*ಜಾತಿ ಅತೀ ಸಮಾಜ*
ಜಾತಿ... ಬಸವನಿದ್ದಾಗಲೂ ಇತ್ತು
ಜಾತಿ... ಬಸವ ಸತ್ತಾಗಲೂ ಇತ್ತು/
ಜಾತಿ... ಬಸವ ಸತ್ತ ನಂತರವಿಂದೂ ಇದೆ
ಕನಸಿತ್ತು ಬಸವಂಗೆ ಜಾತ್ಯತೀತ ಸಮಾಜದ್ದು/
ನನಸಾಗಲಿಲ್ಲವದು ಅಂದೂ ಇಂದೂ
ನೋಡಲ್ಲಿ ರೇವಣಸಿದ್ಧನೇ.../
ಕಟ್ಟಿಕೊಂಡಿದ್ದಾರವರು ಬಸವನಾ ಲಿಂಗವಂತರು
ನೂರೊಂದು ಜಾತಿಗಳ ಜಾತಿ ಅತೀ ಸಮಾಜವನು/
ಅಯೋಧ್ಯಾ ದೇವಳದ ಹುಂಡಿಯ ಹಣ ಅಪಹರಣವು ಶ್ರೀರಾಮ ಭಕ್ತರ ವಿಶ್ವಾಸಕ್ಕೆ ಧಕ್ಕೆ ತಂದಿದೆ...
ಹೀಗೆ ಮಾಡಿದರೆ...
ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ದಲ್ಲಿ ದೇಶದ ವಿವಿಧ ರಾಜ್ಯಗಳವರು ಸದಸ್ಯರಿರಬೇಕು, ಅವರಲ್ಲಿ ಆದಿವಾಸಿಗಳು, ವನವಾಸಿಗಳು, ಹಿಂದುಳಿದವರು, ಇತರ ಸಮುದಾಯದವರು ಕೂಡಾ ಇರಬೇಕು. ಶ್ರೀರಾಮ ದೇಶದ ಪ್ರಭು...ಎಲ್ಲರ ಕೂಡಿಸುವ ಶಕ್ತಿವಂತ.
ಶ್ರೀ ಡಿ ಕೆ ಶಿವಕುಮಾರರು ಕನ್ನಡನಾಡಿನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ತೆಗೆದುಕೊಳ್ಳುತ್ತಿದ್ದಾರೆ...
ಅದಕ್ಕೂ ಮುನ್ನ, ತಾವು ಕಾಂಗ್ರೆಸ್ ಪಕ್ಷದವರಾಗಿದ್ದೂ, ಹಿಂದೂ ಸಾಧು ಸಂತರನ್ನು ಕೂಡಾ ದರ್ಶನ ಮಾಡಿದ್ದಲ್ಲದೇ ಪಕ್ಷಾತೀತವಾಗಿ ನಾಡಹಿರಿಯರನ್ನು ಕಂಡು ಎಲ್ಲರ ಆಶೀರ್ವಾದ ಪಡೆದುಕೊಂಡಿದ್ದು ಯೋಗ್ಯವೂ, ಸುಸಂಸ್ಕೃತವೂ ಆದ ನಡವಳಿಕೆಯಾಗಿದೆ.
"ಈಚಲ ಗಿಡದ ಕೆಳಗೆ ಕುಳಿತು ಮಜ್ಜಿಗೆ ಕುಡಿದರೂ, ಹೆಂಡ ಕುಡಿದಿದ್ದಾನೆ ಎಂದೇ ಜನರು ಹೇಳುವರು"... ಈಚಲ ಒಂದು ಬಹೂಪಯೋಗಿ ಮರ. ಕಾಂಡದಲ್ಲಿ ರಂಧ್ರ ಮಾಡಿ ಸಂಗ್ರಹಿಸುವ ಮಜ್ಜಿಗೆಯಂಥ ರಸವೇ ಶೇಂದಿ:ಹೆಂಡ. ಇದು ಜನಪ್ರೀಯ ಮಾದಕ ಪೇಯ.
ಗರಿಯಿಂದ ಚಾಪೆ, ಬುಟ್ಟಿ, ಕಸಬರಿಗೆಗಳನ್ನು ಕೊಟ್ಟಿಗೆಗೆ ಕಂಭ, ಚಪ್ಪರ, ತಡಿಕೆಯಾಗಿ ಬಳಕೆ.
