ಕಂದಾಯ ಇಲಾಖೆಯಲ್ಲಿ ಭೂ ಮಾಪಕರ ಪಾತ್ರ ಪ್ರಮುಖವಾದದ್ದು. ಭೂ ಮಾಪಕರ ಮುಷ್ಕರದಿಂದ ಕಡತಗಳು ವಿಲೇವಾರಿಯಾಗದೆ ಸ್ಥಗಿತಗೊಂಡಿದೆ. ಹದ್ದುಬಸ್ತು, 11 E ಸ್ಕೆಚ್, ಜಮೀನು ಸರ್ವೇ, ಗಡಿ ಗುರುತು ಹಾಗೂ ಇತರೆ ಭೂ ದಾಖಲೆ ಸಿಗದೇ ರೈತರು ಪರದಾಡುವ ಸ್ಥಿತಿ ಬಂದಿದೆ. ಹದ್ದುಬಸ್ತು, 11 E ಸ್ಕೆಚ್ ಸಿಗದೇ ರೈತರಿಗೆ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಜಾಮೀನು ವ್ಯಾಜ್ಯಗಳು ಹೆಚ್ಚುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸಹ ಕರ್ನಾಟಕ ಲೋಕ ಸೇವಾ ಆಯೋಗದಿಂದ (KPSC) 750 ಭೂಮಾಪಕರ ನೇಮಕಾತಿ ಆಗುವ ಲಕ್ಷಣಗಳು ಕಾಣುತ್ತಿಲ್ಲ.
ಕಂದಾಯ ಇಲಾಖೆಯ ಬೆನ್ನೆಲುಬಾದ ಭೂ ಮಾಪಕರ ಕಥೆ ಹೇಳ ತೀರದಂತಾಗಿದೆ. ಇತ್ತ, ಭೂಮಾಪಕರ ಅನುಪಸ್ಥಿತಿಯಿಂದ ರೈತರಿಗೂ ತೊಂದರೆಯಾಗುತ್ತಿದೆ.
ಹಗಲು ರಾತ್ರಿ ಎನ್ನದೆ ಕಳೆದ ಎರಡು ದಶಕಗಳಿಂದ ಸೇವೆ ಮಾಡುತ್ತಿರುವ ಪರವಾನಗಿ ಭೂಮಾಪಕರ ಸೇವೆಯನ್ನು ಸರ್ಕಾರ ಖಾಯಂ ಗೊಳಿಸಿ ಅವರ ಕುಟುಂಬಗಳಿಗೆ ಆಸರೆಯಾಗಲಿ.
@Vijayavani_Digi I @CMofKarnataka I @AKSSAofficial I
ಗೌರವಾನ್ವಿತ @DrParameshwara ಸರ್ — ಕಂದಾಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಕ್ಕೆ ಅಭಿನಂದನೆಗಳು 🙏
ರಾಜ್ಯದ 4500+ ಪರವಾನಗಿ ಭೂಮಾಪಕರು 27 ವರ್ಷಗಳಿಂದ ಖಾಯಂ ನೇಮಕಾತಿಗಾಗಿ ಕಾಯುತ್ತಿದ್ದಾರೆ.
2 ಹೈಕೋರ್ಟ್ ಆದೇಶಗಳು ಬಾಕಿ. 5.78 ಲಕ್ಷ ಅರ್ಜಿಗಳು ಬಾಕಿ.
ತಮ್ಮ ಗಮನ ಬೇಡುತ್ತಿದ್ದೇವೆ.
@DKShivakumar#JusticeForLicensedSurveyors
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ @DKShivakumar ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏
ತಮ್ಮ ನೇತೃತ್ವದಲ್ಲಿ ರಾಜ್ಯವು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಲಿ. ಸುಭದ್ರ, ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಶುಭ ಹಾರೈಸುತ್ತೇನೆ.
ಸೂರಜ್ ತಲಗೇರಿ
ಅಧ್ಯಕ್ಷರು
ಉತ್ತರ ಕನ್ನಡ ಜಿಲ್ಲೆಯ ಪರವಾನಗಿ ಭೂಮಾಪಕರ ಸಂಘ (ರಿ)
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಅವರೇ ಪ.ಭೂಮಾಪಕರಿಗೆ ಖಾಯಮಾತಿ ಮಾಡುತ್ತೆವೇ ಅಂತ ಕೊಟ್ಟಿರುವ ಅಭಿಪ್ರಾಯ ಸುಳ್ಳಾ…? ಬರಿ ಆಶ್ವಾಸನೆ ಅಷ್ಟೇನಾ , ನಮ್ಮ ಕಷ್ಟಗಳಿಗೆ ಸ್ಪಂದಿಸಿ ..
