ಜಾಬ್ ಕಾರ್ಡ್ ಮೇಳ & ಜಾಗೃತಿ ಅಭಿಯಾನ! 📢🌾
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಹೊಸ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ, 'ಜಾಬ್ ಕಾರ್ಡ್ ಮೇಳ'ದ ಅಂಗವಾಗಿ #VBGRAMG ಯೋಜನೆ ಕುರಿತು ಕೂಲಿಕಾರರಲ್ಲಿ ಸಕ್ರಿಯ ಜಾಗೃತಿ ಮೂಡಿಸಲಾಯಿತು.
@CMofKarnataka@DrParameshwara@eshwar_khandre@KarnatakaVarthe
VB-G RAM G ಯೋಜನೆಯಡಿ e-KYC ಮೂಲಕ ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆಯು ಯೋಜನೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ನಂಬಿಕೆಯನ್ನು ತರುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ತಮ್ಮ ಹಕ್ಕುಗಳು ಸುಲಭವ��ಗಿ ತಲುಪುವಂತಾಗಿದೆ. ದಾವಣಗೆರೆ ಜಿಲ್ಲೆಯ ಇಟಗಿ ಗ್ರಾ. ಪಂ.ನ ಮಂಟಘಟ್ಟ ಗ್ರಾಮದ ಅಣ್ಣಪ್ಪ ಎಸ್. ಅವರು ಹೀಗೆ ಹಂಚಿಕೊಂಡಿದ್ದಾರೆ.
ನರೇಗಾದಡಿ ಕೂಲಿಕಾರರ ಫೇಸ್ ಅಥೆಂಟಿಕೇಶನ್ ಹಾಜರಾತಿ ಜಾರಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ಮುಖ ಗುರುತಿಸುವಿಕೆ ಆಧಾರಿತ ಹಾಜರಾತಿ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಹೊಸ #NMMS Face Recognition ಆ್ಯಪ್ ಬಳಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿಗಾಗಿ ಇದನ್ನು ಓದಿ.
#MGNREGA#DigitalIndia#ನರೇಗಾ
ಗದಗ ಜಿಲ್ಲೆ, ನರಗುಂದ ತಾಲೂಕಿನ ಸಂಕದಾಳ ಗ್ರಾಮದಲ್ಲಿ ನೂತನ ಗ್ರಂಥಾಲಯವನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉದ್ಘಾಟನೆ ಮಾಡಿರುವ ಕುರಿತು ವಿವಿಧ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿವೆ.
ರೈತ ದಂಪತಿಗಳಿಗೆ ಖುಷಿ ನೀಡಿದ ಡ್ರ್ಯಾಗನ್ ಕೃಷಿ
ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲ್ಲೂಕಿನ ಹಿರೇಸಿಂಗ���ಗುತ್ತಿ ಗ್ರಾ. ಪಂ ಕೃಷ್ಣಾಪುರ ಗ್ರಾಮದ ಹಂಪಮ್ಮ ಪಂಪಣ್ಣ ಶಂಕರಗೋಳಿ ಅವರು ನರೇಗಾ ಯೋಜನೆಯಡಿ 1 ಏಕರೆ 30 ಗುಂಟೆಯಲ್ಲಿ ಡ್ರ್ಯಾಗನ್ ಕೃಷಿಯಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.
#MGNREGA #RuralDevelopment #horticulture #income
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ನೀಲಗೊಂಡನಹಳ್ಳಿ ಗ್ರಾ. ಪಂ. ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದ ಎಸ್. ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸುಸಜ್ಜಿತ ಶೌಚಾಲಯ ನಿರ್ಮಾಣವು ಶಾಲಾ ಮಕ್ಕಳಲ್ಲಿ ಆರೋಗ್ಯಕರ ಪರಿಸರದ ವಾತಾವರಣ ನಿರ್ಮಾಣವಾಗಿದೆ.
#MGNREGA#RuralDevelopment
ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿ.ಪಂ.ಸಿಇಒ
ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಜನತಾ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಾನ್ಯ ಜಿ.ಪಂ.ಸಿಇಒ ಭರತ್ ಎಸ್ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸವಿದರು.
ವಿವಿಧ ಕಾಮಗಾರಿ ವೀಕ್ಷಣೆ ಮಾಡಿ ನಂತರ ಮಕ್ಕಳ ಪಕ್ಕದಲ್ಲಿ ಕುಳಿತು ಬಿಸಿಯೂಟ ಸವಿದು ಆಹ���ರ ಗುಣಮಟ್ಟ ಪರಿಶೀಲಿಸಿದರು.
ಅಂಗನವಾಡ ಕೇಂದ್ರ, ಸರ್ಕಾರಿ ಶಾಲೆಗೆ ಜಿ.ಪಂ. ಸಿಇಒ ಭೇಟಿ
ಗದಗ ಜಿಲ್ಲೆ ನರಗುಂದ ತಾಲೂಕಿನ ಕಣಕೀಕೊಪ್ಪ, ಚಿಕ್ಕ ನರಗುಂದ ಗ್ರಾಮಗಳಿಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ಅಂಗನವಾಡಿ ಕೇಂದ್ರ, ಶಾಲೆಗಳನ್ನು ವೀಕ್ಷಣೆ ಮಾಡಿ ಮಕ್ಕಳ ದಾಖಲಾತಿ ಆಹಾಯ ವಿತರಣೆ ಕ್ರಮದ ಮಾಹಿತಿ ಪಡೆದುಕೊಂಡರು.
