ಮಾನ್ಯ ಉನ್ನತ ಶಿಕ್ಷಣ ಸಚಿವರಾದ @drmcsudhakar ಸರ್ ರವರಿಗೆ ಆಯ್ಕೆಯಾದ 1208 ಬಡಪಾಯಿ ಸಹಾಯಕ ಪ್ರಾಧ್ಯಾಪಕರು & ಪೋಷಕರಿಂದ ಕಳಕಳಿಯ ಮನವಿ 🙏,
ತಾವು ಆರಂಭದಲ್ಲಿ ನಮಗೆ ಅತಿವೇಗವಾಗಿ ನೇಮಕಾತಿ ಪ್ರಕ್ರಿಯೆ ನಡೆಸಿಕೊಟ್ಟಿರಿ ಈ ವಿಚಾರದಲ್ಲಿ ನಿಮ್ಮ ಬಗ್ಗೆ ಅಪಾರ ಗೌರವವಿದೆ, ಈಗ ನಾವು ನಡು ನೀರಿನಲ್ಲಿದ್ದೇವೆ ನಮ್ಮನ್ನು ಕೈಹಿಡಿದು ದಡ ಸೇರಿಸಿ.
@siddaramaiah ಸಹಾಯಕ ಪ್ರಾಧ್ಯಾಪರಾಗಿ ಆಯ್ಕೆಯಾಗಿ 3 ವರ್ಷದಿಂದ ಕಾಯುತ್ತಿರುವ ನಮಗೆ ಉದ್ಯೋಗ gurantee ಯಾವಗ ಮುಖ್ಯಮಂತ್ರಿಗಳೇ....
ನಿಮ್ಮ ಸಮಾಜವಾದ ತತ್ವ ನಮನ್ನು ನಿರುದ್ಯೋಗಿ ಆಗಿರಲು ಬಿಟ್ಟಿರುವುದು ಸೋಜಿಗವೇ ಸರಿ
ಈಗಲಾದರೂ ಮನಸು ಮಾಡಿ ಆದೇಶ ನೀಡಿ...
@CMofKarnataka@RahulGandhi@drmcsudhakar@sid
@drmcsudhakar@DKShivakumar@CMofKarnataka@siddaramaiah
NEP ಯಿಂದ SEP ಅಂತ ಸುಮ್ನೆ ಶಿಕ್ಷಣ ನೀತಿ ಬದಲಿಸಿದರೆ ಸಾಲದು, ಅದರಿಂದ ಶೈಕ್ಷಣಿಕ ಗುಣಮಟ್ಟ ಅಭಿವೃದ್ಧಿ ಆಗಲ್ಲ.
ಆಯ್ಕೆಯಾದ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ.
https://t.co/fRFIWMOQ3U
ನ್ಯಾಯಾಲಯದಲ್ಲಿ ನೇಮಕಾತಿ ಪಟ್ಟಿಗೆ ತಡೆಯಾಜ್ಞೆ ನೀಡಿದ್ದು, ಕಾನೂನು ಹೋರಾಟ ಕುರಿತು ಮಾಹಿತಿ ನೀಡಿದ ಕೆಲವೇ ಘಂಟೆಗಳಲ್ಲಿ ಸರ್ಕಾರದ ಬದ್ಧತೆಯಿಂದ ಮಾನ್ಯ ನ್ಯಾಯಾಲಯವು ತಡೆಯಾಜ್ಞೆ ತೆರವುಗೊಳಿಸಿ 371ಜೆ ಕಲ್ಯಾಣ ಕರ್ನಾಟಕ ಮೀಸಲಾತಿಗೆ ಮಾತ್ರ ತಡೆಯಾಜ್ಞೆ ಸೀಮಿತಗೊಳಿಸಿದ್ದು ಮುಂದಿನ ಪ್ರಕ್ರಿಯೆಗಳು ಕಾನೂನಿನ ಅನ್ವಯ ನಡೆಸುವ ಮಾಹಿತಿ ನೀಡಿದೆ.
ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿ ವರ್ಷ ಕಳೆದರೂ ನೇಮಕಾತಿ ಆದೇಶ ಸಿಗದೇ ನಿರುದ್ಯೋಗಿಗಳಾಗೇ ಉಳಿದಿರುವ ಸಾವಿರಾರು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಮೂಲಕ ತೀವ್ರ ಸಂಕಷ್ಟದಲ್ಲಿರುವ ಕುಟುಂಬದ ಸದಸ್ಯರು & ಅವಲಂಬಿತರ ಬದುಕಿಗೆ ಭರವಸೆ ಮೂಡಿಸಬೇಕೆಂದು ಗೌರವಾನ್ವಿತ ಮುಖ್ಯಮಂತ್ರಿಗಳಿಗೂ ಮತ್ತು ಸಚಿವರಿಗೂ ಮನವಿ ಮಾಡುತ್ತಿದ್ದೇವೆ 🙏
ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ಶಿಕ್ಷಣ ತಜ್ಞರು, ಶಿಕ್ಷಕರು, ಅಧಿಕಾರಿಗಳೊಂದಿಗೆ ಶಿಕ್ಷಣ ಕ್ಷೇತ್ರದ ಬಲವರ್ಧನೆ ಹಾಗೂ ಆಧುನಿಕ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಸಿ ಸಲಹೆಯನ್ನು ಪಡೆಯಲಾಯಿತು.