ಸಿಹಿ ಹಣ್ಣು ಬಡವರ ಖಜೂರ
ಜಾನಪದರು " ಕವಳಿ ಹಣ್ಣಿನಂಥ ಕಣ್ಣಾಕಿ..." ಅಂತಾ ಹೆಣ್ಣಿನ ಕಣ್ಣ ವರ್ಣಿಸಲು ಪದವಾಡುತ್ತಾರೆ.
ಬೇಂದ್ರೆಯಂಥ ಧಾರವಾಡದ ಮೇರು ಕವಿ "ಇಬ್ಬನಿ ತೊಳೆದರೂ, ಹಾಲು ಮೆತ್ತಿದಾ ಕವಳಿ ಕಂಟಿ ಹಣ್ಣು... " ಎಂದು ಮಡದಿಯ ಕಣ್ಣ ಕುರಿತು ಕವನ ಕಟ್ಟುತ್ತಾರೆ.
ಅನೇಕ ಮನೆತನದ ಹೆಸರು ಕವಳಿ, ಕವಳಿಕಾಯಿ ಎಂದಿರುವಷ್ಟು ಆಪ್ತವಿದು...ಸಾಮಾನ್ಯರ ಕಾಡು ಹಣ್ಣು.
ಧಾರವಾಡ ನಗರದ ಮನೆ ಮುಂದಿನ ಕೈತೋಟಗಳಲ್ಲಿ ಮತ್ತು ಸಾರ್ವಜನಿಕ ಉದ್ಯಾನಗಳಲ್ಲಿ ಪ್ರತಿ ವರ್ಷ ಮೇ ತಿಂಗಳ ಆಸುಪಾಸಿನಲ್ಲಿ ಅರಳಿ ನಿಲ್ಲುವ ಮೋಹಕ ಸುಂದರ ಹೂ *ಮೇ ಫ್ಲೋವರ್*...
ಇಡೀ ವರ್ಷ ಭೂಮಿಯಲ್ಲಿ ಸುಮ್ಮನೇ ಮಲಗಿರುವ ಸಣ್ಣಗಡ್ಡೆಗಳಿಂದ ಸಮಯಕ್ಕೆ ಸರಿಯಾಗಿ ಮೊಳಕೆಯೊಡೆದು, ಮೇ ತಿಂಗಳಲ್ಲಿ ಅರಳಿ, ತನ್ನ ಅಂದ ಚೆಂದದಿಂದ ಮನಸೆಳೆವ ಇದು, ಅಲ್ಪ ಆಯುಷಿ.
ನಾಡಿನ ಆರಾಧ್ಯ ದೇವ *ಶಿವ*ನಾಗಿದ್ದಾನೆ:
# ಪ್ರತಿ ಊರಿನಲ್ಲಿ ಶಿವಾಲಯವಿದ್ದೇ ಇರುತ್ತದೆ. ಶಿವನನ್ನು ನಾವು ಲಿಂಗರೂಪದಲ್ಲಿ ಪೂಜಿಸುತ್ತೇವೆ.
# ಪ್ರತಿ ಮನೆಯಲ್ಲೊಬ್ಬರಿಗಾದರೂ ಶಿವ/ ಶಿವ ಸಂಬಂಧಿ ಹೆಸರಿದ್ದೇ ಇರುತ್ತದೆ. ಕರೆಯುವಾಗ ಶಿವನ ನೆನೆಯುತ್ತೇವೆ.
# ಗತಿಸಿದ ಗುರು ಹಿರಿಯರನ್ನು ಸಮಾಧಿ/ ಜಗುಲಿಯ ಮೇಲೆ ಲಿಂಗರೂಪದಲ್ಲಿಯೇ ಪೂಜಿಸುತ್ತೇವೆ.
ಕವಿವಿ ಧಾರವಾಡದ ರುದ್ರಭೂಮಿಯಲ್ಲಿ
ಮಗುವಿನ ಸಮಾಧಿ ಮೇಲೆ ಕಂಡ ಬರಹ:
PAPPU VENKATA KRISHNA
ELDEST SON OF Mr. & Mrs. P. V. SASTRY
BORN AUGUST 18-1966 IN BOSTON USA
DIED FEBRUARY 3-1968 IN DHARWAR
INDIA
LIFE FOR HIM WAS AN ADVENTURE
PERILOUS INDEED. BUT MEN ARE NOT
MADE FOR SAFE HEAVENS.