ಜೆಜೆಎಂ ಕಾಮಗಾರಿ ಗುಣಮಟ್ಟ ಪರಿಶೀಲಿಸಿದ ಜಿ.ಪಂ. ಸಿಇಒ
ಗದಗ ಜಿಲ್ಲೆ ನರಗುಂದ ತಾಲೂಕಿನ ಕಲಕೇರಿ, ಕಣಕೀಕೊಪ್ಪ, ಚಿಕ್ಕ ನರಗುಂದ, ಹಿರೇಕೊಪ್ಪ ಗ್ರಾಮಗಳಿಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ಜೆಜೆಎಂ ಕಾಮಗಾರಿ ಪರಿಶೀಲಿಸಿದರು.
ಗದಗ ಜಿಲ್ಲೆ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ನೂತನ ಅಂಗನವಾಡಿ ಕೇಂದ್ರ-106, ಮಹಿಳಾ ವರ್ಕ ಶೆಡ್ ನ್ನು ಶಾಸಕರಾದ ಶ್ರೀ ಸಿ.ಸಿ ಪಾಟೀಲ ಉದ್ಘಾಟಿಸಿದರು.
ತಾ.ಪಂ. ಇಒ, ಸಹಾಯಕ ನಿರ್ದೇಶಕರು (ಗ್ರಾ.ಉ), ತಾ.ಪಂ.,ಗ್ರಾ.ಪಂ. ಸಿಬ್ಬಂದಿಗಳು ಗ್ರಾಮದ ಇದ್ದರು.
@CommrMGNREGSK
ಗದಗ ಜಿಲ್ಲೆ ನರಗುಂದ ತಾಲೂಕಿನ ಕನಕೀಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುರ್ಲಕಟ್ಟಿ ಗ್ರಾಮದ ಅಮೃತ ಸರೋವ��� ದಂಡೆಯ ಮೇಲೆ ಶಾಲಾ ಮಕ್ಕಳೊಂದಿಗೆ ವಿಶ್ವ ಯೋಗ ದಿನಾಚರಣೆ ಮಾಡಲಾಯಿತು.
ಈ ವೇಳೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
#YogaDay2025 #yoga #MGNREGA
ಗದಗ ಜಿಲ್ಲೆ ನರಗುಂದ ತಾಲೂಕಿನ ವಾಸನ ಗ್ರಾಮ ಪಂಚಾಯತಿಯಲ್ಲಿ ��ಹಿಳಾ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸುವ ಹಿನ್ನಲೆಯಲ್ಲಿ 2025-26 ನೇ ಸಾಲಿನ ದುಡಿಯೋಣ ಬಾ ಮತ್ತು ಸ್ತ್ರೀ ಚೇತನ ಅಭಿಯಾನದಡಿ ಮಹಿಳೆಯರಿಗೆ ಪ್ರತ್ಯೇಕವಾಗಿ ಕೆಲಸ ಪ್ರಾರಂಭಿಸಲಾಗಿದೆ. ಕಾಮಗಾರಿಯಲ್ಲಿ 120ಕ್ಕೂ ಅಧಿಕ ಮಹಿಳಾ ಕೂಲಿಕಾರರು ಕೆಲಸದಲ್ಲಿ ಭಾಗವಹಿಸಿದರು.
@MgnregsK
ವಿಶ್ವ ಪರಿಸರ ದಿನಾಚರಣೆ
ನರಗುಂದ ತಾಲೂಕಿನ ಖಾನಾಪೂರ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು ನೀರುಣಿಸುವ ಮೂಲಕ ಆಚರಣೆ ಮಾಡಲಾಯಿತು.
ತಾ.ಪಂ. ಇಒ ಅವರು ಸಸಿಗೆ ನೀರುಣಿಸಿ ಚಾಲನೆ ನೀಡಿದರು. ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಿಡಿಒ ಇತರರು ಇದ್ದರು.
@MgnregsK
ನರೇಗಾದಲ್ಲಿ ಗದಗ ಜಿಲ್ಲೆಗೆ ನರಗುಂದ ಪ್ರ��ಮ
ಗದಗ ಜಿಲ್ಲೆ ನರಗುಂದ ತಾಲೂಕ ಪಂಚಾಯತಿ ಬೇಸಿಗೆಯ ಎರಡು ತಿಂಗಳಲ್ಲಿ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ಕೆಲಸ ನೀಡುವ ಮೂಲಕ ಜಿಲ್ಲೆಯಲ್ಲಿ ಅಧಿಕ ಮಾನವ ದಿನಗಳ ಸೃಜನೆ ಮಾಡಲಾಗಿದೆ.
@CommrPR
@MgnregsK @PriyankKharge
ಕೊಣ್ಣೂರ ಗ್ರಾ.ಪಂ.ನಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸುವ ಹಿನ್ನಲೆಯಲ್ಲಿ 2025-26ನೇ ಸಾಲಿನ ದುಡಿಯೋಣ ಬಾ ಅಭಿಯಾನದಡಿ ಮಹಿಳೆಯರಿಗೆ ಪ್ರತ್ಯೇಕವಾಗಿ ಕೆಲಸ ಪ್ರಾರಂಭಿಸಲಾಗಿದೆ. 200 ಕ್ಕೂ ಅಧಿಕ ಮಹಿಳಾ ಕೂಲಿಕಾರರು ಇದ್ದರು.
ಗ್ರಾ.ಪಂ: ಕೊಣ್ಣೂರ
ತಾಲೂಕು: ನರಗುಂದ
ಜಿಲ್ಲೆ : ಗದಗ
@MgnregsK @PriyankKharge@CommrPR