ಇದು ಸಾವಿರಾರು ಕುಟುಂಬಗಳ ಮನದಾಳದ ಮಾತುಗಳು 🙏
@tv9kannada I @AsianetNewsSN@krishnabgowda@siddaramaiah
ಒಬ್ಬ ಪರವಾನಗಿ ಭೂಮಾಪಕ ಸೇವೆಯಲ್ಲಿರುವಾಗ ತೀರಿಕೊಂಡರೆ —
ಪಿಂಚಣಿ ಇಲ್ಲ.
ಗ್ರಾಚುಯಿಟಿ ಇಲ್ಲ.
ವಿಮೆ ಇಲ್ಲ.
ಪರಿಹಾರ ಇಲ್ಲ.
20+ ವರ್ಷ ಸರ್ಕಾರಿ ಕೆಲಸ ಮಾಡಿ, ಕುಟುಂಬಕ್ಕೆ ಉಳಿಸಿಹೋಗುವುದು ಶೂನ್ಯ.
ಇದಕ್ಕಿಂತ ದೊಡ್ಡ ಅನ್ಯಾಯ ಏನಿದೆ?
@siddaramaiah@krishnabgowda#JusticeForLicensedSurveyors
ಭೂಮಾಪಕರ ಧರಣಿಯಿಂದ ರೈತರಿಗೆ ಬೇಕಾದ ಅಗತ್ಯ ಸೇವೆ ಸಿಗದೇ ಪರದಾಡುತ್ತಿದ್ದಾರೆ. ಇತ್ತ ಸರ್ಕಾರ ಅವರ ಸಮಸ್ಯೆಗಳನ್ನು ಆಲಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ 45% ರಷ್ಟು ಭೂ ಮಾಪಕರ ಹುದ್ದೆಗಳು ಖಾಲಿ ಇದೆ. ಈ ಬೇಡಿಕೆಯನ್ನು ಪೂರೈಸಲು ಸರ್ಕಾರ ಸುಮಾರು 4,500 ಖಾಸಗಿ ಭೂಮಾಪಕರನ್ನು (private licensed land surveyors) ನಿಯೋಜಿಸಿದೆ. ಖಾಸಗಿ ಭೂ ಮಾಪಕರ ಪ್ರತಿಭಟನೆಯಿಂದ 5.78 ಲಕ್ಷ ಸರ್ವೇ ಅರ್ಜಿಗಳು ಬಾಕಿ ಉಳಿದಿವೆ.
ಮ್ಯುಟೇಷನ್ ಪೂರ್ವ ನಕ್ಷೆ ತಯಾರಿಕೆ, ತತ್ಕಾಲ್ ಪೋಡಿ ಅಳತೆ, ದರಖಾಸ್ತು ಪೋಡಿ, ಮರುಭೂಮಾಪನ, ಕೆರೆ ಅಳತೆ, ನಾಳ, ವಿದ್ಯುತ್ ಮಾರ್ಗ, ಹೆದ್ದಾರಿ, ಮುಜರಾಯಿ ದೇವಸ್ಥಾನಗಳ ಭೂಮಾಪನವನ್ನು ಇವರು ಮಾಡುತ್ತಿದ್ದಾರೆ. ರೈತರು ಭೂ ಹಕ್ಕು ಸಂಬಂಧಿತ ಪ್ರಕ್ರಿಯೆಗಳು ಇವರ ಸೇವೆಯ ಮೇಲೆ ಅವಲಂಬಿತವಾಗಿದೆ.
ಜಮೀನು ಪೋಡಿ ಮಾಡುವುದು, ನಕ್ಷೆ ಸಿದ್ದಪಡಿಸುವುದು, ಖರೀದಿ ನಕ್ಷೆ, ವಿಭಾಗ ನಕ್ಷೆ, ದಾನಪತ್ರ ನಕ್ಷೆ ಹದ್ದುಬಸ್ತು, ದರಖಾಸ್ತು, 11 E ಕೆಲಸಗಳನ್ನು ಭೂ ಮಾಪಕರು ಮಾಡುತ್ತಿದ್ದಾರೆ. ಸರ್ವೇ ಕೆಲಸ ಇಲ್ಲದ ಸಮಯದಲ್ಲಿ ದಾಖಲೆಗಳ ಡಿಜಟಲೀಕರಣ, ನಿರ್ವಹಣೆ, ಹಿಸ್ಸಾ ತಿದ್ದುಪಡಿ, ಜಾಮೀನು ಒಟ್ಟುಗೂಡಿಸುವಿಕೆ ಕೆಲಸವನ್ನು ಸರ್ಕಾರ ನೀಡುತ್ತದೆ.
