ್ರೀಮಠ #ShivaratriDeshikendraSwamiji #sutturumutt
ಮಾನ್ಯ ಬಿಜೆಪಿಯ ನಾಯಕರುಗಳೇ, ಸಚಿವ ಎಂ. ಬಿ. ಪಾಟೀಲ್ ಅವರ ನ್ಯಾಯಯುತವಾದ ಹೇಳಿಕೆ ನಿಮಗೆ ಅಷ್ಟೊಂದು ಕೆರಳಿಸಿತೇ?
UPA-2 ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಜೂನ್ 2013ರಿಂದ ಮೇ 2014ರ ಅವಧಿಗೆ ಅಂದರೆ ಸುಮಾರು 11ತಿಂಗಳು ಅವಧಿಗೆ ರೈಲ್ವೇ ಸಚಿವರಾಗಿದ್ದರು. ಇದೇ ಅವಧಿಯಲ್ಲಿ ಕಲಬುರಗಿ ರೈಲ್ವೆ ವಿಭಾಗ ಘೋಷಣೆ ಮಾತ್ರವಲ್ಲದೆ ಅದಕ್ಕೆ ಪೂರಕವಾದ DPR, ಕಚೇರಿಗೆ ಭೂಮಿ ಒದಗಿಸಿ, OSD ನೇಮಿಸಿದ್ದರು. ಆದರೆ ಮುಂದೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ಇಲ್ಲಿವರೆಗೂ ಕಲಬುರಗಿ ರೈಲ್ವೆ ವಿಭಾಗಕ್ಕೆ ಸಂಬಂಧಿಸಿದಂತೆ ಎಳ್ಳು ಕಾಳಿನಷ್ಟು ಕಾರ್ಯ ಮಾಡಲಿಲ್ಲ. ಇದು ನೀವು ಕಲ್ಯಾಣ ಕರ್ನಾಟಕ ಜನತೆಗೆ ಮಾಡಿದ ಮೋಸ ಅಲ್ಲವೇ?
ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುವ ನಿಮ್ಮ ಮೋದಿ ಸರ್ಕಾರದಿಂದಾಗಿ ಕಲಬುರಗಿ, ವಾಡಿ, ಸೇಡಂ ಸೇರಿದಂತೆ ಹಲವು ಕರ್ನಾಟಕದ ನಿಲ್ದಾಣಗಳ ಆದಾಯ ಬೇರೆ ರಾಜ್ಯಗಳ ಪಾಲಾಗುತ್ತಿದೆ.
ಖರ್ಗೆ ಅವರ ಕ್ಷೇತ್ರಕ್ಕೆ ಏಕೆ ಅಭಿವೃದ್ಧಿ ಮಾಡಬೇಕು ಎಂಬ ದುರಾಲೋಚನೆ ನಿಮ್ಮಲ್ಲಿದೆ ಅಷ್ಟೇ ಬೇರೇನೂ ಇಲ್ಲ. ಹೀಗಿದ್ದರೂ ಕಲಬುರಗಿ ಜನ 2019ರಲ್ಲಿ ನಿಮ್ಮದೇ ಪಕ್ಷದ ಸಂಸದನ್ನು ಆಯ್ಕೆ ಮಾಡಿದಾಗಲೂ ಅಲ್ಲಿನ ಜನರ ಕುರಿತು ಕರುಣೆ ಬರಲಿಲ್ಲವೇ ಮೋದಿ ಅವರೇ?
@MBPatil@kharge@PriyankKharge@AshwiniVaishnaw@narendramodi@AmitShah@DKShivakumar@INCKarnataka@BYVijayendra@RAshokaBJP@mepratap@chan_sim@rameshraop@vinays1210@RaoShamanth@RaviGunaje@Ganesh52761634@rwstats@alexpan92746429@Sridhar_24@NaaneNiranjana
#KalaburagiRailwayDivision #KalyanaKarnataka #Kalaburagi #RailwayDivision #Congress #BJP
ಮಂಗಳೂರು ರೈಲ್ವೆ ವಿಭಾಗದ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಿರುವ ಮಿಸ್ಟರ್ @MBPatil ಅವರೇ, ನಿಮ್ಮದೇ ವಿಡಿಯೋ ಕಾಂಗ್ರೆಸ್ನ ಐತಿಹಾಸಿಕ ದ್ರೋಹವನ್ನು ಬಯಲು ಮಾಡಿದೆ. ಕಾಂಗ್ರೆಸ್ಗೆ ಯಾವಾಗಲೂ ಸತ್ಯ ಮತ್ತು ವಾಸ್ತವವೇ ಅತಿದೊಡ್ಡ ವಿರೋಧಿ!