#drmcsudhakar#highereducation#Minister#karnataka
ಸನ್ಮಾನ್ಯ @drmcsudhakar ಸರ್ 3 ವರ್ಷಗಳಾದರೂ ಮುಗಿಯದ 2021ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲು ಆದೇಶ ನೀಡಬೇಕೆಂದು 1242 ಅಭ್ಯರ್ಥಿಗಳ ಮನವಿ ಪೂರ್ವಕ ಬೇಡಿಕೆಯಾಗಿದೆ. ನೇಮಕಾತಿ ವಿಳಂಬದಿಂದ ಅಭ್ಯರ್ಥಿಗಳೆಲ್ಲರೂ ಹೈರಾಣಾಗಿ ಹೋಗಿದ್ದೇವೆ.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆದೇಶ ನೀಡುವ ಹಂತದವರೆಗೆ ಎಲ್ಲಾ ಪೂರ್ವತಯಾರಿ ಮಾಡಿಕೊಂಡು ಲೋಕಸಭಾ ಚುನಾವಣಾ ನೀತಿ ಸಂಹಿತೆಗೂ ಮುಂಚಿತವಾಗಿ ನೇಮಕಾತಿ ಆದೇಶ ನೀಡುವ ಮೂಲಕ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದರೂ ನಿರುದ್ಯೋಗಿಗಳಾಗೇ ಉಳಿದು ಸಂಕಷ್ಟದಲ್ಲಿರುವ ಸಾವಿರಾರು ಯುವಕ ಯುವತಿಯರಿಗೆ ಉದ್ಯೋಗ ನೀಡಬೇಕೆಂದು ಸರ್ಕಾರ ಮತ್ತು ಸಚಿವರಿಗೆ ಮನವಿ🙏
ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಲಾಗುವ ʻಬೃಹತ್ ಉದ್ಯೋಗ ಮೇಳʼದ ಕುರಿತು ಇಂದು ವಿಕಾಸಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ,
ಉದ್ಯೋಗ ಮೇಳ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ರೂಪುರೇಷೆಗಳ ಕುರಿತು ಚರ್ಚಿಸಿದೆವು.
*ವಿಶೇಷ ಸೂಚನೆ*
ಉದ್ಯೋಗಾಕಾಂಕ್ಷಿಗಳು https://t.co/fb6mUqLAuC ವೆಬ್ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಮನವಿ
ರಾಮನ ವನವಾಸಕ್ಕೂ ಆಯ್ಕೆಯಾಗಿರುವ ಸಹಾಯಕ ಪ್ರಾಧ್ಯಾಪಕರ ಪರಿಸ್ಥಿತಿಗೂ ಹೆಚ್ಚಿನ ವ್ಯತ್ಯಾಸವಿಲ್ಲದಂತಾಗಿದೆ, ಲೋಕಸಭಾ COC ಗೂ ಮೊದಲೇ ನೇಮಕಾತಿ ಆದೇಶ ನೀಡುವ ಮೂಲಕ ನಾವು ಎದುರಿಸುತ್ತಿರುವ ವನವಾಸದಷ್ಟೇ ಕ್ರೂರ ಪರಿಸ್ಥಿತಿಯನ್ನು ದೂರ ಮಾಡಬೇಕೆಂದು ಮಾನ್ಯ ಸಚಿವರಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ವಿನಂತಿಸುತಿದ್ದೇವೆ🙏
@drmcsudhakar
ಫೆಬ್ರವರಿ ಕೊನೆಯ ವಾರದಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಂಭವವಿರುವುದರಿಂದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆದೇಶವನ್ನು ಫೆಬ್ರವರಿ ಮೊದಲ ವಾರದೊಳಗೆ ನೀಡುವ ಮೂಲಕ ಉದ್ಯೋಗ ಭಾಗ್ಯ ನೀಡಬೇಕೆಂದು ಶಿಸ್ತು, ಸರಳತೆ ಹಾಗೂ ಬದ್ಧತೆಗೆ ಹೆಸರಾಗಿರುವ ಗೌರವಾನ್ವಿತ ಉನ್ನತ ಶಿಕ್ಷಣ ಸಚಿವರಲ್ಲಿ ವಿನಂತಿಸುತಿದ್ದೇವೆ 🙏
@drmcsudhakar