ಭೂ ಮಾಪಕರ ಬೇಡಿಕೆಗಳಾಗಿರುವ ಗೌರವಯುತ ಬದುಕು ಮತ್ತು ಸೇವಾ ಭದ್ರತೆಯನ್ನು ಸರ್ಕಾರ ಕೂಡಲೇ ನೀಡಬೇಕು. ಮಾನ್ಯ ಮುಖ್ಯ ಮಂತ್ರಿಗಳಾದ @CMofKarnataka ನವರು ಈ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದಾಗ ಭೂ ಮಾಪಕರ ಪರ ಧ್ವನಿ ಎತ್ತಿದ್ದರು, ಈಗ 'ಜಾಣ ಕಿವುಡು' ಪ್ರದರ್ಶಿಸುತ್ತಿದ್ದಾರೆ. ಭೂ ಮಾಪಕರ ಧರಣಿಯಿಂದ ಜಮೀನು ಸರ್ವೆ ವಿವಾದಗಳು ನಿರ್ಧಾರವಾಗದೆ ರೈತರು ಸರ್ವೇ ಆಗದ ದಾಖಲಾತಿ ಪಡೆಯದ ಕಾರಣ ಅವರಿಗೆ ಬೆಳೆ ಸಾಲ ಸಿಗುತ್ತಿಲ್ಲ.
ಗಾಯದ ಮೇಲೆ ಬರೆ ಇಟ್ಟಂತೆ ಸುಮಾರು 300 ಪ್ರತಿಭಟನಾ ನಿರತ ಭೂ ಮಾಪಕರ ಪರವಾನಗಿಯನ್ನು ರಾತ್ರೋ ರಾತ್ರಿ ಸರ್ಕಾರ ರದ್ದುಗೊಳಿಸಿದೆ. ಮುಖ್ಯ ಮಂತ್ರಿಗಳು ಕೂಡಲೇ ಗಮನ ವಹಿಸಿ ಇವರ ಬೇಡಿಕೆಗಳಿಗೆ ನ್ಯಾಯಯುತವಾದ ಪರಿಹಾರವನ್ನು ಆದ್ಯತೆಯ ಮೇಲೆ ನೀಡಲಿ.
@tv9kannada I @AsianetNewsSN I @Vijayavani_Digi I @Vijaykarnataka I @HosadiganthaWeb I @krishnabgowda I @KannadaRepublic I @AKSSAofficial
⚖️ Govt Surveyor → Permanent + Salary + ESI + PF + Respect
Licensed Surveyor → Same Work + No Benefits + No Security
ಕೆಲಸ ಒಂದೇ ಆದರೆ ಅಂತರ ಆಕಾಶ-ಭೂಮಿ!
@KrishnaBgowda ಇದು ಸಮಾನತೆನಾ?
#justiceforlicensedsurveyors
ಮಾತು ಮುರಿದೆ…
ಮಾತಾಡದೆ ಮೋಹಕ ಮೋಸವ ಮಾಡಿದೆ…!?
ನಂಬಿಕೆ ಇಟ್ಟವರಿಗೆ ನಿರಾಸೆ ಕೊಟ್ಟಿರಿ…
ನ್ಯಾಯ ನಿರೀಕ್ಷಿಸಿದವರಿಗೆ ಮೌನ ತೋರಿಸಿದ್ದಿರ!!
ನಾವು ಪರವಾನಗಿ ಭೂ ಮಾಪಕರು
ನಮ್ಮ ಜೀವನಗಳ ಜೊತೆ ಆಟವಾಡೋದು ಏಕೆ?
ಸದನದೊಳಗೆ ಒಂದು…
ಹೊರಗೆ ಸುಳ್ಳಿನ ಪ್ರದರ್ಶನ…
#justiceforlicensedsurveyors
"ನಾವು ನಕ್ಷೆ ಬರೆವವರು…
ಆದರೆ ನಮ್ಮ ಹಕ್ಕುಗಳನ್ನು ಸರಿಯಾಗಿ ಅಳೆಯದ ವ್ಯವಸ್ಥೆ!"
ಅವನ ಶ್ರಮ ದಿನಕ್ಕೆ 12 ಗಂಟೆ, ವೇತನ – ತಾತ್ಕಾಲಿಕ!
ಅವನ ಬೋಧನೆ – ಭೂಮಿಯ ಸಮತೆ,
ಆದರೆ ಬದುಕಿಗೆ – ಸಮಾನತೆ ಇಲ್ಲ!
ಈಗ ನಮಗೆ ಬೇಕು – ಹಕ್ಕು,ಮಾನ್ಯತೆ ಮತ್ತು ನ್ಯಾಯ!
#JusticeForlicensedsurveyor#ಪರವಾನಗಿ_ಭೂಮಾಪಕರ_ನ್ಯಾಯ