ಒಮ್ಮೆ ಇತಿಹಾಸದ ಪುಟಗಳನ್ನು ತಿರುವಿ ನೋಡಿ
👉 1956ರಲ್ಲಿ ನೆಹರು ಸರ್ಕಾರ ಮಂಗಳೂರನ್ನು ಪಾಲಕ್ಕಾಡ್ ವಿಭಾಗಕ್ಕೆ ಸೇರಿಸಿತು. ಅದೇ ವರ್ಷ ಕರ್ನಾಟಕ ರಾಜ್ಯ ಉದಯವಾದರೂ, ಬರೋಬ್ಬರಿ 60 ವರ್ಷಗಳ ಕಾಲ ಕಾಂಗ್ರೆಸ್ ಈ ಅನ್ಯಾಯವನ್ನು ಸರಿಪಡಿಸಲಿಲ್ಲ ಏಕೆ?
👉 1956 ರಿಂದ 2014ರ ನಡುವೆ ಕರ್ನಾಟಕದವರೇ ಆದ ಎಚ್.ಸಿ.ದಾಸಪ್ಪ, ಸಿ.ಎಂ.ಪೂಣಚ್ಚ, ಕೆಂಗಲ್ ಹನುಮಂತಯ್ಯ, ಟಿ.ಎ.ಪೈ, ಸಿ.ಕೆ.ಜಾಫರ್ ಷರೀಫ್ ಹಾಗೂ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕ್ಯಾಬಿನೆಟ್ ರೈಲ್ವೆ ಸಚಿವರಾಗಿದ್ದರು. ಜೊತೆಗೆ ಕೆ.ಎಚ್.ಮುನಿಯಪ್ಪನವರು ರಾಜ್ಯ ಸಚಿವರಾಗಿದ್ದರು. ಅಧಿಕಾರವಿದ್ದರೂ ಇವರಾರೂ ಮಂಗಳೂರನ್ನು ಕರ್ನಾಟಕದ ವಿಭಾಗಕ್ಕೆ ಸೇರಿಸಲಿಲ್ಲ ಏಕೆ?
👉 2007ರಲ್ಲಿ ಯುಪಿಎ ಸರ್ಕಾರ ಪಾಲಕ್ಕಾಡ್ನಿಂದ ಸೇಲಂ ವಿಭಾಗವನ್ನು ವಿಭಜಿಸಿದಾಗಲೂ, ಮಂಗಳೂರನ್ನು ಕರ್ನಾಟಕದ ವಿಭಾಗದ ಅಡಿಯಲ್ಲಿ ತರುವ ಕನಿಷ್ಠ ಕಾಳಜಿಯನ್ನೂ ತೋರಿಸಲಿಲ್ಲ!
ಮಂಗಳೂರನ್ನು ಮೈಸೂರು ವಿಭಾಗದೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ಮುನ್ನ, 6 ದಶಕಗಳ ಕಾಲ ಕರಾವಳಿಗೆ ಮಲತಾಯಿ ಧೋರಣೆ ತೋರಿದ ನಿಮ್ಮ ಪಕ್ಷದ ವೈಫಲ್ಯದ ಬಗ್ಗೆ ಉತ್ತರಿಸಿ. ಸತ್ಯದ ಮುಂದೆ ನಿಮ್ಮ ಸುಳ್ಳಿನ ಸರಮಾಲೆಗಳು ನಿಲ್ಲುವುದಿಲ್ಲ!
#CongressBetraysKarnataka #MangaluruRailway
ಭಕ್ತಿ, ಪರಂಪರೆ ಮತ್ತು ರಾಷ್ಟ್ರಭಕ್ತಿಯ ಅಪೂರ್ವ ಸಂಗಮ
ಶ್ರೀ ಗುರುಪಾದೇಶ್ವರ ಶಿವಯೋಗಿಗಳ 184ನೇ ಮಹಾಗಣಾರಾಧನೆ
ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಬೃಹನ್ಮಠದಲ್ಲಿ ಶನಿವಾರ ಶ್ರೀ ಗುರುಪಾದೇಶ್ವರ ಶಿವಯೋಗಿಗಳ 184ನೇ ಮಹಾಗಣಾರಾಧನೆ, ಡಾ.ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳವರ ವಜ್ರಮಹೋತ್ಸವ ಮತ್ತು ಉತ್ತರಾಧಿಕಾರಿ ಪೂಜ್ಯ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ನಿಮಿತ್ತ ತಿರಂಗಾ ಬುತ್ತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದೆ.
ಸಿದ್ದೇಶ್ವರ ಶ್ರೀಗಳ ನಂತರ ಮಣಕವಾಡಿ ಶ್ರೀಗಳ ಪ್ರವಚನ ಜನಮಾನಸಕ್ಕೆ ಮುಟ್ಟುತ್ತಿದೆ. ಅವರು ಆರಂಭಿಸಿರುವ ಆಧುನಿಕ ಶಾಲೆ ಅವರ ಶಕ್ತಿ ಬಿಂಬಿಸುತ್ತದೆ.
12ನೇ ಶತಮಾನವೇ ಬಬಲೇಶ್ವರ ಮಠದ ಕಾರ್ಯಕ್ರಮದಲ್ಲಿ ಮರುಕಳಿಸಿದಂತೆ ಗೋಚರಿಸುತ್ತಿದೆ. ತಾಯಂದಿರು ಬುತ್ತಿ ಉತ್ಸವವನ್ನು ಭಕ್ತಿ, ಶ್ರದ್ಧೆಯಿಂದ ಮಾಡಿದ್ದಾರೆ. ಈ ಸೇವೆಯಲ್ಲಿ ತಮ್ಮದೂ ಒಂದು ಅಗುಳಿನ ಪಾತ್ರವಿದೆ, ಅದೇನೆಂದರೆ ಇಲ್ಲಿಗೆ ನೀರು ಹರಿಸಿದ ತೃಪ್ತಿ ನನ್ನದು.
ಫ. ಗು. ಹಳಕಟ್ಟಿ, ಬಂಥನಾಳ ಶಿವಯೋಗಿಗಳು ಹಾಗೂ ಶಾಂತವೀರ ಶ್ರೀಗಳು ಈ ಭಾಗದ ರತ್ನಗಳು. ಈಗಿನ ಪರಮಪೂಜ್ಯ ಶ್ರೀ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳವರದ್ದು ಮಕ್ಕಳ ಮನಸ್ಸು; ಅವರ ಸರಳತೆ, ವಾತ್ಸಲ್ಯ ಮತ್ತು ಸಮಾಜಮುಖಿ ಕಾಳಜಿ ವಿಶೇಷವಾದುದು. ಮಠ-ಮಾನ್ಯಗಳ ಸೇವೆಗೆ ನನ್ನ ಸಹಕಾರ ಹಾಗೂ ಬೆಂಬಲ ನಿರಂತರವಾಗಿರಲಿದೆ.
ಪರಮಪೂಜ್ಯ ಜಗದ್ಗುರು ಮಹಾದೇವ ಶಿವಾಚಾರ್ಯರು ಸನ್ನಿಧಾನ ವಹಿಸಿದ್ದರು. ಅಭಿನವ ಮೃತ್ಯಂಜಯ ಶ್ರೀಗಳು, ಮನಗೂಳಿಯ ಸಂಗನಬಸವ ಶ್ರೀಗಳು, ಮಲ್ಲಿಕಾರ್ಜುನ ದೇವರು, ನಿರಂಜನ ದೇವರು, ಅಭಿನವ ಸಿದ್ಧಾರೂಢ ಶ್ರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬಿಜೆಪಿ ಮುಖಂಡರಾದ ಶ್ರೀ ವಿಜುಗೌಡ ಪಾಟೀಲ್, ಸ್ಥಳೀಯ ಜನಪ್ರತಿನಿಧಿಗಳು, ಬಸವಭಕ್ತರು ಸೇರಿದಂತೆ ಸಹಸ್ರಾರು ಜನರು ಉಪಸ್ಥಿತರಿದ್ದು, ಸಮಾರಂಭವನ್ನು ಯಶಸ್ವಿಗೊಳಿಸಿದರು.
ಸಹಸ್ರಾರು ಸಂಖ್ಯೆಯಲ್ಲಿ ತಾಯಂದಿರು ಬುತ್ತಿಗಳನ್ನು ಕೇಸರಿ, ಬಿಳಿ, ಹಸಿರು ಬಟ್ಟೆಗಳಲ್ಲಿ ಸುತ್ತಿ ತಂದಿದ್ದರು. ಇದು ದೈವ ಭಕ್ತಿಯೊಂದಿಗೆ ರಾಷ್ಟ್ರಭಕ್ತಿಯನ್ನೂ ಪ್ರತಿಬಿಂಬಿಸುವಂತೆ ಇದ್ದಿದ್ದು ವಿಶೇಷವಾಗಿತ್ತು.
ಇಂತಹ ಧಾರ್ಮಿಕ ಉತ್ಸವಗಳು ಭಕ್ತಿಯೊಂದಿಗೆ ಸಮಾಜದಲ್ಲಿ ಸಹೋದರತ್ವ, ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಬೆಳೆಸುತ್ತವೆ. ದೈವಭಕ್ತಿಯೊಂದಿಗೆ ರಾಷ್ಟ್ರಭಕ್ತಿಯನ್ನೂ ಬೆಸೆದ ‘ತಿರಂಗಾ ಬುತ್ತಿ ಯಾತ್ರೆ’ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ದೇಶಪ್ರೇಮದ ಸುಂದರ ಸಂಗಮವಾಗಿದೆ.
2 ವರ್ಷದ ಹಿಂದೆ ಒಪ್ಪಂದ ನಿನ್ನೆ ಉದ್ಘಾಟನೆ
ಸೌತ್ ಕೊರಿಯಾದ ನಂ1 ವಿಶ್ವದ 3ನೇ ಅತಿದೊಡ್ಡ ಮಶೀನ್ ಟೂಲ್ಸ್ ತಯಾರಿಕಾ ಸಂಸ್ಥೆ ಈಗ ನಮ್ಮ ಕರ್ನಾಟಕದಲ್ಲಿ
ಪಾಟೀಲರು ಅಂದ್ರೆ ಎಲ್ಲವೂ ಸಾಧ್ಯ
#mbpatil#karanataka#youth#viral#dnsolutions
ರಾಜ್ಯದ ಹೆಮ್ಮೆಯ ಸಂಶೋಧಕರಾದ ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ಪುಣ್ಯಸ್ಮರಣೆಯ ಈ ದಿನದಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಕನ್ನಡ ನಾಡು-ನುಡಿ ಹಾಗೂ ಸಾಹಿತ್ಯ ಲೋಕಕ್ಕೆ - ಶಾಸನಶಾಸ್ತ್ರ, ಇತಿಹಾಸ, ಸಾಹಿತ್ಯ, ಛಂದಸ್ಸು, ವಾಸ್ತುಶಿಲ್ಪ ಹಾಗೂ ಗ್ರಂಥ ಸಂಪಾದನೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರು ನೀಡಿರುವ ಅಮೂಲ್ಯ ಕೊಡುಗೆ ಸ್ಮರಣೀಯ.
#DrMMKalburgi
ನೀರಾವರಿಯಿಂದ ಕ್ಷೀರ ಕ್ರಾಂತಿಯವರೆಗೆ; ವಿಜಯಪುರ ಜಿಲ್ಲೆಯ ಪ್ರಗತಿಯ ಪಯಣ
ಯುವ ಮನಸುಗಳ ಜೊತೆ ಮುಂದುವರೆದ ಸಂವಾದ
ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ನೀರಾವರಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳು ಪ್ರವರ್ಧಮಾನಕ್ಕೆ ಬಂದಿವೆ. ವಿಮಾನ ನಿಲ್ದಾಣ ಸಿದ್ಧಗೊಳ್ಳುತ್ತಿದ್ದು, ರೈಲ್ವೆ ಸಂಪರ್ಕ ಜಾಲವು ಸುಗಮಗೊಳಿಸಲಾಗಿದ್ದು, ಇನ್ನಷ್ಟು ಸುಧಾರಣೆಯನ್ನು ಮಾಡಲಿದ್ದೇವೆ.
ಈ ಎಲ್ಲಾ ಪ್ರಗತಿಯ ಜೊತೆಗೆ, ಹೈನೋದ್ಯಮವನ್ನು ಮತ್ತಷ್ಟು ಬಲಪಡಿಸುವ ನಮ್ಮ ಪ್ರಯತ್ನ ಮುಂದುವರಿದಿದೆ. ಈಗಾಗಲೇ BLDEA ನೇತೃತ್ವದಲ್ಲಿ, 'ಅಕ್ಷಯಕಲ್ಪ' ಮತ್ತು 'ಕೃಷಿಕಲ್ಪ' ಸಂಸ್ಥೆಗಳ ಸಹಯೋಗದೊಂದಿಗೆ ಹೈನುಗಾರಿಕೆಯಲ್ಲಿ ಆಸಕ್ತಿಯುಳ್ಳ ರೈತರಿಗೆ ಉಚಿತವಾಗಿ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ. ಈ ತರಬೇತಿಯ ಸದುಪಯೋಗಪಡಿಸಿಕೊಂಡು ಹೈನುಗಾರಿಕೆಯಲ್ಲಿ ಯಶಸ್ಸು ಕಂಡಿರುವ ರೈತರ ಪ್ರೇರಣಾದಾಯಕ ಕಥೆಗಳು ಇತರರಿಗೂ ಸ್ಫೂರ್ತಿಯಾಗಿವೆ.
ರೈತರ ಆದಾಯ ಹೆಚ್ಚಿಸುವುದರ ಜೊತೆಗೆ, ಜಿಲ್ಲೆಗೆ ಕೈಗಾರಿಕೆಗಳನ್ನೂ ಆಕರ್ಷಿಸುವ ಮೂಲಕ ವಿಜಯಪುರದ ಆರ್ಥಿಕ ಸ್ವಾವಲಂಬನೆಗೆ ಬಲವಾದ ಬುನಾದಿ ಹಾಕಲಾಗುತ್ತಿದೆ.
ಪ್ರಗತಿಯ ಈ ಪಯಣ ಮುಂದುವರೆಯಲಿದೆ...
KSDL/Mysore Sandal has introduced coconut oil blended with sandalwood oil and two more variants of coconut hair oil. They have also launched Mysore Jasmine(ಮೈಸೂರು ಮಲ್ಲಿಗೆ) luxury bath soap. KSDL’s Remarkable turnaround by Sharana @MBPatil avru. ✨
#KSDL#MysoreSandal
ಬೆಂಗಳೂರು ಮಾತ್ರವಲ್ಲ, ರಾಜ್ಯವೇ ಕೈಗಾರಿಕಾ ಕರ್ನಾಟಕ ಆಗಬೇಕು!
ರಾಜ್ಯದ ಕೈಗಾರಿಕಾ ಅಭಿವೃದ್ಧಿಯನ್ನು ಬೆಂಗಳೂರಿನಾಚೆಗೂ ವಿಸ್ತರಿಸಿ, ಕರ್ನಾಟಕದ ಪ್ರತಿಯೊಂದು ಭಾಗದಲ್ಲೂ ಹೂಡಿಕೆ, ಕೈಗಾರಿಕೆ ಮತ್ತು ಉದ್ಯೋಗದ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.
ಬೆಂಗಳೂರು ಹೊರತುಪಡಿಸಿ, ಅಗತ್ಯ ಮೂಲಸೌಕರ್ಯ ಹೊಂದಿರುವ 5ನಗರಗಳನ್ನು ಗುರುತಿಸಿ, ಅವುಗಳನ್ನು ಕೈಗಾರಿಕಾ ಬೆಳವಣಿಗೆಯ ಪ್ರಮುಖ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಚಿಂತನೆ ಅತ್ಯಂತ ದೂರದೃಷ್ಟಿಯದ್ದು.
ಇದರಿಂದ ಕೈಗಾರಿಕೆಗಳು ಬೆಂಗಳೂರಿನಲ್ಲೇ ಕೇಂದ್ರೀಕೃತವಾಗುವ ಬದಲು ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸಲಿದ್ದು, ಸ್ಥಳೀಯ ಯುವಜನರಿಗೆ ಅವರ ಊರಿನಲ್ಲೇ ಉದ್ಯೋಗಾವಕಾಶಗಳು ದೊರೆಯಲಿವೆ.
ಹೂಡಿಕೆದಾರರಿಗೆ ವಿಶೇಷ ಉತ್ತೇಜನ, ವೇಗದ ಅನುಮೋದನೆ, ಡಿಜಿಟಲ್ ವ್ಯವಸ್ಥೆ ಹಾಗೂ ಕಾಲಮಿತಿಯೊಳಗಿನ ಸೇವೆ-ಇವೆಲ್ಲವೂ ಕೈಗಾರಿಕಾ ಸ್ನೇಹಿ ಕರ್ನಾಟಕದ ನಿರ್ಮಾಣಕ್ಕೆ ಮತ್ತಷ್ಟು ವೇಗ ನೀಡಲಿವೆ. ಪ್ರಸ್ತುತ ಏಕಗವಾಕ್ಷಿ ವ್ಯವಸ್ಥೆಯಲ್ಲಿ 22 ಇಲಾಖೆಗಳು ಹಾಗೂ 119 ಸೇವೆಗಳು ಸಂಯೋಜಿತವಾಗಿದ್ದು, ಈ ವ್ಯವಸ್ಥೆಯನ್ನು ಇನ್ನಷ್ಟು
ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಕಳೆದ 3 ವರ್ಷಗಳಲ್ಲಿ ಕರ್ನಾಟಕವು ತಯಾರಿಕಾ ವಲಯದಲ್ಲಿ ₹5.58 ಲಕ್ಷ ಕೋಟಿ ಹೂಡಿಕೆ ಆಕರ್ಷಿಸಿ ದೇಶದಲ್ಲಿ ಮೂರನೇ ಸ್ಥಾನದಲ್ಲಿರುವುದು ನಮ್ಮ ಕೈಗಾರಿಕಾ ಶಕ್ತಿಗೆ ಸಾಕ್ಷಿ. ಸೆಮಿಕಂಡಕ್ಟರ್, ಏರೋಸ್ಪೇಸ್ ಮತ್ತು ಡಿಫೆನ್ಸ್, ಕ್ಲೀನ್ ಮೊಬಿಲಿಟಿ, ಸೆಲ್ ಉತ್ಪಾದನೆ ಸೇರಿದಂತೆ ಭವಿಷ್ಯದ ಕೈಗಾರಿಕೆಗಳಲ್ಲೂ ಕರ್ನಾಟಕ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸುತ್ತಿದೆ.
ರಾಜ್ಯದ ಒಂದು ನಗರ ಮಾತ್ರವಲ್ಲ-ಪ್ರತಿ ಜಿಲ್ಲೆ, ಪ್ರತಿ ನಗರವೂ ಹೂಡಿಕೆಯ ತಾಣವಾಗಬೇಕು; ಪ್ರತಿ ಯುವಕ-ಯುವತಿಗೂ ಉದ್ಯೋಗದ ಅವಕಾಶ ಸಿಗಬೇಕು. ಇದೇ ‘Beyond Bengaluru’ನ ನಿಜವಾದ ಆಶಯ.ಇದೇ ಸಮಗ್ರ, ಸಮತೋಲಿತ ಮತ್ತು ಭವಿಷ್ಯಮುಖಿ ಕರ್ನಾಟಕದ ಸಂಕಲ್ಪ.
#BeyondBengaluru @DKShivakumar
From dry, barren land to a thriving green landscape. Witness the transformation.
This is what vision, persistence & dedication can create.
🌳1.5 Crore trees planted, nurtured & protected.
Because the mission was never just about planting trees.
It is about nurturing them, protecting them and ensuring they survive, thrive and transform the land.
What has changed in Vijayapura?
- Forest cover increased from 0.17% to 2.4%
- Annual rainfall increased by 150 mm
- Biodiversity enriched
- Groundwater levels improved, helping reduce long-term drought
- More rainy days
- Among the top 3 cities in the country for clean air
- Temperature reduced by 0.5°C
And we are not stopping here.
Next milestone: 5 Crore trees.
Koti Vruksha Abhiyana - from planting trees to building a greener future.
The mission continues. 🌳
ದೃಢ ಸಂಕಲ್ಪ–ಅಚಲ ಪ್ರಯತ್ನದಿಂದ ಸಾಧ್ಯವಾದ ಬದಲಾವಣೆ: ಒಂದು ಕಾಲದಲ್ಲಿ ಬಿಸಿಲು-ಬರದ ನಾಡು… ಇಂದು ಹಸಿರಿನ ಹೊದಿಕೆ!
ಕೋಟಿ ವೃಕ್ಷ ಅಭಿಯಾನದಿಂದ ವಿಜಯಪುರದ ಹಸಿರು ಕ್ರಾಂತಿಗೆ ಹೊಸ ಅಧ್ಯಾಯ
#KotiVrukshaAbhiyana #5CroreTrees #GreenVijayapura #GreenKarnataka #TreePlantation #SustainableKarnataka #GreenerFuture
ಬುಧವಾರ ಜರುಗಿದ India Today Roundtable-Karnataka ಚರ್ಚೆಯ ನಂತರ ಖ್ಯಾತ ಮಹಿಳಾ ಕ್ರಿಕೆಟರ್ ಶ್ರೇಯಾಂಕಾ ಪಾಟೀಲ್ ಅವರು ಭೇಟಿಯಾದರು. ಅವರ ಸಾಧನೆಗೆ ಅಭಿನಂದನೆ ತಿಳಿಸಿದೆ. ಕರ್ನಾಟಕದ ಕ್ರೀಡಾಪಟುವಾಗಿ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂಬ ಹಾರೈಕೆ ನನ್ನದು.
@IndiaToday@ShreyankaP24760
ವರ್ಷಗಳಿಂದ ಕರಾವಳಿ ಕರ್ನಾಟಕದ ಜನರು ಒತ್ತಾಯಿಸುತ್ತಿದ್ದ ಮಂಗಳೂರು ವಿಭಾಗವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸಲು ಕೇಂದ್ರಕ್ಕೆ 12 ವರ್ಷ ಬೇಕಾಯಿತೇ?
ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಇನ್ನೂ ಎಷ್ಟು ವರ್ಷಗಳ ಕಾಲ ಈ ತಾರತಮ್ಯ?
ಸುಮಾರು 330 ಕಿ.ಮೀ. ಉದ್ದದ ಕರಾವಳಿ ಹೊಂದಿರುವ ಕರ್ನಾಟಕದಲ್ಲಿ, ಮಂಗಳೂರು ರೈಲ್ವೆ ವ್ಯಾಪ್ತಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಇಂದಿಗೂ ಬಗೆಹರಿಯದೆ ಉಳಿದಿವೆ. ಪ್ರಯಾಣಿಕರ ಸಂಚಾರ ಹಾಗೂ ಸರಕು ಸಾಗಣೆಯನ್ನು ಸುಗಮಗೊಳಿಸಲು ರೈಲ್ವೆ ಸಂಪರ್ಕ ಬಲಪಡಿಸುವುದು ಅತ್ಯಗತ್ಯ.
@chan_sim@rameshraop@vinays1210@RaoShamanth@RaviGunaje@Ganesh52761634@rwstats@alexpan92746429@Sridhar_24@NaaneNiranjana
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರು ಆದ ಶ್ರೀ ಎಸ್.ಆರ್. ಪಾಟೀಲ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಧೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯವನ್ನು ದಯಪಾಲಿಸಲಿ.
@srpatilbagalkot
ವಿಜಯಪುರ ವಿಮಾನ ನಿಲ್ದಾಣದ ಕನಸು ನನಸಾಗುವ ಕಾಲ ಸನಿಹದಲ್ಲೇ...
ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪಿನೊಂದಿಗೆ ವಿಜಯಪುರ ವಿಮಾನ ನಿಲ್ದಾಣಕ್ಕೆ ಎದುರಾಗಿದ್ದ ಪರಿಸರ ಅನುಮತಿಯ ಕಾನೂನು ತೊಡಕು ಸಂಪೂರ್ಣವಾಗಿ ನಿವಾರಣೆಯಾಗಿದೆ. ಇದು ನಮ್ಮ ದೃಢ ಸಂಕಲ್ಪ ಮತ್ತು ನಿರಂತರ ಪ್ರಯತ್ನಕ್ಕೆ ಸಿಕ್ಕ ಮಹತ್ವದ ಗೆಲುವು.
ಈ ವಿಮಾನ ನಿಲ್ದಾಣ ಉದ್ಯಮ, ವ್ಯಾಪಾರ, ಪ್ರವಾಸೋದ್ಯಮ, ಕೃಷಿ ಉತ್ಪನ್ನಗಳ ರಫ್ತು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ.
ನುಡಿದಂತೆ ನಡೆಯುವ ಆಡಳಿತದ ಮತ್ತೊಂದು ಸ್ಪಷ್ಟ ನಿದರ್ಶನವಾಗಿ, ವಿಜಯಪುರದ ಕನಸನ್ನು ಸಾಕಾರಗೊಳಿಸುವ ಈ ಯೋಜನೆ ಜಿಲ್ಲೆಯ ಭವಿಷ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ.
ಅಭಿವೃದ್ಧಿಯ ಈ ಪರ್ವ ಮುಂದುವರಿಯಲಿದೆ.
#vijayapuraairport #ವಿಜಯಪುರವಿಮಾನನಿಲ್ದಾಣ
ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಜನಸ್ನೇಹಿ ಆಡಳಿತದತ್ತ ದಿಟ್ಟ ಹೆಜ್ಜೆ
ಕರ್ನಾಟಕವನ್ನು ಇನ್ನಷ್ಟು ಉದ್ಯಮ ಸ್ನೇಹಿ ರಾಜ್ಯವನ್ನಾಗಿ ರೂಪಿಸುವ ನಮ್ಮ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿವೆ. ಅದರ ಭಾಗವಾಗಿ, KIADBಯ ಭೂಸ್ವಾಧೀನದಿಂದ ಕೈಗಾರಿಕಾ ನಿವೇಶನ ಮಂಜೂರಾತಿವರೆಗಿನ ಎಲ್ಲಾ ಪ್ರಕ್ರಿಯೆಗಳು ಮತ್ತು ದಾಖಲೆಗಳನ್ನು ಮುಂದಿನ 100 ದಿನಗಳೊಳಗೆ ಸಂಪೂರ್ಣ ಡಿಜಿಟಲೀಕರಣ ಮಾಡಲಿದ್ದೇವೆ.
ಇದು ಕೇವಲ ತಂತ್ರಜ್ಞಾನದ ಅಳವಡಿಕೆಯಲ್ಲ, ಆಡಳಿತದಲ್ಲಿ ಪಾರದರ್ಶಕತೆ, ವೇಗ ಮತ್ತು ವಿಶ್ವಾಸವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ. ಎಲ್ಲಾ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡುವ ಮೂಲಕ ಹೂಡಿಕೆದಾರರಿಗೆ ಸುಗಮ ಸೇವೆ, ರೈತರಿಗೆ ಸ್ಪಷ್ಟ ಮಾಹಿತಿ ಹಾಗೂ ಆಡಳಿತದಲ್ಲಿ ಹೆಚ್ಚಿನ ಉತ್ತರದಾಯಿತ್ವವನ್ನು ಖಾತ್ರಿಪಡಿಸುತ್ತಿದ್ದೇವೆ. ಈ ಕ್ರಮ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಹೊಸ ವೇಗ ನೀಡುವುದರ ಜೊತೆಗೆ ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಲಿದೆ.
#InvestKarnataka #KIADB
ನಮ್ಮ ನಿರಂತರ ಪ್ರಯತ್ನಕ್ಕೆ ಮತ್ತೊಂದು ಫಲ
ವಿಜಯಪುರ–ಯಶವಂತಪುರ ಹೈಸ್ಪೀಡ್ ರೈಲು ಸೇವೆ ವಾರದಲ್ಲಿ ಎರಡು ದಿನಗಳಿಗೆ ವಿಸ್ತರಣೆ
ಇದೇ ಮೇ 16ರಿಂದ ವಾರಕ್ಕೊಮ್ಮೆ ಸಂಚರಿಸುತ್ತಿದ್ದ ವಿಜಯಪುರ–ಯಶವಂತಪುರ ಹೈಸ್ಪೀಡ್ ರೈಲು ಸೇವೆಯನ್ನು ಜೂನ್ 1ರಿಂದ ವಾರದಲ್ಲಿ ಎರಡು ದಿನಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಬಸವನಾಡು ಮತ್ತು ರಾಜಧಾನಿ ನಡುವಿನ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
15-16 ಗಂಟೆಗಳವರೆಗೆ ತೆಗೆದುಕೊಳ್ಳುತ್ತಿದ್ದ ಪ್ರಯಾಣದ ಅವಧಿಯನ್ನು ಈ ರೈಲು ಸುಮಾರು 11 ಗಂಟೆಗಳಿಗೆ ಇಳಿಸಿದ್ದು, ಪ್ರಯಾಣಿಕರ ಅಮೂಲ್ಯ ಸಮಯ ಉಳಿತಾಯವಾಗಲಿದೆ.
ಈ ರೈಲು ಸೇವೆಯನ್ನು ಕಾಯಂಗೊಳಿಸುವುದು, ಸಂಚಾರದ ಆವರ್ತನವನ್ನು ಹೆಚ್ಚಿಸುವುದು, ಪ್ರಯಾಣದ ಅವಧಿಯನ್ನು ಮತ್ತಷ್ಟು ಕಡಿಮೆಗೊಳಿಸುವುದು ಹಾಗೂ ಸಮಯದ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರೊಂದಿಗೆ ಹಲವು ಬಾರಿ ಸಭೆ-ಚರ್ಚೆ ನಡೆಸಿ ಮನವಿ ಸಲ್ಲಿಸಲಾಗಿತ್ತು.
ನಮ್ಮ ಈ ಎಲ್ಲ ಸತತ ಪ್ರಯತ್ನಗಳ ಫಲವಾಗಿ ವಾರಕ್ಕೊಮ್ಮೆ ರೈಲು ಸಂಚಾರ ಆರಂಭವಾಗಿ ಇದೀಗ ವಾರದಲ್ಲಿ ಎರಡು ದಿನಗಳಿಗೆ ವಿಸ್ತರಣೆಯಾಗಿದೆ. ಮುಂದಿನ ದಿನಗಳಲ್ಲಿ ಈ ರೈಲು ಸೇವೆಯನ್ನು ಕಾಯಂಗೊಳಿಸುವ ಹಾಗೂ ಇನ್ನಷ್ಟು ಸುಧಾರಣೆಗಳನ್ನು ತರುವವರೆಗೆ ನಮ್ಮ ಪ್ರಯತ್ನ ಮತ್ತು ಹೋರಾಟ ನಿರಂತರವಾಗಿ ಮುಂದುವರಿಯಲಿದೆ.
ಶಾಸಕಮಿತ್ರರು, ಆತ್ಮೀಯರಾದ ಶ್ರೀ ಸತೀಶ್ ಜಾರಕಿ ಹೊಳಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಜನಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.
@JarkiholiSatish